ಭಾನುವಾರ, ಸೆಪ್ಟೆಂಬರ್ 2, 2012

ಗೆಳೆಯ ತೇರ್ಳಿ ಎನ್ ಶೇಖರ್ ನೊಂದಿಗೆ ಮಾಡಿದ ಕವಿತೆಯ ಅನುವಾದ

                                                                    

ಕ್ಲಿನಿಕ್

ಮಲಯಾಳಂ ಮೂಲ - ಡಿ. ವಿನಯ ಚಂದ್ರನ್

ಹುಡುಗನೊಬ್ಬ ಹುಡುಗಿಗೆ
ಆಗಬಹುದು ಕ್ಲೀನಿಕ್
ಅವಳ ಹಲ್ಲುನೋವಿಗೆ, ಗಂಟಲ ಕಿರಿಕಿರಿಗೆ
ತುಟಿ ಯೋನಿ ಮೊಲೆ ನೆನಪು ದಾಹಕ್ಕೆ
ಆಗಬಹುದು ಶುಶ್ರೂಷೆ ಮೋಸಕ್ಕೂ
ಚುಚ್ಚುಮದ್ದು ಮರಗಟ್ಟಿದಂಗಕ್ಕೆ
ನೋವು ತಿಳಿಯದರವಳಿಕೆ
ದೇಹವೆಲ್ಲ ಅವಯವ
ಇರುವಿಕೆ ನೆನಪಿಸೊ
ಸ್ಟೆತಾಸ್ಕೋಪೂ ಆಗಬಹುದು
ಸರಿಯಿದ್ದರೆ  ಜಾತಕ
ಏನೂ ಕೂಡ ಯೋಚಿಸದೆ ಯಾವಾಗಲಾದರೂ
ಅವನು ಅವಳ ಗೋಣಿಗೂ
ನೀಡಬಹುದು ಮುತ್ತು
ಅವಳನ್ನೆ ಮರೆತ ಅವಳು
ಅವನಿಗೊರಗಿ ಹೋಗಬಹುದು ನಿದ್ದೆ

ಆಗುತ್ತವೆ ಹಳತು ಇಂಥ ಕ್ಲೀನಿಕ್ ಗಳು
ಅವನಿಗವಳು ಅವಳಿಗವನು
ಆಗ ಬೇಡವಾಗಿ 
ಮಲಗಬಹುದು ಮುದುಡಿ
ಆಗಬಹುದು ದೂರ ಕೂಡ
'ಟು ಲೆಟ್'ಎಂದು ಬರೆದು
ತೂಗಿ ಹಾಕಬಹುದು ಹೊಚ್ಚಹೊಸ ಫಲಕ

ಜೀವ ಎಳೆವಾಗ ಕೊನೆಯುಸಿರು
ಉಪಗುಪ್ತ ವಾಸವದತ್ತೆಗೆ
ಕರುಣೆ ತೋರಿಸಿದ್ದ ಕಾರಣ
ಹೇತ ಸ್ವರ್ಗದಲ್ಲು
ಕಾಯಬೇಕಾಗಬಹುದು ವಾಸವದತ್ತೆಗೆ
'ಲೀಲಾ' ಹುಚ್ಚಳಾಗಿದ್ದು
'ಮದನ'ನಿಗೆ ನೀಡಿದ ಉಪ್ಪಿ -
ಅಗಲಿಕೆ ನಂತರ ಕೂಡ
ಹಿಡಿಯಬಹುದು
ಮದನನಿಗೆ ಹುಚ್ಚುಗಾಳಿ.

ಕ್ಲಿನಿಕ್ - ಹುಚ್ಚು - ಹೇತ ಸ್ವರ್ಗ
ಒಂದಕ್ಕೊಂದು ಬದಲಿಯೆ ?
ಈ ಅಂಗಡಿ ಜಗಲಿ
ನಾಯಿ ಆಕಳಿಕೆ ಕೂಡ
ತಿಳಿಸಿಕೊಡಲು ಬರುವುದಿಲ್ಲ

ಟಿಪ್ಪಣಿ
1. ಉಪಗುಪ್ತ ಮತ್ತು ವಾಸದತ್ತೆ ಕುರಿತ ಪ್ರಣಯ ಕತೆ ಜಾತಕ ಕತೆಗಳಲ್ಲಿ ಒಂದು. ಮಲಯಾಳಂ ಕವಿ ಕುಮಾರನ್ ಆಶಾನ್ ಅವರು ಈ ಕುರಿತು 'ಕರುಣಾ' ಎಂಬ ಕಾವ್ಯ ರಚನೆಯನ್ನು ಮಾಡಿದ್ದಾರೆ.
2. ಲೀಲಾ ಮತ್ತು ಮದನ ಪಾತ್ರಗಳು ಲೈಲಾ-ಮಜ್ನು, ರೋಮಿಯೊ-ಜೂಲಿಯೆಟ್ ರೀತಿ ಕುಮಾರನ್ ಆಶಾನ್ ಅವರ ಕಾವ್ಯದಲ್ಲಿನ ಪ್ರಸಿದ್ಧ ಪ್ರೇಮಿಗಳು.
*
*
ನಾನು ತೇರ್ಳಿ ಎನ್ ಶೇಖರ್ ನೊಂದಿಗೆ ಕೂಡಿ ಮಾಡಿದ ಈ ಕವಿತೆಯ ಅನುವಾದದ ಸಂದರ್ಭವನ್ನು ವಿವರಿಸಬೇಕು ಅಂದುಕೊಂಡಿದ್ದೆ. ಆದರೆ ನನ್ನ ಲೇಖನಗಳ ಸಂಗ್ರಹ್ಕಕಾಗಿ ಹಳೆಯ ಲೇಖನಗಳನ್ನು ಹುಡುಕುವ ತುರ್ತಿನಲ್ಲಿ ಅಂದುಕೊಂಡಿದ್ದ ಕೆಲಸ ಮಾಡಲಾಗಲಿಲ್ಲ. ಅದಕ್ಕಾಗಿ ಗೆಳೆಯ ಶಶಿ ನೀಡಿದ ಪ್ರತಿಕ್ರಿಯೆಗೆ ಉತ್ತರ ನೀಡುವ ನೆಪದಲ್ಲಾದರೂ ವಿವರಿಸುತ್ತಿದ್ದೇನೆ.
*
ಅದು 2008 ಇದ್ದಿರಬೇಕು. ಆಗ ತೇರ್ಳಿ ಕನಕಪುರದಲ್ಲಿದ್ದ ಸಂದರ್ಭ. ನಾನು ಹಂಪಿಯಿಂದ ಯಾವುದೋ ಕೆಲಸದ ಮೇಲೆ ಬೆಂಗಳೂರಿಗೆ ಬಂದಿದ್ದವನು ತೇರ್ಳಿ ಮತ್ತಿತರ ನನ್ನ ಕನಕಪುರದ ಗೆಳೆಯರನ್ನು ಕಾಣಲು ಕನಕಪುರಕ್ಕೆ ಹೋಗಿದ್ದೆ. ತೇರ್ಳಿ ಎನ್ ಶೇಖರ್ ಸಾಮಾನ್ಯವಾಗಿ ಮಾತೃಭೂಮಿ ಪತ್ರಿಕೆಯನ್ನು ತಂದುಕೊಳ್ಳುತ್ತಿದ್ದರು. ನಾನಾಗ ಹೋಗಿದ್ದಾಗಲೂ ಅವರ ಬಳಿ ಕೆಲವು ಸಂಚಿಕೆಗಳಿದ್ದವು. ಅವುಗಳಲ್ಲಿ ಸಾಹಿತ್ಯ ವಿಶೇಷಾಂಕವೂ ಇತ್ತು. ನಾವು ಆಗಾಗ ಅನುವಾದ ಕಾರ್ಯಯೋಜನೆಯನ್ನು ಬಹಳಸಲ ಹಮ್ಮಿಕೊಂಡಿದ್ದರೂ ನಾವು ಒಟ್ಟಿಗೆ ಸೇರುತ್ತಿದ್ದುದು ಕೆಲವೇ ದಿನಗಳ ಮಟ್ಟಿಗೆ ಮಾತ್ರ. ಆದ್ದರಿಂದ ನಮ್ಮೆಲ್ಲ ಕಾರ್ಯಯೋಜನೆಗಳು ಯೋಜನಾಮಟ್ಟದಲ್ಲಿಯೇ ಉಳಿದಿತ್ತು. ಇದಕ್ಕೊಂದು ಚಾಲನೆಕೊಡಬೇಕೆಂದು ನಾನು ಆ ಸಂಚಿಕೆಗಳನ್ನು ಒಬ್ಬ ಅನಕ್ಷರಸ್ತನ ಹಾಗೆ ತಿರುವಿ ಹಾಕತೊಡಗಿ ಅದರಲ್ಲಿನ ವಿನ್ಯಾಸ, ಚಿತ್ರ ಮೊದಲಾದವನ್ನು ನೋಡುತ್ತಿದ್ದೆ. ಆ ಸಂಚಿಕೆಯಲ್ಲಿ ಹಲವಾರು ಕವಿತೆಗಳು ಇದ್ದವು. ನಾನು ಕುತೂಹಲಕ್ಕೆ ಅವನ್ನು ಓದಲು ತೇರ್ಳಿಗೆ ಕೇಳಿದೆ. ಅವರು ನಾನು ಕೇಳಿದ ಕವಿತೆಗಳನ್ನು ಮಲಯಾಳಂನಲ್ಲಿ ಓದಿ ಕನ್ನಡದಲ್ಲಿ ವಿವರಿಸಿದರು. ನನಗಾಗ.....  91-94ರ ಅವಧಿಯಲ್ಲಿ ನನ್ನ ಹೊಟ್ಟೆಪಾಡಿಗಾಗಿ ಅಕಾಡೆಮಿಯಲ್ಲಿ ಕರಡು ತಿದ್ದುವ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಗೆಳೆಯರಾಗಿದ್ದ ಎಚ್ ಎಸ್ ಶಿವಪ್ರಕಾಶ್ ದಿನ ಸಂಜೆ ನಾಲ್ಕರ ಹೊತ್ತಿಗೆ ಅಕಾಡೆಮಿಗೆ ಬರುವಾಗ ಒಬ್ಬರಲ್ಲ ಒಬ್ಬರು ಮಲಯಾಳಿ ಸ್ನೇಹಿತರನ್ನು ಕರೆದುಕೊಂಡು ಬರುತ್ತಿದ್ದುದು..... ಅವರಿಗೆ ಮಲಯಾಳ ಕವಿಗಳ ಕವನ ಸಂಕಲನ ಕೊಟ್ಟು ಓದಿಸಿ ಪದ ಪದಗಳ ಅರ್ಥ ಕೇಳಿ ತಿಳಿದು ಮೂಲ ಕವಿತೆಯ ಲಯಕ್ಕೆ ಅನುಗುಣವಾಗಿ ಕನ್ನಡದನುವಾದ ಸಿದ್ಧಪಡಿಸುತ್ತಿದ್ದುದು......... ಅದನ್ನು ಮತಷ್ಟು ಪರಿಷ್ಕರಿಸುತ್ತಿದ್ದುದು .... ನೆನಪಿಗೆ ಬಂತು. ಈ ಅನುವಾದದ ಕಾರ್ಯ ಸ್ವರೂಪ ಲಿಂಗರಾಜು, ನಾನು, ಕೆಲವು ಸಲ ಅಕಾಡೆಮಿಯ ಅಂದಿನ ರಿಜಿಸ್ಟ್ರಾರ್ ಸಮ್ಮುಖದಲ್ಲಿ ನಡೆಯುತ್ತಿತ್ತು. ಹಾಗೆ ನಾನೂ ಕೂಡ ಏಕೆ ಪ್ರಯತ್ನಮಾಡಬಾರದು ಎಂದೆನಿಸಿತ್ತು. ಕೂಡಲೇ ತೇರ್ಳಿ ವಿವರಿಸುತ್ತಿದ್ದಂತೆ ಕವಿತೆಯ ಪ್ರತಿ ಸಾಲಿನ ಅರ್ಥ ಭಾವ ಲಯಗಳ ದಾರಿಯಲ್ಲಿ ನಾನು ಕನ್ನಡ ಪದಗಳನ್ನು ಜೋಡಿಸತೊಡಗಿದೆ. ಹೀಗೆ ಕೆಲವು ಪದ್ಯಗಳನ್ನು ಅನುವಾದಿಸಿದೆ. ಅವುಗಳಲ್ಲಿ ಎಲ್ಲವೂ ಏಕಪ್ರಕಾರವಾಗಿ ಉತ್ತಮ ಅನುಭವ ನೀಡಲಿಲ್ಲ. ವಿನಯ ಚಂದ್ರನ್ ಅವರ ಪ್ರಸ್ತುತ ಕವಿತೆಯನ್ನು ಉಳಿಸಿಕೊಂಡು ಕೆಲವು ಸಣ್ಣಪುಟ್ಟ ತಿದ್ದುಪಾಟುಗಳೊಂದಿಗೆ ಇಬ್ಬರ ಹೆಸರಿನಲ್ಲಿ ಮಯೂರಕ್ಕೆ ಕಳಿಸಿದೆ. ಶೇಖರ್ ಇದ್ದು, ಅನುವಾದದಲ್ಲಿ ನನ್ನ ಪಾತ್ರವೇನೂ ಇಲ್ಲ; ನಿಮ್ಮೊಬ್ಬರ ಹೆಸರಿನಲ್ಲಿಯೇ ಬಳಸಿಕೊಳ್ಳಿ ಎಂದು ತಮ್ಮ ಹೆಸರು ಸೇರಿಸಿಕೊಳ್ಳಲು ಅವರು ಅಸಮ್ಮತಿಯನ್ನು ಸೂಚಿಸಿದರು. ಮಲಯಾಳಂನ ಗಂಧಗಾಳಿಯೂ ತಿಳಿಯದು ನಾನು ಹೇಗೆ ಅನುವಾದ ಮಾಡಲು ಸಾಧ್ಯ-ಶೇಖರ್ ಇಲ್ಲದೆ? ಹಾಗಾಗಿ ಅಂದಿನಂತೆ ಇಂದು ಕೂಡ ನಮ್ಮಿಬ್ಬರ ಹೆಸರಿನಲ್ಲಿ ಪ್ರಕಟಿಸಲು ಮುಂದಾದೆ. ಅದು ಪ್ರಕಟವೂ ಆಯಿತು.   ಮೊನ್ನೆ ಭಾನುವಾರ ನನ್ನ ಲೇಖನಗಳನ್ನು ಸಂಗ್ರಹಿಸಲು ಹುಡುಕುತ್ತಿದ್ದ ವೇಳೆ ಈ ಕವಿತೆ ಕಣ್ಣಿಗೆ ಬಿದ್ದು ಅದನ್ನು ಮತ್ತಷ್ಟು ತಿದ್ದಿತೀಡಿ ಅದರ ಅನುಭವ ಸ್ಫುಟಗೊಳ್ಳುವಂತೆ ಮಾಡಿ ನಿಮ್ಮ ಮುಂದಿರಿಸಿದೆ. ಈ ಯಾವ ಬೆಳವಣಿಗೆಯೂ ಕೇರಳದಲ್ಲಿರುವ ಶೇಖರ್ ಗೆ ತಿಳಿದಿಲ್ಲ  ಈಗಲೂ. ಅದೇಕೋ ಈ ಅನುವಾದ ಕವಿತೆ ಬಹಳಷ್ಟು ಜನರಿಗೆ ಇಷ್ಟವಾಯಿತು. ಇವನ್ನೆಲ್ಲ ಶೇಖರ್ ಗೆ ಫೋನ್ ನಲ್ಲಿ ಹೇಳಬೇಕು. ಇದೇ ಸರಿಯಾದ ಸಮಯ  ಈ  ಕವಿತೆಗೆ ಬಂದ ಪ್ರತಿಕ್ರಿಯೆ ನಿಮ್ಮ ಮುಂದಿಡಲು ಎಂದು ಭಾವಿಸುವೆ. ಅವು ಹೀಗಿವೆ-
"ಪ್ರಿಯ ಡಾ. ಶ್ರೀಧರ ಪಿಸೆ ಅವರಿಗೆ:
ನಮಸ್ಕಾರ.  ನೀವು ಕಳುಹಿಸಿರುವ ಅನುವಾದಿತ ಕವನವನ್ನು ಓದಿ ಈ ಪತ್ರವನ್ನು ಬರೆಯುತ್ತಿದ್ದೇನೆ.  ಮೂಲದಲ್ಲಿ ಹೇಗಿದೆಯೋ ಗೊತ್ತಿಲ್ಲ; ಅನುವಾದ ಸಮರ್ಥವಾಗಿದೆ; ವೈನೋದಿಕ ಶೈಲಿಯಲ್ಲಿ, ಕ್ಲಿನಿಕ್ಕಿನ ರೂಪಕದ ಚೌಕಟ್ಟಿನಲ್ಲಿ ಪ್ರೇಮ-ಕಾಮಗಳ ತೃಪ್ತಿ-ಸಮಾಧಾನ-ಅವಸಾನ ಇವುಗಳ ಅನುಭವ ಮೂರ್ತರೂಪದಲ್ಲಿ ಓದುಗರನ್ನು ತಟ್ತುತ್ತದೆ; ಮತ್ತು ಉಪಗುಪ್ತ-ವಾಸವದತ್ತಾ ಪ್ರಕರಣದ ಆಶಯ ಕಾಮದ ಕ್ಷಣಿಕ ಅರ್ತಿತ್ವವನ್ನು ಮತ್ತೂ ದಟ್ಟವಾಗಿಸುತ್ತದೆ.
ಥ್ಯಾಂಕ್ ಯೂ.
ರಾಮಚಂದ್ರನ್" ಎಂದು ಸಿ ಎನ್ ರಾಮಚಂದ್ರನ್ ಮೇಲ್ ಕಳಿಸಿದರು.
" ಪ್ರಿಯ ಡಾ   ಶ್ರೀಧರ ಪಿಸ್ಸೆ,
                                           ಗೆಳೆಯ ಶೇಖರ್ ಜೊತೆ ಸೇರಿ ಮಾಡಿದ ಅನುವಾದ ಹೊಸ 
ಪ್ರಯೋಗ ಯಶಸ್ವಿಯಾಗಿದೆ. ಅಭಿನಂದನೆಗಳು. 
ಇಂತಿ 
ಅಶೋಕ್ ಕುಮಾರ್ " ಎಂದು ಹೇಳಿದರು ಡಾಕ್ಟರು.
"
sblakshmikanth kanth
Sep 2 (1 day ago)
ರಾಮಚಂದ್ರನ್ ಅವರ ಮಾತುಗಳು ನಿಜವಾಗಿವೆ. ನಿಮ್ಮ ಅನುವಾದ ಸರಳ ಮತ್ತು ಸುಂದರವಾಗಿದೆ." ಎಂದರು ಲಕ್ಷ್ಮೀಕಾಂತ್.  ದೂರದ ಮುಂಬೈನಿಂದ ಇಂದು ಬೆಳಿಗ್ಗೆ  ಗಿರಿಜಾ ಶಾಸ್ತ್ರಿ-
"
Girija Shastry
7:07 AM (13 hours ago)

to me
ಕ್ಲಿನಿಕ್ ಮತ್ತು ಹೇತ ಸ್ವರ್ಗದ ಇಮೇಜ್ ತುಂಬಾ ಚೆನ್ನಾಗಿದೆ. ಬದುಕಿರುವಾಗಲೇ (ಕ್ಲಿನಿಕ್ಕಿನಲ್ಲಿರುವಾಗಲೇ) ಟು-ಲೆಟ್ ಹಾಕಬೇಕೆನಿಸಿದಾಗ ಇನ್ನು ಸ್ವರ್ಗದಲ್ಲಿ ಕಾಯುವುದು. ಏಳೇಳು ಜನ್ಮಕೂ ...ಇದೆಲ್ಲಾ ಎಷ್ಟು ಹಾಸ್ಯಾಸ್ಪದ! ಅದನ್ನು ಹೇತ ಸ್ವರ್ಗ ಎಂದು ಸ್ವರ್ಗದ ಕಲ್ಪನೆಯನ್ನೇ ಬುದಮೇಲು ಮಾಡಿರುವುದು, ನಮ್ಮ ನಂಬಿಕೆಗಳನ್ನು ಅಲ್ಲಾಡಿಸಿಬಿಡುವ ಪರಿ ಚೆನ್ನಾಗಿದೆ. ಅಮರ ಪ್ರೇಮದ ಪರಿಕಲ್ಪನೆಯನ್ನೇ ಪ್ರಶ್ನಿಸುತ್ತದೆ.ತಾಜಾ ಕನ್ನಡದ ಪದ್ಯದಂತಿದೆ.ಅಭಿನಂದನೆಗಳು
ಗಿರಿಜಾ" ಎಂದರು. 
ನಂತರ ಶಶಿಕುಮಾರ್ ಕಾಮೆಂಟ್ ಮೂಡಿಬಂತು. ಈ ಮೇಲಿನ ಅಭಿಪ್ರಾಯಗಳು ಕಾಮೆಂಟ್ ಬಾಕ್ಸ್ ನಲ್ಲಿದ್ದಿದ್ದರೆ ನಾನು ಇವನ್ನು ನಿಮ್ಮ ಮುಂದಿಡಬೇಕಾದ ಕೆಲಸವಿರುತ್ತಿರಲಿಲ್ಲ. 
ಹಾಗಾಗಿ ನನಗೆ ಡಿ ವಿನಯ ಚಂದ್ರನ್ ಅವರ ಈ ಕವಿತೆ ಅವರ ಯಾವುದಾದರೂ ಕವನ ಸಂಕಲನದಲ್ಲಿ ಸಂಗ್ರಹವಾಗಿದೆಯೇ, ಅದು ಇಂಗ್ಲಿಷಿಗೆ ಅನುವಾದವಾಗಿದೆಯೆ ಎಂಬ ಬಗ್ಗೆ ಏನೂ ತಿಳಿದಿಲ್ಲ. ಈ ಬಗ್ಗೆ ಮತ್ತೆ ಶೇಖರ್ ಅವರನ್ನೆ ಕೇಳಬೇಕು.
ನಾನಿಷ್ಟೆಲ್ಲ ಬರೆದುದು ಎಷ್ಟು ಸರಿಯೊ ಸರಿಯಲ್ಲವೊ ತಿಳಿಯುತ್ತಿಲ್ಲ.

ಸೋಮವಾರ, ಆಗಸ್ಟ್ 20, 2012

ಯೊಶಿರಾ ಮಾರ್ಬೆಲ್ ರವರ ಇತ್ತೀಚಿನ ಕವಿತೆಗಳು

ದಕ್ಷಿಣ  ಆಫ್ರಿಕಾದ ಡರ್ಬನ್ ನಗರದಲ್ಲಿ ನೆಲೆಸಿರುವ ಯೊಶಿರಾ ಮಾರ್ಬೆಲ್ ಭಾರತೀಯ ಮೂಲದವರು. ಕಳೆದ ವರ್ಷವಷ್ಟೆ ಇವರು ತಮ್ಮ ಮೊದಲ ಕವನ ಸಂಕಲನ Unspecified ಪ್ರಕಟಿಸಿದ್ದಾರೆ. ಇವರ ಇತ್ತೀಚಿನ ಕವಿತೆಗಳ ಕನ್ನಡ ಅನುವಾದಗಳಿವು. 
o

ಮುಟ್ಟಲಾಗದು

ಹೆದರಿಕೆ ನನಗೆ
ನಾನೇ ಚೆನ್ನಾಗಿ ಅರಗಿಸಿಕೊಂಡಿಲ್ಲ
ನನ್ನ ಸಂಬಂಧ
ಮನುಷ್ಯ ಪ್ರೀತಿ ಒಂದಿರುಳಿಗೆ ಸೀಮಿತ

ವಿರುದ್ಧ ಧ್ರುವಗಳ ಕಾಂತದ ಹಾಗೆ
ಸಿಗುವುದಿಲ್ಲ ಪರಸ್ಪರ ಸೆಳೆತಕ್ಕೆ

ನಾನೊಂದು ಕೈವಾರ
ಬಿಂದು ಇಟ್ಟಿದ್ದೇನೆ ತಪ್ಪು ದಿಕ್ಕಲ್ಲಿ
ತೇಲಾಡುವೆ

ಜಗತ್ತೊ ಬಡಗಣ
ನಾನು ಸಮಭಾಜಕದ ತಳಗೆ
ಪ್ರೀತಿಯ ಗೆರೆ ಕೆಳಗೆ

ತಲುಪಲಾಗದು
ಮುಟ್ಟಲಾಗದು
o




ಒಂದು ಚೆಂದದ ಕೊನೆ

ನನ್ನ ನೀಲಿ ನಾಳಗಳು
ಚರ್ಮದ ಕೆಳಗೆ ಹರಿವ ನದಿಯ ಹಾಗೆ
ರಕ್ತದ ನದಿ
ಬ್ಲೇಡಿನ ಪ್ರಮಾದದಿಂದ
ನುಗ್ಗುವುದು ದಡ ಬಿರಿದು

ನಗೆ ಚೆಲ್ಲುವುದು ನೆತ್ತರು ನನ್ನ ತೋಳಿಂದ ಕೆಳಜಾರಿದ ಹಾಗೆ
ಅಷ್ಟೇ ಸಲೀಸಾಗಿ
ರಸವೆಲ್ಲದರ ಕಾಲುವೆಯಾಗಿದೆ ವಿಕಲ ಕಾಯದ ವಿನ್ಯಾಸ
ನನ್ನೆದೆ ಸರಾಗ ಬಡಿದುಕೊಳ್ಳಲೆಂದೆ

ಕೊನೆಗೆ
ನಿಲ್ಲುವುದು ನನ್ನೆದೆ
ಆಗುವೆ ಲಕ್ವ ಹೊಡೆದ ಹಾಗೆ
ಉಕ್ಕುವ ಶಾಂತಿಯೊಂದಿಗೆ
ಚೆಂದದ ಕೊನೆ
o

ದೇವತೆಗಳ ರಾಣಿ

ಕಂಗಳು
ಕಡುಕಪ್ಪು ಸರುಹೊತ್ತಿನ ಆಗಸದಂತೆ
ಕೂದಲು ಬಂಗಾಳದ ಹುಲಿಯಂತೆ ಒರಟು
ಕಪ್ಪಾದ ತುಟಿ, ಬೆರಳತುದಿ
ತರೆದಿಡುವುದು ಒಳಮನದ ಹಾದರ

ಆ ಚೆಂದದ ಪುಟ್ಟ ಗೋಣು
ಚಿಮ್ಮುವುದು
ಸಿಟ್ಟಿನ ಹುಚ್ಚುಹೊಳೆ
ಜ್ವಾಲಾಮುಖಿಯ ಅಂಚಿನಲ್ಲಿ

ಅಂಕೆ ಇಲ್ಲದ ಶಕ್ತಿ
ಪ್ರಾಚೀನ ದೇವತೆಯಂತೆ
ಹೀರಾ, ದೇವತೆಗಳ ರಾಣಿ

ಚಿನ್ನ ಮತ್ತು ಮಿನುಗು
ಪುಸಲಾಯಿಸುವ ಮೆದು ದನಿ
ಹೃದಯವೊಂದ
ಹುದುಗಿಡು
ಕರಗಿದ ಕಲ್ಲು ತಣ್ಣಗಾದ ತಂಪಿನಂತೆ

ನಾಣ್ಯದೆರಡು ಮುಖ
ರಾಜ ಅಥವ ರಾಣಿ
ಯಾವುದೇ ಆಗಿರಲಿ
ಚಾಲೂ
ಅವಳ ಪ್ರತೀಕಾರ
o

ಬೇಸಿಗೆಯ ನೆಲ

ಹೊರಜಾತಿ
ಮುಳ್ಳಿನ ಮೊಂಡುಗಳ್ಳಿ
ನಿಂತಿದೆ
ನಗುವ ಹೂಗೊಂಚಲ ನಡುವೆ

ಪಿಸುಗುಡುತ್ತವೆ ಮೆಲುದನಿಯಲ್ಲಿ
ನೋಯಿಸುವ ಸುಳ್ಳು ಗಾಳಿಮಾತು
ಮೂರ್ಖ ಕಲ್ಪನೆ
ಪರೀಕ್ಷೆಗೊಡ್ಡುತ್ತದೆ ನನ್ನ ಆತ್ಮ ಬಲದ ಸ್ಥೈರ್ಯ

ಆದರೂ
ಮೋಸಹೋಗಿ
ಹಳದಿ ಸೂರ್ಯಕಿರಣಗಳಿಂದ
ಬದಲಾಗಿಹೋಗಿದೆ ಭಯಂಕರವಾಗಿ ಜೀವತೆಗೆವ-ಸುಡುವ ಕಾವು

ನವಿರು ಹೂವಿನ ದಳಗಳು
ಬಾಡುತ್ತವೆ
ಬಾಯಾರಿದ ಕಾಂಡಗಳು
ಬೇಡುತ್ತಿವೆ
ನಾಕದ ಕಣ್ಣೀರ ಹನಿಗಾಗಿ

ನಗು ಬೀರಿದೆ
ಅಣಕಕ್ಕೊಮ್ಮೆ ಗುರಿಯಾಗಿದ್ದ ನನ್ನ ಮುಳ್ಳುಗಳು
ಜೀವ ಉಳಿಸಿಕೊಳ್ಳುವ ಭರವಸೆ
ಹೊಳೆಯುತ್ತದೆ ನನ್ನ ಮಖಮಲ್ಲಿನ ಹಸಿರು ತೊಗಲು
ನಾನು
ಅಲುಗಾಡುವುದಿಲ್ಲ
o

ಸಂತೋಷ ಮಾಡಿತು ಕೊಲೆ
   
ವ್ಯಾಖ್ಯಾನಿಸಿದೆ ಜೀವನ
ಕತ್ತಲಲ್ಲಡಕಗೊಂಡ
ನನ್ನ ನರಳುವಿಕೆಯ ಆಳದಿಂದ
ಎದ್ದಿದೆ ವಿಧಿಯ ರಣಭೂಮಿಯಲ್ಲೊಂದು ಬಿಳಿಯ ಬಾವುಟ
ಇಳಿದಿದ್ದಾನೆ ಹೊಸ ವೈರಿ
ಒಡ್ಡಿದ್ದಾನೆ ಬೆದರಿಕೆ
ಒಳಮನದ ನೆಮ್ಮದಿಗೆ

ಸಂತೋಷದ ಸೈನಿಕರು
ಕೊಲೆ ಮಾಡಿದರು ನನ್ನ ತುಂಡು ತುಂಡಾಗಿ
ಹೊಸ ಜೀವ ತಳೆದು
ಮರು ಅವತರಿಸಿದೆ ನನ್ನ ದೇಹ
o

ಸಾವಿಲ್ಲದ ಸಾವು

ಕುಳಿತೆ ಸಂತಾಪದಲ್ಲಿ
ಶೋಕಿಸಿದೆ ಸತ್ತ ನನ್ನ ಸಾವಿಗೆ
ಮುಟ್ಟಿದ್ದೆ ಜವರಾಯನ ಒಂದು ರಾತ್ರಿ
ಕಂಡಿದ್ದೆ ತೊಳಗುವ ಬೆಳಗು
ನ್ಯೂಯಾರ್ಕ್ ನಗರ ಬೆಳಗುವ ಬೆಳಕಿಗಿಂತ ಹೆಚ್ಚು

ರೋಮಿಯೊ ಜೂಲಿಯೆಟ್ಟರ ಹಾಗೆ
ತಕ್ಕವಳಿರಲಿಲ್ಲ ನಾನದರ ಪ್ರಭೆಗೆ
ನುಣುಚಿಕೊಂಡಿತು ನನ್ನ ತೆಕ್ಕೆಯಿಂದ

ಕೈ ಬಿಟ್ಟಿತು ಸಾವು ನನ್ನ
ಬೆನ್ನು ತೋರಿಸಿತು ವಿಮೋಚನೆ
ಸತ್ತು ಹೋಗಿದ್ದೆ ಬಹುಮಟ್ಟಿಗೆ
ಆ ಶೋಕದ ಚಿಂತೆಯಲ್ಲಿ
ಹಾಗಾಗಿ ಕುಳಿತೆ

ಶುಕ್ರವಾರ, ಜೂನ್ 1, 2012

ಬುದ್ಧಿಜೀವಿಗಳು ಮರೆಯಾಗಿರುವ ವಿದ್ವತ್ ವಲಯ


                                                                                           ಇಂಗ್ಲಿಷ್ ಮೂಲ-ಎ.ಆರ್.ವಾಸವಿ
ತತ್ವನಿಷ್ಟವಾದ ಮತ್ತು ಕಷ್ಟಕರ ಸ್ಥಿತಿಯಿಂದ ವಿಲಕ್ಷಣ ಬಗೆಯಲ್ಲಿ ದೂರ ಸೆಳೆವುದು ನಿಮಗೆ ತಿಳಿದಂತೆ ಸರಿದಾರಿಯಾಗಿದ್ದರೂ ನೀವು ಭಾಗವಹಿಸಬಾರದೆಂದು ನಿರ್ಧರಿಸಿದ್ದೀರಿ. ಹೀಗೆ ತಡೆಗಟ್ಟುವುದನ್ನೇ ಉದ್ದೀಪಿಸುವ ವಿದ್ವಾಂಸರ ಮನೋಹವ್ಯಾಸಗಳಿಗಿಂತ ಯಾವುದೂ ಹೆಚ್ಚು ನಿಂದನಾರ್ಹವಲ್ಲ್ಲ. ನೀವು ಹೆಚ್ಚು ರಾಜಕೀಯವಾಗಿ ಕಾಣಿಸಿಕೊಳ್ಳಲೂ ಬಯಸುವುದಿಲ್ಲ. ವಿವಾದಿತ ವ್ಯಕ್ತಿಯಾಗಿ ಎಲ್ಲಿ ಕಾಣುವೆನೋ ಎಂದು ಹೆದರುತ್ತೀರಿ. ನಿಮಗೆ ನಿಮ್ಮ ಬಾಸ್ ಅಥವಾ ಅಧಿಕೃತ ವ್ಯಕ್ತಿಯ ಅನುಮತಿ ತೀರಾ ಅಗತ್ಯವಿದೆ. ಸಮತೂಕ ಮನಸ್ಥಿತಿಯವರು, ವಸ್ತುನಿಷ್ಟ, ಮತ್ತು ಉದಾರ ಮನಸ್ಸಿನವರು ಎಂದು ನೀವು ಪ್ರಸಿದ್ಧಿ ಗಳಿಸಿದ್ದನ್ನು ಉಳಿಸಿಕೊಳ್ಳಲು ಬಯಸುತ್ತೀರಿ. ಯಾವುದಾದರೂ ಮಂಡಳಿ ಅಥವಾ ಘನತೆವೆತ್ತ ಸಮಿತಿಯ ಸದಸ್ಯರಾಗಲು ಬಯಸಿ ಸಂಪರ್ಕ ಮಾಡಲು ಹಿಂಜರಿದರೂ ಅದನ್ನು ಪಡೆವ ಭರವಸೆ ಹೊಂದಿದ್ದೀರಿ. ಆದರೂ ಮುಂಚೂಣಿಯ ಜವಾಬ್ದಾರಿ ಸ್ಥಾನದಲ್ಲೇ ಉಳಿದಿದ್ದೀರಿ. ಮುಂದೊಮ್ಮೆ ಗೌರವ ಪದವಿ, ಪ್ರಶಸ್ತಿ ಅಥವಾ ಒಂದು ದೊಡ್ಡ ಬಹುಮಾನ, ಅದಿಲ್ಲದಿದ್ದರೆ ಬಹುಶಹ ರಾಯಭಾರಿ ಹುದ್ದೆಯನ್ನಾದರೂ ಪಡೆವ ಭರವಸೆ  ಹೊಂದಿದ್ದೀರಿ.      
                                                                         -ಎಡ್ವರ್ಡ್ ಸೈದ್, ಬೌದ್ಧಿಕ ಪ್ರತಿನಿಧಿತ್ವ, 1994

