ಶುಕ್ರವಾರ, ನವೆಂಬರ್ 4, 2011

ಹಸಿರು ತೋರಣ

 ಗುಜರಾತಿ-ಪನ್ನಾಲಾಲ್ ಪಟೇಲ್

ಶಾರದಾಳಿಗೆ ನಲವತ್ತು ವರುಷವಾಯಿತು. ಪ್ರತಿನಿತ್ಯ ಅವಳು ತನ್ನನ್ನೆ ನಿಂದಿಸಿಕೊಳ್ಳುತ್ತಿದ್ದಳು. ಯಾವುದೇ ಹೆಂಗಸು ತನ್ನ ಗಂಡ ಹೋದ ಮೇಲೆ ದುಡಿಮೆ ಬಗ್ಗೆ ಯೋಚಿಸುತ್ತಾಳೆ ಎನ್ನುವ ಮಾತು ನೆನಪಿಗೆ ಬಂದಾಗಲೆಲ್ಲ ನಿಟ್ಟಸಿರು ಬಿಡುತ್ತಿದ್ದಳು. ಹೊಲಿಗೆಯೋ ಬೇರೆ ಯಾವುದೋ ಕೆಲಸ ಕಲಿತಿದ್ದರೆ, ಗಂಡನ ಜತೆ ಸಣ್ಣ ಪುಟ್ಟ ಜಗಳಗಳೇ ಇರುತ್ತಿರಲಿಲ್ಲ. ಅವನೂ ಮನೆ ಬಿಟ್ಟು ಹೋಗುತ್ತಿರಲಿಲ್ಲ. ಇನ್ನೊಂದು ಮನೆ ಮಾಡುವ ಪ್ರಶ್ನೆ ಇರುತ್ತಿರಲಿಲ್ಲ. ವಠಾರದ ಯಜಮಾನನ ಹಿಂಸೆಯೂ ಇರುತ್ತಿರಲಿಲ್ಲ. ಈ ಮಾತನ್ನು ಅವಳು ಗಟ್ಟಿಯಾಗಿ ಹೇಳಿಕೊಳ್ಳುತ್ತಿದ್ದಳು.

ಅವಳು ತನ್ನ ಗಂಡನ ಚಿಂತೆಯಲ್ಲಿ-ಆತ ಎಲ್ಲಿರಬಹುದು? ಎಂದು ಅಚ್ಚರಿ ಪಡುತ್ತ ತನ್ನನ್ನೆ ಮರೆತುಬಿಡುತ್ತಿದ್ದಳು. ಅವನು ಖಂಡಿತ ಆತ್ಮಹತ್ಯೆ ಮಾಡಿಕೊಂಡಿರಬೇಕು. ಜೀವಂತವಾಗಿ ಇದ್ದಿದ್ದರೆ ಹಿಂದಿರುಗದೆ ಇರಲು ಹೇಗೆ ಸಾಧ್ಯ? - ಎಂದುಕೊಳ್ಳುತ್ತಿದ್ದಳು.

ಆಗಾಗ ಅವಳು ತನ್ನ ಗಂಡ ಬರೆದ ಕೊನೆಯ ಪತ್ರವನ್ನು ಹೊರತೆಗೆದು ಓದುತ್ತಾಳೆ. ಸಂಕ್ಷಿಪ್ತವಾದ ಅವನ ಮೊದಲ ಪತ್ರವನ್ನು ಕೂಡ ಆಕೆ ಎಚ್ಚರಿಕೆಯಿಂದಲೇ ಎತ್ತಿಟ್ಟಿದ್ದಾಳೆ: ನನ್ನನ್ನು ಹುಡುಕಬೇಡ. ನಾನು ಯಾವತ್ತಿಗೂ ಮನೆಗೆ ಹಿಂದಿರುಗುವುದಿಲ್ಲ. ಇಬ್ಬರು ಹುಡುಗರು ಮತ್ತು ನಿನ್ನನ್ನು ದೇವರ ರಕ್ಷಣೆಯಲ್ಲಿ ಬಿಟ್ಟಿದ್ದೇನೆ. ನಾನು ಸತ್ತು ಹೋದೆನೆಂದು ತಿಳಿದುಕೋ. ನಿನಗೆ ದೇವರು ಮನಸ್ಸು ಕೊಟ್ಟ ಹಾಗೆ ಮಾಡು. ನನ್ನ ಉಳಿದ ಜೀವನವನ್ನು ಒಬ್ಬ ಅಲೆಮಾರಿಯ ಹಾಗೆ ಸಾಗಿಸುತ್ತೇನೆ. -ಹರ್ ಸಿಂಗ್

ಮತ್ತೊಂದು ಪತ್ರ ಸುಮಾರು ಒಂದೂವರೆ ತಿಂಗಳ ನಂತರ ಬಂದಿತು. ಆ ಪತ್ರವನ್ನು ಅವಳು ಸಾಕಷ್ಟು ಸಲ ಓದಿದ್ದರೂ ಇವತ್ತು ಮತ್ತೆ ಓದಲು ಪ್ರಾರಂಭಿಸಿದಳು:

ನನ್ನ ಪ್ರೀತಿಯ ಶಾರದ,

ನಾನು ಮನೆ ಬಿಟ್ಟು ಒಂದೂವರೆ ತಿಂಗಳಿಗಿಂತ ಹೆಚ್ಚಾಗಿದೆ. ನನಗೆ ವಾಪಸ್ಸು ಬರಬೇಕೆಂದು ಆಸೆ. ಆದರೆ ನನಗೆ-ನಿನಗೂ ಕೂಡ-ಗೊತ್ತು. ನಾವು ಜಗಳ ಮಾತ್ರ ಮಾಡುತ್ತೇವೆ. ಆದ್ದರಿಂದ ನಾನು ಸಾಕಷ್ಟು ಬಾರಿ ಯೋಚಿಸಿ ಈ ಪತ್ರ ಬರೆಯುತ್ತಿದ್ದೇನೆ. ಏನೆಂದರೆ ನಾನು ಸತ್ತು ಹೋದೆನೆಂದು ತಿಳಿದುಕೊ ಮತ್ತು ಎರಡು ಮಕ್ಕಳಿಗೋಸ್ಕರ ಮತ್ತೆ ಮದುವೆ ಮಾಡಿಕೊ. ಮೂವತ್ತೊಂದನೆಯ ವಯಸ್ಸಿನಲ್ಲಿ ನೀನಿನ್ನೂ ಚಿಕ್ಕವಳಾಗಿಯೆ ಕಾಣಿಸುತ್ತೀಯೆ. ಅದಕ್ಕಿಂತ ಹೆಚ್ಚಾಗಿ ನಮ್ಮ ಜಾತಿಯಲ್ಲಿ ದೊಡ್ಡ ಜನರೆಲ್ಲ ಮರುಮದುವೆ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ನಿನಗೆ ಯಾರೂ ಬೈಯ್ಯುವುದಿಲ್ಲ. ಜಾತಿ ನಿಯಮ ಕೂಡ ಇಗೀಗ ಕಾಣೆಯಾಗುತ್ತಿದೆ. ನೀನು ನಿನ್ನ ಸ್ವಂತ ಸುಖಕ್ಕಾಗಿ ಮದುವೆ ಆಗುತ್ತಿಲ್ಲ. ನೀವು ಮೂವರೂ ಚೆನ್ನಾಗಿದ್ದರೆ ನನಗೂ ನೆಮ್ಮದಿ. ಇನ್ನೊಂದು ಮದುವೆಯಾಗು. ನನ್ನನ್ನು ನಿಮ್ಮ ಮೂವರ ಚಿಂತೆಯಿಂದ ಬಿಡುಗಡೆ ಮಾಡು... ನಾನು ಕೂಡ ಕೇವಲ ಒಬ್ಬ ಮನುಷ್ಯ ಮತ್ತು ಆ ಮಕ್ಕಳ ತಂದೆ. ನೀನು ನನ್ನ ಕೊನೆಯ ಕೋರಿಕೆಯನ್ನು ಒಪ್ಪಿಕೊಳ್ಳುತ್ತಿಯೆಂದು ನಂಬಿದ್ದೇನೆ.

ನಿರುದ್ಯೋಗಿ ಹರ್ ಸಿಂಗ್ ಮತ್ತೆ ಬರೆದದ್ದು:

ಇಂದಿನಿಂದ ಎಲ್ಲ ಕಾಲಕ್ಕೂ ನಾನು ನಿನ್ನಿಂದ ದೂರನಾದೆನೆಂದು ನಂಬು. ನಾನು ನಿನ್ನಿಷ್ಟದಂತೆ ನಿನ್ನನ್ನು ಸ್ವತಂತ್ರಳನ್ನಾಗಿ ಮಾಡುತ್ತಿದ್ದೇನೆ. ಮಕ್ಕಳ ಭವಿಷ್ಯ ಚೆನ್ನಾಗಿ ಆಗಬೇಕೋ ಹಾಳಾಗಬೇಕೋ ಎನ್ನುವುದೆಲ್ಲ ನಿನಗೂ ದೇವರಿಗೂ ಬಿಟ್ಟಿದ್ದು. ವಿದಾಯ -ಹರ್ ಸಿಂಗ್

ಈ ಹಿಂದಿನ ಪ್ರತಿಯೊಂದು ಸಂದರ್ಭದಂತೆ ಶಾರದ ಪೂರ್ಣ ವೃತ್ತಾಂತವನ್ನು ನೆನಪಿಗೆ ತಂದುಕೊಂಡು ಕಣ್ಣೀರಿಡುತ್ತಿದ್ದಳು. ಆತ ತನ್ನ ಬದುಕನ್ನು ಕೊನೆಗಾಣಿಸಿಕೊಂಡಿದ್ದಾನೆಂದು ಅವಳಿಗೆ ಪೂರ್ಣ ಖಾತರಿ.

ಆದರೂ ಅವನು ಆ ರೀತಿ ಮಾಡಿಕೊಳ್ಳುವುದಿಲ್ಲವೆಂದು ಅವಳ ಮನಸ್ಸಿನಾಳದಲ್ಲಿ  ತೋಚುತ್ತಿತ್ತು. ಈ ಭಾವನೆಯನ್ನು ಸಮರ್ಥಿಸುವುದಕ್ಕೆ ಒಂದು ಘಟನೆ ಸಾಕು. ಒಂದು ಸಾರಿ ನಿರುದ್ಯೋಗಿ ಹರ್ ಸಿಂಗ್ ಗೆ ಸಾಲಗಾರರ ಕಾಟದಿಂದ ಸಾಕಾಗಿಹೋಗಿತ್ತು. ಅವರಿಬ್ಬರು ಜತೆಯಲ್ಲೆ ಸಾಯಬೇಕೆಂದು ನಿರ್ಧರಿಸಿ ಒಂದು ವಿಷದ ಬಾಟಲನ್ನು ತಂದಿದ್ದ. ಹುಡುಗರನ್ನು ಅನಾಥಾಶ್ರಮಕ್ಕೆ ಸೇರಿಸುವ ಎಲ್ಲ ವ್ಯವಸ್ಥೆಯನ್ನು ಅವರಿಬ್ಬರು ಕೂಡಿ ಮಾಡಿದ್ದರು. ಆದರೆ ಕೊನೆಯ ಗಳಿಗೆಯಲ್ಲಿ ಹರ್ ಸಿಂಗ್ ತನ್ನ ಮನಸ್ಸನ್ನು ಬದಲಿಸಿದ. ಒಂದು ಸಲ ಸಂತನೊಬ್ಬ ಪೇಪರಿನಲ್ಲೊಂದು ಪತ್ರ ಬರೆದಿದ್ದನ್ನ ಓದಿದ್ದೆ. ಆತ್ಮಹತ್ಯೆಗಿಂತ ದೊಡ್ಡ ಪಾಪ ಬೇರೊಂದಿಲ್ಲ. ನೀವು ಈ ಜನ್ಮದಲ್ಲಿ ಕಷ್ಟಗಳಿಂದ ಪಾರಾಗಬಹುದು. ಆದರೆ ಕಷ್ಟಗಳು ನಿಮ್ಮನ್ನು ಬಿಡುವುದಿಲ್ಲ. ಮುಂದಿನ ಜನ್ಮದಲ್ಲಿ ಕಾಡುತ್ತವೆ. ಅವನ್ನು ಅನುಭವಿಸಲೇಬೇಕು ಎಂದು ಬರೆದಿದ್ದರು ಎಂದು ಹೇಳಿದ್ದ ಹರ್ ಸಿಂಗ್ ವಿಷದ ಬಾಟಲನ್ನು ಚರಂಡಿಗೆ ಎಸೆದಿದ್ದ. ಅವನು ತನ್ನ ಹೆಂಡತಿಗೆ ಹೇಳಿದ್ದ: ನಾನು ಬಿಸಾಕಿದ್ದು ಬರಿ ವಿಷದ ಬಾಟಲಲ್ಲ. ಸಾಯುವ ವಿಚಾರವನ್ನೆ ನನ್ನ ಮನಸ್ಸಿನಿಂದ ಕಿತ್ತು ಬಿಸಾಕಿದ್ದೇನೆ. ಕಷ್ಟ ಕಾಲ-ಹಸಿವಿನಿಂದ ನಾವು ಸತ್ತರೂ ನಾನೀಗ ಯೋಚನೆ ಮಾಡುವುದಿಲ್ಲ.

ಆ ನಂತರದ ದಿನಗಳು ಹರ್ ಸಿಂಗ್ ಗೆ ನರಕವಾಗಿತ್ತು. ಕೆಲಸ ಹುಡುಕಲು ಆತ ಬೆಳಗಿನ ಜಾವ ಎದ್ದು ಹೋಗಬೇಕು. ಹೆಂಡತಿ ದಿನಸಿ ಅಂಗಡಿಯವನ ಬಳಿ ಹೋಗಿ ಬೇಡಿಕೊಳ್ಳುತ್ತಿದ್ದಳು. ಇಲ್ಲವೆ ಅವಳ ಕೆಲವು ಬೆಳ್ಳಿಯ ಒಡವೆಗಳನ್ನು ಮಾರಿ ಕಡಿಮೆ ಬೆಲೆಯ ಪದಾರ್ಥಗಳನ್ನು ಸ್ವಲ್ಪ ಸ್ವಲ್ಪವೆ ತರುತ್ತಿದ್ದಳು. ಆದರೆ ಆಕೆ ಹೀಗೆ ಎಷ್ಟು ದಿನ ಸಂಸಾರ ಸಾಗಿಸಲು ಸಾಧ್ಯ?

ಎಲ್ಲಿ ಹೊಗೆ ಏಳುತ್ತದೆಯೊ ಅಲ್ಲಿ ಬೆಂಕಿ ಯಾವತ್ತೂ ಇದ್ದೆ ಇರುತ್ತದೆ ಎಂದು ಹೇಳುತ್ತಾರೆ. ಅದೇ ಮಾತಿನಲ್ಲಿ ಹೇಳಬೇಕೆಂದರೆ ಎಲ್ಲಿ ಕಷ್ಟ ಸಂಕಷ್ಟಗಳು ಇರುತ್ತವೆಯೊ ಅಲ್ಲಿ ಯಾವತ್ತೂ ಸಣ್ಣ ಪುಟ್ಟ ಜಗಳಗಳು ಇದ್ದೇ ಇರುತ್ತವೆ. ಕಷ್ಟ ಸಂಕಷ್ಟಗಳು ಹೆಚ್ಚಾದ ಇವರ ವಿಚಾರದಲ್ಲಿ ಹೆಚ್ಚು ಜಗಳಗಳೂ ಇರುತ್ತಿತ್ತು; ಪರಸ್ಪರ ನಿಂದನೆಯೂ ಇರುತ್ತಿತ್ತು. ಒಂದೆರಡು ಬಾರಿ ಹರ್ ಸಿಂಗ್ ತನ್ನ ಒಳ್ಳೆಯ ಸ್ವಭಾವದ ಹೆಂಡತಿಯನ್ನು ಹೊಡೆದಿದ್ದ ಕೂಡ. ಕಿರಿಯ ಮಗ ಮಲಗಿದ್ದ ತೊಟ್ಟಿಲನ್ನು ಅವಳು ನೂಕಿಬಿಟ್ಟಿದ್ದಳು. ಆಗ ಹಿರಿಯ ಹುಡುಗ ವಠಾರ ದಾಟಿ ಓಡಿಹೋದ. ಎಲ್ಲ ಶಾಂತವಾದ ಮೇಲೆಯೆ ಅವನು ಹಿಂದಿರುಗಿ ಬಂದದ್ದು.

ಆಮೇಲೆ ಒಂದು ರಾತ್ರಿ ಹರ್ ಸಿಂಗ್ ತನ್ನ ಹೆಂಡತಿಗೆ ಹೊಡೆದ. ಆ ಸಂದರ್ಭದಲ್ಲಿ ರಾಜಪೂತ ಹೆಂಗಸಿನ ಹಾಗೆ ಅವಳೂ ಕೂಡ ಮುಯ್ಯಿ ತೀರಿಸಿಕೊಳ್ಳುವಂತೆ ಒಂದು ಇಕ್ಕಳವನ್ನು ಝಳಪಿಸಿ ಹೋರಾಡಿದಳು. ಅದೃಷ್ಟವಶಾತ್ ಹರ್ ಸಿಂಗ್ ಜಗಳವಾಡುವುದನ್ನು ನಿಲ್ಲಿಸಿ ಓಡಿಹೋದ. ಇಲ್ಲದಿದ್ದರೆ...?

ಮನೆಯಿಂದ ಹೊರ ಬಂದು ಆತ ಗೊಣಗಿಕೊಂಡ: ಈ ಮನೆಯಲ್ಲೀಗ ವಾಸ ಮಾಡಬೇಕು ಅನ್ನುವಂಥದ್ದು ಏನಿಲ್ಲ. ಅವಳನ್ನು ಸಾಯಿಸಬೇಕು ಇಲ್ಲ ನಾನು ಸಾಯಬೇಕು.

ಹರ್ ಸಿಂಗ್ ಹಿಂದಿರುಗಬಾರದೆಂದು ನಿಶ್ಚಯಿಸಿದ. ಶಿವನ ಮೇಲೆ ಆಣೆ. ನಾನೊಂದು ಕೆಲಸ ಹಿಡಿಯುವ ವರೆಗೂ ಮನೆಗೆ ವಾಪಸ್ಸಾಗೊಲ್ಲ! ಎಂದು ಹೇಳಿಕೊಂಡ.

ಗಂಡ ಜತೆಯಲ್ಲಿದ್ದಷ್ಟೂ ಕಾಲ ಶಾರದಳಿಗೆ ಸ್ವಲ್ಪ ಧೈರ್ಯವಿತ್ತು. ದೇವರಲ್ಲಿ ನಂಬಿಕೆ ಇತ್ತು. ಅವಳು ಪದೇ ಪದೇ ಹೇಳಿಕೊಳ್ಳುತ್ತಿದ್ದಳು: ನಮಗೆ ಕಷ್ಟದ ಮೇಲೆ ಕಷ್ಟ ಕೊಟ್ಟೂ ಕೊಟ್ಟು ದೇವರಿಗೂ ಒಂದು ದಿನ ಸಾಕಾಗಿಬಿಡುತ್ತದೆ. ಎಲ್ಲಾದರೂ ನನ್ನವರಿಗೆ ಒಂದು ಕೆಲಸ ಸಿಗುತ್ತದೆ. ತನ್ನ ಹತ್ತಿರ ಸ್ವಲ್ಪ ಹಣ ಇದ್ದಿದ್ದರೆ ಹಪ್ಪಳ ಸಂಡಿಗೆ ಮಾಡಿ ಮನೆ ಮನೆಗೂ ಹೋಗಿ ಮಾರಾಟ ಮಾಡಬಹುದಿತ್ತು ಎಂದೂ ಯೋಚಿಸುತ್ತಿದ್ದಳು. ಚೂರು ಕಾಗದ ಆಯುವ ಬಗ್ಗೆಯೂ ಯೋಚಿಸಿದಳು. ಕಾಗದ ಚೂರುಗಳನ್ನು ಯಾರು ಕೊಂಡುಕೊಳ್ಳತ್ತಾರೆ, ಎಷ್ಟು ಹಣ ಕೊಡುತ್ತಾರೆ ಎಂದು ಅದೇ ಕೆಲಸ ಮಾಡುತ್ತಿದ್ದ ಒಬ್ಬ ಹೆಂಗಸನ್ನು ವಿಚಾರಿಸಿದಳು.

ಆ ಹೆಂಗಸಿನ ಉತ್ತರ ನಿರಾಶೆ ಹುಟ್ಟಿಸುವ ಹಾಗಿತ್ತು. ಇಡೀ ಒಂದಿನ ಸುತ್ತಾಡಿದರೆ ಒಂದು ರೂಪಾಯಿನೋ ಎಷ್ಟೋ ಕೊಡಬೋದು.

ಶಾರದಳಿಗೆ ಒಂದು ರೂಪಾಯಿ ಸಾಕಷ್ಟು ದೊಡ್ಡ ಮೊತ್ತವಾಗಿದ್ದರೂ ಕಾಗದ ಆಯುವುದು ಅಷ್ಟು ಇಷ್ಟವಿರಲಿಲ್ಲ. ಆದರೆ ಈಗ ತನ್ನ ಗಂಡ ಹೋದ ಮೇಲೆ ಅವಳು ತನ್ನೆಲ್ಲ ಧೈರ್ಯವನ್ನು ಕಳೆದುಕೊಂಡಿದ್ದಳು. ನಾನೊಬ್ಬಳೆ ಇದ್ದಿದ್ದರೆ ಅದು ಬೇರೆ ಮಾತು. ಇನ್ನೊಬ್ಬನಿಗೆ ಹುಟ್ಟಿದ ಮಕ್ಕಳನ್ನು ಇಟ್ಟುಕೊಳ್ಳಲು ಯಾರು ತಾನೆ ಒಪ್ಪುತ್ತಾರೆೆ? ನಿರಾಶರಾದ ಯಾರೋ ಒಬ್ಬರು ಒಪ್ಪಿದರೂ ಮಕ್ಕಳನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂದು ಹೇಗೆ ಹೇಳುವುದು? ತನ್ನ ಸುಖಕ್ಕಾಗಿ ಮಕ್ಕಳು ಪರಾವಲಂಬಿಗಳಾಗುವುದನ್ನು ಅವಳು ಬಯಸಲಿಲ್ಲ. ಆದರೆ ಗಂಡನಿಲ್ಲದೆ ಬದುಕು ಕಷ್ಟಕರವೆಂದು ಅವಳಿಗೆ ಭಾಸವಾಯಿತು. ತನ್ನ ಸೌಂದರ್ಯವೆ ತನಗೆ ಶಾಪವಾಗಿದೆ ಎಂದು ತಿಳಿದಳು.

ಒಂದು ದಿನ ಬೆಳಿಗ್ಗೆ ಚಿಕ್ಕಮಗುವನ್ನು ನೋಡಿಕೊಂಡಿರಲು ಹಿರಿಯ ಹುಡುಗನಿಗೆ ಹೇಳಿ ಅವಳು ಗೋಣಿಚೀಲವನ್ನು ಕಂಕುಳಲ್ಲಿರಿಸಿಕೊಂಡು ಹೊರಗೆ ಹೋದಳು. ಸಾಕಷ್ಟು ದೂರ ಸಾಗಿದ ಮೇಲೆ ಚೀಲವನ್ನು ತೆರೆದು ಬೆನ್ನಿನ ಮೇಲೆ ಹಾಕಿಕೊಂಡು ರಸ್ತೆಯ ಮೇಲೆ ಬಿದ್ದಿದ್ದ ಕಾಗದದ ಚೂರುಗಳನ್ನು ಎತ್ತಿಕೊಂಡು ಚೀಲಕ್ಕೆ ತುಂಬತೊಡಗಿದಳು.

ಹನ್ನೊಂದು ಗಂಟೆಯ ವೇಳೆಗೆ ಚೀಲ ತುಂಬಿತು. ಕಾಗದದ ಚೂರು ಆಯುವ ಹೆಂಗಸು ತಿಳಿಸಿದ್ದ ಅಂಗಡಿಯವನ ಬಳಿ ಹೋಗಿ ಒಂದೂ ಕಾಲು ರೂಪಾಯಿ ಪಡೆದಳು. ಅಂದು ಶಾರದಳ ಸಂತೋಷಕ್ಕೆ ಪಾರವೇ ಇರಲಿಲ್ಲ.

ಒಂದು ದಿನ ಆ ದಾರಿಯಲ್ಲಿ ಹೋಗುತ್ತಿದ್ದ ಇಬ್ಬರು ವಿದ್ಯಾವಂತ ಹೆಂಗಸರು ಅವಳು ಕಾಗದದ ಚೂರು ಆಯುವುದನ್ನು ಗಮನಿಸಿದರು. ಅವರು ಕಾರನ್ನು ನಿಲ್ಲಿಸಿ ಕೇಳಿದರು, ತಂಗಿ ಎಷ್ಟು ಹೊತ್ತಿನಿಂದ ಈ ರೀತಿ ಪೇಪರು ಆರಿಸುತ್ತಿದ್ದೀಯಮ್ಮಾ?

ಶಾರದೆಗೆ ಮೊದಲು ಆ ಬಗ್ಗೆ ತಿರಸ್ಕಾರವೆನಿಸಿತು. ಆದರೂ ಅವಳ ಜೀವನವಿಡೀ ಯಾರೊಬ್ಬರೂ ಸಹಾನುಭೂತಿಯಿಂದ ಅವಳನ್ನು ಮಾತಾಡಿಸಿದ್ದಿಲ್ಲ. ಒಂದು ಕಾಗದವನ್ನು ಎತ್ತಿಕೊಳ್ಳಲು ಬಾಗುತ್ತ ಅವಳು ಉತ್ತರಿಸಿದಳು. ``ಬೆಳಿಗ್ಗೆ ಆರು ಗಂಟೆಯಿಂದ.

ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡುತೀಯಮ್ಮಾ?

ತನಗವರು ಕುತೂಹಲದಿಂದ ಪ್ರಶ್ನೆ ಮಾಡುತ್ತಿಲ್ಲವೆಂದು ಶಾರದಳಿಗೀಗ ಮನವರಿಕೆಯಾಯಿತು. ಅವರಿಗೆ ನಿಜವಾದ ಕಾಳಜಿಯಿದೆ ಎನಿಸಿತು. ಅದೇ ಕ್ಷಣ ಅವರು ತನ್ನ ವೇಳೆಯನ್ನು ಹಾಳು ಮಾಡುತ್ತಿದ್ದಾರೆಂದು ಅಂದುಕೊಂಡಳು.

ಶಾರದಾ ಸುಖದ ದಿನಗಳನ್ನು ನೋಡಿದ್ದಳು. ಈಗವಳು ತನ್ನ ಬಗ್ಗೆ ಹೆಚ್ಚು ಲಕ್ಷ್ಯವಹಿಸುವುದನ್ನು ಬಿಟ್ಟುಕೊಟ್ಟಿದ್ದರೂ ತಾನು ಮಾಡುತ್ತಿರುವುದು ಕೀಳು ಕೆಲಸವೆಂದು ಭಾವಿಸಿದ್ದಳು. ಆಕೆ ಒಣನಗೆ ಬೀರುತ್ತ ಹೇಳಿದಳು: ನೀವು ಅದೃಷ್ಟವಂತರು. ನನ್ನಂಥ ಕಷ್ಟಪಡೋ ಹೆಂಗಸನ್ನು ಕಂಡು ನಿಮಗೆ ಯಾಕೆ ಚಿಂತೆ?

 ಆ ಹೆಂಗಸರಿಗೆ ಇವಳ ವಿಷಯದ ಬಗ್ಗೆ ಎಲ್ಲಿಲ್ಲದ ಆಸಕ್ತಿ ಬೆಳೆಯಿತು. ಅವರು ಮಾಡುತ್ತಿರುವ ಸರ್ವೆ ಬಗ್ಗೆ ಅವಳಿಗೆ ಹೇಳಿ, ಅವಳ ಬದುಕಿನ ಹಿನ್ನೆಲೆಯನ್ನು ಪರಿಚಯ ಮಾಡಿಕೊಳ್ಳಲು ಆಕೆಯ ಮನೆಗೆ ಹೋದರು.

ಮಾರನೆಯ ದಿನವೆ ಶಾರದಾ ಮಹಿಳಾ ಸ್ವ ಆಶ್ರಯ ಸಂಘಕ್ಕೆ ಹೋಗಿ ಹೊಲಿಗೆ ಕಲಿಯಲು ಆರಂಭಿಸಿದಳು.

ಅವಳ ಅದಮ್ಯವಾದ ಉತ್ಸಾಹ ಸಂಘದ ಸ್ವಯಂಸೇವಕರ ಮೇಲೆ ಪರಿಣಾಮ ಬೀರಿತು. ಸುಮಾರು ಜನ ಸಹಾಯ ಪಡೆಯಲು ಆಸಕ್ತರಾಗಿರುತ್ತಾರೆ. ಆದರೆ ಕೆಲವರು ಮಾತ್ರ ಪಡೆದ ಸಹಾಯಕ್ಕೆ ತಕ್ಕ ಹಾಗೆ ನಡೆದುಕೊಳ್ಳುತ್ತಾರೆ ಅವರು ಅವಳ ಕೆಲಸವನ್ನು ಹೊಗಳಿದರು.

ಶಾರದಾ ಮೂರು ತಿಂಗಳಲ್ಲಿ ಹೆಂಗಸರು ಮತ್ತು ಮಕ್ಕಳ ಉಡುಪು ಹೊಲಿಯುವುದನ್ನು ಕಲಿತಳು. ಹೆಚ್ಚು ಕಡಿಮೆ ಇಲ್ಲದೆ ಸರಿಯಾಗಿ ಅಳತೆ ತೆಗೆದುಕೊಳ್ಳುತ್ತಿದ್ದ ಕಾರಣವಾಗಿ ಆಕೆಯ ಹೊಲಿಗೆ ತುಂಬಾ ಚೆನ್ನಾಗಿರುತ್ತಿತ್ತು. ಪ್ರತಿಯೊಬ್ಬರೂ ಅವಳ ಕೆಲಸದ ಬಗ್ಗೆ ಒಂದಾದರೂ ಹೊಗಳಿಕೆಯ ಮಾತಾಡುತ್ತಿದ್ದರು.

ನಂತರ ಶಾರದಾ ತನ್ನದೆ ಸ್ವಂತ ಹೊಲಿಗೆ ಮೆಶಿನ್ನನ್ನು ಕಂತಿನ ಮೇಲೆ ಕೊಂಡುಕೊಂಡಳು. ಸಂಘ ಅವಳ ಪರವಾಗಿ ಗ್ಯಾರಂಟಿಯನ್ನು ನೀಡಿತು. ಗಾರ್ಮೆಂಟ್ ಕಂಪನಿಗಳಿಂದ ಅವಳಿಗೆ ಆರ್ಡರುಗಳನ್ನು ತಂದುಕೊಟ್ಟಿತು. ಅವು ಹೆಚ್ಚಿಗೆ ಕೂಲಿ ಕೊಡುತ್ತಿರಲಿಲ್ಲವಾದರೂ ಅವಳ ಕೆಲಸ ಮೆಚ್ಚಿದ್ದ ಸಂಘದ ಹೆಂಗಸರು ತಮ್ಮ ಬಟ್ಟೆಗಳನ್ನು ಅವಳಿಂದಲೆ ಹೊಲಿಸಿಕೊಂಡು ಮಾರ್ಕೇಟ್ ರೇಟು ನೀಡುತ್ತಿದ್ದರು.