ಎಡ್ವರ್ಡ್ ಸೈದ್ ಭಾರತೀಯ ವಿದ್ವತ್ವಲಯವನ್ನು ಬಹು ಸುಲಭವಾಗಿ ವಿವರಿಸಿದ್ದಾರೆ. ದೆಹಲಿಯ ಬಹು ಬಗೆಯ ವಿದ್ವತ್ ವೃತ್ತಗಳಿಂದ ಆರಂಭಿಕ ಅತ್ಯುತ್ಸಾಹದ ತಾಣಗಳವರೆಗೂ ಭಾರತದ ಬಹುಪಾಲು ವಿದ್ವತ್ ವಲಯವಿದೆ.  ಇದು ವಿದ್ವತ್ತಿನ ಮೂಲ ಉದ್ದೇಶ ಮಾತ್ರವಲ್ಲದೆ ಬೌದ್ಧಿಕ ಸಾಧ್ಯತೆಯನ್ನೆ ಕಳೆದುಕೊಂಡಂತೆ ತೋರುತ್ತ್ತಿದೆ. ಮೇಲ್ಮುಖ ಸಾಮಾಜಿಕ ಹಂಬಲಗಳು, ಅನುಕೂಲವಾದಿ ರಾಜಕಾರಣ, ಮತ್ತು ಸಾಮೂಹಿಕ ಮರೆವುಗಳ `ನೈತಿಕ ತತ್ತರ'ದ ವಶದಲ್ಲಿರುವಂತೆಯೂ ತೋರುತ್ತದೆ. ಈ ನಡುವೆ ರಾಷ್ಟ್ರ ಮತ್ತು ಸಮಾಜದ ಯುಗ ಪರಿವರ್ತನೆ ಬಗ್ಗೆ, ರಾಷ್ಟ್ರದ ಆಗುಹೋಗುಗಳ ಬಗ್ಗೆ, ವಿದ್ವತ್ಜನತೆ ತಮ್ಮ ಸಲಹೆ ಸೂಚನೆ ನೀಡುವುದಕ್ಕಾಗಲೀ ಟೀಕೆ ಟಿಪ್ಪಣಿ ಮಾಡುವುದಕ್ಕಾಗಲೀ  ದನಿಯನ್ನೂ ಎತ್ತುವುದಿಲ್ಲ ಭಾಗವಹಿಸುವುದೂ ಇಲ್ಲ್ಲ. ಇದಕ್ಕಿಂತಲೂ ಕೆಟ್ಟದ್ದಾದ ಗುಣಸ್ವಭಾವಗಳಿವೆ. ಇವು ವಿದ್ವತ್ತು ಮತ್ತು ಬೌದ್ಧಿಕತೆ, ನಿಷ್ಟತೆ, ಮುಕ್ತತೆ, ವಿಶಾಲ ಜಗತ್ತಿನೊಂದಿಗೆ ತೊಡಗಿಸಿಕೊಳ್ಳುವಿಕೆ, ಸರಳ ಸಾಮಾನ್ಯ ಒಳಿತಿಗಾಗಿ ಬದ್ಧವಾಗುವ ಪ್ರಜ್ಞೆ ಇವನ್ನು ವ್ಯಾಖ್ಯಾನಿಸುವ ಸ್ವಭಾವ ಯಾವುದಿರಬೇಕು ಎಂಬುದನ್ನು ನಿರಾಕರಿಸಲೆಂದೆ ಜೊತೆಗೂಡಿವೆ. ಹಾಗಾಗಿ ವಿದ್ವತ್ ವಲಯದ ಪ್ರಮಾಣ ಅಧಿಕವಾಗುತ್ತಿದ್ದರೂ ಬುದ್ಧಿಜೀವಿಗಳ ಇಳಿಮುಖ ಸಂಖ್ಯೆ ಹೆಚ್ಚುತ್ತಿರುವುದನ್ನು ಕಾಣುತ್ತೇವೆ.
ಭಾರತೀಯ ವಿದ್ವತ್ ವಲಯದ ಈ ಕಳಪೆ ವ್ಯಕ್ತಿತ್ವ ಹಲವು ಮೂಲಗಳಿಂದ ಒಡೆದುಮೂಡಿದೆ. ನಿರ್ದಿಷ್ಟ ಸಾಮಾಜಿಕ ಹಿನ್ನೆಲೆಯಲ್ಲಿ ಇದು ಶೈಕ್ಷಣಿಕ ವಲಯಕ್ಕೆ ಮಾತ್ರ ಸೀಮಿತವಾಗಿಲ್ಲ. ಸಮಾಜದ ಎಲ್ಲ ಶ್ರೇಣಿಗಳ ಹಿನ್ನೆಲೆಯಿಂದ- ಸ್ಥಾಪಿತ ಧೀಮಂತ ಕುಟುಂಬಗಳಿಂದ, ಭೂಮಾಲಿಕ ಮನೆತನಗಳಿಂದ, ವೃತ್ತಿನಿರತ ಮತ್ತು  ಸರಕಾರಿ ಸೇವೆಯ ಹಿನ್ನೆಲೆಯಿಂದ ಹಿಡಿದು ಅನಾನುಕೂಲ ಜಾತಿ ಸಮುದಾಯಗಳ ವರೆಗೆ- ಬಂದ ವಿದ್ವತ್ ವಲಯ ಹಿಂದಿನ ಗ್ರಹಿಕೆಯನ್ನು  ಸಾಮಾಜೀಕರಣಗೊಳಿಸಿದಂತೆ ತೋರುತ್ತದೆ. ಇಂಥ ಹಿಂದಿನ ಗ್ರಹಿಕೆಯ ಮನಸ್ಥಿತಿ ಹೆಚ್ಚಾಗಿ ವೃತ್ತಿ ಜೀವನದಲ್ಲಿ ಸುಭದ್ರತೆ (ವೃತ್ತಿ ಜೀವನದ ಮಹತ್ವಕಾಂಕ್ಷೆಯೂ ಅಲ್ಲದ) ಸೀಮಿತ ಲೋಕದೃಷ್ಟಿಯಾಗಿದೆ. ಇದು ತಮ್ಮ ಜಾತಿ, ಮತ, ಕೋಮು ಸಮುದಾಯಗಳ ಹಿನ್ನೆಲೆಯಲ್ಲಿ ಮುಂದುವರೆದು ವ್ಯಾಖ್ಯಾನಕ್ಕೊಳಗಾಗಬೇಕಿದೆ. ಅಲ್ಲದೆ  ಸಂಕುಚಿತ ಸಾಮಾಜಿಕ ಸಂಬಂಧಗಳಲ್ಲಿ ಮುಗಿತಾಯ ಕಂಡಿದೆ. ತನ್ನ ಸಮುದಾಯದಲ್ಲಿ ಆಳವಾಗಿ ಬೇರುಬಿಟ್ಟ ಸ್ತ್ರೀ-ಪುರುಷ ಸದಸ್ಯರಿಂದ ಕೂಡಿದ ಭಾರತೀಯ ವಿದ್ವತ್ ವಲಯ ದೊಡ್ಡಮಟ್ಟದಲ್ಲಿ ವಿರ್ಮಶೆಗೆ ಒಳಪಡದೆ ಉಳಿದುದರಿಂದ ಇಂಥ ಇಕ್ಕಟ್ಟಿನ ಮನಸ್ಥಿತಿಯಲ್ಲೆ ಒಡಮೂಡುತ್ತಿದೆ. ಪಾರಂಪರಿಕ ಸಾಮಾಜಿಕ ಸಹವಾಸ ಮತ್ತು ಹಿಂದಿನ ಗ್ರಹಿಕೆಗಳಿಂದ ಸ್ವತಂತ್ರನಾದ ಯಾವುದೇ ಒಬ್ಬ ವ್ಯಕ್ತಿ ಯಾರಿಗಾದರೂ ಒಬ್ಬರಿಗೆ ಅಪರೂಪಕ್ಕೆ ಭೇಟಿಯಾಗಬಹುದು. ಅದರೆ ಇಂಥ ಹಿಂದಿನ ಗ್ರಹಿಕೆಯ ಮನಸ್ಸು ಮತ್ತು ನಡವಳಿಕೆ ಯಾವುದೇ ಬಗೆಯಲ್ಲಿ ಬೌದ್ಧಿಕ ಬೆಳವಣಿಗೆಯಾಗದಂತೆ ತಡೆಯುತ್ತದೆ. ಅಷ್ಟೇಅಲ್ಲ ಅವನಲ್ಲಿ ಮುಚ್ಚಿದ ಮನಸ್ಥಿತಿಯನ್ನು ಉಂಟುಮಾಡುತ್ತದೆ. ಒಟ್ಟಿನಲ್ಲಿ ಆಲೋಚಿಸಲು ವಿಫಲನಾಗುವ ಮತ್ತು ಎಲ್ಲ ಹೊಸ ವಿಚಾರಗಳಿಗೆ ಮುಕ್ತವಾಗಿ ತೆರೆದುಕೊಳ್ಳಲು ಸಾಧ್ಯವಿಲ್ಲದ ಸೀಮಿತ ವ್ಯಕ್ತಿತ್ವವನ್ನು ರೂಪಿಸುತ್ತದೆ. ಇತ್ತೀಚೆಗೆ ಒಬ್ಬ ಯುವ ಪರಿಸರವಾದಿ ತಾನು ವಾಸಿಸುವ ಕ್ಯಾಂಪಸ್ ಮನೆಯ ಆವರಣದಲ್ಲಿ ನಿರ್ವಹಣ ಅಭ್ಯಾಸ ಮತ್ತು ನಿರುಪಯೋಗಿ ಪುಷ್ಪಾವರಣಗಳನ್ನು ಒಟ್ಟಿಗೆ ಜೋಡಿಸುವ ಕಾರ್ಯದಲ್ಲಿ ನಿರಾಸೆ ಅನುಭವಿಸಿದ್ದನ್ನು ನಿರೂಪಿಸಿದ್ದಾನೆ. ಮರುಬಳಕೆಯ ಯೋಜನೆಯಡಿ ಬಹುಪಾಲು ಅಧ್ಯಾಪಕರು ನಿರುಪಯೋಗಿ ಪುಷ್ಪಾವರಣ ಜೋಡಿಸುವ ಕಾರ್ಯವನ್ನೊಪ್ಪಿಕೊಂಡಿದ್ದರು. ಆದರೂ ಅದರಲ್ಲಿ ಪಾಲುಗೊಳ್ಳಲು ಒಲ್ಲದ ಮನಸ್ಸುಳ್ಳವರಾಗಿದ್ದರು. ಆಗ ಹಿರಿಯ ಅಧ್ಯಾಪಕರೊಬ್ಬರು ಅವನನ್ನೇ ಆ ಕೆಲಸಕ್ಕೆ ಹಚ್ಚಿದ್ದಾರೆ. ಅಲ್ಲದೆ ತಾನಾಗಲೀ ತನ್ನ ಹೆಂಡತಿಯಾಗಲೀ ಏಕೆ ತಮ್ಮ ಕೈಗಳನ್ನು ಹೊಲಸು ಮಾಡಿಕೊಳ್ಳಬೇಕು ಎಂದು ಒತ್ತಾಯಮಾಡಿ ಕೇಳಿದ್ದಾರೆ. ತಮ್ಮ ಹೆಂಡತಿ ಇಂಥ ಕೆಲಸಗಳನ್ನು ಮಾಡಲು ಒಪ್ಪಿಕೊಳ್ಳುವಳೆಂದು ಅವರು ಯೋಚಿಸಿದ್ದಾರೆಯೆ?
ಇಂಥ ಅಧ್ಯಾಪಕರು ಕೆಲಸ ಮಾಡುವ ಶಿಕ್ಷಣ ಸಂಸ್ಥೆಯಲ್ಲಿ ವಿದ್ವತ್ ಜನತೆ, ಪದವೀಧರರು ಮತ್ತು ವಿದ್ಯಾರ್ಥಿಗಳು ಇರುತ್ತಾರೆ. ಅವರೊಂದಿಗೆ ಪ್ರಜಾಪ್ರಭುತ್ರ ವಿರೋಧಿ ಮತ್ತು ಸಂಕುಚಿತ ಸ್ವಭಾವಗಳ ಸಂಸ್ಕೃತಿಯೂ  ಹಿಂದಿನ ಗ್ರಹಿಕೆಗಳೂ ಅದರ ಮಿತಿಗಳೂ ಕೂಡಿಕೊಂಡಿವೆ. ವ್ಯಾಪಕವಾದ ಏಣಿ ಶ್ರೇಣಿ ವ್ಯವಸ್ಥೆ, ಪುರುಷ ಪರ ನಿಲುವು ಮತ್ತು ಜಾತಿ ವ್ಯಾಖ್ಯಾನಿತ ಸಂಸ್ಕೃತಿಯೂ ಬಹಳಷ್ಟು ವಿದ್ಯಾಸಂಸ್ಥೆಗಳಲ್ಲಿವೆ. ಆದ್ದರಿಂದ ಇವು ವ್ಯಕ್ತಿಯ ಬೌದ್ಧಿಕ ಬೆಳವಣಿಗೆ ಮತ್ತು ಸಾಮೂಹಿಕ ಬದ್ಧತೆಯನ್ನು ಪಾಲನೆ ಮಾಡುವ ವಾತಾವರಣ ಒದಗಿಸಲು ಸೋಲುತ್ತವೆ. ಈ  ಸಂಸ್ಕೃತಿ ಪ್ರತಿಯೊಂದು ತಲೆಮಾರಿನಲ್ಲೂ ದಾಕ್ಷಿಣ್ಯ, ಭಟ್ಟಂಗಿತನ, ಮತ್ತು ದಾಸಾನುದಾಸ ಸಂಸ್ಕೃತಿಯನ್ನು ಸಾರಾಸಗಟಾಗಿ ಮರುಹುಟ್ಟು ಹಾಕುತ್ತದೆ. ಇಂಥ ಸಾಂಸ್ಥಿಕ ಸಾಮಾಜೀಕರಣದ ಫಲವಾಗಿ ಬಹಳಷ್ಟು ವಿದ್ವತ್ ಜನರಲ್ಲಿ ಸ್ವಂತ ನಿಲುವು ತಳೆಯಲಾಗದ, ತಮ್ಮ ಮನಸ್ಸನ್ನು ಸಮರ್ಥವಾಗಿ ವ್ಯಕ್ತಪಡಿಸಲಾಗದ, ಸ್ವತಂತ್ರ ನಿರ್ಣಯ ಮಾಡಲಾಗದ ಬೌದ್ಧಿಕ ಅಸಾಮರ್ಥ್ಯತೆ ಎದ್ದು ಕಾಣುತ್ತದೆ. ಹೀಗಿದ್ದರೂ ಇಂಥ ದಾಸಾನುದಾಸ ಸಂಸ್ಕೃತಿ ಸಂಪೂರ್ಣವಾಗಿ ಅಂಕೆಯಲ್ಲಿರುವ ವಿದ್ವಾಂಸರನ್ನೂ ಹುಟ್ಟಿಸುವುದಿಲ್ಲ. ದಮನ ನೀತಿಯನ್ನನುಸರಿಸಿ ಸಂಸ್ಥೆಯಲ್ಲಿ ಮೈತ್ರಿಯ ಪರಿಸರವನ್ನೂ ಪೋಷಿಸುವುದಿಲ್ಲ. ಹಲವಾರು ಸಂಸ್ಥೆಗಳಲ್ಲಿ ವಿದ್ವತ್ ಜನರೇ ಸಂಸ್ಥೆಯನ್ನೂ ಅದರ ಕಾರ್ಯ ಚಟುವಟಿಕೆಗಳನ್ನೂ ಮತ್ತಷ್ಟು ಹಾಳುಮಾಡುತ್ತಾರೆ. ಪ್ರಾತಿನಿಧಿಕ ಮತ್ತು ಪರೋಕ್ಷ ಮಾರ್ಗಗಳ ಮೂಲಕ ಭಿನ್ನಾಭಿಪ್ರಾಯ ಮತ್ತು ಪ್ರತಿಭಟನೆಯ ಹಾದಿ ಹಿಡಿಯುತ್ತಾರೆ. ಬಹುಪಾಲು ವಿದ್ವತ್ ಜನತೆ ಸ್ವತಂತ್ರ ಚಿಂತಕರಾಗಲೀ ವಿದ್ವಾಂಸರಾಗಲೀ ಆಗುವುದಿಲ್ಲ. ಬದಲಿಗೆ ಗುಂಪು ಅಥವಾ ಸಣ್ಣ ಕೂಟಗಳಲ್ಲಿ ಕ್ರಿಯಾಶೀಲರಾಗಿ ಬೌದ್ಧಿಕ ಪರಿಧಿಯ ರಾಜಕೀಯ ವಿಷವರ್ತುಲದೊಳಗೆ ಮರುಹುಟ್ಟು ಪಡೆಯುತ್ತಾರೆ. 
ಈ ರೋಗದ ಕೆಲವಂಶಗಳು ಪ್ರಭುತ್ವ ಮತ್ತು ಬೌದ್ಧಿಕ ವಲಯಗಳ ನಿಕಟ ಬಾಂಧವ್ಯದಿಂದಲೂ ಗಣನೆಗೆ ಬರುತ್ತದೆ. ಪ್ರಭುತ್ವ ಬೆಂಬಲಿತ ಉನ್ನತ ಶಿಕ್ಷಣವೆ, ಸುರಕ್ಷಿತ ವಿಶಾಲ ನೆಲೆಗಟ್ಟು ಮತ್ತು ಸಾರ್ವಜನಿಕ ಬೆಂಬಲವಿರುವ ಅವಕಾಶಗಳಿಗೆ ದಾರಿಯಾಗಿರುವಂತೆ ಹಲವು ಬಗೆಗಳಲ್ಲಿ ಕಾಣುತ್ತದೆ. ಆದರೂ ಉನ್ನತ ಶಿಕ್ಷಣದ ರಾಜಕೀಯವೆಂದರೆ ರಾಜ್ಯ ವ್ಯವಸ್ಥೆ ಶಿಕ್ಷಣವನ್ನು ರಾಜಕೀಯಗೊಳಿಸುವ ಮಾರ್ಗವಾಗಿರುವುದು ಮಾತ್ರವಲ್ಲ. ಅದು ವಿದ್ವತ್ ವಲಯದ ಮೌನ ಮತ್ತು ಸಹಕಾರವನ್ನು ಪ್ರಭುತ್ವ ಅಥವಾ ರಾಜಕೀಯ ಪಕ್ಷಗಳ ಕಾರ್ಯಕ್ರಮಗಳಾಗಿ ಬದಲಾಯಿಸುತ್ತದೆ. ಉನ್ನತ ಹುದ್ದೆಗಳಿಗೆ ಮುಂಬಡ್ತಿ ಕೋರಿ ಓಲೈಸುವಿಕೆ ಬಯಸುವುದು ಮತ್ತು ಕೆಲಸ ಮಾಡಿಕೊಡುವ ರಾಜಕಾರಣಿಗೆ ಕಾಣಿಕೆ ನೀಡುವುದು, ಹಲವಾರು ವಿದ್ವಾಂಸರನ್ನು ಮತ್ತು ಸೃಜನಶೀಲ ಬರಹಗಾರರನ್ನು ಪ್ರಭುತ್ವದ ದಾಸರನ್ನಾಗಿ ಮಾಡಿದೆ. ಇದರಿಂದ ಅವರು ಎರಡು ಬಗೆಗಳಲ್ಲಿ ದಾರಿ ತಪ್ಪುತ್ತಾರೆ. ಹಲವು ಬಗೆಗಳಲ್ಲಿ ಬೌದ್ಧಿಕ ವಿರೋಧಿ ಪ್ರಸ್ತಾಪ ಮಾಡುವ ಹಾಗೆ ಆಗುತ್ತದೆ. ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಪ್ರಭುತ್ವ ನಾಶ ಮಾಡಿದಾಗ ಅಥವಾ ಮಿತಿ ಮೀರಿ ಕಾನೂನುಭಂಗ ಮಾಡಿದಾಗ ತನ್ನ ವಿರುದ್ಧ ಅಭಿಪ್ರಾಯ ವ್ಯಕ್ತಮಾಡದಂತೆ ಮೊದಲಿಗೆ ಹತ್ತಿಕ್ಕುತ್ತದೆ. ಮತ್ತೆ ಕೆಲವರು ಪ್ರಭುತ್ವದ ಆಂತರಿಕ ಸಲಹೆಗಾರರಾಗುವ, ರಾಜಕಾರಣಿಗಳಿಗೆ ವಕ್ತಾರರಾಗುವ, ಅಲ್ಲದೆ ಸಮಸ್ಯೆಗಳ ಪರಿಹಾರಕರೂ ಹಳಸಿದ ಮತ್ತು ಸುಳ್ಳು ಮಾಹಿತಿ ಒದಗಿಸುವವರೂ ರಾಜಕೀಯ ಮೇಲಾಟಗಳಿಗೆ ತಕ್ಕಂತೆ ಮಾಹಿತಿ ಮರುವ್ಯಾಖ್ಯಾನ ಮಾಡುವವರೂ ಆಗುವ ದಾರಿ ಆಯ್ಕೆ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ನಾನೊಂದು ವರದಿಯನ್ನು ಪರಿಶೀಲನೆ ಮಾಡಿದೆ. ಅದು ಸಮರ್ಥರಾದ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದ ಕೃಷಿ ಅರ್ಥಶಾಸ್ತ್ರಜ್ಞರೊಬ್ಬರ ಅಧ್ಯಕ್ಷತೆಯಲ್ಲ್ಲಿ ಸಿದ್ಧವಾಗಿತ್ತು. ಕರ್ನಾಟಕ ಸರಕಾರ ತನ್ನ ಅರ್ಥಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ ವಿಭಾಗಗಳು ಮಾಡಿದ ಲೆಕ್ಕಾಚಾರಗಳು ತಪ್ಪು ವಿಧಾನಗಳನ್ನು ಆಧರಿಸಿವೆ ಎಂದೂ ಅವು ವರದಿಯ ವಿಶ್ಲೇಷಣೆಯನ್ನು ಅನುಸರಿಸಿ ಒಂದು ಸಲ ತಿದ್ದುಪಡಿ ಮಾಡಿಕೊಂಡಿದ್ದರೆ ರಾಜ್ಯದ ಕೃಷಿ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತಿತ್ತು ಎಂದೂ ಘೋಷಿಸಲು ಅವಕಾಶ ಒದಗಿಸಿತ್ತು! ಇಂಥ ಬೌದ್ಧಿಕ ಬೆಂಬಲದಿಂದ ವಾಸ್ತವವೆ ನಿರಾಕರಣೆಗೆ ಒಳಗಾಯಿತು. ಅಲ್ಲದೆ ಸುಳ್ಳನ್ನು ಸತ್ಯವೆಂದು ಘೋಷಣೆ ಮಾಡುವ ಕಾರ್ಯ ನಡೆದುದರಿಂದ ಬಹಳಷ್ಟ ಜನರಿಗೆ ಕೆಡುಕುಂಟಾಯಿತು. ಪ್ರಭುತ್ವದ ಪ್ರಶಸ್ತಿ ಮತ್ತು ಅನುದಾನಗಳು ಕೂಡ ಬಹುಪಾಲು ವಿದ್ವತ್ ಜನರನ್ನು ರಾಜಕೀಯ ಪರಿಧಿಯೊಳಗಿರಿಸಿವೆ. ವೈಯಕ್ತಿಕವಾಗಿ ನೀಡುವ ಕಾಣಿಕೆಗಳು ಮತ್ತು ಓಲೈಸುವಿಕೆಗಳು, ಹಾಗೂ ನಿಕಟ ವರ್ತುಲದಲ್ಲಿ ಉಳಿಸಿಕೊಳ್ಳುವ ಸೌಲಭ್ಯಗಳ ಬಳಕೆ ಅವರನ್ನು ಸರಕಾರದ ದಾಸರನ್ನಾಗಿ ಮಾಡುತ್ತ್ತಿದೆ. ಬಹಳಷ್ಟು ವಿದ್ವತ್ ಜನರು ಪ್ರಭುತ್ವದೊಂದಿಗೆ ಕರಾರು ಮಾಡಿಕೊಳ್ಳುತ್ತಾರೆ. ವಿಶೇಷವಾಗಿ ನೀತಿ ನಿರೂಪಣೆಯ ಉದ್ದೇಶ ಈಡೇರಿಸಲು, ಒತ್ತಡದ ಗುಂಪಾಗಿ ಕೆಲಸ ಮಾಡಲು ಅಥವಾ ನ್ಯಾಯಾಲಯದ ತೀಪುಗಳನ್ನು ಜಾರಿಗೊಳಿಸುವ ಹೊಣೆ ಹೊರಲು ಒಪ್ಪಂದದ ಅಗತ್ಯವಿದೆ. ಆದರೆ ಕೆಲವರು ತಮ್ಮ ತರಬೇತಿ ಮತ್ತು ವೃತ್ತಿ ಜೀವನದ ಏಕೈಕ ಉದ್ದೇಶವಾಗಿ ಅಂಥ ಒಪ್ಪಂದವನ್ನು ಕಾಣುತ್ತಾರೆ.
ಈ ಬಗೆಯಲ್ಲಿ ಪ್ರಭುತ್ವದೊಂದಿಗೆ ಕೂಡಿಕೆ ಮಾಡಿಕೊಳ್ಳುವ ಪ್ರವೃತ್ತಿ ಬೆಳೆಯುತ್ತಿದೆ. ಹಲವು ಜನ ಸಮಾಜ ವಿಜ್ಞಾನಿಗಳು ಈಗ ಅಂತಾರಾಷ್ಟ್ರೀಯ ಸಹಭಾಗಿತ್ವಕ್ಕಾಗಿ ಏಜೆಂಟರು ಅಥವಾ ಪಾಲುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಹಲವು ಸಹಭಾಗಿತ್ವಗಳು ಈ ಅಧ್ಯಯನಗಳ ತಾತ್ವಿಕ ತಳಹದಿಗೆ ಅಲ್ಪ ಸ್ವಲ್ಪ ಅಥವಾ ಯಾವುದೇ ಕಾಣಿಕೆ ನೀಡದ ಸ್ಥಳೀಯ ಮಾಹಿತಿ ಸಂಗ್ರಹಕಾರರು ಮತ್ತು ಅವರ ನಂತರದ ಹಂತದಲ್ಲಿ ಹಾಗೂ ಸಂಶೋಧನೆಯ ಪ್ರಚಾರ ಕಾರ್ಯದಲ್ಲಿ ವಿದ್ವತ್ ಜನರನ್ನು ಬಳಸಿಕೊಳ್ಳುತ್ತವೆ. ಕೆಲವು ಪ್ರಗತಿಪರ ಅಂತಾರಾಷ್ಟ್ರೀಯ ಯೋಜನೆಗಳು ಉದ್ದೇಶಪೂರ್ವಕವಾಗಿ ಮತ್ತು ಪ್ರಜ್ಞಾಪೂರ್ವಕವಾಗಿ ಈ ಮಿತಿಗಳನ್ನು ಎತ್ತಿ ಹೇಳಲು ಕೇಳಿಕೊಳ್ಳುತ್ತವೆ. ತಮ್ಮಿಂದಾಗಿಯೆ ಹೆಚ್ಚು ಪ್ರಜಾಸತ್ತ್ತಾತ್ಮಕವಾಗಿ ಮತ್ತು ದೊಡ್ಡ ಪ್ರಮಾಣದ ಸಾರ್ವಜನಿಕರೊಂದಿಗೆ ಆತ್ಮಸಾಕ್ಷಿಯಂತೆ ಮೂಲ ಸಾಮಗ್ರಿಗಳನ್ನು ಹಂಚಿಕೊಳ್ಳಲಾಯಿತೆಂಬ ಗೌರವವನ್ನೂ ಪಡೆಯುತ್ತವೆ. ಈ ಸಂದರ್ಭದಲ್ಲೆ ಇಂಥ ಅಂತಾರಾಷ್ಟ್ರೀಯ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕೋರುವ ಅನೇಕ ಭಾರತೀಯ ವಿದ್ವತ್ ಜನರ ಪಾತ್ರವನ್ನು ಪರಿಶೀಲಿಸಬೇಕಾದ ಅಗತ್ಯವಿದೆ. ವಿಶ್ವ ಬ್ಯಾಂಕು, ಏಷ್ಯಾ ಅಭಿವೃದ್ಧಿ ಬ್ಯಾಂಕು, ಮತ್ತು ಇತರ ಸಹಾಯಕ ಅಥವಾ ರಾಷ್ಟ್ರದಾಚೆಯ 'ಅಭಿವೃದ್ಧಿ' ಸಂಸ್ಥೆಗಳಂಥ ಸಂಸ್ಥೆಗಳು ಮತ್ತು ಏಜೆನ್ಸಿಗಳ ಪರವಾಗಿ ಕೆಲಸ ಮಾಡಲಾಗುತ್ತಿದೆ. ಇದರಿಂದ ಅವರ ಸ್ವಂತ ಸಾಮರ್ಥ್ಯ ಗುರುತಿಸಿಕೊಳ್ಳುವ, ಡಾಲರ್ ಮೊತ್ತದಲ್ಲಿ ದಿನಗೂಲಿ ಸಂಭಾವನೆ ಲೆಕ್ಕ ಹಾಕಲಾಗುವ ಮತ್ತು ಸರಾಸರಿ ವೇತನಕ್ಕಿಂತ ದೊಡ್ಡ ಮೊತ್ತವನ್ನು ಕಾಣುವ ಅವಕಾಶ ಸಾಧ್ಯವಾಗಿದೆ. ಆದರೂ ಈ ಏಜೆನ್ಸಿಗಳಿಗೆ ಅವರು ಗುಲಾಮರಾಗಿಯೆ ಉಳಿಯಲು ಸಮರ್ಥರನ್ನಾಗಿಸಿದೆ. ಇಂಥ ಅಂತಾರಾಷ್ಟ್ರೀಯ ಸಹಭಾಗಿತ್ವ ಅವರ ವಿದ್ವತ್ ಗ್ರಹಿಕೆಗಳನ್ನು ಗಮನಾರ್ಹವಾಗಿ ಉತ್ತಮಪಡಿಸಿಲ್ಲ. ಅವರ ವಿದ್ವತ್ ಸಾಮರ್ಥ್ಯ ಮತ್ತು ಸಂಶೋಧನ ವರದಿಗಳನ್ನು ಉನ್ನತ ಮಟ್ಟಕ್ಕೂ ಎತ್ತರಿಸಿಲ್ಲ. ಇದು ಹೆಚ್ಚು ಆತಂಕಕಾರಿಯಾದ ಬೆಳವಣಿಗೆಯಾಗಿದೆ.
ಭಾರತೀಯ ವಿದ್ವತ್ ವಲಯದ ವಿಫಲತೆಯಲ್ಲಿ ಸಂಪೂರ್ಣ ಮುಳುಗಿರುವ ಬುದ್ಧಿಜೀವಿಗಳ ಹಲವು ಸಂದರ್ಭಗಳು, ನಿದರ್ಶನಗಳು ಕಣ್ಣಿಗೆ ಬೀಳುತ್ತವೆ. ಮುಖ್ಯ ಮತ್ತು ಸೂಕ್ಷ್ಮ ಸಾರ್ವಜನಿಕ ಚರ್ಚೆಗಳನ್ನು ಹೊರತು ಪಡಿಸಿದರೂ ಭಾರತದ ಬಹಳಷ್ಟು ವಿದ್ವಾಂಸರಲ್ಲಿ ಯಾರೊಬ್ಬರೂ ಮೈಕೊಡವಿ ತಮ್ಮ ನಿಲುವು ವ್ಯಕ್ತಪಡಿಸುವ ಧೈರ್ಯ ಮಾಡುವುದಿಲ್ಲ. ಸಮಸ್ಯೆಗಳ ಚರ್ಚೆಗಳನ್ನು ಅವರು ಯಾವಾಗಲೂ ಸ್ವೀಕೃತ ವಿಚಾರಗಳು ಮತ್ತು ಅಭಿಪ್ರಾಯಗಳ ಮಿತಿಯಲ್ಲೆ ರೂಪಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೇಳಿ ಬಂದ ಸಂಶೋಧನೆ ಅಥವಾ ವಿಚಾರಗಳೂ ಅವರ ಮಾತುಗಳಲ್ಲಿ ಕಾಣುವುದಿಲ್ಲ. ಹಲವಾರು ವರ್ಷಗಳಿಂದ ನಾನು ಕಂಡ 'ಮಾನ್ಯ ವಿದ್ವಾಂಸರೊಬ್ಬರು' ಸಮಸ್ಯೆಗಳ ಕುರಿತು ಎತ್ತಿದ ದನಿಯಲ್ಲಿ ಕಲಿತ ಹೊಸ ಅಂಶವೊಂದೂ ಇರದೆ ವೈಯಕ್ತಿಕ ಹಳಸಲು ಅಭಿಪ್ರಾಯಗಳೆ ತುಂಬಿಹೋಗಿವೆ. ನಾನು ನೆನಪಿಸಿಕೊಳ್ಳಬಹುದಾದ ಇನ್ನೂ ಕೆಲವು ಸಂದರ್ಭಗಳು ಹೀಗಿವೆ.
ಅ. ಜಾತಿ ಮತ್ತು ಮಾನವ ಅಭಿವೃದ್ಧಿ ಚರ್ಚೆಯಲ್ಲಿ, ವಿಜ್ಞಾನಿಯೊಬ್ಬರು ಜಾತಿ ಆಧಾರಿತ ಬುದ್ಧಿಮತ್ತೆ ಕುರಿತು ತಳಿಶಾಸ್ತ್ರ ಅಧ್ಯಯನ ಮಾಡಲು ಕರೆ ನೀಡಿದ್ದರು.
ಇ. ಸಂಸ್ಕೃತ ಬೋಧನೆ ಮತ್ತು ಕಲಿಕೆಯ ಸ್ಥಿತಿಗತಿ ಪರಿಶೀಲಿಸುವ ಸಭೆಯಲ್ಲಿ, ಆಡಳಿತ ಮತ್ತು ಜನಪ್ರಿಯ ಭಾಷೆಯಾಗಿ ಹೀಬ್ರೂವನ್ನು ಯಶಸ್ವಿಯಾಗಿ ಜಾರಿಗೆ ತಂದ ಇಸ್ರೇಲಿನ ಹಾದಿ ತುಳಿಯಬೇಕೆಂದು ಯುವಕನೊಬ್ಬ ಸಲಹೆ ಮಾಡಿದ್ದ.
ಉ. ಜನಸಂಖ್ಯೆಯ ಪ್ರವೃತ್ತಿ ಕುರಿತ ರಾಷ್ಟ್ರಮಟ್ಟದ ಚರ್ಚೆಯಲ್ಲಿ ಕಡ್ಡಾಯ ಕುಟುಂಬ ಯೋಜನೆಯನ್ನು ವಿಶೇಷವಾಗಿ ಉತ್ತರ ಭಾರತದಲ್ಲಿ ಜಾರಿಗೊಳಿಸಬೇಕೆಂದು ಕೆಲವರು ಸಲಹೆ ನೀಡಿದ್ದರು.
ಎ. ಶಿಕ್ಷಣ ನೀತಿಯ ಪ್ರವೃತ್ತಿಗಳು ಕುರಿತ ಚರ್ಚೆಗಳು, ಶಿಕ್ಷಣದ ಖಾಸಗೀಕರಣ ಮತ್ತು ಪ್ರಮಾಣಿತ ಪರೀಕ್ಷೆಯ ಮೂಲಕ ಮೆರಿಟ್ಅನ್ನು ಗೊತ್ತು ಮಾಡಬೇಕೆಂಬ ಸಲಹೆಗಳಿಂದ ತುಂಬಿಹೋಗಿತ್ತು.
ಒ. ರಾಷ್ಟ್ರಮಟ್ಟದ ಹೆಸರಾಂತ ವಿಜ್ಞಾನಿಯೊಬ್ಬರು, ಭಾರತದ ಬೇಸಾಯಗಾರರನ್ನು ಉನ್ನತ ತಂತ್ರಜ್ಞಾನ ಬಳಕೆ ಮಾಡುವಂಥ 'ರೈತ ತಂತ್ರಜ್ಞ'ರನ್ನಾಗಿ ಬದಲಿಸಬೇಕು, ಆ ಮೂಲಕ ಭಾರತದ ವ್ಯವಸಾಯ ಕ್ಷೇತ್ರದಲ್ಲಿರುವ ಎಲ್ಲ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಕರೆ ನೀಡಿದ್ದರು.
ಈ ಎಲ್ಲ ಸಂದರ್ಭಗಳಲ್ಲಿ ಆಲೋಚನಾ ರಹಿತ ಎಳೆಯೊಂದು ನಿರಂತರವಾಗಿ ಹರಿದಿದೆ. ವೈಯಕ್ತಿಕ ಮತ್ತು ನಿಕಟ ವಲಯಗಳಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ವಿಚಾರವಾಗಿ ಮಂಡಿಸಲಾಗಿದೆ. ವಿಶೇಷವಾಗಿ ನ್ಯಾಯ, ಸಮಾನತೆ ಮತ್ತು ಮುಕ್ತತೆಯ ನಿಯಮ ಆಧರಿಸಿದ ಬಹಳಷ್ಟು ಹೊಸ ವಿಚಾರಗಳನ್ನು ವಾಸ್ತವವಲ್ಲವೆಂದು ವ್ಯಂಗ್ಯ ಮಾಡಲಾಗಿದೆ. ಸಾಮಾನ್ಯ ತಿಳುವಳಿಕೆಯನ್ನು ಮರುಹುಟ್ಟಿಸುವ ಈ ಹೊಸ ಪ್ರಯತ್ನದಲ್ಲಿ ಕೆಲವರಿಗೆ ಮೀಸಲಾಗಿದ್ದ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸಿದೆ. ಈಗಿರುವ ವ್ಯವಸ್ಥೆಯನ್ನು ಒಪ್ಪಿಕೊಳ್ಳಿ ಇಲ್ಲವೆ ಆದರ್ಶಗೊಂಡ ಪ್ರಾಚೀನ ಕಾಲಕ್ಕೆ ಮರಳಿ ಎಂಬ ಒಳದನಿಯೂ ಇದರಲ್ಲಿದೆ. ಈ ಎಲ್ಲ ನಿಲುವು ಮತ್ತು ಸ್ಥಿತಿಗಳು ಭಾರತೀಯ ಸಮಾಜದ ಸಂಕೀರ್ಣತೆ ಅರಿಯುವಲ್ಲಿನ ಕೊರತೆಯನ್ನೂ ಪ್ರಜಾಪ್ರಭುತ್ವದ ಪಾತ್ರ ಮತ್ತು ಹೊಸ ಅರ್ಥಶಾಸ್ತ್ರದ ಪ್ರಭಾವವನ್ನೂ ಸೂಚಿಸುತ್ತವೆ.
 ದಿನನಿತ್ಯದ ಬೆಳವಣಿಗೆಗಳಿಂದ ವಿದ್ವತ್ ಜನತೆ ಹೊರಗುಳಿದಿದ್ದಾರೆ. ಅವರು ಧಾರ್ಮಿಕ ಮೂಲಭೂತವಾದದ ಕಡೆ ವಾಲಿರುವುದಕ್ಕೆ ಕಳೆದ ದಶಕಗಳು ಕೂಡ ಸಾಕ್ಷಿಯಾಗಿವೆ. ಆದರ್ಶೀಕರಿಸಿದ ಪ್ರಾಚೀನವನ್ನು ಮರುಕೊಳಿಸಲು ಅಥವಾ ಪ್ರಾಚೀನವನ್ನು ಮರುಕಟ್ಟಲು ಇಲ್ಲವೆ ರಮ್ಯಗೊಳಿಸಲು ಅಥವಾ ವಿಕಾರಗೊಳಿಸಲು ಪ್ರಯತ್ನಿಸಲಾಗಿದೆ. ಅದಕ್ಕಾಗಿ ಸಂಕೀರ್ಣತೆ, ಸಮಸ್ಯೆ, ಭಿನ್ನಾಭಿಪ್ರಾಯ ಮತ್ತು ಅವ್ಯವಸ್ಥೆಗೆ ಮೊರೆ ಹೋಗಲಾಗಿದೆ. ಧಾರ್ಮಿಕ ಪಠ್ಯಗಳ ಮೂಲಭೂತವಾದಿ ವ್ಯಾಖ್ಯಾನಗಳ ವಿಮರ್ಶಕರಿಂದ ದೂರವಾದ, ವಿಜ್ಞಾನ, ಪಾಂಡಿತ್ಯ, ಧರ್ಮ ಮತ್ತು ರಾಜಕಾರಣಗಳೆಲ್ಲ ಒಳಗೊಂಡ ಧಾರ್ಮಿಕ ಹಿಂದಿನ ಗ್ರಹಿಕೆಯ ಅಲೆಯೊಂದಿದೆ. ಹಲವಾರು ವರ್ಷಗಳಿಂದ ಸಮಾಜ ವಿಜ್ಞಾನದ ಪಾರಂಪರಿಕ ವಿಷಯಗಳಲ್ಲಿ ಮಾತ್ರವಲ್ಲದೆ, ಗಣಿತ ಮತ್ತು ಪರಿಸರ ವಿಜ್ಞಾನ, ತರ್ಕಬದ್ಧ ವೈಜ್ಞಾನಿಕ ಶಾಸ್ತ್ರಗಳಂಥ ವಿಭಿನ್ನ ಜ್ಞಾನಕ್ಷೇತ್ರಗಳಲ್ಲೂ 'ಧರ್ಮ ಮತ್ತು...' ಹಾಗೂ 'ಧರ್ಮದಲ್ಲಿ...' ಮುಂತಾದ ಹೆಸರಿನಲ್ಲಿ ಸಾಲು ಸಾಲು ಸಮ್ಮೇಳನಗಳನ್ನು ಗಮನಿಸಿದ್ದೇನೆ, ಅವುಗಳಿಗೆ ಸಾಕ್ಷಿಯಾಗಿದ್ದೇನೆ. ಈ ಎಲ್ಲ ಜ್ಞಾನಕ್ಷೇತ್ರಗಳ ನಡುವಿನ ಪ್ರತಿಯೊಂದೂ ಸಂಬಂಧವನ್ನಾಗಲೀ ಈ ವಿಭಿನ್ನ ಜ್ಞಾನಕ್ಷೇತ್ರಗಳ ಮೇಲೆ ಧರ್ಮ ಬೀರಿದ ಪ್ರಭಾವವನ್ನಾಗಲೀ ಇವು ಪರಿಶೀಲನೆ ಮಾಡಿಲ್ಲ. ಬದಲಿಗೆ ವಿಭಿನ್ನ ಜ್ಞಾನಕ್ಷೇತ್ರಗಳ ಬೆಳವಣಿಗೆಯಲ್ಲಿ ಧರ್ಮ ವಹಿಸಬಲ್ಲ ಪಾತ್ರ ಕುರಿತು ಪ್ರಾಥಮಿಕ ಹಂತದ ಊಹೆಗಳನ್ನು ಮಾತ್ರ ಮಂಡಿಸಿವೆ. ಇದರೊಂದಿಗೆ ವಿದ್ವತ್ಪೂರ್ಣವಾದ ಮತ್ತು ತಾತ್ವಿಕವಾದ ಕಲ್ಪನೆಗಳೂ ಇವೆ. ಅವು ಅಭಿಜಾತ ಧಾರ್ಮಿಕ ಪಠ್ಯಗಳಿಂದ ಮತ್ತು ಅಂಥ ಪಠ್ಯಗಳಲ್ಲಿರುವ ವಿಚಾರಗಳನ್ನೂ ನೆಲೆಗೊಳಿಸುವ ಪ್ರಯತ್ನದಲ್ಲಿವೆ. ಅಲ್ಲದೆ ಮೂಲಭೂತವಾದಿಯ ಮೊದಲ ಪ್ರಸ್ತಾಪದಂತೆ ಬಹುಪಾಲು ತಪ್ಪು ವ್ಯಾಖ್ಯಾನದ ನಿರ್ವಹಣೆಯ ಜೊತೆಗೂ ಸೇರಿಕೊಂಡಿವೆ. ಇದು ಎಲ್ಲ ಬಗೆಯ ವಾಸ್ತವವನ್ನು ವ್ಯಾಖ್ಯಾನ ಮಾಡುವ ಹಾಗಿದೆ. ಇದರಿಂದ ಧರ್ಮದೊಂದಿಗೆ ಹೊಸ ಬಗೆಯ ಮತ್ತು ಸಾಮಾನ್ಯವಲ್ಲದ ವಿದ್ವತ್ತು ಪುನರುಚ್ಛಾರವಾಗುತ್ತದೆ. ಮಾತ್ರವಲ್ಲ, ಅದರ ಅಧಿಕೃತತೆ ಎಲ್ಲ ಜ್ಞಾನಶಿಸ್ತುಗಳ ತಳಹದಿಯ ಹಾಗೆ ಮೂಡುತ್ತಿದೆ. ವಿದ್ವತ್ವಲಯದ ಇಂಥ ಅಡೆತಡೆಗಳಿಲ್ಲದ ಹಿಂದಿನ ಗ್ರಹಿಕೆಗಳು ಕೂಡಲೇ ಪ್ರಗತಿಪರ ಮತ್ತು ಸೂಕ್ಷ್ಮ ವಿದ್ವತ್ತಿನ ಅನೇಕ ಫಲಿತಗಳಿಗೆ ತಿರುವು ಮುರವು ಸ್ಥಿತಿಯನ್ನು ಉಂಟುಮಾಡುತ್ತವೆ.
ಧಾರ್ಮಿಕ ಪಠ್ಯಗಳ ಸರದಿ ಬಂದ ಹಾಗೆ, ಜಾತಿ ವ್ಯವಸ್ಥೆ ಕುರಿತು ಮರುವ್ಯಾಖ್ಯಾನ ಮಾಡುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಇದು ಜಾತಿಯ ಕುರುಹನ್ನು ಹುಟ್ಟಿನಿಂದ ಗುರುತಿಸದೆ ವ್ಯಕ್ತಿಯ ಗುಣವನ್ನು ಆಧರಿಸಿದೆಯೆಂದು ಮಂಡಿಸುತ್ತಿದೆ. ಇದರೊಂದಿಗೆ ವರ್ಗೀಕರಣ ಆಧಾರಿತ ಹೊಸ ಜಾತಿ ಕುರಿತು ಸಶಕ್ತವಾದ ಸಾಲು ಸಾಲು ವ್ಯಾಖ್ಯಾನಗಳಿವೆ. ಜಾತಿ ವ್ಯವಸ್ಥೆಯಲ್ಲಿ ಯಾವುದು ಆತಂಕಕಾರಿಯೆಂದು ಗ್ರಹಿಸಲಾಗಿತ್ತೋ ಅದನ್ನು ಎಲ್ಲ ಸಮಸ್ಯೆಗಳಿಗೂ ಸಂಬಂಧ ಕಲ್ಪಿಸಿ ಪರಿಹಾರಗಳನ್ನು ನೀಡಿದೆ. 'ಉತ್ತಮ ಮತ್ತು ಸಮರ್ಥ ನಾಗರಿಕತೆ'ಯಂತೆ ಅದರ ಸುವ್ಯವಸ್ಥಿತ ಕಾರ್ಯನಿರ್ವಹಣೆಯ ಅಂಶಗಳನ್ನೂ ಸೇರಿಸಿಕೊಂಡಿದೆ.
ಇಂಥ ದೃಷ್ಟಿಕೋನಗಳ ಕ್ರೋಢೀಕರಣ ಮತ್ತು ಸಮರ್ಥನೆ ಎಲ್ಲ ಬಗೆಯ ವಿಮರ್ಶಾ ದನಿಗಳ ಸದ್ದನ್ನು ಅಡಗಿಸುತ್ತದೆ. ಹಾಗೆಯೇ ಪ್ರಭುತ್ವದ ಬಗ್ಗೆ, ಸಮಾಜದ ಪ್ರವೃತ್ತಿಗಳ ಬಗ್ಗೆ ಮತ್ತು ನೇತಾರರ ಬಗ್ಗೆ ವಿಮರ್ಶೆಯನ್ನು ಅರ್ಥಮಾಡಿಕೊಳ್ಳುವಲ್ಲಿಯೆ ಅಲ್ಪ ಸಹನೆ ತೋರಿದೆ. ರಾಷ್ಟ್ರ ಅಥವಾ ಸಮಾಜದ ಅನಿವಾರ್ಯ ಪ್ರವೃತ್ತಿಗಳನ್ನು ಹೊಗಳದ ವಿಮರ್ಶಕರು ವಿಘ್ನಸಂತೋಷಿಗಳೂ ನಿರಾಶವಾದಿಗಳೂ ಆಗಿರುವಂತೆ ಕಾಣಲಾಗಿದೆ. 
ಜ್ಞಾನಶಿಸ್ತುಗಳನ್ನು ಮಾರ್ಪಡಿಸುವ ಸ್ವಭಾವ ಕೂಡ ವಿದ್ವತ್ವಲಯದಲ್ಲಿ ಅಸ್ತವ್ಯಸ್ತತೆ ಮತ್ತು ಗೊಂದಲ ಉಂಟುಮಾಡಿದೆ. ಹೊಸ ತತ್ವಸಿದ್ಧಾಂತಗಳು ಸಮಾಜ ವಿಜ್ಞಾನಗಳೊಳಗಿನ ಹಳೆಯ ಸಿದ್ಧಾಂತಗಳನ್ನು ಗುಡಿಸಿಹಾಕಿದ್ದು ಗಮನಿಸಬೇಕಾದ ವಾಸ್ತವ ಸಂಗತಿಯಾಗಿದೆ. ಹೊಸ ಸಿದ್ಧಾಂತಗಳ ಪೂರ್ವದಲ್ಲಿರುವ ಗ್ರಹಿಕೆಗಳು ಹಳೆಯ ತತ್ವಗಳ ಅಳಿಸಲಾಗದ ಗಡಿರೇಖೆಗಳನ್ನೂ ಸ್ಥಾಪಿತ ಸಿದ್ಧಾಂತಗಳನ್ನೂ ಪ್ರಶ್ನಿಸುತ್ತಿವೆ. ಅಷ್ಟೇ ಅಲ್ಲದೆ, ಅನೇಕ ಜ್ಞಾನಶಿಸ್ತುಗಳನ್ನೂ ಅತಂತ್ರಗೊಳಿಸಿವೆ. ಅಂತಾರಾಷ್ಟ್ರೀಯವಾಗಿ ಆಧುನಿಕ ಮತ್ತು ಪ್ರಧಾನ ಸಿದ್ಧಾಂತಗಳನ್ನು ಅತಿಯಾಗಿ ಎರವಲು ಪಡೆಯಲಾಗುತ್ತಿದೆ. ಇದರಿಂದ ರಾಷ್ಟ್ರೀಯ ಮಟ್ಟದಲ್ಲೂ ಅಸ್ತಿತ್ವ ಪಡೆಯದ ಸುಸಂಬದ್ಧ ಸಿದ್ಧಾಂತಗಳು ಮತ್ತು ದೃಷ್ಟಿಕೋನಗಳು, ಪರ್ಯಾಯ ದೃಷ್ಟಿಕೋನ ಒದಗಿಸುವ ತಮ್ಮ ಸಾಮರ್ಥ್ಯವನ್ನು ದೊಡ್ಡ ಪ್ರಮಾಣದಲ್ಲಿ ಕಳೆದುಕೊಳ್ಳಲಿವೆ. ವಿದ್ವತ್ ವಲಯದ ಸಾಧನೆಯನ್ನು ಅಂತಾರಾಷ್ಟ್ರೀಯ ಮಾನದಂಡದಲ್ಲಿಟ್ಟು ಅಥವಾ ಜಾಗತಿಕ ಮಟ್ಟದ ಸಮ್ಮೇಳನಗಳು ಮತ್ತು ಸಮಾರಂಭಗಳ ಭಾಗವಾಗಿ ನೋಡುವ ಪ್ರವೃತ್ತಿ ಇದಕ್ಕೆ ಕಾರಣವಾಗಿದೆ. ಬರವಣಿಗೆ ಅಂತಾರಾಷ್ಟ್ರೀಯ ಶ್ರೋತೃಗಳ ಬರವಣಿಗೆಯೊಂದಿಗೆ ಸೇರಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಪ್ರವೃತ್ತಿಗಳನ್ನೂ ಉಳಿಸಿಕೊಂಡಿದೆ.
ಜಾಗತಿಕನಾಗಿರುವ ಒತ್ತಡದಲ್ಲಿ, ಇತ್ತೀಚೆಗಷ್ಟೇ ತಲೆ ಎತ್ತಿದ ಕಾರ್ಪೊರೇಟ್ ಬಳಗಗಳು ಕೆಲವು ವಿದ್ವಾಂಸರ ಸಹಾಯ-ಸಹಕಾರ ಪಡೆಯಲು ಮುಂದಾಗಿವೆ. ಉಪನ್ಯಾಸ ನೀಡಿ ಜನಪ್ರಿಯತೆ ಗಳಿಸಿರುವ ಕೆಲವು ಹೆಸರಾಂತ ವ್ಯಕ್ತಿಗಳು ಈಗ ಅಂಥ ಕಾರ್ಪೋರೇಟ್ ವ್ಯಕ್ತಿಗಳ ನಿಕಟ ಸ್ನೇಹ ವಲಯದಲ್ಲಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಷ್ಟ್ರೀಯ ಚಿಂತಕರು ಮತ್ತು ನೇತಾರರ ಹಾಗೆ ಕಾರ್ಪೋರೇಟ್ ವ್ಯಕ್ತಿಗಳು ತಮ್ಮ ಹೊಸ ಅಸ್ತಿತ್ವ ಸ್ಥಾಪಿಸಲು ಬಯಸಿದ್ದಾರೆ. ಅವರ ಉದ್ಯಮದಲ್ಲಿ ನೆರವಿನ ಹಸ್ತ ಚಾಚುವ, ತಮ್ಮ ಸ್ವಂತ ಮೊತ್ತದಿಂದ ನಿಧಿ ಒದಗಿಸುವ ಅಥವಾ ಅವರ ಕಾರ್ಪೊರೇಟ್ ಗುಂಪಿನ ದಾನ ಸಂಸ್ಥೆಗಳಲ್ಲಿ ವಿದ್ವತ್ ಜನರು ಭಾಗವಾಗುತ್ತಿದ್ದಾರೆ. ಅಲ್ಲದೆ ಇವುಗಳಲ್ಲಿ ಕೆಲವು ಕಾರ್ಪೋರೇಟ್ ಬಳಗಗಳಿಗೆ ಯೋಜನೆ ಮತ್ತು ಪರಿಣತಿಯ ಸಾರಾಂಶವನ್ನೂ ಒದಗಿಸುತ್ತಿದ್ದಾರೆ, ಅವರನ್ನು ಬೆಂಬಲಿಸುತ್ತಿದ್ದಾರೆ. ಇಂಥ ಹೊಸ ಸಹಭಾಗಿತ್ವಗಳು ಕಾರ್ಪೋರೇಟ್ ವ್ಯಕ್ತಿತ್ವಗಳ ಕೊಡುಗೆ ಮತ್ತು ಪಾತ್ರ ನಿರ್ವಹಣೆಯ ಮುಂದುವರೆದ ಭಾಗವಾಗಿವೆ. ಅದರ ಎಲ್ಲ ವಿಭಾಗಗಳಲ್ಲಿ ಖಾಸಗೀಕರಣದ ಬಹಿರಂಗ ಆಚರಣೆ ನಡೆದಿದೆ. ಕಾರ್ಪೋರೇಟ್ ಬಳಗಗಳ ಬೆಳವಣಿಗೆಗೆ ಪ್ರಾತಿನಿಧಿಕ ಬೆಂಬಲ ನೀಡಿ ಹೊಸ ಸಹಭಾಗಿತ್ವಗಳು ಕಾರ್ಯಕ್ರಮಗಳನ್ನೂ ನೀಡಿವೆ. ಮರೆತುಹೋದ, ಅಳಿಸಿಹೋದ ಎಲ್ಲವಕ್ಕೂ ಸ್ವತಂತ್ರ ಅಸ್ತಿತ್ವ ಇರುತ್ತದೆ. ಹಾಗೆಯೇ ಬುದ್ಧಿಜೀವಿಯಾದ ಪ್ರತಿಯೊಬ್ಬ ವಿದ್ವಾಂಸನೂ ತನ್ನದೇ ದೃಷ್ಟಿಕೋನವನ್ನು ಹೊಂದಿರಬೇಕಾಗುತ್ತದೆ.
ಜಾಗತಿಕ ಅರ್ಥಶಾಸ್ತ್ರದ ಬೆಳವಣಿಗೆಯಲ್ಲಿ ದೇಶದ ಒಟ್ಟಂದದ ರಾಜಕೀಯ ಮತ್ತು ಸಾಮಾಜಿಕ ಅಸ್ತವ್ಯಸ್ತತೆ ಎಂದರೆ ದೇಶದ ಬಹುಪಾಲು ಸಮಸ್ಯೆಗಳಿಗೆ ಸಂಬಂಧಿಸಿ ನಡೆದ ಸಾಮಾಜಿಕ ಮತ್ತು ಪರ್ಯಾಯ ಚಳವಳಿಗಳು ಅಡ್ಡಿಯುಂಟುಮಾಡಿರುವುದೆ ಆಗಿದೆ. ಇಂಥ ಅನೇಕ ಚಳವಳಿಗಳಲ್ಲಿ ವಿದ್ವತ್ ಜನರ ಪಾತ್ರ ಮಿತವಾಗಿದೆ. ಇದಕ್ಕೆ ಅಪವಾದವಾಗಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಆಹಾರದ ಹಕ್ಕಿಗಾಗಿ ನಡೆದ ಹೋರಾಟಕ್ಕೆ ಒತ್ತಾಸೆ ನೀಡಿದೆ. ಇದರೊಂದಿಗೆ ವಿದ್ವತ್ ಜನತೆಯೂ ಕೂಡಿಕೊಂಡಿದ್ದಾರೆ. ಆದರೂ ಜನತೆ ತಮ್ಮ ಹಕ್ಕಿಗಾಗಿ ನಡೆಸಿದ ಹೋರಾಟದ ಪ್ರಯತ್ನಗಳಲ್ಲಿ ಅಥವಾ ಸಾರ್ವಜನಿಕ ಕಾರಣಗಳಿಗಾಗಿ ವಿದ್ವತ್ ಜನರ ಪಾತ್ರವೆ ಇಲ್ಲವಾಗಿದೆ. ಆಳಿಕೆಯ ಪರಂಪರೆಗೆ ಪರ್ಯಾಯವಾದ ದೃಷ್ಟಿಕೋನಗಳು ಮತ್ತು ಚಳವಳಿಗಳಲ್ಲಿ ಆಸಕ್ತಿ ಇಲ್ಲದಿರುವುದರಿಂದ, ಸಾಮಾನ್ಯವಾಗಿ ಸಾರ್ವಜನಿಕ ಸಮಸ್ಯೆಗಳಲ್ಲಿ ಕಾಲಕಾಲಕ್ಕೆ ಭಾಗವಹಿಸದೆ, ತೊಡಗಿಸಿಕೊಳ್ಳದೆ ಇರುವುದರಿಂದ, ವಿದ್ವತ್ ಜನರ ಬುಡ ಭದ್ರವಾಗದೆ ಉಳಿದಿದೆ.
ಐದನೆಯ ಹಾಗೂ ತೀರಾ ಇತ್ತೀಚೆಗೆ ಆರನೆಯ ವೇತನ ಆಯೋಗ ತನ್ನ ಭರವಸೆಯಂತೆ ವಿದ್ವತ್ ಜನರ ಸ್ಥಾನ-ಮಾನ, ಸಂಬಳ ಮತ್ತು ಸೌಲಭ್ಯಗಳನ್ನು ಹೆಚ್ಚಿಸಿದೆ. ಶ್ರೀಮಂತ ಜೀವನ ಶೈಲಿಗಿಂತ ಹೆಚ್ಚು ಭದ್ರತೆಯನ್ನು ವಿದ್ವತ್ ಜನರಿಗೆ ಒದಗಿಸಿದೆ. ಆಲೋಚನಾ ದಾರಿದ್ರ್ಯ ಮತ್ತು ರಾಜಕೀಯ ಪಕ್ಷದ ಆಂತರಿಕ ಸಲಹೆಗಾರನಾಗಿರುವ ವಿಕಲತೆ ಇವುಗಳಿಂದಾಗಿ ರಾಷ್ಟ್ರಮಟ್ಟದಲ್ಲಿ ಕೆಲವೇ ಕೆಲವು ವಿದ್ವತ್ ವ್ಯಕ್ತಿಗಳು ಮಾತ್ರ ಕಾಡುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕಾರ್ಯೋನ್ಮುಖರಾಗಿದ್ದಾರೆ. ವಿವಾದಿತ ಸಿಂಗೂರು ಮತ್ತು ನಂದಿಗ್ರಾಮ ಸಮಸ್ಯೆಗಳ ಕುರಿತು, ಕಾಶ್ಮೀರ ಮತ್ತು ಶ್ರೀಲಂಕಾ ಕುರಿತು, ಧಾರ್ಮಿಕ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು, ಸರಕಾರ ಮತ್ತು ಖಾಸಗಿ ವಲಯಗಳ ಪಾತ್ರ ಕುರಿತು ಮತ್ತು ಇತರ ಎಲ್ಲ ಸಮಸ್ಯೆಗಳು, ಸಂಕೀರ್ಣವಾದ ರಾಷ್ಟ್ರವೊಂದರ ಮತ್ತು ಇನ್ನೂ ಹೆಚ್ಚು ಸಂಕೀರ್ಣವಾದ ಅದರ ಸಮಾಜವನ್ನು ಕುರಿತಿಲ್ಲ. ಆದರೂ ಇವು ರಾಜಕೀಯ ಸ್ಥಿತಿಗತಿಗಳನ್ನು ಕುರಿತು ಪ್ರಾಥಮಿಕ ಪ್ರತಿಕ್ರಿಯೆಯನ್ನು ಆಹ್ವಾನಿಸುತ್ತಿವೆ.
ಹೀಗೆ ಅಂತರ ಮತ್ತು ಅನರ್ಹತೆ ಬೆಳೆಯುತ್ತಿರುವ ವಿದ್ವತ್ ವಲಯದಲ್ಲಿ ಬುದ್ಧಿಜೀವಿಗಳಾಗಿರುವುದು ಎಂದರೆ ವಿಚಾರ ಮತ್ತು ಜ್ಞಾನಗಳ ಗುಣಮಟ್ಟದಲ್ಲಿ ಸವೆತ ಉಂಟುಮಾಡುವುದಾಗಿದೆ. ಬುದ್ಧಿಜೀವಿಗಳಾಗಿ ಬೆಳೆದ ವಿದ್ವತ್ ಜನತೆ ಒಂದು ಹೊಸ ರಾಷ್ಟ್ರ ಕಟ್ಟುವ ಸವಾಲುಗಳನ್ನು ಎದುರಿಸುವರಾಗಿದ್ದಾರೆ. ರಾಷ್ಟ್ರದ ಚಹರೆ ಮತ್ತು ವಿಚಾರಗಳು ಇನ್ನೂ ಹೆಚ್ಚು ಮರುವ್ಯಾಖ್ಯಾನಕ್ಕೆ ಒಳಪಡಬೇಕಾದ ಮತ್ತು ಜಾಗತಿಕ ಅರ್ಥಿಕತೆಯೊಂದಿಗೆ ಸಮಗ್ರವಾಗಿರುವ ಇಂದಿನ ಕಾಲದ ತತ್ ಕ್ಷಣದ ಸ್ವಾತ್ರಂತ್ಯೋತ್ತರ ಅವಧಿಗೆ ಹೋಲಿಸಿದಲ್ಲಿ, ಅವರು ಬೌದ್ಧಿಕ ಲೋಕದ ಪ್ರವೇಶ ದ್ವಾರದಲ್ಲೇ ಖಾಲಿತನ ಆವರಿಸಿರುವುದಕ್ಕೆ ಸಾಕ್ಷಿಯಾಗಿದ್ದಾರೆ.
 ಪದಕೋಶ
ಚಿಛಿಚಿಜಜಟಛಿ- ವಿದ್ವತ್ವಲಯ, ವಿದ್ವತ್ಜನತೆ 
ಛಿಠರಟಿಚಿಣತಜ ಛಿಜಟಿಛಿಜ- ತರ್ಕಬದ್ಧ ವೈಜ್ಞಾನಿಕ ಶಾಸ್ತ್ರಗಳು
ಛಿಠಟಟಜಛಿಣತಜ ಚಿಟಟಿಜಚಿ -ಸಾಮೂಹಿಕ ಮರೆವು
ಛಿಠಟಠಿಠಣಟಿಜ- ಕೂಡಿಕೆ, ಕೂಡು, ಸೇರು
ಜಠಿಠಛಿಚಿಟ ಣಡಿಚಿಟಿಜಿಠಡಿಟಚಿಣಠಟಿ- ಯುಗ ಪರಿವರ್ತನೆ
ಜಿಚಿತಠಣಡಿ- ಓಲೈಸುವಿಕೆ
ಚಿಛಣ ಠಜಿ ಟಟಿಜ- ಮನೋಹವ್ಯಾಸ
ಟಠಜಿಣಟ- ಆರಂಭಿಕ ಅತ್ಯುತ್ಸಾಹ
ಟಠಡಿಚಿಟ ಣಣಣಣಜಡಿಟಿರ- ನೈತಿಕ ತತ್ತರ
ಠಡಿಜಟಿಣಚಿಣಠಟಿ- ಹಿಂದಿನ ಗ್ರಹಿಕೆಗಳು, ಪೂರ್ವದಲ್ಲಿರುವ ಗ್ರಹಿಕೆಗಳು
ಠಿಟಚಿಟಿಣಡಿಠಠಿಛಿ ಜಿಠಣಟಿಜಚಿಣಠಟಿ- ದಾನ ಸಂಸ್ಥೆಗಳು
ಡಿಜಠಿಡಿಜಜಟಿಛಟಜ- ನಿಂದನಾರ್ಹ
ಜರಡಿಜರಚಿಣಠಟಿ - ಪುಷ್ಪಾವರಣ
ಣಥಿಟಜ- ಅಡ್ಡಿಮಾಡು
ಣಛಜಡಿತಜಟಿಛಿಜ- ದಾಸಾನುದಾಸ

ಇಂಗ್ಲಿಶ್ ಮೂಲ -ಎ.ಅರ್.ವಾಸವಿ
ಕನ್ನಡ ರೂಪ - ಶ್ರೀಧರ ಪಿಸ್ಸೆ



ಗುರುವಾರ, ಮಾರ್ಚ್ 29, 2012

ಎ ಆರ್ ವಾಸವಿ ಅವರ ಸಂಶೋಧನ ಬರಹ - ಆತ್ಮಹತ್ಯೆಗಳು ಮತ್ತು ಭಾರತದಲ್ಲಿ ರೈತಾಪಿ ಖಿನ್ನತೆಯ ನಿರ್ಮಾಣ

ಹಣಕಾಸು ಸಚಿವ ಪ್ರಣಬ್ ಮುಖರ್ಜಿ 2012-13ರ ಆಯವ್ಯಯ ಮಂಡಿಸುವ ಸಂದರ್ಭದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಹಿನ್ನಡೆ ಉಂಟಾಗಿರಲು ಕೃಷಿಕ್ಷೇತ್ರದ ಉತ್ಪತ್ತಿಯಲ್ಲಿ ಕುಂಠಿತಯುಂಟಾದುದೆ ಕಾರಣವೆಂಬ ಅರ್ಥದಲ್ಲಿ ಆಡಿರುವ ಮಾತುಗಳು ವರದಿಯಾಗಿದೆ.  ಇದು ನಿಜವೇ ಆಗಿದ್ದಲ್ಲಿ ವಾಸವಿಯವರ ಈ ಲೇಖನ ನೀಡುವ ಕೃಷಿಕ್ಷೇತ್ರದ ಸ್ಥಿತಿಗತಿಗಳ ವಿವರಗಳು ನಮ್ಮನ್ನು ಹಗಲು ನಿದ್ದೆಯಿಂದ ಎಚ್ಚರಿಸಬೇಕಿದೆ. ಇದು  ಕೇವಲ ನಮ್ಮ ಹದಗೆಟ್ಟ ಸಾಮಾಜಿಕ ವ್ಯವಸ್ಥೆಯನ್ನಷ್ಟೆ ದಾಖಲಿಸದೆ ಇಡೀ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬು ಮುರಿಯುವಲ್ಲಿ ಹಸಿರುಕ್ರಾಂತಿಯಂಥ ಕೃಷಿಯ ಆಧುನೀಕರಣ ಪ್ರಕ್ರಿಯೆ ಹೇಗೆ ಆಘಾತಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬ ಇಂದಿನ ಕೃಷಿ ಸಮಸ್ಯೆಯ ಮೂಲಬೇರನ್ನು ಎತ್ತಿ ತೋರಿಸಿದೆ ಮತ್ತು ನಾಳೆಯ ಭೀಕರ ಚಿತ್ರದ ಮೂಲಕ ನಿದ್ದೆಯಲ್ಲೂ ಬೆಚ್ಚಿಬೀಳುವಂತೆ ಮಾಡಿದೆ.
ಈ ಲೇಖನವನ್ನು ಮೊದಲಿಗೆ ಗೆಳೆಯರಾದ ಹೆಚ್ ಡಿ ಪ್ರಶಾಂತ್ ಅವರು ಅನುವಾದ ಮಾಡಿ ನಂತರ ಅದರ ಪರಿಶೀಲನೆ ಮತ್ತು ಪರಿಷ್ಕರಣೆ ಮಾಡಲು ನನಗೆ ಕೇಳಿಕೊಂಡರು. ಅನುವಾದಿತ ಪಠ್ಯವನ್ನು ತಿದ್ದುಪಡಿ ಮಾಡುವುದಕ್ಕಿಂತ ನನಗೆ ನೇರ ಅನುವಾದವೇ ಹೆಚ್ಚು ಸಮರ್ಪಕವಾಗಿ ಕಂಡಿತು. ಆದರೂ ನನ್ನ ಈ ಕೆಲಸವನ್ನು ನನ್ನ ಗೆಳೆಯರ ಅನುವಾದ ಆಧಾರಿತವೆಂದು ತಿಳಿದಿದ್ದೇನೆ ಮತ್ತು  ಪ್ರಶಾಂತ್ ಅವರು ಬಳಸಿದ ಪದಗಳನ್ನೇ ಬಹಳ ಕಡೆ ಬಳಸಿರುವ ಹಿನ್ನೆಲೆಯಲ್ಲಿ ನಾನು ಈ ಲೇಖನದ ಸಹ ಅನುವಾದಕ ಮಾತ್ರ ಎಂದು ತಿಳಿದಿದ್ದೇನೆ.   


ಆತ್ಮಹತ್ಯೆಗಳು ಮತ್ತು ಭಾರತದಲ್ಲಿ ರೈತಾಪಿ ಖಿನ್ನತೆಯ ನಿರ್ಮಾಣ
ಮೂಲ -ಡಾ. ಎ ಆರ್ ವಾಸವಿ
ಅನುವಾದ -ಡಾ. ಹೆಚ್ ಡಿ ಪ್ರಶಾಂತ್ ಮತ್ತು ಡಾ. ಶ್ರೀಧರ ಪಿಸ್ಸೆ