ಶಾರದಾ ಎಲ್ಲರೂ ಒಪ್ಪುವಂತಹ ಕೆಲಸಗಾರಳಾಗಿದ್ದಳು. ಅವಳ ಉತ್ಸಾಹ ಪ್ರಾಮಾಣಿಕತೆ ಕಂಡು ಸಂಘದ ಸದಸ್ಯರೊಬ್ಬರು ನೀವು ಸಿಟಿಯ ಈ ತುದಿಯಲ್ಲಿ ಆರ್ಡರು ತೆಗೆದುಕೊಂಡು ಇನ್ನೊಂದು ತುದಿಗೆ ಹೋಗಿ ಕೆಲಸ ಮಾಡುತ್ತೀರಿ, ನಿಮ್ಮ ಟೈಮಲ್ಲಿ ಅರ್ಧ ಹಾಳುಮಾಡಿಕೊಳ್ಳುತ್ತೀದ್ದೀರಿ. ನೀವು ಇಷ್ಟಪಡುವುದಾದರೆ ರೋಡ್ ಪಕ್ಕದಲ್ಲಿರುವ ಗ್ಯಾರೇಜ್ ಬಿಟ್ಟುಕೊಡುತ್ತೇನೆ. ಹಿಂಭಾಗಕ್ಕೆ ಒಂದು ರೂಮನ್ನು ಕಟ್ಟಿಸುತ್ತೇನೆ ಎಂದು ತಮ್ಮ ಇಚ್ಛೆ ವ್ಯಕ್ತಪಡಿಸಿದ್ದರು.

ಮನೆಗೂ ಸಂಘದ ಕಟ್ಟಡಕ್ಕೂ ಓಡಾಡಲು ಬಸ್ಸಿನಲ್ಲಿ ಮೂರು ಗಂಟೆ ಕಳೆಯುತ್ತಿದ್ದುದು ಶಾರದಾಳಿಗೆ ಗೊತ್ತಿತ್ತು. ಅವಳಾಗಲಿ ಇಲ್ಲ ಬಸ್ಸಾಗಲಿ ಲೇಟಾದರೆ ಅರ್ಧ ದಿನವೇ ಹಾಳಾಗುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ಅವಳು ಗ್ಯಾರೇಜ್ ನಲ್ಲಿ ತನ್ನ ಹೊಲಿಗೆ ಕೆಲಸ ಮಾಡಲು ಒಪ್ಪಿಕೊಂಡಿದ್ದರೆ ಆಕೆಯ ಹುಡುಗರಿಗೂ ಉತ್ತಮ ವಿದ್ಯಾಭ್ಯಾಸ ಸಾಧ್ಯವಿತ್ತು.

ಆದರೆ ಶಾರದಳಿಗೆ ಆ ವಠಾರವನ್ನೂ ತನ್ನ ರೂಮನ್ನೂ ಬಿಟ್ಟು ಬರುವುದು ಅದೇಕೋ ಸಹಿಸಲಿಲ್ಲ. ಆಕೆ ತನ್ನ ಗ್ಯಾರೇಜ್ ನೀಡಲು ಮುಂದೆ ಬಂದ ಹೆಂಗಸಿಗೆ ವಂದನೆಗಳನ್ನರ್ಪಿಸಿ ತನ್ನ ಹಳೆಯ ಜಾಗದಲ್ಲೆ ವಾಸಿಸುವುದನ್ನು ಮುಂದುವರಿಸಿದಳು.

ಅವಳು ಅಲ್ಲಿಂದಿಲ್ಲಿಗೆ ಆಗಾಗ ಓಡಾಡುತ್ತ ಆಯಾಸಗೊಳ್ಳುತ್ತಿದ್ದಳು. ಅಲ್ಲದೆ ಆಯಾಸಗೊಂಡಾಗ ತನ್ನ ಗಂಡ ತನ್ನನ್ನು ಬಿಟ್ಟು ಹೋದುದಕ್ಕೆ ಅವನಿಗೂ ಹಿಡಿಶಾಪ ಹಾಕುತ್ತಿದ್ದಳು. ಕೊನೆಯ ಪಕ್ಷ ಆತ ಯಾವುದಾದರೂ ಒಂದು ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕಿತ್ತು.

 ಕೆಲವು ತಿಂಗಳ ನಂತರ ವಠಾರದ ಯಜಮಾನ ಹೇಳಿದ: ನನಗೆ ಹತ್ತು ತಿಂಗಳ ಬಾಡಿಗೆ ಕೊಡಬೇಕು ನೀನು. ನನಗೆ ನಿನ್ನ ಕಂಡರೆ ಗೌರವ ಇರುವುದರಿಂದ ಮನೆ ಖಾಲಿ ಮಾಡು ಅಂತ ನಾನು ಹೇಳಿಲ್ಲ. ಹರ್ ಸಿಂಗ್ ಹೊರಟುಹೋದ ಅಂತ ನನಗೂ ಗೊತ್ತು, ಆತ ಆತ್ಮಹತ್ಯೆ ಮಾಡಿಕೊಂಡ ಅಂತ ಹೇಳುತ್ತಾರೆ. ಇಲ್ಲದಿದ್ದರೆ ಇಂಥ ಸುಂದರ ಮಕ್ಕಳು, ನಿನ್ನಂಥ ಒಬ್ಬಳು ಹೆಂಡತಿ ಇದ್ದು ವಾಪಸ್ ಬರದೆ ಇರುತ್ತ್ತಿದ್ದನೆ? ಅವನು ನಿಜವಾಗಿಯೂ ಹೇಳಬೇಕಾಗಿದ್ದುದು: ನಿನ್ನ ಚೆಲುವು ನೋಡು! ಸತ್ತಿರುವವನೂ ಕೂಡ ಎದ್ದು ಬರಬೇಕು ಅಂತ ಬಯಸುತ್ತಾನೆ. ಹರ್ ಸಿಂಗ್ ಜೀವಂತವಾಗಿದ್ದಿದ್ದರೆ ಇಷ್ಟು ದಿನ ಅವನು ದೂರ ಇರುತ್ತಿದ್ದನೆ? ಅವನು ಒತ್ತಿ ಹೇಳಿದ. ನೀನು ನನಗೆ ಕೇಳಿದರೆ ಯಾರಾದರೂ ಒಳ್ಳೆಯವರ ಬಗ್ಗೆ ಯೋಚನೆ ಮಾಡಲೆ ಬೇಕು. ಈ ಲೋಕದಲ್ಲಿ ರಕ್ಷಣೆ ನೀಡುವ ಒಬ್ಬ ಗಂಡಸಿಲ್ಲದೆ ನಿನ್ನಂಥ ಹೆಂಗಸು ಬದುಕುವುದು ಕಷ್ಟವಾಗುತ್ತದೆ. ತನ್ನ ಭಾವನೆ ಬಗ್ಗೆ ಯೋಚಿಸಬಹುದೆಂದು ಅವನು ಸಲಹೆ ನೀಡಿದ.

ಮನಸ್ಸಿನಾಳದಲ್ಲಿ ಸೇಟುವಿನ ಮಾತುಗಳನ್ನು ನೇರ ತಳ್ಳಿಹಾಕದೆ ಶಾರದಾ ಶಾಂತವಾಗಿ ಕೇಳಿದಳು. ಅವಳು ಈ ಬಗ್ಗೆ ಯೋಚನೆ ಮಾಡುತ್ತೇನೆ. ಅವರು ಬರದೆ ಇದ್ದರೆ ನೋಡೋಣ... ಎಂದಳು.

ಅವರು ಹೋಗಿ ಮೂರು ವರುಷಗಳೇ ಆಯ್ತು. ಇನ್ನೂ ಆರು ತಿಂಗಳಲ್ಲಿ ಬರಲಿಲ್ಲ ಅಂದರೆ ನಾನು ಒಪ್ಪಿಕೊಂಡುಬಿಡುತ್ತೇನೆ. ಒಬ್ಬ ಮನುಷ್ಯ ಎಷ್ಟು ದಿನ ಅಂತ ಕಾಯೋದು? ಎಂದು ಒಂದು ಸಲ ಆಕೆ ಹೆಚ್ಚು ಕಡಿಮೆ ನಿರ್ಧರಿಸಿದಳು.

ರಾತ್ರಿ ಬಹಳ ಹೊತ್ತಿನವರೆಗೂ ಶಾರದಾ ಕೆಲಸ ಮಾಡುತ್ತಿದ್ದಳು. ಆದರೂ ಏರುತ್ತಿರುವ ಬೆಲೆಗಳಿಂದ ಖರ್ಚು ಸರಿ ತೂಗಿಸಲು ಇನ್ನು ಸಾಧ್ಯವಾಗುತ್ತಿರಲಿಲ್ಲ. ``ನಾನು ಖಾಯಿಲೆ ಬಿದ್ದರೆ ಮಕ್ಕಳನ್ನು ನೋಡಿಕೊಳ್ಳುವರು ಯಾರು ಇಲ್ಲವೆಂದು ಯೋಚಿಸುತ್ತಾಳೆ. ಇನ್ನೂ ಮನಸ್ಸಿನಲ್ಲಿರುವ ತನ್ನ ಗಂಡನಿಗೆ ಅವಳು ಮೌನವಾಗಿ ಎಚ್ಚರ ನೀಡುತ್ತಾಳೆ. ದೀಪಾವಳಿ ತನಕ ನಾನು ನಿಮ್ಮವಳು. ಹೊಸ ವರುಷದಿಂದ ನಾನು ಸ್ವತಂತ್ರಳು. ಆಮೇಲೆ ನನಗೆ ಬೈಯಬೇಡಿ....

ಆ ಕಡೆ ಹರ್ ಸಿಂಗ್ ಕೂಡ ತೂಗುಯ್ಯಾಲೆ ಆಡುತ್ತಿದ್ದ. ಮರುಮದುವೆ ಮಾಡಿಕೊಳ್ಳಲು ಶಾರದಾಳಿಗೆ ಪತ್ರ ಬರೆದ ಮೇಲೆ ಆತ ಬಹುಶಃ ಟ್ರೈನುಗಳಲ್ಲಿ ಟಿಕೇಟಿಲ್ಲದೆ ಊರಿನಿಂದ ಊರಿಗೆ ಅಲೆಯುತ್ತಿದ್ದ!

ಶಾರದಾ ತನ್ನನ್ನು ಹಿಂದಿರುಗುವಂತೆ ಕೋರಿ ದಿನಪತ್ರಿಕೆಯಲ್ಲಿ ಪ್ರಕಟಣೆ ನೀಡಬಹುದೆಂದೂ ಅವನು ನಿರೀಕ್ಷಿಸಿದ್ದ. ಅವನು ಲೈಬ್ರರಿಯಲ್ಲಿ ದಿನಪತ್ರಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲು ಆರಂಭಿಸಿದ. ಒಂದು ಲಾಡ್ಜಿನಲ್ಲಿ ಪಾತ್ರೆ ತೊಳೆಯುವ ಕೆಲಸ ಅವನ ಊಟಕ್ಕೆ ಖಾತರಿ ನೀಡಿತ್ತು.

ಪತ್ರಿಕೆಗಳ ಯಾವುದೇ ಪ್ರಕಟನೆ ಬಗೆಗೆ ಇದ್ದ ಆಸಕ್ತಿಯನ್ನು ಸುಮಾರು ಒಂದು ತಿಂಗಳ ನಂತರ ಕಳೆದುಕೊಂಡುಬಿಟ್ಟ. ಒಂದು ರೀತಿಯಲ್ಲಿ ಅವನು ಸಂತೋಷದಿಂದಲೂ ಇದ್ದ. ಶಾರದಾ ಮರುಮದುವೆಯ ತನ್ನ ಕೊನೆಯ ಕೊರಿಕೆಯನ್ನು ಒಪ್ಪಿಕೊಂಡಿದ್ದಾಳೆ ಎಂದು ಭಾಸವಾಯಿತು. ತನ್ನ ತಲೆಯ ಮೇಲಿನಿಂದ ಸಂಸಾರದ ಭಾರ ಇಳಿದು ಹೋಗಿದ್ದುದು ಅವನಿಗೆ ಸಮಾಧಾನವಾದರೂ ಒಂದು ರೀತಿ ಹೃದಯ ಭಾರವೆನಿಸುತ್ತಿತ್ತು. ಹೆಂಡತಿ ಮತ್ತು ಮಕ್ಕಳಿಗೆ ಈಗ ಕೊನೆಯ ಪಕ್ಷ ಊಟಕ್ಕಾದರೂ ಸಾಕಷ್ಟಿದೆ. ಒಳ್ಳೆಯದಕ್ಕೋಸ್ಕರ ಆಕೆಯಿಂದ ಬೇರೆಯಾಗಿರುವಾಗ ಇವೆಲ್ಲ ಸಹಜವೆಂದು ಹೇಳಿಕೊಳ್ಳುತ್ತಿದ್ದ.

ಯಾವುದಾದರೂ ಕೆಲಸಕ್ಕೆ ಪ್ರಕಟನೆ ಇರುತ್ತದೋ ಹೇಗೆ ಎಂಬ ನಿರೀಕ್ಷೆ ಮತ್ತು ಅಭ್ಯಾಸ ಬಲದಿಂದ ಅವನಿನ್ನೂ ದಿನಪತ್ರಿಕೆ ನೋಡಲು ಲೈಬ್ರರಿಗೆ ಭೇಟಿ ನೀಡುತ್ತಿದ್ದ. ಒಂದು ದಿನ ಮಾಂಸಾಹಾರಿ ಅಡುಗೆಯವನಿಗಾಗಿ ಪ್ರಕಟನೆಯಿದ್ದುದನ್ನು ಪತ್ತೆಹಚ್ಚಿದ. ಅದು ಹತ್ತು ವರುಷಗಳ ಒಪ್ಪಂದದ ಮೇರೆಗೆ ಜಾಂಬಿಯಾದಲ್ಲಿ ಕೆಲಸ ಮಾಡುವುದಾಗಿತ್ತು. ಪುಕ್ಕಟೆ ದಾರಿ ಖರ್ಚು, ಅರ್ಹತೆ ಆಧರಿಸಿ ಸಂಬಳ.

ಹರ್ ಸಿಂಗ್ ಅಡುಗೆಯವನಾಗಿ ಎಲ್ಲೂ ಕೆಲಸ ಮಾಡಿಲ್ಲ. ಆದರೆ ತನ್ನ ಚಿಕ್ಕಪ್ಪನ ಜತೆ ಹಳ್ಳಿಯಲ್ಲಿ ಸುಮಾರು ನಾಲ್ಕು ವರ್ಷ ಕಾಲಕಳೆದಿದ್ದ. ಆ ಸಮಯದಲ್ಲಿ ಆತ ಮನೆಯಲ್ಲಿ ಅಡುಗೆ ಮಾಡಿದ್ದಾನೆ. ಅವನ ಚಿಕ್ಕಪ್ಪ ಒಬ್ಬ ಸಣ್ಣ ಜಮೀನುದಾರ. ಇಬ್ಬರೂ ಬೇಟೆಗೆ ಹೋಗುತ್ತಿದ್ದರು ಮತ್ತು ಹಿಂದಿರುಗಿ ಬಂದು ತಮಗಾಗಿ ವಿಧ ವಿಧವಾದ ತಿಂಡಿ ಪದಾರ್ಥಗಳನ್ನು ಬೇಯಿಸಿಕೊಳ್ಳುತ್ತಿದ್ದರು.

ಹರ್ ಸಿಂಗ್ ತನ್ನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯಿಂದ ಪೆನ್ನು ಕೇಳಿ ಪಡೆದು, ಶಿವನ ಹೆಸರು ಹೇಳಿ ಅರ್ಜಿಯನ್ನು ಬರೆದ. ಅವನಿಗೆ ಭರವಸೆ ಉಂಟಾದಂತೆ ಕಾಣುತ್ತಿತ್ತು. ಲಾಡ್ಜಿಗೆ ಬಂದು ಯಜಮಾನನನ್ನು ಸೋಪು ಕೇಳಿ, ತನ್ನ ಬಟ್ಟೆಗಳನ್ನು ಒಗೆದು ಒಣಗಿಸಿದ. ಸಾಯಂಕಾಲ ನೀಟಾಗಿ ಡ್ರೆಸ್ ಮಾಡಿಕೊಂಡು, ವೈಯಕ್ತಿಕವಾಗಿ ಕಂಡು ಅರ್ಜಿ ಸಲ್ಲಿಸಲು ಹೋದ.

ಸೇಟು ಕೇಳಿದ ಮೊದಲ ಪ್ರಶೆಯೆ ನಿನಗೆ ಮದುವೆ ಆಗಿದೆಯೇ? ಎಂಬುದಾಗಿತ್ತು.

ಹರ್ ಸಿಂಗ್ ಪ್ರಾಮಾಣಿಕನಾಗಿ ಉತ್ತರಿಸಿದ, ಇಲ್ಲ ಸ್ವಾಮಿ.

ನಂತರ ಅವನು ತನ್ನ ಅಡುಗೆ ಅನುಭವದ ಬಗ್ಗೆ, ಎರಡು ಹಳ್ಳಿಗಳ ಮುಖ್ಯಸ್ಥನಾಗಿದ್ದ ಅವನ ಚಿಕ್ಕಪ್ಪನ ಬಗ್ಗೆ, ತಾನು ಫ್ಯಾಕ್ಟರಿಯಲ್ಲಿ ಕೆಲಸ ಮಾಡಿರುವ ಬಗ್ಗೆ ಸರಿಯಾದ ಮಾಹಿತಿ ನೀಡಿದ.

ಒಬ್ಬ ಸಂಸಾರಸ್ಥ ಐದು ವರುಷ ಮಾತ್ರ ಹೊರಗಿದ್ದು ವಾಪಸ್ಸು ಬರುತ್ತಾನೆ ಸೇಟು ಹೇಳಿದ.

ವಾಪಸ್ಸು ಬರುವ ಪ್ರಶ್ನೆಯೇ ಇಲ್ಲ ಸ್ವಾಮಿ. ಹತ್ತು ವರುಷ ಆದ ಮೇಲೂ ನಾನು ಹಿಂದಕ್ಕೆ ಬರೋದಿಲ್ಲ. ನಿಮಗೆ ನನ್ನ ಕೆಲಸ ಇಷ್ಟವಾಯಿತೆ? ಉಳಿದ ಬದುಕೆಲ್ಲ ನಿಮ್ಮ ಜತೆಯಲ್ಲೆ ಕಳೆಯಲು ಇಷ್ಟಪಡುತ್ತೇನೆ. ಆದರೆ ಮರುಕ್ಷಣವೇ ಮನಸ್ಸಿನಲ್ಲಿ ಚುಚ್ಚಿದಂತೆ ಹರ್ಸಿಂಗ್ನಿಗೆ ಅನ್ನಿಸಿತು. ಹತ್ತು ವರುಷಕ್ಕೆ ಒಂದು ಸಾರಿ ಆದರೂ ಮನೆಗೆ ಹೋಗಿಬರಬೇಕೆಂದು ಯಾರಿಗಾದರೂ ಅನ್ನಿಸುತ್ತದೆ ಎಂದವನು ಹೇಳಿದ.

ಸೇಟು ಅನುಭವಸ್ಥ. ಒಬ್ಬ ಅಡುಗೆ ಭಟ್ಟ ತಿಂಗಳಿಗೆ ನಾನೂರು ರೂಪಾಯಿ ಸಂಪಾದಿಸಿದರೆ ಅದು ವರುಷಕ್ಕೆ ಬಡ್ಡಿ ಸೇರಿ ಐದು ಸಾವಿರ ಆಗುತ್ತದೆ. ಹತ್ತು ವರುಷಕ್ಕೆ ಅದೇ ಅರವತ್ತು ಸಾವಿರವಾಗುತ್ತದೆಂದು ಆತನಿಗೆ ಮನವರಿಕೆಯಾಗಿದೆ. ಇಷ್ಟೊಂದು ಹಣ ಯಾರ ಕೈಯಲ್ಲೇ ಇದ್ದರೂ ಒಳ್ಳೆಯದು... ಇದೀಗ ಹತ್ತು ವರುಷಕ್ಕೆ ಕರಾರು ಮಾಡಿಕೊಳ್ಳುವುದು ಸರಿ. ಮುಂದೆ ನೋಡೋಣ ಸೇಟು ಹೇಳಿದ.

ಮಾರನೆಯ ದಿನವೆ ಸೇಟು ಅವನನ್ನು ಕೆಲಸಕ್ಕೆ ನೇಮಿಸಿಕೊಂಡ. ಅಲ್ಲಿನ ಅಡುಗೆಯವನನ್ನು ಕರೆದು, ನಾನು ಇವನ ಪಾಸ್ ಪೋರ್ಟ್ ಗೆ ವ್ಯವಸ್ಥೆ ಮಾಡುತ್ತೇನೆ. ಅಲ್ಲಿನ ಅಡುಗೆ ಬಗ್ಗೆ ಇವನಿಗೆ ಸರಿಯಾಗಿ ತಿಳಿಸು ಎಂದು ಸೂಚನೆ ನೀಡಿದ.

ಮುಂದಿನ ತಿಂಗಳೆ ಹರ್ ಸಿಂಗ್, ಸೇಟು ಜೊತೆ ವಿಮಾನವೇರಿದ. ಸ್ವರ್ಗಕ್ಕೆ ಹೋಗುತ್ತಿರುವಂತೆ ಭಾವಿಸಿದ.

ಜಾಂಬಿಯಾದಲ್ಲಿ ಸೇಟುವಿನ ಮನೆ ಸ್ವರ್ಗದಂತೇ ಇತ್ತು. ಅದೃಷ್ಟ ಅವನನ್ನು ಕಣ್ಣು ಬಿಟ್ಟು ನೋಡಿತ್ತು. ಹರ್ ಸಿಂಗ್ ಆನಂದದಿಂದಿರುತ್ತಿದ್ದ. ಇದೆಲ್ಲ ಒಂದು ಕನಸಿನಂತೆ ಭಾಸವಾಗಿತ್ತು.

ಅದೇ ಕ್ಷಣ ಹೃದಯವನ್ನು ಹಿಂಡುವ ನೋವುಂಟಾಯಿತು. ಶಾರದಾಳಿಗೆ ವಿಷಯ ತಿಳಿಸಲು ತೀವ್ರ ಕಾತರವುಂಟಾಯಿತು. ಅವಳು ಇನ್ನೊಂದು ಮದುವೆ ಆಗಿದ್ದರೆ, ಅವಳ ಬದುಕೆ ಹಾಳಾಗುತ್ತದೆಯೆಂದು ಅನಿಸಿತು. ಅವಳಂಥ ಸುಂದರವಾದ ಹೆಣ್ಣು ಮತ್ತೊಬ್ಬ ಗಂಡನನ್ನು ಹುಡುಕಿಕೊಳ್ಳುವುದು ಕಷ್ಟವಾಗುವುದಿಲ್ಲ. ವಠಾರದ ಯಜಮಾನ ಕೂಡ ಅವಳಿಗೆ ಸಹಾಯ ಮಾಡಿರಬಲ್ಲ. ಅವಳಂಥ ಒಬ್ಬ ಸಮರ್ಥ ಹೆಣ್ಣು ತಪ್ಪು ಆಯ್ಕೆ ಮಾಡುವುದಿಲ್ಲ ಎಂದು ಯೋಚಿಸಿದ.

ಈ ರೀತಿಯ ಯೋಚನೆಗಳ ಕುರಿತೆ ಹರ್ ಸಿಂಗ್ ಗೆ ನಗು ಬಂತು. ಇದೆಲ್ಲ ಮೂರ್ಖ ಆಲೋಚನೆ ಎನಿಸಿತು. ಅದು ಶಾರದಳ ಕಷ್ಟಗಳನ್ನು ಕುರಿತು ಯೋಚಿಸುವಂತೆಯೂ ಮಾಡಿತು. ಆತ ಮನೆ ಬಿಟ್ಟಾಗ ದಿನಸಿ ಅಂಗಡಿಯವನು ಸಾಲ ಕೊಡುವುದನ್ನು ನಿಲ್ಲಿಸಿದ್ದ. ವಠಾರದ ಯಜಮಾನ ಕೂಡ ಅವಳ ಮೇಲಿನ ಮರುಕದಿಂದ ಎಷ್ಟು ದಿನ ಸುಮ್ಮನಿರುತ್ತಾನೆ? ಅಲ್ಲದೆ ಶಾರದಳಿಗೆ ಒಂದು ಜೊತೆ ಮಾತ್ರ ಬಟ್ಟೆಗಳಿದ್ದವು. ಮಕ್ಕಳ ಬಟ್ಟೆಗಳಂತೂ....ಅರೆಹೊಟ್ಟೆಯ, ಅರೆಬೆತ್ತಲೆಯ ತನ್ನ ಸಂಸಾರದ ಬಗ್ಗೆ ಯೋಚಿಸುತ್ತ ಅವನು ಗದ್ಗದಿತನಾಗಿ ಬಿಕ್ಕುವುದನ್ನು ಅದುಮಿಡಲು ಕಷ್ಟಪಟ್ಟ.

ಕೆಲವು ತಿಂಗಳುಗಳ ಸಂಬಳ ಬ್ಯಾಂಕಿನಲ್ಲಿ ಸಂಗ್ರಹವಾದ ಹಾಗೆ ತಾನು ದೊಡ್ಡ ನಿಧಿಯ ಯಜಮಾನನಂತೆ ಹರ್ಸಿಂಗ್ಗೆ ಭಾಸವಾಗತೊಡಗಿತು. ಶಾರದ ಇನ್ನೊಂದು ಮದುವೆ ಮಾಡಿಕೊಂಡಿದ್ದರೂ ಒಬ್ಬ ಅನಾಮಧೇಯನಾಗಿ ಅವಳಿಗೆ ಸ್ವಲ್ಪ ಹಣ ಕಳಿಸಿಕೊಡಬೇಕು. ಹಳೆಯ ವಿಳಾಸಕ್ಕೆ ಕಳಿಸಿದರೆ, ಬುದ್ಧಿವಂತಳಾದ ಅವಳು ಇದನ್ನೆಲ್ಲ ಅರ್ಥಮಾಡಿಕೊಳ್ಳದೆ ಇರುತ್ತಾಳೆಯೆ? ಇನ್ನೊಂದು ಮದುವೆ ಮಾಡಿಕೊಂಡಿದ್ದರೆ ಇದೇ ಅವಳ ತೊಂದರೆಗೆ ಕಾರಣವೂ ಆಗಬಹುದು.

ಒಂದು ದಿನ ಅವನು ದಿನಸಿ ಅಂಗಡಿಯವನ ಮೂಲಕ ಶಾರದಾಳಿಗೆ ಒಂದಷ್ಟು ಹಣ ಕಳಿಸಲು ತುದಿಗಾಲ ಮೇಲೆ ನಿಂತಿದ್ದ. ಆದರೆ ಅರ್ಧ ದಾರಿಗೆ ಹೋಗಿ ವಾಪಸ್ಸಾದ. ತಾನು ಮದುವೆಯಾದವನೆಂದು ದಿನಸಿ ಅಂಗಡಿಯವನು ಸೇಟುಗೇನಾದರೂ ತಿಳಿಸಿದರೆ ತನ್ನ ಮಾನ ಪೂರ್ತಾ ಹೋಗುತ್ತದೆ.

ಶಾರದಾ ತುಂಬ ಸ್ವಾಭಿಮಾನದ ಹೆಣ್ಣು. ಅವಳು ಮರುಮದುವೆ ಮಾಡಿಕೊಳ್ಳದೆ ಹಾಗೆ ಇದ್ದರೂ ಇದ್ದಳೆ. ಕೊನೆಯ ಬಾರಿ ಆಡಿದ ಜಗಳದಲ್ಲಿ ಅವಳು ಇಕ್ಕಳ ಝಳಪಿಳಿಸಿದ್ದನ್ನು ಅವನು ನೆನಪಿಸಿಕೊಂಡ. ತನ್ನ ಅತ್ತಿಗೆ ಯಾವುದೋ ಮಾತು ಎತ್ತಿ ಆಡಿದಳೆಂದು ತನ್ನ ಅಣ್ಣನನ್ನೆ ಅವಳು ಬಿಟ್ಟುಬಂದಿದ್ದಳು. ಅವಳು ತನ್ನನ್ನು ಪೂರ್ತಾ ಮರೆತಿಲ್ಲವೆನ್ನುವುದಕ್ಕೆ ಖಾತರಿಯೇನು? ಅವಳ ಕಷ್ಟ ಎಂಥದ್ದೆ ಇರಲಿ ತನ್ನ ದುಡ್ಡನ್ನು ಅವಳು ಪಡೆಯುವುದಿಲ್ಲ. ಗೋಜಲುಗಳನ್ನು ಕತ್ತರಿಸುವುದರಲ್ಲೆ ಅವಳಿಗೆ ನಂಬಿಕೆ. ತನ್ನ ಮನಸ್ಸಿಗೆ ಬಂದ ಹಾಗೆ ನಡೆದುಕೊಳ್ಳುವವರೆಗೂ ಅವಳು ಒಳ್ಳೆಯವಳೇ! ಇಲ್ಲದಿದ್ದರೆ...

ಕೊನೆಗೆ ಅಜ್ಞಾತನಾಗಿಯೆ ಉಳಿಯಲು ನಿರ್ಧರಿಸಿ ತನಗೆ ತಾನೇ ಸಮಾಧಾನ ಹೇಳಿಕೊಂಡ.

ಹೀಗೆಯೆ ಹತ್ತು ವರುಷ ಕಳೆಯಿತು. ಹರ್ ಸಿಂಗ್ ನ ಕರ್ತವ್ಯನಿಷ್ಟೆ ಸೇಟುವಿಗೆ ಸಂತೋಷವನ್ನುಂಟು ಮಾಡಿತ್ತು. ಆತ ಹೊರಟು ಬರುವಾಗ ಉದಾರವಾಗಿ ಬಹುಮಾನ ನೀಡಿದ ಮತ್ತು ಸಂಗ್ರಹಿತ ಬಾಕಿಯನ್ನು ಭಾರತದ ಅವನ ಊರಿನಲ್ಲಿ ಸಿಗುವಂತೆ ವ್ಯವಸ್ಥೆ ಮಾಡಿದ. ಅವನು ತಲೆ ತಿರುಗುವಂಥ ಅರವತ್ತೈದು ಸಾವಿರ ರೂಪಾಯಿಗಳ ದೊಡ್ಡ ಮೊತ್ತವನ್ನು ಪಡೆದ.

ಹರ್ ಸಿಂಗ್ ವಿಮಾನ ಹತ್ತುತ್ತಿದ್ದ ಹಾಗೆ ಅವನ ಎದೆ ಬಡಿದುಕೊಳ್ಳತೊಡಗಿತು. ತುಂಬ ಕಷ್ಟದಿಂದ ಅವನು ತನ್ನ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡ. ತನ್ನ ಊರು ತಲುಪಲು ಆತ ಮುಂಬೈಯಲ್ಲಿ ವಿಮಾನ ಬದಲಿಸಿದ. ಈ ಮಧ್ಯೆ ತನ್ನ ಯೋಜನೆಯನ್ನು ರೂಪಿಸತೊಡಗಿದ.

ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಹಿಡಿದು, ನೇರವಾಗಿ ಒಳ್ಳೆಯ ಹೋಟೆಲಿಗೆ ಬಂದು, ಅವಸರವಸರವಾಗಿ ತಿಂಡಿ ತಿಂದು ತನ್ನ ಹಳೆಯ ವಠಾರಕ್ಕೆ ಹೋದ. ತಾನು ಗುರುತಿಸಲ್ಪಡುವ ಬಗ್ಗೆ ಅವನಿಗೆ ಚಿಂತೆ ಇರಲಿಲ್ಲ. ಟ್ಯಾಕ್ಸಿಯಿಂದ ಕೆಳಗಿಳಿದ ಮೇಲೂ ಸುತ್ತಲೂ ನೋಡುವ ಧೈರ್ಯ ತೋರಲಿಲ್ಲ.

ಒಮ್ಮೆ ತಾನು ವಾಸವಾಗಿದ್ದ ಮನೆಯ ಮುಂದೆ ಹಾದುಹೋದ ಹರ್ ಸಿಂಗ್, ಅಂಗಳದಲ್ಲಿ ಬಣ್ಣದ ಬಟ್ಟೆಗಳನ್ನು ಒಣಗಿ ಹಾಕಿರುವುದನ್ನು ಗಮನಿಸಿದ. ಬಾಗಿಲ ಹತ್ತಿರ ಒಬ್ಬ ಹೆಂಗಸು ಬಟ್ಟೆ ಹೊಲಿಯುವ ಮಿಷನ್ನಿನ ಮೇಲೆ ಕುಳಿತಿದ್ದಳು. ಹರ್ ಸಿಂಗ್ ನ ಎದೆ ವೇಗವಾಗಿ ಬಡಿದುಕೊಳ್ಳತೊಡಗಿತು. ಅವಳೇ....ಶಾರದಾ! ಅವಳ ಬಳಿ ಧಾವಿಸಿ ಹೋಗುವ ಆಸೆ ಒತ್ತರಿಸಿ ಬಂತು. ಆದರೆ ತನ್ನನ್ನು ತಾನೇ ನಿಯಂತ್ರಿಸಿಕೊಂಡ. ಬಹುಶಃ ಅವಳು ಇನ್ನೊಂದು ಮದುವೆ ಆಗಿದ್ದರೆ? ಹಾಗಿದ್ದೂ ಇನ್ನೂ ಇದೇ ಮನೆಯಲ್ಲಿ ವಾಸ ಮಾಡುತ್ತಿರಲು ಸಾಧ್ಯ. ಆತ ಕೆಲಸದ ಮೇಲೆ ಹೋಗಿರಬಹುದು, ಹುಡುಗರು ಶಾಲೆಯಲ್ಲಿರಬಹುದು.

ಚಿಕ್ಕ ಗೋಪುರದ ಪಕ್ಕದ ಮನೇಲಿ ಯಾರು ವಾಸ ಮಾಡುತ್ತಿದ್ದಾರೆ, ಗೊತ್ತೇನಮ್ಮ? ಬೀದಿಯ ತಿರುವಿನಲ್ಲಿ ಆತ ಒಬ್ಬ ಹೆಂಗಸನ್ನು ವಿಚಾರಿಸಿದ.

ನೀವು ಶಾರದಾಳ ಮನೆ ಕೇಳ್ತಿದ್ದೀರಾ?

ಕೊಂಚ ಕಷ್ಟದಿಂದ ಹರ್ ಸಿಂಗ್ ಹೇಳಿದ ಹೌದು, ಅಲ್ಲಿ ಹರ್ ಸಿಂಗ್ ಅಂತ ಒಬ್ಬರು ಇದ್ದ ಹಾಗಿತ್ತಲ್ಲ....

ನನಗೆ ಸರಿಯಾಗಿ ಗೊತ್ತಿಲ್ಲ. ಶಾರದಳ ಗಂಡ ಸುಮಾರು ವರುಷದಿಂದ ತಲೆತಪ್ಪಿಸಿಕೊಂಡಿದ್ದಾನೆ ಅಂತ ಜನ ಹೇಳ್ತಾರೆ. ಆತ ಹರ್ ಸಿಂಗ್ ಇರಬಹುದು.

ಇನ್ನಷ್ಟು ಕೇಳಲು ಹರ್ ಸಿಂಗ್ ಗೆ ಧೈರ್ಯಬಂತು. ಅಂದರೆ.. .ಅವಳೊಬ್ಬಳೆ ಆ ಮನೆಯಲ್ಲಿ ವಾಸವಾಗಿದ್ದಾಳೆಯೆ?

ಇಲ್ಲ. ಅವಳ ಜೊತೆ ಇಬ್ಬರು ಹುಡುಗರಿದ್ದಾರೆ.

ಆ ಮನೇಲಿ ಬೇರೆ ಯಾರೂ ಇಲ್ಲವೆ?

ಗಂಡ ಹೋದಮೇಲೆ ಇನ್ನಾರಿರ್ತಾರೆ? ಆ ಹೆಂಗಸು ನಿಟ್ಟುಸಿರಿಟ್ಟು ಹೊರಟುಹೋದಳು.

ಒಂದು ಕ್ಷಣ ಹರ್ ಸಿಂಗ್ ಗೆ ಮನೆಗೆ ನುಗ್ಗುವ ಆಸೆಯಾಯಿತು. ಆದರೆ ಆತನಲ್ಲಿ ಭರವಸೆಯೊಂದು ಹುಟ್ಟಿ ದುಡುಕಬಾರದೆಂದುಕೊಂಡ. ಅವಳು ಮದುವೆಯಾಗಿಲ್ಲವೆಂದು ಹೆಚ್ಚು ಕಡಿಮೆ ಖಚಿತವಾಗಿತ್ತು. ಇಷ್ಟಾದರೂ ಅವಳು ತನ್ನನ್ನು ಮತ್ತೆ ಸ್ವೀಕರಿಸುತ್ತಾಳೆ ಎಂಬುದರ ಬಗ್ಗೆ ಅವನಿಗೆ ಭರವಸೆ ಇರಲಿಲ್ಲ.

ಹರ್ ಸಿಂಗ್ ಹೋಟೆಲಿಗೆ ಹಿಂತಿರುಗಿದ. ಸ್ಥಳೀಯ ವಿಳಾಸಕೊಟ್ಟು ಅವಳಿಗೊಂದು ಪತ್ರ ಬರೆಯುವುದೆಂದು ನಡುದಾರಿಯಲ್ಲೇ ನಿರ್ಧರಿಸಿದ. ತನ್ನ ಇಷ್ಟದಂತೆ ಪ್ರತಿಕ್ರಿಯಿಸಲು ಅವಳಿಗೆ ಅವಕಾಶವಿರುತ್ತದೆ. ಆದರೆ ಒಂದು ಕ್ಷಣ ಯೋಚಿಸಿದ ಮೇಲೆ ಶಾರದಾಳನ್ನು ಹೋಟೆಲಿಗೆ ಕರೆಯುವುದು ಸರಿಯಲ್ಲವೆನಿಸಿತು. ಅದರ ಬದಲು ಅವನೊಂದು ಇನ್ ಲ್ಯಾಂಡ್ ಲೆಟರ್ ನಲ್ಲಿ ಕೆಲವೊಂದು ಸಾಲುಗಳನ್ನು ಗೀಚಿದ;

ಶಾರದಾ,

ನಾನು ಹತ್ತು ವರುಷಗಳ ಕಾಲ ಹೊರದೇಶದಲ್ಲಿ ವಾಸಮಾಡಿ ಊರಿಗೆ ವಾಪಸ್ಸು ಬಂದಿದ್ದೇನೆ. ನನ್ನನ್ನು ಕ್ಷಮಿಸಿ ್ನಗುವಿನೊಂದಿಗೆ ಒಪ್ಪಿಕೊಳ್ಳುವುದಾದರೆ, ಗುರುವಾರ-ಅಂದರೆ ನಾಳಿದ್ದು - ಆ ಚಿಕ್ಕ ಗೋಪುರದ ಕಂಬಿಯ ಮೇಲೆ ಒಂದು ಹಸಿರುಬಟ್ಟೆಯನ್ನು ಹಾರಿಸು. ನಿನ್ನನ್ನು ಹತ್ತು ವರುಷಗಳ ಹಿಂದೆ ತೊರೆದುಹೋದ,                             -ಹರ್ ಸಿಂಗ್

ಹರ್ ಸಿಂಗ್ ಪತ್ರವನ್ನು ಅಂಚೆಗೆ ಹಾಕಿದ. ಗುರುವಾರ ಅವನು ಹೋಟೆಲು ಬಿಡಲು ನಿರ್ಧರಿಸಿದ. ಕಂಬಿಗಳ ಮೇಲೆ ಹಸಿರು ಬಟ್ಟೆ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಇಲ್ಲದಿದ್ದರೆ ಅರಾವಳಿ ಬೆಟ್ಟದ ಬುಡದಲ್ಲಿರುವ ತನ್ನ ಹಳ್ಳಿಗೆ ಹೋಗಿ ತಾನೇ ಒಂದು ಚಿಕ್ಕಮನೆ ಕಟ್ಟಿಕೊಳ್ಳಬೇಕು ಎಂದು ನಿರ್ಧರಿಸಿದ.

ಹರ್ ಸಿಂಗ್ ಹೀಗೆ ಮಾನಸಿಕ ಒತ್ತಡಗಳಲ್ಲಿ ಅಸಹನೆಯಿಂದ ನರಳುತ್ತ, ಊರಿನ ಬೀದಿ ಬೀದಿಗಳನ್ನು ಸುಮ್ಮನೆ ಸುತ್ತುತ್ತ, ಸಿನಿಮಾಗಳನ್ನು ನೋಡುತ್ತ ಕಾಲ ಕಳೆದ.

ಗುರುವಾರ ಬೆಳಗಿನ ಜಾವವೆ ಹರ್ ಸಿಂಗ್ ಎದ್ದ. ಆಗ ಹೋಟೆಲಿನಲ್ಲಿ ಇನ್ನೂ ಯಾರೂ ಎದ್ದಿರಲಿಲ್ಲ. ಅವನು ಸ್ನಾನ ಮಾಡಿ ಬಟ್ಟೆ ಹಾಕಿಕೊಂಡು ಶೂ ಕಟ್ಟುತ್ತಿದ್ದಾಗ ಅಡುಗೆಮನೆಯಲ್ಲಿ ಆಗ ತಾನೇ  ದಿನದ ಕೆಲಸ ಆರಂಭವಾದ ಸದ್ದು ಕೇಳಿಸುತ್ತಿತ್ತು.

ತನ್ನ ಚಡಪಡಿಸುವ ಮನಸ್ಸಿಗಿಂತ ಒಂದು ಮದಿಸಿದ ಆನೆಯನ್ನು ಹರ್ ಸಿಂಗ್ ಸುಲಭವಾಗಿ ಹಿಡಿತದಲ್ಲಿ ಇಡಬಲ್ಲವನಾಗಿದ್ದ. ಆಗ ತಾನೆ ಆರು ಗಂಟೆ. ಇಷ್ಟು ಬೇಗ ಅವಳು ಹಸಿರು ಬಟ್ಟೆಯನ್ನು ತೂಗು ಹಾಕುವುದಿಲ್ಲ. ಸ್ವಲ್ಪ ಹೊತ್ತು ಬಿಟ್ಟು ಹೋಗುವುದು ಉತ್ತಮವೆಂದು ಭಾವಿಸಿದ.

ಕೊನೆಗೂ ಅವನು ತನ್ನ ಲಗೇಜು ತೆಗೆದುಕೊಂಡು ಹೋಟೆಲು ಬಿಟ್ಟು ಹೊರಟ, ಅವನ ಹೃದಯ ಹರಿದಾಡುತ್ತಿತ್ತು. ತಾನು ತನ್ನ ಹೆಂಡತಿ ಒಂದುಗೂಡಿದರೆ ಐದುಕಾಲು ತೊಲ ಬಂಗಾರದ ನಾಗರವನ್ನು ಮಾಡಿಸಿ ಹಾಕುವೆನೆಂದು ಅವನು ಶಿವನ ಹೆಸರಲ್ಲಿ ಹರಕೆ ಹೊತ್ತುಕೊಂಡ.

ಗೋಪುರ ಹತ್ತಿರದ ತಿರುವಿನಲ್ಲಿ ಆತ ಟ್ಯಾಕ್ಸಿ ನಿಲ್ಲಿಸಿದ. ಟ್ಯಾಕ್ಸಿ ನಿಲ್ಲಿಸುವ ಮೊದಲೆ ಅವನು ವಠಾರವನ್ನೊಮ್ಮೆ ಅವಲೋಕಿಸಿದ. ಅವನ ಹೃದಯ ಕಣ್ಣಿಗೆ ಬಂದಂತಾಯಿತು. ಕಂಬಿ ಪೂರ್ತಾ ಹಸಿರು ಬಟ್ಟೆಯಿಂದ ಸುತ್ತಿದ್ದು, ಅದು ಮನೆಯ ಬಾಗಿಲವರೆಗೂ ಹರಡಿಕೊಂಡಿತ್ತು.

ಹರ್ ಸಿಂಗ್ ಟ್ಯಾಕ್ಸಿಯನ್ನು ಗೋಪುರದ ತನಕ ಅಂದರೆ ಮನೆಯ ಬಾಗಿಲ ತನಕ ತೆಗೆದುಕೊಂಡು ಹೋಗಲು ಇಷ್ಟ ಪಟ್ಟ. ಆದರೆ ಗೋಪುರ ಮತ್ತು ಮನೆಯ ನಡುವೆ ಸಾಕಷ್ಟು ಜಾಗವಿರಲಿಲ್ಲ.

ಅವನು ಟ್ಯಾಕ್ಸಿಯನ್ನು ಬಿಟ್ಟು ಬಂದಾಗ ಬಾಗಿಲಿಗೆ ತೋರಣದ ರೀತಿ ಹಸಿರು ಬಟ್ಟೆಯನ್ನು ತೂಗುಹಾಕಿರುವುದು ಕಣ್ಣಿಗೆ ಬಿತ್ತು. ಶಾರದಾ ಹಸಿರು ಸೀರೆಯನ್ನುಟ್ಟು ಚೆಂದವಾಗಿ ಕಾಣುವ ಇಬ್ಬರು ಹುಡುಗರನ್ನು ಪಕ್ಕದಲ್ಲಿರಿಸಿಕೊಂಡು ಬಾಗಿಲ ಬಳಿ ನಿಂತಿದ್ದಳು.

ಶಾರದಾ ತಿರುವಿನ ಒಂದು ಪಕ್ಕದಲ್ಲಿ ಟ್ಯಾಕ್ಸಿ ನಿಲ್ಲುವುದನ್ನು ನೋಡಿದಳು. ಟ್ಯಾಕ್ಸಿ ನಿಂತಾಗ ಅವಳು ಪಿಳಿಪಿಳಿ ಕಣ್ಣು ಬಿಟ್ಟಳು. ಆದರೆ ಸೂಟು ಧರಿಸಿದ್ದ ವ್ಯಕ್ತಿಯನ್ನು ನೋಡಿ ಅವಳು ಮತ್ತೆ ಗೋಪುರದ ಕಡೆ ತಿರುಗಿದಳು. ಹರ್ ಸಿಂಗ್ ಕೂಡ ಟ್ಯಾಕ್ಸಿಯ ತೆರೆದ ಬಾಗಿಲನ್ನು ಹಾಗೆಯೆ ಬಿಟ್ಟು ಯಾವ ಹಿಂಜರಿತವಿಲ್ಲದೆ ಗೋಪುರ ದಾಟಿ ಮೆಟ್ಟಿಲು ಹತ್ತಿರ ಬಂದ...

ಕೆಲವೊಂದು ಕ್ಷಣ ಆ ಎರಡೂ ಜೊತೆ ಕಣ್ಣುಗಳು-ಮೆಟ್ಟಿಲ ಮೇಲೊಂದು, ಕೆಳಗೊಂದು-ವಿಸ್ಮಯಗೊಂಡು ನೋಡಿದವು. ಹುಡುಗರು ಆಶ್ಚರ್ಯಗೊಂಡಿದ್ದರು. ಮರುಕ್ಷಣವೇ ಆತ ಮೆಟ್ಟಿಲನ್ನು ಹತ್ತಿ ಅವಳನ್ನು ಕೇಳಿದ.

ನನ್ನನ್ನು ಗುರುತಿಸುವುದಿಲ್ಲವೆ?

ಅವನನ್ನು ಗುರುತಿಸಿದ ಆ ಕ್ಷಣ...ಶಾರದಾ ತನ್ನ ಬದುಕಿನಲ್ಲೆ ಮೊದಲ ಬಾರಿಗೆ ತನ್ನ ಸಮಯಾಸಮಯ ಪ್ರಜ್ಞೆ  ಕಳೆದುಕೊಂಡು, ನೀಟಾಗಿ ಶೇವ್ ಮಾಡಿರುವ ತನ್ನ ಗಂಡನನ್ನು ತಬ್ಬಿ ಹಿಡಿದು ಗದ್ಗದಿತಳಾಗಿ ಅಳತೊಡಗಿದಳು. ಹರ್ ಸಿಂಗ್ ಕೂಡ ಕಣ್ಣೀರ ಕೋಡಿ ಹರಿಸುತ್ತ, ಇಬ್ಬರು ಹುಡುಗರನ್ನೂ ತನ್ನ ಕಡೆ ಎಳೆದುಕೊಂಡ. ಆ ನಾಲ್ಕೂ ಮಂದಿ ಆನಂದದಲ್ಲಿ ಮುಳುಗಿದರು. ಅವರೇಕೆ ಜೋರಾಗಿ ಅಳುತ್ತಿದ್ದರೆಂದು ಹುಡುಗರಿಗೆ ಅರ್ಥವಾಗಲಿಲ್ಲ. ಅಳು ಕೂಡ ಹಿತಕರವಾಗಿರುತ್ತದೆ ಎಂಬುದು ಅವರಿಗೂ ಗೊತ್ತಿರಲಿಲ್ಲ.

ಸೌಜನ್ಯ- `ಪ್ರತಿಭಾ ಇಂಡಿಯಾ ಇಂಗ್ಲಿಶ್ ಸಾಹಿತ್ಯ ಪತ್ರಿಕೆ

'ಹಸಿರು ತೋರಣ' ಸಂಕಲನದಿಂದ

ಗುರುವಾರ, ಜುಲೈ 14, 2011

ತುಕಾರಾಮನ ಮತ್ತಷ್ಟು ಅಭಂಗಗಳು

1
ಕನಸಿನ ಹಾಗೆ ಕನಸಿನಾ ಹಾಗೆ
ನಾಮದೇವ ವಿಠ್ಠಲ ಬಂದಿದ್ದ ಹಾಗೆ
'ಹುಚ್ಚಾಟ ಬಿಟ್ಟು ಬರಿಯೊ ಅಭಂಗ,
ನಿಂದೀ ಕೆಲಸ!' ಹೇಳಿದ್ದ ನಾಮದೇವ
ಕನಸಿನ ಒಳಗಿನ ಕಣಸಲ್ಲಿ ಎಬ್ಬಿಸಿ
ಬೆನ್ನು ತಟ್ಟಿ ವಿಠ್ಠಲ ನೀಡಿದ್ದ ಲೆಕ್ಕ
'ನಾಮದೇವನ ಲೆಕ್ಕವಿತ್ತು ಶತಕೋಟಿ
ಬರಿಯದೆ ಉಳಿದದ್ದು ತುಕಾನ ಬಾಕಿ!'

2
ಗುಂಯ್ಗುಡೊ ನಿನ್ನಾ ತಾಳಕ್ಕೆ ತಕ್ಕಂತೆ
ತಕತಕ ಕುಣಿವಂಗೆ ಮೈದುಂಬಿಕೊಳ್ಳುತ್ತೆ
ಸೂತ್ರದ ಬೊಂಬೆ ತರಹ ನನ್ನಾ
ಕುಣಿಸುತ್ತಿ ತಾ ದಿಮ್ಮಿ ಥಕ್ಕಥಯ್ಯಾ
ನಿನ್ನದೆ ಹೆಸರು ಮೈಮಾಟ ಬಣ್ಣ
ನನ್ನಲ್ಲಿ ಮಿಡಿದು ಬಂತು ಜೀವಂತ
ತುಕಾನ ನುಡಿಯಿದು ಪಾಂಡುರಂಗಾ
ಎಂದಿಗು ನೆರೆದಿರುವ ನನ್ನ ಸುತ್ತಾ

3
ನನ್ನ ನಿನ್ನಾ ನಡುವೆ ಯಾ ಭೇದವಿಲ್ಲ
ಸುಮ್ಮನೆ ತಮಾಷೆ ನಾ ಮಾಡುತಿನಲ್ಲ
ನನ್ನಂತೇನೆ ನಿನ್ನಾ ಆಕಾರ ರೂಪಾ
ನೀ ಬಯಸಿ ನನ್ನ ಹಿಗ್ಗಿಸುತ್ತೀಯಾ
ನಾನೇ ನಿಜವಾಗಿ ನಿನ್ನೊಳಗೆ ಕೆಳಗೆ
ನೀನೇ ಓಡಾಡುತ್ತಿ ನನ್ನಿಂದಾಚೆಗೆ
ನಾ ನಿಂತೆ ನಿನ್ನಲ್ಲಿ ಅಲುಗದ ಹಾಗೆ
ನಿನ್ನಾ ಇಚ್ಛಾಬಲ ಒಂದೇ ನನ್ನೊಳಗೆ
ನನ್ನ ಬಾಯಲ್ಲಿ ನಿಂದೇ ಮಾತು
ನಿನ್ನಲ್ಲೆ ಉಳಿದೆ ನಾ ತಣ್ಣಗೆ ಕೂತು
ತುಕಾನ ನುಡಿಯಿದು ಓ ದೇವರ ದೇವಾ
ನಮ್ಮ ಹೆಸರು ಕಲಸಿಹೋಗಿದೆಯಲ್ಲಾ

4
ನರಿಯನ್ನು ಕಂಡು ಹುಲಿಯಂತು ಹೀಗೆ-
'ನಿನ್ನ ತಿಂದರೆ ನಾನು ಬೇಸರಿಸುತ್ತೀಯಾ?
ನೀ ಸಾಯುವವ ಅಂತಾನೆ ನಂಗೊತ್ತು ಬಿಡು
ಹಸಿವಿಂದ ಸಾಯಲು ನಂಗ್ಯಾಕೆ ಬಿಡುತಿಯಾ'
ಹುಲಿಯ ಮಾತಿಗೆ ನರಿ ಅಂತು ಪ್ರತಿಮಾತು-
'ನಿನ್ನ ಮಾತಲ್ಲಿ ಒಂಚೂರೂ ಸುಳ್ಳಿಲ್ಲ
ಸಾವೇ ನಿಜ ಈ ಮೈಗೆ ಒಂದಲ್ಲ ಒಂದಿನ
ನೀನ್ಯಾಕೆ ಆತ್ಮ ತ್ಯಾಗ ಮಾಡಿಕೊಂಡಿಲ್ಲಾ?'
ಹುಲಿ ನರಿಯ ಮಾತು ನರಿ ಹುಲಿಯ ಮಾತು
ಒಬ್ಬರೊಬ್ಬರ ಮಾತು ಕೇಳಿ ತಿಳಕೊಂಡ್ತು.
ತುಕಾನ ನುಡಿಯಿದು ತಂತುಗಾರರು ಕೂಡಿ
ಆಗುವುದೇನಂತಾ ಚೆನ್ನಾಗಿ ಗೊತ್ತು.

5
ಕುಣುಬಿಯಾಗಿ ಹುಟ್ಟಿಸಿ ಒಳ್ಳೇದೆ ಮಾಡಿದೆ
ಕಪಟಿಗಳ ಕೈಯಲ್ಲಿ ನಾಶವಾಗುತ್ತಿದ್ದೆ
ಓದು ಬರಹ ನಂಗೆ ಸಂಕಟ ತರುತ್ತಿತ್ತು
ಸೊಕ್ಕಿನ ದಾರೀಲಿ ನರಕ ತುಳಿಸುತ್ತಿತು
ತುಕಾ ನುಡಿದ-
ವೇದದ ಗಿಳಿಪಾಠಕ್ಕೆ ನೀವೇ ಹೋಗಿ
ನನ್ನ ದಾರಿಗೆ ಮಾತ್ರ ಅಡ್ಡ ಬರಬೇಡಿ

6
ಬೈಗೂ ಬೆಳಗೂ ಒಂದೇ ಸಮ ಯುದ್ಧ
ಈ ಜಗಕೂ ನನಗೂ ನಡುವೆ ಯುದ್ಧ
ಏಕದಂ ಎರಗಿದರೂ ಎಚ್ಚರ ತಪ್ಪಲ್ಲಾ
ಗಟ್ಟಿ ನಿಲ್ಲದೆ ನಾವು ಹಾಗೇ ಬಿಡಲ್ಲಾ
ಎಲ್ಲರ ಬೆದರಿಸೊ ತುಕಾನ ನುಡಿಯಿದು
ಬಲ ಬಂತೊ ಬಲಾ, ನಿನ್ನಾ ಹೆಸರಿಂದ

7
ತಿನ್ನಲಿ ಏನೀಗ ಎಲ್ಲಿಗೆ ಹೋಗಲಿ?
ಯಾರಲ್ಲಿ ಉಳಿಯಲಿ ಈ ಊರಿನಲ್ಲಿ?
ಸಿಟ್ಟಿಗೆದ್ದ ಪಾಟೀಲ ಊರ ಈ ಜನ
ನೀಡುತಾರ ನಂಗೆ ತುತ್ತು ಅನ್ನದಾನ?
ಮರುವಾದೆ ಗೆಟ್ಟವ ಅಂತ ದೂರುತಾರೆ
ನ್ಯಾಯಕಟ್ಟೆಗೂ ನನ್ನಾ ಎಳೆಯುತಾರೆ
ಸಭ್ಯಸ್ಥ ಜನರೇ ಸೆಟೆದು ನಿಂತವರೆ
ಕೈಲಾಗದವನಾ ಮ್ಯಾಲೆ ಕೈ ಎತ್ತವರೆ
ತುಕಾನ ನುಡಿಯಿದು ಬೇಡಿವರ ಸಂಗ
ವಿಠ್ಠಲನ ಹುಡುಕುತ ಹೋಗುವಾ ಈಗ

8
ಅರಿವಿನ ದೇವಾ ನಿನ್ನಲ್ಲೇನೊ ದೋಷ
ಕಲ್ಲಿಂದ ನೀನ್ಯಾಕೆ ಮುಚ್ಚಿ ಹೋಗಿರುವಿ?
ನಿನ್ನಾ ಗುಡಿಯಲ್ಲೆ ಜೀವಾ ಬಿಡುತೀನಿ
ದೇವ ನನ್ನ ಹತ್ಯೆ ನಾ ಮಾಡಿಕೊತೀನಿ
ಓ ತಾಯಿ ವಿಠಬಾಯಿ ನಂಬಿದ್ದೆನವ್ವ
ನಾನಿರುವುದೆಲ್ಲ ನಾಶ ಮಾಡುತಿನವ್ವ
ತುಕಾನ ನುಡಿಯಿದು ಹೊರಟುನಿಂತಿವಿನಿ
ನನ್ನಾ ಜೀವಾ ನಿಂಗೆ ಬಿಟ್ಟುಬಿಡುತಿನಿ

9
ನಾ ದೈವ ಅಂತಾನೆ ಜನ ತಿಳಿತಾರಲ್ಲ
ಅಯ್ಯೋ ಈ ಪಾಪ ಬರಿಯ ಪಾಪವಲ್ಲ್ಲ
ದಂಡಿಸೋ ದೇವಾ ದಂಡಿಸೋ ನನ್ನಾ
ಹಿಡಕೋ ನನ್ನ ತಲೆ ಹಿಡಕೊಳ್ಳೋ ಚೂರಿ
ಪೂಜೆ ಮಾಡುತಾರೆ ನಂಗೇ ಅವರೆಲ್ಲ
ಅಂಥ ಹಕ್ಕಿಲ್ಲವೊ ನಂಗ್ಯಾವ ಹಕ್ಕಿಲ್ಲ
ಓ ಯಪ್ಪಾ ಯವ್ವಾ ತುಕಾನ ಮಾತಿದು
ಪಾಪ ಅಂತಾ ಗೊತ್ತೊ ನನ್ನಾ ಮನಸಿಗು

10
ಗೀಚುತೀನಿ ಮತ್ತೆ ಒಡೆದು ಹಾಕುತೀನಿ
ನಿನಗಿಷ್ಟವಾಗೋದನ್ನೆ ಹುಡುಕುತೀನಿ
ನಿನ್ನ ಪರೀಕ್ಷೆ ನಾ ಪಾಸಾಗಲೆಬೇಕು
ನನ್ನೀಪದ ದೇವಾ ಉಳಿಯಲೇ ಬೇಕು
ಪದ ಪದ ಅಳಿಸಿ ಬದಲಿಸಿ ಇಡುತೀನಿ
ಮತ್ತೆ ಮತ್ತೆ ನಿನಗೆ ಕೈ ಜೋಡಿಸುತೀನಿ
ತುಕಾ ನುಡಿದ ಕೊನೆಗೆ ಮಾತಾದರು ಆಡು
ಈ ಪದ ಎಂಥದೊ ಏನೊ ನುಡಿಬೋದು

 # #

ಬುಧವಾರ, ಜೂನ್ 29, 2011

ತುಕಾರಾಮನ ಅಭಂಗಗಳು

ಇವು ತುಕಾರಾಮನ ಜೀವನ ಸಾಧನೆ ಚಿತ್ರಿಸುವ  ಬರೆಹ ಮಾಡುವ ಸಂದರ್ಭದಲ್ಲಿ ಅದರ ಅಗತ್ಯವನ್ನು ಭರಿಸಲು ಇಂಗ್ಲಿಶಿನಿಂದ ಅನುವಾದ ಮಾಡಿದವು. ಇವನ್ನು ಆ ಬರೆಹದಿಂದ ಪ್ರತ್ಯೇಕ ಮಾಡಿದರೂ ತನ್ನದೇ `ತನ'ವನ್ನು ಹೊಂದಿವೆ. ತುಕಾರಾಮನ ಕರ್ತೃತ್ವ ಶಕ್ತಿಯ ಪರಿಚಯ .ಇಲ್ಲಿ ನಮಗಾಗುತ್ತದೆ.
#

1
ಮಾತೇ ನನ್ನಲ್ಲಿ ಇರುವ ಸಿರಿಯು
ಮಾತೇ ನಾ ಉಟ್ಟ ತೊಟ್ಟ ಚೆಲುವು
ಮಾತೇ ನಾ ಉಂಡು ತಣಿದ ಹಸಿವು
ಮಾತೇ ನನ್ನಲ್ಲಾಡೊ ಜೀವದುಸಿರು
ಮಾತೇ ನಾ ನೀಡೊ ದಾನ ಸಂಪತ್ತು
ತುಕಾನ ಈ ಮಾತಿಗೆ ವಿಠ್ಠಲನೆ ಸಾಕ್ಷಿ
ಅವನ ಪೂಜಿಸುವೆ ಮಾತನ್ನೆ ಮುಡಿಸಿ

2
ಸಂತರು ಆಡಿದ ಮಾತನಾಡುತೀನಿ
ನನ್ನಂಥ ಗಮಾರ ಏಸು ತಿಳಿದಿವಿನಿ?
ವಿಠಲನ ಹೆಸರೆ ಹೇಳೋಕೆ ಬರಲ್ಲ
ನಾನ್ಯಾವ ನೀತಿ ನಿಂಗೆ ಹೇಳುತೀನಿ?
ಎಳೆಮಂಗಿನಂಗೆ ತೊದಲು ನುಡಿತೀನಿ
ನಿಂಗಿನ್ನು ನಂಜಾತಿ ಗೆಪ್ತಿ ಬಂದಿಲ್ವಾ?
ತುಕಾನಾಡೊ ಮಾತು ಆ ದೇವರು ಕೊಟ್ಟ
ಅವ ಮಾತ್ರ ಬಲ್ಲ ಅಂಥ ಮಾತಿನ ಗುಟ್ಟ

3
ಒಬ್ಬೊಂಟಿ ನಾನು ಈ ಶೂನ್ಯದಲ್ಲಿ
ನನಗಿಲ್ಲ ಯಾರೂ ಸಂಗಾತಿ ಇಲ್ಲಿ
ನೋಡೀಗ ಎಂಥ ಅಚ್ಚರಿ ನೋಡಾ
ಪರಮಾತ್ಮ ನನ್ನ ಹುಚ್ಚೆಬ್ಬಿಸಿದನಲ್ಲ!
ಅವನಾ ಮೈ ನನ್ನಲ್ಲಿ ಅಡಗಿಸಿದನಲ್ಲ
ನನಗಾಗಿ ಜೊತೆಗಾರ ಆಗಿರುವನಲ್ಲ!
ತುಕಾನ ನುಡಿಯಿದು ಇಲ್ಲಾ ಗೊತ್ತಿಲ್ಲ
ನಂದೇ ಭಾವನೆ ನನ್ನ ಹಾಳು ಮಾಡಿತಲ್ಲ!