ರೈತರ ಆತ್ಮಹತ್ಯೆಗಳು ಸಾಂಕ್ರಾಮಿಕ ಮಟ್ಟ ತಲುಪಿದ ಭಾರತದ ಐದು ರಾಜ್ಯಗಳ ಮಾಹಿತಿಯನ್ನು ಪ್ರಸ್ತುತ ಲೇಖನ ಪರಿಶೀಲನೆ ಮಾಡಿ ಈ ವಿಷಯದಲ್ಲಿ ಸಾಮಾಜಿಕ ವಿವರಣೆಯನ್ನು ಒದಗಿಸುತ್ತದೆ. ಸಮಾಜದ ಸಂರಚನೆ ಮತ್ತು ಸಾಂಕೇತಿಕ ಅರ್ಥಗಳಿಗೆ ಸೂಕ್ಷ್ಮ ಮತ್ತು ಸಮಗ್ರ ಆರ್ಥಿಕ ಅಂಶಗಳು ಸಂಪರ್ಕ ಒದಗಿಸಿ, ಆಧುನಿಕ ಕೃಷಿಗೊಂದು ಮಾದರಿಯಾದ ಹಸಿರು ಕ್ರಾಂತಿ ಹೇಗೆ ಕೃಷಿಕರ ಜೀವನದಲ್ಲಿ ಅಪಾಯಕಾರಿ ಬಲೆ ಹೆಣೆಯಿತು, ಮಾತ್ರವಲ್ಲ ಉತ್ತೇಜನಕಾರಿಯಾಗಿಯೂ ಕಾರ್ಯನಿರ್ವಹಿಸಿತು ಎಂಬ ಬಗೆಯನ್ನು ಈ ಲೇಖನ ಎತ್ತಿತೋರಿಸುತ್ತದೆ. ಖಿನ್ನತೆಯಂಥ ಪರಿಸ್ಥಿತಿಗೆ 'ಕೃಷಿಯ ವೈಯಕ್ತೀಕರಣ'ಕ್ಕೆ ಕಾರಣವಾದ ವಾಣಿಜ್ಯ ಕೃಷಿಯ ಸಾಮಾಜಿಕ ಸಂರಚನೆ ಮತ್ತು ಹೊಸ ಸಾಮಾಜಿಕ ಬೇಡಿಕೆಗಳ ಹರಡುವಿಕೆ ಎರಡೂ ಒಳಗೊಂಡಿವೆ. 'ಪೂರ್ವಭಾವಿ ಉಪೇಕ್ಷಿತ ಸ್ಥಿತಿ'ಯಲ್ಲಿರುವ ರೈತರು ಮತ್ತು ರೈತಾಪಿ ವಿಷಯಗಳಲ್ಲಿ, ಮತ್ತು ತಮ್ಮ ಜೀವನವನ್ನು ಕೈಗೊಂಡ ಹೆಚ್ಚಿನ ಸಂಖ್ಯೆಯ ರೈತರಲ್ಲಿ ಬಿಕ್ಕಟ್ಟು ಹುಟ್ಟುಹಾಕುವಲ್ಲಿ ಈ ಪ್ರವೃತ್ತಿಗಳು ವ್ಯಾಪಕವಾಗಿ ನವಉದಾರವಾದಿ ರಾಜಕೀಯ ಆರ್ಥಿಕತೆಯೊಂದಿಗೆ ಸೇರಿಕೊಂಡಿವೆ.
ಮುಖ್ಯಪದಗಳು: ಸಾಮಾಜಿಕ ವಿವರಣೆ , ರೈತಾಪಿ ಖಿನ್ನತೆ, ಪೂರ್ವಭಾವಿ ಉಪೇಕ್ಷಿತ ಸ್ಥಿತಿ, ಕೃಷಿಯ ವೈಯಕ್ತೀಕರಣ.
ಪೀಠಿಕೆ
ರೈತರ ಆತ್ಮಹತ್ಯೆಯ ಸುದ್ದಿ 1998 ಮತ್ತು 2000ರ ನಡುವೆ ಕೆಲವು ದಿನಪತ್ರಿಕೆ ಮತ್ತು ದೂರದರ್ಶನ ವಾಹಿನಿಗಳ ಮೂಲಕ ನಿಧಾನವಾಗಿ ಹರಡಿತು. 2004ರ ವೇಳೆಗೆ ಆತ್ಮಹತ್ಯೆಗಳು ಭಾರತದ ಕೃಷಿ ಬಿಕ್ಕಟ್ಟಿನ ಸಂಕೇತವಾಗಿ ವ್ಯಾಪಕ ಚರ್ಚೆ ಮತ್ತು ಬರಹಗಳಿಗೆ ಕಾರಣವಾಯಿತು. 2005-06ರ ನಡುವೆ ತೀವ್ರತೆ ಪಡೆದ ಮಹಾರಾಷ್ಟ್ರದ ಆತ್ಮಹತ್ಯೆಗಳು ಆ ಪ್ರದೇಶಕ್ಕೆ ಪ್ರಧಾನಮಂತ್ರಿ ಭೇಟಿ ನೀಡಿ 'ಹಣಕಾಸು ನೆರವು' ಘೋಷಿಸಬೇಕೆಂದೂ ಒತ್ತಾಯಮಾಡಿತು, ಮತ್ತು ಆತ್ಮಹತ್ಯೆಯ ಸ್ವರೂಪ ಇನ್ನೊಂದು ಆಯಾಮವನ್ನು ಪಡೆದುಕೊಂಡಿತು. ಮೈಸೂರಿನಲ್ಲಿ ನಾಲ್ವರು ರೈತರು ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲೆ ಆತ್ಮಹತ್ಯೆ ಪ್ರಯತ್ನ ಮಾಡಿದರು, ಅಲ್ಲದೆ ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಹಲವರು ಸರಕಾರವನ್ನು ಸಂಬೋಧಿಸಿ ತಮ್ಮ ಸಾವಿಗೆ ಟಿಪ್ಪಣಿ ಬರೆದಿಟ್ಟರು1. ವೈಯಕ್ತಿಕ ಮಟ್ಟದಲ್ಲಿ ಮೌನವಾಗಿದ್ದು ಕೈಗೊಳ್ಳುವ ಹತಾಶೆಯ ಕ್ರಮವಾದ ಆತ್ಮಹತ್ಯೆ, ಜುಗುಪ್ಸೆಗೊಂಡ ರೈತರು ತಮ್ಮ ಹೀನಸ್ಥಿತಿ ಎದ್ದುಕಾಣುವಂತೆ ಮಾಡಿ ಪ್ರತಿಭಟಿಸುವ ರಾಜಕೀಯ ಕ್ರಮವಾಗಬೇಕಿದೆ.
ರೈತರ ನಡುವೆ ಆತ್ಮಹತ್ಯೆಗಳು2 ಮೇಲಿಂದ ಮೇಲೆ ಹರಡುತ್ತಿರುವುದನ್ನು ಪರಿಗಣಿಸಿದರೆ, ಇತ್ತೀಚೆಗಿನ ರೈತಾಪಿ ಖಿನ್ನತೆಯನ್ನು ಸಾಂಕ್ರಾಮಿಕ ಆತ್ಮಹತ್ಯೆಯೆಂದು ಗುರುತಿಸಲು ಸುಲಭವಾಗುತ್ತದೆ. ಈ ಆತ್ಮಹತ್ಯೆಗಳನ್ನು ಸಾಂಕ್ರಾಮಿಕ ಎಂದು ಗುರುತಿಸುವಾಗಲೂ ಘಟನೆಗಳು ಸ್ವಾಭಾವಿಕವಾಗಿ ಇರಬೇಕಾಗುತ್ತವೆ, ಮತ್ತು ಇವನ್ನು ಮಾಧ್ಯಮಗಳು, ನೀತಿ ನಿರೂಪಕರು ಹಾಗೂ ಅನೇಕ ಸರಕಾರಗಳು ಕೇವಲ ಆತ್ಮಹತ್ಯೆಗಳೆಂದು ತಳ್ಳಿಹಾಕಲಾಗುತ್ತಿವೆ. ಸರಕಾರದ ಬಹಳಷ್ಟು ನಾಮ ನಿರ್ದೇಶಿತ ಸಮಿತಿಗಳು ಮಾಡಿದಂತೆ ಸರಳವಾಗಿ ಕಂಡು ತಳ್ಳಿಹಾಕುವ ನಿರ್ಣಯದಾಚೆಗೆ ನೋಡಬೇಕಿದೆ. ಬಹುಪಾಲು ಗ್ರಾಮೀಣ ಜನತೆಯ3 ಮೇಲೆ ಪರಿಣಾಮ ಬೀರಿದ ಮತ್ತು ವ್ಯಾಪಕ ಪ್ರತಿಕ್ರಿಯೆಗೆ ಕಾರಣವಾದಂಥ ಸಮಸ್ಯೆಗಳು ಹೆಚ್ಚಿದಂತೆಲ್ಲ ರೈತರ ಆತ್ಮಹತ್ಯೆಯ ಘಟನೆಯನ್ನು ನಾವು 'ಖಿನ್ನತೆ'ಯ ಸಂಕೇತದಂತೆ ನೋಡಬೇಕೆಂಬುದು ಕಡ್ಡಾಯವಾಗಿದೆ. ಈ ಆತ್ಮಹತ್ಯೆಗಳನ್ನು ವಿಶಾಲ ವ್ಯಾಪ್ತಿಯ ಪ್ರದೇಶಕ್ಕೆ ಸಾಂದರ್ಭೀಕರಿಸಿ, ನಾವು ಆತ್ಮಹತ್ಯೆಗಳ ಪ್ರವಾಹವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವುದೂ ಅಗತ್ಯವಿದೆ, ಅಲ್ಲದೆ 'ನಮಗೆ ಸಂಬಂಧಪಟ್ಟ ಸತ್ತವರಿಗಾಗಿ ರಾಜಕೀಯ ದೃಷ್ಟಿಕೋನವೊಂದನ್ನು' (ಹಡ್ಸನ್ 2002-6) ಒದಗಿಸಬೇಕಾಗಿದೆ.
ಆತ್ಮಹತ್ಯೆಯ ಅನೇಕ ಅಧ್ಯಯನಗಳು ಮತ್ತು ಸರಕಾರೇತರ ವರದಿಗಳು ಅಂಥ ಖಿನ್ನತೆ ದೃಢವಾಗಲು ಕಾರಣವಾದ ಹೆಚ್ಚಿನ ಮತ್ತು ವ್ಯಾಪಕವಾದ ಅಂಶಗಳನ್ನು ಗುರುತಿಸಿವೆ. ಕೆಲವು ಮುಖ್ಯ ರಚನಾತ್ಮಕ ಅಂಶಗಳನ್ನು ಗುರುತಿಸಲಾಗಿದ್ದು, ಅವು: ಭಾರತದ ಕೃಷಿಯನ್ನು ಜಾಗತಿಕ ಮಾರುಕಟ್ಟೆಗೆ ಒಗ್ಗೂಡಿಸಿದ್ದೂ ಒಳಗೊಂಡು ಹೊಸ ಉದಾರ ಆರ್ಥಿಕ ನೀತಿಗಳ ಪರಿಣಾಮ (ಶಿವ ಮತ್ತು ಜಾಫ್ರಿ 1998, ಪಟ್ನಾಯಕ್ 2004,2006), ಉತ್ಪಾದನೆ ವೆಚ್ಚದಲ್ಲಿ ಹೆಚ್ಚಳ (ವ್ಯಾಸ್ 2004, ಮೊಹಂತಿ ಮತ್ತು ಶ್ರಾಫ್ 2004), ಸಾಲ ಲಭ್ಯತೆಯ ಕೊರತೆ ಒಳಗೊಂಡು ಸಾಂಸ್ಥಿಕ ಬೆಂಬಲದ ಕೊರತೆ, ಗ್ರಾಮೀಣ ಅಭಿವೃದ್ಧಿಯಲ್ಲಿ ನಿಧಾನ ಗತಿ (ದೇವ್ 2004, ರಾವ್ ಮತ್ತು ಗೋಪಾಲಪ್ಪ 2004, ಘೋಷ್ 2004), ಕೂಲಿ ದರಗಳಲ್ಲಿ ಇಳಿಕೆ, ಸಾಲದ ಹೊರೆ ಮತ್ತು ನಿರುದ್ಯೋಗ ಹೆಚ್ಚಳ (ಪಟ್ನಾಯಕ್ 2004, ದೇವ್ 2004, ಶರ್ಮಾ 2004), ಇಳುವರಿಯಲ್ಲಿ ನಿರಂತರ ನಷ್ಟ ಮತ್ತು ಹಣಕಾಸು, ಸಮಾಜ ಮತ್ತು ಪರಿಸರಗಳ ತ್ರಿವಳಿ ಬಿಕ್ಕಟ್ಟಿನ ಪರಿಣಾಮ (ವಾಸವಿ 1999)ವಾಗಿವೆ. ಈ ಎಲ್ಲ ವರದಿ ಮತ್ತು ಅಧ್ಯಯನಗಳ ವಿಷಯವನ್ನು ಹೆಚ್ಚಿನ ಮಟ್ಟದಲ್ಲಿರಿಸಿ, 1998ರಿಂದ 2006ರ ನಡುವಿನ ಅವಧಿಯಲ್ಲಿ ರೈತರ ಆತ್ಮಹತ್ಯೆ ಹೆಚ್ಚು ಸಂಭವಿಸಿದ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಪಂಜಾಬ್ ರಾಜ್ಯಗಳ ಖಿನ್ನತೆಯ ಸಾಮಾಜಿಕ ವಿವರಣೆಯನ್ನು ಒದಗಿಸಿದ್ದೇನೆ ಮತ್ತು ಈ ಪ್ರಬಂಧದಲ್ಲಿ ಈ ವರದಿಗಳು ಮತ್ತು ಅಧ್ಯಯನಗಳನ್ನು4 ರೇಖಿಸಿದ್ದೇನೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗಳ ಜೀವನದಿಂದ ವಿವರ ಪಡೆಯುವಲ್ಲಿ, ದೇಶದ ನವಉದಾರವಾದದ ಪ್ರಸ್ತುತ ಸಂದರ್ಭದಲ್ಲಿ ರೈತರ5 ಸಮಕಾಲೀನ ಸಂಕಟಗಳನ್ನು ಸಾಂದರ್ಭೀಕರಿಸಿ, ಈ ಖಿನ್ನತೆಯ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾದ ಪರಿಸ್ಥಿತಿ ಮತ್ತು ಅಂಶಗಳನ್ನು ಪುನಾರಚಿಸಿದ್ದೇನೆ. ರೈತರಲ್ಲಿ ನಡೆದಿರುವ ಹೆಚ್ಚಿನ ಆತ್ಮಹತ್ಯೆಗಳು ಹೊಸ ಸಾಂಸ್ಕೃತಿಕ ನ್ಯಾಯಭದ್ಧತೆಯನ್ನು ಪಡೆದುಕೊಂಡಿರುವ ಹಾಗೆಯೇ ಭಾರತದ ಇತಿಹಾಸದಲ್ಲಿ6 ಇದುವರೆಗೆ ದಾಖಲಾಗದಿದ್ದರೂ ಅವರು ಕೈಗೊಂಡ ಮಹತ್ವಪೂರ್ಣ ಕ್ರಮಗಳಿಂದಾಗಿ ರೈತರ ಹೀನಸ್ಥಿತಿಯನ್ನಷ್ಟೆ ಸೂಚಿಸದೆ ಕೃಷಿಯ ಸ್ಥಿತಿಗತಿ ಮತ್ತು ಅವರ ಬದಲಾದ ಕರ್ತೃತ್ವ ಪ್ರಜ್ಞೆ ಮತ್ತು ಜೀವನವನ್ನೂ ಸಂಕೇತಿಸುತ್ತವೆ.
ಆತ್ಮಾಹುತಿ ಮಾಡಿಕೊಂಡವರ ಚಿತ್ರ
 ಆರ್ಥಿಕ ಕಾರಣಗಳು ಖಿನ್ನತೆಯ ದೃಢತೆ ಗುರುತಿಸುವಲ್ಲಿ ಪ್ರಮುಖವಾಗಿವೆ. ಐದು ರಾಜ್ಯಗಳ ಎಲ್ಲ ವರದಿಗಳು ಸೂಚಿಸುವಂತೆ ಆತ್ಮಾಹುತಿ ಮಾಡಿಕೊಂಡವರೆಲ್ಲ ಬಹುಪಾಲು ವಾಣಿಜ್ಯ ಕೃಷಿ7 ಕೈಗೊಂಡಿದ್ದರು ಮತ್ತು ವಾಣಿಜ್ಯ ಕೃಷಿ ಜೊತೆಗಿರುವ ಸಾಲು ಸಾಲು ಹೊಸ ಅಪಾಯ (ಉತ್ಪಾದನೆ, ಸಾಲ, ಮಾರುಕಟ್ಟೆ, ತಿಳುವಳಿಕೆ ಮತ್ತು ಹವಾಮಾನ)ಗಳೊಂದಿಗೆ ಹೆಣಗುತ್ತಿದ್ದರು. ದೇಶದ ರೈತರಲ್ಲಿ8 ಪ್ರಮುಖ ಪಾಲುದಾರರಾಗಿ ರೂಪಿತವಾದ (ಒಂದು ಹೆಕ್ಟೇರ್ ಗಿಂತ ಕಡಿಮೆ ಭೂಸಾಗುವಳಿ ಮಾಡುವ) ಅತಿ ಸಣ್ಣ ರೈತರು ಹಸಿರು ಕ್ರಾಂತಿಯ ಕೃಷಿ ವಿಧಾನವನ್ನು ಅನುಷ್ಟಾನಗೊಳಿಸಿದರೂ ಇಂಥ ರೈತರನ್ನು ಅದು ಬಹುತರವಾದ ಅಪಾಯಗಳಿಗೆ ನೂಕಿತು.  ವಾಣಿಜ್ಯ ಬೆಳೆಗಳನ್ನು ಸಾಗುವಳಿ ಮಾಡುವಲ್ಲಿ ಬಲಿಪಶುಗಳಾದ ಬಹುತೇಕರಿಗೆ ಹಸಿರುಕ್ರಾಂತಿಯ ದಾಳದಲ್ಲಿ ಪ್ರಬಲ ಸಾಧನವಾಬೇಕಿದ್ದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗಳೇ ಕೊರತೆಯಾಗಿತ್ತು. ಎಲ್ಲ ವರದಿಗಳು ಸೂಚಿಸುವಂತೆ, ವಿವಿಧ ರಾಜ್ಯಗಳಲ್ಲಿ ಆತ್ಮಾಹುತಿ ಮಾಡಿಕೊಂಡ ಬಹುತೇಕರು (ಒಂದು ಹೆಕ್ಟರಿಗಿಂತ ಕಡಿಮೆಯಿರುವ) ಅತಿ ಸಣ್ಣ ರೈತರು9 ಮತ್ತು (ಒಂದರಿಂದ ಎರಡು ಹೆಕ್ಟರ್ ಉಳ್ಳ) ಸಣ್ಣ ರೈತರು, ನಂತರದಲ್ಲಿ (2ರಿಂದ4 ಹೆಕ್ಟರುಗಳುಳ್ಳ) ಅರೆಮಧ್ಯಮ ರೈತರು. ಅಂಥ ಬಲಹೀನ ಆರ್ಥಿಕ ಗುಂಪಿನ  ವಾಸ್ತವವೆಂದರೆ, ಬಲಿಪಶುಗಳಾದವರಲ್ಲಿ ಹೆಚ್ಚಿನವರು ಹಿಂದುಳಿದ ವರ್ಗ10 ಇಲ್ಲವೆ ಕೆಳಜಾತಿಗೆ ಸೇರಿದವರೆ ಆಗಿದ್ದಾರೆ. ಆಂಧ್ರಪ್ರದೇಶದಲ್ಲಿ ಆತ್ಮಾಹುತಿ ಮಾಡಿಕೊಂಡವರಲ್ಲಿ ಮೂರನೆಯ ಎರಡುಭಾಗ ವಾರಂಗಲ್ ನ ಹಿಂದುಳಿದ ವರ್ಗಕ್ಕೆ ಸೇರಿದ ಯಾದವ, ಚಕಲಿ, ತೆಲಗ, ವಾಡ್ಲ, ಮಂಗಾಲಿ, ಪದ್ಮಶಾಲಿ ಮತ್ತು ಲಂಬಡ (ನಾಗರಿಕ ವರದಿ 1998) ಜಾತಿಯವರು. ಅನಂತಪುರ ಜಿಲ್ಲೆಯಲ್ಲಿ ಆತ್ಮಾಹುತಿ ಮಾಡಿಕೊಂಡ ಬಹುತೇಕರಲ್ಲಿ ಕೃಷಿಯೇತರ ಜಾತಿಗಳಾದ ಸಾಲೆ, ಬೆಸ್ತಾ ಮತ್ತು ಉಪ್ಪಾರರಾಗಿದ್ದರೂ ಸಾಂಪ್ರದಾಯಿಕವಾಗಿ ಸಾಗುವಳಿ ಮಾಡುವ ಜಾತಿಗಳಾದ ರೆಡ್ಡಿ ಮತ್ತು ಬಳಿಗ ಸಮುದಾಯದವರೂ ಕೆಲವರಿದ್ದಾರೆ. ಅಮರಾವತಿ ಮತ್ತು ಯಾವತ್ಮಲ್ ಜಿಲ್ಲೆಗಳಲ್ಲಿ ಮಧ್ಯಮ ರೈತರು ಮತ್ತು ಕೃಷಿಯೇತರ ಜಾತಿಗಳಾದ ತೆಲಿಸ್, ಬೆಲ್ದಾರ ಮತ್ತು ಬಂಜಾರ ಅಥವಾ ಪರಿಶಿಷ್ಟ ಸಮುದಾಯಗಳಾದ ಮಹಾರ್ ನವ-ಬುದ್ಧ, ಮಾತಂಗ, ಚಮ್ಮಾರ ಮತ್ತು ಧನಗಾರ್ (ಮೊಹಂತಿ 2005) ಜಾತಿಗಳವರೂ ಹೆಚ್ಚಾಗಿ ಆತ್ಮಾಹುತಿ ಮಾಡಿಕೊಂಡಿದ್ದಾರೆ. ವಿದರ್ಭ ಮತ್ತು ಮರಾಠವಾಡ ಪ್ರಾಂತ್ಯಗಳಲ್ಲಿ ವಿವಿಧ ಜಾತಿ ಗುಂಪುಗಳಲ್ಲಿ ಆತ್ಮಹತ್ಯೆ ಹರಡಿರುವುದನ್ನು ಟಿಐಎಸ್ಎಸ್ ವರದಿ (2005) ಗುರುತಿಸಿದೆ. ಅದರಲ್ಲಿ ಪ್ರಧಾನವಾಗಿ ಇತರ ಹಿಂದುಳಿದ ವರ್ಗಗಳು11 (ಒ.ಬಿ.ಸಿ ಶೇಕಡ 27) ಮತ್ತು ಇತರ ಪರಿಶಿಷ್ಟೇತರ ಜಾತಿ ಗುಂಪುಗಳವರು (ಶೇಕಡ 36) ಸೇರಿದ್ದಾರೆ.
ಸಾಂಪ್ರದಾಯಿಕವಾಗಿ ಸಾಗುವಳಿ ಮಾಡದ ಜಾತಿ ಸಮುದಾಯಗಳ ಸದಸ್ಯರು ಆತ್ಮಹತ್ಯೆ ಪ್ರಕರಣಗಳಲ್ಲಿ ಪ್ರತಿನಿಧಿಸಿರುವ ಸಂಖ್ಯೆಯ ಮಹತ್ವ ಗಮನಿಸತಕ್ಕದ್ದಾಗಿದೆ. ಸಾಗುವಳಿ ಮಾಡದ ಜಾತಿ ಸಮುದಾಯಗಳ ಸದಸ್ಯರು ಕೃಷಿಯಲ್ಲಿ ನೆಲೆಯೂರಲು ಮಾಡಿದ ಪ್ರಯತ್ನವನ್ನು ಆತ್ಮಹತ್ಯೆಯ  ಪ್ರಕರಣ ಸೂಚಿಸುತ್ತದೆ. ಕೈಗಾರಿಕಾ ಉತ್ಪನ್ನಗಳು ಗ್ರಾಮೀಣ ಉತ್ಪನ್ನಗಳನ್ನು ಹೊರದೂಡಿರುವುದೂ ಅಲ್ಲದೆ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯೊಳಗೆ ಕೃಷಿ ಒಂದಾಗಿರುವುದೂ ಸೇರಿ ಉಂಟಾದ ಸಾಂಪ್ರದಾಯಿಕ ಉದ್ಯೋಗ ನಷ್ಟತೆ ಅಂಥ ಜೀವನಾವಶ್ಯಕ ತಂತ್ರೋಪಾಯಗಳನ್ನು ಅನಿವಾರ್ಯವಾಗಿಸಿದೆ. ಇಂಥ ಪ್ರವೃತ್ತಿ ಮುಖ್ಯವಾಗಿ ಕರಕುಶಲ ಮತ್ತು ಗುಡಿ ಕೈಗಾರಿಕೆಗಳಂಥ ವೃತ್ತಿಗಳನ್ನು ಅನುಸರಿಸುತ್ತಿರುವ ಜಾತಿಗುಂಪುಗಳಾದ ಕುಂಬಾರ, ಕಮ್ಮಾರ, ಬಡಿಗ, ಅಕ್ಕಸಾಲಿ, ಬುಟ್ಟಿ ಹೆಣೆಯುವ ಮೇದಾರ ಮತ್ತಿತರರ ಮೇಲೆ ಪರಿಣಾಮ ಬೀರಿದೆ. ಇತ್ತೀಚಿನ ದಿನಗಳವರೆಗೆ ಇಂತಹ ಗುಂಪುಗಳು ಕೃಷಿಕಾರ್ಮಿಕರಾಗುವ ಅಥವಾ ನಗರ ಪ್ರದೇಶಗಳಿಗೆ ವಲಸೆ ಹೋಗುವ ಒತ್ತಡಕ್ಕೆ ಒಳಗಾಗಿದ್ದರು. ಕೃಷಿಯನ್ನು ಕೈಗೆತ್ತಿಕೊಂಡ ಕರಕುಶಲ ವೃತ್ತಿ ಜಾತಿಗಳ ಸದಸ್ಯರು ಅಧಿಕ ನಷ್ಟ ಅನುಭವಿಸದಿದ್ದರೂ ಕೃಷಿ ಮಾಡಲು ಅಸಮರ್ಥರಾಗಿ ಸಮಸ್ಯೆಗಳನ್ನು ಎದುರಿಸತೊಡಗಿದರು. ದಿವಾಳಿ ಎಬ್ಬಿಸುವ ಮತ್ತು ಕೃಷಿಕಾರ್ಯಗಳಿಂದ ವಿಮುಖರನ್ನಾಗಿಸುವ ಪ್ರಕ್ರಿಯೆ ಸಣ್ಣ ಮತ್ತು ಮಧ್ಯಮ ರೈತರ12 ಮೇಲೆ ಪರಿಣಾಮ ಬೀರಿ ಹೆಚ್ಚುತ್ತಿರುವುದನ್ನು ಹಲವು ಅಧ್ಯಯನಗಳು ಸೂಚಿಸಿದ ಸಂದರ್ಭದಲ್ಲಿಯೆ, ಕೆಳಹಂತದ ಜಾತಿಸ್ತರದಿಂದ ಬಂದ ಕುಟುಂಬಗಳು ಸ್ತಗಿತ ಅಥವಾ ಬರಡು ಸ್ಥಿತಿಯಿಂದ ಮೇಲೇರಿಬರುವ ಅಥವಾ ತಮ್ಮ ಜೀವನಾವಶ್ಯಕತೆಗಳು, ಆದಾಯ ಮತ್ತು ಜೀವನದ ಮಟ್ಟವನ್ನು ಉತ್ತಮ ಪಡಿಸಿಕೊಳ್ಳುವ ಪ್ರಯತ್ನದ ದಾರಿಗಳಲ್ಲಿರುವುದನ್ನು ಈ ಆತ್ಮಹತ್ಯೆಯ ಪ್ರಕರಣಗಳು ಒತ್ತಿಹೇಳಿವೆ. ಇಂಥ ಹಲವಾರು ಸಣ್ಣ ರೈತರು ತಮ್ಮ ಜೀವನದ ಅವಶ್ಯಕತೆಗಳನ್ನು ಉಳಿಸಿಕೊಳ್ಳುವ ಅಥವಾ ಉತ್ತಮಪಡಿಸಿಕೊಳ್ಳುವ ಪ್ರಯತ್ನದಲ್ಲಿ ಮುಖ್ಯವಾಗಿ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಕೇಂದ್ರಿತವನ್ನಾಗಿ ಮಾಡಲು ಮತ್ತು ವಾಣಿಜ್ಯೇತರ ಬೆಳೆಗಳ ಬೇಸಾಯದಿಂದ ವಾಣಿಜ್ಯ ಬೆಳೆ ಉತ್ಪಾದನೆಗೆ ಪ್ರವೇಶ ಪಡೆದು ಪಲ್ಲಟ ಹೊಂದಲು ಪ್ರಯತ್ನಿಸಿದರು.
ಬಹಳಷ್ಟು ಕುಟುಂಬಗಳು ಪರಿಗಣಿಸಿದಂತೆ, ರೈತರಲ್ಲಿ ವ್ಯಾಪಕ ಮತ್ತು ಹೆಚ್ಚಿನ ಸಾಲ ಬಾಧೆಯೆ ಆತ್ಮಾಹುತಿ ಮಾಡಿಕೊಂಡವರು ಖಿನ್ನತೆ ಅನುಭವಿಸಲು ಮುಖ್ಯ ಕಾರಣವಾಗಿದ್ದು ಅವರನ್ನು ಆತ್ಮಹತ್ಯೆಗೆ13 ದೂಡಿತೆಂದು ಎಲ್ಲ ವರದಿಗಳಲ್ಲಿ ಮಾನ್ಯಮಾಡಿದ್ದರೂ ಅಂಥ ಸಾಲಬಾಧೆಯ ಸಾಮಾಜಿಕ ನೆಲೆ ಮತ್ತು ಅದರ ಪರಿಣಾಮಗಳನ್ನು ಗುರುತಿಸಿಲ್ಲ. ರೈತರಿಗೆ ಒಟ್ಟು ಸಾಲ ಮತ್ತು ಕಂತಿನ ಸಾಲ ನೀಡುವ ಕೃಷಿ-ವ್ಯಾಪಾರಿ ಏಜೆನ್ಸಿಗಳೆ ಸಾಂಸ್ಥಿಕೇತರ ಸಾಲದ ಮುಖ್ಯ ಮೂಲವಾಗಿದ್ದು, ತಮ್ಮ ನಗರ ಸಂಬಳ ಪಡೆವ ಸಂಬಂಧಿಕರೂ ಸ್ನೇಹಿತರೂ ಒಳಗೊಂಡು ಕೈಗಡ, ಸಾಲ ನೀಡುವ ಹಣದ ಹೊಸ ಲೇವಾದೇವಿಗಾರರು14 ಒದಗಿಸುವ ಕೃಷಿಯ ಸಾಲದಿಂದ ರೈತರ ಸಾಲದ ಹೊರೆ ದುಪ್ಪಟ್ಟಾಗಿದೆ. ಮೊದಲನೆಯದಾಗಿ ಬಡ್ಡಿದರ (ವಾರ್ಷಿಕ ಬಡ್ಡಿ ಶೇ. 24 ರಿಂದ 45 ರವರೆಗೆ) ಮಿತಿಮೀರಿ ಇರುತ್ತದೆ ಮತ್ತು ಎರಡನೆಯದಾಗಿ ಸಾಲಗಳು ಅವರ ವೈಯಕ್ತಿಕ ಮತ್ತು ಸಾಮಾಜಿಕ ಜಾಲದೊಂದಿಗೆ ಸಂಪರ್ಕ ಹೊಂದಿರುತ್ತವೆ. ಸಾಲ ಪಾವತಿಸಲಾಗದ ಅಸಹಾಯಕತೆ ಸಾಮಾನ್ಯವಾಗಿ ಅಪಹಾಸ್ಯ, ಬಹಿಷ್ಕಾರ ಮತ್ತು ಸಾರ್ವಜನಿಕ ಅಪಮಾನಗಳಿಗೆ ಗುರಿಪಡಿಸುತ್ತದೆ. ಹಲವು ವರದಿಗಳು ಮತ್ತು ಪ್ರಕರಣ ಅಧ್ಯಯನಗಳ ಮುಖ್ಯಾಂಶಗಳ ಪ್ರಕಾರ, ಅಂಥ ಅಪಮಾನ ಅನುಭವಿಸುತ್ತಿದ್ದವರಲ್ಲಿ ಅಥವಾ ತಮ್ಮ ಆಸ್ತಿ ಕಳೆದುಕೊಳ್ಳುವ ಬೆದರಿಕೆ ಎದುರಿಸುತ್ತಿದ್ದವರಲ್ಲಿ ಬಹುಪಾಲು ಸದಸ್ಯರು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೃಷಿ ತಿಳುವಳಿಕೆಯಲ್ಲಿ ಗೊಂದಲ
ರೈತರಲ್ಲಿ ಸಂಪನ್ಮೂಲ ಮತ್ತು ಸಾಲ ದೊರೆಯುವಿಕೆ ಮಾತ್ರವಲ್ಲದೆ ಬೀಜಗಳ ನಂಬಲರ್ಹವಲ್ಲದ ಗುಣಮಟ್ಟದಂಥ ಸಾಲು ಸಾಲು ಕಷ್ಟಗಳ ನಡುವೆಯೂ ತಮ್ಮ ಭೂಮಿಯನ್ನು ಬಳಕೆ ಮಾಡುವಲ್ಲಿ ಯಾವ ತಿಳುವಳಿಕೆ ಪಡೆದಿರಬೇಕಾಗಿತ್ತೋ ಅಂಥ ಕೃಷಿ ತಿಳುವಳಿಕೆಯ ಸಮಸ್ಯೆ ಮತ್ತು ಸಾಮರಸ್ಯದ ಕೊರತೆ ಕೂಡ ಹೆಚ್ಚುತ್ತಿದೆ. ಕೃಷಿ ವ್ಯವಹಾರ ಮತ್ತು ಆಚರಣೆಗಳಂಥ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂರಚನೆಗಳ ಮೂಲಕ ಮರುಉತ್ಪಾದನೆಯಾಗುವ ಮತ್ತು ಹರಡುವ ಅರಿವಿನ ವಿತರಣೆಯ ಭಂಡಾರದಿಂದ ಸ್ಥಳೀಯ ಕೃಷಿ ಮಾದರಿ ಮತ್ತು ಆಚರಣೆಗಳು ರೂಪ ಪಡೆಯುತ್ತವೆ. ಹೀಗಿದ್ದರೂ ಹೊಸ ಕೃಷಿಸಾಮ್ರಾಜ್ಯದ ಹಸಿರು ಕ್ರಾಂತಿ ಮಾದರಿ ಹೈಬ್ರೀಡ್ ಬೀಜಗಳ ಬಳಕೆ, ಮತ್ತು ಅನುವಂಶೀಯವಾಗಿ ಸುಧಾರಿತವಾದ ತಳಿಬೀಜ15ಗಳನ್ನು ಬಳಸುತ್ತಿರುವ ಹೊಸ ಸಾಮ್ರಾಜ್ಯದ ಹೊರ ಊಡಿಕೆ, ಕೃಷಿ ತಿಳುವಳಿಕೆಯಲ್ಲಿ ಹೇಗೆ ಏನು ಎಂಬ ಗೊಂದಲ ಹೆಚ್ಚಾಗುವುದನ್ನು ಉತ್ತೇಜಿಸುತ್ತದೆ. ಅಂಥ ಗೊಂದಲ ಸ್ಥಳೀಯಮೂಲ  ಜ್ಞಾನಪದ್ಧತಿಯಿಂದ ಮಾತ್ರವಲ್ಲದೆ ಅಥವಾ ಸ್ಥಳೀಯ ಮತ್ತು 'ಆಧುನಿಕ' ಪದ್ಧತಿ(ಗುಪ್ತಾ, 1999)ಗಳೆರಡೂ ಸೇರಿದ ಹಸಿರು ಕ್ರಾಂತಿ ಮಾದರಿಯಲ್ಲೂ ಮಹತ್ತರವಾದ ಪಲ್ಲಟವನ್ನು ಸೂಚಿಸುತ್ತದೆ. ಕೃಷಿ ವಾಣಿಜ್ಯೀಕರಣ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಕೃಷಿ ವ್ಯಾಪಾರಗಾರರ ನಡುವಿನ ಸ್ಪರ್ಧೆಯ ತೀವ್ರತೆ ಮತ್ತು ದೂರಕ್ಕೆ ಬೆಳೆಯುತ್ತಿರುವ ರಾಜ್ಯ ವಿಸ್ತಾರಣಾ ಸೇವೆ ಅಂದರೆ, ಮಾರುಕಟ್ಟೆ ಮುಂಚೂಣಿಯ ಒಲವುಗಳಿಂದಲೇ ಹೆಚ್ಚಾಗಿ ಕೃಷಿಯ ಆಚರಣೆಗಳು ರೂಢಿಗೊಳ್ಳುತ್ತಿವೆ ಎಂದರ್ಥ. ಇದರ ಫಲವಾಗಿ 'ಕೃಷಿ ಕೌಶಲ್ಯತೆ ವಿನಾಶ' ಹೆಚ್ಚಿಸಲೂ ಕಾರಣವಾಗುವ ಹೊಸ ವಾಣಿಜ್ಯೀಕರಣದ ಬಗೆಗಳಾದ ಬೀಜಗಳು, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ, ಮತ್ತೊಬ್ಬ ಸ್ಪರ್ಧೆಯನ್ನು ಹೊರದೂಡುವಂತೆ ರೈತರ ನಡುವೆ ತೀವ್ರ ಪೈಪೋಟಿ ಉಂಟುಮಾಡುತ್ತದೆ(ಸ್ಟೋನ್ 2007:84).
 ವ್ಯವಸ್ಥಿತ ಮಾಹಿತಿ ಪ್ರಸಾರ ಅನುಸರಣೆಯೊಂದಿಗೆ ಹೊಸ ಕೃಷಿ ಮಾದರಿ ಉತ್ತೇಜನದ ತಿಳುವಳಿಕೆ ಮತ್ತು ರೈತ ತರಬೇತಿ ಪರಸ್ಪರ ಹೊಂದಿಕೆಯಾಗುವುದಿಲ್ಲ. ಎನ್.ಎಸ್.ಎಸ್.ಒ ಸಮೀಕ್ಷೆ ಸಂಖ್ಯೆ 499 (2005)ರ ದತ್ತ ಮಾಹಿತಿ ಗ್ರಾಮೀಣ ಭಾರತದಲ್ಲಿ ಸಾರ್ವಜನಿಕ ಏಜೆನ್ಸಿಗಳ ಗೈರುಹಾಜರಿ ಮತ್ತು ತಿಳುವಳಿಕೆಯುಳ್ಳ ಬಹುಭಾಗದ ಜನರಿಗಿರುವ ಜ್ಞಾನ ಪ್ರಸಾರದ ಕೊರತೆಯನ್ನು ಸೂಚಿಸುತ್ತದೆ. ಶೇಕಡ 8.4 ರೈತರು ಮಾತ್ರ ಕೃಷಿ ವಿಜ್ಞಾನ ಕೇಂದ್ರಗಳಿಂದ, ಶೇಕಡ 17ರಷ್ಟು ಇತರೆ ರೈತರಿಂದ ಮತ್ತು ಶೇಕಡ 13ರಷ್ಟು ಕೃಷಿ ಊಡಿಕೆ ವ್ಯಾಪಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಅನೇಕ ವರದಿಗಳು (ನಾಗರಿಕ ವರದಿ 1998, ವಾಸವಿ 1999, ಮೊಹಂತಿ 2005), ರೈತರು ಹೊಸ ವಾಣಿಜ್ಯ ಊಡಿಕೆಯಲ್ಲಿ ವಿಶೇಷವಾಗಿ ಕೀಟನಾಶಕಗಳ ಬಳಕೆಯಲ್ಲಿ ತಮ್ಮ ಕೃಷಿ ಸಮಸ್ಯೆಗೆ ಕಾರಣವಾದ ಹಾಗೆ ಸೂಕ್ತ ಜ್ಞಾನ ಮತ್ತು ಪರಿಣತಿ ಹೊಂದಿರದೆ ಅಸಮರ್ಥರಾಗಿರುವುದನ್ನು ಕೂಡ ನಮೂದಿಸಿವೆ. ಕೀಟನಾಶಕಗಳಿಗೆ ಒಡ್ಡಿಕೊಂಡ ಪರಿಣಾಮದಿಂದ ಸಾವುಂಟಾದ ಕುರಿತು ಟಾಸ್ಕಿಸ್ ಲಿಂಕ್ ನ ವರದಿ(2002) ಕೀಟನಾಶಕಗಳನ್ನು ಅನ್ವಯಿಸುವ ಮತ್ತು ಕೀಟನಾಶಕ ಡಬ್ಬಗಳನ್ನು ಮನೆ ಬಳಕೆ ಹಾಗೂ ಅಡುಗೆಯ ಉದ್ದೇಶಗಳಿಗೆ ಉಪಯೋಗಿಸುವ ಮೂಲಕ ಅಸುರಕ್ಷಿತ ರೀತಿಯ ವ್ಯಾಪ್ತಿಯಲ್ಲಿ ಕೀಟನಾಶಕಗಳು ಆರೋಗ್ಯದಲ್ಲಿ ಏರುಪೇರು ಉಂಟಾಗಲು ಮತ್ತು ಸಾವು ಸಂಭವಿಸಲು ಕಾರಣವಾದುದನ್ನು ವಿವರಿಸುತ್ತದೆ. ಜೊತೆಗೆ, ಸೂಕ್ತ ಪ್ರಮಾಣದ ಕೀಟನಾಶಕ ಬಳಸುವಲ್ಲಿ ತಿಳುವಳಿಕೆಯ ಕೊರತೆಯಿಂದ ರೈತರು ಹೆಚ್ಚು ಹೆಚ್ಚು ಕೀಟನಾಶಕಗಳನ್ನು ಖರೀದಿಸಿ ತಮ್ಮ ಜಮೀನುಗಳಿಗೆ ಸಿಂಪಡಿಸುವ ಮೂಲಕ ಸಾಲದ ಹೊರೆ ಹೆಚ್ಚಾಗುತ್ತಿರಲು ಮುಖ್ಯ ಕಾರಣವಾಗಿದೆ.
ಹೆಚ್ಚುತ್ತಿರುವ ಕೃಷಿ ವಾಣಿಜ್ಯೀಕರಣ, ಹೆಚ್ಚುತ್ತಿರುವ ಪ್ರಬಲ ಹಸಿರುಕ್ರಾಂತಿ ಮಾದರಿ ಅನುಸರಣೆ, ಸಾಲು ಸಾಲು ಕಷ್ಟಗಳು ಮತ್ತು ತಿಳುವಳಿಕೆಯಲ್ಲಿ ಗೊಂದಲ- ಒಟ್ಟಾರೆಯಾಗಿ ಅತಿಸಣ್ಣ ಕೃಷಿಭೂಮಿ ಮತ್ತು ಅತಿಸಣ್ಣ ರೈತರ ಮೇಲೆ ಹಸಿರು ಕ್ರಾಂತಿ ಬೀರಿದ ಪರಿಣಾಮವನ್ನು ಸೂಚಿಸುತ್ತದೆ. ಹೆಚ್ಚುತ್ತಿರುವ ಸಾಲದ ಹೊರೆ, ಮಾರುಕಟ್ಟೆ ಬೆಂಬಲದ ಕೊರತೆ, ಭೂಮಿಯ ವರ್ಗಾವಣೆಯಲ್ಲಿ ಅಸಂಬದ್ಧತೆ ಮತ್ತು ಕುಟುಂಬದ ಅವಶ್ಯಕ ಮೂಲಭೂತ ನೆರವು ಒದಗಿಸುವಲ್ಲಿ ಅಸಮರ್ಥತೆ- ಈ ಪ್ರಬಲ ಮಾದರಿಯೊಳಗೆ ತಮ್ಮನ್ನು ಉಳಿಸಿಕೊಳ್ಳಲು ಪಯತ್ನಪಡುವರ ಗುರುತಾಗಿದೆ. ಇದು ವಿಶೇಷವಾಗಿ ಸಾಕಷ್ಟು ಬಂಡವಾಳ, ತಿಳುವಳಿಕೆ ಮತ್ತು ಬೆಂಬಲವಿಲ್ಲದವರ ಮತ್ತು ತಮ್ಮ ಜೀವನಾವಶ್ಯಕತೆಗಳು, ಹಣಕಾಸು ಚಲಾವಣೆ ಮತ್ತು ಸಾಮಾಜಿಕ ಸ್ಥಾನಮಾನ ಪಡೆಯಲು ಉಳಿದಿರುವ ಏಕಮಾತ್ರ ದಾರಿಯೆಂದು ಪರಿಗಣಿಸಿದವರ ಪ್ರಕರಣವಾಗಿದೆ. ಇಂಥ ಪರಿಸ್ಥಿತಿಗಳು ಮತ್ತು ಪ್ರವೃತ್ತಿಗಳು ಜೊತೆಗೂಡಿದ ಕೃಷಿ ಜಗತ್ತಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂದರ್ಭದಲ್ಲಿ ಕಷ್ಟದ ಜಗತ್ತಿನ ಪ್ರತಿಯೊಬ್ಬ ರೈತನ ಸ್ಥಿತಿ ಆತ/ಆಕೆ ಹೊಂದಿರುವ ಸಾಮಾಜಿಕ ಸಂದರ್ಭಗಳಿಗೆ, ಒತ್ತಡಗಳಿಗೆ ಮತ್ತು ಹೊರೆಗಳಿಗೂ ಸಂಪರ್ಕ ಹೊಂದಿವೆ.  .
ಕೃಷಿಯ ವೈಯಕ್ತೀಕರಣ
ರೈತರು ಮಾರುಕಟ್ಟೆಯ ಆರ್ಥಿಕತೆಯೆಡೆಗೆ ಒಟ್ಟುಗೂಡುತ್ತಿರುವುದು ಹೆಚ್ಚುತ್ತಿರುವುದರಿಂದ ಭಾರತದ ಕೃಷಿಯ ಸಾಂಸ್ಕೃತಿಕ ಆಧಾರ16 ಮರುರಚನೆಗೊಳ್ಳಲು ಕಾರಣವಾಗಿದೆ. ಹೀಗಿದ್ದರೂ ಸಾಮೂಹಿಕವಾಗಿ ಲಯ ಪಾಲುದಾರಿಕೆ ಮತ್ತು ಜ್ಞಾನ ಪಾಲುದಾರಿಕೆ ಸ್ವರೂಪ ಆಧರಿತ ಕೃಷಿ ಮಾದರಿ ನಡೆಯುತ್ತಿತ್ತು, ಭೂಮಿಯ ಹಕ್ಕು ಮತ್ತದರ ಸಂಪನ್ಮೂಲಗಳನ್ನು ಜಾತಿ ಆಧಾರಿತವಾಗಿ ಗೊತ್ತುಮಾಡಲಾಗುತ್ತಿತ್ತು, ಇದರೊಂದಿಗೆ ಕೃಷಿ ವ್ಯವಸ್ಥೆ ವ್ಯಾಪಕವಾಗಿ ಶ್ರೇಣೀಕೃತವಾಗಿತ್ತು ಎಂಬುದು ಪ್ರಸಿದ್ಧವೂ ಸ್ಥಾಪಿತವೂ ಆಗಿದೆ. ಇದರಿಂದಾಗಿ ನಾನು ಜಾತಿ-ವರ್ಗಗಳ ಭೇದ(ಭೂಹಿಡುವಳಿ ಗಾತ್ರ ವ್ಯತ್ಯಾಸ)ವಿಲ್ಲದೆ ಎಲ್ಲ ರೈತರು ಸ್ಥಳೀಯ ಪರಿಸರದ ಪರಿಸ್ಥಿತಿಗೆ ಸರಿಹೊಂದುವಂತೆ ಕೃಷಿ ನಡೆಸಿದ ಪ್ರಾದೇಶಿಕ ನಿರ್ದಿಷ್ಟ ಮಾದರಿಗಳನ್ನು ಕೈಗೊಂಡು ರೂಢಿಸಿದ ಕೃಷಿಯ ಆಚರಣೆಗಳನ್ನು ಸೂಚಿಸುತ್ತೇನೆ. ಅಂಥ ಕೃಷಿ ಮಾದರಿಗಳು ಕೂಡ ಜ್ಞಾನ ಪಾಲುದಾರಿಕೆ ಸ್ವರೂಪಗಳಿಂದ ಪ್ರಭಾವಿತವಾಗಿವೆ ಮತ್ತು ಸ್ಥಳೀಯ ಸಾಂಸ್ಕೃತಿಕ ಮಾದರಿಗಳೊಂದಿಗೆ ಸಂಪರ್ಕಹೊಂದಿವೆ. ಇತರ ಅಧ್ಯಯನಗಳು ವಿಸ್ತರಿಸಿದ ಹಾಗೆ, ಪಾಶ್ಚಿಮಾತ್ಯವಲ್ಲದ, ವಾಣಿಜ್ಯವಲ್ಲದ ಆ ಸಂದರ್ಭದ ಕೃಷಿ ತಿಳುವಳಿಕೆಯ ಪಾಲುದಾರಿಕೆ ವ್ಯವಸ್ಥೆಯಲ್ಲಿ ನಡೆಯುತ್ತಿತ್ತು. ಸಾಂಸ್ಕೃತಿಕ ಮಹತ್ವ ಪಡೆದ ಪಾರಿಭಾಷಿಕ ಪದಕ್ಕೆ ಸಂಬಂಧಿಸಿದ ಮತ್ತು ಬಂಧು-ಬಳಗದವರು, ಜೊತೆ ಕೆಲಸಗಾರರು ಮತ್ತು ಸಂಬಂಧಿಕರನ್ನು ಬಳಸಿಕೊಂಡು ಹಳೆಯ ಮತ್ತು ಹೊಸ ಕೃಷಿಯ ತಿಳುವಳಿಕೆಗಳು ಒಳಗೊಂಡಿತ್ತು. (ಬೋಯೆಮ್ 2003).
ಹಲವು ಅಧ್ಯಯನಗಳು17 ವಿಸ್ತರಿಸಿದಂತೆ, ಹಸಿರು ಕ್ರಾಂತಿ ಮತ್ತು ವಾಣಿಜ್ಯ ರೂಪದ ಕೃಷಿ ಅನುಸರಣೆಯ ತರುವಾಯ ಪೋಷಕ-ಗ್ರಾಹಕ ವ್ಯವಸ್ಥೆಯಡಿ ಬಿಕ್ಕಟ್ಟಿನ ಸಮಯದಲ್ಲಿ ಒದಗಿಸಲಾಗಿದ್ದ ಬೆಂಬಲ ಮತ್ತು ಸಂರಕ್ಷಣೆ ನಾಶವಾದಾಗ ಜಾತಿ ಆಧಾರಿತ ಉತ್ಪಾದನೆಯ ಸಾಮಾಜಿಕ ನೆಲೆಗಳನ್ನು ವ್ಯಾಪಕವಾಗಿ ಉಳಿಸಿಕೊಳ್ಳಲಾಯಿತು. ಸಾಂಪ್ರದಾಯಿಕ ಸಂರಚನೆ ಆಧಾರಿತ ಪರಸ್ಪರ ಅವಲಂಬನೆ ಅವಸಾನವಾದಂತೆ, ಬಾಹ್ಯ ಸಂರಚನೆ ಮತ್ತು ಸಂಸ್ಥೆಗಳ ಮೇಲಿನ ಅವಲಂಬನೆ ಹೆಚ್ಚಾಯಿತು. ಸಾಂಪ್ರದಾಯಿಕ ರೂಪಗಳ ಬೆಂಬಲ ಚೆದುರಿಹೋದ ಸಂದರ್ಭದಲ್ಲಿ ದುಡಿಯುವ, ಕೆಳಶ್ರೇಣಿಯ ಜಾತಿಗುಂಪುಗಳು ವಿಮೋಚನೆಗೊಂಡವು. ಅಲ್ಲದೆ ಜಾತಿ ನಿಗದಿತ ದಾಸ್ಯಮನೋಭಾವದಿಂದ ತಪ್ಪಿಸಿಕೊಳ್ಳಲು ಮತ್ತು ಸಾಲ ಒದಗಿಸಲು ಅವರನ್ನು ಶಕ್ತರನ್ನಾಗಿಸಿತು. ಆದರೂ ನೈತಿಕ ಆರ್ಥಿಕತೆ ಒದಗಿಸುವ ಕಾರ್ಯವಿಧಾನಗಳು ಪ್ರಭುತ್ವ ಅವಕಾಶ ಒದಗಿಸುವ ಕಾರ್ಯವಿಧಾನಗಳಿಂದ ಸಮರ್ಪಕವಾಗಿ ಬದಲಾಗಲಿಲ್ಲ (ಅರೋರ್ 2004, ವಾಸವಿ 1999). ಬಡವರಿಗೆ ಸರಬರಾಜು ಮಾಡಬಯಸುವ ಬಹುತೇಕ ಸರಕಾರಿ ಕಾರ್ಯಕ್ರಮಗಳು, ಆಹಾರಧಾನ್ಯವಾಗಲೀ ವಸತಿಯಾಗಲೀ ಅಥವಾ ಉದ್ಯೋಗ ಕೂಡ ಕಮಿಶನ್ನು, ಲಂಚ ಮತ್ತು ಅತ್ಯಂತ ಯೋಗ್ಯರಿಗೆ ತಲುಪುವ ಮೂಲ ಸೌಲಭ್ಯಗಳ ಅದಲು ಬದಲು ಮಾಡುವಂಥ ಬಾಡಿಗೆ ಪಡೆಯುವ ನಡವಳಿಕೆಗೆ ಒಳಪಟ್ಟಿದೆ ಎಂದು ದೇವ್(2004) ಮತ್ತು ಶರ್ಮ(2004) ಅವರು ಎತ್ತಿ ತೋರಿಸಿದ್ದಾರೆ.
ಜೋಧ್ಕಾ ಮುಂದುವರಿದು ಗಮನಸೆಳೆದಿರುವಂತೆ ಪಾರಂಪರಿಕ' ಗ್ರಾಮೀಣ ಆರ್ಥಿಕತೆಯ ಸ್ವಾಯತ್ತತೆಯಲ್ಲದೆ ಆಶ್ರಯ ಮತ್ತು ನಿಷ್ಟೆಯ ಸಂರಚನೆಗಳು (2005-22) ಹಾಗೂ ಅಸ್ಪೃಶ್ಯ ರೈತ ಗುಂಪುಗಳ ವಿರುದ್ಧ ಮೇಲ್ಜಾತಿಗಳ ಪೂರ್ವಗ್ರಹ, ಕೆಳಶ್ರೇಣಿಯ ಹೊಸ ರೈತರ ಪ್ರತ್ಯೇಕತೆಯನ್ನು ಹೆಚ್ಚಿಸುತ್ತಿವೆ. ಕೃಷಿಯ ತಿಳುವಳಿಕೆಯಲ್ಲಿ ಗೊಂದಲಕ್ಕೆ ಕಾರಣವಾದ ಹೊಸ ಬಗೆಯ ಕೃಷಿಯನ್ನು ಕೈಗೆತ್ತಿಕೊಂಡರೆ,  ಆ ನಂತರದಲ್ಲಿ ಹೊಸ ಉದ್ಯೋಗದಂತೆ ಕೃಷಿ ಕೈಗೆತ್ತಿಕೊಂಡವರಿಗೆ ಎದುರಾಗುವ ಅಪಾಯಗಳು ದುಪ್ಪಟ್ಟಾಗಿವೆ. ಮಹಾರಾಷ್ಟ್ರದ ಯಾವತ್ವಾಲ್ ಮತ್ತು ಅಮರಾವತಿ ಜಿಲ್ಲೆಗಳಲ್ಲಿ ಮಾಡಿದ ಅಧ್ಯಯನಗಳಿಂದ ಮೊಹಂತಿ (2005) ಎತ್ತಿತೋರಿಸುವಂತೆ, ಕೃಷಿಗೆ ಹೊಸ ಪ್ರವೇಶ ಪಡೆದ ಕೆಳಜಾತಿಗೆ ಸೇರಿದ ಅತಿಸಣ್ಣ ರೈತರು ಭೂಒಡೆತನ ಹೊಂದಿದ ಪ್ರಬಲ ಜಾತಿಯವರ ಹಗೆತನವನ್ನು ಎದುರಿಸುತ್ತಾರೆ. ಮೇಲ್ಜಾತಿಯವರು ಹೊಸ ಪ್ರವೇಶ ಪಡೆದವರೊಂದಿಗೆ ಕೃಷಿ ತಿಳುವಳಿಕೆಯನ್ನು ಹಂಚಿಕೊಳ್ಳುವುದಿಲ್ಲ ಮಾತ್ರವಲ್ಲ ಕೃಷಿಕರ ನಡುವೆ ತೀವ್ರ ಪೈಪೋಟಿಯನ್ನೂ ಹುಟ್ಟುಹಾಕುತ್ತಾರೆ. ತಮ್ಮೊಳಗಿನ ಈ ಪೈಪೋಟಿ ಮತ್ತು ಮಾರುಕಟ್ಟೆ ಸಂಸ್ಥೆಗಳಿಂದ ಕಷ್ಟಪಟ್ಟು ಗಳಿಸಿದ ಹೊಸ ಬಗೆಯ ಅಲ್ಪಸ್ವಲ್ಪ ತಿಳುವಳಿಕೆಯನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳುವ ಕೊರತೆ ಹಾನಿಕಾರಕ ಪರಿಣಾಮಗಳಿಗೆ ಕಾರಣವಾಗುತ್ತದೆ. ರೈತರು ತಮ್ಮ ಭೂಮಿಯಲ್ಲಿ ಹೆಚ್ಚು ಹೆಚ್ಚು ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಸುವ ವಿವರಗಳು ಮತ್ತು ಕೀಟನಾಶಕಗಳ ತೀವ್ರ ಪರಿಣಾಮ  ಎದುರಿಸುವ ಬಗೆ ಅರಿಯದಿರುವುದು ಇದರ ಸೂಚಕವಾಗಿದೆ (ರೈತರ ಪರಿಣತರ ಆಯೋಗ ವರದಿ 2002, ಮೊಹಂತಿ ಮತ್ತು ಶ್ರಾಫ್ 2004, ಸ್ಟೋನ್ 2007). 
ಕೃಷಿಯ ವೈಯಕ್ತೀಕರಣದೊಂದಿಗೆ ಸೇರುವ ಮತ್ತೊಂದು ಸಾಮಾಜಿಕ ಆಯಾಮವೆಂದರೆ ಅವಿಭಕ್ತ ಕುಟುಂಬಗಳು ಒಡೆದು ಸಣ್ಣಕುಟುಂಬಗಳಾದುದು. ಅಂಥ ಸಂದರ್ಭಗಳಲ್ಲಿ ಮನೆಯ ಯಜಮಾನ ಬಹುತೇಕ ಸಂದರ್ಭಗಳಲ್ಲಿ ಒಬ್ಬನೇ ವ್ಯಕ್ತಿಯಾಗಿದ್ದು, ತೃಪ್ತಿದಾಯಕ ಜೀವನ ನಿರ್ವಹಣೆ ಮಾಡಬಯಸಿ ಎಲ್ಲ ಕಷ್ಟದ ಭಾರವನ್ನು ಹೊರುತ್ತಾನೆ. ಸಾಲಗಳಿಂದ ಎದುರಾಗುವ ಕಷ್ಟಗಳು, ಹೊಸ ಬೆಳೆಗಳನ್ನು ಬೆಳೆಯುವಲ್ಲಿ, ಅಥವಾ ಮಾರಾಟದ ಉತ್ತಮ ಬೆಲೆ ಖಾತರಿ ಪಡಿಸುವಲ್ಲಿ ಆ ವ್ಯಕ್ತಿಯೊಬ್ಬನ ಮೇಲೆ ಕಷ್ಟದ ಹೊರೆ ಬೀಳುತ್ತದೆ. ಇದನ್ನು ಅನೇಕ ವರದಿಗಳು ಎತ್ತಿತೋರಿಸಿವೆ. ಮನೆಯ ಯಜಮಾನರಾದ ಯುವಕರು ತಮ್ಮದೆ ಸ್ವಂತ ಆರ್ಥಿಕ ತಂತ್ರೋಪಾಯಗಳನ್ನು ಕೈಗೊಳ್ಳುತ್ತಾರೆ ಮತ್ತು ಅಲ್ಪಸ್ವಲ್ಪ ಬೆಂಬಲ ಅಥವಾ ಯಾವ ಬೆಂಬಲವಿಲ್ಲದೆ ಮಾರುಕಟ್ಟೆಯ ಬೇಡಿಕೆಗಳೊಂದಿಗೆ ವ್ಯವಹರಿಸುತ್ತಾರೆ. ಇತ್ತೀಚೆಗಷ್ಟೇ ವಿಭಜನಗೊಂಡ ಕುಟುಂಬದ ಸಂದರ್ಭದಲ್ಲಿ ವ್ಯಕ್ತಿಗತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ವ್ಯಕ್ತಿಗಳ ಮೇಲೆ ಅನುಚಿತವಾಗಿ ಹೇರಿದ ದೊಡ್ಡ ಹೊರೆಯಾಗಿದ್ದು, ಅಧಿಕ ಸಾಲ, ಬೆಳೆನಷ್ಟ ಮತ್ತು ವ್ಯಕ್ತಿತ್ವ ನಷ್ಟದೆದುರು ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದೆ. ರೈತರನ್ನು ಪರಸ್ಪರ ಅಗಲಿಸುವಿಕೆ, ಅರಿವು ಮತ್ತು ಆಚರಣೆಗಳ ಪಾಲುದಾರಿಕೆ ವ್ಯವಸ್ಥೆಯನ್ನು ನಷ್ಟಪಡಿಸುವಿಕೆ, ಪ್ರಭುತ್ವ ಮತ್ತು ಸಂಸ್ಥೆಗಳ ಸಮರ್ಪಕ ಬೆಂಬಲವಿಲ್ಲದ ರೈತರು ಹೊತ್ತ ಅಪಾಯಗಳ ಗುರುತರ ಹೊರೆ, ಕುಟುಂಬದ ಯಜಮಾನರು ಮತ್ತು ಕ್ರಿಯಾಶೀಲ ವ್ಯಕ್ತಿಗಳು ಹೊತ್ತಿರುವ ಕಷ್ಟಗಳು ಮತ್ತು ಕೆಳಶ್ರೇಣಿ ಸಮುದಾಯದ ಹೊಸರೈತರ ದುಪ್ಪಟ್ಟು ಹೊರೆ, ಇವೆಲ್ಲವೂ ಕೃಷಿಯ ವೈಯಕ್ತೀಕರಣ18ಕ್ಕೆ ಕಾರಣವಾಗುವುದನ್ನು ಗುರುತಿಸಬಹುದು. ಕೃಷಿಯ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಯನ್ನು ಬುಡಮೇಲು ಮಾಡುವುದು ಮತ್ತು ಪ್ರತಿಯೊಬ್ಬ ರೈತನ ವಿಶಿಷ್ಟತೆಯನ್ನು ಮಾರುಕಟ್ಟೆಯ ಆರ್ಥಿಕತೆಗೆ ಏಕವ್ಯಕ್ತಿ ಸ್ಪರ್ಧಾಳುವನ್ನಾಗಿಸುವುದು ಕೃಷಿಯ ವೈಯಕ್ತೀಕರಣವಾಗಿದೆ.
ಪಶ್ಚಿಮ ದೇಶಗಳಲ್ಲಿ ವೈಯಕ್ತೀಕರಣ ಹೆಚ್ಚುತ್ತಿರುವ ಸಂದರ್ಭದಲ್ಲಿ ಬೆಕ್ ಮತ್ತು ಬೆಕ್-ಜೆನರ್ಷಿಯಂ ಏನು ವಿಸ್ತರಿಸಿದರೊ ಅದು ಇಲ್ಲಿಯೂ ಸಂಗತವಾಗಿದ್ದು ನೀವೇ ನಿಮ್ಮ ಜೀವನ ರೂಪಿಸಿಕೊಳ್ಳಿ ಎಂಬುದರ ಮೇಲೀಗ ಒತ್ತು ಬಿದ್ದಿದೆ. ಅಂತಹದೊಂದು ಜೀವನ 'ಯಾವಾಗಲೂ ಕಷ್ಟದಿಂದ ಕೂಡಿದ ಜೀವನ, ಬಿಗುವಿನಿಂದ ಕೂಡಿದ ಜೀವನ, ಅಪಾಯ ಶಾಶ್ವತವಾದ (ಭಾಗಶಃ ಅಡಗಿಸಿಟ್ಟ, ಭಾಗಶಃ ತೆರೆದಿಟ್ಟ) ಸ್ಥಿತಿಯ ಜೀವನವಾಗಿದೆ' (2001:3). ಅವರು ಸ್ಪಷ್ಟಪಡಿಸಿದಂತೆ ನೀವೇ ನಿಮ್ಮ ಜೀವನ ರೂಪಿಸಿಕೊಳ್ಳಿ ಹೆಚ್ಚು ಸಲ 'ವಿಫಲ ಜೀವನ'ವಾಗುತ್ತದೆ. ವ್ಯಕ್ತಿ ವಿಶಿಷ್ಟ ರೈತರ ನವೀನ ಕೃಷಿ ಜಗತ್ತು (ಅಸ್ಥಿರವಾದ ಮಾರುಕಟ್ಟೆ ಮತ್ತು ಹವಾಮಾನದಲ್ಲಿ ಏರುಪೇರು ಪರಿಸ್ಥಿತಿ, ಹೊಸ ಬಗೆಯ ದುಬಾರಿ ಮತ್ತು ವಾಣಿಜ್ಯೀಕೃತ ಊಡಿಕೆಗಳಿಂದ, ಪ್ರಭುತ್ವದ ಸಮರ್ಪಕ ಬೆಂಬಲವಿಲ್ಲದೆ) ಸನಿಹದಲ್ಲಿರುವ ಈ ವಿಫಲತೆ ಎಷ್ಟರಮಟ್ಟಿಗೆ ಹೆಚ್ಚಿನ ಅಪಾಯವನ್ನು ತರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಇದು ಹೆಚ್ಚು ಸೂಕ್ತವಾಗಿದೆ. ರೈತರು ತಮ್ಮ ವೈಯಕ್ತಿಕವಾದ ಮನೆ ಮತ್ತು ಕುಟುಂಬಗಳಿಂದ ಹಿಂತೆಗೆದುಕೊಂಡರೂ ಅನಿರೀಕ್ಷಿತ ಮಾರುಕಟ್ಟೆ, ಬದಲಾಗುವ ಮತ್ತು ನಂಬಲರ್ಹವಲ್ಲದ ಹವಾಮಾನ, ವಿಶ್ವಾಸಾರ್ಹವಲ್ಲದ ಬೀಜಗಳು, ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳು, ಅಲ್ಲದೆ ಖಾತರಿಯಿಲ್ಲದ, ಪರೀಕ್ಷಿಸದ ರೂಪಗಳಲ್ಲಿರುವ ಹೊಸ ಕೃಷಿ ಪದ್ಧತಿಗಳ ತೊಡಗುವಿಕೆಯಲ್ಲಿ ಒಳಗೊಂಡಿರುವ ಅಪಾಯವನ್ನು ಅಳೆಯಲು ಬಹುಪಾಲು ಅಸಮರ್ಥರಾಗಿದ್ದಾರೆ. ಸರ್ವನಾಶಗೊಳಿಸುವಂಥ ಕೃಷಿ ಪದ್ಧತಿಯೊಂದಿಗೆ ಬಂದ ಪ್ರತಿಯೊಬ್ಬ ರೈತ ಸಾಮಾಜಿಕವಾಗಿ ಮತ್ತು ಮಾನಸಿಕವಾಗಿ ಕಷ್ಟಗಳನ್ನು ಹೊರಲು ಅಸಮರ್ಥನಾಗುವುದು ಇದರ ಗುರುತರ ಪರಿಣಾಮವಾಗಿದೆ. ವಿಶೇಷವಾಗಿ ಸಾಲದ ಹೊರೆ ಅಥವಾ ಕಷ್ಟಗಳಿಗೆ ಒಳಗಾದಂಥ ಸಂದರ್ಭದಲ್ಲಿ, ಬೆಳೆ ನಷ್ಟವೆಂಬುದು ಆಳದಲ್ಲಿ ತನ್ನ ಸ್ವಂತ ವಿಶಿಷ್ಟ ವ್ಯಕ್ತಿತ್ವದ ನಾಶವಾಗಿ ಪರಿಣಮಿಸುತ್ತದೆ. ವಿವಿಧ ರಾಜ್ಯಗಳಲ್ಲಿ ಬಲಿಪಶುಗಳಾದವರ ಪ್ರಕರಣಗಳ ಅಧ್ಯಯನ ಇದನ್ನು ಪರೀಕ್ಷಿಸಿದೆ. ಅತಿಸಣ್ಣ ಭೂಹಿಡುವಳಿ ಹೊಂದಿದ ರೈತರು ಬೋರ್ ವೆಲ್ ಹಾಕಿಸಲು, ಪಂಪ್ಸೆಟ್ ಖರೀದಿಸಲು ಅಥವಾ ಬೀಜ, ಗೊಬ್ಬರ ಮತ್ತು ಕೀಟನಾಶಕ ಖರೀದಿಸಲು- ಹೀಗೆ ಯಾವುದಾದರೂ ಒಂದಕ್ಕೆ  ಅತಿಹೆಚ್ಚು ಬಡ್ಡಿದರದಲ್ಲಿ ದೊಡ್ಡಮೊತ್ತದ ಸಾಲ ಪಡೆಯುತ್ತಾರೆ. ಕೀಟಗಳಿಂದ ಅಥವಾ ರೋಗಗಳಿಂದ ಉಂಟಾದ ಬೆಳೆಗಳ ನಷ್ಟ ಅಥವಾ ಪ್ರತಿಫಲದಾಯಕ ಬೆಲೆಗಳ ಕೊರತೆ ಮತ್ತು ಸಾಲ ಮರುಪಾವತಿಸಲಾಗದ ಅಸಮರ್ಥತೆ ಅವರ ಹತಾಶೆಯ ಸ್ಥಿತಿಯನ್ನು ಹೆಚ್ಚಿಸುತ್ತದೆ. ಅನೇಕ ಸಂದರ್ಭಗಳಲ್ಲಿ ಸಾಲ ಮರುಪಾವತಿಸಲು ಅಸಮರ್ಥರಾಗಿ ಮತ್ತೊಬ್ಬರ ಮುಂದೆ ನಡೆದ ಅವಮಾನ ಅಂತಿಮವಾಗಿ ಸಹನೆ ಕಳೆದುಕೊಳ್ಳಲು, ನಂತರ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದೆ. ಅಂಥ ದಾರುಣ ಪರಿಸ್ಥಿತಿಗಳ ಚಿತ್ರಣವನ್ನು ವಿವಿಧ ವರದಿಗಳು ಒದಗಿಸುತ್ತ್ತವೆ. ಪಂಜಾಬಿನಲ್ಲಿ ಜಾಟ್ಸಿಂಗ್ ಸಮುದಾಯಕ್ಕೆ ಸೇರಿದ ಬಾಲವಿಂದರ್ ಸಿಂಗ್ ತನ್ನ 3-50 ಎಕರೆ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ಪಂಪ್ಸೆಟ್ ಅಳವಡಿಸಲು19 ಕೃಷಿ ಕಮೀಷನ್ ಏಜೆಂಟರಿಂದ ಮತ್ತು ಬಟ್ಟೆ ವ್ಯಾಪಾರಿಯೊಬ್ಬರಿಂದ ಹೇಗೆ ಹಣವನ್ನು ಸಾಲವಾಗಿ ಪಡೆದರು ಎಂಬುದನ್ನು ಅಯ್ಯರ್ ಮತ್ತು ಮಾಣಿಕ್ (2000) ವಿವರಿಸುತ್ತಾರೆ. ಮಾರುಕಟ್ಟೆ ಬೆಲೆಗಳು ಪ್ರತಿಫಲದಾಯಕವಾಗದೆ ಆತ ಸಕಾಲದಲ್ಲಿ ಸಾಲ ಮರುಪಾವತಿ ಮಾಡುವಲ್ಲಿ ವಿಫಲನಾದದ್ದು ಮತ್ತೊಬ್ಬರ ಮುಂದೆ ಅವಮಾನಕ್ಕೀಡಾಗಲು ಕಾರಣವಾಯಿತು. ಆತಂಕ ಮತ್ತು ಚಡಪಡಿಕೆಯ ಕೆಲಕಾಲದ ನಂತರ ಆತ ಕೀಟನಾಶಕ ಕುಡಿದು ಸತ್ತಿದ್ದಾನೆ. ಹಾಗೆಯೇ ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಹೆಂಡ ಇಳಿಸುವ ತನ್ನ ಜಾತಿಯ ಕಸುಬನ್ನು ಬಿಟ್ಟುಕೊಟ್ಟು ಕೃಷಿ ಕೈಗೆತ್ತಿಕೊಂಡಿದ್ದ ಕ್ರಿಯಾಶೀಲ ಮಧ್ಯ ವಯಸ್ಕ ರೈತನ ಆತ್ಮಹತ್ಯೆಯನ್ನು ನಾನು ದಾಖಲಿಸಿದ್ದೇನೆ. 2003ರ ಬರಗಾಲದಿಂದ ನೀರಿನ ಮಟ್ಟದಲ್ಲಿ ಕುಸಿತ ಉಂಟಾಗಿ ಅವನ ಜಮೀನು ಬಂಜರು ನೆಲವಾಗಿ ಹೊಯಿತು. ತನ್ನ ಜಮೀನಿನಲ್ಲಿ ಬಾವಿ ತೋಡಿಸಲು ತೆಗೆದುಕೊಂಡ ಸಾಲ ಎರಡು ಪಟ್ಟು ಬೆಳೆಯಿತು. ಸಾಲಗಾರರು ಅವನ ಹಳ್ಳಿಮನೆಗೆ ಆಗಾಗ ಬಂದು ಸಾಲ ಹಿಂದಿರುಗಿಸುವಂತೆ ಒತ್ತಾಯಿಸಿ ಜರೆಯುತ್ತಿದ್ದುದನ್ನು ಸಹಿಸಲಾಗದೆ ತನ್ನ ಹೊಲದಲ್ಲಿದ್ದ ಮರಕ್ಕೆ ನೇಣು ಹಾಕಿಕೊಂಡನು20.
ವ್ಯಕ್ತಿಗತ ಮತ್ತು ಪ್ರತ್ಯೇಕಿತ ಕೃಷಿ ಪದ್ಧತಿ ಇನ್ನು ಮುಂದೆ ಸಾಮಾಜಿಕ ಸಂಬಂಧಗಳು ಮತ್ತು ಜಾಲಗಳಿಂದ ನಡೆಯುವ 'ಸಾಮಾಜಿಕ ನಿರ್ವಹಣೆ' (ರಿರ್ಚಡ್ಸ್ 1993)ಯಾಗಲೀ  ಅಥವಾ ರೈತರು ನಿರ್ಧಾರ ತೆಗೆದುಕೊಳ್ಳುವ, ಆಯ್ಕೆ ಮಾಡುವ ಮತ್ತು ಕಾರ್ಯಚಟುವಟಿಕೆ ನಡೆಸುವ21 'ತಂತ್ರೋಪಾಯಗಳ ಯೋಜಿತ ಜಾಲ' (ಬ್ಯಾಟರ್ಬರಿ 1996 ಪಾಸಿಮ್)ವಾಗಲೀ ಆಗಿರುವುದಿಲ್ಲ. ವೈಯಕ್ತಿಕ ಆಟಗಾರನ ಹಾಗೆ ರೈತರು ಜ್ಞಾನವನ್ನೂ ಸಾಲವನ್ನೂ ಪಡೆಯಬೇಕು, ಮತ್ತು ವೈಯಕ್ತಿಕ ಆಧಾರದ ಮೇಲೆ ಊಡಿಕೆ ವ್ಯಾಪ್ತಿಯಲ್ಲಿ ಮಾರುಕಟ್ಟೆ ಪ್ರವೇಶಿಸಬೇಕು, ಈ ಮೂಲಕ ಕೃಷಿ ಸಂದರ್ಭದಲ್ಲಿ ಹೊಂದಿರುವುದಕ್ಕಿಂತ ಸಾಮಾಜಿಕವಾಗಿ ಬೇರುಬಿಟ್ಟಿರುವ ಹೆಚ್ಚಿನ ಅಪಾಯದ ಭಾರವನ್ನು ಅವರು ವೈಯಕ್ತಿಕವಾಗಿ ಹೊರುತ್ತಾರೆ. ಆದರೆ ಖಾಸಗಿ ಮತ್ತು ಸಾಮಾಜಿಕ ವಲಯದ ಸಹವರ್ತಿ ವೈಯಕ್ತೀಕರಣದೊಂದಿಗೆ ಕೃಷಿಯ ವೈಯಕ್ತೀಕರಣ ಕಂಡುಬರುವುದಿಲ್ಲ. ಗ್ರಾಹಕ ವ್ಯಾಖ್ಯಾನಿತ ಜೀವನ ಶೈಲಿಗಳನ್ನು ಅಳವಡಿಸಿಕೊಳ್ಳುವಂಥ ಹೊಸ ಬೇಡಿಕೆ ಒಳಗೊಂಡ ಸಾಮಾಜಿಕ ಕಟ್ಟುಪಾಡುಗಳು ಮತ್ತು ಹುಟ್ಟು, ಸಾವು, ಋತುಮತಿ, ಮದುವೆ ಮುಂತಾದ ಜೀವನ ಚಕ್ರದ ಆಚರಣೆಗಳು ಸೇರಿದಂತೆ ಹೆಚ್ಚುತ್ತಿರುವ ಸಾಮಾಜಿಕ ಜೀವನದ ವ್ಯಾಪಾರೀಕರಣ ರೈತನೊಬ್ಬನ ಮೇಲೆ ಬಹುಬಗೆಯಲ್ಲಿ ಅನೇಕ ಹೊರೆಗಳನ್ನು ಹೇರುತ್ತದೆ. ಬಹಳಷ್ಟು ಪ್ರಕರಣಗಳ ವರದಿಗಳಿಂದ ಎತ್ತಿ ತೋರಿಸಿದಂತೆ, ಪ್ರತಿಯೊಬ್ಬ ವ್ಯಕ್ತಿಯೂ ಈಗಾಗಲೇ ಅಸ್ತಿತ್ವದಲ್ಲಿರುವ ಮತ್ತು ಹೊಸ ಬಗೆಯ ಸಾಮೂಹಿಕ ರೂಢಿಗಳು ಮತ್ತು ಕಟ್ಟುಪಾಡುಗಳು ಪಾಲಿಸುವ ಸಾಮಾಜಿಕ ಹೊರೆ, ಅಲ್ಲದೆ ಹೊಸ ಆರ್ಥಿಕ ಒತ್ತಡ ಮತ್ತು ಅಪಾಯಗಳಂಥ ದುಪ್ಪಟ್ಟು ಹೊರೆಗಳನ್ನು ಹೊತ್ತಿದ್ದಾನೆ. ಅಂಥ ಸಾಮಾಜಿಕ ಬೇಡಿಕೆಗಳು ಉಪಭೋಗವಾದವನ್ನು ಒಳಗೊಂಡಿರುವ ಸಂಸ್ಕೃತೀಕರಣ22ದ ವ್ಯಾಪಕ ಪರಿಣಾಮಗಳು ಮತ್ತು ಬಡ ಗ್ರಾಮೀಣ ಸಮಾಜದಲ್ಲಿ ಧಾರ್ಮಿಕಾಚರಣೆಗಳನ್ನೆ ಕ್ರೋಢೀಕರಿಸಿದ ಜೀವನ ಶೈಲಿಯೊಂದಿಗೆ ಸಂಪರ್ಕ ಕಲ್ಪಿಸಿವೆ. ಏಕಕಾಲದಲ್ಲಿ 'ಜೀವನ ನಡೆವಳಿಕೆಯಲ್ಲಿ ವೈಯಕ್ತೀಕರಣ ಮತ್ತು ಜೀವನ ಸ್ವರೂಪಗಳಲ್ಲಿ ಬಹುತ್ವೀಕರಣ' (1996:191) ಇರುವೆಡೆಯಲ್ಲಿ ಈ ವೈರುಧ್ಯದ ಬಗ್ಗೆ ಬರ್ಕಿಂಗ್ ರ ಅವಲೋಕನ ಇಲ್ಲಿ ಅನುರಣಿಸುತ್ತ್ತದೆ. ಪರಂಪರೆಯ ತೀವ್ರತೆಯೊಳಗೆ ಆರ್ಥಿಕ ಆಧುನೀಕರಣವನ್ನು ಉಳಿಸಿಕೊಂಡ ವಿಶಾಲ ಸಾಂಸ್ಕೃತಿಕ ಚೌಕಟ್ಟಿನಲ್ಲಿ ವ್ಯಕ್ತಿಯೊಬ್ಬ ಆರ್ಥಿಕ ಮಟ್ಟದ ಅಪಾಯ ಮತ್ತು ಏಕಾಂಗಿತನದ ಎರಡೂ ಜಗತ್ತುಗಳ ಭಾರವನ್ನು ಹೊರುತ್ತಾನೆ. ಅಲ್ಲಿ ಆತ/ಆಕೆ ವ್ಯಕ್ತಿಯಾಗಿ ಕಾರ್ಯನಿರ್ವಹಿಸಬೇಕು, ಇನ್ನು ಸಾಮಾಜಿಕ ಒತ್ತಡಗಳಿಗೆ ಸಾಮೂಹಿಕವಾಗಿ ಪಾಲುಗೊಳ್ಳಬೇಕು, ಸಾಮಾಜಿಕ ಸಾಂಸ್ಕೃತಿಕ ಮಟ್ಟದಲ್ಲಿ ಅಪವಾದಕ್ಕೆ ಎಡೆಯಿಲ್ಲದಂತಿರಬೇಕು. ಆತ್ಮಹತ್ಯೆಯ ಹೊರದಾರಿ ತೋರುವುದು ಇಂಥ ತೀವ್ರ ಒತ್ತಡದ ಪರಿಣಾಮವಾಗಿದೆ.
ಗ್ರಾಮೀಣ ಪ್ರದೇಶದ ಪೂರ್ವಭಾವಿ ಉಪೇಕ್ಷಿತ ಸ್ಥಿತಿ
ಇಪ್ಪತ್ತನೆಯ ಶತಮಾನದ ಕೊನೆಗಾಲದಲ್ಲಿ ಭಾರತದ ರೈತಾಪಿ ಸಮಸ್ಯೆ ಮತ್ತು ಹೊಸ ಶತಮಾನದ ಆರಂಭಿಕ ಗುರುತಾಗಿ ಆವರಿಸಿರುವ ರೈತರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸ್ಥಿತಿಯಲ್ಲಿ ರೈತರು ಅಭದ್ರ ವಿಷಯಗಳಾಗಿಯೆ ಉಳಿದಿದ್ದು, ಅವರ ಹಕ್ಕು ಮತ್ತು ಸ್ಥಾನಮಾನಗಳನ್ನು ಚುನಾವಣೆಯ ಕಾಲದಲ್ಲಿ ಮಾತ್ರ ಗುರುತಿಸಿ ಪರಿಗಣಿಸಲಾಗುತ್ತದೆ. ದೇಶದ ಸಾರ್ವಜನಿಕ ವಲಯದಲ್ಲಿ ಬೆಳೆಯುತ್ತಿರುವ ರೈತಾಪಿ ಮತ್ತು ಉಪೇಕ್ಷಿತ ರೈತರ ಸಮಸ್ಯೆಗಳಿಗೆ 1991ರ ನಂತರದ ಅವಧಿ23 ಸಾಕ್ಷಿಯಾಗಿದೆ. 'ಆರ್ಥಿಕ ಬೆನ್ನೆಲುಬಾಗಿರುವ ರೈತರು' ಅಥವಾ 'ಭಾರತದ ಅಣುರೂಪವಾಗಿರುವ ಹಳ್ಳಿಗಳು' ಎಂದು ಇನ್ನೂ ಬಾಯುಪಚಾರ ಮಾಡಲಾಗುತ್ತಿದೆ. ಒಮ್ಮೆ ಅಭಿವೃದ್ಧಿಯ 'ಸಾಕಾರ' ಮತ್ತು 'ಕೃಷಿ ಪ್ರಗತಿಯ ಯಂತ್ರ' (ಲುಡೆನ್ 1992:273) ಎಂದು ಪರಿಗಣಿಸಲಾದ ದೇಶದ ಸಾಮಾಜಿಕ ಸಂವೇದನೆ ಮತ್ತು ರಾಜಕೀಯ ಆರ್ಥಿಕತೆ24ಯಲ್ಲಿ ರೈತರು ಈಗ ಪಡೆದಿರುವ ಕನಿಷ್ಟ ಸ್ಥಾನದಿಂದಾಗಿ ಮರುಕೊಳಿಸುವ ಆತ್ಮಹತ್ಯೆಗಳಿಗೆ ಸಂಪರ್ಕ ಪಡೆದಿರುವ ಸಮಸ್ಯೆಗಳನ್ನು ಸಮರ್ಪಕವಾಗಿ ಪರೀಕ್ಷಿಸುವಲ್ಲಿ ಮತ್ತು ಪರಿಸ್ಥಿತಿಯನ್ನು ಸಮಗ್ರ ರೀತಿಯಲ್ಲಿ ಪರಿಶೀಲಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಅಸಮರ್ಥವಾಗಿವೆ.
ರೈತರಿಗೆ ಸಂಬಂಧಪಟ್ಟ ಪ್ರಮುಖ ವಿಷಯಗಳು; ಸಂಪನ್ಮೂಲಗಳ ಮರುಹಂಚಿಕೆ, ಮೂಲಶಿಕ್ಷಣದ ಹಕ್ಕು, ಆರೋಗ್ಯ ಮತ್ತು ವಸತಿ, ಪ್ರತಿಫಲದಾಯಕ ಬೆಲೆಗಳು ಒದಗಿಸುವ ನೀತಿಗಳು, ಬಿಕ್ಕಟ್ಟಿನ ಸಮಯದಲ್ಲಿ ಪ್ರಭುತ್ವದ ಬೆಂಬಲ - ಇವು ಯೋಜನೆ ಅಥವಾ ಆಯವ್ಯಯ ಕಾರ್ಯಸೂಚಿಗಳಿಗೆ ಕೇಂದ್ರವಾಗಿರದೆ ಬಡತನದ ರೇಖೆ ಹೆಚ್ಚಾಗಿ ರಾಜಕೀಯವಾಗಿ ನಿರ್ಧಾರಿತವಾಗಿದೆ (ಹ್ಯಾರಿಸ್-ವೈಟ್ 2004). ಅಂಥ ಉಪೇಕ್ಷೆ ಮತ್ತು ನಿರ್ಲಕ್ಷ್ಯತೆ ಕೆಲವು ಪ್ರಕರಣಗಳಲ್ಲಿ ಘಟಿಸಿದ ಪರಿಣಾಮವಾಗಿ ಪಂಜಾಬಿನಲ್ಲಿ ಹತಾಶರಾದ ಹಳ್ಳಿಗರು ಇಡೀ ಗ್ರಾಮವನ್ನೇ ಮಾರಾಟಕ್ಕಿಡುವ ಅತಿರೇಕಕ್ಕೆ ಹೋದಂಥ ಮತ್ತು ತಮ್ಮ ಮೂತ್ರಪಿಂಡಗಳನ್ನು ಮಾರಾಟ ಮಾಡಲು ಭಾರತದ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ 'ಮಾನವ ಮಾರುಕಟ್ಟೆ' ನಡೆಸಲು ಆಮಂತ್ರಿಸಿದಂಥ ಸಂದರ್ಭಗಳಿಗೆ ಕಾರಣವಾಗಿದೆ(ಶರ್ಮಾ 2006:1). ವಿಶೇಷ ಆರ್ಥಿಕ ವಲಯಗಳ ಕಾನೂನು ಸಮ್ಮತಿ ಮತ್ತು ಅಭಿವೃದ್ಧಿ ಈಗ ವಿವಾದಾತ್ಮಕ ಚಿಹ್ನೆಯಾಗಿರುವ ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ಸಿಂಗೂರ್25ನಲ್ಲಿ ಹೊಸ ಉತ್ಪಾದನಾ ಕ್ಷೇತ್ರಗಳಿಗೆ ದಾರಿ ಮಾಡಲು ಗ್ರಾಮೀಣಪ್ರದೇಶವನ್ನು ಕೇಳಿಕೊಂಡಾಗ ಅಥವಾ ಭಾರತದ ಕೈಗಾರಿಕೀರಣದ ಎರಡನೆಯ ಅಲೆಯೆಂದು ಶೈಲೀಕೃತ ಭಾಷೆಯಲ್ಲಿ ಸೂಚಿಸುತ್ತಿರುವಾಗ ಕೃಷಿಕ ಸಮಸ್ಯೆಗಳು ಕೆಲವು ಪ್ರಕರಣಗಳಲ್ಲಿ ಮಾತ್ರ ನಿರಂತರವಾಗಿ ಸಾಗಿ ಬಂದಿವೆ. ಇವೆಲ್ಲ ರೈತರು ಈಗ 'ಪೂರ್ವಭಾವಿ ಉಪೇಕ್ಷಿತ' ಸ್ಥಿತಿಯೊಂದರ ವ್ಯಾಪ್ತಿಯಲ್ಲಿರುವುದನ್ನು ಸೂಚಿಸುತ್ತಿದ್ದು, ಅದನ್ನು ವಾಕ್ವೆಂಟ್(1996: 116) ಸಮಾಜದ ದೊಡ್ಡ ಸಮುದಾಯದಿಂದ ಗುಂಪೊಂದನ್ನು ಪ್ರತ್ಯೇಕಗೊಳಿಸಿದ ಹಾಗೆ, ಮತ್ತು ಪ್ರಭುತ್ವ ಹಾಗೂ ಮುಂಚೂಣಿ ಆರ್ಥಿಕ ಸ್ಪರ್ಧಾಳುಗಳಿಂದ ತಮ್ಮ ಅವಶ್ಯಕತೆ ಮತ್ತು ಹಕ್ಕುಗಳನ್ನು ಕಡೆಗಣಿಸಿದ ಹಾಗೆ ಎಂದು ಗುರುತಿಸುತ್ತಾರೆ.
ವಾಸ್ತವವಾಗಿ ಹಲವು ಸರಕಾರಗಳು ಈ ಬಿಕ್ಕಟ್ಟನ್ನು ರೈತರ ವೈಯಕ್ತಿಕ ದೌರ್ಬಲ್ಯದ ಗುರುತಾಗಿ ಅಥವಾ ಅವರ ಅವಲಂಬನೆಯ ಸೂಚಕವಾಗಿ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿವೆ. ಅಂಥದೊಂದು ದೃಷ್ಟಿಕೋನದ ಸಾಕ್ಷ್ಯಾಧಾರ ಕರ್ನಾಟಕ ಸರಕಾರದ ಆಧಾರ ನಿಯಮಗಳಿಂದ ತಜ್ಞರ ಕಮಿಟಿಗೆ ದೊರೆತರೂ ಅದು ರೈತರೊಳಗೆ ಹೆಚ್ಚು ಸಂಖ್ಯೆಯ ಆತ್ಮಹತ್ಯೆಗೆ ಕಾರಣವಾದ ಅಂಶಗಳನ್ನಷ್ಟೆ ತನಿಖೆ ಮಾಡದೆ ರೈತರಲ್ಲಿ ಸ್ವಾವಲಂಬನೆ ಮತ್ತು ಸ್ವಾಭಿಮಾನ ತುಂಬುವ ಕಾರ್ಯಕ್ರಮಗಳು ಅಥವಾ ಗುರುತಿಸುವ ಮತ್ತು ಶಿಫಾರಸ್ಸು ಮಾಡುವ ಕ್ರಮಗಳನ್ನು ಕೈಗೊಳ್ಳಬೇಕು (2002:2) ಎಂದು ಕೂಡ ನಿರೀಕ್ಷಿಸಿದೆ. ತೀರಾ ಇತ್ತೀಚೆಗೆ, ಮಹಾರಾಷ್ಟ್ರ ಸರಕಾರ ವಿದರ್ಭ ಪ್ರದೇಶದ ಬಿಕ್ಕಟ್ಟನ್ನು ಪರಿಹರಿಸಲು ಮತ್ತು ಆಧ್ಯಾತ್ಮಿಕ ನೆರವು ಮತ್ತು ಪುನರ್ವಸತಿ ಕೇಂದ್ರ26 ಸ್ಥಾಪಿಸಲು ಜನಪ್ರಿಯ 'ಅಪ್ಪಿಕೊ ಗುರು' ಅಮೃತಾನಂದಮಯಿ ಮತ್ತು ಇತರ ಆಧ್ಯಾತ್ಮ ನಾಯಕರ ಸಹಾಯ ಬಯಸಿದೆ. ಅಂಥ ತಂತ್ರೋಪಾಯಗಳು ಮತ್ತು ವಾಗ್ವಾದಗಳು ವಿತರಣೆ, ಸುಸ್ಥಿರ ಕೃಷಿ ಮತ್ತು ಸಹಜ ನ್ಯಾಯಕ್ಕಿಂತ ಉದ್ಯಮಶೀಲತೆ ಮತ್ತು ಉತ್ಪಾದಕತೆಗೆ ಮಹತ್ವ ನೀಡುವ ಮಾರುಕಟ್ಟೆಯ ಪಾತ್ರವನ್ನು ಮತ್ತಷ್ಟು ಕಾನೂನುಸಮ್ಮತಗೊಳಿಸುತ್ತವೆ. ನಂತರದಲ್ಲಿ ಮಾರುಕಟ್ಟೆ ಕೇಂದ್ರಿತವಾಗುತ್ತದೆ ಮತ್ತು ವೈಯಕ್ತಿಕ ಶಾಸನ ಬದ್ಧತೆ ವ್ಯಕ್ತಿಗಳ ವಿಫಲತೆಯನ್ನು ದೂಷಿಸುತ್ತದೆ. ಈ ಎಲ್ಲ ಶಕ್ತಿಗಳು ಮತ್ತು ಪ್ರಕ್ರಿಯೆಗಳು ಸಣ್ಣ ಮತ್ತು ಅತಿಸಣ್ಣ ರೈತರು27 ಒಂದುಗೂಡುವ ವಿರುದ್ಧವೂ ಇವೆ.
ಕೃಷಿ ಸಮಸ್ಯೆಗಳ ಬಗ್ಗೆ ಪ್ರಭುತ್ವ28ದ ನಿರ್ಲಕ್ಷ್ಯ ಮತ್ತು ಉದಾಸೀನತೆಯೊಂದಿಗೆ ಜನಪ್ರಿಯ ಮಾಧ್ಯಮಗಳಲ್ಲಿ ಕೃಷಿ ಸಮಸ್ಯೆಗಳ ಕಾಣದಾಗಿರುವಿಕೆಯೂ ಸಂಯೋಗಗೊಂಡಿದೆ. ಸಮಸ್ಯೆಗಳ ಗುರುತ್ವ, ಪುನರಾವರ್ತನೆ ಮತ್ತು ಪ್ರಸಾರದ ಹೊರತಾಗಿಯೂ ಮುಖ್ಯ ವಾಹಿನಿಯಲ್ಲಿರುವ ಅನೇಕ ಮಾಧ್ಯಮಗಳು ಆತ್ಮಹತ್ಯೆಗಳ ನಿರಂತರ ಸುದ್ದಿ ಮತ್ತು ವಿವರ ಒದಗಿಸಲು ನಾಚಿ ದೂರ ಹೋಗ ಬಯಸುತ್ತವೆ. 2006ರ ಏಪ್ರಿಲ್ ನಲ್ಲಿ ವಿದರ್ಭ ಪ್ರದೇಶದಲ್ಲಿ ಸಾಂಕ್ರಾಮಿಕ ಆತ್ಮಹತ್ಯೆಗಳು ಪರಮಾವಧಿಯಲ್ಲಿದ್ದಾಗ ಮಾಧ್ಯಮಗಳು ಗ್ರಾಮೀಣ ಪ್ರದೇಶಗಳಲ್ಲಿನ ತುರ್ತು ಪರಿಸ್ಥಿತಿಯನ್ನು ವರದಿ ಮಾಡುವ ಬದಲು ಮುಂಬೈಯಲ್ಲಿ ನಡೆದ ಲ್ಯಾಕ್ಮೆ ಪ್ಯಾಶನ್ ವೀಕ್ ಗೆ ಹಾಜರಾಗಲು ಆದ್ಯತೆ ನೀಡಿದರೆಂದು ವಿಮರ್ಶಕರೊಬ್ಬರು ಗುರುತಿಸಿದ್ದಾರೆ (ಅರವಿಂದ 2006). ಹೊಸ ಜಾಗತಿಕ ಸ್ಪರ್ಧೆಯ ಹಾಗೆ ಭಾರತ ಆಚರಿಸಿಕೊಳ್ಳುವ ಮತ್ತು ಮಾರಿಕೊಳ್ಳುವ ಸಮಯದಲ್ಲಿ, ಸುಂದರ ಹುಡುಗಿಯರ ಮೆರವಣಿಗೆಯೊಂದಿಗೆ ಆತ್ಮಹತ್ಯೆಯ ಪ್ರವಾಹದ ವರದಿಯನ್ನು ಮರೆಮಾಚುವುದು ಹೆಚ್ಚು ಮುಖ್ಯವಾದಂತೆ ತೋರುತ್ತದೆ.
ಈ ಸಮಸ್ಯೆಗಳ ಸುತ್ತ ರೈತರು ಸಂಘಟಿತರಾಗಲು ವಿಫಲರಾಗಿರುವುದು ಅಥವಾ ಅಸಮರ್ಥರಾಗಿರುವುದು ಮತ್ತು ತಮ್ಮ ಸುಸ್ಥಿರತೆ ಮತ್ತು ಉಳಿಯುವಿಕೆಯನ್ನು ಖಾತರಿಪಡಿಸಬಲ್ಲ ಬೇಡಿಕೆ ಮುಂದಿಟ್ಟು ತಕ್ಕ ನೀತಿಗಳನ್ನು ಪಡೆಯುವಲ್ಲಿ ವಿಫಲವಾಗಿರುವುದು ರೈತರೊಳಗಿರುವ ರಾಜಕೀಯ ಸಂಘಟನೆಯ ಸಮಸ್ಯೆಯನ್ನು ಸೂಚಿಸುತ್ತದೆ. ಕರ್ನಾಟಕ ರಾಜ್ಯ ರೈತಸಂಘ, ಶೇತ್ಕಾರಿ ಸಂಘಟಣೆ ಅಥವಾ ಭಾರತೀಯ ರೈತ ಸಂಘ (ಗಿಲ್ 2004: ಮ್ಯಾಡ್ ಸೆನ್ 2001: ಸೂರಿ 2006)ಗಳಂಥ ಜನಪ್ರಿಯ ಮತ್ತು ಪ್ರಚಾರ ಪಡೆದಿರುವ ರೈತ ಚಳುವಳಿಗಳಿಗೂ ಅಂಥ ಕುಂದುಕೊರತೆಗಳನ್ನು ಪರಿಹರಿಸುವ ಸಲುವಾಗಿ ಕೃಷಿ ನೀತಿಗೆ ಸಾಕಷ್ಟು ಬದಲಾವಣೆ ಮುಂದಿಡಲು ಮತ್ತು ಜಾರಿಗೆ ತರಲು ಸಾಧ್ಯವಾಗಿಲ್ಲ.
ಬಹಳಷ್ಟು ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ಸಂಘಟನೆ ಪ್ರಬಲ ಜಾತಿ ಅಥವಾ ಶ್ರೀಮಂತ ರೈತರ ಹಿತಾಸಕ್ತಿ ಕೇಂದ್ರಿತವಾಗಿ ಮುಂದುವರೆಯುತ್ತಿದ್ದಲ್ಲಿ, ಅದು ರೈತರ ಭಿನ್ನ ಜಾತಿ ಸಮುದಾಯಗಳನ್ನು ಗುರುತಿಸುವುದೂ ಇಲ್ಲ, ಸಣ್ಣ ಮತ್ತು ಮಧ್ಯಮ ರೈತರ ಹಿತಾಸಕ್ತಿ ಯನ್ನು ಸಾಮಾನ್ಯವಾಗಿ ಪ್ರತಿನಿಧಿಸುವುದೂ ಇಲ್ಲ. ಭಾರತೀಯ ಕಮ್ಯುನಿಷ್ಟ್ ಪಾರ್ಟಿ (ಮಾರ್ಕ್ಸಿಷ್ಟ್) ಸಂಪರ್ಕ ಹೊಂದಿದ ಅಖಿಲಭಾರತ ಕಿಸಾನ್ ಸಭಾ ಬಿಕ್ಕಟ್ಟನ್ನು ಎದುರಿಸಲು ಇತ್ತೀಚೆಗೆ ಸಮಾವೇಶಗಳ ನೇತೃತ್ವ ವಹಿಸಿದ್ದರೂ  ಗ್ರಾಮೀಣ ಪ್ರದೇಶಗಳಲ್ಲಿ ಅಂಥ ಪಕ್ಷಗಳ ಅಸ್ತಿತ್ವ ಸಾಕಷ್ಟು ಕಂಡುಬರುವುದಿಲ್ಲ. ಬ್ರಾಸ್ (1995) ಸೂಕ್ಷ್ಮವಾಗಿ ಗಮನಿಸಿ ವಿಮರ್ಶಿಸಿದ ಹಾಗೆ, ರೈತರ ದುರವಸ್ಥೆಯನ್ನು ಪರಿಗಣಿಸುವ ಅಥವಾ ಸರಿಪಡಿಸುವ ಎಡಪಂಥೀಯ ರಾಜಕೀಯ ಪಕ್ಷಗಳು, ರೈತರಲ್ಲಿ ಒಗ್ಗಟ್ಟಿಲ್ಲದಿರುವಿಕೆ ಮತ್ತು ಪ್ರಶ್ನಾರ್ಹವಾದ ವರ್ಗ ಗುರುತುಗಳಿಗಾಗಿ ಟೀಕಿಸುವ ಆಧಾರದ ಮೇಲೆ ಅವರನ್ನು ನಿರ್ಲಕ್ಷ್ಯಿಸಲು  ಮುಂದಾಗುತ್ತವೆ. ಆ ಮೂಲಕ ರೈತರು ಪ್ರಮುಖ ರಾಜಕೀಯ ಪಾತ್ರಧಾರಿಗಳು ಎಂಬುದನ್ನು ಅವು ಗಮನಿಸದೆ ಮುಂದುವರಿಯುತ್ತವೆ.
ಇಂಥ ನಿರ್ಲಕ್ಷ್ಯದ ಪರಿಣಾಮದಿಂದ ಜೀವನೋಪಾಯವಾಗಿ, ಜೀವನದ ಮಾರ್ಗವಾಗಿ ಕೈಗೊಂಡ ಕೃಷಿಯಲ್ಲಿ ಭ್ರಮನಿರಸನವಾಗಿರುವುದು ವ್ಯಾಪಕವಾಗಿದೆ. ಜೀವನದೊಂದು ಮಾರ್ಗವಾಗಿ ಹಳ್ಳಿ ಮತ್ತು ಭೂಮಿ ಮತ್ತು ರೈತರು ಪರಸ್ಪರ ಒಂದಾಗಿ ಬೆಸೆದಿರುವ ಇತ್ತೀಚಿನ ಅಭಿವ್ಯಕ್ತಿಗೂ ವಿರುದ್ಧವಾಗಿ ಹಳ್ಳಿಯಲ್ಲಿ ವಾಸಿಸುವ ಅನೇಕರು ಸಂಪೂರ್ಣವಾಗಿ ಕೃಷಿಯಿಂದ ಹೊರತಾದಂಥ ಪರ್ಯಾಯ ಜೀವನೋಪಾಯವನ್ನು ಅರಸುತ್ತಿದ್ದಾರೆೆ (ಗುಪ್ತಾ2004). ಬಹುತೇಕ ಕೃಷಿಯ ಲಾಭದಾಯಕವಲ್ಲದ ನೆಲೆ ಹಾಗೂ ನಿಷ್ಫಲತೆ, ಮತ್ತು ಹತಾಶೆ ಮೂಡಿಸಿದ ದಟ್ಟಭಾವ ಇವೆರಡಕ್ಕೂ ಕೃಷಿ ಮತ್ತು ಜಾತಿ ಆಧಾರಿತ ಕಸುಬುಗಳ ಹೊರಗಿರಬೇಕಾದ ಅಗತ್ಯತೆ ಸಂಪರ್ಕವಾಗಿದೆ. ಈಗ  ಈ ಕೃತ್ಯ ವ್ಯಾಪಕವಾಗಿದ್ದು, ಇತರರನ್ನು ಅನುಕರಿಸುವ ಮೂಲಕವೋ ತಮ್ಮ ನಿರಾಶೆ ಮತ್ತು ಹತಾಶೆಯ ಸ್ಥಿತಿಯಲ್ಲಿ ಇದು ಅರ್ಥಪೂರ್ಣ ಕೃತ್ಯವೆಂದೋ ಆತ್ಮಹತ್ಯೆಗಳು ಕೃಷಿಯಲ್ಲಿ ಭ್ರಮನಿರಸನಗೊಂಡವರ ಅಕಾರಾದಿಯಲ್ಲಿವೆ.
ಆತ್ಮಹತ್ಯೆಯ ಮಹತ್ವ
ರೈತರ ಆರ್ಥಿಕ ಮತ್ತು ಸಾಮಾಜಿಕ ಜಗತ್ತಿನ ಬದಲಾವಣೆಗೆ ಆತ್ಮಹತ್ಯೆಗಳು ಕೇವಲ ಪ್ರತಿಕ್ರಿಯೆ ಮಾತ್ರವಾಗಿರದೆ ಉಪೇಕ್ಷಿತ ಸ್ಥಿತಿ ಮತ್ತು ಅಂತಿಮವಾಗಿ ದುರಂತ ಸಂಭವಿಸಲು ಇರುವ ಕಾರಣಗಳಂಥ ಬಹುಬಗೆಯ ಅಪಾಯಗಳಿಂದ ಈಗ ಸಂಯೋಜನೆಗೊಂಡಿರುವ ಪಟ್ಟಭದ್ರ ಕೃಷಿಯ ಸಂರಚನೆಯೇ ದುಷ್ಟತನದಿಂದ ಕೂಡಿದೆ. ಬಹುಕಾಲದಿಂದ ಬೇರುಬಿಟ್ಟಿರುವ ಜಾತಿ ವ್ಯವಸ್ಥೆ ಮತ್ತು ಅದರ ಸಾಮಾಜಿಕ ಮರು ಉತ್ಪಾದನೆಯ ಮೂಲಾಧಾರವಾದ ಕೃಷಿ ಈಗ ಆಧುನಿಕ ಆರ್ಥಿಕತೆಯ ಕ್ಷೇತ್ರವಾಗಿದ್ದು, ತನ್ನೊಂದಿಗೆ ಪಾತ್ರಧಾರಿಗಳ ವೈಯಕ್ತೀಕರಣ, ಹೊಸ ತಂತ್ರಜ್ಞಾನಗಳ ಪ್ರವೇಶ, ಮಾರುಕಟ್ಟೀಕರಣ, ಅನ್ಯ ಜ್ಞಾನಗಳನ್ನೂ ಮುಂಚೂಣಿಗೆ ತರುತ್ತಿದೆ. ವ್ಯವಸ್ಥೆಯಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಉಪೇಕ್ಷಿತರಾದವರಿಗೆ ಹೊಸ ಕೃಷಿಯ ಆಧುನಿಕ ದಾಳಗಳು ಹೊಸ ಅಪಾಯಗಳಿಗೆ ತಮ್ಮನ್ನು ತೆರೆದುಕೊಳ್ಳುವಂತೆ ಪ್ರೇರೇಪಿಸುತ್ತವೆ. ಆದರೆ ವ್ಯಕ್ತಿಗತ ಆರ್ಥಿಕ ಪಾತ್ರಧಾರಿಗಳು ಅವನ ಅಥವಾ ಅವಳ ಸಮಾಜದ ಸಾಮಾಜಿಕ ಮತ್ತು ಸಾಂಸ್ಕೃತಿಕ ನೇಯ್ಗೆಯೊಳಗೆ ಬೇರುಬಿಟ್ಟು ಉಳಿದಿರುವುದರಿಂದ ಅದರ ಕಟ್ಟಳೆಗಳು ಮತ್ತು ಗೌರವದ ಮೌಲ್ಯಗಳು, ಅವಮಾನ ಮತ್ತು ಜವಾಬ್ದಾರಿಗಳಿಂದ ಬಂಧಿತರಾಗಿರುತ್ತಾರೆ. ಎರಡು ವಿಭಿನ್ನ ಗುಂಪಿನ ಸಾಂಸ್ಕೃತಿಕ ತರ್ಕಗಳು ಕಾರ್ಯನಿರ್ವಹಿಸಿದ ಪರಿಣಾಮವೇನೆಂದರೆ, ಪ್ರತಿಯೊಬ್ಬ ವ್ಯಕ್ತಿಗೆ ಅವನ ಅಥವಾ ಅವಳ ಸ್ವಂತ ಆರ್ಥಿಕ ಪ್ರಯೋಜನ ಒದಗಿಸುವ ಹೊಸ ಆರ್ಥಿಕ ವ್ಯವಸ್ಥೆ ಮತ್ತು ಅದರ ಸೂತ್ರಗಳಲ್ಲಿ ಮತ್ತು ಆದ್ಯತೆಗಳಲ್ಲಿ ಪಾಲುಗೊಳ್ಳಲು ಸಾಮಾಜಿಕ ಜಗತ್ತಿನ ಸಂಸ್ಕೃತಿಕ ಒತ್ತಡ ಅವರನ್ನು ಬಲವಂತ ಪಡಿಸುತ್ತದೆ.
ಜಾನ್ ಬರ್ಗರ್ ತಮ್ಮ ಶ್ರೇಷ್ಟ ಕೃತಿ ಪಿಗ್ ಅರ್ತ್ ನ ಮೂಲ ಪರಿಚಯದಲ್ಲಿ ಜಗತ್ತಿನ ರೈತ ಸಮುದಾಯದ ವಿನಾಶ ಕುರಿತು ಹರಿತವಾದ ವಿಮರ್ಶೆಯನ್ನು ಒದಗಿಸಿದ್ದಾರೆ, ಮತ್ತು ಹೇಗೆ ಅವನ(ರೈತನ) ಜೀವನ ಪರಿಸ್ಥಿತಿ, ಅವನ ಶೋಷಣೆಯ ಮಟ್ಟ ಮತ್ತು ಅವನ ಹತಾಶೆಯ ನರಳುವಿಕೆ ಇರಬಹುದು; ಆದರೆ ಬದುಕುಳಿಯುವ ತನ್ನ ಇಚ್ಛೆಯನ್ನು ನಿಖರಗೊಳಿಸುವ, ತಾನು ಬಲ್ಲ ಪ್ರತಿಯೊಂದಕ್ಕೂ ಅರ್ಥ ನೀಡುವ ಶಕ್ತಿ ಕಾಣೆಯಾಗಿರುವ ಬಗ್ಗೆ ಅವನು ಆಲೋಚಿಸಲಾರದವನಾಗಿದ್ದಾನೆ(1979/1992:ಥಥ) ಎಂದು ಎತ್ತಿ ತೋರಿದ್ದಾರೆ. ಭಾರತದ ರೈತರ ಬಹುಪಾಲು ಬಿಕ್ಕಟ್ಟು, ಅವರು ತಿಳಿದ 'ಪ್ರತಿಯೊಂದಕ್ಕೂ ಅರ್ಥ ನೀಡುವ ಶಕ್ತಿ ಕಣ್ಮರೆಯಾಗಿರುವುದು' ಎಂದೇ ನಿಖರವಾಗಿ ತೋರುತ್ತದೆ. ಅತಿಸಣ್ಣ ರೈತರ ನಡುವೆ ಪೂರ್ವ ಸಿದ್ಧತೆಯ ಕೊರತೆ, ಗೊಂದಲ ಮತ್ತು ಅರ್ಥಗಳು ನಷ್ಟವಾಗಿರುವ ಪರಿಸ್ಥಿತಿಯಲ್ಲಿ ಸದ್ಯದ ಬಿಕ್ಕಟ್ಟು ತೀವ್ರ ಕಟ್ಟುಪಾಡಿಲ್ಲದಂಥ ನಿಜವಾದ ಡರ್ಕ್ ಮೈನ್ ರೂಪದಲ್ಲಿ ಪ್ರತಿನಿಧಿಸುತ್ತದೆ. ಬಲಿಪಶುಗಳಾದವರಲ್ಲಿ ಹೆಚ್ಚಿನವರು ತಮ್ಮ ಜೀವನ ಕೊನೆಗೊಳಿಸಲು ಕೀಟನಾಶಕಗಳ ಸೇವನೆಯನ್ನು ಆಯ್ಕೆಮಾಡಿಕೊಳ್ಳುವ ಮೂಲಕ ಖಿನ್ನತೆಯ ಪ್ರಮುಖ ಮೂಲವನ್ನು ಸಂಕೇತಿಸಿದ್ದಾರೆ. ಸ್ವತಹ ಕೃಷಿ ಮತ್ತು ಅದರ ಹೊಸ ಊಡಿಕೆಗಳು ವಿನಾಶದ ಸ್ಥಿತಿಗೆ ಕಾರಣವಾದ ಅಂಶಗಳೊಂದಿಗೆ ತೊಡಗಿಸಿಕೊಂಡಿವೆ.  ಸಂಪಾದಿಸುವ ಏಕೈಕ ವ್ಯಕ್ತಿಯನ್ನು ಆತ್ಮಹತ್ಯೆಯಲ್ಲಿ ಕಳೆದುಕೊಂಡ ಕುಟುಂಬದ ಮಹಿಳೆಯೊಬ್ಬಳು ನನ್ನ ಬಳಿ ಹೇಳಿಕೊಂಡ ಹಾಗೆ ಕೃಷಿ ನಮ್ಮ ಕುತ್ತಿಗೆಗೆ ಬಿದ್ದ ಉರುಲಾಗಿದೆ.
ತಮ್ಮ ಅನಾಮಿಕ ಕುಟುಂಬದೊಳಗೆ ಹೆಚ್ಚಾಗಿ ನಡೆಯುವ ವೈಯಕ್ತಿಕ ಕೃತ್ಯಗಳಿಂದ ಪ್ರಚಲಿತ ಪ್ರವೃತ್ತಿಗಳ ವರೆಗೆ, ಪ್ರತಿಫಲದಾಯಕ ಬೆಲೆ ಮತ್ತು ಬೆಂಬಲ ಬೇಡಿ ಸರಕಾರವನ್ನು ಸಂಬೋಧಿಸುವ ಆತ್ಮಹತ್ಯೆ ಟಿಪ್ಪಣಿಗಳಲ್ಲಿ, ಆತ್ಮಹತ್ಯೆಗಳ ಬದಲಾಗುವ ಸ್ವರೂಪಗಳು ಈ ಪ್ರವೃತ್ತಿಗೆ ಹೊಸ ತಿರುವು ನೀಡುವ ಪ್ರತಿನಿಧಿಗಳಾಗಿವೆ. ಆತ್ಮಹತ್ಯೆಗಳ ಅಳವಡಿಕೆ ಹತಾಶೆಯ ಕೊನೆಯ ಕೃತ್ಯದ ಹಾಗೆ ರಾಜಕೀಯ ದನಿಯಲ್ಲಿ ಮಾತನಾಡುತ್ತವೆ. ಆತ್ಮಹತ್ಯೆಗಳು ಖಾಸಗಿ ಮತ್ತು ಸಾರ್ವಜನಿಕ ಕೃತ್ಯಗಳಾಗಿ ಸಾಂಕ್ರಮಿಕ ಪ್ರಮಾಣ ಪಡೆಯುವಲ್ಲಿ ಸಣ್ಣ ಮತ್ತು ಉಪೇಕ್ಷಿತ ರೈತರ ತೀವ್ರ ಖಿನ್ನತೆಯ ಕಡೆ ಗಮನ ಸೆಳೆಯಬಯಸುತ್ತವೆ. ಇಂಥ ಪ್ರವೃತ್ತಿ ಮುಂದುವರಿದಲ್ಲಿ ಭಾರತವನ್ನು ಒಂದು ಕೃಷಿಯೋತ್ತರ ರಾಷ್ಟ್ರವನ್ನಾಗಿ ಮಾಡಲು 'ಬೃಹತ್ ರೂಪಾಂತರ'ದ ಅನಿವಾರ್ಯ ಭಾಗವಾಗಿ ಕಾಣುವಂತೆ ಮತ್ತು ವಿಳಾಸವಿಲ್ಲದಂತೆ ಮಾಡಬೇಕು. ನಂತರ ಬಹುಶಹ ಎರಿಕ್ ಹೋಬ್ ಸ್ಟಾನ್ (1994) ಹೇಳಿದ ಹಾಗೆ ರೈತರ ಕಣ್ಮರೆಯಾಗುವಿಕೆ ಇಪ್ಪತ್ತನೆ ಶತಮಾನದ ಅತ್ಯಂತ ಪ್ರಮುಖ ಬದಲಾವಣೆಯಾಗಿ, ಇಪ್ಪತ್ತೊಂದನೆಯ ಶತಮಾನದಲ್ಲಿ ಕೃಷಿಯ ಅವಸಾನ ತನ್ನ ಅಸಂಖ್ಯಾತ ರೂಪದಲ್ಲಿ ಆರಂಭವಾಗಿ ಭಾರತವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳುವುದು. ಸಮರ್ಥಿಸಲಾಗದ ಉತ್ಪಾದನೆಯ ಮಾದರಿಯೊಂದು ಬೇರುಬಿಟ್ಟಿದ್ದು, ಅದರಲ್ಲಿ ಕೃಷಿಯ ಪ್ರಮುಖ ಚಿಹ್ನೆಗಳು ಮತ್ತು ಅರ್ಥಗಳು ಅಲ್ಲದೆ ಸ್ವತಹ ಕೃಷಿ ಭೂಮಿ ವೇಗವಾಗಿ ಬದಲಾಗುತ್ತಿದೆ. ಅದರಲ್ಲಿ ಪ್ರಭುತ್ವ ಸಂಬಂಧ ಪಡದ  ಪಾತ್ರಧಾರಿಯಾಗಿ ದೂರ ಉಳಿದಿದೆ. ನಗರ ಪರಿವರ್ತನೆಯೆಡೆಗೆ ಹೆಜ್ಜೆಯಿಡುವಾಗ ರಾಷ್ಟ್ರ ಬಹುಶಹ ಉಪೇಕ್ಷಿತ ಮತ್ತು ನಿರ್ಲಕ್ಷಿತ ಗ್ರಾಮೀಣ ಜನ ಸಮುದಾಯಗಳಿಗೆ ಕೂಲಿ ಒದಗಿಸುತ್ತದೆ. ಇದರಲ್ಲಿ ಹೆಚ್ಚಾಗಿ ರೈತರು ಗೌರವ ಪಡೆಯದವರೂ ನೆನಪಿಗೆ ಬಾರದವರೂ ಆಗಿರುತ್ತಾರೆ.