4
ದಾವರ ದಾವರ ದಾವರ
ದಾವರಾನೆ ಕುಡಿದುಬಿಟ್ಟೆ
ಹಸಿವೂ ಹಸಿವೂ ಹಸಿವೂ
ಹಸಿವನ್ನೇ ನುಂಗಿಬಿಟ್ಟೆ
ನಂದೇ ಜೀವಾ
ಇಲ್ಲದಂಗಾಗಿಬಿಡ್ತು
ವಿಠ್ಠಲ ಕಂಡಾ
ನನ್ನಲ್ಲಿ ಚೊಕ್ಕ ಮನಸ್ಸನ್ನ
ಆಸೆಗಳಿಲ್ಲ
ಆಸೆಯ ಗಮಲಾನು ಇಲ್ಲ
ಕುಸಿದೋಯ್ತು ಮನಸು
ಅವಂದೇ ಪಾದಗಳಲ್ಲಿ
ಅವನೂ ಉಳಕೊಂಡು ಉಳಿದದ್ದು ಏನು?
ಇದಕಾಗೆ ಬದುಕು ತುಕಾ ಕಳದೋಗಿ ಬಿಡ್ತು.

5
ಯಾರಿಗೂ ಇಷ್ಟದವನಲ್ಲ
ಒಂಟಿ ಒಬ್ಬೊಂಟಿ
ತಲ್ಲಾಣಿಸಿತೋ
ಶೂನ್ಯವೇ ಲಬೊಲಬೊ ಹೊಯ್ಕೊಂಡು.
ನಡುಗಿಸಿತೋ
ಗುಂಪು ಗುಂಪುಗಳಲ್ಲಿ ಜೀವ ಜಂತು ಪ್ರಾಣಿ.
ಮೈ ನಡುಕ-ಭೀತಿ
ಕಣ್ಣು ಕಟ್ಟಿತೊ ಎಲ್ಲೆಲ್ಲು ಕತ್ತಲು
ಜಡ್ಡುಗಟ್ಟಿದೆನೆಲ್ಲೊ ಲಕ್ವಾ ಹೊಡೆದು.

ಮುಗ್ಗರಿಸಿ ಬಿದ್ದೆನೆಲ್ಲೊ ಮೆಳೆಗೆ
ಮುಳ್ಳು ಚುಚ್ಚಿತಲ್ಲಾ ಸಿಕ್ಕಸಿಕ್ಕಾ ಕಡೆಗೆ
ಕವಲೊಡೆದ ದಾರಿ ಸಾವಿರಾರು ಸಾಗಿ
ಕಳೆದುಕೊಂಡೆನೊ ನಾ ನಡೆದ ಹಾದಿ
ತತ್ತರಿಸಿ ಕುಸಿದೆ
ಯಾವ ದಾರಿಯಲ್ಲೂ ಹಾದಿ ಕಾಣದಲ್ಲೊ
ತುಕಾ- ಹಾದಿ ತೋರಿದವ ನೀನೆ ಗುರು
ನಿನ್ನ ಹಾದಿ ಇಲ್ಲೆಲ್ಲು ಇಲ್ಲಾವಲ್ಲೋ

6
ನೂಕೊ ನರಕಕ್ಕೆ ಈ ಜ್ಞಾನವನ್ನ
ನೂಕೊ ನರಕಕ್ಕೆ ಈ ಅರಿವನ್ನ
ನನ್ನಾ ಮನಸು ತಂಗಲಿ
ವಿಠಲಾ ನಿನ್ನ ಪಾದದಲಿ
ನೂಕೊ ನರಕಕ್ಕೆ ಈ ವಿನಯವನ್ನ
ನೂಕೊ ನರಕಕ್ಕೆ ವಿವೇಕವನ್ನ
ನನ್ನಾ ಮನಸು ನಿಲ್ಲಲಿ
ವಿಠಲಾ ನಿನ್ನ ಪಾದದಲ್ಲಿ
ನೂಕೊ ನರಕಕ್ಕೆ ಈ ಕೀರ್ತಿಯನ್ನ
ನೂಕೊ ನರಕಕ್ಕೆ ಈ ಖ್ಯಾತಿಯನ್ನ
ನನ್ನಾ ಮನಸು ಕೂಡಲಿ
ವಿಠಲಾ ನಿನ್ನಲ್ಲಿ
ನೂಕೊ ನರಕಕ್ಕೆ ಈ ದೇಹವನ್ನ
ನೂಕೊ ನರಕಕ್ಕೆ ಬಂಧನವನ್ನ
ನನ್ನ ಗಂಟಲಲ್ಲಿ ನಿಂದೇ ಉಸಿರು
ಮೈ ಮರೆತೆ ನಿನ್ನಾ ಸುಕದಲ್ಲಿ ಸೋತು
ತುಕಾನ ನುಡಿಯಿದು ಸೋಸಲೆಬೇಕು
ನನ್ನಾ ಮನಸು ವಿಠಲನಲ್ಲಿ ಮರೆತು

7
ನಗೋದು ಢೋಂಗಿನೆ ಅಳೋದು ಢೋಂಗಿನೆ
ಉರುಳೋದು ಢೋಂಗಿನೆ ಸೊಗಲಾಡಿ ಮುಂದೆ
ನಂದೂ ನಾಟಕ ನಿಂದೂ ನಾಟಕ
ನಟನೆ ಹಿಡಿಯೊ ಜಾಡೆಲ್ಲ ನಾಟಕ
ಸೋಗಿನ ಹಾಡು ಸೋಗಿನ ಪೂಜೆ
ಸೋಗುಗಳೆಲ್ಲಾ ನಟನೆಯೆ ತಾನೇ
ಢೋಂಗಿ ರಕ್ಷಕ ಢೋಂಗಿ ವಿರಾಗಿ
ಜಗತ್ತು ಸುಳ್ಳಂತ ನಟಿಸೊ ಸನ್ಯಾಸಿ
ಸೋಗು ಭಕ್ತಿಯ ತುಕಾ ಢೋಂಗಿಲಿಂಗಿ
ಸೋಗಲಾಡಿ ಮುಂದೆ ಅವನ ಮಾತೂ ಸೋಗೆ

8
ಮೇಣಕ್ಕಿಂತಲೂ ಮೆದುಜನ ನಾವು
ವಜ್ರ ಒಡೆಯುವ ಗಟ್ಟಿಗರು
ಒಳ್ಳೇವ್ರಿಗೆ ಲಂಗೋಟಿನು ಬಿಚ್ಚಿಕೊಡುತೀವಿ
ಕೇಡಿಗಳ ದೊಣ್ಣೇಲಿ ಕೆಡವಿ ಹಾಕುತೀವಿ
ಅಪ್ಪ ಅವ್ವರಿಗಿಂತ ಹೆಚ್ಚು ಹಚ್ಚಿಕೊತೀವಿ
ವ್ಶೆರಿಗಿಂತ ಜೋರು ಪೆಟ್ಟು ಕೊಡುತೀವಿ
ಅಮೃತ ನಮ್ಮುಂದೆ ಎಂತಾ ಸೀ ತಗೀ
ಕಡು ವಿಷಕ್ಕಿಂತ ನಾವ್ ಕಹಿಕಹಿ ಬಗೀ
ತುಕಾನ ನುಡಿಯಿದು ಹಿತಮಿತ ನಾವು
ಇಷ್ಟಪಟ್ಟಂಥವರ ಇಷ್ಟದ ತಾವು

9
ಹೊಲೆಯನ ಮೈ ತಗುಲಿ ಹಾರುವ ಬ್ರಾಹ್ಮಣ
ಬ್ರಾಹ್ಮಣನಲ್ಲ
ಮಾಡಬಾರದ ತಪ್ಪು ಮಾಡಿದ್ದು ತಪ್ಪು
ಜೀವ ತಕ್ಕೊಬೇಕು ತಗುಲಿದಂತೆ ಶಾಪ
ಚಂಡಾಲನ ಮುಟ್ಟಲು ಒಪ್ಪದ ಮನಸು
ಕಲುಷಿತ ಮನಸು
ತುಕಾನ ನುಡಿ ನಂಬಿದ ನಂಬಿಕೆಯಂತೆ
ಚೊಕ್ಕನಿದ್ದರೆ ಮಾತ್ರ ಅವನು ಪಕ್ಕಾ

10
ನೀನೇ ನನ್ನಾ ತಾಯಿ
ನಿನ್ನಾ ನೆರಳಲ್ಲಿ ದಣಿವಿಲ್ಲ ಮಾಯಿ
ಕಾದಕೂತೆ ನಿನಗೆ ಓ ಪಾಂಡುರಂಗ
ಒಬ್ಬಳೇ ಒಬ್ಬಳು ನೀನೊಬ್ಬಳೆ ನನಗೆ
ದೊಡ್ಡವಳು ಚಿಕ್ಕವಳು ಎಲ್ಲಾ ನನಗೆ
ನೀನೊಬ್ಬಳೆ ನೆಂಟಳು ಉಳಿದಿರುವಳು
ತುಕಾ ನುಡಿದ ನಿನ್ನಲ್ಲೆ ಮನಸು ತಂಗೋದು
ಉಳಿದುದೆಲ್ಲ ಖಾಲಿ ಖಾಲಿ ಬಯಲು

11
ನಿನ್ನಾಳು ತುಕಾ ಬೇಡಿಕೋತೀನಿ
ನನ್ನಪ್ಪ ನೀನು ಮರೀಬೇಡಪ್ಪಾ

ನಿನ್ನ ಹೆಬ್ಬಾಗಿಲಲ್ಲಿ ಬಿದ್ದಿರುವಂಥಾ
ಇಂದಿಗು ಎಂದಿಗು ಪೊರಕೆ ಕಣಪ್ಪಾ
ನಿನ್ನ ಕಾಲಿಗೆ ನನ್ನಾ ಮೈ ಮನಸು
ಒಳ್ಳೆ ಒಪ್ಪುವಂಥಾ ಎಕ್ಕಡವಪ್ಪಾ
ನೀ ಉಗುಳೊ ಎಲೆ ಅಡಿಕೆ ಬಟ್ಟಲಿನಂತೆ
ತೆರಕೊಂಡ ನನ ಬಾಯಿ ನಿನಗಾಗಪ್ಪಾ
ನಿನ್ನ ಹೇಲು ಉಚ್ಚೆ ಮಂಕರಿಗಯ್ಯ
ತಗೋ ನನ್ನ ಮೈಯ್ಯ ಬಳಸಿಕೋಳಪ್ಪಾ
ನಿನ್ನ ಕಾಲು ಮುಟ್ಟಿ  ಮುತ್ತಿಕ್ಕುವಂಥಾ
ಧೂಳಿನ ಕಣ ನಾನು ತುಳಿದು ಹೋಗಪ್ಪಾ
ತುಕಾನ ನುಡಿಯಿದು ಪಂಢರಿರಾಯಾ
ಇದಕಿಂತಲೂ ಬೇರೆ ನಡೆಸಿಕೋಬೇಡ

12
ಪದಕಟ್ಟಿ ಹಾಡಿದರೆ ಬೆನ್ನು ಹಾಕುತಿಯಲ್ಲಾ
ತಿಳಕೊಂಡೆ ಬುಡು ನಿನ್ನ ಮನಸು ಎಂಗಂತಾ
ಬಯಸಿದ್ದು ಪಡಿಲಿಲ್ಲ, ನಿನ ಕಂಡು ಹಿತವಿಲ್ಲ
ನನ ರೀತಿ ನಿನದಲ್ಲ, ನಾ ನಿಂಗೆ ಮೆಚ್ಚಿಲ್ಲ

ಹಾಡಿಗೆ ಕಿವಿಗೊಟ್ಟು ಕೇಳೋ ನಿನ ಸೋಗು
ಮನಸೆಲ್ಲೋ ಬಿಟ್ಟು ಬರಿದೆ ನಟನೆಯಲ್ಲ
ತುಕಾ ಇಡು ನಿನ್ನಾ ಮ್ಯಾಲೊಂದ್ಕಣ್ಣು
ಬಿಡುವಿಲ್ಲದೆ ಅಲೀತದೊ ನಿನ್ನಾ ಮನಸು

13
ಅತ್ತೂ ಕರೆದು ಇನಾಮು ಪಡೆಯುತ್ತಿ
ಇದು ಯಾವ ಘನ ವಡವೆ ಗೊತ್ತಾ?
ಇಷ್ಟ ಪಟ್ಟು ದೇವ ಕೈಯೆತ್ತಿ ನೀಡಿದರೆ
ಕೊನೆ ಇಲ್ಲವೋ ಅದರ ಆನಂದ !
ಬಿತ್ತಿದರೆ ಬೆಳೆವುದು ಹೊಲ ತುಂಬ ಫಸಲು
ಬಿಕ್ಕೆ ದಾನಕ್ಕೆ ಮಾರಾಟ ಬಿತ್ತನೆಗೆ
ತುಕಾನ ನುಡಿಯಿದು ಒಂದಷ್ಟು ಕಾಲ
ಸಹಿಸದೆ ಕಾಯದೆ ಹೇಗಾಗುವುದೊ ಮುತ್ತು?

14
ದಿಟವ ತಿಳಿಯಲೆಂಗೆ
ಕೈಲಾಗದವನಲ್ಲಾ
ನೀನೆ ಮರೆಮಾಚುತಿ ನಿನ್ನಾ ಮುಕ ನಂಗೆ
ನೀ ದೊಡ್ಡವನಲ್ಲಾ !
ಕೂಗಿ ಕೂಗಿ ನಿನ್ನ ಹೊಸಿಲಾ ಬಳಿಯಲ್ಲಿ
ಸುಸ್ತಾಗಿ ಹೋದೆನಲ್ಲೊ
ಯಾರ ಸದ್ದಿಲ್ಲ ಬಯಲ ಮನೆಯಲ್ಲಿ
ದಿಕ್ಕೇಡಿಯಾದೆನಲ್ಲೊ

15
ಕಾಲೆಳೆದುಕೊಂಡು ಹೋಗುವ ಹೆಣ್ಣು
ತವರು ಮನೆ ಬಿಡಲೊಲ್ಲದಂಗೆ
ಪರದಾಡುತೈತೆ ನನ ಜೀವ ನಿನಗಾಗಿ
ಸಂಗ ನಾವು ಮಾಡಿಕೊಂಡಂಗೆ

ಸುತ್ತೆಲ್ಲು ತಾಯಮುಖ ಕಾಣದ ಕಂದಾ
ಸಂಕಟವುಕ್ಕಿ ಅತ್ತಂಗೆ
ನೀರಿಂದ ಮೇಲಕ್ಕೆ ಎತ್ತಿದ ಮೀನು
ತುಕಾ ನನ್ನ ಜೋಡಿ ಇದ್ದಂಗೆ

16
ಪಾಪರ್ರು ಆದದ್ದು ಒಳ್ಳೇದು ದೇವಾ
ಬರದಲ್ಲಿ ನಲುಗಿ ತತ್ತರಿಸಿದ್ದು ಕೂಡಾ
ಕೊನೆಗೆ ಮರುಗಿ ನಿನ್ನಾ ಕಡೆ ಬಂದೆ
ಈ ಜಗವೆ ಹೀಕರಿಕೆ ತಾಣವೋ ನನಗೆ
ಹೆಂಡತಿ ನನ್ನನ್ನು ಬೈಯ್ದದ್ದು ಒಳ್ಳೇದೆ
ಹೆಸರು ಮರ್ಯಾದೆ ದುಡ್ಡು ದನಕರಾ
ಕಳಕೊಂಡಿದ್ದು ಮತ್ತೂ ಒಳ್ಳೇದೆ
ಜನರ ಮಾತಿಗೆ ನಾನಂಜೊ ಕುಳವಲ್ಲ
ಕಾಪಾಡಬೇಕೋ ನೀ ನನ್ನ ದೇವಾ
ನಿನ್ನ ಗುಡಿ ಕಟ್ಟಿಸಿ ಮನೆ ಕಡೆ ನೋಡಿಲ್ಲ
ತುಕಾ ಉಪವಾಸ ಹನ್ನೊಂದು ದಿವಸ
ಎಚ್ಚರ ಉಳಿಸಿದೆ ನನ್ನಾ ಎಚ್ಚರಿಕೆಯಿಂದಾ

ಭಾನುವಾರ, ಜೂನ್ 12, 2011

ರಕ್ಷಕ

ಸುಮಾರು 1991ರಲ್ಲಿ  ಇಂಡಿಯನ್ ಲಿಟರೇಚರ್ ನ ಸಂಚಿಕೆಯೊಂದರಲ್ಲಿ ಒ ಎನ್ ವಿ ಕುರುಪ್ ಅವರ ಈ ಕವಿತೆ ಓದಿದೆ. ದೈವದ ಸರ್ವಶಕ್ತ ಕಲ್ಪನೆ ಮತ್ತು ದೀನನೊಬ್ಬ ದೈವದ ನೆರವು ನಂಬಿ ಕುಳಿತ ಸ್ಥಿತಿ - ಈ ಚಿತ್ರದಲ್ಲಿರುವ ವೈರುಧ್ಯ.  ಓದುಗನಿಗಿದು ಸತ್ಯ ಗೋಚರ ಮಾಡಿಸುತ್ತಿರುವ ರೀತಿ ಬೇರೆ ಬಗೆಯದಾಗಿ ಕಂಡಿತು. ಅದರ ಗುಂಗಿನಲ್ಲಿ ಕನ್ನಡ ರೂಪವೂ ಸಿದ್ಧವಾಗಿ ಸಂಚಯದಲ್ಲಿ ಪ್ರಕಟವೂ ಆಯಿತು. ಇದನ್ನು ನನ್ನ ಬೊಡ್ಡೆ ಚಿಗುರು ಸಂಕಲನದಲ್ಲಿ ಸೇರಿಸಿದ್ದೆ. ಈಗ ನಿಮ್ಮ ಮುಂದಿರಿಸುತ್ತಿದ್ದೇನೆ.  

#
ಮಲಯಾಳಂ- ಒ ಎನ್ ವಿ ಕುರುಪ್

ಹೇಗೆ ಬರುವನೊ ಏನೊ, ಎಂದು ತರುವನೊ ಏನೊ
ಖಾಲಿ ಹೊಟ್ಟೆಗೆ ಬಟ್ಟೆ  ಹೊರುವನೇನು?

ಸಾಸಿವೆ ಸಾಸಿರ ಹೆಸರು ಏನೊ
ತಿಳಿಯಲಾರೆವು ನಿನ್ನ ನಿಜನಾಮವನ್ನು
ಅರಿಯಲಾರೆವು ನಿನ್ನ ಮೊಗಭಾವವನ್ನು
ಕಂಡರಿಯೆವು ನಿನ್ನ ಹೆಜ್ಜೆ ಗುರುತುಗಳನ್ನು
ಹೊಸತು ಅವತಾರ ಹೊತ್ತು ಬರುವೆಯೆಂದು
ಕಾದಿರುವೆವು ನಾವು ದೀನ ಯಾವಾಗಲೂ

ಹೇಗೆ ಬರುವನೊ ಏನೊ, ಎಂದು ತರುವನೊ ಏನೊ
ಖಾಲಿ ಹೊಟ್ಟೆಗೆ ಬಟ್ಟೆ  ಹೊರುವನೇನು?

ನಿನ್ನ ಬಣ್ಣವದು ಏನು? ಹೇಗಂತೆ ಅಣ್ಣ?
ಅದು ನೀಲಿ ಹೂವಂತೆ? ಬೆಣ್ಣೆಯಂತೆ?
ನಮಗೆ ತಿಳಿಯದೊ ಅಣ್ಣ
ನಿನ್ನ ಮೊಗವದು ಹೇಗೊ ತಿಳಿಯದು
ನಿನ್ನ ದನಿಯದು ಹೇಗೊ ತಿಳಿಯದು
ದಲ್ಲಾಳಿ ದೀವಾಳಿ ಯಾವಾಗಲೂ ನಾವು
ಕಾದಿರುವೆವು ನೀನು ಬರುವೆಯೆಂದು

ಹೇಗೆ ಬರುವನೊ ಏನೊ, ಎಂದು ತರುವನೊ ಏನೊ
ಖಾಲಿ ಹೊಟ್ಟೆಗೆ ಬಟ್ಟೆ  ಹೊರುವನೇನು?

ನಿನ್ನ ವಸನವದು ಏನು? ಹೇಗಂತೆ ಚೆಂದ?
ರೇಷಿಮೆಯೊ ಹತ್ತಿಯೊ? ಎಲೆ ಬಳ್ಳಿ ಚರ್ಮವೊ?
ಅದು ಏನೊ ಅರಿಯೆವು
ಮುಂಗೈ ಮುಂದಕ್ಕೆ ಉಗುರು ಹಚ್ಚೆ?
ಕೋಲು ಕೋಲಿನ ಕೊಳಲು ನಿನ್ನ ಕೈಯಲ್ಲಿ?
ಹೇಗಾದರೂ ಸರಿಯೆ ಮೈದೋರಿ ನಮ್ಮಲ್ಲಿ
ಹುಚ್ಚೆದ್ದು ನಮ್ಮೊಳಗೆ ಬರುವನವನು
ಆ ರಕ್ಷಕನಿಗಾಗಿ ನಾವು ಇಹೆವು

ಹೇಗೆ ಬರುವನೊ ಏನೊ, ಎಂದು ತರುವನೊ ಏನೊ
ಖಾಲಿ ಹೊಟ್ಟೆಗೆ ಬಟ್ಟೆ  ಹೊರುವನೇನು?

ಮಲಯಾಳಂ-ಒ ಎನ್ ವಿ ಕುರುಪ್

ಶುಕ್ರವಾರ, ಜೂನ್ 3, 2011

ಭಾರತದಲ್ಲಿ ಭೂ ಸುಧಾರಣೆಯ ಎರಡು ಹಾದಿಗಳು




-ಸುಬೋಧ ಮಿತ್ರ

ರೈತರ ಪ್ರಾಮುಖ್ಯತೆ  
ನಮ್ಮ ದೇಶದಲ್ಲಿ ಶೇಕಡ 80ರಷ್ಟು ಜನ ಹಳ್ಳಿಗಳಲ್ಲಿ ವಾಸ ಮಾಡುತ್ತಿದ್ದು, ಪ್ರಧಾನವಾಗಿ ಕೃಷಿಕ ಸಮಾಜವಾಗಿದೆ. ನಮ್ಮ ರಾಷ್ಟ್ರದ ಒಟ್ಟು ಉತ್ಪಾದನೆಯ ಪ್ರಮಾಣದಲ್ಲಿ ಅತಿ ಹೆಚ್ಚಿನ ಕಾಣಿಕೆಯನ್ನು ಬೇಸಾಯ ನೀಡುತ್ತಿದೆ.  ದೇಶದ ಬಹುಮುಖ್ಯ ಸಂಪತ್ತು ಹುಟ್ಟುವಳಿಗಾರರಾದ ರೈತರು ಭಾರತದಲ್ಲಿ ಸಾಂಖ್ಯಿಕವಾಗಿ ಅತಿಶಕ್ತಿಶಾಲಿ ಉತ್ಪಾದನೆಯ ಬಲವಾಗಿ ಹೊರಹೊಮ್ಮಿದ್ದಾರೆ.
ರೈತರ ಪ್ರಾಮುಖ್ಯತೆಯನ್ನು ರಾಜಕೀಯ ಬಲವಾಗಿ ಯಾವ ಬಗೆಯಲ್ಲೂ ಅತಿರೇಕಗೊಳಿಸುವಂತಿಲ್ಲ.  ಅವರು ನಮ್ಮ ಸ್ವಾತಂತ್ರ್ಯ ಹೋರಾಟದ ಮುಂದಾಳುಗಳಾಗಿದ್ದರು, ಅಷ್ಟೇ ಅಲ್ಲದೆ ಬ್ರಿಟಿಶ್ ಸಾಮ್ರಾಜ್ಯಶಾಹಿ ಮತ್ತು ಊಳಿಗಮಾನ್ಯ ಮಿತ್ರಕೂಟದ ವಿರುದ್ಧ ನಡೆದ ಹಲವಾರು ರೈತ ಬಂಡಾಯಗಳು ಹತ್ತೊಂಬತ್ತು ಮತ್ತು ಇಪ್ಪತ್ತನೆ ಶತಮಾನದ ಭಾರತ ಚರಿತ್ರೆಯಲ್ಲಿ ಬಹುಮುಖ್ಯ ಲಕ್ಷಣವನ್ನು ರೂಪಿಸಿವೆ. ಈ ಭವ್ಯ ಪರಂಪರೆಯನ್ನು ಇಂದಿಗೂ ಜೀವಂತವಾಗಿ ಉಳಿಸಿಕೊಂಡು ಬಂದಿರುವ ರೈತರು ದೇಶದ ವಿವಿಧ ಮೂಲೆಗಳಲ್ಲಿ ಒಂದು ತುತ್ತು ಅನ್ನ ಮತ್ತು ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟದ ಆರಂಭವನ್ನು ಮುಂದುವರೆಸಿದ್ದಾರೆ.
ಆಧುನಿಕ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಕಟ್ಟುವ ಹಾದಿಯಲ್ಲಿ ನಮ್ಮ ದೇಶದ ಆಡಳಿತಗಾರರು ಇಂದಿಗೂ ರೈತ ಸಮುದಾಯದ ಬೃಹತ್ ಮತ್ತು ಬಹುಮುಖ ಶಕ್ತಿಯನ್ನು ಸಜ್ಜುಗೊಳಿಸಲು ಗಮನ ಹರಿಸದಿರುವುದು ತೀವ್ರ ವಿಷಾದದ ಸಂಗತಿಯಾಗಿದೆ. ಇದಕ್ಕೆ ವಿರುದ್ಧವಾಗಿ ರೈತರು ಉತ್ಪಾದಿಸಿದ ಎಲ್ಲ ಸಂಪತ್ತನ್ನು ಸಾಮ್ರಾಜ್ಯಶಾಹಿಗಳು, ಜಮೀನ್ದಾರರು ಮತ್ತು ಮಧ್ಯಮ ವರ್ಗದ ವ್ಯಾಪಾರಿ ಸಮೂಹಗಳು ದೋಚುತ್ತ, ಸತತ ದಮನಕ್ಕೆ ಒಳಪಟ್ಟು ಕಡೆಗಣಿತರಾಗಿಯೆ ಉಳಿದಿದ್ದಾರೆ.
ಕೂಲಿ ಕಾರ್ಮಿಕರ ಪಕ್ಷ ತಾನು ಹೆಚ್ಚು ಅವಲಂಬಿಸಿರುವ ಮತ್ತು  ತನ್ನ ಪ್ರಬಲ ಮಿತ್ರ ಸದಸ್ಯರಾದ ರೈತರ ಈ ಸ್ಥಿತಿಯನ್ನು ನೋಡಿ ಕೇವಲ ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ. ಕೂಲಿ ಕಾರ್ಮಿಕರು ರೈತರನ್ನು ಅರೆ ಉಳಿಗಮಾನ್ಯಶಾಹಿಯ ಸಂಕೋಲೆಗಳಿಂದ ಬಿಡುಗಡೆಗೊಳಿಸದೆ ತಮ್ಮ ಬಿಡುಗಡೆ ಎಂದಿಗೂ ಪೂರ್ಣವಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ರೈತರ ಕ್ರಿಯಾಶೀಲತೆ ನಿರ್ಬಂಧಕ್ಕೆ ಒಳಪಡಬಾರದೆಂಬುದು ಆಧುನಿಕ ಭಾರತ ನಿರ್ಮಾಣ ಪ್ರಕ್ರಿಯೆಯ ಒತ್ತಾಯವಾಗಿದೆ. ನಮ್ಮ ದೇಶ ಮುಂದಡಿ ಇಡಬೇಕಾದರೆ ರೈತರ ಸಮಸ್ಯೆಗಳು ಪರಿಹಾರ ಕಾಣಬೇಕಾದ ಅಗತ್ಯವಿದೆ. ಈ ಕಾರಣದಿಂದ ನಾವು ರೈತರ ಸಮಸ್ಯೆಗಳನ್ನು ರಾಷ್ಟ್ರೀಯ ಸಮಸ್ಯೆಗಳೆಂದು ವಿವರಿಸುತ್ತೇವೆ.