ಆಕರ ಗ್ರಂಥಗಳು
ಅರವಿಂದ, 2006 ಇನ್ ಇಂಡಿಯನ್ ರಿಚೆಸ್ಟ್ ಸ್ಟೇಟ್, ಸುಸೈಡ್ಸ್ ಅಂಡ್ ಸ್ಟಾರ್ವೇಶನ್ ಸ್ಟಾಲ್ಕ್ದ ಕಂಟ್ಟಿ ಸ್ಕೊಡ್, ಪೀಪಲ್ಸ್, ಮಾಚ್ ಸಂಪುಟ 7 (5)
ಅರೋರ ಜಿ.ಎಸ್ 2004 'ಕೋರ್ ಇಶ್ಯೂಸ್ ಇನ್ ಅಗ್ರೇರಿಯನ್ ಎಕನಾಮಿ ಅಂಡ್ ಸೊಸೈಟಿ ಆಫ್ ಕನರ್ಾಟಕ' ಇನ್ ಆರ್ ಚಾಮಗಾರ್ಟನರ್ ಆರ್ ಹೋಗಾರ್, ಇನ್ಸರ್ಚ ಆಫ್ ಸಸ್ಟ್ಯೆನಬಲ್ ಲಿವ್ಲಿಹುಡ್ ಸಿಸ್ಟಮ್: ಮ್ಯಾನೇಜಿಂಗ್ ದಿಸೋರ್ಸಸ್ ಅಂಡ್ ಚೇಂಜ್, ನೈಡೆಲ್ಲಿ, ಸೇಜ್ ಪಬ್ಲಿಕೇಶನ್ಸ್.
ಬ್ಯಾಟರ್ ಬುರಿ ಎಸ್.ಪಿ.ಪಿ. 1996 ಪ್ಲಾನರ್ಸ್ ಆರ್ ಪರ್ಪಾರ್ಮರ್ಸ್? ಎಫ್ಲೆಕ್ಷನ್ಸ್ ಆನ್ ಇಂಡೋಜೀನಿಯಸ್ ಪ್ರೊ ಲ್ಯಾಡ್ ಪಾಮರ್ಿಂಗ್ ಇನ್ ನಾರ್ತರನ್ ಬುಕರ್ಿನ್ ಪ್ಯಾಸೊ, ಅಗ್ರಿಕಲ್ಚರ್ ಅಂಡ್ ಹ್ಯೂಮಾನ್ ವ್ಯಾಲ್ಯೂಸ್, ಸಂಪುಟ 13 (3)
ಬೀಕ್ ಅಲ್ರಿಚ್ ಅಂಡ್ ಎಲಜಿಬತ್ ಬೀಕ್-ಜೆರನಿಷಿಮ್ 2001 ಇಂಡಿವಿಜುವಲೈಜೇಷನ್: ಇನ್ಸ್ಟಿಟ್ಯೂಶನ್ಲೈಜೇಶನ್, ಇಂಡಿವಿಜುವಲಿಜಂ ಅಂಡ್ ಇಟ್ಸ್ ಸೋಷಿಯಲ್ ಅಂಡ್ ಪೊಲಿಟಿಕಲ್ ಕಾನ್ಸೆಕ್ವೆನ್ಸ್, ಲಂಡನ್, ಸೇಜ್.
ಬಳ್ಳಾ ಜಿ.ಎಸ್. 2007, ಚೇಂಜಿಂಗ್ ಅಗ್ರೇರಿಮಾನ್ ಸ್ಟ್ರಕ್ಚರ್ ಇನ್ ಇಂಡಿಯಾ: 1953-54 ರಿಂದ 2003-ಇನ್ಕ್ರೀಜಿಂಗ್ ಮಾಜರ್ಿನಲೈಜೇಶನ್, ಪಿ.ಎ.ಎಸ್. ಎಸ್.ಪಿ ಕ್ವಾರ್ಟರಲಿ, ಸಂ 25 (4)
ಬರ್ಜರ ಜಾನ್, 1979/1992 ಪಿಗ್ ಅತರ್್, ನ್ಯೂಯಾಕರ್್ ವಿಂಟಗೆ ಇಂಟರ್ ನ್ಯಾಷನಲ್
ಬಕರ್ಿಂಗ್ ಹೆಲ್ಮತ್ 1996 ಸಾಲಿಡಕಿ ಇಂಡಿವಿಜುವಲಿಜಂ; ದಮಾರಲ್ ಇಂಪ್ಯಾಕ್ಟ್ ಆಫ್ ಕಲ್ಚರಲ್ ಮಾರ್ಡನೈಜೇಷನ್, ಇನ್ ಲೇಟ್ ಮಾರ್ಡನಟಿ; ಇನ್ ಸ್ಕಾಟ್ ಲ್ಯಾಷ್ ಅಂಡ್ ಬ್ರೋನಿಷ್ಲಾ ಸ್ಜೆರ್ಸ್ಜಿಂಗ್ಸ್ಕಿ, ರಿಸ್ಕ್ ಎನ್ವಿರಾನ್ಮೆಂಟ್ ಅಂಡ್ ಮಾಡನರ್ಿಟಿ; ಟುವಡರ್್ ನ್ಯೂ ವಿಕಲಾಜಿ, ಲಂಡನ್; ಸೇಜ್
ಬೋಹೆಮ್ ಕ್ರಿಶ್ಚಿಯನ್, 2003, ದಸೋಷಿಯತ್ ಲೈಪ್ ಆಪ್ ಫೀಲ್ಡ್ಸ್; ಲೇಬರ ಮಾಕರ್ೆಟ್ ಅಂಡ್ ಅಗ್ರೇರಿಮನ್ ಬೇಂಜ್ ಇನ್ ಲೆಸೋತೊ; ಪೈಡುಸಿಸ್-ಜರ್ನಲ್ ಫಾರ್ ಇಂಟರ್ ಡಿಸಿಪ್ಲಿನರಿ ಅಂಡ್ ಕ್ರಾಸ್ಕಲ್ಚರಲ್ ಸ್ಟಡಿಸ್. ಸಂಪುಟ-3
ಬ್ರಾಸ್ ಟಾಂ 1995, ಇಂಟ್ರೋಡಕ್ಷನ್; ದ ನ್ಯೂ ಫಾರರ್ಮರ್ಸ್ ಮುಮೆಂಟ್ ಇನ್ ಇಂಡಿಯಾ, ಇನ್ ಟ್ರಾಂ ಬಾಸ್, ನ್ಯೂಫಾರ್ಮರ್ಸ್ ಮುಮೆಂಟ್ ಇನ್ ಇಂಡಿಯಾ ಎಸ್ಯೆಕ್ಸ್; ಪ್ರಾಂಕ್ ರೌಸ್ ಅಂಡ್ಕೋ.
ಕ್ರಿಶ್ಚಿಯನ್ ಏಡ್ 2005,ದ ಡ್ಯಾಮೇಜ್ ಡನ್; ಡೆತ್ ಅಂಡ್ ಡೊಗ್ಮ್ ಡೌನ್ಲೋಡೆಎ ಫ್ರಮ್ ತಿತಿತಿ, ಕ್ರಿಶ್ಚಿಮಾನ್ ಏಡ್. ಆರ್ಗ್. ಯು.ಕೆ/ ಇನ್ಡೆತ್/505 ಕವೀಕ್.
ಸಿಟಿಜನ್ಸ್ ರಿಪೋಟರ್್ 1998, ಗ್ಯಾದಲಿಂಗ್ ಅಗ್ರೇರಿಯನ್ ಕ್ರೈಸಿಸ್; ಫಾರ್ಮರ್ಸ್ ಸುಸೈಡ್ಸ್ ಇನ್ ವಾರಂಗಲ್ (ಎ.ಪಿ) ಅನ್ಪಬ್ಲಿಷ್ಡ್ ರಿಪೋಟರ್್.
ಕಮಿಷನ್ ಆನ್ ಪಾರ್ಮರ್ಸ್ ವೆಲ್ಫೇರ್ 2005, ರಿಪೋಟರ್್ ಸಬ್ಮಿಟೆಡ್ ಟು ದ ಗೌವರ್ನಮೆಂಟ್ ಆಪ್ ಆಂಧ್ರಪ್ರದೇಶ ಹೈದ್ರಾಬಾದ್.
ದೇವ್ಮಹೇಂದ್ರ 2004, ಹೌಟು ಮೇಕ್ ರೂರಲ್ ಇಂಡಿಯಾ ಶೈನ್, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, ಸಂಪುಟ 34 (40)
ಫಾರ್ಮರ್ಸ್ ಕಮಿಷನ್ ಆಪ್ ಎಕ್ಸಫಟರ್್ ಅಂಡ್ ವ್ಯವಸಾಯ ರಂಗ ಪರಿಕ್ಷಣ 2002, ರಿಪೋಟರ್್ ಆಪ್ ದಫಾರ್ಮರ್ಸ್ ಕಮಿಷನ್ ಆಪ್ ಎಕ್ಸ್ಫಟರ್್ ಆನ್ ಅಗ್ರಿಕಲ್ಚರ್ ಇನ್ ಆಂಧ್ರಪ್ರದೇಶ, ಹೈದ್ರಾಬಾದ್, ನವ್ಯಾ ಪ್ರಿಂಟರ್ಸ್.
ಘೋಷ್ ಜಯತಿ 2004,ದ ರೂರಲ್ ಗ್ಲೂಮ್, ಫ್ರಂಟ್ತೈನ್. ಖಸಡಂಬರ್ 3.
ಗೌವರ್ನಮೆಂಟ್ ಆಪ್ ಕನರ್ಾಟಕ 2002, ಫರ್ಮರ್ಸ್ ಸುಸೈಡ್ ಇನ್ ಕನರ್ಾಟಕ; ಎ ಸೈಂಟಿಫಿಕ್ ಅನಾಲಿಸಿಸ್ ಬೆಂಗಳೂರು ಆಫೀಸ್ ಆಫ್ ಏಕ್ಸ್ಫಟರ್್ ಕಮಿಟಿ ಫಾರ್ ಸ್ಟಡಿ ಆನ್ ಪಾರ್ಮರ್ಸ್ ಸುಸೈಡ್.
ಗುಪ್ತ ಅಖಿಲ್ 1999, ಪೋಸ್ಟ್ಕಲವಿಯಲ್ ಡೆವಲಪ್ಮೆಂಟ್ಸ್ ಅಗ್ರಿಕಲ್ಚರ್ ಇನ್ ದ ಮೇಕಿಂಗ್ ಆಪ್ ಮಾರ್ಡನ್ ಇಂಡಿಯಾ, ನ್ಯೂಡೆಲ್ಲಿ ಆಕ್ಸ್ಫಡರ್್ ಯುನಿವೆಸರ್ಿಟಿ ಪ್ರೆಸ್.
ಹರೀಷ್ ವೈಟ್ ಬಾರ್ಬರ 2004, ರೂರಲ್ ಇಂಡಿಯಾ ಪೇಸಿಂಗ್ ಟ್ವೆಂಟಿ ಫಸ್ಟ್ ಸೆಂಚುರಿ, ಎಸ್ಯೇಸ್ ಆನ್ ಲಾಂಗ್ ಟರ್ಮ ವಿಲೇಜ್. ಚೇಂಜ್ ಅಂಡ್ ರೀಸೆಂಟ್ ಡೆವಲಪ್ಮೆಂಟ್ ಪಾಲಿಸಿ ಲಂಡನ್; ಆಂಥೆಮ್ ಪ್ರಸ್.
ಹಿಂದೂ ದ 2006, ಪೊಲೀಸ್ ತ್ವಾಟರ್್ ಸುಸೈಡ್ ಬಿಡ್ ಬೈ ಪೋರ್ ಫಾರ್ಮರ್ಸ್ ಇನ್ ಮೈಸೂರು, ಆಗಷ್ಟ್ 18.
    ಹೋಬ್ಸ್ಟಾನ್, ಎರಿಕ್, 1994 ದ ಏಜ್ ಆಪ್ ಎಕ್ಸ್ಟ್ರೀಮ್ಸ್; ಪಂಥೆಯಾನ್ ಬುಕ್ಸ್; ನ್ಯೂಯಾಕರ್್.
     ಹಡ್ಸನ್ ಮಾಟರ್ಿನ್ 2002, ಆನ್ ದ ಡೆಡ್ ಆಪ್ ವಲ್ಡರ್್ ಹಿಸ್ಟರಿ; ರೇಸ್ ಅಂಡ್ ಕ್ಲಾಸ್, ಸಂಪುಟ 43 (4)
    ಇನ್ಸ್ಟುಟ್ಯೂಟ್ ಫಾರ್ ಡೆವಲಪ್ಮೆಂಟ್ ಕಮ್ಯೂನಿಕೇಶನ್, 1998, ಸುಸೈಡ್ಸ್ ಇನ್ ಪಂಜಾಬ್ ಚಂಡಿಗಡ್, ಹಿಮಾಲಯ ಪ್ರೆಸ್.
    ಐಯ್ಯಾಕ್ ಗೋಪಾಲ್ ಅಂಡ ಎಂ.ಎಸ್ ಮಣಿಕ 2000, ಇನ್ಡೆಬಿಟ್ನೆಸ್, ಇಂಪವರಿಷ್ಮೆಂಟ್ ಅಂಡ್ ಸುಸೈಡ್ಸ್ ಇನ್ ರೂರಲ್ ಪಂಜಾಬ್, ಡೆಲ್ಲಿ, ಇಂಡಿಯನ್ ಪಬಿಷರ್ಸ್, ಡಿಸ್ಟ್ರಿಬ್ಯೂಟರ್ಸ್ ಜೋದಕ ಸುರಿಂದರ್, 2005, ಬಿಯಾಂಡ್ ಕ್ರೈಸಿಸ್ ರಿಲೆಕಿಂಗ್ ಕೌಂಟೆಪರರಿ ಪಂಜಾಬ್ ಅಗ್ರಿಕಲ್ಚರ್, ವಕರ್ಿಂಗ್ ಪೇಪರ್, 4 ಮೇ ಗ್ಯಾಪ್ಸ್ ಸೀರೀಸ್, ಹೈದಾಬಾದ್, ಸೆಸ್.
    ಲಡ್ಡನ್ ಡಾವಿಡ್ 1992, ಇಂಡಿಯಾಸ್ ಡೆವಲಪ್ಮೆಂಟ್ ರಿಜಿಮಿ ಇನ್ ನಿಕೋಲಸ್ ಡಿಕ್ಸ್ ಕಲೋನಲಿಜಂ ಅಂಡ್ ಕಲ್ಚರ್; ಆನ್ ಅಬರ್ಾರ್; ಯೂನಿವಸರ್ಿಟಿ ಪ್ರಸ್
    ಮಿಶ್ರ ಶ್ರೀಜಿತ್, 2006 ಸುಸೈಡ್ಸ್ ಆಪ್ ಪಾರ್ಮರ್ಸ್ ಇನ್ ಮಹಾರಾಷ್ಟ್ರ-ಮುಂಬೈ, ಇಂದಿರಾಗಾಂಧಿ ಇನ್ಸ್ಟಿಟ್ಯೂಟ್ ಆಪ್ ಡೆವಲಪ್ಮೆಂಟ್ ರಿಸಚರ್್ (ಐ.ಜಿ.ಐಡಿ.ಆರ್).
    ಮೊಹಂತಿ ಬಿ.ಬಿ 2005, ವಿ ಆರ್ ಲೈಕ್ ದ ಲಿವಿಂಗ್ ಡೆಡ್; ಫಾರ್ಮರ್ ಸುಸೈಡ್ಸ್ ಇನ್ ಮಹಾರಾಷ್ಟ್ರ, ವೆಸ್ಟ್ರನ್ ಇಂಡಿಯಾ ಜರ್ನಲ್ ಆಫ್ ಪಿ ಜಂಟ್ ಸ್ಟಡೀಸ್. ಸಂಪುಟ 32 (2)
    ನ್ಯಾಷನಲ್ ಸ್ಯಾಂಪಲ್ ಸವರ್ೆ ಆರ್ಗನೈಜೇಷನ್ಸ್ 2005, ಸಿಚುವೇಶನ್ ಅಸೆಸಮೆಂಟ್ ಸವರ್ೇ ಆಪ್ ಪಾರ್ಮರ್ಸ್, ರಿಪೋರ್ಟ ನಂ. 496,499 ನೈಡೆಲ್ಲಿ ಮಿನಿಸ್ಟ್ರಿ ಆಪ್ ಸ್ಟ್ಯಾಟಿಸ್ಟಿಕ್ಸ್ ಅಂಡ್ ಪ್ರೋಗ್ರಾಂ ಇಂಪ್ಲಿ ಮೆಂಟೇಶನ್.
    ನ್ಯಾಷನಲ್ ಶ್ಯಾಂಪಲ್ ಸವರ್ೇ ಆರ್ಗನೈಜೇಶನ್ 2005, ರೂರಲ್ ಲೇಬರ್ ಎನ್ಕ್ವೈರಿ ರಿಪೋಟರ್್ ಆನ್ ಇನ್ಡೆಟೆಡ್ನೆಸ್ ಅಮಂಗ್ ರೂರಲ್ ಲೆಂಬರ್ ಹೌಸ್ಹೋಲ್ಡ್ಸ್, 55 ರೌಂಡ್ 1999-2000, ನ್ಯೂಡೆಲ್ಲಿ ಮಿನಿಷ್ಟ್ರಿ ಆಪ್ ಸ್ಟ್ಯಾಟ್ಸ್ಟಿಕ್ಸ್ ಅಂಡ್ ಪ್ರೋಗ್ರಾಂ ಇಂಪ್ಲಿ ಮೆಂಟೇಶನ್.
    ಪಾಟ್ನಾಯಕ್ ಎತ್ಸ್, 2006 ಆನ್ ಬೀಜಿಂಗ್ ದ ಮಾಕರ್ೆಟ್; ಗ್ಲೋಬಲ್ ಕ್ಯಾಪಿಟಿಲಿಸಂ, ಡಿಪ್ಲೇಶನ್ ಅಂಡ್ ಅಗ್ರೇರಿಯನ್ ಕ್ರೈಸಿಸ್ ಇನ್ ಡೆವಲಪಿಂಗ ಕಂಟ್ರೀಸ್, ಇನ್ ಮೆರಿಜೋನಟ್ ಆಲ್, ಕಂಟೆಸ್ಟಡ್ ಟ್ರಾಸ್ ಫರ್ಮೇಶನ್ಸ್, ಟೇಜಿಂಗ್ ಎಕನಾಮಿಕ್ಸ ಅಂಡ್ ಐಡೆಂಟಿಟೀಸ್ ಇನ್ ಕೌಂಟೆಪರರಿಇಂಡಿಯಾ ನ್ಯೂಡೆಲ್ಲಿ ತುಲಿಕಾ ಪ್ರಸ್.
    ಪಾಟ್ನಾಯಕ್ ಎತ್ಸ್,2004 ಎಕ್ಟ್ರನಾಲ್ ಟ್ರೇಡ್, ಡೊಮೆಸ್ಟಿಕ್ ಎಂಪ್ಲಾಯ್ಮೆಂಟ್, ಅಂಡೆ ಪುಡ್ ಸೆಕ್ಯುರಿಟಿ ರೀಸೆಂಟ್ ಔಟ್ಕಮ್ಸ್ ಆಪ್ ನಿಯೋಲಿಬರಾಲ್ ಎಕನಾಮಿಕ್ ರಿಫಮ್ರ್ಸ, ಆನ್ ಪಬ್ಲಿಸ್ಡ್ ಪೇಪರ ಪ್ರಜೆಂಟೆಡ್ ಅಟ್ ದಿ ಕಾನ್ವಂಟ್ಸ್ ಆನ್ ದ ಕೊಶ್ಚನ್ ಆಪ್ ಏಷ್ಯಾ ಇನ್ ದ ನ್ಯೂ ಗೋಬಲ್ ಆರ್ಡರ್, ಡುಕೆ ಯೂನಿವಸರ್ಿಟಿ.
    ರಾಣ ಆರ್.ಪಿ. 2006, ವಾಸ್ದೇರ ಆನ್ ಅಗ್ರೇರಿಯನ್ ಕ್ರೈಸಿಸ್ ಇನ್ ಮೊಗಲ್ ನಾತರ್್ಇಂಡಿಯಾ ಡ್ಯೂರಿಂಗ್ ದ ಲೇಟ್ಸೆವೆಂಟೇನ್ತ್ ಅಂಡ್ ಅಲರ್ಿ ಎಟೇನ್ತ್ ಸೆಂಚುರಿ, ಸೋಶಿಯಲ್ ಸೈನ್ಟಿಸ್ಟ್, ಸಂಪುಟ 34 (1-12)
    ರಾವ್. ವಿ.ಎಂ 2001, ಗ್ರೋತ್ ಇನ್ ದ ಕಂಟೆಸ್ಸ್ ಆಪ್ ಅಂಡರ್ ಡೆವಲಪ್ಮೆಂಟ್, ಇನ್ ಕೆ.ಎಸ್. ದಿಂಡ್ಸ್ ಅಂಡ್ ಅಂಜು ಶರ್ಮ, ಡೈನಾಮಿಕ್ಸ್ ಆಪ್ ಅಗ್ರಿಕಲ್ಚರ್ ಡೆವಲಪ್ಮೆಂಟ್/ ಲ್ಯಾಂಡ್ ರಿಪಮ್ಸರ್್ ಗ್ರೋತ್ ಅಂಡ್ ಈಕ್ವಿಟಿ, ನ್ಯೂಡೆಲ್ಲಿ, ಕಾನ್ಸೆಪ್ಟ್ ಪಬ್ಲಿಶರ್ಸ್.
    ರಾವ್.ವಿ.ಎಂ ಅಂಡ್ ಡಿ.ವಿ. ಗೋಪಾಲಪ್ಪ 2004, ಅಗ್ರಕಲ್ಚರಲ್ ಗ್ರೋತ್ ಅಂಡ್ ಫಾರ್ಮರ್ ಡಿಸ್ಟ್ರೆಸ್; ಟೆಂಟಿಟಿವ್ ಪರ್ಸ್ಟೆಕ್ಟಿವ್ಸ್ ಫ್ರಂ ಕನರ್ಾಟಕ, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಸಂಪುಟ 32 (54)
    ರಿಚಡ್ಸ್ ಪಾಲ್ 1993, ನಾಲೆಡ್ಜ್ ಆರ್ ಪರ್ಪಾರ್ಮೆನ್ಸ್ ಇನ್ ಎಂ ಹೋಬಟರ್್ ಯ್ಯಾನ್ ಆಂತೋಪಲಾಜಿಕಲ್ ಕ್ರಿಟಿಕ್ ಆಪ್ ಡೆವಲಪ್ಮೆಂಟ್, ದ ಗ್ರೋತ್ ಆಪ್ ಇಗ್ನೊರೆನ್ಸ್; ಲಂಡನ್ ಕಾಟ್ಲೆಡ್ಜ್.
    ಸಾಮಿನಾತ್. ಪಿ 2007, ಸ್ಟ್ರೈಕಿಂಗ್ ಎ ನೋಟ್ ಆಪ್ ಡಿಸ್ಟೆಂಟ್ ದ ಹಿಂದು. ಜನವರಿ 27.
    ಶರ್ಮ.ಇ.ಎ.ಎಸ್. 2004 ಈಸ್ ರೂರಲ್ ಎಕನಾಮಿ, ಬ್ರೇಕಿಂಗ್ ಡೌನ್? ಫಾರ್ಮರ್ಸ್ ಸುಸೈಡ್ಸ್ ಇನ್ ಆಂಧ್ರಪ್ರದೇಶ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಸಂಪುಟ 34(28)
    ಶಮರ್ಾದೇವಿಂದರ್, 2006 ಇಂಡಿಯನ್ ವಿಲೇಜಿಸ್ ಫಾರ್ ಸೇಲ್, ಡೌನ್ ಲೋಡೆಡ್ ಫ್ರಂ ತಿತಿತಿ. ಕೌಂಟರ್ ಕರೆಂಟ್ಸ್, ಆರ್ಗ/ಜಿ.ಎಲ್ ಶಮರ್ಾ 130206 ಎಚ್ಟಿಎಮ್.
    ಶಿವ ವಂದನಾ ಅಂಡ್ ಎ.ಹೆಚ್. ಜಾಫ್ರಿ 1998, ಸೀಡ್ಸ್ ಆಫ್ ಸುಸೈಡ್ಸ್; ದ ಎಕಾಲಾಜಿಕಲ್ ಅಂಡ್ ಹ್ಯೂಮನ್ ಕಾಸ್ಟ್ ಆಫ್ ಗ್ಲೋಬಲೈಜೇಷನ್ ಆಪ್ ಅಗ್ರಿಕಲ್ಚರ್ ನ್ಯೂಡೆಲ್ಲಿ; ದಿಸಚರ್್ ಫೌಂಡೇಶನ್ ಫಾರ್ ಸೈನ್ಸ್ ಟೆಕ್ನಾಲಜಿ ಅಂಡ್ ಎಕಾಲಜಿ
    ಸಿದ್ಧಿಕಿ ಆಶಿಯಾ 1973 ಅಗ್ರೇರಿಯಾನ್ ಚೇಂಜ್ ಇನ್ ಎ ನಾರ್ತರನ್ ಸ್ಟೇಟ್, ಯು.ಪಿ 1819-1833, ಆಕ್ಸ್ಫಡರ್್ ಕ್ಲಾರೆಂಡನ್ ಪ್ರಸ್.
    ಸ್ಟೋನ್ ಗ್ಲೆನ್ ಡಿ 2007 ಅಗ್ರಿಕಲ್ಚರಲ್ ಡಿಸ್ಕಿಲ್ಲಿಂಗ್ ಅಂಡ್ ಸ್ಟ್ರೆಡ್ ಆಪ್ ಜೆನೆಟಿಕಲಿ ಮಾಡಿಫೈಡ್ ಕಾಟಿನ್ ಇನ್ ವಾರಂಗಲ್, ಕರೆಂಟ್ ಆಂತ್ರೋಪಾಲಾಜಿ ಸಂಪುಟ 48 (1)
    ಟಾಟಾ ಇನ್ಸ್ಟಿಟ್ಯೂಟ್ ಆಪ್ ಸೋಸಿಯಲ್ ಸೈನ್ಸ್ 2005 ಕಾಸಸ್ ಆಪ್ ಫಾರ್ಮರ್ಸ್ ಸುಸೈಡ್ಸ್ ಇನ್ ಮಹಾರಾಷ್ಟ್ರ ಯ್ಯಾನ್ ಎನ್ಕ್ವಾಯಿರಿ ಫೈನಲ್ ರಿಪೋಟರ್್ ಸಬ್ಮಿಟೆಡ್ ಟು ದ ಹೈಕೋರ್ಟ, ಮುಂಬಯಿ. ಓ.ಪಿ.ಎಸ್.ಎಸ್.
    ಟಾಕ್ಸಿಸ್ ಲಿಲಕ್ 2002 ದ ಕಿಲ್ಲಿಂಗ್ ಫೀಲ್ಡ್ಸ್; ಫಾರ್ಮರ್ ಡೆತ್ತ ಡ್ಯೂ ಟು ಎಕ್ಸಪೋಜರ್ ಟು ಪೆಸ್ಟಿಸೀಡ್ಸ್ ಇನ್-ವಾರಂಗಲ್ ಡಿಸ್ಟ್ರಿಕ್ಟ್, ನ್ಯೂಡೆಲ್ಲಿ ಟಾಕ್ಸಿಸ್ ಲಿಂಕ್.
    ವಾಸವಿ.ಎ.ಆರ್. 1999 ಎ ಹಾಬರ್ಿಂಗರ್ಸ್ ಆಪ್ ರೈನ್, ಲ್ಯಾಂಡ್ ಲೈಫ್ ಇನ್ ಸೌತ್ ಇಂಡಿಯಾ, ನ್ಯೂಡೆಲ್ಲಿ ಆಕ್ಸ್ಫಡರ್್-ಯುನಿವಸರ್ಿಟಿ ಪ್ರಸ್.
    ವಾಸವಿ.ಎ.ಆರ್ 1999 ಬಿ ಅಗ್ರೇರಿಯನ್ ಡಿಸ್ಟ್ರೆಸ್ ಇನ್ ಬೀದರ್, ಮಾಕರ್ೆಟ್, ಸ್ಟೇಟ್ ಅಂಡ್ ಸುಸೈಡ್ಸ್ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಸಂಪುಟ 34 (32).
    ವಾಸವಿ ಎ.ಆರ್ 2004, ಫೀಲ್ಡ್ ನೋಟ್ಸ್ ಆನ್ ಸುಸೈಡ್ಸ್ ಬೈ ಅಗ್ರಿಕಲ್ಚರಿಸ್ಟ್; ಮಂಡ್ಯ ಅಂಡ್ ಹಾಸನ ಡಿಸ್ಟ್ರಿಕ್ಟ್, ಅನ್ಪಬ್ಲಿಷ್ಡ್ ನೋಟ್ಸ್.
    ವಿಜಯ ಟೈಮ್ಸ್ 2006; ಸುಸೈಡ್ ಬೈ ಫಾರ್ಮರ್ಸ್ ಅವಟರ್ೆಡ್ ಇನ್ ಮೈಸೂರು ಆಗಸ್ಟ್ 18.
    ವ್ಯಾಸ್.ವಿ.ಎಸ್. 2004 ಅಗ್ರೇರಿಯನ್ ಡ್ರಿಸ್ಟ್ರೆಸ್; ಸ್ಟ್ರೆಟಜೀಸ್ ಟು ಪ್ರೊಟೆಕ್ಟ್ ವಲ್ನೆರಬಲ್ ಸೆಕ್ಷನ್ಸ್, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಸಂಪುಟ 32 (54).
    ವಾಕ್ಯುಮೆಂಟ್, ಲೋಸಿಕ್ 1996, ದ ರೈಸ್ ಅಂಡ್ ಅಡ್ವಾನ್ಸಡ್ ಮಾಜರ್ಿನಾಲಿಟಿ; ನೋಟ್ಸ್ ಆನ್ ಇಟ್ಸ್ ನೇಚರ್ ಅಂಡ್ ಇಂಪ್ಲಿಕೇಶನ್ಸ್, ಆಕ್ಟ್ ಸೋಶಿಯಾಲಾಜಿಯಾ ಸಂಪುಟ 39(2).

ಅಡಿ ಟಿಪ್ಪಣಿಗಳು
1.    ಈ ಲೇಖನವನ್ನು ಮೊದಲಿಗೆ ಹೈದ್ರಾಬಾದ್ ನ ಆರ್ಥಿಕ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರ ತನ್ನ ಆಡಳಿತ ಮತ್ತು ನೀತಿ ನಿರೂಪಣ ಯೋಜನೆಯ ವತಿಯಿಂದ ಆಂಧ್ರಪ್ರದೇಶದ ಗುಂಟೂರಿನಲ್ಲಿ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ (2005ರ ಫೆಬ್ರುವರಿ 24ರಿಂದ 26ರ ವರೆಗೆ) ಸಂಘಟಿಸಿದ ಭಾರತದಲ್ಲಿ ರೈತಾಪಿಯ ಖಿನ್ನತೆ ಮತ್ತು ರೈತರ ಆತ್ಮಹತ್ಯೆ ಎಂಬ ವಿಚಾರ ಸಂಕಿರಣಕ್ಕಾಗಿ ಬರೆಯಲಾಯಿತು. ಈ ಸಂಕಿರಣವನ್ನು ಸಂಘಟಿಸಿದ ಮತ್ತು ಈ ಲೇಖನ ಸಿದ್ಧಗೊಳಿಸುವಲ್ಲಿ ಉಂಟಾದ ಹೆಚ್ಚಿನ ವಿಳಂಬವನ್ನು ಸಹಿಸಿದ ಪ್ರೊ. ಕೆ.ಸೂರಿ ಮತ್ತು ಪ್ರೊ. ಕೆ.ಶ್ರೀನಿವಾಸಲು ಇವರಿಗೆ ಧನ್ಯವಾದಗಳು. ಎರಡು ವರ್ಷಗಳ ಕಾಲ,  ಆತ್ಮಹತ್ಯೆಗೆ ಸಂಬಂಧಿಸಿದ ಎಲ್ಲ ವರದಿ ಮತ್ತು ಚರ್ಚೆಗಳನ್ನು ನಿಕಟವಾಗಿ ಅನುಸರಿಸಿದ್ದೇನೆ ಮತ್ತು ಈ ಪ್ರವೃತ್ತಿಯ ಇತ್ತೀಚಿನ ಮೇಲುನೋಟವನ್ನು ಒದಗಿಸುವ ಪ್ರಯತ್ನ ಮಾಡಿದ್ದೇನೆ. ಲೀ ಸ್ಕಲೆಸಿಂಗರ್, ರಾಚೇಲ್ ಶ್ಚುರ್ಮನ್, ಕರೋಲ್ ಉಪಾಧ್ಯಾಯ ಮತ್ತು ಪುಲಪ್ರೆ ಬಾಲಕೃಷ್ಣನ್ ಇವರು ವಿವರವಾದ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ದತ್ತ ಮಾಹಿತಿಯನ್ನು ಹೆಚ್ಚು ಅರ್ಹಗೊಳಿಸುವಲ್ಲಿ ಮತ್ತು ನನ್ನ ನಿಲುವನ್ನು ಪರಿಶೀಲಿಸುವಲ್ಲಿ ನೆರವು ನೀಡಿದ ಇವರೆಲ್ಲರಿಗೂ ನನ್ನ ಧನ್ಯವಾದಗಳು. ಈ ಪ್ರಬಂಧವನ್ನು ಪ್ರಗತಿಯಲ್ಲಿರುವ ಪೂರ್ಣಪ್ರಮಾಣದ ಪುಸ್ತಕದ ಬರಹದಿಂದ ಎತ್ತಿಕೊಳ್ಳಲಾಗಿದೆ.
    ಮೈಸೂರಿನ ವರದಿಗಳಿಗಾಗಿ ದ ಹಿಂದೂ (ಆಗಸ್ಟ್ 18.2006) ಮತ್ತು ವಿಜಯ ಟೈಮ್ಸ್ (ಆಗಸ್ಟ್ 18.2006), ವಿದರ್ಭದ ವಿವರಗಳಿಗಾಗಿ ದ ಹಿಂದೂ (ಜನವರಿ 27.2007) ಪತ್ರಿಕೆಯಲ್ಲಿ ಪಿ.ಸಾಮಿನಾಥ್ರವರ 'ಸ್ಟ್ರೈಕಿಂಗ್ ಎ ನೋಟ್ ಆಫ್ ಡಿಸ್ಸೆಂಟ್' ನೋಡಿ.
2.    ಆತ್ಮಹತ್ಯೆಗಳು ಸಾಂಖ್ಯಿಕ ಮಹತ್ವ ಪಡೆದಿರುವುದು ಮತ್ತು 'ಸಾಮಾನ್ಯ' ಸ್ಥಿತಿಯಲ್ಲದಿರುವುದು ಮತ್ತು ಇತರ ಕಾಲಾವಧಿಗಳಲ್ಲಿ ಮೇಲಿಂದ ಮೇಲೆ ಹೆಚ್ಚಿರುವುದರ ಮೇಲೆ ತೀವ್ರ ಹೆಚ್ಚಳ ಪ್ರತಿನಿಧಿಸುವುದು ವ್ಯಾಪ್ತಿಯ ಪ್ರಶ್ನೆ. ಆತ್ಮಹತ್ಯೆ ಸಂಭವಿಸಿದ ಪ್ರಾಂತ/ರಾಜ್ಯಗಳ ಬಹುತೇಕ ಅಂಕಿ ಅಂಶಗಳು ಪ್ರತಿಯೊಂದು ಜಿಲ್ಲೆಯಲ್ಲಿ ಸಂಭವಿಸಿದ ರೈತರ ಆತ್ಮಹತ್ಯೆ ಸಂಖ್ಯೆಯ ಸರಾಸರಿಗಿಂತಲೂ ಅಧಿಕವಾಗಿರುವುದನ್ನು ಸೂಚಿಸುತ್ತದೆ. ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆಯ 2007ರ ದತ್ತ ಮಾಹಿತಿ ರೈತರಿಂದಾದ ಆತ್ಮಹತ್ಯೆಯ ಸಹಜ ಸಂಖ್ಯೆಗಿಂತ ಹೆಚ್ಚಿರುವುದನ್ನು ಸೂಚಿಸುತ್ತದೆ, ಆದರೂ ದತ್ತ ಮಾಹಿತಿಯ ನಂಬಲರ್ಹತೆಯನ್ನು ಪ್ರಶ್ನಿಸುತ್ತದೆ. 
3.    ಘಟಿಸುತ್ತಿರುವ ಆತ್ಮಹತ್ಯೆಗಳನ್ನು ಕೇವಲ ಬಿಕ್ಕಟ್ಟಿನ ಹಾಗೆ ನೋಡುವುದು ಸೂಕ್ತವಲ್ಲವೆಂದು ಕೆಲವು ವಿದ್ವಾಂಸರು ಪರಿಗಣಿಸಿದ್ದಾರೆ, ಅಲ್ಲದೆ ಇವನ್ನು ಭಾರತದ ಕೃಷಿಯಲ್ಲಿ ಘಟಿಸುತ್ತಿರುವ ಮಹತ್ತರ ರಚನಾತ್ಮಕ ಬದಲಾವಣೆಯೊಂದಿಗೆ ಸಂಪರ್ಕ ಕಲ್ಪಿಸಿ ವಾದಿಸುತ್ತಾರೆ (ಜೋಧ್ಕಾ 2005 ನೋಡಿ). ನಾನು ಆತ್ಮಹತ್ಯೆಗಳನ್ನು ಖಿನ್ನತೆಯ ಜೊತೆ ಸೇರಿಸುತ್ತೇನೆ. ಕೃಷಿ ಜಗತ್ತಿನ ಸಾಮಾಜಿಕ ಮರುಸೃಷ್ಟಿಗಿರುವ ಬೆದರಿಕೆ ಮತ್ತು ಅದರಿಂದ ಹೊರಬರಲಾಗದ ಅನೇಕ ರೈತರ ತೀವ್ರ  ಸ್ವರೂಪದ ಕಷ್ಟ ಪರಂಪರೆಯ ಹಾಗೆ ಅವು ಪ್ರತಿನಿಧಿಸುತ್ತವೆ.
4.    ಅಧಿಕೃತ ಅಥವಾ ಸರ್ಕಾರ ನೇಮಿಸಿದ ಸಮಿತಿ ಆಧಾರಿತ ವರದಿಗಳು ಪಂಜಾಬ್ (ಐ.ಡಿ.ಸಿ 1998) ಕರ್ನಾಟಕ, (ಕರ್ನಾಟಕ ಸರ್ಕಾರ 2002) ಆಂಧ್ರಪ್ರದೇಶ (ರೈತರ ಕಲ್ಯಾಣ ಆಯೋಗ 2005) ಮತ್ತು ಮಹಾರಾಷ್ಟ್ರದ ಟಿ.ಐ.ಎಸ್.ಎಸ್. (2005)ಗಳಲ್ಲಿ ಮಾತ್ರ ಲಭ್ಯ ಇವೆ. ಉಳಿದವು ಪ್ರತ್ಯೇಕ ರೈತರ ಸಮೂಹಗಳು ಸ್ಥಾಪಿಸಿದ ವಿವಿಧ ಆಯೋಗಗಳ ಅಧ್ಯಯನಗಳು (ಉದಾ- ಆಂಧ್ರಪ್ರದೇಶದ ನಾಗರಿಕರ ವರದಿ 1998, ಮತ್ತು ತಜ್ಞ ರೈತರ ಆಯೋಗ 2002) ಮತ್ತು ಸ್ವತಂತ್ರ ವಿದ್ವಾಂಸರ ಅಧ್ಯಯನಗಳು (ಉದಾ-ಮಿಶ್ರ 2005). ಆಂಧ್ರಪ್ರದೇಶವನ್ನು ಕೇಂದ್ರೀಕರಿಸಿದ ವಿಸ್ತೃತ ಅಧ್ಯಯನವೊಂದನ್ನು ಕೈಗೊಳ್ಳಲು ಕ್ರಿಶ್ಚಿಯನ್ ನೆರವು ಸಂಸ್ಥೆ ನೇಮಿಸಿತು (ಕ್ರಿಶ್ಚಿಯನ್ ನೆರವು 2005).
5.    ಹಿಡುವಳಿಯ ಗಾತ್ರ ಅಥವಾ ಅವರ ಭೂಮಿ ಇಲ್ಲವೆ ಮಾರುಕಟ್ಟೆಯೊಂದಿಗಿನ ಸಂಬಂಧ ಈ ಯಾವುದನ್ನೂ ಪರಿಗಣಿಸದೆ ಎಲ್ಲ ಸಾಗುವಳಿದಾರರನ್ನು ನಾನು 'ರೈತರು' ಎಂದು ಸೂಚಿಸಿದ್ದೇನೆ. ತಮ್ಮ ಉಪಜೀವನ ನಡೆಸಲು ನೇರವಾಗಿ ಸಾಗುವಳಿಯನ್ನೆ ಅವಲಂಬಿಸಿದವರನ್ನು 'ಬೇಸಾಯಗಾರ'ರೆಂದೂ ಮಾರುಕಟ್ಟೆಯ ಸಂಪರ್ಕದೊಂದಿಗೆ ವಾಣಿಜ್ಯ ಬೆಳೆಗಳ ಸಾಗುವಳಿ ಕೈಗೊಳ್ಳುವರನ್ನು 'ರೈತ'ರೆಂದೂ ವಿಶೇಷವಾಗಿ ರೈತಾಪಿ ವಿಷಯ ಕುರಿತ ಸಾಹಿತ್ಯ ಸೂಚಿಸುತ್ತದೆ. ರೈತರು ಎಂಬ ಪದಕ್ಕೆ ಆದ್ಯತೆ ನೀಡಿ ಬಳಸುವಲ್ಲಿ, ಉಪಜೀವನ ನಡೆಸಲು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರಲಿ ಅಥವಾ ಮಾರುಕಟ್ಟೆಯಲ್ಲಿ ಭೂಮಾಲಿಕರು, ಗೇಣಿದಾರರು ಅಥವಾ ಇವೆರಡೂ ಆಗಿರಲಿ ಈ ಎಲ್ಲ ಬಗೆಯ ಸಾಗುವಳಿದಾರರನ್ನು ನಾನು ರೈತರೆಂದು ಗ್ರಹಿಸಿ ಪ್ರತಿನಿಧಿಸಲು ಬಯಸುತ್ತೇನೆ.
6.    ವಸಾಹತುಶಾಹಿ ಮತ್ತು ವಸಾಹತುಪೂರ್ವ ಭಾರತದಲ್ಲಿ ಕೃಷಿ ಸಂಬಂಧಿತ ಖಿನ್ನತೆ ಮತ್ತೆ ಮತ್ತೆ ಇತಿಹಾಸದೊಂದಿಗೆ ಸೇರಿಕೊಂಡಿರುವುದರ ಹೊರತಾಗಿಯೂ 1998ರಿಂದ ಸಂಭವಿಸಿದ ಆತ್ಮಹತ್ಯೆಗಳಿಗೆ ಹೋಲಿಕೆ ಇರಬಹುದಾದ ರೀತಿಯಲ್ಲಿ ಆತ್ಮಹತ್ಯೆಗಳು ವ್ಯಾಪಕವಾಗಿ ಹರಡಿಕೊಂಡಿದ್ದರ ಬಗ್ಗೆ ಯಾವುದೇ ರೀತಿಯ ದಾಖಲೆಗಳು ಇಲ್ಲ. ಕೃಷಿ ಖಿನ್ನತೆಗೆ ಸಂಬಂಧಿತ ಆತ್ಮಹತ್ಯೆಗಳ ಏಕಮಾತ್ರ ದಾಖಲೆ ಉತ್ತರಪ್ರದೇಶದ ಬುಂದೇಲ್ ಖಂಡ ಪ್ರಾಂತದಲ್ಲಿ ಸಿಗುತ್ತಿದ್ದು, ಬೆಳೆ ನಷ್ಟ ಮತ್ತು ಸಾಲದ ಭಾರಗಳಿಗೆ ಸಂಬಂಧಿಸಿ ಚಾಲ್ತಿಯಲ್ಲಿರುವ ಬಿಕ್ಕಟ್ಟಿನೊಂದಿಗೆ ಸಂಪರ್ಕ ಹೊಂದಿವೆ (ಸಿದ್ಧಿಕ್ 1973 ನೋಡಿ). ಇತ್ತೀಚೆಗಿನ ರಾಣರವರ ಪ್ರಬಂಧ (2006) ಉತ್ತಭಾರತದಲ್ಲಿ 17 ಮತ್ತು 18ನೇ ಶತಮಾನದ ಕೃಷಿ ಬಿಕ್ಕಟ್ಟು, ಕೃಷಿಕಾರ್ಯಗಳನ್ನು ಬಿಟ್ಟುಕೊಡಲು, ವಲಸೆ ಹೋಗಲು ಮತ್ತು ಇಡೀ ಹಳ್ಳಿ ಪಾಳು ಬೀಳಲು ಕೂಡ ಕಾರಣವಾಯಿತೆಂದು ಸೂಚಿಸುತ್ತದೆ. ಆದರೆ ಕೃಷಿಕರು ಆತ್ಮಹತ್ಯೆಗೆ ಪ್ರಯತ್ನ ಮಾಡಿದ ಯಾವ ನಮೂದು ಇಲ್ಲ.
7.    ರಾಷ್ಟ್ರದಲ್ಲಿ ಉತ್ತೇಜಿಸಲಾದ ಹಸಿರು ಕ್ರಾಂತಿ ಮಾದರಿಯನ್ನು ಅಳವಡಿಸಿಕೊಂಡಿರುವ ಅಂಶಗಳೊಂದಿಗೆ ಬಹುತೇಕ ಖಿನ್ನತೆಗಳು ಸೇರಿಕೊಂಡಿವೆ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳು ನನ್ನ ಪುಸ್ತಕ (ವಾಸವಿ 1999 ಎ)ದಲ್ಲಿವೆ.
8.    ಭೂ ಹಿಡುವಳಿಯ ಸರಾಸರಿ ಗಾತ್ರ 1.06 ಹೆಕ್ಟೇರ್ ಎಂದೂ ಬಹುತೇಕರು ಅತಿ ಸಣ್ಣ ರೈತರೆಂದೂ 2003ರ ಸಮೀಕ್ಷೆಯ ಅಂಕಿಅಂಶಗಳು ಸೂಚಿಸುತ್ತವೆ. ಪ್ರಸ್ತುತ ಸಣ್ಣ ಮತ್ತು ಅತಿ ಸಣ್ಣ ರೈತರು ಗ್ರಾಮೀಣ ಜನಸಂಖ್ಯೆಯ ಶೇಕಡಾ 80ರಷ್ಟಿದ್ದು, ಶೇಕಡಾ 40ರಷ್ಟು ಭೂಮಿಯನ್ನು ಸಾಗುವಳಿ ಮಾಡುತ್ತಿದ್ದಾರೆ (ಬಳ್ಳ 2007).
9.    ಪ್ರತಿಯೊಂದು ವರದಿ ವಿವಿಧ ಮಾನದಂಡಗಳನ್ನು ಮತ್ತು ಮೇಲಿಂದ ಮೇಲೆ ಎಕರೆ ಮಾಪನವನ್ನು ಬಳಸಿದೆ. ಎಕರೆಗಳನ್ನು ಹೆಕ್ಟೇರಗಳಾಗಿ (2.50 ಎಕರೆ=1 ಹೆಕ್ಟೇರ್) ಪರಿವರ್ತಿಸಿದೆ. ಒಂದು ತುಲನಾತ್ಮಕ ಚಿತ್ರ  ಪಡೆಯಲು ಎಲ್ಲ ವರದಿಗಳ ಭೂ ಹಿಡುವಳಿಗಳ ನಮೂನೆಗಳನ್ನು ನಾನು ಪ್ರಮಾಣಬದ್ಧಗೊಳಿಸಿದ್ದೇನೆ.
10.    ಪರಿಶಿಷ್ಟ (ಜಾತಿಗಳು ಮತ್ತು ಪಂಗಡಗಳು)ವಲ್ಲದ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಸೌಲಭ್ಯವಂಚಿತ ಜಾತಿ ಗುಂಪುಗಳ ಅಧಿಕೃತ ಗುರುತಿಸುವಿಕೆಯನ್ನು 'ಹಿಂದುಳಿದ ವರ್ಗಗಳು' ಸೂಚಿಸುತ್ತವೆ. ಅಂಥ ಗುಂಪುಗಳ ಗುರುತಿಸುವಿಕೆಯನ್ನು ವಿವಿಧ ರಾಜ್ಯಗಳಿಂದ ನೇಮಿತ ಆಯೋಗಗಳು ಮಾಡುತ್ತವೆ ಮತ್ತು ಆರ್ಥಿಕ, ಸಾಮಾಜಿಕ, ರಾಜಕೀಯ ಸೌಲಭ್ಯವಂಚಿತ ಸ್ಥಿತಿಯನ್ನು ಮುಖ್ಯವಾಗಿ ಪರಿಗಣಿಸಲಾಗುತ್ತದೆಯಾದರೂ ಆಗಾಗ ಮಾನದಂಡಗಳು ಬದಲಾಗುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ಹಿಂದುಳಿದ ವರ್ಗಗಳೆಂದು ಗುರುತಿಸಿದವರೆಲ್ಲ ಸಾಗುವಳಿ ಮಾಡದ ಜಾತಿ ಗುಂಪುಗಳು, ಪ್ರಧಾನವಾಗಿ ಕುರುಬರು, ಅಲ್ಲದೆ ಕರಕುಶಲ ಮತ್ತು ಸೇವಾವೃತ್ತಿಗಳ ಜಾತಿ ಗುಂಪುಗಳಿಗೆ ಸೇರಿದ ವಿಶಾಲ ವಲಯದಿಂದ ಬಂದವರೆ ಆಗಿದ್ದಾರೆ.
11.    ಪರಿಶಿಷ್ಟ ಜಾತಿಯ ಪಟ್ಟಿಯಲ್ಲಾಗಲಿ ಅಥವಾ ಹಿಂದುಳಿದ ವರ್ಗಗಳ ಪಟ್ಟಿಯಲ್ಲಾಗಲಿ ಗುರುತಿಸದ ಸೌಲಭ್ಯವಂಚಿತ ಜಾತಿಯ ಅಧಿಕೃತ ಗುರುತಿಸುವಿಕೆಯನ್ನು ಇತರ ಹಿಂದುಳಿದ ವರ್ಗಗಳು(ಒಬಿಸಿ) ಸೂಚಿಸುತ್ತದೆ. ಬಹುಪಾಲು ಒಬಿಸಿ ಪ್ರಕರಣಗಳಲ್ಲಿ ಗುರುತಿಸುವಿಕೆ ಮತ್ತು ಅಧಿಕೃತ ಮಾನ್ಯತೆ ವಿವಾದಾಸ್ಪದವಾಗಿದ್ದರೂ ಬ್ರಿಟಿಶ್ ವಸಾಹತು ನೀತಿ ಒಮ್ಮೆ ಪಟ್ಟಿ ಮಾಡಿಬಿಟ್ಟ  'ದರೋಡೆಕೋರರು' ಮತ್ತು ಮರುಬಳಕೆಯ ಕೆಲಸಗಾರರು, ವಿಶೇಷ ಸೇವಾವೃತ್ತಿಯ ಜಾತಿ ಗುಂಪುಗಳಂಥ  ಇನ್ನಿತರರನ್ನು ಇತರ ಹಿಂದುಳಿದ ವರ್ಗ ಎಂದು ಗುರುತಿಸಲಾಗಿದೆ.
12.    ಹೆಚ್ಚುತ್ತಿರುವ ದಿವಾಳಿತನ ಮತ್ತು ಸಣ್ಣ ಹಾಗೂ ಮದ್ಯಮ ರೈತರ ಸ್ಥಳಾಂತರಗಳನ್ನು ಅನೇಕ ಅಧ್ಯಯನಗಳು ಗುರುತಿಸಿವೆ. ಇತ್ತೀಚಿನ ಕೆಲವು ಅಧ್ಯಯನಗಳಿಗೆ ರಾವ್ (2001), ಪಟ್ನಾಯಕ್ (2003,2004) ನೋಡಿ.
13.    ಎರಡು ಮುಖ್ಯ ಮೂಲ ಕಾರಣಗಳಿಗಾಗಿ ಸಾಲಗಳು ಸಂಭವಿಸುತ್ತವೆ. ಅದರಲ್ಲಿ ಮುಖ್ಯವಾಗಿ ಕೃಷಿ ಉತ್ಪಾದನಾ ವೆಚ್ಚಗಳಿಗೆ ನೆರವಾಗಲು ಮಾಡಿದ ಸಾಲಗಳು ಮತ್ತು ಕೆಲವು ಪ್ರಕರಣಗಳಲ್ಲಿ ಸಾಮಾಜಿಕ ಉದ್ದೇಶಗಳಿಗಾಗಿ ಅಥವಾ ಕೆಲವು ವರದಿಗಳು ಗುರುತಿಸಿದಂತೆ 'ಅನುತ್ಪಾದಕ' ವೆಚ್ಚಗಳಿಗಾಗಿ ಮಾಡಿದ ಸಾಲಗಳು. ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಬಹುಪಾಲು ಉತ್ಪಾದಕ ಉದ್ದೇಶಗಳಿಗಾಗಿ ಸಾಲ ಮಾಡಲಾಗಿದೆ. ಕರ್ನಾಟಕ ಮತ್ತು ಪಂಜಾಬಿನಲ್ಲಿ ಮದುವೆ ಮತ್ತು ಮನೆ ಕಟ್ಟಲು ಮಾಡುವ  ವೈಯಕ್ತಿಕ ಸಾಲಗಳು  ಒಳಗೊಂಡ  ಉತ್ಪಾದಕ ಮತ್ತು ಸಾಮಾಜಿಕ ಉದ್ದೇಶಗಳು ಸಾಮಾನ್ಯವಾಗಿ ಸೇರಿಕೊಳ್ಳುತ್ತವೆ (ವಾಸವಿ 2003, ಪರಿಣತರ ಸಮಿತಿ ವರದಿ 2002). ಪಂಜಾಬ್ ಗಾಗಿನ ಐ.ಡಿ.ಸಿ ವರದಿ ಅನುತ್ಪಾದಕ ಸಾಲಗಳು ಮಹತ್ವದ್ದಾಗಬೇಕೆಂದೂ ಅಂಥ ಸಾಲಗಳು ಉಪಭೋಗವಾದದ ಬೆಳವಣಿಗೆಗೆ ಸಂಪರ್ಕ ಕಲ್ಪಿಸುವುದೆಂದೂ ಪರಿಗಣಿಸಿದೆ. ಮದುವೆ ಮಾಡಲು, ಮನೆ ಕಟ್ಟಲು ಮತ್ತು ಉಪಭೋಗ ವಸ್ತುಗಳ ಖರೀದಿ ಮಾಡಲು ಪಡೆಯುವ ಸಾಲಗಳು ಸಾಲದ ಹೊರೆ ಹೆಚ್ಚಲು ಮುಖ್ಯ ಕಾರಣವಾಗಿವೆ.
14. ಇತ್ತೀಚಿನ ಸಮೀಕ್ಷೆಗಳು ಮತ್ತು ಅಧ್ಯಯನಗಳಲ್ಲಿ ವ್ಯಾಪಕವಾಗಿ ದಾಖಲಾಗದ ಗ್ರಾಮೀಣ ಪ್ರದೇಶಗಳಲ್ಲಿನ ಸಾಲದ       ಎರಡನೆಯ ಮೂಲ ಅನೇಕರು ನಗರದಲ್ಲಿ ಉದ್ಯೋಗಿಗಳಾಗಿ ಇರುವರೊಂದಿಗೆ ಸಂಪರ್ಕ ಹೊಂದಿದೆ. ಹಳ್ಳಿಯಲ್ಲಿ ವಾಸವಾಗಿದ್ದೂ ಕೃಷಿ, ವಿದ್ಯುತ್, ಶಿಕ್ಷಣ ಮತ್ತಿತ್ತರ ಇಲಾಖೆಗಳಲ್ಲಿ ಉದ್ಯೋಗಿಗಳಾದವರ ಆದಾಯದ ಮೂಲಗಳು ಮತ್ತು ಮಟ್ಟಗಳು ನಿಯತವಾಗಿರುವುದಷ್ಟೇ ಅಲ್ಲದೆ ಸರಾಸರಿ ಗ್ರಾಮೀಣ ಆದಾಯದೊಂದಿಗೆ ಹೋಲಿಸಿದಲ್ಲಿ ಹೆಚ್ಚಿನದಾಗಿ ಇರುತ್ತವೆ. ನಗರ ಪ್ರದೇಶಗಳಿಂದಾಗುವ ಪಾವತಿಗಳನ್ನೊಳಗೊಂಡ ಅಂಥ ಆದಾಯ ಗ್ರಾಮೀಣ ಪ್ರದೇಶದಲ್ಲಿ ಮಿತಿಮೀರಿದ ಬಡ್ಡಿಗೆ ಸಾಲ ನೀಡಲು ಹೊಸ ಮೂಲವಾಗಿದೆ.
15. ಭಾರತದಲ್ಲಿ ಅನುವಂಶೀಯವಾಗಿ ಸುಧಾರಿತ ತಳಿಬೀಜಗಳ ಪರಿಚಯ ಮತ್ತು ಬಳಕೆ ಪ್ರಾಥಮಿಕವಾಗಿ ವಿವಿಧ ಮಾದರಿಯ ಬಿ.ಟಿ. ಹತ್ತಿಗೆ ಸಂಬಂಧಿಸಿವೆ. ಹಸಿರು ಕ್ರಾಂತಿಯ ತರಕಾರಿ ಬೀಜಗಳನ್ನು ಪರಿಚಯಿಸಬೇಕೆಂದು ಬಯಸಿರುವುದು ಇತ್ತೀಚೆಗಷ್ಟೆ.
16.    ಗ್ರಾಮೀಣ ಪ್ರದೇಶದ ಸಾಂಸ್ಕೃತಿಕ ಮತ್ತು ಸಾಮಾಜಿಕವಲ್ಲದ ಸಂರಚನಾ ಬದಲಾವಣೆಗೆ ಒತ್ತು ಹಾಕುವ ಮೂಲಕ ನಾನು ಎತ್ತಿ ತೋರಿಸಬೇಕಿರುವ ರೈತಾಪಿ ಸಂರಚನೆ, ಜಾತಿ ಆಧಾರಿತ ಸಂಪನ್ಮೂಲಗಳ ಹಂಚಿಕೆಯ ಮೇಲೆ ರೂಪಿಸಿದ ಸಾಮಾಜಿಕ ಸಂರಚನೆಯವರೆಗೆ ಬಹುಪಾಲು ಯಥಾಸ್ಥಿತಿಯಲ್ಲಿದೆ. ಸಾಂಸ್ಕೃತಿಕ ಬದಲಾವಣೆಗಳು ಮೂಲತಹ ಕೃಷಿ ಆಚರಣಾ ಸ್ವರೂಪಗಳ ಕ್ಷೇತ್ರದಲ್ಲಿ ಮತ್ತು ಕೃಷಿ ಚಟುವಟಿಕೆಗಳ ಅರ್ಥ ಮತ್ತು ಪ್ರಾಮುಖ್ಯತೆಯಲ್ಲಿ ಇರುತ್ತವೆ.
17.    ಸಮಾಜಶಾಸ್ತ್ರೀಯ ಮತ್ತು ಇತ್ತೀಚಿನ ಆರ್ಥಿಕ ಸಾಹಿತ್ಯ ಕೂಡ ಗ್ರಾಮೀಣ ಭಾರತದಲ್ಲಿ ಜಾತಿ ಮತ್ತು ವರ್ಗ ಸಂರಚನೆಗಳು ಏಕವಾಗಿ ಸಂಭವಿಸಲು ಕಾರಣವಾದ ರೈತಾಪಿ ಸಂರಚನೆಗಳ ಉಳಿಸಿಕೊಳ್ಳುವಿಕೆ ನಡೆಯುತ್ತಿದೆ ಎಂಬ ಸಂಗತಿಯನ್ನು ಒತ್ತಿ ಹೇಳುತ್ತದೆ (ನೋಡಿ ಹ್ಯಾರಿಸ್-ವೈಟ್ 2004).
18.    ಬೀದರ್ ನಲ್ಲಿ ಕೃಷಿಕರ ಆತ್ಮಹತ್ಯೆಗಳನ್ನು ಪರಿಶೀಲಿಸಿದ ನಂತರ ನಾನು 1999ರಲ್ಲಿ 'ಕೃಷಿಯ ವೈಯಕ್ತೀಕರಣ' ಎಂಬ ನುಡಿಗಟ್ಟನ್ನು ಮೊದಲಿಗೆ ಬಳಸಿದೆ (ನೋಡಿ ವಾಸವಿ 1999 ಬಿ). ಉಲ್ರಿಚ್ ಬೆಕ್ ಮತ್ತು ಎಲಿಜಬೆತ್ ಬೆಕ್-ಜೆನರ್ಷಿಯಂ 2002ರಲ್ಲಿ (2001ರಲ್ಲಿ ಜರ್ಮನ್ ನಲ್ಲಿ 2002ರಲ್ಲಿ ಇಂಗ್ಲಿಷ್ ನಲ್ಲಿ) 'ವೈಯಕ್ತೀಕರಣ' ಪರಿಕಲ್ಪನೆಯ ನಿರ್ದಿಷ್ಟ ಬಳಕೆ ಮಾಡಿದ್ದು ನನಗೆ ಅರಿವಿರಲಿಲ್ಲ. ಈ ಪುಸ್ತಕದ ಸಂದರ್ಶನ ಭಾಗದಲ್ಲಿ ಉಲ್ರಿಚ್ ಬೆಕ್ರವರು ವೈಯಕ್ತೀಕರಣ ಅರ್ಥದ ಅರ್ಹತೆಯನ್ನು, 'ಕೆಲಸದ ಪರಿವರ್ತನೆ, ಸಾರ್ವಜನಿಕ ಪ್ರಾಧಿಕಾರದ ಅವಸಾನ ಮತ್ತು ಹೆಚ್ಚುತ್ತಿರುವ ವೈಯಕ್ತಿಕ ಪ್ರತ್ಯೇಕತೆ, ಪ್ರತ್ಯೇಕ ವ್ಯಕ್ತಿತ್ವ ಮತ್ತು ಸ್ವಾವಲಂಬನೆ ಮೇಲೆ ಹೆಚ್ಚಿನ ಒತ್ತು' (ಪುಟ 202) ಎಂದು ಸೂಚಿಸಿ ಗುರುತಿಸಿದ್ದಾರೆ. ವೈಯಕ್ತೀಕರಣ ಆವರಿಸಿಕೊಳ್ಳುವ 'ಸಾಮಾಜಿಕ ಸಂಸ್ಥೆಗಳ ಸಮಾಜಶಾಸ್ತ್ರೀಯ ಪರಿವರ್ತನೆ ಮತ್ತು ಸಮಾಜದೊಂದಿಗೆ ವ್ಯಕ್ತಿಯ  ಸಂಬಂಧ'ವೆಂದು ಅವರು ಮುಂದುವರಿದು ಗಮನಿಸುತ್ತಾರೆ. ಪಾಶ್ಚಿಮಾತ್ಯ ಮತ್ತದರ ಎರಡನೆಯ ಹಂತದ ಆಧುನಿಕತೆಯ ಈ ಉಲ್ಲೇಖಕ್ಕೆ ಸಂಬಂಧಪಟ್ಟಂತೆ ನಾನು ಗ್ರಾಮೀಣ ಭಾರತದಲ್ಲಿ ನವಉದಾರವಾದಿ ಮಾರುಕಟ್ಟೆಯ ಪ್ರವೇಶ ಮತ್ತು ಕೃಷಿ ವಾಣಿಜ್ಯೀಕರಣದ ಸಂದರ್ಭದಲ್ಲಿ ಇದರ ಪ್ರಸ್ತುತೆಯನ್ನು ಗಮನಿಸುತ್ತೇನೆ.
19.    ಪಂಪ್ ಸೆಟ್ ಜೊತೆಗಿನ ಕೊಳವೆ ಬಾವಿಗಳು ಭೂಮಿಯನ್ನು ನೀರಾವರಿ ಮಾಡುವ ಪ್ರಮುಖ ಮಾರ್ಗಗಳಲ್ಲಿ ಒಂದಾಗಿ ಈಗ ರೂಪಿತವಾಗಿದೆ, ಅಲ್ಲದೆ ಹೆಚ್ಚಿನ ಮೊತ್ತ ಮತ್ತು ಬಾಹ್ಯ ಪರಿಣತರ ಅಗತ್ಯವಿದೆ.
20.    ಕರ್ನಾಟಕದ ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ 2004ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕ್ಷೇತ್ರಕಾರ್ಯ ನಡೆಸಿದ್ದಲ್ಲದೆ  2004ರಲ್ಲಿ ಆತ್ಮಹತ್ಯೆ ಮಾಡಿಕೊಂಡ 17 ಕೃಷಿಕರ ಕುಟುಂಬಗಳನ್ನು ನಾನು ಭೇಟಿ ಮಾಡಿ ಅವರನ್ನು ಸಂದರ್ಶಿಸಿದ್ದೇನೆ.
21.    ಸ್ಟೋನ್ (2007) ಹೇಳುವಂತೆ, ಹೊಸ ವಾಣಿಜ್ಯ ಮಧ್ಯವರ್ತಿಗಳು ಮತ್ತು ಅವರು ಹೊಸ ಗಿರಾಕಿಗಳಿಗಾಗಿ ನಡೆಸುವ ತೀವ್ರ ಸ್ಪರ್ಧೆಗಳಿಂದಾಗಿ ಕೃಷಿ ಮಾರುಕಟ್ಟೆ ಹಾಳಾಗಿಹೋಗಿದೆ ಮತ್ತು ಸ್ಪರ್ಧೆ ಉಂಟುಮಾಡುವರಿಂದ ರೈತರ ನಡುವೆ ತೀವ್ರ ಪೈಪೋಟಿ ಉಂಟಾಗಲು, ಸಾಮಾಜಿಕ ಮತ್ತು ಸಾಂಕೇತಿಕ ನಿರ್ವಹಣೆ ನಶಿಸಿಹೋಗಲು ಕಾರಣವಾಗಿದೆ, ಮತ್ತು ಯೋಜನೆಗಳು ಅಲ್ಲದೆ ಮಿಶ್ರಣ ಮತ್ತು ಹೋಲಿಕೆಗಳನ್ನು ಈ ಮೊದಲಿನ ಅಧ್ಯಯನಗಳಲ್ಲಿ ವಿವರಿಸಲಾಗಿದೆ (ನೋಡಿ ವಾಸವಿ 1999, ಗುಪ್ತ 1999).
22.    ಮೇಲ್ಜಾತಿಯ ಪದ್ಧತಿ ಮತ್ತು ಆಚರಣೆಗಳನ್ನು ಕೆಳಶ್ರೇಣಿ ಜಾತಿ ಗುಂಪುಗಳು ಅನುಕರಿಸುವ ಪ್ರಕ್ರಿಯೆಯನ್ನೆ ಸಂಸ್ಕೃತೀಕರಣ ಸೂಚಿಸುತ್ತದೆ. ಎಂ.ಎನ್.ಶ್ರೀನಿವಾಸರಿಂದ ಈ ಪದ ನಿಷ್ಪತ್ತಿಯಾಗಿ ಭಾರತದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆ ಕುರಿತ ಸಾಹಿತ್ಯದಲ್ಲಿ ವ್ಯಾಪಕವಾಗಿ ಈಗ ಬಳಸಲಾಗುತ್ತದೆ.
23.    ಸಂರಚನಾತ್ಮಕ ಹೊಂದಾಣಿಕೆ ಹಂತ 1991ರಲ್ಲಿ ಆರಂಭವಾಯಿತು. ಆದಾಗ್ಯೂ ತರುವಾಯದಲ್ಲಿ ಆರ್ಥಿಕ ಉದಾರೀಕರಣ ಅಂದರೆ ಕೃಷಿ ಸಹಾಯ ಧನಗಳ ಮೇಲಿನ ವೆಚ್ಚ ಕಡಿಮೆಗೊಳಿಸುವುದನ್ನು 1997ರ ನಂತರ ಚುರುಕಾಗಿ ಕಾರ್ಯರೂಪಕ್ಕೆ ತರಲಾಯಿತು. ಸಮಸ್ಯೆಗಳು ಏಕೆ 1998ರಿಂದೀಚೆಗೆ ಆರಂಭವಾದವು ಎಂಬ ಕಾರಣಕ್ಕಿದು ಬಹುದೊಡ್ಡ ಆಧಾರವಾಗಿದೆ.
24.    ಕೇಂದ್ರ ಸರಕಾರ 2009ರ ಲೋಕಸಭೆ ಚುನಾವಣೆಯ ತಯಾರಿಯಲ್ಲಿ ಇತ್ತೀಚಿಗಷ್ಟೇ (2008) ರೈತರ ಬಹೃತ್ ಸಾಲ ಮರುಪಾವತಿ ಮೂಂದೂಡುವ ಕಾರ್ಯಕ್ರಮ ಆರಂಭಿಸಿದೆ.
25.    ನಂದಿಗ್ರಾಮ ಮತ್ತು ಸಿಂಗೂರ್, ಪಶ್ಚಿಮ ಬಂಗಾಳದ ಎಡಪಕ್ಷ ಸರಕಾರ ಟಾಟಾರ ಕೈಗಾರಿಕಾ ಭವನಕ್ಕಾಗಿ ಕೈಗಾರಿಕೆಯೊಂದನ್ನು ಸ್ಥಾಪಿಸಲು ಬಯಸಿದ ಹಳ್ಳಿಗಳಾಗಿವೆ. ಹಳ್ಳಿಗರಲ್ಲಿ ಕೆಲವರು ಅಧಿಕೃತ ಪರಿಹಾರ ಪಡೆಯಲು ನಿರಾಕರಿಸಿದರು ಮತ್ತು ಅವರ ಬಲವಂತದ ಉಚ್ಚಾಟನೆಗೆ ಸ್ಪರ್ಧೆ ನೀಡಿದರು. ಆ ಪ್ರದೇಶದಲ್ಲಿ ಸುದೀರ್ಘ ಚರ್ಚೆ ಮತ್ತು ಹಿಂಸೆಯ ನಂತರ ಟಾಟಾ ಸಿಂಗೂರಿನಿಂದ ಹಿಂದೆಸರಿದರೂ ಈ ವಿಷಯದ ಸುತ್ತ ಮುಂದುರೆದ ಹಿಂಸೆ ಮತ್ತು ಚರ್ಚೆಗಳು ರೈತರ ಹಕ್ಕುಗಳ ಕಡೆಗಣನೆಯನ್ನು ಕಮ್ಯುನಿಷ್ಟ್ (ಮಾರ್ಕ್ಸಿಸ್ಟ್) ಪಕ್ಷವೂ ಎತ್ತಿ ತೋರಿಸಿತು. 
26.    ಡೆಕ್ಕನ್ ಹೆರಾಲ್ಡ್, ಭಾನುವಾರ ಮಾರ್ಚಿ 18.2007.
27.    ಅತಿಸಣ್ಣ ರೈತರ ಮೇಲೆ ಬೀರಿದ ಪ್ರಭಾವ ಮತ್ತು ವಾಗ್ವಾದ (ಡಿಸ್ಕೋರ್ಸ್) ನಡುವಿನ ಸಂಪರ್ಕವನ್ನು ಸೂಕ್ಷ್ಮವಾಗಿ ಮನಗಂಡು ಏರ್ಪಡಿಸಿದ ರಾಖೇಲ್ ಶುರ್ಮಾನ್ ಅವರಿಗೆ ಈ ವಿಸ್ತರಣೆ ಋಣಿಯಾಗಿದೆ.
28. ಪ್ರಭುತ್ವ, ವಿಶೇಷವಾಗಿ ಆರ್ಥಿಕ ಉದಾರೀಕರಣದ ಅವಧಿಯಲ್ಲಿ, ಕೃಷಿ ಸಮಸ್ಯೆಗಳ ಬಗೆಗೆ ತೋರಿದ ಉದಾಸೀನತೆಯನ್ನು ಅನೇಕ ವಿದ್ವಾಂಸರು ಎತ್ತಿ ಹೇಳಿದ್ದಾರೆ. (ನೋಡಿ: ಪಾಟ್ನಾಯಕ್ 2004, ಶರ್ಮಾ 2006, ಹ್ಯಾರಿಸ್-ವೈಟ್ 2004).    