ಸಮಸ್ಯೆಯ ಸ್ವರೂಪ
ಭಾರತದ ಆರ್ಥಿಕತೆ ಅಭಿವೃದ್ಧಿ ಹೊಂದುತ್ತಿರುವ ಸ್ಥಿತಿಯಲ್ಲೆ ಉಳಿದಿದೆ. ಏಕೆಂದರೆ ಅದರ ಪ್ರಧಾನ ಕ್ಷೇತ್ರವಾದ ಕೃಷಿ ಸ್ಥಗಿತಗೊಂಡು ನಲುಗುತ್ತಿದೆ. ಈ ಸಮಸ್ಯಗೆ ಎರಡು  ಮುಖಗಳಿವೆ. ಒಂದು ಕಡೆ, ಬೇಸಾಯ ಉತ್ಪನ್ನದ ಮೂಲಭೂತ ಮಾಧ್ಯಮವಾದ ಭೂಮಿ ಬಹುಪಾಲು ರೈತರಿಂದ ಉಳಲಾಗುತ್ತದೆಯೆ ಹೊರತೂ ಅದು ಉಳುವವರ ಸ್ವಂತ ಆಸ್ತಿಯಾಗದೆ ಅನ್ಯರ ಪಾಲಾಗಿ ಉಳಿದಿದೆ. ಹಾಗಾಗಿ ಒಡೆತನದ ಪ್ರಶ್ನೆಯನ್ನು ಪರೋಕ್ಷ ರೈತರೊಳಗೆ ಕೇಂದ್ರೀಕರಿಸಿದರೆ ಎಲ್ಲ ಕಡೆ ಬಹುಸಂಖ್ಯೆಯಲ್ಲಿರುವ ಉಳುಮೆದಾರರು ನಿರ್ಗತಿಕ ಸ್ಥಿತಿ ಎದುರಿಸುತ್ತಾರೆ. ಇದು ಅವರ ಕೊಳ್ಳುವ ಶಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದಕ್ಕೆ ಪ್ರತಿಯಾಗಿ ಬೆಳೆವಣಿಗೆಯನ್ನು ನೆಲೆಗೊಳಿಸುವುದು ಅಥವಾ ವಸ್ತುಗಳಿಗೆ ಬೇಡಿಕೆ ಉಂಟುಮಾಡುವುದು ಅಂದರೆ ಇಡೀ ಸಮಾಜವನ್ನು ಕೈಗಾರೀಕರಣಕ್ಕೆ ಒಳಪಡಿಸುವುದಾಗಿದೆ. ಆದ್ದರಿಂದ ರೈತರಿಗೆ ಭೂಮಿ ಒದಗಿಸುವ ವರೆಗೂ ಆಧುನಿಕ ಮತ್ತು ಕೈಗಾರಿಕೆಯಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ಕಟ್ಟುವುದು ಸಾಧ್ಯವಾಗುವುದಿಲ್ಲ. ಮತ್ತೊಂದು ಬಗೆಯಲ್ಲಿ  ನಿಜವಾದ ಬಳಕೆದಾರರು ಮತ್ತು ಉತ್ಪನ್ನದಾರರ ಕೈ ತಪ್ಪಿರುವ ಭೂಮಿಯೆ ಉತ್ಪನ್ನ ಶಕ್ತಿಯ ಬೆಳೆವಣಿಗೆಗೆ ಅಡ್ಡಿಯುಂಟಾಗಿದೆ. ಇಂದು ಕೂಲಿಕಾರ್ಮಿಕರ ಮೊದಲ ಕೆಲಸವೆಂದರೆ ಕೃಷಿ ಕ್ಷೇತ್ರದಲ್ಲಿನ ಈ ಅಡೆತಡೆಯನ್ನು ನಿವಾರಿಸುವುದು. ಇದು ಊಳಿಗಮಾನ್ಯ ಪದ್ಧತಿ ವಿರುದ್ಧ ಹೋರಾಟದ ಆರಂಭವನ್ನೊಳಗೊಂಡಿದೆ.
ಇನ್ನೊಂದು ಕಡೆ, ಕೃಷಿ ಬಳಕೆ ವಸ್ತುಗಳೂ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಯ ಪ್ರಮುಖ ಭಾಗವಾಗಿದೆ. ಇದರೊಂದಿಗೆ ಕೈಗಾರಿಕೆಗಳ ಕೊರತೆ ಮತ್ತು ಜನಸಂಖ್ಯಾ ಹೆಚ್ಚಳದಿಂದುಂಟಾದ ಒತ್ತಡವೂ ಸೇರಿಕೊಂಡಿದೆ. ಹೀಗಿದ್ದರೂ ಜನಸಂಖ್ಯಾ ಕೇಂದ್ರಿತ ಚಿಂತನೆ ಕಡಿಮೆ ಇಳುವರಿ ಭೂಮಿ ಕುರಿತು ವಿಮರ್ಶಾತ್ಮಕ ಆಯಾಮ ಒದಗಿಸಿದೆ. ಭೂಮಿಯ ಮೇಲಿನ ಒತ್ತಡ ಕಡಿಮೆ ಮಾಡಲು ಇಳುವರಿ ಹೆಚ್ಚಿಸುವ ಅಗತ್ಯವಿದೆ. ಇದರಿಂದ ಆಹಾರಕ್ಕಾಗಿ ಕೃಷಿಕ್ಷೇತ್ರವನ್ನೆ ಅವಲಂಬಿಸಿರುವ ಹೆಚ್ಚಿನ ಜನಸಂಖ್ಯೆಯ ಹಸಿವು ಹಿಂಗಿಸಲು ಸಾಧ್ಯ. ಇದಕ್ಕಾಗಿ ಕೃಷಿ ಉತ್ಪನ್ನ ವಿಧಾನದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡುವುದು ಅಗತ್ಯವಿದೆ. ಉತ್ಪಾದನೆ ಸಂಬಂಧಿತ ಅಂದರೆ ಕೃಷಿ ಭೂಮಿಯ ಆಧುನೀಕರಣ, ಭೂಮಿಯ ಮರುಹಂಚುವಿಕೆ ಹಾಗೂ ಕೃಷಿ ಬಳಕೆ ವಸ್ತುಗಳಾದ ಬೀಜ, ರಸಗೊಬ್ಬರ, ಕೀಟನಾಶಕ, ನೀರಾವರಿ ಮುಂತಾದವು ಸುಲಭವಾಗಿ ದೊರೆಯುವಂತೆ ಮಾಡಬೇಕಿದೆ. ಬೇರೆ ಬೇರೆ ರಾಜ್ಯಗಳ ಉಳುಮೆದಾರ ರೈತರು ಇಂದು ಭೂಮಿ ಪಡೆಯುವ ಪ್ರಾಥಮಿಕ ಹಂಬಲದೊಂದಿಗೆ ಕೃಷಿ ಬಳಕೆ ವಸ್ತುಗಳು ಸುಲಭವಾಗಿ ಹಾಗೂ ಕಡಿಮೆ ದರದಲ್ಲಿ ದೊರೆಯಬೇಕೆಂಬ ಬೇಡಿಕೆಗೆ ದನಿಗೂಡಿಸಿದ್ದಾರೆ. ಸಾಮ್ರಾಜ್ಯವಾದಿ ಬೃಹತ್ ಬಂಡವಾಳದಾರರು ನಮ್ಮ ದೇಶದಲ್ಲಿ ಕೃಷಿ ಬಳಕೆ ಸಾಮಗ್ರಿಗಳ ಮೂಲ ನೆಲೆಯ ಮೇಲೆ ಹಿಡಿತ ಹೊಂದಿದ್ದು, ತಮ್ಮ ಈ ಹಿಡಿತವನ್ನು ಭಾರತೀಯರನ್ನು ದೋಚಲು ಬಳಸುತ್ತಿದ್ದಾರೆ. ಇದರಿಂದಾಗಿ ಕೂಲಿಕಾರ್ಮಿಕರು ಭೂಮಿಯ ಮೂಲಭೂತ ಪ್ರಶ್ನೆ ಕುರಿತು ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ತಾತ್ವಿಕವಾಗಿ ಹೋರಾಡುವುದರೊಂದಿಗೆ ಸಾಮ್ರಾಜ್ಯಾಶಾಹಿ ವಿರುದ್ಧ ಹೋರಾಟ ಮಾಡುವುದು ಕೂಡ ಅವರ ಕರ್ತವ್ಯವಾಗಿದೆ. ಹೀಗೆ ಭೂಮಿ ಮತ್ತು ಬೇಸಾಯ ಬಳಕೆ ವಸ್ತುಗಳ ಕುರಿತ ಪ್ರಶ್ನೆಗಳು ಒಟ್ಟುಗೂಡಿ ನಮ್ಮ ದೇಶದ ಕೃಷಿ ಸಮಸ್ಯೆಯ ಸಮಗ್ರತೆಯನ್ನು ಕಟ್ಟಿಕೊಡುತ್ತದೆ.
ಈ ಕಾರಣದಿಂದ ಭಾರತದ ಆರ್ಥಿಕ ಕ್ಷೇತ್ರದ ಗುಣ ಲಕ್ಷಣ ಅರೆ ಊಳಿಗಮಾನ್ಯ ವ್ಯವಸ್ಥೆಯಾಗಿ ರೂಪುಗೊಂಡಿದೆ. ಅದರ ಮೂಲಭೂತ ವೈರುದ್ಧ್ಯಗಳು ಹೀಗಿವೆ: 1. ಸಾಮ್ರಾಜ್ಯಶಾಹಿ ಮತ್ತು ಭಾರತದ ವಿಭಿನ್ನ ರಾಷ್ಟ್ರೀಯತೆಗಳ ನಡುವಿನ ವೈರುಧ್ಯ ಹಾಗೂ 2. ಊಳಿಗಮಾನ್ಯ ವ್ಯವಸ್ಥೆ ಮತ್ತು ಭಾರತದ ವಿಶಾಲ ಜನ ಸಮೂಹಗಳ ನೆಡುವಿನ ವೈರುದ್ಧ್ಯ. ನಮ್ಮ ದೇಶದಲ್ಲಿ ರೈತರಂಗವೆ ಕೃಷಿಕ್ರಾಂತಿಯನ್ನು ಮುನ್ನಡೆಸಬೇಕೆಂಬುದು ನಮ್ಮ ಮುಖ್ಯ ಕಾರ್ಯಯೋಜನೆಯಾಗಿರುವುದರಿಂದ ಕೃಷಿಕ್ರಾಂತಿ ನಮ್ಮ ಪ್ರಸ್ತುತ ಹಂತದಲ್ಲಿ ನವ ಪ್ರಜಾಪ್ರಭುತ್ವ ಕ್ರಾಂತಿಯ ಕಕ್ಷೆಯಾಗಿದೆ. ನಮ್ಮ ಯೋಜಿತ ಕಾರ್ಯಕ್ರಮಗಳು ಅದನ್ನು ಸ್ಪಷ್ಟವಾಗಿ ಅನುಸರಿಸುತ್ತವೆ.

ಸದ್ಯದ ಸ್ಥಿತಿಯ ಒಲವುಗಳು
ನಮ್ಮ ಸಂಘಟನೆ ಮಾತ್ರವಲ್ಲದೆ ನಮ್ಮ ದೇಶದ ಬಹುಪಾಲು ಎಡಪಂಥೀಯ ಕ್ರಾಂತಿಕಾರಿ ಗುಂಪುಗಳೆಲ್ಲ ಭಾರತದ ಆರ್ಥಿಕ ವ್ಯವಸ್ಥೆಯನ್ನು ಸಾಮ್ರಾಜ್ಯಶಾಹಿ ಅಧಿಪತ್ಯದೊಂದಿಗಿನ ಅರೆ-ಊಳಿಗಮಾನ್ಯ ವ್ಯವಸ್ಥೆಯೆಂದೂ ಕೃಷಿಕ್ರಾಂತಿಯನ್ನು ಪರಿಪೂರ್ಣಗೊಳಿಸುವುದು ತಮ್ಮ ತಾತ್ವಿಕ ಒಪ್ಪಿತ ಕಾರ್ಯವೆಂದೂ ಲಕ್ಷಣೀಕರಿಸಿರುವುದನ್ನು ಎತ್ತಿ ಹೇಳಬೇಕು. ಸುಧಾರಣಾವಾದಿ ಮಾರ್ಕ್ಸಿಸ್ಟರ (ಸಿಪಿಎಂ) ಯೋಜಿತ ಕಾರ್ಯಕ್ರಮಗಳನ್ವಯ ಗುರುತಿಸಿರುವ ಗುಣ ಲಕ್ಷಣಗಳು. ನಮ್ಮ ದೇಶ ಅರೆ-ಬಂಡವಾಳಶಾಹಿ ಆಗಲಿರುವುದಾಗಿ ಪರಿಗಣಿಸಿದೆ ಹಾಗೂ 'ಕೃಷಿಕ್ರಾಂತಿ' ಕುರಿತು ಮಾತಾಡುತ್ತದೆ. ಇಲ್ಲಿಂದ ಕಮ್ಯೂನಿಸ್ಟ್ ಚಳವಳಿಯೊಳಗೆ ನಮ್ಮ ದೇಶದ ಕೃಷಿ ಸಮಸ್ಯೆ ಮತ್ತು ಪರಿಹಾರ ಕುರಿತ ಪ್ರಸ್ತಾವಗಳಲ್ಲಿ ವಿಶಾಲವಾದ ಹೋಲಿಕೆ ನೆಲೆಸಿರುವುದು ಕಾಣುತ್ತದೆ. ಹೀಗಿದ್ದರೂ ಈ ಎಲ್ಲ ಸ್ಪಷ್ಟತೆ, ಹೋಲಿಕೆಗಳಾಚೆಗೆ ನಿಜವಾದ ಮೂಲಭೂತ ವ್ಯತ್ಯಾಸಗಳ ನಡುವೆ ಅಂತರವಿದೆ. ಕೆಲವೊಂದು ವ್ಯತ್ಯಾಸಗಳು ಅತಿಶಯಗೊಳಿಸಿದ ಸ್ಥಿತಿಯಾಗಿರದೆ ನಮ್ಮ ಸಂಘಟನೆಯೊಳಗಿರುವ ಧ್ಯೇಯೋದ್ದೇಶಗಳಾಗಿವೆ. ಅರೆ-ಊಳಿಗಮಾನ್ಯ ಪದ್ಧತಿ ನೆಲೆಸಿರುವಿಕೆ ಮತ್ತು ದೇಶದ ಕೃಷಿಕ್ರಾಂತಿ ಅವಶ್ಯಕತೆ ಕುರಿತ ಬಹುಬಗೆಯ ವಿರುದ್ಧ ಅಭಿಪ್ರಾಯಗಳು ನಿಜವಾಗಿ ನಮ್ಮ ಕಾರ್ಯಕ್ರಮದ ಮೂಲಭೂತ ನಿಲುವಿಗೆ ಸವಾಲು ಎಸೆದಿವೆ, ನಮ್ಮ ವೈರುದ್ಧ್ಯಗಳಾಗಿವೆ. ಮೊದಲನೆಯದು, ಭಾರತೀಯ ಕೃಷಿಕ್ಷೇತ್ರದಲ್ಲಿ ಈಗಾಗಲೇ 'ವೈಚಾರಿಕ ಬದಲಾವಣೆ' ಎಂದು ಹೇಳುವ ಆಲೋಚನೆಯೊಂದು ನಡೆದಿದೆ. ಹಾಗೂ ಇದರಿಂದ ಭೂ ಸುದಾರಣೆಯ ವ್ಯಾಪ್ತಿ ಕುಗ್ಗಿದೆ ಎಂಬುದು. ಉಳಿದವರ ಅಭಿಪ್ರಾಯ ಹೆಚ್ಚು ನಿರ್ದಿಷ್ಟವಾಗಿದ್ದು, ಕೃಷಿಕ್ಷೇತ್ರದಲ್ಲಿ ಬಂಡವಾಳವಾದಿ ಬೆಳೆವಣಿಗೆ ತುಂಬ ಪ್ರಬಲವಾಗಿ ಅರೆ-ಊಳಿಗಮಾನ್ಯ ಪದ್ಧತಿಯೇ ಹಳೆಯದಾಗಿ ಬಿಟ್ಟಿದೆ ಎಂದು ಅವರು ನಿಸ್ಸಂದಿಗ್ಧವಾಗಿ ಹೇಳುತ್ತಾರೆ. ಹಿಂದಿನಿಂದಲೂ ಭಾರತದಲ್ಲಿ ಸಾಮ್ರಾಜ್ಯಶಾಹಿ, ಬಂಡವಾಳ ಮಧ್ಯವರ್ತಿಗಳು ಮತ್ತು ಅರೆ ಊಳಿಗಮಾನ್ಯ ಶಕ್ತಿಗಳು ಸಂಯುಕ್ತವಾಗಿ ಆಳ್ವಿಕೆ ನಡೆಸಿಕೊಂಡು ಬಂದಿವೆ. ಈ ಸಂಯುಕ್ತ ಕೂಟದಲ್ಲಿ ರೈತನೇ ಪ್ರಮುಖ ಪಾಲುದಾರನಾಗಿರುವುದರಿಂದ ಕೃಷಿಕ್ರಾಂತಿಗಾಗಿ ನಡೆಯುವ ಹೋರಾಟವೆಲ್ಲ ಎರಡನೆಯ ಸ್ಥಾನದಲ್ಲಿ ಉಳಿಯುತ್ತವೆ ಮತ್ತು ನಮ್ಮ ಸಾಮ್ರಾಜ್ಯಶಾಹಿ ವಿರೋಧಿ ಕ್ರಾಂತಿಗೆ ಅಧೀನವಾಗಿರುತ್ತವೆ ಎಂದು ಹೇಳುವುದು ಮೂರನೆಯ ಅಭಿಪ್ರಾಯವಾಗಿದೆ. ಕೊನೆಯದಾಗಿ, ಎಲ್ಲ ಮುಖ್ಯ ಪ್ರಶ್ನೆಗಳ ಹಾದಿಯೊಂದಿದೆ. ಅಂದರೆ ಈಗಿರುವ ವ್ಯವಸ್ಥೆಯಲ್ಲಿಯೆ ಭೂ ಸುಧಾರಣೆಯನ್ನು ನಾವು ಕಾರ್ಯರೂಪಕ್ಕೆ ತರಬೇಕು ಅಥವಾ ಸ್ಥಳೀಯ ಮಿತಿಗಳನ್ನು ಮೀರಬೇಕು. ಇನ್ನೊಂದು ಬಗೆಯಲ್ಲಿ ಇದು ಸಂಸದೀಯ ಹಾದಿ ಮತ್ತು ಕೃಷಿಕ್ರಾಂತಿ ಕುರಿತು ಸುಧಾರಣಾವಾದಿಗಳು ಮತ್ತು ಅರಾಜಕತಾವಾದಿಗಳಿಬ್ಬರೂ ವಿರುದ್ಧ ನಿಲುವು ತಳೆದ ಹಳೆಯ ಚರ್ಚೆಯಾಗಿದೆ. ಅಂಥ ಪ್ರಮುಖ ಚರ್ಚೆಯನ್ನು ಬದಿಗಿಟ್ಟರೂ ಭೂ ಹಂಚಿಕೆ ಕುರಿತ ಕೆಲವು ಸಣ್ಣಪುಟ್ಟ ವಿಷಯಗಳೂ ತಲೆ ಎತ್ತಿವೆ. ಅಂದರೆ, ಭೂ ಸುಧಾರಣೆಯ ಅವಧಿಯಲ್ಲಿ ನಾವು ಹೊಲಗದ್ದೆಗಳನ್ನೂ ಹಂಚಲೇಬೇಕಿತ್ತು. ಇದರಿಂದ ರೈತ ಬಂಡವಾಳಶಾಹಿ ಬೆಳೆಯಲು ಅವಕಾಶ ಮಾಡಿಕೊಟ್ಟಂತಾಗಿತ್ತು. ಹಾಗಾಗಿಯೆ ಇದು ಸ್ವರೂಪದಲ್ಲಿ ಪ್ರಗತಿ ವಿರೋಧಿಯಾಗುವುದಿತ್ತು. ಈ ಕುರಿತು ಮಧ್ಯಮ ವರ್ಗದ ಬಂಡವಾಳದಾರರ ದೂರುಗಳನ್ನು ನಾವು ಕಡೆಗಣಿಸುವಂತೆಯೂ ಇರಲಿಲ್ಲ. ಎಲ್ಲರನ್ನು ಮೆಚ್ಚಿಸುವ ಕಾರ್ಯದಲ್ಲಿ ಕಮ್ಯೂನಿಸ್ಟರು ವೈಚಾರಿಕ ಭೂ ಸುಧಾರಣೆಯ ವಿವಾದವನ್ನು ಎತ್ತಿ ಹಿಡಿದು ರೈತ ದಂಗೆಗಳನ್ನು ಹುಟ್ಟು ಹಾಕಿದರು. ಇಂಥ ಸುಧಾರಣೆಗಳು ಆರ್ಥಿಕ ಪ್ರಗತಿಯ ಮೇಲೆ ಯಾವುದೇ ಮಹತ್ವದ ಪರಿಣಾಮ ಉಂಟುಮಾಡಲಿಲ್ಲ.
ಈ ವಿವಾದಗಳನ್ನು ಸ್ಪಷ್ಟೀಕರಿಸುವುದು ನಮ್ಮ ಹೊಣೆಯಾಗಿದೆ. ವೈಚಾರಿಕ ಬದಲಾವಣೆಗಳು ನಿಜವಾಗಿ ನಡೆದದ್ದೆ ಆದರೆ ಭಾರತದ ಕೃಷಿಕ್ಷೇತ್ರದಲ್ಲಿ ಬಂಡವಾಳವಾದಿ ಬೆಳೆವಣಿಗೆಯ ಪ್ರಮಾಣ, ಸಾಮ್ರಾಜ್ಯಶಾಹಿಯ ಪಾತ್ರ, ಕೃಷಿಕ್ರಾಂತಿಯ ಹಾದಿ ಮತ್ತು ಅಗತ್ಯದ ಪ್ರಶ್ನೆ ಕುರಿತ ಕೆಲವು ವಿವಾದ ಪರಸ್ಪರ ಹೆಣೆದುಕೊಂಡಿರುವುದು ಖಚಿತವಾಗುತ್ತದೆ. ಈ ಕುರಿತು ನಮ್ಮ ನಿಲುವುಗಳನ್ನು ಸ್ಪಷ್ಟಪಡಿಸದಿದ್ದರೆ ಮತ್ತು ನಮ್ಮ ರಂಗದ ರೈತ ನಾಯಕರಿಗೆ ಅರಿವು ಮೂಡಿಸದಿದ್ದರೆ ನಮ್ಮ ಯೋಜಿತ ಕಾರ್ಯಕ್ರಮಗಳ ನಿಲುವಿನಿಂದ ನಾವು ದೂರ ಸಾಗುವ ಮತ್ತು ದೊಡ್ಡ  ತಪ್ಪು ಮಾಡುವ ಅವಕಾಶಗಳು ಹೆಚ್ಚಾಗಿ, ಭಾರತದ ಕ್ರಾಂತಿಗೆ ಅಪಾರ ಹಾನಿ ತಟ್ಟಲಿದೆ. ಇವನ್ನು ಸ್ಪಷ್ಟೀಕರಿಸುವ ಹಂತದಲ್ಲಿ ಮೊದಲಿಗೆ ನಾವು ಪ್ರಸ್ತುತ ಬೆಳೆವಣಿಗೆಯ ಹಂತದ ವರೆಗೆ ಬಂದು ನಿಂತಿರುವ ನಮ್ಮ ದೇಶದ ಭೂ ಸಂಬಂಧಿತ ಚರಿತ್ರೆಯನ್ನು ವಸ್ತುನಿಷ್ಟವಾಗಿ ನೋಡಬಹುದು.


ನಮ್ಮ ದೇಶದಲ್ಲಿ ಭೂ ಸಂಬಂಧಗಳು: ಒಂದು ಸಂಕ್ಷಿಪ್ತ ಚರಿತ್ರೆ
ಭಾರತೀಯ ಕೃಷಿಕ್ಷೇತ್ರದ ತುಂಬ ವಿಚಿತ್ರವಾದ ಗುಣವೆಂದರೆ ಪ್ರಾಚೀನ ಕಾಲದಿಂದ ಮಧ್ಯಕಾಲೀನ ಯುಗದವರೆಗೂ ಭೂಮಿ ಖಾಸಗಿ ಆಸ್ತಿಯಾಗಿರದೆ ಇದ್ದದ್ದು. ರಷ್ಯಾದ ಕೆಲವು ಚರಿತ್ರಕಾರರು ಪ್ರಾಚೀನ ಭಾರತದಲ್ಲಿ ಭೂಮಿಯ ಮೇಲೆ ಖಾಸಗಿ ಒಡೆತನವಿತ್ತೆಂಬ ಸಿದ್ಧಾಂತವನ್ನು ಮುಂಚೂಣಿಗೆ ತರಲು ಶ್ರಮಿಸಿದ್ದರೂ ವಾಸ್ತವದಲ್ಲಿ ಸ್ವಯಂಪೂರ್ಣವಾದ ಹಳ್ಳಿಯ ಸಮುದಾಯಗಳ ಜಂಟಿ ಒಡೆತನಕ್ಕೆ ಎಲ್ಲ ಭೂಮಿ ಸೇರಿರುತ್ತಿತ್ತು ಮತ್ತು ಉತ್ಪನ್ನ ಮತ್ತು ಹಂಚಿಕೆ ಸಮುದಾಯದ ವ್ಯವಹಾರವಾಗಿ ಬಳಕೆಯಾಗುತ್ತಿತ್ತು. ಬಹುದೊಡ್ಡ ದೇಶವಾದ ಭಾರತ ಅಪಾರ ನೈಸರ್ಗಿಕ ಸಂಪತ್ತನ್ನು ಹೊಂದಿತ್ತು, ಜನಸಂಖ್ಯೆಯ ಒತ್ತಡವೂ ಕಡಿಮೆಯಿತ್ತು, ಇದರಿಂದಾಗಿ ಹಳ್ಳಿಯ ಸಮುದಾಯಗಳು ಕೃಷಿ ಉತ್ಪಾದನೆಯಲ್ಲಿ ಸ್ವಯಂಪೂರ್ಣತೆಯನ್ನು ಸಾಧಿಸಿದ್ದವು. ಕೋಮುವಾರು ಮೆರವಣಿಗೆ ತೆಗೆಯುವ ಆಚರಣೆ ಮುಸ್ಲಿಮರ ಕಾಲದಲ್ಲಿ ಮುಂದುವರೆದಿತ್ತು. ನಾಮ ಮಾತ್ರದ ಒಡೆಯರಾದ ಸಾಮ್ರಾಟರು ಕರವನ್ನು ವ್ಯಕ್ತಿಗಳ ಮೇಲೆ ಹಾಕದೆ ನೇರವಾಗಿ ಇಡೀ ಹಳ್ಳಿಯ ಸಮುದಾಯಗಳ ಮೇಲೆ ಹಾಕುತ್ತಿದ್ದರು. ಮೊಘಲರ ಆಳ್ವಿಕೆ ಕಾಲದಲ್ಲಿ ನೀರಾವರಿ, ಹಳ್ಳಿಯ ಸಮುದಾಯಗಳಿಂದ ಗೇಣಿ ಸಂಗ್ರಹ, ರಾಜ ಸೈನ್ಯದ ನಿರ್ವಹಣೆ ಮತ್ತು ಸಿಬ್ಬಂದಿ ವ್ಯವಸ್ಥೆಯ ಮೇಲ್ವಿಚಾರಣೆ ನೋಡಿಕೊಳ್ಳುವ ಸುಬೇದಾರರು, ಮನಸಬ್ದಾರರು, ಜಾಗೀರ್ ದಾರರು ಮುಂತಾದವರಿದ್ದ ಶ್ರೇಣೀಕೃತ ಆಡಳಿತ ವ್ಯವಸ್ಥೆ ಬೆಳೆದಿತ್ತು. ಅಂದಿನ ವ್ಯವಸ್ಥೆ ಪಾಶ್ಚಿಮಾತ್ಯರ ಅತ್ಯುತ್ತಮ ಊಳಿಗಮಾನ್ಯ ವ್ಯವಸ್ಥೆಯ ಹಾಗಿರಲಿಲ್ಲ.  ರಾಜ ಮತ್ತು ಉಳುಮೆದಾರರ ನಡುವೆ ಮಧ್ಯವರ್ತಿಗಳಾಗಲೀ ಖಾಸಗೀ ಆಸ್ತಿಯಾಗಲೀ ಇರಲಿಲ್ಲ. ಭೂ ಸಂಬಂಧದಲ್ಲಿ ಬ್ರಿಟಿಶ್ ಆಡಳಿತಗಾರರು ಗುಣಾತ್ಮಕ ಬದಲಾವಣೆಯನ್ನು ತಂದರಾದರೂ ನಂತರದಲ್ಲಿ ನಮ್ಮ ಕರಕುಶಲ ಮತ್ತು ಬುಡಭದ್ರವಿಲ್ಲದ ಕೈಗಾರಿಕೆಗಳ ಬೆಳವಣಿಗೆಯನ್ನು ನಾಶ ಪಡಿಸಿ. ಆ ಮೂಲಕ ತಮ್ಮ ಉತ್ಪನ್ನಗಳಿಗೆ ಪರಿಣಾಮಕಾರಿ ಸ್ಪರ್ಧೆ ಇರದಂತೆ ಮಾಡಿದರು. ಬ್ರಿಟಿಶರು ಹಳ್ಳಿಯ ಸಮುದಾಯಗಳಿಂದ ಆರಂಭದಲ್ಲಿ ಅತ್ಯಧಿಕ ಎಂದರೆ ವಾರ್ಷಿಕ, ನಂತರದಲ್ಲಿ ದ್ವೈ ವಾರ್ಷಿಕ ಹಾಗೂ ತ್ರೈ ವಾರ್ಷಿಕ ಗೇಣಿ ಸಂಗ್ರಹಿಸುವ ಮೂಲಕ ಭಾರತದ ಕೃಷಿಕ್ಷೇತ್ರವನ್ನು ಹಿಂಡಿ ಹಿಪ್ಪೆ ಮಾಡಲು ತೊಡಗಿದರು. ಇದರ ಪರಿಣಾಮವಾಗಿ ಹಳ್ಳಿಗಾಡಿನಲ್ಲಿ ಬರ ಉಂಟಾಯಿತು. ಗೇಣಿ ಸಂಗ್ರಹ ವ್ಯವಸ್ಥೆ ಗಟ್ಟಿಗೊಳಿಸುವ ಭಾಗವಾಗಿ ರೈತರನ್ನು ಹಿಂಡಿಹಿಪ್ಪೆ ಮಾಡುವ ಪ್ರಕ್ರಿಯೆ ಮುಂದುವರೆಯಿತು. ರೈತರ ಜೀವನೋಪಾಯಕ್ಕೂ ಗತಿಯಿಲ್ಲದಂತೆ ದೋಚುವುದನ್ನು ತಡೆಗಟ್ಟಲು 1793ರಲ್ಲಿ ಖಾಯಂ ಭೂಗಂದಾಯ ಕಾಯಿದೆಯನ್ನು (ಪರಮನೆಂಟ್ ಸೆಟ್ಲಮೆಂಟ್ ಆಕ್ಟ್,) ಜಾರಿಗೆ ತರಲಾಯಿತು. ಭಾರತದ ಸಂದರ್ಭದಲ್ಲಿ ಬ್ರಿಟಿಶರು ತಮ್ಮ ಊಳಿಗಮಾನ್ಯ ಪದ್ಧತಿಯನ್ನು ಹೇರಿದರು. ಈ ಕಾಯಿದೆ ವಿಶಾಲವಾದ ಎರಡು ಬಗೆಯ ಕರ ವಸೂಲಿ ವ್ಯವಸ್ಥೆಯನ್ನು ಜಾರಿಗೊಳಿಸಿತು. ಮೊದಲನೆಯದು, ಜಮೀನ್ದಾರಿ, ಜೆಮಿ, ಇನಾಂದಾರಿ, ಮಹಲ್ವಾರಿ ಮುಂತಾದ ಬಹುಬಗೆಯ ಹೆಸರಿನಿಂದ ಕರೆಯುತ್ತಿದ್ದ, ವಿವಿಧ ಹಂತದಲ್ಲಿ ಮಧ್ಯವರ್ತಿಗಳು ಉಳುಮೆದಾರರಿಂದ ಕರವನ್ನು ಸಂಗ್ರಹಿಸಿ ಸರಕಾರಕ್ಕೆ ಜಮೆ ಮಾಡುವುದಾಗಿತ್ತು. ಈ ಮಧ್ಯವರ್ತಿಗಳಿಗೆ ಆಸ್ತಿಯ ಒಡೆತನದ ಹಕ್ಕು, ಆಸ್ತಿ ಮಾರಾಟ ಮತ್ತು ಖರೀದಿ ಮಾಡುವ ಹಕ್ಕುಗಳನ್ನು ನೀಡಲಾಗಿತ್ತು. ಈ ವ್ಯವಸ್ಥೆ ಹೇಗಿತ್ತೆಂದರೆ ಕೆಲವು ಪ್ರದೇಶಗಳಲ್ಲಿ ಮಧ್ಯವರ್ತಿಗಳು 34 ಹಂತಗಳ ವರೆಗೂ ಏರ್ಪಾಟಾಗುತ್ತಿದ್ದರು. ಎರಡನೆಯದು ರೈತವಾರಿ ವ್ಯವಸ್ಥೆಯಾಗಿತ್ತು. ಈ ಮೂಲಕ ಆಸ್ತಿ ಒಡೆತನ ಹೊಂದಿದ್ದ ಪ್ರತಿಯೊಬ್ಬ ಉಳುಮೆದಾರರಿಂದ ಬ್ರಿಟಿಶ್ ಆಡಳಿತ ನೇರ ಕರ ವಸೂಲಿ ಮಾಡುತ್ತಿತ್ತು. ಹೀಗಿದ್ದರೂ ಮಧ್ಯವರ್ತಿಗಳು ಕಾಲಕ್ರಮದಲ್ಲಿ ಇಲ್ಲೂ ತಲೆಯೆತ್ತಿದರು. ರೈತವಾರಿ ಪ್ರದೇಶಗಳನ್ನು ಭೌಗೋಳಿಕವಾಗಿ ಪಂಜಾಬ್, ಅವಧ್, ಗುಜರಾತಿನ ಕೆಲವು ಭಾಗಗಳು, ಮಹಾರಾಷ್ಟ್ರ, ಮತ್ತು ಮದ್ರಾಸ್ ಪ್ರಾಂತ್ಯಕ್ಕೆ ಸೀಮಿತಗೊಳಿಸಲಾಗಿದೆ. ಈ ಪ್ರದೇಶಗಳು ನೀರಾವರಿಯ ಅನುಕೂಲತೆ ಮತ್ತು ಫಲವತ್ತಾದ ಭೂಮಿಯನ್ನು ಹೊಂದಿದ್ದುದರಿಂದ ಅವು ವಾಣಿಜ್ಯ ಬೆಳೆಯ ಸಾಧ್ಯತೆಗೆ ತೆರೆದುಕೊಂಡಿದ್ದವು. ಈ ಎಲ್ಲ ಅಂಶಗಳನ್ನು ಹೊರತು ಪಡಿಸಿಯೂ ಈ ಪ್ರದೇಶಗಳು ಬ್ರಿಟಿಶ್ ಸೈನ್ಯಪಡೆಗೆ ಜನರನ್ನು ಒದಗಿಸುತ್ತಿದ್ದವು. ಈ ಸೈನಿಕರು ನಿಯಮದ ಪ್ರಕಾರ ಸರಕಾರದ ನೇರ ರೈತವಾರಿ ವ್ಯವಸ್ಥೆಗೆ ಒಳಪಡುವ ಅವಕಾಶ ಪಡೆದಿದ್ದರು. ಉಳಿದ ಪ್ರದೇಶಗಳು, ವಿಶೇಷವಾಗಿ ಬ್ರಿಟಿಶ್ ಅಧಿಪತ್ಯದ ಬಂಗಾಳ ಪ್ರಾಂತ್ಯ ಜಮೀನ್ದಾರಿ ವ್ಯವಸ್ಥೆಯ ಕಟ್ಟಳೆಗೆ ಒಳಪಟ್ಟಿತ್ತು. ಬ್ರಿಟಿಶ್ ಭಾರತ ಹೊರತು ಪಡಿಸಿದ ಆಡಳಿತ ವ್ಯಾಪ್ತಿಯ ಪ್ರದೇಶದಲ್ಲಿ ಇದೇ ಬಗೆಯ ವ್ಯವಸ್ಥೆ ಜಾರಿಗೊಳಿಸಲು 600 ದೇಶೀಯ ರಾಜರನ್ನು ಕೇಳಿಕೊಳ್ಳಲಾಯಿತು. ಈ ರೀತಿಯಲ್ಲಿ ಬ್ರಿಟಿಶರು ಊಳಿಗಮಾನ್ಯ ಆರ್ಥಿಕ ತಳಹದಿಯನ್ನಷ್ಟೇ ಕಟ್ಟದೆ ವೈಭೋಗದ ಸಂಸ್ಕೃತಿ ಮತ್ತು ಜಮೀನ್ದಾರಿ ಆಳ್ವಿಕೆಗೆ ವಿಧೇಯರಾಗಿರುವ ಜೀವನವನ್ನು ಮರುಸ್ಥಾಪಿಸಿದರು. ಆದರೂ ಅಂದಿನ ಬಹುಸಂಖ್ಯಾತ ಮಧ್ಯವರ್ತಿಗಳು ಶ್ರೀಮಂತ ಜೀವನ ನಡೆಸುತ್ತ ಕಂದಾಯ ವಸೂಲಿ ಮಾಡುವುದನ್ನೆ ತೊರೆದುಬಿಟ್ಟಿದ್ದರು. ಏಕೆಂದರೆ ಬೇಸಾಯ ಮಾಡುವದನ್ನು ಬಿಟ್ಟುಕೊಡಲು ಹಲವಾರು ರೈತರಿಗೆ ಬಲವಂತ ಮಾಡಲಾಯಿತು. ಭೂ ಒಡೆತನ ಹೊಂದಿರುವುದೆ ಪ್ರಮಾದವಾಗಿ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಲಾಯಿತು. ಉತ್ಪಾದನೆಯ ಮೇಲೆ ಇದರ ಪರಿಣಾಮ ಉಂಟಾಗಿ ಬರ ಅವರೊಡನೆ ಕಾದಾಡತೊಡಗಿತು.
ಈ ನಡುವೆ ಅಮೆರಿಕೆಯ ಅಂತರ್ಯುದ್ಧ 1860ರಲ್ಲಿ ಲಂಕಾಷೈರ್ ನ ಕಾರ್ಖಾನೆಗಳಿಗೆ ಹತ್ತಿಯ ಸಮಸ್ಯೆಯನ್ನುಂಟುಮಾಡಿತು. ಇದರಿಂದ ಪಶ್ಚಿಮ ಭಾರತದಲ್ಲಿ ಹತ್ತಿಯನ್ನು ಬಹುದೊಡ್ಡ ಪ್ರಮಾಣದಲ್ಲಿ ಬೆಳೆಯುವಂತೆ ಬ್ರಿಟಿಶ್ ಸರಕಾರ ಬಲವಂತ ಮಾಡಿತು. ವಾಣಿಜ್ಯ ಬೆಳೆಗಾಗಿ ಒತ್ತಾಯ ಹೇರುವ ಪ್ರವೃತ್ತಿ ಇಲ್ಲಿಂದ ಆರಂಭವಾಯಿತು. ಹತ್ತಿಯಂತೆಯೆ ಸೆಣಬು ಮತ್ತು ನೀಲಿ ಸಸ್ಯದ ನಾರು ಕಾಣುತ್ತಿತ್ತು. ಈ ರೀತಿ ಕೃಷಿಕ್ಷೇತ್ರದ ವಾಣಿಜ್ಯೀಕರಣ ಆರಂಭಗೊಂಡಿತು, ವಸಾಹತುಶಾಹಿಯಡಿ ಭಾರತ ಅರೆ-ಊಳಿಗಮಾನ್ಯ ದೇಶವಾಯಿತು. ಇದು ವಾಣೀಜ್ಯೀಕರಣವನ್ನು ಬಲವಂತವಾಗಿ ಹೇರಿತು. ಅಂದರೆ ಉತ್ಪಾದನೆಯನ್ನು ಮನೆ ಬಳಕೆಗಾಗಿ ಮಾಡುವ ಬದಲು ಮಾರುಕಟ್ಟೆಗಾಗಿ ಮಾಡಲು ಬೇಡಿಕೆ ಹೆಚ್ಚಾಗಿ ರೈತರು ತಮ್ಮ ಜೀವನೋಪಾಯಕ್ಕೆ ಸಾಕಷ್ಟು ದವಸ ಧಾನ್ಯಗಳನ್ನೂ ಬೆಳೆಯದ ಹಂತ ತಲುಪಿತು. ಧ್ವಂಸಕಾರೀ ಬರ ಮೇಲಿಂದ ಮೇಲೆ ಘಟಿಸಿ ಮರುಕೊಳಿಸತೊಡಗಿತು.



ಬ್ರಿಟಿಶ್ ಕಾಲದಲ್ಲಿ ರೈತ ದಂಗೆಗಳು
ರೈತ ಶೋಷಣೆ ಹತ್ತೊಂಬತ್ತನೆಯ ಶತಮಾನದುದ್ದಕ್ಕೂ ನಡೆದ ಪರಿಣಾಮವಾಗಿ ಬಹುಸಂಖ್ಯೆಯಲ್ಲಿ ರೈತದಂಗೆಗಳು ಘಟಿಸಿವೆ. ಅವುಗಳಲ್ಲಿ ಪ್ರಮುಖವಾದ ಫಕೀರ್ ದಂಗೆ (1763), ಚೌರ್ ದಂಗೆ (1766 ಮತ್ತು 1798), ನೀಲಿ ದಂಗೆ (1788 ಮತ್ತು 1830), ವಹಾಬಿ ಚಳವಳಿ (1831) ಮತ್ತು ಸಂತಾಲ ಹುಲ್ ಬಂಡಾಯ (1855)ಗಳು ಉತ್ತರ ಭಾರತದಲ್ಲಿ ನಡೆದರೆ, ಅಲ್ಲೂರಿ ಸೀತಾರಾಮ ರಾಜು ನೇತೃತ್ವದ ಬೃಹತ್ ರೈತ ದಂಗೆ ದಕ್ಷಿಣದ ಆಂಧ್ರದಲ್ಲಿ ನಡೆಯಿತು. 1792ರಿಂದ 1900ರ ವರೆಗೆ ಮಲಬಾರಿನಲ್ಲಿ 30 ರೈತ ದಂಗೆಗಳು ನಡೆದಿದ್ದು, ಅವುಗಳಲ್ಲಿ 1841, 1844, 1849, ಮತ್ತು 1896ರ ದಂಗೆಗಳು ನಿರ್ದಿಷ್ಟವಾಗಿ ಉಗ್ರ ಸ್ವರೂಪ ತಾಳಿದ್ದವು. ಈ ಎಲ್ಲ ದಂಗೆಗಳು ಜಮೀನ್ದಾರರು, ಬ್ರಿಟಿಶ್ ಜಿಲ್ಲಾ ಮುಖ್ಯಾಧಿಕಾರಿಗಳು ಮತ್ತು ಸೈನ್ಯಪಡೆಗಳನ್ನು ತಮ್ಮ ಗುರಿಯಾಗಿರಿಸಿಕೊಂಡಿದ್ದವು. ಅವರೊಂದಿಗೆ  ಬಳಕೆದಾರರ ವಿರುದ್ಧವೂ ದಾಳಿ ನಡೆದಿದೆ. ಅಷ್ಟೊತ್ತಿಗಾಗಲೆ ರೈತರು ದೊಡ್ಡ ಪ್ರಮಾಣದ ಗಿರವಿಗಳಿಂದಲೂ ಶೋಷಣೆಗೆ ಒಳಗಾಗಿದ್ದರೆಂದು ಇದರಿಂದ ಸಾಬೀತಾಗುತ್ತದೆ. ಈ ಎಲ್ಲ ದಂಗೆಗಳ ಬಹು ಮಹತ್ವದ ಅಂಶವೆಂದರೆ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರೈತರೂ ಇತರ ಕ್ಷೇತ್ರದ ಜನರೂ ಹೆಚ್ಚು ಸಂಖ್ಯೆಯಲ್ಲಿ ಪಾಲುಗೊಂಡಿದ್ದರು. 19ನೆಯ ಶತಮಾನದ ಕೊನೆಯ ಹೊತ್ತಿಗೆ ಸ್ವಾತಂತ್ರ್ಯ ಸಂಗ್ರಾಮದ ನಾಯಕತ್ವ ಇಂಗ್ಲಿಶ್ ಕಲಿತ ಬುದ್ಧಿಜೀವಿಗಳ ಕೈ ಸೇರಿದರೂ ರೈತ ದಂಗೆಗಳು 20ನೆಯ ಶತಮಾನದ ವರೆಗೂ ಮುಂದುವರೆದಿತ್ತು. ಮಾಪಿಯಾ ದಂಗೆ, ಬಖಾಸ್ತ್ ಚಳವಳಿ, 1907ರಲ್ಲಿ ರಾಜಾಸ್ಥಾನದಲ್ಲಿ ನಡೆದ ಭಿಲ್ ಬುಡಕಟ್ಟು ಚಳವಳಿ ಮತ್ತು ಬಂಗಾಳಿ ರೈತರ ಭೂ ಗೇಣಿ ಹಕ್ಕು ಹೋರಾಟ ಮೊದಲಾಗಿ ಇಂಥ ಇನ್ನೂ ಅನೇಕ ದಂಗೆಗಳನ್ನು ನಿದರ್ಶನಗಳಾಗಿ ಹೆಸರಿಸಬಹುದು.  ಸುಧಾರಣಾವಾದಿ ಕಾಂಗ್ರೆಸ್ ನಾಯಕರಿಗೂ ರೈತ ಸಮಸ್ಯೆಯನ್ನು ಕೈಗೆತ್ತಿಕೊಳ್ಳಬೇಕೆಂಬ ಒತ್ತಡವಿತ್ತು. ಹಾಗಾಗಿ ಬಾರ್ಡೋಲಿ ಸತ್ಯಾಗ್ರಹ ಮತ್ತು ಚಂಪಾರಣ್ಯ ಸತ್ಯಾಗ್ರಹಗಳಲ್ಲಿ ರೈತರು ಅತ್ಯಧಿಕ ಪ್ರಮಾಣದಲ್ಲಿ ಚಳವಳಿ ನಿರತರಾದರು. ಒಂದು ನೂರು ವರ್ಷಗಳ ಕಾಲ ನಡೆದ ರೈತ ದಂಗೆಗಳ ತೀವ್ರತೆಯ ಪರಿಣಾಮವಾಗಿ ಬ್ರಿಟಿಶ್ ಸಾಮ್ರಾಜ್ಯವಾದಿಗಳು ಅಂತಿಮವಾಗಿ ಸಂದರ್ಭಕ್ಕೆ ಅನುಗುಣವಾಗಿ ಹೊಂದಿಕೊಳ್ಳತೊಡಗಿದರು. ಆ ಹೊತ್ತಿಗಾಗಲೆ ಇದ್ದ ಗೇಣಿ ಕಾಯ್ದೆಗೆ ಸೀಮಿತ ಸುಧಾರಣೆ ತರುವ ಹಾದಿಯಲ್ಲಿ ಹೆಜ್ಜೆಯಿಟ್ಟು ನೇಮಿಸಿದ ಹಲವಾರು ರಾಯಲ್ ಕಮಿಷನ್ ಗಳು ಮತ್ತು ಫ್ಲೌಟ್ ಕಮಿಷನ್ ಗಳು ಭೂ ಸುಧಾರಣೆ ಮತ್ತಿತರ ವಿಷಯಗಳ ಕುರಿತು ನಲವತ್ತರ ದಶಕದಲ್ಲಿ ವರದಿ ನೀಡಿದವು. ಆ ಪ್ರಕಾರವಾಗಿ ಬ್ರಿಟಿಶ್ ಸರಕಾರವೆ 1947ಕ್ಕೂ ಮೊದಲು ಭೂ ಗೇಣಿ ಸುಧಾರಣೆಯನ್ನು ಜಾರಿಗೆ ತರುವ ಕಾರ್ಯ ಕೈಗೆತ್ತಿಕೊಂಡಿತು.
ರೈತರ ಸಮಸ್ಯೆಯನ್ನು ಬೇರೆಡೆಗೆ ಸೆಳೆಯಲು ಮತ್ತು ಗೊಂದಲ ಹುಟ್ಟುಹಾಕಲು ಆಡಳಿತ ನಡೆಸುವ ಪಕ್ಷ 'ಭೂ ಸುಧಾರಣೆ'ಯನ್ನು ಕೈಗೆತ್ತಿಕೊಳ್ಳುತ್ತದೆ. ಇಂಥ ಸುಧಾರಣೆಗಳ ಮೂಲ ಉದ್ದೇಶ ದೇಶವನ್ನು ಕ್ರಾಂತಿಕಾರಕ ಬದಲಾವಣೆಯಿಂದ ಉಳಿಸುವುದೆಂದು ತೋರಿಸುತ್ತದೆ. ಈ ಸಂಬಂಧದಲ್ಲಿ ಭಾರತದ ಆಡಳಿತ ಪಕ್ಷ ಕೂಡ ಕ್ರಮವಾಗಿ ತಮ್ಮ ಹಿರಿಯರನ್ನು ಅನುಸರಿಸಿ 'ಭೂ ಸುಧಾರಣಾ ಕಾರ್ಯಕ್ರಮ' ರೂಪಿಸಿದೆ. ಎರಡನೆಯ ಜಾಗತಿಕ ಮಹಾಯುದ್ಧದ ನಂತರ ಬೆಳೆಯುತ್ತಿದ್ದ ಕ್ರಾಂತಿಕಾರಿ ಚಳವಳಿಯ ಪ್ರಭಾವ ಮತ್ತು ಏಷಿಯಾ ಮತ್ತು ಲ್ಯಾಟಿನ್ ಅಮೆರಿಕಾ ದೇಶಗಳ ಕೃಷಿ ಕ್ರಾಂತಿ ಪ್ರಕ್ರಿಯೆಯ ವಿರುದ್ಧ ಹೋರಾಡಲು ಅಲ್ಲಿನ ಸರಕಾರಗಳು ಅಮೆರಿಕೆಯ ಸಾಮ್ರಾಜ್ಯಶಾಹಿ ಪರವಾಗಿ ಭೂ ಸುಧಾರಣೆಯನ್ನು ಜಾರಿಗೆ ತಂದವು. ಭಾರತದಲ್ಲೂ ಕೃಷಿ ಕ್ರಾಂತಿ ಬೆಳೆಯುವುದರ ವಿರುದ್ಧ ಹೋರಾಡಲು ನೆಹರೂ ಸರಕಾರ ನಮ್ಮ ದೇಶದ ಸಾಮ್ರಾಜ್ಯಾಶಾಹಿ ಭೂ ಸುಧಾರಣಾ ಕಾರ್ಯಕ್ರಮಗಳ ರೂವಾರಿಯಾದ ವೂಲ್ಫ್ ಲೆಡೆಜಿನ್ಸ್ಕಿ ಅವರನ್ನು ಆಹ್ವಾನಿಸಿತು. ಏಷ್ಯಾದ ಕೃಷಿಕ್ಷೇತ್ರದಲ್ಲಿ ಭೂ ಸುಧಾರಣೆ ಭೌದ್ಧಿಕ ಸಮಸ್ಯೆಯಾಗುಳಿದಿಲ್ಲ. ಜಪಾನ್ ಮತ್ತು ತೈವಾನಿನ ಅನುಭವಗಳು ಒಂದೆಡೆಯಿದ್ದರೆ ಕಮ್ಯೂನಿಸ್ಟ್ ಚೈನಾದ ಅನುಭವಗಳು ಇನ್ನೊಂದೆಡೆ ಇದ್ದು, ಏಷ್ಯಾದ ಇತರ ದೇಶಗಳು ಮತ್ತು ಏಷ್ಯಾ ಹೊರತಾದ ದೇಶಗಳು, ಕಮ್ಯೂನಿಸ್ಟೇತರ ದೇಶಗಳ ಅತ್ಯಾಸಕ್ತಿಯನ್ನು ಗುರುತಿಸಲು ಇದು ಸಹಾಯಕವಾಗಿದೆ. ಮೊದಲಿನೆರಡು ದೇಶಗಳು ಉಳುಮೆದಾರ ತಾನುಳುವ ಭೂಮಿಯನ್ನು ಯಾವುದೆ ದಂಗೆ, ರಕ್ತಪಾತವಿಲ್ಲದೆ ಪಡೆಯುತ್ತಾನೆ ಎಂದು ತೋರಿಸಿವೆ. ಇದಕ್ಕೂ ಮೇಲಾಗಿ ರೈತನೊಬ್ಬ ಮುಕ್ತ ಮತ್ತು ಸ್ವತಂತ್ರ ಉತ್ಪಾದಕ ಎನ್ನುವುದನ್ನು ಅವು ತೆರೆದು ತೋರಿಸಿವೆ. ಕಮ್ಯೂನಿಸ್ಟ್ ರಷ್ಯ ಮತ್ತು ಚೀನಾ ದೇಶಗಳು ಬಂದೂಕಿನ ತುದಿಯಲ್ಲಿ ತಮ್ಮ ರೈತರ ಮೇಲೆ ಹೇರಿರುವ ಗುಲಾಮಗಿರಿಯಿಂದ ಅವನು ಪಾರಾಗಿದ್ದಾನೆ'' ಎಂದು ವೂಲ್ಫ್ ಲೆಡೆಜಿನ್ಸ್ಕಿಯವರೆ ಹೇಳಿದ್ದಾರೆ.
ಹೀಗಿದ್ದರೂ ಭೂ ಹೀನರು ಭೂ ಒಡೆಯರಾಗುವ ಹಂಬಲ ಈಡೇರಿಸುವ ಸಾಧನೆ ಅಧಿಕಾರದಲ್ಲಿರುವ ಸರಕಾರದ ಇಚ್ಚೆ ಮತ್ತು ನಿರ್ಣಯ ಶಕ್ತಿಯನ್ನು ಅವಲಂಬಿಸಿದ್ದು, ಜಮೀನಾದಾರರನ್ನು ಬಲವಂತ ಪಡಿಸಿ ಒಪ್ಪಿಸುವ ಸಾಮರ್ಥ್ಯವನ್ನನುಸರಿಸಿ ಸಾಧ್ಯವಾಗುವ ಸುಧಾರಣೆ ಬಡತನ ಮತ್ತು ಸಾಮಾಜಿಕ ಅವನತಿಯ ಮುಖ್ಯ ಗುಣಲಕ್ಷಣವಾಗಿರುವ ಭೂ ಹಿಡುವಳಿ ವ್ಯವಸ್ಥೆಯ ರಾಜಕೀಯ ಪರಿಣಾಮ ಕುರಿತು ಹೇಳುವ ಮಾತು ಅರ್ಥವಾಗುವಂಥದ್ದು.''
ಕೊನೆಯ ಅಂಶ ಅತ್ಯವಶ್ಯವಾಗಿದ್ದು, ನಾನು ಬಂದ ಜಗತ್ತಿನ ಭಾಗದಲ್ಲಿನ ಸಣ್ಣ ಅಥವಾ ದೊಡ್ಡ ಜಮೀನ್ದಾರರು ಸಮಾಜ ಸುಧಾರಕರಲ್ಲ. 'ಸುಧಾರಣೆ' 'ಬದಲಾವಣೆ' 'ರಿಯಾಯ್ತಿ' ಎಂಬ ಪದವೆ ಅವರಿಗೆ ಮೈ ಮೇಲೆ ದೆವ್ವ ಬಂದಂತೆ ಆಗುತ್ತದೆ. ತಮ್ಮ ಸ್ಥಾನಮಾನಕ್ಕಾಗಿ ಒತ್ತಾಯ ಮಾಡುವ ಕುರುಡತನದಲ್ಲಿ ಅವರು ಬುದ್ಧಿಪೂರ್ವಕವಲ್ಲದ, ಮನಸ್ಸಿಲ್ಲದ ಕಮ್ಯೂನಿಸಮ್ ನ ಸದಸ್ಯ ಮಿತ್ರರಾಗಿ ರಷ್ಯಾ ಮತ್ತು ಚೀನಾದಲ್ಲಿ ಕ್ರಾಂತಿಕಾರಕ ಸ್ಥಿತಿಯನ್ನು ಹುಟ್ಟುಹಾಕಿದ್ದಾರೆ.''
ಕೊನೆಯಲ್ಲಿ, ಅವರು ತಮ್ಮ ಮತ್ತು ತಮ್ಮ ಸರಕಾರದ ಸಮಾಧಿಯನ್ನು ತಾವೇ ತೋಡಿಕೊಳ್ಳುತ್ತಾರೆ. ಈ ಕಾರಣಗಳಿಗಾಗಿ ಮತ್ತು ಇತ್ತೀಚಿನ ಹಲವು ವರ್ಷಗಳಲ್ಲಿ ಜಗತ್ತಿನಲ್ಲಿ ಬಲವಾದ ಕ್ರಾಂತಿಯ ಗಾಳಿ ಬೀಸುತ್ತಿರುವ ಸಂದರ್ಭದಲ್ಲಿ, ರಿಯಾಯ್ತಿ ನೀಡಲು ಸರಕಾರ ವಿಧಿಸಿರುವ ಜಮೀನ್ದಾರರು ಮುಕ್ತ ಜನತೆಯ ಸಕಾರಾತ್ಮಕ ಗುರಿಗೆ ಅವಶ್ಯಕವಾದ ಸ್ಥಿರೀಕರಣವಾಗಿದ್ದಾರೆ. ಈ ಸ್ಥಿರೀಕರಣ ವಿಫಲವಾದರೆ ಕಮ್ಯೂನಿಸ್ಟ್ ರಷ್ಯಾ ಮತ್ತು ಕಮ್ಯೂನಿಸ್ಟ್ ಚೈನಾದ ಕೃಷಿ ಕ್ರಾಂತಿ ಪರ್ಯಾಯಗಳಾಗಿವೆ.''
ತಮಗೆ ಸಮಾಧಾನವಾಗಿ ಮಂಜೂರು ಮಾಡಲು ವಿಫಲವಾದ ವರ್ಗಗಳು ಮತ್ತು ಸರಕಾರಗಳ ಸಂಪೂರ್ಣ ನಾಶಕ್ಕಾಗಿ, ತಾವು ಹೊಂದಿರದ ಆಸ್ತಿಯ ದಾಖಲೆ ಮೊದಲಲ್ಲೊ ನಂತರದಲ್ಲೊ ಅವರಿಂದಲೇ ಕಾನೂನು ಕ್ರಮ ಪಡೆದು ಜೀವತಳೆಯುತ್ತ್ತದೆ, ಇಲ್ಲದಿದ್ದರೆ ಅವರು ಹಿಂಸೆಯ ಮೂಲಕ ಆವರಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಕೃಷಿ ಪ್ರಧಾನ ದೇಶಗಳಲ್ಲಿ ಸರಕಾರ ರೈತ ಪರವಾಗಿರಬೇಕು, ಹಾಗಿರಲು ವಿಫಲವಾದಲ್ಲಿ ಅದು ಬಲವಿಲ್ಲದ ಸರಕಾರವಾಗುತ್ತದೆ ಎಂಬುದನ್ನು ಕಮ್ಯೂನಿಸ್ಟ್ ರಷ್ಯಾ ಮತ್ತು ಚೀನಾಗಳ ಉದಯ ತೋರಿಸಿಕೊಟ್ಟಿದೆ. ಹಳ್ಳಿಗಾಡಿನ ಸಾಮಾಜಿಕ ರಚನಾ ತಳಹದಿಯ ನಿಲ್ಲುವಿಕೆ ಅಥವಾ ಬೀಳುವಿಕೆ ರೈತ 'ಕೇಂದ್ರ ಸ್ಥಾನ' ಮತ್ತವನ ಆಸಕ್ತಿ, ಆಕಾಂಕ್ಷೆಗಳನ್ನು ಆಧರಿಸಿದೆ ಎಂಬುದನ್ನು ಎತ್ತಿ ತೋರಿಸಬೇಕು. ಕೇಂದ್ರ ಸ್ಥಾನವನ್ನು ರೈತ ಏಕೆ ಮತ್ತು ಹೇಗೆ ಅಲಂಕರಿಸಿದ್ದಾನೆ, ಈ ಕಾಯ್ದೆಯಿಂದ ಹೇಗೆ ರೈತನಿಗೆ ಮತ್ತು ದೇಶಕ್ಕೆ ಅನುಕೂಲ ಎಂಬುದಕ್ಕೆ ಜಪಾನ್ ಮತ್ತು ತೈವಾನ್ ಉತ್ತಮ ಉದಾಹರಣೆಗಳಾಗಿವೆ. ರೈತನ ಆರ್ಥಿಕ ಮತ್ತು ಸಾಮಾಜಿಕ ಆಶಯಗಳು ಇಂದಿನದಲ್ಲದ ಸ್ಥಾನಮಾನಗಳಿಗಾಗಿ ಬಲಿಯಾದಾಗ ಕಮ್ಯೂನಿಸ್ಟ್ ಚೈನಾ ಒಂದು ಪಾಠವಾಗಿ, ಎಚ್ಚರಿಕೆಯಾಗಿ ಒದಗಿಬರುತ್ತದೆ.''
ಸಾಮ್ರಾಜ್ಯಶಾಹಿ ದೃಷ್ಟಿಕೋನದ ಈ 'ಭೂ ಸುಧಾರಣಾ ಹಾದಿ'ಯ ರೂಪಿಕೆಯನ್ನು ಕೃಷಿ ಕ್ರಾಂತಿಯ ಚಳವಳಿಗಳು ಬೆಳೆಯುತ್ತಿರುವ ಅಥವಾ ರೈತರು ಅಸಮಾಧಾನದಿಂದ ಕುದಿಯುತ್ತಿರುವ ದೇಶಗಳಲ್ಲಿ ಅಳವಡಿಸಲಾಗಿದೆ. ಈ ನಿರ್ದಿಷ್ಟ ಹಾದಿ ಸಮಾಜೋ-ಆರ್ಥಿಕ ರಾಜಕೀಯ ರಚನೆಯನ್ನು ಕಾಪಾಡಿ ಆಡಳಿತ ನಡೆಸುತ್ತಿರುವ ಸರಕಾರದಿಂದ ಮೇಲುಮಟ್ಟದ ಸುಧಾರಣೆ ತರುತ್ತದೆ, ಅಲ್ಲದೆ ಭೂ ಒಡೆತನ ಪಡೆಯುವ ಹಂಬಲವಿರುವ ಭೂಹೀನರು ಕೃಷಿಕ್ರಾಂತಿಗೆ ಪರ್ಯಾಯವಾಗಿ ಮುಂದೆ ಹೋಗದಂತೆ ನೋಡಿಕೊಳ್ಳುತ್ತದೆ.
ಭಾರತದ ಆಡಳಿತಗಾರರು ಸಾಮ್ರಾಜ್ಯಶಾಹಿ ಅಮೆರಿಕೆಯ ನೇರ ಮೇಲ್ವಿಚಾರಣೆಯಲ್ಲಿ, ಮೇಲುಮಟ್ಟದ ರೂಪದಲ್ಲಿ ಈ ಮೇಲಿನ ನಿರ್ದಿಷ್ಟ ಹಾದಿಯ ಕೃಷಿ ಭೂ ಸುಧಾರಣೆಯನ್ನು ಕೈಗೆತ್ತಿಕೊಂಡು ಅನುಸರಿಸಿದ್ದಾರೆ.
1945ರ ಕೊನೆಯಿಂದ ಅಂದರೆ ಡಗ್ಲಾಸ್ ಮ್ಯಾಕ್ ಆರ್ಥರ್ ನನ್ನು ಅಸಿಸ್ಟೆಂಟ್ ಜನರಲ್ ಆಗಿ ಜಪಾನಿನ ಯುದ್ಧೋತ್ತರ ಭೂ ಸುಧಾರಣೆ ಯೋಜನೆಯಡಿ ನೇಮಿಸಿದಾಗಿನಿಂದ ವೂಲ್ಫ್ ಲೆಡೆಜಿನ್ಸ್ಕಿ ತನ್ನ ಜೀವನದ ಮೂವತ್ತು ವರುಷಗಳನ್ನು ಬಹುಪಾಲು ಏಷ್ಯಾದಲ್ಲೆ ಕಳೆದಿದ್ದಾರೆ. ಈ ಮೂರು ದಶಕಗಳನ್ನು ಕೃಷಿ ಸುಧಾರಣೆಯ ಕಾರಣಕ್ಕಾಗಿಯೆ ಅರ್ಪಿಸಿಕೊಂಡಿದ್ದಾರೆ.''
ವೂಲ್ಫ್ ಲೆಡೆಜಿನ್ಸ್ಕಿ ಹೀಗೆ ಹೊಸದಾಗಿ ಸ್ವತಂತ್ರಗೊಂಡ ಏಷ್ಯಾದ ದೇಶಗಳಲ್ಲಿ ಪ್ರಜಾಪ್ರಭುತ್ವದ ಏಳಿಗೆ ಮತ್ತು ಉಳಿವಿಗಾಗಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಏಷ್ಯಾದ ಗ್ರಾಮೀಣರ ಗಳಿಕೆ ಉತ್ತಮ ಪಡಿಸಲು ಮತ್ತು ಮೂಲ ಅಗತ್ಯಗಳನ್ನು ಪೂರೈಸಲು ಕೊನೆಪಕ್ಷ ಭೂ ಹಿಡುವಳಿ ಒಡೆಯರಿಗೆ ರಕ್ಷಣೆ ಅಥವಾ ತಮ್ಮದೆಂದು ಕರೆದುಕೊಳ್ಳುವ ಒಂದು ತುಂಡು ಭೂಮಿಗಾಗಿ ಅವಲಂಬಿಸಿದ ಪರಿಣಾಮವನ್ನು ಅವರು ಮನವರಿಕೆ ಮಾಡಿಕೊಟ್ಟರು. ಈ ರೀತಿಯಲ್ಲಿ ಮಾತ್ರ ರೈತರು ಕಡು ಬಡತನದಿಂದ ಮತ್ತು ವೈಯಕ್ತಿಕ ಅಪಮಾನಕರ ನೋವಿನಿಂದ ಪಾರಾಗಲು ಸಾಧ್ಯವಿದ್ದರೂ ಬೇರೆಯವರ ಒತ್ತಾಯಕ್ಕೆ ಮಣಿದು ಒಪ್ಪಿಕೊಳ್ಳುವುದು ಅವರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಲೆನಿನ್ ರ ಶಕ್ತಿಶಾಲಿ ಭರವಸೆ 'ಉಳುವವನಿಗೆ ಭೂಮಿ' ಹೇಗೆ ರಷ್ಯನ್ ರೈತರನ್ನು ಪ್ರಭಾವಿಸಿತು, ಹೇಗೆ ಅವರು ಕ್ರಾಂತಿಗೆ ಒಪ್ಪಿಗೆ ನೀಡಿ ಬೆಂಬಲ ವ್ಯಕ್ತಪಡಿಸುವಂತೆ ಮಾಡಿತು, ಜಮೀನಿಲ್ಲದವರೆಲ್ಲ ಕೂಡಲೇ ಮತ್ತೆ ಸಾಮುದಾಯಿಕ ಮತ್ತು ಪ್ರಭುತ್ವ ಒಡೆತನದ ಬೇಸಾಯಕ್ಕೆ ಒಲವು ವ್ಯಕ್ತಪಡಿಸಿದರು ಎಂದು ಬಲ್ಲ ವೂಲ್ಫ್ ಲೆಡೆಜಿನ್ಸ್ಕಿ ಭೂ ವಿಷಯ ವಹಿಸುವ ರಾಜಕೀಯ ಪಾತ್ರ ಕುರಿತು ಆಳವಾದ ಅರಿವನ್ನು ಬೆಳೆಸಿದ್ದಾರೆ. ಏಷ್ಯಾದಲ್ಲಿ ಪ್ರಜಾಪ್ರಭುತ್ವ ನಿಜವಾಗಿಯೂ ಉಳಿಯುವುದೇ ಅಥವಾ ಕಮ್ಯೂನಿಸ್ಟ್ರ ಭರವಸೆಗಳಿಗೆ ಗ್ರಾಮೀಣ ಜನತೆ ಮಣಿಯುವುದೇ ಎಂದು ನಿರ್ಣಯಿಸುವಲ್ಲಿ ಭೂ ಒಡೆತನದ ಪ್ರಾಮುಖ್ಯತೆ, ಹಿಡುವಳಿಯ ಹಕ್ಕು ಮತ್ತು ಇನಾಮತಿ ಭೂ ಹಂಚಿಕೆ ಕುರಿತು ಅವರು ಮರುಚಿಂತನೆ ನಡೆಸಿದ್ದಾರೆ.''
ಲೆಡೆಜಿನ್ಸ್ಕಿಯ ಪ್ರಮುಖ ಕೊಡುಗೆಯಾದ ಜಪಾನಿನ ಅತ್ಯಂತ ಯಶಸ್ವಿ ಭೂ ಸುಧಾರಣೆ (1946-48) ಅವರಿಗೆ ಕ್ಷಣ ಮಾತ್ರದಲ್ಲಿ ಹೆಸರನ್ನು ತಂದು ಕೊಟ್ಟಿತು, ಮತ್ತು ಅನೇಕ ಇತರ ಭೂಮಿಗಳಲ್ಲಿ ಸಲಹೆ ಮತ್ತು ನೆರವು ನೀಡಲು ಅವರನ್ನು ಕೋರುವಂತೆ ಮಾಡಿತು. ಅವರು ಆರಂಭಿಕ ಯುದ್ಧಪೂರ್ವ ಕಾಲದ ತೈವಾನಿನಲ್ಲೂ ಅಷ್ಟೇ ಯಶಸ್ವಿಯಾದ ಭೂ ಸುಧಾರಣೆಯನ್ನು ಮಾಡಿ ಮಹತ್ವಪೂರ್ಣ ಕೊಡುಗೆ ನೀಡಿದ್ದಾರೆ''
1950ರಿಂದ 1956 ವರೆಗೆ ಟೋಕಿಯೊಗೆ ಸಂಬಂಧಿಸಿದ ತಮ್ಮ ಸಾಮಾನ್ಯ ಕರ್ತವ್ಯದೊಂದಿಗೆ ಹೆಚ್ಚುವರಿಯಾಗಿ ಅವರು ಜಪಾನಿನ ಭೂ ಸುಧಾರಣೆಯ ಪರಿಣಾಮಗಳನ್ನು ಪರಿಶೀಲನೆ ಮಾಡಿದರು, ಮತ್ತು  ತೈವಾನಿನ ಫಾರ್ಮೋಸಾದಲ್ಲಿ ನೆರವು ನೀಡಿದರು, ಭಾರತದ ರಾಯಭಾರಿ ಚೆಸ್ಟರ್ ಬೌಲ್ಸ್ ಅವರ ತುರ್ತು ಕೋರಿಕೆಯ ಮೇರೆಗೆ ಮೊದಲಿಗೆ ಕಾಶ್ಮೀರ, ಪಂಜಾಬ್ ಮತ್ತು ಮದ್ರಾಸ್ (1952ರಲ್ಲಿ) ಗಳಲ್ಲಿ ಹಿಡುವಳಿ ಸಂಬಂಧಿತ ಸಮಸ್ಯೆಗಳು ಮತ್ತು ಸ್ಥಿತಿಗತಿಗಳು, ಅಲ್ಲದೆ ಭಾರತದಲ್ಲಿನ (1954) ಭೂ ಸುಧಾರಣಾ ಕಾರ್ಯಕ್ರಮಗಳ ಸಾಮಾನ್ಯ ವಿದ್ಯಮಾನಗಳನ್ನು ಪರೀಕ್ಷಿಸಿದರು. ತಮ್ಮ ಕೊನೆಯ ವರ್ಷದಲ್ಲಿ ಅವರು ಸೈಗಾನಿನಲ್ಲಿ ಧರ್ಮ ಪ್ರಚಾರ ಸಹಾಯಕರಾಗಿರುವುದರೊಂದಿಗೆ ಅಮೆರಿಕೆಯ ಸರಕಾರದಲ್ಲಿ ಭೂ ಸುಧಾರಣಾ ಸಲಹೆಗಾರರಾಗಿ ಸೇವೆ ಸಲ್ಲಿದರು. 1956ರಿಂದ 1961ರ ವರೆಗೆ ಅವರು ವಿಯೆತ್ನಾಮಿನ ಅಧ್ಯಕ್ಷ ಡೈಮ್ ಅವರಿಗೆ ಆಪ್ತ ಸಲಹೆಗಾರರಾಗಿ ತಮ್ಮ ಕೆಲಸ ಮುಂದುವರೆಸಿದರು. ಮುಂದಿನ ಮೂರು ವರುಷಗಳ ಕಾಲ ಅವರು ಫೋರ್ಡ್ ಫೌಡೇಶನ್ ನಲ್ಲಿ ಒಂದು ಬಗೆಯ ಜಂಗಮಶೀಲ ಪ್ರಾದೇಶಿಕ ಸಲಹೆಗಾರರಾಗಿ ನೇಪಾಳ, ಭಾರತ, ಇಂಡೋನೇಶಿಯಾ ಮತ್ತು ಫಿಲಿಫೈನ್ಸ್ ಗಳಲ್ಲಿ ಫೌಂಡೇಶನ್ ಕೆಲಸಕಾರ್ಯಗಳಿಗೆ ಸಲಹೆ ನೀಡುತ್ತಿದ್ದರು.''
1964ರ ನಂತರದ ಅವಧಿಯಲ್ಲಿ ಅವರು ವಿಶ್ವ ಬ್ಯಾಂಕಿನ ಸಲಹೆಗಾರರಾಗಿ ಕೆಲಸ ಆರಂಭಿಸಿದರು. ಆರ್ಥಿಕ ಅಭಿವೃದ್ಧಿಗಾಗಿ ಭಾರತದ ನೋಟ ಎಂಬ ವಿಶ್ವ ಬ್ಯಾಂಕಿನ ಪ್ರಮುಖ ಅಧ್ಯಯನದಲ್ಲಿ ಭಾಗವಹಿಸಿದ ಮೇಲೆ ಇರಾನ್ ಮತ್ತು ಮೆಕ್ಸಿಕೊಗೆ ಹೋದ ಇತರ ಆಯೋಗಗಳಲ್ಲಿದ್ದ ಲೆಡೆಜಿನ್ಸ್ಕಿಯವರು 1967ಕ್ಕೂ ಮೊದಲು ನವದೆಹಲಿಯಲ್ಲಿ ವಿಶ್ವ ಬ್ಯಾಂಕ್ ರೆಸಿಡೆಂಟ್ ಆಯೋಗದ ಸದಸ್ಯರಾಗಿ ನೇಮಕರಾದರು.''
ಈ ಕೊನೆಯ ಕಾಲಾವಧಿಯಲ್ಲಿ ಭಾರತ ಅವರ ಪ್ರಾಥಮಿಕ ಹೊಣೆಗಾರಿಕೆ ಮತ್ತು ಕಾಳಜಿಯಾಗಿದ್ದಾಗ ಅವರನ್ನು ಇರಾನ್, ಫಿಲಿಫೈನ್ಸ್ ಮತ್ತು ಶ್ರೀಲಂಕಾಗಳಲ್ಲಿ ವಿಶ್ವ ಬ್ಯಾಂಕಿನ ಅಡಹಾಕ್ ಸಹಾಯಕರೆಂದೂ ಕರೆಯಲಾಯಿತು. ವಿಶೇಷವಾಗಿ ಅವರ ಜೀವನದ ಕೊನೆಯ ದಶಕದಲ್ಲಿ ಭಾರತ ಕುರಿತ ಅನೇಕ ಲೇಖನಗಳಲ್ಲಿ ಲೆಡೆಜಿನ್ಸ್ಕಿಯವರು ಮೇಲಿಂದ ಮೇಲೆ ಸಣ್ಣ, ಅತಿಸಣ್ಣ ರೈತರು, ಭೂ ಸುಧಾರಣೆ, ಹಸಿರು ಕ್ರಾಂತಿ, ಸಾಂಸ್ಥಿಕ ಹಿಡಿತವಿರುವಂಥ ಸಹಕಾರಿ ಸಾಲ, ವಿಸ್ತರಣೆ, ಆಡಳಿತ ಮೊದಲಾಗಿ ರೂಪಿತವಾದ ಸಮಸ್ಯೆಗಳು (ಮತ್ತು ಕಾರ್ಯಕ್ರಮ)ಗಳನ್ನು ಪರಿಶೀಲಿಸಿದರು.''
ಲೆಡೆಜಿನ್ಸ್ಕಿ ಭಾರತದಲ್ಲಿ ಕೃಷಿ ಸುಧಾರಣೆಯ ಸಲಹೆಗಾರರಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಈ ಉದ್ದೇಶದೊಂದಿಗೆ ಭಾರತಕ್ಕೆ ಬಂದ ಲೆಡೆಜಿನ್ಸ್ಕಿ ಅಮೆರಿಕೆಯ ಸಾಮ್ರಾಜ್ಯಶಾಹಿ ಪರವಾಗಿ ಭೂ ಸುಧಾರಣಾ ಕಾರ್ಯಕ್ರಮ ಜಾರಿಗೆ ತರಲು ಭಾರತ ಸರಕಾರದ ನಿಂದಕರಾದರು. ನಂತರದಲ್ಲಿ ವಿಶ್ವ ಬ್ಯಾಂಕ್ ಮತ್ತು ಪೋರ್ಡ್ ಫೌಂಡೇಶನ್ ನ ತಜ್ಙರಾಗಿದ್ದ ಲೆಡೆಜಿನ್ಸ್ಕಿ 1968-1985ರ ನಡುವೆ ಭಾರತಕ್ಕೆ ಭೇಟಿ ನೀಡಿದರು, ತಂಗಿದರು.
ಕೊನೆಗೆ ಅವರು ವಿಶ್ವ ಬ್ಯಾಂಕಿನ 'ಭಾರತೀಯ ಕಾರ್ಯಾಚರಣೆ'ಯ ಮುಖ್ಯ ಸಲಹೆಗಾರರಾದರು.
ಅಮೆರಿಕೆಯ ರಾಯಭಾರಿ ತಮ್ಮ ಸ್ವಂತ ವರದಿಯಲ್ಲಿ 1954ರಲ್ಲಿ ಹೀಗೆ ಬರೆದಿದ್ದಾರೆ: 1952ರಲ್ಲಿ ನಾನು ಭೂ ನೀತಿಯಲ್ಲಿ ಅತ್ಯುನ್ನುತ ತಜ್ಙರಾದ ಇಬ್ಬರು ಅಮೆರಿಕನ್ನರನ್ನು ಗೊತ್ತು ಮಾಡಿದೆ. ವೂಲ್ಫ್ ಲೆಡೆಜಿನ್ಸ್ಕಿ ಜಪಾನ್ ಸುಧಾರಣೆಗಳ ಶಿಲ್ಪಿಯಾಗಿದ್ದರು, ಕೆನೆತ್ ಪಾರ್ಸನ್ಸ್ ವಿಸ್ಕಿನ್ಸಿನ್ ವಿಶ್ವವಿದ್ಯಾನಿಲಯದ ಕೃಷಿ ಆರ್ಥಿಕ ವಿಭಾಗದ ಪ್ರಾಧ್ಯಾಪಕರಾಗಿದ್ದರು. ಇವರಿಬ್ಬರು ಭೂ ಒಡೆತನ-ನಾಯಕತ್ವದ ಸ್ಥಿತಿಗತಿಯ ಪರಿಶೀಲನೆ ಮಾಡಲು ಮತ್ತು ಈ ಸಂಬಂಧ ಸರಕಾರಕ್ಕೆ ಶಿಫಾರಸುಗಳನ್ನು ಸಿದ್ಧಪಡಿಸಿ ಸಲ್ಲಿಸಲು ಭಾರತಕ್ಕೆ ಬಂದರು. ಮದ್ರಾಸ್ ಮತ್ತು ತಂಜಾವೂರು ಜಿಲ್ಲೆಗಳನ್ನು ಒಳಗೊಂಡು ಹಲವಾರು ರಾಜ್ಯಗಳಲ್ಲಿ ತೀವ್ರ ಅಧ್ಯಯನ ಮಾಡಿದ ನಂತರ ಲೆಡೆಜಿನ್ಸ್ಕಿ ರೈತರ ಕಟುವಾದ ದೂರುಗಳು 1946ರಲ್ಲಿ ಕಮ್ಯೂನಿಸ್ಟ್ ಪೂರ್ವ ಚೀನಾದಲ್ಲಿ ಕೇಳಿದ್ದ ದೂರುಗಳಿಗೆ ಸಮಾನವಾಗಿದ್ದು ಅವನ್ನು ನೆನಪಿಸುತ್ತವೆಯೆಂದು ವರದಿ ಮಾಡಿದರು. 'ಭಾರತದ ಕೆಲವು ಭಾಗಗಳಲ್ಲಿರುವ ಭೂಮಿಯ ತಾರತಮ್ಯತೆ ಭಾರತದ ಬೇರೆ ಯಾವುದೆ ಭಾಗದಲ್ಲಿ ತಾನು ಕಂಡ ಸ್ಥಿತಿಗಿಂತ ಕೆಟ್ಟದ್ದಾಗಿದೆ ಅಥವಾ ಅತಿ ಹೆಚ್ಚು ಕೆಟ್ಟಾದ್ದಾಗಿದೆ' ಎಂದು ಅವರು ಹೇಳಿದರು.''
ಹಳ್ಳಿಗರ ಹೆಚ್ಚುತ್ತಿರುವ ಅತೃಪ್ತಿಯನ್ನು ಸಂಧಿಸುವಲ್ಲಿ ಸುಧಾರಣೆಗಳ ಪ್ರಗತಿ ಅತ್ಯಂತ ನಿಧಾನ ಗತಿಯಲ್ಲಿದೆಯೆಂದು ಲೆಡೆಜಿನ್ಸ್ಕಿ ಮತ್ತು ಪಾರ್ಸನ್ಸ್ ಇಬ್ಬರೂ ತೀರ್ಮಾನಕ್ಕೆ ಬಂದಿದ್ದರು. ಈ ವರದಿಗಳು ಪಂಚವಾರ್ಷಿಕ ಯೋಜನೆಯಲ್ಲಿ ಶಿಫಾರಸ್ಸುಗಳ ಮಾರ್ಗದರ್ಶನ ಮಾಡುವಲ್ಲಿ ಪ್ರಭಾವಶಾಲಿಯಾಗಿವೆ ಎಂದು ಭಾರತದ ಯೋಜನಾ ಆಯೋಗದ ಸದಸ್ಯರು ನನಗೆ ಹೇಳಿದರು.'' ( ಮೂಲ: 'ರಾಯಭಾರಿಯ ವರದಿ'ಯಿಂದ, ಚೆಸ್ಟರ್ ಬೌಲ್ಸ್, 1954).
ಲೆಡೆಜಿನ್ಸ್ಕಿ ಲೇಖನಗಳ ಸಂಪಾದಕರಾದ ವಾಲಿನ್ಸ್ಕಿ ಅವರು ಹೀಗೆ ಬರೆದಿದ್ದಾರೆ: ಲೆಡೆಜಿನ್ಸ್ಕಿ ಭಾರತಕ್ಕೆ ಬಂದರು, ಮೂರು ತಿಂಗಳು ಉಳಿದಿದ್ದ ಕಾಲದಲ್ಲಿ ಅವರು ಪಂಜಾಬ್, ಮದ್ರಾಸ್ ಮತ್ತು ಕಾಶ್ಮೀರಗಳಿಗೆ ಕ್ಷೇತ್ರ ಪ್ರವಾಸ ಕೈಗೊಂಡರು, ಅಲ್ಲದೆ ಯೋಜನಾ ಆಯೋಗಕ್ಕೆಂದು ಪ್ರತಿಯೊಂದು ವಿಷಯ ಕುರಿತು ವರದಿ ಸಿದ್ಧಪಡಿಸಿದರು. ಈ ಅಧ್ಯಯನಗಳ ಉದ್ದೇಶಕ್ಕಾಗಿ ಲೆಡೆಜಿನ್ಸ್ಕಿ ಭಾರತದ ಯೋಜನಾ ಆಯೋಗದಡಿ ಕಾರ್ಯ ನಿರ್ವಹಿಸಿದರು. ಹಾಗಾಗಿ ವರದಿಗಳನ್ನು ನೇರವಾಗಿ ಯೋಜನಾ ಆಯೋಗಕ್ಕೆ ತಲುಪಿಸಲಾಯಿತು ಮತ್ತು ಪ್ರತಿಯೊಂದೂ ವಿಷಯ ಕುರಿತು ಆಯೋಗದ ಸದಸ್ಯರು ಮತ್ತು ಸಿಬ್ಬಂದಿಗಳೊಂದಿಗೆ ಚರ್ಚಿಸಲಾಯಿತು.'' ಲೆಡೆಜಿನ್ಸ್ಕಿ ಭಾರತ ಸರಕಾರದೊಂದಿಗೆ ಗಂಭೀರವಾಗಿ ತೊಡಗಿಸಿಕೊಂಡಿದ್ದರು, ಅಲ್ಲದೆ ಅವರು ಹಲವು ಸಂದರ್ಭಗಳಲ್ಲಿ ಭಾರತದಲ್ಲಿ ಭೂ ಸುಧಾರಣೆ ಕುರಿತು 'ಏನು ಮಾಡಬೇಕು' 'ಏನು ಮಾಡಬಾರದು'ದೆಂದು ಇಲಾಖೆಗಳಿಗೆ ಮತ್ತು ಯೋಜನಾ ಆಯೋಗಕ್ಕೆ ತಿಳುವಳಿಕೆ ನೀಡುತ್ತಿದ್ದರು. ಅವರು ಮತ್ತೆ ಫೋರ್ಡ್ ಫೌಂಡೇಶನ್ ಕೆಲಸಗಳ ಮಾರ್ಗದರ್ಶಕರಾಗಿ 1961-1964ರ ಸಾಲಿನಲ್ಲಿ ಭಾರತಕ್ಕೆ ಮರಳಿ ಬಂದರು. ಈ ಐದು ವರ್ಷಗಳ ಅವಧಿಯಲ್ಲಿ ಅವರು ಭಾರತ ಸರಕಾರದ ಕೆಲಸ ಕಾರ್ಯಗಳ ಬಗ್ಗೆ ಬೋಧನೆ ಮಾತ್ರ ಮಾಡಲಿಲ್ಲ, ಅದರ ಜೊತೆಗೆ ಸಾಮ್ರಾಜ್ಯಶಾಹಿ ಅಮೆರಿಕಾ ಮಾದರಿಯ ಭೂ ಸುಧಾರಣೆಯನ್ನು ಪ್ರಚಾರ ಮಾಡಲು ನೇಪಾಳ, ಫಿಲಿಫೈನ್ಸ್ ಮತ್ತು ಎರಡು ಬಾರಿ ಇಂಡೋನೇಷಿಯಾಕ್ಕೆ ಪ್ರವಾಸ ಕೈಗೊಂಡರು.  ನಂತರ ಅವರು ವಿಶ್ವ ಬ್ಯಾಂಕಿನ ವ್ಯಕ್ತಿಯಾಗಿ ಭೂ ಸುಧಾರಣೆಯನ್ನು ಹೊರತು ಪಡಿಸಿ 'ತಾಂತ್ರಿಕ ಅಭಿವೃದ್ಧಿ', 'ಹಸಿರು ಕ್ರಾಂತಿ' ಒಳಗೊಂಡು ಕೃಷಿಯ ಬೇರೆ ಬೇರೆ ಸಮಸ್ಯೆಗಳಿಗೆ ತಮ್ಮ ಗಮನ ಕೇಂದ್ರೀಕರಿಸಿ ಭಾರತದಲ್ಲಿ (1964-1975) ನೆಲೆಯೂರಿದರು. ಈ ವರ್ಷಗಳಲ್ಲಿ ಅವರು 'ಸುಧಾರಕ'ರ ಹಾಗೆ ನಟಿಸಿದರು, ಅಲ್ಲದೆ ತೃತೀಯ ಜಗತ್ತಿನ ಕೃಷಿಕ್ಷೇತ್ರವನ್ನು ಸಾಮ್ರಾಜ್ಯವಾದಿ ಬಂಡವಾಳಕ್ಕೆ ಗುರಿಯಾಗಿರಿಸಿ ಬದಲಾವಣೆಯ ಏಜೆಂಟರಾಗಿ ಕಾರ್ಯ ನಿರ್ವಹಿಸಿದರು. ಅವರನ್ನು 1966ರಲ್ಲಿ ಇರಾನ್ ಮತ್ತು ಮೆಕ್ಸಿಕೊಗಳಲ್ಲಿ ಸಾಂಪ್ರದಾಯಿಕ ಬ್ಯಾಂಕ್ ಪ್ರಚಾರಕರಿಗೆ ಹೆಚ್ಚು ಸಹಾಯ ಮಾಡಲು ಕೇಳಿಕೊಳ್ಳಲಾಗಿತ್ತು.''. ಅವರು ಈ ಅವಧಿಯಲ್ಲಿ 'ನಲವತ್ತೇಳು ಲೇಖನಗಳು' ಮತ್ತು 'ಭಾರತ ಕುರಿತು-ನಲವತ್ತೊಂದು ಲೇಖನಗಳು' ಬರೆಯುತ್ತಾರೆ, ಅಲ್ಲದೆ ಪಂಜಾಬ್, ಬಿಹಾರ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಬಂಗಾಳ, ಪೂರ್ವ ಉತ್ತರ ಪ್ರದೇಶಗಳಲ್ಲಿ ವಿಸ್ತೃತ 'ಕ್ಷೇತ್ರ ವೀಕ್ಷಣೆ' ಮಾಡುತ್ತಾರೆ.''
ಈ ಅವಧಿಯಲ್ಲಿ ಲೆಡೆಜಿನ್ಸ್ಕಿ ಭೂ ಸುಧಾರಣೆಯ ತಂತ್ರೋಪಾಯಗಳನ್ನು ಅಭಿವೃದ್ಧಿ ಪಡಿಸುತ್ತಾರೆ. ಅವರು 'ಭೂ ಹಂಚಿಕೆ' ಬದಲು 'ಭೂ ಮಿತಿ'ಯನ್ನು ಭಾರತದ ಮುಂದಿಡುತ್ತಾರೆ. ಕಳೆದ ಶತಮಾನದ ಅರವತ್ತು ಮತ್ತು ಎಪ್ಪತ್ತರ ದಶಕದ ಬೆಳವಣಿಗೆಯಾದ ರೈತ ಚಳವಳಿಗಳನ್ನು ಪರಿಗಣಿಸಿ, ಅಪಾಯದ ವಿರುದ್ಧ ಹೋರಾಡಲು 'ಭೂ ಸುಧಾರಣೆ' ಕಾರ್ಯಕ್ರಮವನ್ನು ಚುರುಕುಗೊಳಿಸಬೇಕೆಂದು ಅವರು ಸರಕಾರಕ್ಕೆ ಬೋಧನೆ ಮಾಡಿದ್ದಾರೆ.
ಈ ಸಂಬಂಧದಲ್ಲಿ ಲೆನಿನ್ ಎರಡು ಹಾದಿಗಳ ಸಾಧ್ಯತೆ ಬಗ್ಗೆ ಬಿಚ್ಚುನೋಟ ಹರಿಸಿದ್ದಾರೆ: ವಸ್ತುನಿಷ್ಟವಾಗಿ ಸಾಧ್ಯವಾಗುವ ಮಧ್ಯಮ ವರ್ಗದ ಬಂಡವಾಳದಾರ ಬೆಳವಣಿಗೆಯ ಆ ಎರಡು ಹಾದಿಗಳನ್ನು ನಾವು ಪ್ರಷ್ಯಾದ ಹಾದಿ ಮತ್ತು ಅಮೆರಿಕೆಯ ಹಾದಿ ಎಂದು ಕ್ರಮವಾಗಿ ಕರೆಯುತ್ತೇವೆ. ಮೊದಲ ಹಂತದಲ್ಲಿ ಊಳಿಗಮಾನ್ಯ ಜಮೀನ್ದಾರಿ ಆರ್ಥಿಕತೆ ನಿಧಾನವಾಗಿ ಮಧ್ಯಮ ವರ್ಗದ ಬಂಡವಾಳದಾರರ ಜಂಗು ಹಿಡಿದ ಜಮೀನ್ದಾರಿ ಆರ್ಥಿಕತೆಯಾಗಿ ವಿಕಾಸ ಹೊಂದುತ್ತದೆ. ಇದು ರೈತರನ್ನು ದಶಕಗಳ ಕಾಲ ಖಂಡಿಸಿ ಅವರ ಸ್ವಾಧೀನದಲ್ಲಿದ್ದ ಆಸ್ತಿಯನ್ನು ಬಹುಪಾಲು ಕಸಿದುಕೊಂಡು ಜೀತಕ್ಕೆ ತಳ್ಳುವ ಕಾಲದಲ್ಲೆ ಅಲ್ಪಸಂಖ್ಯಾತ ದೊಡ್ಡ ರೈತರು ತಲೆ ಎತ್ತಲು ಅವಕಾಶ ಮಾಡಿಕೊಡುತ್ತದೆ. ಎರಡನೆಯ ಹಂತದಲ್ಲಿ ಜಮೀನ್ದಾರಿ ಆರ್ಥಿಕತೆ ಇರುವುದಿಲ್ಲ ಇಲ್ಲವೆ ಜಹಗೀರು ತೊಡೆದು ಹಾಕಿ, ಮುಟ್ಟುಗೋಲು ಹಾಕಿಕೊಂಡ ಕ್ರಾಂತಿಯಿಂದ ನಾಶವಾಗಿರುತ್ತದೆ. ರೈತ ಪ್ರಮುಖವಾಗಿದ್ದ ಸಂದರ್ಭದಲ್ಲಿ ಆತ ಕೃಷಿಯ ಏಕೈಕ ವಕ್ತಾರನಾಗಿ ಬದಲಾಗಿರುತ್ತಾನೆ, ಬಂಡವಾಳವಾದಿ ರೈತನಾಗಿ ವಿಕಾಸ ಹೊಂದಿರುತ್ತಾನೆ. ಊಳಿಗಮಾನ್ಯ ಗುಲಾಮಗಿರಿ ದಾಸ್ಯತನವಾಗಿ ಮತ್ತು ಜಂಗು ಹಿಡಿದ ಊಳಿಗಮಾನ್ಯ ಜಮೀನ್ದಾರ ಭೂಮಿ ಕುರಿತು ಬಂಡವಾಳವಾದಿಗಳ ಶೋಷಣೆಯಾಗಿ ಬದಲಾವಣೆಯಾಗುವುದು- ಮೊದಲ ಹಂತದಲ್ಲಿನ ವಿಕಾಸದ ಮುಖ್ಯಾಂಶವಾಗಿದೆ. ಪಿತೃ ಪ್ರಧಾನ ರೈತನು ಮಧ್ಯಮ ವರ್ಗದ ಬಂಡವಾಳದಾರ ರೈತನಾಗಿ ಬದಲಾವಣೆ ಹೊಂದುವುದು - ಎರಡನೆಯ ಹಂತದ ಪ್ರಧಾನ ಹಿನ್ನೆಲೆಯಾಗಿದೆ.''
ರಷ್ಯಾದ ಆರ್ಥಿಕ ಚರಿತ್ರೆಯಲ್ಲಿ ಈ ಎರಡು ಬಗೆಯ ವಿಕಾಸಗಳು ಸ್ಪಷ್ಟವಾದ ಸಾಕ್ಷ್ಯಾಧಾರಗಳಿಂದ ಕೂಡಿದ್ದು ಈ ಕುರಿತು ವಿವರಿಸಬೇಕಾದ ಅಗತ್ಯವಿಲ್ಲ. ಉತ್ಪಾದನಾ ಶಕ್ತಿಯ ಬೆಳೆವಣಿಗೆ ಮತ್ತು ಬಂಡವಾಳಶಾಹಿ ಅಭಿವೃದ್ಧಿಯ ಎರಡನೆಯ ಹಂತದಲ್ಲಿ ಜಮೀನ್ದಾರಿ ರೈತರ ಪರವಾದ ಸುಧಾರಣೆಗಿಂತ ಹೆಚ್ಚು ವೇಗವಾಗಿರುತ್ತದೆ, ವಿಶಾಲವಾಗಿರುತ್ತದೆ.
ಲೆನಿನ್ ರ ಅನ್ವಯ ಮೊದಲನೆಯ ಹಾದಿ ಬಂಡವಾಳವಾದಿ ಮತ್ತು ಬಂಡವಾಳವಾದಿ ಜಮೀನ್ದಾರರಿಗೆ ಅನುಕೂಲಕರವಾಗಿದೆ. ಏಕೆಂದರೆ ಇದು ಅವರ ಆಳ್ವಿಕೆಗೆ ಕಡಿಮೆ ಅಪಾಯಕರವಾಗಿದೆ. ಈ ಹಾದಿಯಲ್ಲಿ ಪ್ರಭುತ್ವ ಅವಲಂಬಿತ ರೈತನು ಕೃಷಿಕ್ರಾಂತಿಗೆ ಸಹಾಯಕನಾಗಿರುತ್ತಾನೆ, ಕ್ರಾಂತಿಕಾರಕ ಭೂ ಸುಧಾರಣೆ ಮಾಡಬೇಕೆನ್ನುವ ಹಂಬಲ ಕೈ ಬಿಟ್ಟಿರುತ್ತಾನೆ. ಮತ್ತೊಂದೆಡೆ ಕಮ್ಯೂನಿಸ್ಟ್ ರ ಕ್ರಾಂತಿಕಾರಿ ಭೂ ಸುಧಾರಣಾ ಕಾರ್ಯಕ್ರಮದ ಚಳವಳಿ ದೊಡ್ಡ ಬಂಡವಾಳದಾರರನ್ನು ಮತ್ತು ಜಮೀನ್ದಾರರ ಆಳ್ವಿಕೆಯನ್ನು ಕಿತ್ತು ಬಿಸುಡುತ್ತದೆ. ಅದು ಬಂಡವಾಳಶಾಹಿ ದೋಚುವಿಕೆಯನ್ನೂ ಕೊನೆಗೊಳಿಸುತ್ತದೆ.
ಮಧ್ಯಮ ವರ್ಗದ ಬಂಡವಾಳದಾರ, ಜಮೀನ್ದಾರ ಪರವಾದ ಅರೆ-ಊಳಿಗಮಾನ್ಯ ಕೃಷಿ ಆರ್ಥಿಕತೆ, ಹಳೆಯ ಊಳಿಗಮಾನ್ಯ ಪದ್ಧತಿಗಳ ನಿಧಾನ ಬದಲಾವಣೆಯ ಹಿಂದಿರುವ ಸಾಮ್ರಾಜ್ಯವಾದಿ ತಂತ್ರೋಪಾಯಗಳನ್ನು ಲೆನಿನ್ ನೂರು ವರುಷಗಳ ಹಿಂದೆಯೆ ವಿಶ್ಲೇಷಿಸಿ ಬಯಲಿಗೆಳೆದಿದ್ದಾರೆ. ಲೆನಿನ್ ಬಯಲಿಗೆಳೆಯುತ್ತ ಮಾಡಿರುವ ಸ್ಪಷ್ಟನೆಯೆಂದರೆ ಶ್ರಮಿಕ ವರ್ಗದ ನಾಯಕತ್ವದಡಿಯಲ್ಲಿ ನಡೆಯುವ ಕ್ರಾಂತಿಕಾರಿ ಕೃಷಿ ಕಾರ್ಯಕ್ರಮ ಮಾತ್ರ ವಿಶಾಲ ರೈತ ಸಮೂಹದ ಹಿತದೃಷ್ಟಿಯಿಂದ ಊಳಿಗಮಾನ್ಯ ಪದ್ಧತಿಯನ್ನು ನಾಶ ಪಡಿಸುತ್ತದೆ. ಲೆನಿನ್ ರ ಪ್ರಕಾರ ಕೃಷಿ ಕಾರ್ಯಕ್ರಮದ ಮುಖ್ಯ ಘೋಷಣೆಗಳೆಂದರೆ- ಉಳುವವನಿಗೆ ಭೂಮಿ'', ಜಮೀನ್ದಾರ ಭೂಮಿಯ ಮುಟ್ಟುಗೋಲು''.