ಶನಿವಾರ, ಜನವರಿ 7, 2012

ಐಸಾಕ್ ಬಾಶೆವಿಸ್ ಸಿಂಗರ್ ನ ಕತೆ - ಸೂಜಿ

ಇತರರನ್ನು ಒಳ್ಳೆಯತನದಿಂದ, ಸೌಜನ್ಯದಿಂದ ನಡೆಸಿಕೊಳ್ಳಬೇಕು ಎಂಬ ಮೌಲ್ಯದ ಮೇಲೆ ಸಿಂಗರ್ ನ ಈ ಕತೆ ಒತ್ತು ಹಾಕಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪ್ರತಿಯೊಬ್ಬರೊಂದಿಗೂ ವಿನಯದಿಂದ ಉತ್ತಮವಾಗಿ ವರ್ತಿಸಬೇಕು. ಕೆಟ್ಟ ನಡತೆ ನಮ್ಮ ಸಂಬಂಧಗಳನ್ನು ನಾಶಪಡಿಸುವುದಲ್ಲದೆ ನೋವು ಮತ್ತು ಕಹಿ ಅನುಭವಗಳಿಗೆ ಕಾರಣವಾಗುತ್ತದೆ. ಈ ಸತ್ಯವನ್ನು ಈ ಕತೆಯಲ್ಲಿ  ಬಿಸಿರಕ್ತದ ಇಟ್ಟೆ ಎಂಬ ಯುವತಿ ದೊಡ್ಡ ಬೆಲೆ ತೆತ್ತು ಅರಿಯುತ್ತಾಳೆ. ಶ್ರೀಮಂತ ಮಹಿಳೆಯೊಬ್ಬಳು ತನ್ನ ಒಬ್ಬನೇ ಮಗನಿಗಾಗಿ ಒಳ್ಳೆಯ ನಡತೆಯ ಹೆಣ್ಣನ್ನು ಅರಸುವುದರ ಸುತ್ತ ಈ ಕತೆ ಇದೆ. ಸಣ್ಣಪುಟ್ಟ ಸಂಗತಿಗಳಾದ ನಮ್ಮ ಅಂಗಸನ್ನೆಗಳು ಮತ್ತು ಶುಭಕಾಮನೆಗಳು ಹೇಗೆ ನಮ್ಮ ವ್ಯಕ್ತಿತ್ವವನ್ನು ಹೇಳುತ್ತವೆ ಎಂಬ ಕತೆಗಾರರ ಅಭಿಪ್ರಾಯವನ್ನು ನಾವು ಒಪ್ಪಬೇಕಾಗುತ್ತದೆ ಎಂದು ಹೇಳಲಾಗಿದೆ. ಹೀಗಿದ್ದರೂ ಮದುವೆಯ ಮೂಲಕ ಮನೆಯಹೊಸ ಸದಸ್ಯಳಾಗಲಿರುವ ಮದುಮಗಳನ್ನು ಆರಿಸುವ ಪ್ರಕ್ರಿಯೆ ಹೊಸವಿಧಾನದೊಂದಿಗೆ ಆಕರ್ಷಕವಾಗಿದೆ.
* *
ಸೂಜಿ
-ಐಸಾಕ್ ಬಾಶೆವಿಸ್ ಸಿಂಗರ್

'ನನ್ನ ಪ್ರೀತಿಯ ಜನರೇ, ಇತ್ತೀಚಿನ ದಿನಗಳಲ್ಲಿ ಎಲ್ಲ ಮದುವೆಗಳು ಕಾಮನಿಂದಲೆ ಜರುಗುತ್ತವೆ. ಹರೆಯದ ಹುಡುಗರು ಪ್ರೀತಿಗೆ ಬೀಳುತ್ತಾರೆ, ಜೊತೆಯಲ್ಲಿ ಓಡಾಡಲು ತೊಡಗುತ್ತಾರೆ. ಅವರು ಜಗಳ ಆರಂಭಿಸುವ ವರೆಗೂ ಒಟ್ಟಿಗೆ ಹೊರಗೆ ಹೋಗುತ್ತಾರೆ, ನಂತರ ಒಬ್ಬರಿಗೊಬ್ಬರು ಕತ್ತಿ ಮಸೆಯುತ್ತಾರೆ. ನಮ್ಮ ಕಾಲದಲ್ಲಿ ಅಪ್ಪ ಅಮ್ಮಂದಿರನ್ನು, ಸಂಬಂಧ ಕುದುರಿಸುವ ಮಧ್ಯಸ್ಥಿಕೆದಾರರನ್ನು ನಂಬಿಕೊಂಡು ಇದ್ದಿವಿ. ನನ್ನ ಮುಖದ ಮೇಲಿನ ಪರದೆಯನ್ನು ಆತ ಎತ್ತುವ ಮದುವೆ ಸಮಾರಂಭ ನಡೆಯುವ ವರೆಗೂ ಸ್ವತಹ ನಾನೇ ನನ್ನ ಟಾಡ್ಡಿಯ ಮುಖವನ್ನು ನೋಡಿರಲಿಲ್ಲ. ಕೆಂಪುಗಡ್ಡ ಮತ್ತು ಕೆದರಿದ ಸೈಡ್ ಲಾಕ್ ನೊಂದಿಗೆ ಆತ ಅಲ್ಲಿದ್ದರು. ಅದು ಸುಗ್ಗಿ ಹಬ್ಬದ ನಂತರ ಚಳಿಗಾಲ ಆಗಿದ್ದರಿಂದ ಆತ ಉಣ್ಣೆಯ ಕೋಟು ಹಾಕಿಕೊಂಡಿದ್ದರು. ಸ್ವರ್ಗಲೋಕದ ಪವಾಡ ನಡೆದಿದ್ದರಿಂದ ನಾನು ಅಶಕ್ತತೆಯಿಂದ ತಲೆತಿರುಗಿ ಸತ್ತು ಹೋಗಲಿಲ್ಲ. ಬೇಸಿಗೆ ಕಾಲದುದ್ದಕ್ಕೂ ನಾನು ಉಪವಾಸ ಮಾಡಿದ್ದೆ. ನನಗೆ ತುಂಬಾ ಬೇಕಾದ ಸ್ನೇಹಿತರ ಜೀವನ, ನಾನು ನನ್ನ ಗಂಡನ ಜೊತೆ ಅನುಭವಿಸಿದ ಜೀವನಕ್ಕಿಂತ ಚೆನ್ನಾಗಿರಲಿ ಅಂತ ಅವರಿಗೆ ಹಾರೈಸುತ್ತಿದ್ದೆ. ಬಹುಶಹ ನಾನಿದನ್ನು ಹೇಳಲ್ಲ, ಆದರೆ ನಮ್ಮ ಆತ್ಮಗಳು ಮತ್ತೆ ಒಂದಾಗುವ ವರೆಗೂ ನಾನು ಕಾಯಲಿಲ್ಲ.
'ಹೌದು, ಪ್ರೀತಿಪಾತ್ರರೇ, ತಮಗೆ ಯಾವುದು ಒಳ್ಳೆಯದು ಎಂದು ಯುವಕ ಯುವತಿಯರಿಗೇನು ಗೊತ್ತು?  ಅದರ ಗುರುತುಗಳನ್ನು ತಾಯಂದಿರು ಮಾತ್ರ ತಿಳಿಯಲು ಬಯಸುತ್ತಾರೆ. ಕ್ರಾಸ್ನೋಸ್ಟಾದಲ್ಲಿ ಒಬ್ಬ ಹೆಂಗಸು ವಾಸವಾಗಿದ್ದಳು, ಅವಳ ಹೆಸರು ರಿಜೆ ಲೀ ಅಂತಾ. ಅವಳು ತನ್ನ ಗಂಡು ಮಕ್ಕಳಿಗೆ ಹೆಣ್ಣು ನೋಡುತ್ತಿದ್ದಳು. ಆಗ ಅಕೆ ತನ್ನ ಭಾವಿ ಸೊಸೆಯಂದಿರನ್ನು ಬೆಳ್ಳಂಬೆಳಗ್ಗೆಯೆ ಹಿಡಿದು ಇಕ್ಕಟ್ಟಿಗೆ ಸಿಕ್ಕಿಸುತ್ತಿದ್ದಳು. ಹಾಸಿಗೆ ಮೇಲಿನ ಹೊದಿಕೆ ಕೊಳೆಯಾಗಿದ್ದರೆ, ತಲೆ ಬಾಚಿಕೊಳ್ಳದೆ ಪ್ರಶ್ನೆ ಮಾಡಿ ಬಾಗಿಲು ತೆಗೆದರೆ, ಅಸ್ತವ್ಯಸ್ತವಾಗಿ ಗೌನು ಹಾಕಿಕೊಂಡಿದ್ದನ್ನು ಕಂಡರೆ ಅವಳು ಬಿಡುತ್ತಿರಲಿಲ್ಲ.  ಅದಕೂ ಮೊದಲು ಅಕ್ಕಪಕ್ಕದ ಹಳ್ಳಿಯಲ್ಲಿ ಎಲ್ಲರೂ ಅವಳ ಮೇಲೆ ಕಣ್ಣಿಟ್ಟಿದ್ದರು. ಅವಳೇನಾದರೂ ಬೆಳಬೆಳಗ್ಗೇನೆ ಮಾರುಕಟ್ಟೆಯಲ್ಲಿ ಕಣ್ಣಿಗೆ ಬಿದ್ದರೆ ವಯಸ್ಸಿಗೆ ಬಂದ ಎಲ್ಲ ಹುಡುಗಿಯರು ತಮ್ಮ ಮನೆ ಬಾಗಿಲು ಚಿಲಕ ಭದ್ರವಾಗಿ ಹಾಕಿದೆಯೆ ಅಂತ ಖಚಿತ ಮಾಡಿಕೊಳ್ಳುತ್ತಿದ್ದರು. ಅವಳಿಗೆ ದೃಢಕಾಯರಾದ ಆರು ಜನ ಗಂಡುಮಕ್ಕಳಿದ್ದರು. ಅವಳು ಹುಡುಕಿ ತಂದು ಮದುವೆ ಮಾಡಿದ ಯಾವ ಹೆಣ್ಣೂ ಅವರಿಗೆ ಸರಿಜೋಡಿ ಆಗಲಿಲ್ಲ. ಅದು ಇನ್ನೊಂದು ಕತೆ. ಮದುವೆಗೆ ಮುಂಚೆ ಹುಡುಗಿ ಚೊಕ್ಕಟವಾಗಿರಬೇಕು, ಅಚ್ಚುಕಟ್ಟಾಗಿರಬೇಕು; ಆದರೆ ಮದುವೆ ಆದಮೇಲೆ ಅವಳು ಕಚಡಾ ಹೆಂಗಸಾಗಬಹುದು. ಪ್ರತಿಯೊಂದೂ ಅವರವರ ಅದೃಷ್ಟದ ಮೇಲೆ ನಿಂತಿದೆ.
'ನಿಮಗೊಂದು ಕತೆ ಹೇಳಬೇಕು. ಹ್ರೂಬೈಶೋನಲ್ಲಿ ರೆಬ್ ಲೆಮೆಲ್ ವ್ಯಾಗ್ಮಿಸ್ಟರ್ ಅಂತೊಬ್ಬ ಸಾಹುಕಾರ ಇದ್ದ. ಅ ದಿನಗಳಲ್ಲಿ ನಾವು ಮನೆತನದ ಹೆಸರುಗಳನ್ನು ಬಳಸುತ್ತಿರಲಿಲ್ಲ. ರೆಬ್ ಲೆಮೆಲ್ ತುಂಬಾ ಶ್ರೀಮಂತನಾಗಿದ್ದರೂ ವ್ಯಾಗ್ಮಿಸ್ಟರ್ ಎಂದೇ ಅವನನ್ನು ಯಾವಾಗಲೂ ಕರೆಯಲಾಗುತ್ತಿತ್ತು. ಅವನ ಹೆಂಡತಿಯ ಹೆಸರು ಎಸ್ತರ್ ರೋಸಾ. ಆಕೆ ವಿಸ್ತುಲಾದ ಇನ್ನೊಂದು ಪ್ರದೇಶದವಳು. ನಾನವಳನ್ನು ನನ್ನ ಕಣ್ಣಾರೆ ಕಂಡಿದ್ದೇನೆ. ದೊಡ್ಡ ನಗರದ ಗಾಳಿ ಬಡಿದ ಅವಳು ಸುಂದರವಾದ ಹೆಂಗಸು. ಯಾವಾಗಲೂ ತನ್ನ ವಿಗ್ ಮೇಲೆ ಕಪ್ಪು ದಾರದ ಮುಸುಕು ಹಾಕಿಕೊಳ್ಳುತ್ತಿದ್ದಳು. ಅವಳ ಮುಖ ಬಾಲೆಯೊಬ್ಬಳ ಮುಖದ ಹಾಗೆ ಬೆಳ್ಳಗೂ ಮೆತ್ತಗೂ ಇತ್ತು. ಅವಳ ಕಣ್ಣು ಕಪ್ಪಗಿದ್ದವು. ಅವಳು ರಷ್ಯನ್, ಪೊಲಿಷ್, ಜರ್ಮನ್, ಬಹುಶಹ ಫ್ರೆಂಚ್ ಕೂಡ ಮಾತಾಡುತ್ತಿದ್ದಳು. ಪಿಯಾನೊ ನುಡಿಸುತ್ತಿದ್ದಳು. ರಸ್ತೆಗಳು ಕೆಸರಿನಿಂದ ಕೂಡಿದ್ದಾಗಲೂ ಅವಳು ಹೈಹೀಲ್ಡ್ನ ಪೇಟೆಂಟ್ ಲೆದರ್ ಶೂಗಳನ್ನೆ ಹಾಕಿಕೊಳ್ಳುತ್ತಿದ್ದಳು. ಮಾಗಿ ಕಾಲದಲ್ಲೊಂದು ದಿನ ತನ್ನ ಲಂಗವನ್ನು ಮೇಲೆತ್ತಿ ಕಲ್ಲಿನಿಂದ ಕಲ್ಲಿಗೆ ಹಕ್ಕಿಯಂತೆ ಜಿಗಿಯುತ್ತಿದ್ದ ಆ ನೈಜ ಮಹಿಳೆಯನ್ನು ನಾನು ನೋಡಿದೆ. ಅವರಿಗೆ ಒಬ್ಬನೇ ಒಬ್ಬ ಮಗ ಇದ್ದ. ಬೆನ್ ಜಿಯಾನ್. ಅವನು ತನ್ನ ತಾಯಿಯಂತೆ, ನೀರಿನ ಎರಡು ಹನಿಗಳಂತಿದ್ದ. ಅವಳ ಕಡೆಯಿಂದಲ್ಲ, ಅವಳ ಗಂಡನ ಕಡೆಯಿಂದ ನಾವು ದೂರದ ಸಂಬಂಧಿಕರಾಗಿದ್ದೆವು. ಬೆಂಜ್ ಎಂದು ಕರೆಯಲಾಗುತ್ತಿದ್ದ ಬೆನ್ ಜಿಯಾನ್ ಪ್ರತಿಯೊಂದೂ ಸದ್ಗುಣವನ್ನು ಹೊಂದಿದ್ದ. ಅವನು ಸುಂದರನೂ ಬುದ್ಧಿವಂತನೂ ತಿಳುವಳಿಕಸ್ಥನೂ ಆಗಿದ್ದ. ಹಗಲಿನ ಹೊತ್ತಿನಲ್ಲಿ ರಾಬ್ಬಿ ಜೊತೆಗೂಡಿ ಅವನು ಯಹೂದಿ ಧರ್ಮಶಾಸ್ತ್ರವನ್ನು ಕಲಿಯುತ್ತಿದ್ದನು, ಸಂಜೆಯ ವೇಳೆ ಅಧ್ಯಾಪಕರಲ್ಲೊಬ್ಬರು ಧರ್ಮಾತೀತ ವಿಷಯಗಳನ್ನು ಕುರಿತು ಹೇಳಿಕೊಡುತ್ತಿದ್ದರು. ಬೆಂಜ್ ತನ್ನ ತಾಯಿಯಂತೆ ಕಪ್ಪನೆಯ ಕೂದಲು ಮತ್ತು ಬಿಳಿಯ ಮೈಬಣ್ಣವನ್ನು ಹೊಂದಿದ್ದನು. ಬೇಸಿಗೆಯ ದಿನಗಳಲ್ಲಿ ಬಾಲಕರ ಸುಂದರ ಬೂಟುಗಳನ್ನು ತೊಟ್ಟು ಆಧುನಿಕ ಶೈಲಿಯಲ್ಲಿ ಹಿಂದುಗಡೆ ಹರಿದಂತಿರುವ ತನ್ನ ಸೊಗಸಾದ ಹತ್ತಿ ಬಟ್ಟೆಯ ಉಡುಪನ್ನು ಉಟ್ಟು ಹೊರನಡಿಗೆ ಕೈಗೊಂಡನೆಂದರೆ, ಎಲ್ಲ ಹುಡುಗಿಯರು ಕಿಟಕಿಯ ಮೂಲಕ ಅವನ ಮೇಲೆ ಚಂದ್ರಹಾಸ ಬೀರುತ್ತಿದ್ದರು. ಹೀಗಿದ್ದರೂ ಕೂಡ ಹೆಣ್ಣುಮಕ್ಕಳಿಗೆ ಮಾತ್ರ ವರದಕ್ಷಿಣೆ ಕೊಡುವ ಪದ್ಧತಿ ಇದೆ. ಬೆಂಜ್ ನ ತಂದೆ ತನ್ನ ಮಗನಿಗಾಗಿ ಹತ್ತು ಸಾವಿರ ರೂಬೆಲ್ ಗಳ ಮೊತ್ತವನ್ನು ತೆಗೆದಿರಿಸಿದ್ದ. ಅವನಿಗದು ಯಾವ ವ್ಯತ್ಯಾಸ ಉಂಟುಮಾಡಬಲ್ಲದು? ಬೆಂಜ್ ಆತನ ಏಕಮಾತ್ರ ವಾರಸುದಾರನಾಗಿದ್ದ. ಆ ಸೀಮೆಯ ಅತಿ ಶ್ರೀಮಂತ ಹುಡುಗಿಯರನ್ನು ಅವನಿಗೆ ಜೋಡು ಮಾಡಲು ಅವರು ಪ್ರಯತ್ನಿಸಿದರು. ಆದರೆ ಎಸ್ತರ್ ರೋಸಾ ತುಂಬ ನಿರ್ದಿಷ್ಟವಾಗಿದ್ದಳು. ಮೂರು ಜನ ಹೆಣ್ಣಾಳುಗಳು, ಒಬ್ಬ ಗಂಡಾಳು ಅಲ್ಲದೆ ಗಾಡಿ ಓಡಿಸುವವನೊಬ್ಬ ಹೆಚ್ಚುವರಿಯಾಗಿದ್ದು ಅವಳಿಗೆ ಮಾಡಲು ಯಾವ ಕೆಲಸವೂ ಇರಲಿಲ್ಲ. ಹಾಗಾಗಿ ಅವಳು ಬೆಂಜ್ ನಿಗೆ ಒಂದು ಹೆಣ್ಣನ್ನು ಹುಡುಕುವುದರಲ್ಲೆ ಕಾಲಕಳೆದಳು. ಈಗಾಗಲೇ ಅವಳು ಪೋಲೆಂಡಿನ ಅರ್ಧ ಭಾಗದಲ್ಲಿ ಚೆಂದ ಕಾಣುವ ಹುಡುಗಿಯರನ್ನು ತನಿಖೆ ಮಾಡಿದ್ದಳು. ಆದರೆ ಕೊರತೆ ಇಲ್ಲದೆ ಇರುವ ಒಬ್ಬಳನ್ನೂ ಅವಳು ಪತ್ತೆ ಮಾಡಲು ಆಗಿರಲಿಲ್ಲ. ಒಬ್ಬಳು ಸಾಕಷ್ಟು ಸುಂದರವಾಗಿ ಇಲ್ಲದಿದ್ದರೆ, ಇನ್ನೊಬ್ಬಳು ಅಗತ್ಯ ಬುದ್ಧಿವಂತೆಯಾಗಿರಲಿಲ್ಲ. ಆದರೆ ಅವಳು ಬಹುಪಾಲು ಉದಾತ್ತ ನಡತೆಯುಳ್ಳವಳನ್ನು ಹುಡುಕುತ್ತಿದ್ದಳು. ಯಾಕಂದರೆ, ಹೆಣ್ಣು ಒರಟು ಸ್ವಭಾವದವಳಾದರೆ, ಅವಳ ಗಂಡ ಕಷ್ಟ ಅನುಭವಿಸಬೇಕಾಗುತ್ತೆ. ''ಯಾವುದೇ ಹೆಣ್ಣು ನನ್ನ ಬೆಂಜ್ ನ ಮೇಲೆ ತನ್ನ ಸಿಟ್ಟು ಸೆಡವು ತೋರಿಸಿಕೊಡಲು ನಾನು ಅವಕಾಶ ಮಾಡಿಕೊಡಲ್ಲ.'' ಆ ಹೊತ್ತಿಗಾಗಲೇ ನನ್ನ ಮದುವೆ ಆಗಿಹೋಗಿತ್ತು. ನನ್ನ ಹದಿನೈದನೆಯ ವರುಷದಲ್ಲೆ ನನ್ನ ಮದುವೆಯಾಗಿತ್ತು. ಎಸ್ತರ್ ರೋಸಾಳಿಗೆ ಹ್ರೂಬೈಶೋನಲ್ಲಿ ನಿಜವಾದ ಸ್ನೇಹಿತರೇ ಇರಲಿಲ್ಲ. ಅಷ್ಟೇಅಲ್ಲದೆ ಅವಳ ಮನೆಗೆ ಮೇಲಿಂದ ಮೇಲೆ ಭೇಟಿ ನೀಡುವವಳು ನಾನೇ ಆಗಿದ್ದೆ. ಅವಳು ನನಗೆ ಹೆಣಿಗೆ ಹಾಕುವುದು, ಬುಟ್ಟಾ ಹಾಕುವುದು, ಸೂಜಿ ಮೊನೆ ಆಡಿಸುವುದು ಹೇಗಂತ ಕಲಿಸಿಕೊಟ್ಟಳು. ಕಲ್ಪನೆ ಅವಳ ಮನಸ್ಸನ್ನು ತುಂಬಿಕೊಂಡಾಗ ಒಂದು ಡ್ರೆಸ್ಸೊ ಜುಬ್ಬಾನೊ ಸಿದ್ಧ ಮಾಡುತ್ತಿದ್ದಳು. ಒಂದು ಸಲ ಅವಳು ಸುಮ್ಮನೆ ತಮಾಷೆಗೋಸ್ಕರ ನನಗೊಂದು ಡ್ರೆಸ್ ರೆಡಿ ಮಾಡಿದಳು. ಅವಳಿಗೆ ಬಿಜಿನೆಸ್ ನಲ್ಲೂ ಒಳ್ಳೆ ತಲೆಯಿತ್ತು. ಅವಳ ಗಂಡ ಅವಳ ಜೊತೆ ಚರ್ಚೆ ಮಾಡದೆ ಒಂದು ಹೆಜ್ಜೆ ಕೂಡ ಇಡುತ್ತಿರಲಿಲ್ಲ. ಒಂದು ಆಸ್ತಿ ಕೊಂಡುಕೊಳ್ಳಬೇಕು ಇಲ್ಲ ಮಾರಬೇಕು ಅಂತ ಅವಳು ಅವನಿಗೆ ಯಾವಾಗ ಹೇಳಿದರೂ ತಕ್ಷಣವೆ ರೆಬ್ ಲೆಮೆಲ್ ವ್ಯಾಗ್ಮಿಸ್ಟರ್ ಏಜೆಂಟ್ ಲಿಪ್ಪೆಗೆ ಹೇಳಿಕಳಿಸಿ: ''ನನ್ನ ಹೆಂಡತಿ ಇಂತಿಂಥ ಆಸ್ತಿ ಕೊಂಡಕೊಳ್ಳಬೇಕು ಇಲ್ಲ ಮಾರಬೇಕು ಅಂತ ಬಯಸಿದ್ದಾಳೆ'' ಅಂತಾ ಆ ಕೆಲಸ ಮಾಡಿಸುತ್ತಿದ್ದ. ಅವಳು ಯಾವತ್ತಿಗೂ ಒಂದು ತಪ್ಪು ಮಾಡಿಲ್ಲ.