ಪಶ್ಚಿಮ ಬಂಗಾಳದ ಎಡ ಸರಕಾರದ ಭೂಸುಧಾರಣೆ ಕಾರ್ಯಕ್ರಮದ ಸಂಕ್ಷಿಪ್ತ ಸಾರಾಂಶ
ಈಗ ಪಶ್ಚಿಮ ಬಂಗಾಳದ ಭೂ ಸುಧಾರಣೆಯನ್ನು ಪರಿಶೀಲನೆ ಮಾಡೋಣ. ವೂಲ್ಫ್ ಲೆಡೆಜಿನ್ಸ್ಕಿಯವರ ನಿರ್ದೇಶನಗಳನ್ನು ಪಶ್ಚಿಮ ಬಂಗಾಳದಲ್ಲಿ ಎಡರಂಗ ಸರಕಾರ ಜಾರಿಗೆ ತಂದಿತೆಂಬುದು ಕುತೂಹಲ ಹುಟ್ಟಿಸುತ್ತದೆ. ಪಶ್ಚಿಮ ಬಂಗಾಳದ ಭೂ ಸುಧಾರಣೆಗಳು ಲೆಡೆಜಿನ್ಸ್ಕಿಯವರ ನಿಯಮನಗಳನ್ನು ಆಧರಿಸಿದ್ದೆಂದು ಪಶ್ಚಿಮ ಬಂಗಾಳ ಸರಕಾರದ ಆರ್ಥಿಕ ಸರ್ವೇಕ್ಷಣೆ 2004ರಲ್ಲಿ ಎಡರಂಗ ಸರಕಾರ ಒಪ್ಪಿಕೊಂಡಿತ್ತು..
ಪಶ್ಚಿಮ ಬಂಗಾಳದ ಭೂ ಸುಧಾರಣೆ ಎರಡು ಹಂತಗಳಲ್ಲಿ ನಡೆದಿದೆ. ಮೊದಲನೆಯದು ಸಂಯುಕ್ತ ರಂಗ ಸರಕಾರದಡಿ 1967-70ರಲ್ಲಿ ನಡೆಯಿತು. ಎರಡನೆಯದು 1977ರ ನಂತರದಲ್ಲಿ ಎಡರಂಗದ ಸರಕಾರದಿಂದಲೆ ನಡೆಯಿತು.
1967ರಲ್ಲಿ ಕಾಂಗ್ರೆಸ್ ಸರಕಾರವನ್ನು ಸೋಲಿಸಿದ ಸಂಯುಕ್ತ ರಂಗ ಅಧಿಕಾರಕ್ಕೆ ಬಂದಿತು. ಫೆಬ್ರವರಿ 1967ರಲ್ಲಿ ಸಂಯುಕ್ತ ರಂಗದ ಮೊಟ್ಟಮೊದಲ ಮುಖ್ಯಮಂತ್ರಿ ಅಜಯ್ ಮುಖರ್ಜಿ ಅವರ ನೇತೃತ್ವದಲ್ಲಿ ಜ್ಯೋತಿಬಸು ಅವರು ಉಪಮುಖ್ಯಮಂತ್ರಿಯಾಗಿದ್ದು ಗೃಹ ಖಾತೆಯ ಮೇಲ್ವಿಚಾರಣೆಯನ್ನೂ ನಡೆಸುತ್ತಿದ್ದರು. ಸಂಯುಕ್ತ ರಂಗ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ನಕ್ಸಲ್ ಬಾರಿ ಕಾರ್ಯಕರ್ತರು ಕೃಷಿಕ್ರಾಂತಿಯ ಕಾರ್ಯಕ್ರಮವಾದ ರೈತ ದಂಗೆಗಳನ್ನು ಮುಂದೂಡಿದರು. ಅಲ್ಲದೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಆರಂಭಿಸಿದರು ಮತ್ತು  ಭೂ ಹೀನರಿಗೆ ಮತ್ತು ಬಡ ರೈತರಿಗೆ ಆ ಭೂಮಿಯನ್ನು ಹಂಚತೊಡಗಿದರು. ಸಂಯುಕ್ತ ರಂಗ ಸರಕಾರ ಮತ್ತು ಅದರ ಮುಖ್ಯ ಪಾಲುದಾರ ಪಕ್ಷವಾದ ಸಿಪಿಎಂ ಮತ್ತದರ ಮಂತ್ರಿಗಳಾದ ಜ್ಯೋತಿ ಬಸು ಮತ್ತು ಹರೇಕೃಷ್ಣ ಕೊನಾರ್ ರಂಥವರು ನಕ್ಸಲ್ ಬಾರಿ ರೈತ ಚಳವಳಿಯನ್ನು ವಿರೋಧಿಸಿದರು. ಭೂಮಿ ಮುಟ್ಟುಗೋಲು ಹಾಕಿಕೊಂಡ ಕ್ರಮವನ್ನು ಒಟ್ಟಾರೆಯಾಗಿ ಕಾನೂನು ಬಾಹಿರ ಕ್ರಮವೆಂದು ಘೋಷಿಸಿದರು. ಹೋರಾಟವನ್ನು ವಾಪಸು ಪಡೆಯಲು ಅವರು ಸೂಚಿಸಿದರಲ್ಲದೆ ಕಾನೂನು ಪ್ರಾಧಿಕಾರದ ಮೂಲಕ ಹೆಚ್ಚುವರಿ ಭೂ ಮಿತಿಯ  ಭೂ ಪ್ರಕ್ರಿಯೆ ನಡೆಯಬೇಕೆಂದು ಒತ್ತು ಹಾಕಿದರು.
ಪಶ್ಚಿಮ ಬಂಗಾಳದ ಸಂಯುಕ್ತ ರಂಗ ಸರಕಾರ ನಕ್ಸಲ್ ಬಾರಿ ಚಳವಳಿಗೆ ಹೆದರಿ 1967ರಲ್ಲಿ 1955ರ ಭೂಮಿತಿ ಕಾಯ್ದೆಯನ್ನು ಜಾರಿಗೆ ತಂದಿತು. 1967ರಿಂದ 300,000 ಎಕರೆ (ಸುಮಾರು) ಭೂಮಿ ವಶದಲ್ಲಿರುವುದಾಗಿ ಘೋಷಿಸಿತು. ಇದು ದೊಡ್ಡ ಜಮೀನ್ದಾರರು ಒಪ್ಪಿಸಿದ ಭೂಮಿಯಾಗಿತ್ತು. 1970ರಿಂದ ಮಿಲಿಯನ್ ಎಕರೆ ಭೂಮಿ ಪಶ್ಚಿಮ ಬಂಗಾಳದ ವಶದಲ್ಲಿ ಉಳಿಯಿತು. ಈ ಭೂಮಿಯನ್ನು ಬಡ ಮತ್ತು ಭೂ ಹೀನ ರೈತರ ನಡುವೆ ಹಂಚಲಾಯಿತು. ಇದರ ಫಲವಾಗಿ ಸಾಮ್ರಾಜ್ಯವಾದಿ ಯೋಜನೆಗಳ ಪರವಾಗಿದ್ದು ಸುಧಾರಣಾವಾದಿ ಸಿಪಿಎಂ ಕೃಷಿಕ್ರಾಂತಿಯ ನಂಬಿಕೆಗೆ ತಕ್ಕಂತೆ ಸ್ಪಂದಿಸಿತು.
ಹೀಗೆ ಸಾಮ್ರಾಜ್ಯಶಾಹಿ ತೋರಿದ ಹಾದಿಯಲ್ಲಿ ಹೆಜ್ಜೆ ಹಾಕಿದ ಎಡವಾದಿ ಪಕ್ಷಗಳಾದ ಸಿಪಿಎಂನಿಂದ ಲೆಡೆಜಿನ್ಸ್ಕಿಯವರ ಕನಸು ಪಶ್ಚಿಮ ಬಂಗಾಳದಲ್ಲಿ ಈಡೇರಿತು. ಸಿಪಿಎಂ ಹಳೆಯ ಕ್ರಾಂತಿಕಾರಿ ಮಾರ್ಗವನ್ನು ನಿಷೇಧಿಸಿ 'ಮೇಲು ಹಂತ'ದ ಸುಧಾರಣೆಗಳ ಹಾದಿಗೆ ಹೊಂದಿಕೊಂಡಿತು.
ಲೆಡೆಜಿನ್ಸ್ಕಿಯವರ ಸಲಹೆಗಳನ್ನು ಪಡೆದ ಪಶ್ಚಿಮ ಬಂಗಾಳದ ಎಡರಂಗ ಸರಕಾರ 80ರಲ್ಲಿ 'ಬಾರ್ಗಾ ಕಾರ್ಯಾಚರಣೆ'ಯನ್ನು ನಡೆಸಿತು. ಇದು ಆಡಳಿತಗಾರರಿಂದಷ್ಟೇ ಅಲ್ಲದೆ ವಿಶ್ವ ಬ್ಯಾಂಕ್, ಎಫ್ಎಒ, ವಿಶ್ವ ಸಂಸ್ಥೆ, ಮತ್ತು ಸಾಮ್ರಾಜ್ಯವಾದಿ ಅಮೆರಿಕೆಗಳಿಂದಲೂ ವ್ಯಾಪಕ ಬೆಂಬಲ ಪಡೆಯಿತು. ಎಡರಂಗ ಸರಕಾರ ಮುಕ್ತವಾಗಿ ಮುಂದೆ ಬಂದು ತಾನು ಸಾಮ್ರಾಜ್ಯಶಾಹಿ ಅಮೆರಿಕೆಯ ಅತ್ಯುತ್ತಮ ಅಧೀನ ಸೇವಕ ಎಂಬುದನ್ನು ಸಾಧಿಸಿ ತೋರಿಸಿತು.