'ಬೆಂಜ್ ಆ ಹೊತ್ತಿಗಾಗಲೇ ಹತ್ತೊಂಬತ್ತು ವರುಷ ದಾಟಿದ್ದ. ಆದರೂ ನಿಶ್ಚಿತಾರ್ಥವೂ ನಡೆದಿರಲಿಲ್ಲ. ಆ ಕಾಲದಲ್ಲಿ ಹತ್ತೊಂಬತ್ತು ವಯಸ್ಸು ಅಂದರೆ ಮುದಿ ಹುಡುಗ ಅಂತ ಪರಿಗಣಿಸುತ್ತಿದ್ದರು. ಅವನ ತಾಯಿ ಹೆಣ್ಣಿನ ಹುಡುಕಾಟದಲ್ಲಿ ಮುಳುಗಿ ಹೋಗಿ ಹುಡುಗನಿಗೆ ಕೆಟ್ಟ ಹೆಸರು ಬಂದಿದೆ ಅಂತ ರೆಬ್ ಲೆಮೆಲ್ ವ್ಯಾಗ್ಮಿಸ್ಟರ್ ಗೆ ದೂರು ಬಂತು. ಬೆಂಜ್ ಹಣೆಯ ಮೇಲೆ ಮೊಡವೆ ಬಂದಿದೆ ಯಾಕಂದರೆ ಅವನಿಗೆ ಒಂದು ಹೆಣ್ಣಿನ ಅಗತ್ಯ ಇದೆ ಅಂತಲೂ ಹೇಳಲಾಯಿತು. ನಾವು ಅದನ್ನು ಅನುರಾಗದ ಮೊಡವೆಗಳು ಅತ ಕರಿತೀವಿ.
'ನಾನೊಂದು ದಿನ ಉಣ್ಣೆ ದಾರದ ಚೆಂಡನ್ನು ಎರವಲು ಪಡೆಯಲು ಎಸ್ತರ್ ರೋಸಾಳನ್ನು ನೋಡಲು ಹೋದೆ: ''ಜೆಡ್ಲೆ ನನ್ನ ಜೊತೆ ಜಾಮಾಸ್ಕ್ ಗೆ ಬರುತ್ತಿಯಾ?''  
ನಾನು ಕೇಳಿದೆ. ''ಜಾಮಸ್ಕ್ ದಲ್ಲಿ ನನಗೇನು ಕೆಲಸ?''
''ನೀನು ನನ್ನ ಅತಿಥಿ. ಅದಂಕ್ಕಿತ ಇನ್ನೇನು ಬೇಕು?''
'ಎಸ್ತರ್ ರೋಸಾ ಸ್ವಂತ ಗಾಡಿಯಲ್ಲಿ ಒಬ್ಬಳೇ ಹೋಗಿ ಬರುತ್ತಿದ್ದಳು. ಆದರೆ ಈ ಸಲ ಜಾಮಾಸ್ಕ್ ಗೆ ನನ್ನಂಥ ಬೇರೊಬ್ಬರ ಜೊತೆ ಹೊರಟಿದ್ದಳು. ಈ ಪಯಣ ಮದುಮಗಳನ್ನು ನೋಡುವ ಸಂಬಂಧದಲ್ಲಿರಬಹುದು ಅಂತ ನಾನು ಊಹೆ ಮಾಡಿದೆ. ಆದರೆ ಎಸ್ತರ್ ರೋಸಾ ಸ್ವಭಾವ ಎಂಥದ್ದು ಅಂದರೆ, ಅವಳಿಗೆ ಯಾರೂ ಏನೂ ಪ್ರಶ್ನೆ ಮಾಡಬಾರದು. ಅವಳಿಗೆ ಮಾತಾಡಲು ಇಷ್ಟ ಇದ್ದರೆ ಎಲ್ಲವೂ ಸರಿ ಇರುತ್ತದೆ. ಇಲ್ಲದಿದ್ದರೆ ನೀವು ಕಾಯಬೇಕಾಗುತ್ತದೆ. ನಾನು ಸಂಚಾರದ ಬಗ್ಗೆ ನನ್ನ ಅಮ್ಮನಿಗೆ ಒಂದೇ ಮಾತಿನಲ್ಲಿ ಹೇಳಲು ಹೋದೆ. ನನ್ನ ಗಂಡನಿಗೆ ಅನುಮತಿ ಕೇಳಬೇಕಾದ ಅಗತ್ಯ ಇರಲಿಲ್ಲ. ಆತ ಓದುವ ಕೋಣೆಯಲ್ಲಿ ಇಡೀ ದಿವಸ ಕುಳಿತುಕೊಂಡು ಇರುತ್ತಿದ್ದರು. ಸಂಜೆ ಎದ್ದು ಆತ ಮನೆವೊಳಗೆ ಬಂದಾಗಲೆ ನನ್ನಮ್ಮ ಆತನಿಗೆ ರಾತ್ರಿ ಊಟಕ್ಕೆ ಬಡಿಸುವುದು. ಆ ದಿನಗಳಲ್ಲಿ ಒಬ್ಬ ಯಹೂದಿ ಧರ್ಮಶಾಸ್ತ್ರದ ಯುವವಿದ್ವಾಂಸನಿಗೆ ತನಗೊಬ್ಬ ಹೆಂಡತಿ ಇದ್ದಾಳೆ ಅಂತಲೂ ಗೊತ್ತ್ತಾಗುತ್ತಿರಲಿಲ್ಲ. ಆತ ರಸ್ತೆಯಲ್ಲಿ ನನ್ನನ್ನು ಕಂಡರೆ ಗುರುತಿಸುತ್ತಾರೆ ಅನ್ನೋ ನಂಬಿಕೆ ನನಗಿಲ್ಲ. ನಾನೊಂದು ಜೊತೆ ಬಟ್ಟೆ ಮತ್ತು ಒಳ ಉಡುಪು ತುಂಬಿಕೊಂಡು-ನಿಮ್ಮ ಕ್ಷಮೆ ಕೇಳುತ್ತೀನಿ-ನಾನು ಸಂಚಾರಕ್ಕೆ ಸಿದ್ಧಳಾದೆ. ನಾವು ಶ್ರೀಮಂತರ ಗಾಡಿಯಲ್ಲಿ ಪಯಣಿಸುತ್ತಿದ್ದು ಅವರೇ ಗಾಡಿ ನಡೆಸುತ್ತಿದ್ದರು. ಎರಡೂ ಕುದುರೆಗಳು ಸಿಂಹಗಳಂತಿದ್ದವು. ಮೇಜಿನ ಹಾಗೆ ಒಣ ಮತ್ತು ಮೆದುವಾಗಿ ರಸ್ತೆ ಇತ್ತು. ನಾವು ಜಾಮಾಸ್ಕ್ ಗೆ ಬಂದಾಗ, ಆತ ಗಾಡಿಯನ್ನು ಮಾರುಕಟ್ಟೆ ಪ್ರದೇಶದಲ್ಲಿ ನಿಲ್ಲಿಸದೆ, ಯಹೂದಿಯರಲ್ಲದ ವಿಧರ್ಮಿಯರು ವಾಸಿಸುತ್ತಿದ್ದ ರಸ್ತೆಯ ಬದಿಯಲ್ಲಿ ಇಳಿಸಿದ. ಎಸ್ತರ್ ರೋಸಾ ಅವನಿಗೆ ಧನ್ಯವಾದ ಹೇಳಿದಾಗ ಆತ ತನ್ನ ಹ್ಯಾಟಿನ ತುದಿ ಹಿಡಿದು ಚಾವಟಿಯನ್ನು ಗಾಳಿಯಲ್ಲಿ ಬೀಸಿ ನಮಗೆ ಗೌರವ ತೋರಿಸಿದ. ಇದೆಲ್ಲ ಪೂರ್ವ ಏರ್ಪಾಟಿನಂತೆ ತೋರಿತು. 
ಎಸ್ತರ್ ರೋಸಾ ಯಾವುದೇ ಸ್ಥಳಕ್ಕೆ ಪಯಣ ಬೆಳೆಸಲಿ, ಆಗ ಅವಳು ಒಂದು ನಿಯಮದಂತೆ, ಒಬ್ಬ ಕೌಂಟೆಸ್ ನಷ್ಟೇ ಅಂದವಾದ ಬಟ್ಟೆ ಉಟ್ಟುಕೊಳ್ಳುತ್ತಿದ್ದಳು. ಈ ಸಲ ಅವಳು ತನ್ನ ವಿಗ್ ಮೇಲೆ ಕರ್ಚೀಪು ಕಟ್ಟಿ, ಸರಳವಾದ ಅರಳೆಯ ಬಟ್ಟೆ ಉಟ್ಟುಕೊಂಡಿದ್ದಳು. ಅದು ಬೇಸಗೆಯ ದಿನಗಳಾಗಿದ್ದು ಹಗಲು ಹೆಚ್ಚಿಗೆ ಇರುತ್ತಿತ್ತು. ನಾವು ಮಾರುಕಟ್ಟೆ ಪ್ರದೇಶಕ್ಕೆ ನಡೆದುಕೊಂಡು ಹೋದೆವು. ಅವಳು ಬೇರಿಶ್ ಲುಬ್ಲಿನರ್ ಅವರ ಒಣ-ಸಾಮಾನು ಅಂಗಡಿ ಬಗ್ಗೆ ವಿಚಾರಿಸಿಕೊಂಡಳು. ಒಂದು ದೊಡ್ಡ ಅಂಗಡಿಯೊಂದನ್ನು ನಮಗೆ ತೋರಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಒಣ-ಸಾಮಾನು ಅಂಗಡಿಯಲ್ಲಿ ನೀವು ದೊಡ್ಡ ಗಾತ್ರದ ಸರಕುಗಳನ್ನು ಮಾತ್ರ ಕೊಳ್ಳುತ್ತೀರಿ. ಆದರೆ ಅಂದಿನ ದಿನಗಳಲ್ಲಿ ಅವರು ದಾರ, ಹೆಣಿಗೆ ಹಾಕುವ ಉಣ್ಣೆಯ ದಾರ, ಮತ್ತು ಸಣ್ಣ ಪುಟ್ಟ ಎಲ್ಲ ವಿಧವಾದ ಸಾಮಾನುಗಳನ್ನು ಮಾರುತ್ತಿದ್ದರು. ಅವರು ಏನನ್ನು ಮಾರುತ್ತಿರಲಿಲ್ಲ? ಅದು ಕಾಡಿನಷ್ಟು ದೊಡ್ಡದಾದ ಅಂಗಡಿಯಾಗಿದ್ದು, ಮಾರಾಟದ ಸರಕುಗಳನ್ನು ತಾರಸಿಯ ವರೆಗೂ ಭರ್ತಿ ಮಾಡಿರುತ್ತಿತ್ತು. ದೊಡ್ಡ ನಗರಗಳಲ್ಲಿ ಅವರು ಮಾಡಿದಂತೆ ಎತ್ತರವಾದ ಡೆಸ್ಕಿನ ಮೇಲೆ ನಿಂತ ವ್ಯಕ್ತಿ ದಾಖಲೆ ಪುಸ್ತಕದಲ್ಲಿ ಬರೆಯುತ್ತ್ತಿದ್ದ. ಅವನು ಕ್ಯಾಷಿಯರ್ರೊ ಲೆಕ್ಕ ಬರೆಯುವವನೊ ಯಾರೆಂದು ನನಗೆ ಗೊತ್ತಿಲ್ಲ. ಬೆಂಕಿಯಂತೆ ಉರಿವ ಕಪ್ಪು ಕಣ್ಣಿನ ಹುಡುಗಿಯೊಬ್ಬಳು ಕೌಂಟರ್ ನ ಹಿಂದೆ ನಿಂತಿದ್ದಳು. ಅಂಗಡಿಯಲ್ಲಿ ಗಿರಾಕಿಗಳಾಗಿ ನಾವು ಮಾತ್ರ ಇದ್ದು ಆಕೆಯನ್ನು ಸಂಪರ್ಕಿಸಿದೆವು. ''ನಿಮಗೇನು ಬೇಕು? ಹೊಸಬರ ತರಹ ಕಾಣುಸ್ತೀರಿ'' ಎಂದು ಅವಳು ಕೇಳಿದಳು. 
''ಹೌದು, ನಾವು ಹೊಸಬರು'', ಎಸ್ತರ್ ರ್ರೋಸಾ ಉತ್ತರಿಸಿದಳು.
''ನಿಮಗೇನು ಬೇಕಿತ್ತು?'' ಹುಡುಗಿ ಕೇಳಿದಳು.
''ಒಂದು ಸೂಜಿ'' ಎಸ್ತರ್ ರೋಸಾ ಹೇಳಿದಳು.
ಅವಳು ಹೇಳಿದ 'ಸೂಜಿ' ಎಂಬ ಪದ ಕೇಳಿದ ಕೂಡಲೇ ಹುಡುಗಿಯ ಮುಖ ಬದಲಾಯಿತು. ಅವಳ ಕಣ್ಣುಗಳಲ್ಲಿ ಕೋಪ ತುಂಬಿಕೊಂಡಿತು. ಅವಳು ಹೇಳಿದಳು: ಒಂದು ಸೂಜಿಗೆ ಇಬ್ಬರು ಹೆಂಗಸರು.
'ಒಂದು ಸೂಜಿ ದುರಾದೃಷ್ಟವೆಂದು ವರ್ತಕರು ನಂಬುತ್ತಾರೆ. ವಾರದ ಆರಂಭದಲ್ಲಿ ಒಂದು ಸೂಜಿ ಕೊಳ್ಳುವ ಧೈರ್ಯ ಯಾರೂ ಮಾಡಿಲ್ಲ, ಯಾಕಂದ್ರೆ, ಹಾಗಂದರೇನೆ ಇಡೀ ವಾರ ದುರಾದೃಷ್ಟ ಆವರಿಸುತ್ತದೆಂದು ಅವರಿಗೆ ಗೊತ್ತು. ವಾರದ ಮಧ್ಯದಲ್ಲೂ ಕೂಡ ವ್ಯಾಪಾರಿಗಳು ಸೂಜಿಯನ್ನು ಮಾರಲು ಇಷ್ಟಪಡುವುದಿಲ್ಲ. ಯಾವುದೇ ವ್ಯಕ್ತಿ ಒಂದು ದಾರದುಂಡೆ ಮತ್ತು ಕೆಲವು ಗುಂಡಿಗಳನ್ನು ಕೊಂಡುಕೊಂಡರೆ, ಅವುಗಳೊಂದಿಗೆ ಸೂಜಿಯೊಂದನ್ನು ಕೌಂಟರ್ ಮೇಲೆ ಎಸೆಯಲಾಗುತ್ತದೆ. ಸೂಜಿಯೊಂದರ ಬೆಲೆ ಜರ್ಮನಿಯ ಅರ್ಧ ಬೆಳ್ಳಿ ನಾಣ್ಯ ಮಾತ್ರ. ಅಂಥ ಸಣ್ಣ ವಸ್ತುವಿನ ವ್ಯಾಪಾರ ಮಾಡುವುದೆ ಅನಿಷ್ಟವಾಗಿತ್ತು.
''ಹೌದು. ನನಗೆ ಬೇಕಿರುವುದೆಲ್ಲ ಸೂಜಿಯಷ್ಟೆ'' ಎಸ್ತರ್ ರೋಸಾ ಹೇಳಿದಳು.
'ಹುಡುಗಿಗೆ ಕೋಪ ಬಂತು, ಆದರೂ ಸೂಜಿಗಳ ಡಬ್ಬಿಯೊಂದನ್ನು ಹೊರತೆಗೆದಳು. ಎಸ್ತರ್ ರೋಸಾ ಡಬ್ಬಿಯ ಮೂಲಕವೆ ಹುಡುಕಿದಳು. ನಂತರ ಹೇಳಿದಳು- ''ಬಹುಶಹ ನಿಮಲ್ಲಿ ಬೇರೆ ತರಹದ ಸೂಜಿ ಇದೆ, ಅಲ್ಲವೆ?
''ಇವುಗಳಲ್ಲಿ ಏನು ಸರಿಯಿಲ್ಲ?'' ಹುಡುಗಿ ಅಸಹನೆಯಿಂದ ಕೇಳಿದಳು.
''ಅವರ ಕಣ್ಣುಗಳು ತುಂಬಾ ಚಿಕ್ಕದಾಗಿವೆ. ಅವುಗಳಿಗೆ ದಾರ ಪೋಣಿಸಲು ಕಷ್ಟವಾಗುತ್ತದೆ.''
''ನನ್ನಲ್ಲಿರುವುದೆಲ್ಲ ಇಷ್ಟೆ. ನಿಮಗೆ ಸರಿಯಾಗಿ ಕಾಣಿಸದಿದ್ದರೆ ನೀವೇಕೆ ಕಣ್ಣಿಗೆ ಕನ್ನಡಕ ಕೊಂಡುಕೋ ಬಾರದು?'' ಹುಡುಗಿ ಕೋಪದಿಂದ ಹೇಳಿದಳು.
'ಎಸ್ತರ್ ರೋಸಾ ಒತ್ತಿ ಹೇಳಿದಳು, ''ನಿಮ್ಮಲ್ಲಿ ಬೇರೆ ಇಲ್ಲ ಅಂತ ನಿಮಗೆ ಖಚಿತವಾಗಿ ಗೊತ್ತ? ನನಗೆ ದೊಡ್ಡ ಕಣ್ಣಿನ ಸೂಜಿಯೆ ಬೇಕು.''  
'ಮನಸ್ಸಿಲ್ಲದ ಮನಸ್ಸಿನಿಂದ ಮತ್ತೊಂದು ಡಬ್ಬಿಯನ್ನು ಹೊರತೆಗೆದ ಹುಡುಗಿ ಅದನ್ನು ಕೌಂಟರ್ ನ ಮೇಲೆ ಕುಕ್ಕಿದಳು. ಎಸ್ತರ್ ರೋಸಾ ಹಲವಾರು ಸೂಜಿಗಳನ್ನು ಪರೀಕ್ಷಿಸಿ ಹೇಳಿದಳು: ''ಇವುಗಳಿಗೂ ಸಣ್ಣ ಕಣ್ಣುಗಳೇ ಇವೆ.''
'ಸೂಜಿಡಬ್ಬಿಯನ್ನು ಹಠಾತ್ತನೆ ಹಿಂಪಡೆದ ಹುಡುಗಿ ಕಿರುಚಿದಳು:''ನೀವು ಲುಬ್ಲಿನ್ ಗೆ ಯಾಕ್ರೀ ಹೋಗಲ್ಲಾ? ನಿಮಗೋಸ್ಕರ ಅಲ್ಲಿ ದೊಡ್ಡ ಕಣ್ಣಿನ ವಿಶೇಷ ಸೂಜಿಗೆ ಆರ್ಡರ್ ಮಾಡಿ.'' 
'ಎತ್ತರದ ಸ್ಟೂಲ್ ಬಳಿ ಇದ್ದ ವ್ಯಕ್ತಿ ನಗತೊಡಗಿದ. ''ನಿಮಗೆ ಬಹುಶಹ ಗೋಣಿತಾಟು ಹೊಲಿಯೊ ಸೂಜಿ ಬೇಕಿದೆ''ಎಂದಾತ ಸೂಚಿಸಿದ. ''ಕೆಲವು ಉದ್ಧಟರು ಅರ್ಧ ನಾಣ್ಯದ ವಸ್ತು ಮಾರಾಟ ಮಾಡೋಕೂ ಜನರ ತಲೆ ತಿಂತಾರೆ.'' ಹುಡುಗಿ ಒಳಗೊಳಗೆ ಗೊಣಗಿಕೊಂಡಳು.
'ಎಸ್ತರ್ ರೋಸಾ ಮಾರುತ್ತರ ನೀಡಿದಳು: ''ನನಗೆ ಗೋಣಿತಾಟು ಉಪಯೋಗಕ್ಕೆ ಬರಲ್ಲ ಅಥವಾ ಗೋಣಿತಾಟಿನ ಹಾಗೆ ಒರಟಾಗಿರುವಂಥ ಹುಡುಗಿಯರೂ ಉಪಯೋಗಕ್ಕೆ ಬರಲ್ಲ.'' ನಂತರ ಅವಳು ನನ್ನ ಕಡೆ ತಿರುಗಿ ಹೇಳಿದಳು: ''ಬಾ, ಜೆಡ್ಲೆ, ಅವರು ನಮ್ಮ ತರಹದ ಜನ ಅಲ್ಲ.''
'ಹುಡುಗಿಯ ಮುಖ ಕೆಂಪೇರಿ ಗಟ್ಟಿಯಾಗಿ ಹೇಳಿದಳು: ''ಎಂಥ ಗುಗ್ಗು ಜನ! ಹೋಗಿದ್ದು ಒಳ್ಳೇದೆ ಆಯಿತು!''
'ನಾವು ಹೊರ ಬಂದೆವು. ನನ್ನ ಕಣ್ಣಲ್ಲಿ ಇಡೀ ವ್ಯವಹಾರ ಕೆಟ್ಟದಾಗಿ ಕಂಡಿತು. ಹೆಂಗಸೊಬ್ಬಳು ಅಲ್ಲಿ ಹೋಗುತ್ತಿದ್ದಳು. ಎಸ್ತರ್ ರೋಸಾ ಅವಳಿಗೆ ರೆಬ್ ಜೆಲಿಗ್ ಇಜಬಿಟ್ಜರ್ ಅವರ ಒಣ-ಸಾಮಾನು ಅಂಗಡಿ ಬಗ್ಗೆ ಕೇಳಿದಳು. ''ಈ ರಸ್ತೆ ಬಲಗಡೆಗಿದೆ'' ಆಕೆ ಕೈ ಮಾಡಿ ತೋರಿಸಿ ಹೇಳಿದಳು. ನಾವು ಮಾರುಕಟ್ಟೆ ಪ್ರದೇಶ ದಾಟಿ ಒಂದು ಅಂಗಡಿಗೆ ಹೋದೆವು. ಅದು ಮೊದಲ ಅಂಗಡಿಗಿಂತ ಮೂರನೆಯ ಒಂದು ಭಾಗ ಮಾತ್ರ ಇತ್ತು. ಇಲ್ಲೂ ಕೂಡ ಸಾಮಾನು ಮಾರಾಟ ಮಾಡಲು ಯುವತಿಯೊಬ್ಬಳಿದ್ದಳು. ಈ ಹುಡುಗಿ ಕಪ್ಪಗಿರಲಿಲ್ಲ; ಕೂದಲು ಕೆಂಪಗೆ ಇತ್ತು. ಅವಳು ಅಸಹ್ಯವಾಗಿರಲಿಲ್ಲವಾದರೂ ಮಚ್ಚೆಗಳ ಗುರುತು ಇದ್ದವು. ಅವಳ ಕಣ್ಣುಗಳು ನೆಲ್ಲಿಕಾಯಿ ತರಹ ಹಸುರು ಇದ್ದವು. ಅವಳು ಸೂಜಿ ಮಾರಾಟ ಮಾಡುತ್ತಾಳಾ ಎಂದು ಎಸ್ತರ್ ರೋಸಾ ಕೇಳಿದಳು, ''ಯಾಕಿಲ್ಲ? ನಾವು ಪ್ರತಿಯೊಂದನ್ನೂ ಮಾರಾಟ ಮಾಡುತ್ತೀವಿ.''
ಎಸ್ತರ್ ರೋಸಾ ಹೇಳಿದಳು: ''ನಾನು ದೊಡ್ಡ ಕಣ್ಣಿನ ಸೂಜಿಗಾಗಿ ಹುಡುಕಿಕೊಂಡು ಬಂದೆ. ಯಾಕಂದರೆ ಸೂಜಿಗೆ ದಾರ ಪೋಣಿಸೋಕಾಗಲ್ಲ, ನನಗೆ ತೊಂದರೆ ಇದೆ.''
''ನಮ್ಮಲ್ಲಿರೋ ಎಲ್ಲ ಸೂಜಿಗಳನ್ನು ನಿಮಗೆ ತೋರುಸ್ತೀನಿ. ನಿಮಗೆ ಯಾವುದು ಚೆನ್ನಾಗಿ ಒಪ್ಪುತ್ತೋ ಅದನ್ನೆ ಆರಿಸಿಕೊಳ್ಳಿ''. ಹುಡುಗಿಉತ್ತರಿಸಿದಳು.                                                                                                                                                                                                                                                                                                                                                                                                              
 'ಇಲ್ಲೇನು ನಡೆಯುತ್ತಿದೆ ಎಂದು ನಾನಾಗಲೇ ಊಹಿಸಿದ್ದೆ. ನನ್ನೆದೆ ಕಳ್ಳನ ಎದೆಯ ಹಾಗೆ ಜೋರಾಗಿ ಬಡಿದುಕೊಳ್ಳುತ್ತಿತ್ತು. ಹುಡುಗಿ ಸೂಜಿಯ ಹತ್ತು ಡಬ್ಬಿಗಳನ್ನು ತೆಗೆದುತೋರಿಸಿದಳು. ''ನೀವ್ಯಾಕೆ ನಿಂತುಕೊಳ್ಳಬೇಕು? ಇಲ್ಲಿ ಸ್ಟೂಲಿದೆ. ದಯವಿಟ್ಟು ಕುಳಿತುಕೊಳ್ಳಿ'' ಎಂದು ಅವಳು ಹೇಳಿದಳು: ಅವಳು ನನಗೂ ಕೂಡ ಒಂದು ಸ್ಟೂಲು ತಂದಳು. ಎಸ್ತರ್ ರೋಸಾ ಇವಳನ್ನು ಕೂಡ ಪರೀಕ್ಷೆಗೆ ಒಡ್ಡುತ್ತಾಳೆ ಎಂದು ನನಗೆ ಪೂರ್ತಿ ಗೊತ್ತಿತ್ತು.
''ಸೂಜಿಗಳೆಲ್ಲ ಮಿಶ್ರ ಆಗಿಬಿಟ್ಟಿವೆ, ಯಾಕೆ?'' ಎಸ್ತರ್ ರೋಸಾ ದೂರಿದಳು. ''ಪ್ರತಿಯೊಂದು ಗಾತ್ರದ ಸೂಜಿ ಬೇರೆ ಬೇರೆ ಡಬ್ಬಿಯಲ್ಲೆ ಇರಬೇಕು.''
'ಹುಡುಗಿ ಕ್ಷಮೆ ಯಾಚಿಸುವಳಂತೆ ಹೇಳಿದಳು: ''ಅವು ಫ್ಯಾಕ್ಟರಿಯಿಂದ ಬಂದಾಗ ಅವನ್ನೆಲ್ಲ ಬೇರೆ ಬೇರೆ ಮಾಡಿಯೆ ಇಟ್ಟಿದ್ದಿವಿ. ಆದರೂ ಅವು ಮಿಶ್ರ ಆಗಿಬಿಟ್ಟಿವೆ.'' ಹುಡುಗಿ ತನ್ನ ಸಹನೆ ಕಳೆದುಕೊಳ್ಳುವಂತೆ ಮಾಡಲು ಏನೆಲ್ಲ ಮಾಡಬೇಕೊ ಅವನ್ನೆಲ್ಲ ಎಸ್ತರ್ ರೋಸಾ ಅತ್ಯುತ್ತಮವಾಗಿಯೆ ಮಾಡುತ್ತಿದ್ದುದನ್ನು ನಾನು ಕಂಡೆ. ಎಸ್ತರ್ ರೋಸಾ ಹೇಳಿದಳು: ''ನನಗೆ ಸರಿಯಾಗಿ ಕಾಣುಸ್ತಿಲ್ಲ. ಇಲ್ಲಿ ಕತ್ತಲೆ ಇದೆ.''
''ಒಂದು ನಿಮಿಷ, ನಾನು ಸ್ಟೂಲನ್ನು ಬಾಗಿಲ ಹತ್ತಿರ ಜರಗಿಸುತ್ತೀನಿ, ಅಲ್ಲಿ ಹೆಚ್ಚು ಬೆಳಕಿದೆ.'' ಹುಡುಗಿ ಉತ್ತರ ನೀಡಿದಳು.
ಎಸ್ತರ್ ರೋಸಾ ಕೇಳಿದಳು: ''ಬರಿಯ ಅರ್ಧ ಪೆನ್ನಿ ಸೂಜಿ ಮಾರಾಟ ಮಾಡೋಕೆ ಇಷ್ಟೆಲ್ಲ ಪ್ರಯತ್ನ ಪಟ್ಟರೆ ಅದರಿಂದ ನಿಮಗೇನು ಸಿಗುತ್ತೆ?'' ಹುಡುಗಿ ಅದಕ್ಕೆ ಉತ್ತರ ನೀಡಿದಳು: ''ಮೊದಲಿಗೆ ಹೇಳಬೇಕಂದರೆ, ಈ ಸೂಜಿ ಬೆಲೆ ಕಾಲು ಪೆನ್ನಿ ಮಾತ್ರ. ನಂತರ, ನೂರು ಜನ ಕುಶಲಗಾರರು ತಯಾರಿಸುವಂಥ ಒಂದು ಪೆನ್ನಿಗೂ ಅದೇ ತತ್ವ ಅನ್ವಯಿಸುತ್ತದೆ ಅಂತ ಧರ್ಮಶಾಸ್ತ್ರ ಹೇಳುತ್ತೆ. ಅಲ್ಲದೆ ಇವತ್ತು ನೀವು ಒಂದು ಸೂಜಿ ಕೊಂಡುಕೋತಿದ್ದಿರಿ. ನಾಳೆ ನೀವು ಮದುಮಗಳ ಉಡುಪಿಗಾಗಿ ಸಾಟಿನ್ ಬಟ್ಟೇನೂ ಕೊಂಡುಕೊಳ್ಳಬಹುದು.''
  ''ಹಾಗೋ? ಹಾಗಿದ್ದರೆ ಅಂಗಡಿ ಖಾಲಿಯಾಗುತ್ತ ಬಂದದ್ದು ಹೇಗೆ?'' ಎಸ್ತರ್ ರೋಸಾ ತಿಳಿಯಬಯಸಿದಳು. ''ರಸ್ತೆಯಾಚೆ ಇರೋ ಬೆರಿಸ್ ಲುಬ್ಲಿನರ್ ಅವರ ಅಂಗಡಿ ಗಿರಾಕಿಗಳಿಂದ ತುಂಬಿಹೋಗಿದೆ. ಅವರ ಮಧ್ಯೆ ನುಗ್ಗಿ ಸೂಜಿ ಕೊಳ್ಳೋಕೆ ನಿಮಗೂ ಸಾಧ್ಯವಿಲ್ಲ. ನಾನು ನನ್ನ ಸಾಮಾನೆಲ್ಲ ಅಲ್ಲಿಂದಲೆ ಕೊಂಡುಕೊಂಡೆ. ಇಲ್ಲಿ ಸೂಜಿ ತಗೋಳೋಣ ಅಂತ ನಿರ್ಧರಿಸಿ ಬಂದೆ.''

ಹುಡುಗಿ ಗಂಭೀರಳಾದಳು. ಎಸ್ತರ್ ರೋಸಾ ಮಾಡಿದ್ದು ಅತಿಯಾಯಿತು ಅಂತ ನನಗೆ ಭಯ ಆಯಿತು. ದೇವದೂತ ಕೂಡ ಸಹನೆ ಕಳೆದುಕೊಳ್ಳಬಲ್ಲ. ಆದರೆ ಹುಡುಗಿ ಹೇಳಿದಳು: ''ಪ್ರತಿಯೊಂದೂ ದೇವರ ಮನಸ್ಸಿನಂತೆ ನಡೆಯುತ್ತದೆ.'' ಎಸ್ತರ್ ರೋಸಾ ತನ್ನ ಸ್ಟೂಲನ್ನು ಬಾಗಿಲ ಬಳಿಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದಳು. ಆದರೆ ಆ ಹುಡುಗಿ ಅವಳನ್ನು ಅಷ್ಟಕ್ಕೆ ನಿಲ್ಲಿಸಿದಳು. ''ದಯವಿಟ್ಟು ನಿಮಗೆ ನೀವೇ ತೊಂದರೆ ತಗೋಬೇಡಿ. ನಾನು ಇಡುತ್ತೀನಿ.'' ಎಸ್ತರ್ ರೋಸಾ ಮಧ್ಯೆ ಬಾಯಿ ತೂರಿಸಿ, ''ಒಂದು ನಿಮಿಷ, ನಾನು ನಿನಗೇನೋ ಹೇಳಬೇಕು.''
   'ಸ್ಟೂಲನ್ನು ಸರಿಯಾಗಿಟ್ಟು ಹುಡುಗಿ ಕೇಳಿದಳು: ''ನನಗೆ ನೀವು ಏನು ಹೇಳಬೇಕು ಅಂತ ಬಯಸಿದ್ದೀರಿ?''
''ನನ್ನ ಮಗಳೇ, ಮ್ಯಾಜೆಲ್ ಟೋವ್!'' ಎಸ್ತರ್ ರೋಸಾ ಜೋರಾಗಿ ಕರೆದಳು.
'ಸೀಮೆಸುಣ್ಣದಂತೆ ಬಿಳಚಿಕೊಂಡುಬಿಟ್ಟ ಆ ಹುಡುಗಿ ಹೇಳಿದಳು: ''ನನಗೆ ಅರ್ಥ ಆಗಲಿಲ್ಲ.''
'ಎಸ್ತರ್ ರೋಸಾ ಸಾರಿ ಸಾರಿ ಹೇಳಿದಳು: ''ನನ್ನ ಮುದ್ದಿನ ಸೊಸೆ ನೀನೇ ಆಗುವೆ. ನಾನು ಹ್ರೂಬೈಶೋನ ರೆಬ್ ಲೆಮೆಲ್ ವ್ಯಾಗ್ಮಿಸ್ಟರ್ ನ ಹೆಂಡತಿ. ನನ್ನ ಮಗನಿಗೆ ಹೆಣ್ಣು ನೋಡೋಕೆ ನಾನಿಲ್ಲಿಗೆ ಬಂದಿದ್ದೀನಿ. ಸೂಜಿ ತಗೋಳಕ್ಕಲ್ಲ. ರೆಬ್ ಬೆರಿಶ್ ನ ಮಗಳು ಹುಲ್ಲಿನ ಚಾಪೆಯ ಹಾಗೆ. ನೀನು ರೇಶಿಮೆಯ ಹಾಗೆ. ದೇವರ ಇಚ್ಛೆಯಂತೆ ನೀನು ನನ್ನ ಮಗ ಬೆಂಜ್ ನ ಹೆಂಡತಿ ಆಗುವೆ.
'ಆ ಹುಡುಗಿ ಅಶಕ್ತತೆಯಲ್ಲಿ ತಲೆ ತಿರುಗಿ ಸಾಯದೇ ಇದ್ದುದು, ಆ ಸ್ವರ್ಗದ ಪವಾಡದಿಂದಾಗಿಯೆ. ಜಾಮಾಸ್ಕ್ ನಲ್ಲಿ ಎಲ್ಲರೂ ರೆಬ್ ಲೆಮೆಲ್ ವ್ಯಾಗ್ಮಿಸ್ಟರ್ ಬಗ್ಗೆ ಕೇಳಿ ತಿಳಿದಿದ್ದರು. ಜಾಮಾಸ್ಕ್ ಲುಬ್ಲಿನ್ ಅಲ್ಲ. ಗಿರಾಕಿಗಳು ಒಳಗೆ ಬಂದು ಏನು ನಡೆಯುತ್ತಿದೆ ಎಂದು ನೋಡಿದರು. ಎಸ್ತರ್ ರೋಸಾ ತನ್ನ ಬುಟ್ಟಿಯಿಂದ ಬಿಳಿಚಿನ್ನದ ಮಣಿಗಳ ಸರವೊಂದನ್ನು ಹೊರತೆಗೆದಳು. ''ಇದು ನಿನ್ನ ನಿಶ್ಚಿತಾರ್ಥದ ಕೊಡುಗೆ. ನಿನ್ನ ತಲೆಯನ್ನು ಬಾಗಿಸು.'' ಆ ಹುಡುಗಿ ವಿನಮ್ರಳಾಗಿ ತನ್ನ ತಲೆಯನ್ನು ತಗ್ಗಿಸಿದಳು. ಎಸ್ತರ್ ರೋಸಾ ಮಣಿಸರವನ್ನು ಅವಳ ಕುತ್ತಿಗೆಗೆ ಹಾಕಿದಳು. ಅವಳ ತಂದೆತಾಯಿ ಅಂಗಡಿಗೆ ಓಡಿ ಬಂದರು. ಆಗ ಮುತ್ತಿಕ್ಕುವ, ತಬ್ಬಿಕೊಳ್ಳುವ ಮತ್ತು ಅಳುವ ಕೆಲಸ ನಡೆಯುತ್ತಿತ್ತು. ರೆಬ್ ಬೆರಿಶ್ ನ ಮಗಳ ಕಥೆ ಹೇಳಲು ಅಲ್ಲಿಗೆ ಕೂಡಲೇ ಯಾರೋ ಒಬ್ಬರು ಧಾವಿಸಿ ಬಂದರು. ರೆಬ್ ಬೆರಿಶ್ ನ ಮಗಳು ಏನೇನು ನಡೆಯಿತೆಂದು ಕೇಳಿ ತಿಳಿದಾಗ ಅವಳ ಕಂಗಳಲ್ಲಿ ನೀರು ಉಕ್ಕಿತು. ಅವಳ ಹೆಸರು ಇಟ್ಟೆ ಎಂಬುದಿತ್ತು. ಅವಳು ವರದಕ್ಷಿಣೆಯನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿದ್ದಳು ಮತ್ತು ಮಾರಾಟ ಮಾಡುವ ಮುಂಗೋಪಿ ಹೆಣ್ಣುಮಗಳೆಂದು ಹೆಸರು ಪಡೆದಿದ್ದಳು. ಜೆಲಿಗ್ ಇಜಬಿಟ್ಜರ್ ಸರಳ ಜೀವನ ನಡೆಸುತ್ತಿದ್ದರು.

'ನನ್ನ ಪ್ರೀತಿಯ ಜನರೇ, ಇದೊಂದು ಪಂದ್ಯವಾಯಿತು. ಎಸ್ತರ್ ರೋಸಾ ಕುಟುಂಬದ ವೇಷಭೂಷಣ ಹಾಕಿಕೊಂಡಳು. ನಾನು ಹೇಳಿದ ಹಾಗೆ ಅವಳು ಏನೇ ಹೇಳಿಕೊಂಡು ಹೋಗಲಿ, ಆ ದಿನಗಳಲ್ಲಿ ಯುವ ಜನತೆ ಅವಳಿಗೆ ಯಾವತ್ತೂ ಏನೂ ತಿರುಗಿ ಕೇಳಲಿಲ್ಲ. ನಿಶ್ಚಿತಾರ್ಥ ಸಮಾರಂಭವೊಂದು ನಡೆದ ಕೂಡಲೇ ಮದುವೆಯೂ ಆಯಿತು. ಜೆಲಿಗ್ ಇಜಬಿಟ್ಜರ್ ದೊಡ್ಡ ಮದುವೆ ಮಾಡಿಕೊಡಲು ಶಕ್ತರಾಗಿರಲಿಲ್ಲ. ಆತ ತನ್ನ ಮಗಳಿಗೆ ಕೇವಲ ವರದಕ್ಷಿಣೆಯನ್ನು ನೀಡಬಲ್ಲವನಾಗಿದ್ದ. ಅವರಿಗೆ ಇನ್ನಿಬ್ಬರು ಹೆಣ್ಣುಮಕ್ಕಳೂ ಇದ್ದರು, ಅಲ್ಲದೆ ಇಬ್ಬರು ಗಂಡು ಮಕ್ಕಳು ಯೆಶಿವಾದಲ್ಲಿ ಓದುತ್ತಿದ್ದರು. ಆದರೆ ನಿಮಗೆ ತಿಳಿದಂತೆ, ರೆಬ್ ಲೆಮೆಲ್ ವ್ಯಾಗ್ಮಿಸ್ಟರ್ ಗೆ ಸ್ವಲ್ಪ ವರದಕ್ಷಿಣೆ ಅಗತ್ಯವಿತ್ತು. ನಾನು ನಿಶ್ಚಿತಾರ್ಥ ಸಮಾರಂಭಕ್ಕೆ ಹೋಗಿದ್ದೆ ಮತ್ತು ಮದುವೆಯಲ್ಲಿ ನೃತ್ಯ ಮಾಡಿದೆ. ಎಸ್ತರ್ ರೋಸಾ ಹುಡುಗಿಯನ್ನು ರಾಜಕುಮಾರಿಯ ಹಾಗೆ ಸಿಂಗರಿಸಿದ್ದಳು. ಅವಳು ನಿಜವಾಗಿಯೂ ಚೆಲುವಾದಳು. ಅದೃಷ್ಟ ಹೊಳೆದಾಗ ಅದು ಮುಖದ ಕಳೆಯನ್ನು ಹೆಚ್ಚಿಸುತ್ತದೆ. ಮದುವೆ ಮಂಟಪದಡಿ ನಿಂತ ಮದುಮಕ್ಕಳನ್ನು ಮತ್ತು ಆ ನಂತರದಲ್ಲಿ ಅವರು ಮಾಡಿದ ಸದ್ಗುಣ ನೃತ್ಯವನ್ನು ನೋಡದೆ ಇರುವವರು ಯಾರೇ ಆಗಿರಲಿ ಅವರಿಗೆ ನಲಿವು ಹೊಂದಿದ ಮಕ್ಕಳು ಅಂದರೇನು ಎಂದು ತಿಳಿದುಕೊಳ್ಳಲು ಸಾಧ್ಯವೇ ಇಲ್ಲ. ಅದಾದ ನಂತರ ಅವರು ಪಾರಿವಾಳದಂತೆ ಜೀವನ ನಡೆಸಿದರು. ಒಂದು ವರ್ಷಕ್ಕೆ ಸರಿಯಾಗಿ ಆಕೆ ಗಂಡು ಮಗುವನ್ನು ಹೆತ್ತಳು.
00



2001ರ ನಂತರ ನಡೆಯುವ ಐಸಿಎಸ್ಇ(10ನೆಯ) ತರಗತಿ ಪರೀಕ್ಷೆಗಳಿಗೆ ಪಠ್ಯಪುಸ್ತಕವಾಗಿ ಅನಿಲ್ ವಿಲ್ ಸನ್ ಅವರು ಸಂಕಲಿಸಿದ ಫಿಗ್ ಮೆಂಟ್ಸ್ ಆಫ್ ಇಮ್ಯಾಜಿನೇಶನ್ ಸಂಕಲನದಿಂದ ಪ್ರಸ್ತುತ ಅನುವಾದಿತ ಕತೆ ಆಧರಿಸಿದೆ.  ಈ ಸಂಕಲನ 1998ರಲ್ಲಿ ಮೊದಲು ಪ್ರಕಟವಾಗಿ 1999 ಮತ್ತು 2000ರಲ್ಲಿ ಮರುಮುದ್ರಣವಾಗಿದೆ.ಯಿದ್ದೀಶ್ ಭಾಷೆಯಲ್ಲಿರುವ ಪ್ರಸ್ತುತ ಕತೆಯ ಇಂಗ್ಲಿಶ್ ಅವತರಣಿಕೆ ಸಿದ್ಧಪಡಿಸಿದವರ ವಿವರಗಳಿಲ್ಲದಿದ್ದರೂ ಈ ಕತೆಯನ್ನು ಬಳಸಿಕೊಳ್ಳಲು ಅನುಮತಿಸಿದ ಮೆ.ಲಾರೆನ್ಸ್
ಪಾಲಿಂಜರ್ ಲಿಮಿಟೆಡ್, ಲಂಡನ್ ಇವರಿಗೆ ಕೃತಜ್ಞವಾಗಿದೆ.
ಈ ಕತೆಯನ್ನು ಕಳೆದೆರಡು ವರುಷಗಳ ಹಿಂದೆ ಓದಿದಾಗಲೇ ಕನ್ನಡಿಸಬೇಕೆಂಬ ಹಂಬಲ ಇಂದಿಗೆ ಈಡೇರಿದೆ. ಇಂಥ ನನ್ನ ಹಲವು ಕಾರ್ಯಯೋಜನೆಗಳು ಕೈಗೂಡಿ ನಿಮ್ಮಮುಂದೆ ಬೇಗನೆ ಬರಲಿ ಎಂದು ಆಶಿಸುತ್ತೇನೆ.