ಬಾರ್ಗಾ ಕಾರ್ಯಾಚರಣೆ- ಸಾಮ್ರಾಜ್ಯವಾದಿ ನೀಲಿನಕ್ಷೆ
ಪಶ್ಚಿಮ ಬಂಗಾಳ ಸರಕಾರ ತನ್ನ 2004ರ ಸರ್ವೇಕ್ಷಣೆ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ: (.) ಯಾವುದೇ ಬಗೆಯ ಸಂಘಟನೆಯನ್ನು ಹೊಂದಿಲ್ಲದ ಮತ್ತು ಸಂಖ್ಯಾಪ್ರಮಾಣ ಎಷ್ಟೇ ಇದ್ದರೂ ಅವರು (ಭೂ ಹೀನ ಮತ್ತು ಅರೆ-ಭೂ ಹೀನ) ಬಡವರು ಮಾತ್ರವಲ್ಲ ರಾಜಕೀಯ ಶಕ್ತಿ ಇಲ್ಲದವರು. ಪ್ರಚಲಿತ ಕಾಲದಲ್ಲಿ ತೀವ್ರ ಎಡಪಕ್ಷಗಳು ಒಳಗೊಂಡಂತೆ ಯಾವುದೇ ಪಕ್ಷಗಳೂ ಅಂಥ ಕಾರ್ಯವನ್ನು ಕೈಗೆತ್ತಿಕೊಳ್ಳಲು ಅರ್ಹವಾಗಿಲ್ಲ ಅಥವಾ ಇಷ್ಟವಿಲ್ಲ.  ನಾಲ್ಕೈದು ವರ್ಷಗಳ ಹಿಂದಿನ ಸಂಯುಕ್ತ ರಂಗ ಸರಕಾರದ ದಿನಗಳಲ್ಲಿ ಕಮ್ಯೂನಿಸ್ಟರೆ ಪ್ರಬಲವಾಗಿದ್ದಂಥ ಕಾಲ ಹೊರಟು ಹೋಯಿತು. ಕಮ್ಯೂನಿಸ್ಟ್ ಕಾರ್ಯಕರ್ತರು 'ವಶ ಪಡಿಸಿಕೊಂಡಿದ್ದ' ಭೂಮಿ ಅಥವಾ 300,000 ಎಕರೆಯನ್ನು ಆಯಾ ಮಾಲೀಕರಿಗೆ ಹಿಂದಿರುಗಿಸಲಾಗಿದ್ದು, ಬಹುಪಾಲು ವಶಪಡಿಸಿಕೊಂಡವರು ತಮ್ಮ ಕಾಲವನ್ನು ಜೈಲಿನಲ್ಲಿ ಕಳೆಯುತ್ತಿದ್ದಾರೆ. ಈ ಬಗೆಯ ರಾಜಕೀಯ ಏರು-ಪೇರುಗಳಲ್ಲಿ ಭೂ ಹೀನರು ಮತ್ತು ಪಾಲಿಗಾಗಿ ಕೃಷಿ ಮಾಡುತ್ತಿದ್ದವರು ಮೇಲೇರಿದ್ದರೂ ಆದಾಯವಿಲ್ಲದೆ ಉಳಿದಿರುವುದು ಅಚ್ಚರಿಯಾಗುಳಿದಿಲ್ಲ. ಅವರ ಬಹುಕಾಲದ ಯಾತನೆಯ ಮುಖದಲ್ಲಿ ಮತ್ತು ವರ್ಷದಲ್ಲಿ ಕೊನೇ ಪಕ್ಷ ಕೆಲವು ತಿಂಗಳಾದರೂ ಕೆಲಸ ನೀಡಿದವರನ್ನು ಬಿಟ್ಟು ದೂರ ಹೋದರೆ ನಷ್ಟವಾದೀತೆಂದು ಹೆದರಿರುವುದು ಅಚ್ಚರಿಯ ಸಂಗತಿಯೇನಲ್ಲ.''
'ಬಡವರು ಚೆನ್ನಾಗಿ ಊಟ ಮಾಡುವುದೆ ಕಡಿಮೆಯಾದರೂ ಅವರ ಕೈಯಳತೆಯಲ್ಲಿರುವ ಕೊಳ್ಳುವ ಶಕ್ತಿಗಿಂತ ಉತ್ಪಾದಿಸುವ ಕೆಲಸ ಹೆಚ್ಚು, ಹೀಗಿರುವಾಗ ಕೃಷಿಕ್ಷೇತ್ರ ಬೆರಳಣಿಕೆಯ ಶ್ರೀಮಂತ ರೈತರ ಕೈಯಲ್ಲೆ ಮುಂದುವರೆದರೆ ಅವರ ಉತ್ಪಾದಿಸುವ ಕೆಲಸ 'ಆದಾಯದ' ಭಾಗವಾಗುವುದು ಕಷ್ಟವಾದರೂ ಕೆಳಮಟ್ಟದಲ್ಲೆ ಉಳಿಯುತ್ತದೆ. ಹಾಗಾಗಿಯೆ ಭೂ ಸುಧಾರಣೆ- ಭೂ ಮರುಹಂಚಿಕೆಯೆ ಸ್ವತಃ ಭೂ ಅಸಮಾನತೆ ಮತ್ತು ಇತರ ಆದಾಯ ಗಳಿಕೆ ಆಸ್ತಿ ವಿರುದ್ಧ ತಾನೇ ಸ್ಪಷ್ಟವಾಗಿ ನಿವಾರಣೆ ಮಾಡುವ ರಕ್ಷಣಾ ಸೂಚಕವಾಗಿಬಿಟ್ಟಿದೆ. ಇದು ಎಣಿಕೆ ಮಾಡಿದಂತೆ ಅಸಮಾನತೆಯ ಮೂಲಕಾರಣವನ್ನು ಮತ್ತು ಅದರ ನಿರಂತರತೆಯನ್ನು ಹೊಡೆದುಹಾಕುತ್ತದೆ. ಇದನ್ನು ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಮಾಡುವುದಕ್ಕಿಂತ ಸುಲಭವಾಗಿ
ಹೇಳುತ್ತಾರೆ. ಜೇಬು ಭರ್ತಿ ಮಾಡುವುದರ ಮೇಲೆಯೆ ಒಡೆತನದ ಕಣ್ಣಿದ್ದು, ಶೇಕಡ ಐವತ್ತು ಭೂ ಒಡೆತನವಿರುವ ಶೇಕಡ ಐದರಷ್ಟು ಜನ ತೆಳ್ಳಗಾಗುತ್ತಾ ಸಾಗುವ ಪ್ರಕ್ರಿಯೆಯಲ್ಲಿ ನಿಲ್ಲುತ್ತಾರೆ, ಆದರೂ ಬಡವರಲ್ಲಿ ಬಡವರು, ಭೂಮಿಯ ಮೇಲೆ ಯಾವ ಹಕ್ಕಗಳೂ ಇಲ್ಲದ ಭೂ ಹೀನರು ಯಾವುದೇ ಬಗೆಯ ಪಾಲಿಗೆ ಮುಂದೆ ಬರುವುದು ತುಂಬಾ ಕಷ್ಟಕರವಾಗಿದೆ.''
ಹೀಗಿದ್ದರೂ ಈ ಪ್ರಸ್ತಾವ ಹೆಚ್ಚು ಕಡಿಮೆ ಬೌದ್ಧಿಕವಾದುದೆ. ಯಾವುದೇ ಮರುಹಂಚಿಕೆ ಕಾರ್ಯಕ್ರಮದ ರಾಜಕೀಯ ಹವಾಮಾನ ಸರಿ''ಯಾಗಿಲ್ಲ, ಭೂ ಮರುಹಂಚಿಕೆಯಾದ ಅಗತ್ಯ ಜನರಿಗೆ ನ್ಯಾಯ ಸಮ್ಮತ ಭೂಮಿತಿ, ಮತ್ತದರ ಅಂತಿಮ ಪರಿಣಾಮ-ನಂತರದ ಬೆಳವಣಿಗೆಗಳು ವಿವರಿಸಿರುವ ಹಾಗೆ -ತೀರಾ ಕಡಿಮೆ ಪ್ರಮಾಣವೆಂದು ತಳ್ಳಿ ಹಾಕಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಭೂಮಿತಿ ಕಾಯ್ದೆಯಡಿ ಮರುಹಂಚಿಕೆಗಾಗಿ ಉದ್ದೇಶಿತವಾದ ಪ್ರದೇಶವೆಂದರೆ 452,000 ಎಕರೆ. ಕಳೆದ ಎರಡು ವರ್ಷಗಳಲ್ಲಿ 58,000 ಎಕರೆ ವಶ ಪಡಿಸಿಕೊಂಡಿದ್ದು, 5000 ಎಕರೆ ಹಂಚಿಕೆಯಾಗಿದೆ. ವಿವಾದಕ್ಕೆ ಒಳಪಟ್ಟ ಉಳಿದ ಭೂ ಹಂಚಿಕೆ ವಿಚಾರ ನ್ಯಾಯಾಲಯಗಳಲ್ಲಿದೆ.''
ಒಂದು ವರ್ಗದ ಬಡವರಿಗೆ ಸಹಾಯ ಮಾಡಬಹುದಾದ ಪರಿಹಾರದ ಹಾದಿಯೆಂದರೆ-ಅವರ ಸಮಸ್ಯೆಯನ್ನು ಪರಿಹರಿಸು ವುದಲ್ಲ- ಭೂ ಹಂಚಿಕೆ ಸುಧಾರಣೆಯಿಂದ ಪ್ರಸಿದ್ಧ ಪಡಿಸಿದ ಹಾಗೆ ಪಾಲು ಅಥವಾ ಗೇಣಿ ರೈತರಿಗೆ ಹಿಡುವಳಿ ಹಕ್ಕಿನ ಸಂಪೂರ್ಣ ರಕ್ಷಣೆ ನೀಡುವುದು. ಅಂದರೆ ಈಗಾಗಲೆ ನೆಲೆಸಿರುವ ನ್ಯಾಯಯುತ ಗೇಣಿ, ಗೊಬ್ಬರ ಬೀಜ ಮೊದಲಾದ ಕೃಷಿ ಬಳಕೆ ಸಾಮಗ್ರಿಗಳಲ್ಲಿ ಪಾಲು ವ್ಯವಸ್ಥೆ, ಭೂಮಿಯ ದಾಖಲಿತ ಹಕ್ಕುಗಳು, ಅಸಮತೆಗೆ ಕೊನೆ, ಮತ್ತು  ಅವರ ಕೃಷಿ ಚಟುವಟಿಕೆಗಳಿಗೆ ಸಾಂಸ್ಥಿಕ ಹಣಕಾಸು ನೆರವನ್ನು ಭರವಸೆಯಂತೆ ತಲುಪಿಸುವುದು (.)'' (ಮೂಲ: 'ಪಶ್ಚಿಮ ಬಂಗಾಳದಲ್ಲಿ ಆಹಾರದ ಕೊರತೆ- ಸಮಸ್ಯೆ ಅಥವಾ ಕಾಯಿಲೆ?',  ಲೆಡೆಜಿನ್ಸ್ಕಿ ಲೇಖನಗಳು ; ಉಧೃತ: 'ಆರ್ಥಿಕ ಸರ್ವೇಕ್ಷಣೆ 2004', ಪಶ್ಚಿಮ ಬಂಗಾಳ ಸರಕಾರ, ಪುಟ.37).
ಹೀಗೆ ಲೆಡೆಜಿನ್ಸ್ಕಿಯವರ ಕನಸು ಸಾಮ್ರಾಜ್ಯವಾದಿಗಳಿಂದ ನಿಯಮಿತಗೊಂಡ ಹಾದಿಯಲ್ಲಿ 'ಎಡ' ಪಕ್ಷಗಳಿಂದ ಕಂಡ ಭಾರತವಾಗಿತ್ತು. 'ಹಳೆಯ' ಕ್ರಾಂತಿಕಾರಕ (ಕೂಲಿ ಕಾರ್ಮಿಕರ-ರೈತರ) ಹಾದಿಯನ್ನು 'ಎಡವಾದಿ'ಗಳಿಂದ ಕಳೆದ ಶತಮಾನದ ಅರವತ್ತರ ಕೊನೆಯಲ್ಲಿ ನಿಷೇಧಿತವಾಯಿತು.
ಡಿ.ಬಂಡೋಪಾಧ್ಯಾಯ ಅವರು 2003, ಜುಲೈ 5ರ ಈಪಿಡಬ್ಲ್ಯು ಸಂಚಿಕೆಯಲ್ಲಿ ಹೀಗೆ ಬರೆಯುತ್ತಾರೆ: ಸಂಯುಕ್ರ ರಂಗದ ಎರಡೂ ಸರಕಾರಗಳಲ್ಲಿ ಭೂ ಕಂದಾಯ ಮಂತ್ರಿಯಾಗಿದ್ದ ಹರೆಕೃಷ್ಣ ಕೊನಾರ್ ಅವರು ಬೇನಾಮಿ ಆಗಿರಲಿ ಇಲ್ಲವೆ ಅನ್ಯ ಮಾರ್ಗದ ಮೂಲಕ ಗುಟ್ಟಾಗಿ ಪಡೆದಿರಲಿ ಒಟ್ಟಾರೆಯಾಗಿ ಖಾಸಗಿ ಭೂಮಿಯ ಕಾನೂನು ಬಾಹಿರ ಮುಟ್ಟಗೋಲನ್ನು ಇಡಿಯಾಗಿ ವಿರೋಧಿಸಿದರು. ಖಾಸಗಿ ಆಸ್ತಿ ಸಂಬಂಧದಲ್ಲಿ ವಿಶ್ವದ ಇತರೆಡೆಯಂತೆ ಪಶ್ಚಿಮ ಬಂಗಾಳದ ರೈತರೂ ಅತಿ ಸಂಪ್ರದಾಯಶೀಲರು ಎಂಬುದು ಅವರ ಸಿದ್ಧಾಂತವಾಗಿತ್ತು. ಯಾವುದೇ ರಾಜಕೀಯ ಪಕ್ಷದಿಂದ ಪ್ರಚೋದನೆ ಪಡೆದು ಅವರು ಕಾನೂನು ವಿರುದ್ಧವಾಗಿ ಅಂಥ ಭೂಮಿಯನ್ನು ವಶಪಡಿಸಿಕೊಂಡಿದ್ದಿರಬಹುದು, ಆದರೆ ಇದನ್ನು ಅವರು ಡಕಾಯಿತ ಕೃತ್ಯವೆಂದೂ ನೋಡಬಹುದು. ರಾಜಕೀಯ ಶಕ್ತಿ ಕೇಂದ್ರ ಎಡಪಂಥೀಯರಿಂದ  ಮಧ್ಯ ಪಂಥೀಯರಿಗೆ ಅಥವಾ ಬಲಪಂಥೀಯರಿಗೆ ಪಲ್ಲಟಗೊಂಡ ಪರಿಣಾಮವಾಗಿ ಅವರು ಈ ಭೂಮಿಯನ್ನು ಪಡೆಯಲಿಲ್ಲ.  ಹಾಗಾಗಿ ಅವರು ಆ ರೀತಿಯಲ್ಲಿ ಸ್ವಾಧೀನ ಪಡಿಸಿಕೊಳ್ಳುವ ಕ್ರಮವನ್ನು ಖಂಡಿಸಿದರು ಮತ್ತು ಕಾನೂನು ಪ್ರಕ್ರಿಯೆಯ ಮೂಲಕ ಹೆಚ್ಚುವರಿ ಭೂಮಿತಿಯ ಪ್ರಾಧಿಕಾರದಡಿ ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಅವರ ನಾಯಕತ್ವದಲ್ಲಿ ರೈತ ಸಭೆಗಳು ಕಂದಾಯ ಅಧಿಕಾರಿಗಳಿಗೆ ಅಧಿಕೃತ ಸಾಕ್ಷಿಗಳನ್ನು ಒದಗಿಸುವ ಮೂಲಕ ಗುಟ್ಟಾಗಿ ಪಡೆದಿದ್ದ ಒಂದು ಮಿಲಿಯನ್ ಎಕರೆ ಫಲವತ್ತಾದ ಭೂಮಿಯನ್ನು ರಾಜ್ಯ ಪ್ರಾಧಿಕಾರದ ವಶಕ್ಕೆ ತರುವ ಕಾರ್ಯವನ್ನು ಇಡಿಯಾಗಿ ಮಾಡಿದವು. ನಿಷ್ಟೂರ ತನಿಖೆಗಳಿಂದ ಮತ್ತು ಭೂ ಮಾಲಿಕರು ತಮ್ಮ ಮೊಕದ್ದಮೆಯ ಅಧಿಕೃತತೆಯನ್ನು ಸಮರ್ಥಿಸಿಕೊಳ್ಳಲು ಅವಕಾಶ ಕೊಡುವ ಸೂಕ್ತ ಪ್ರಕ್ರಿಯೆಯ ಮೂಲಕ ಅಧಿಕಾರಿಶಾಹಿ ವರ್ಗ 'ಹಿಡಿದಿಟ್ಟ' ಭೂಮಿಯನ್ನು ಪತ್ತೆ ಹಚ್ಚುವಲ್ಲಿ ಮಹತ್ವದ ಪಾತ್ರ ವಹಿಸಿತು.''

ಮುಕ್ತಾಯ
ಅತಿಯಾಗಿ ವೈಭವೀಕರಿಸಿದ ಭೂ ಸುಧಾರಣೆಯ ಶಾಸನ ಈಗಿರುವ ಭೂ ಒಡೆತನದ ವಿನ್ಯಾಸದಲ್ಲಿ ಯಾವುದೇ ಮಹತ್ವದ ಗುರುತು ಮಾಡುವಲ್ಲಿ ವಿಫಲವಾಯಿತು ಎಂದು ಈ ಮೇಲಿನ ಚಿತ್ರದಿಂದ ಸ್ಪಷ್ಟವಾಗುತ್ತದೆ. ಇದರ ಪರಿಣಾಮವಾಗಿ ಅರವತ್ತರ ವರೆಗೂ ಉತ್ಪನ್ನದಲ್ಲಿ ಹೆಚ್ಚಳ ಉಂಟಾಗದೆ ಹೋಯಿತು. ಸರಕಾರ ಸಾಮ್ರಾಜ್ಯವಾದಿ ದೇಶಗಳಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿ ದೇಶದ ಜನಸಂಖ್ಯೆಯ ಹಸಿವು ಹಿಂಗಿಸಿತು. ಬಹುಪಾಲು ಬಡ ರೈತರಿಗೆ ಕೊಳ್ಳುವ ಶಕ್ತಿಯ ಕೊರತೆ ಮತ್ತು ಮಿತಿ ಮೀರಿದ ಆಹಾರ ಪದಾರ್ಥಗಳ ಬೆಲೆಗಳ ಫಲವಾಗಿ ವ್ಯಾಪಕ ಅಶಾಂತಿ ಹೆಚ್ಚಿತು. ಈ ಅವಧಿಯಲ್ಲಿ ಆಹಾರ ಸಾಗಣೆ ವಾರ್ಷಿಕ ವ್ಯವಹಾರವಾಯಿತು. ಈ ಕಾಲಾವಧಿ ಪೂರ್ತಿ ಭೂ ಮಿತಿ, ಭೂ ಹಂಚಿಕೆ, ಕ್ರೋಡೀಕರಣ, ಗೇಣಿ ದರ ಏರಿಕೆ, ಭೂ ಸ್ವಾಧೀನ ಮುಂತಾದ ಪ್ರಶ್ನೆಗಳನ್ನ ಕುರಿತು ರೈತ ಚಳವಳಿಗಳ ಮಾಲೆಯೆ ನಡೆಯಿತು. ಈ ಎಲ್ಲ ಚಳವಳಿಗಳು ಕ್ರಮೇಣ ತಮ್ಮ ವೇಗವನ್ನು ಹೆಚ್ಚಿಸಿ 1967ರಲ್ಲಿ ನಕ್ಸಲ್ ಬಾರಿಯಲ್ಲಿ ಕೂಲಿ-ಕಾರ್ಮಿಕರು ಮತ್ತು ರೈತರು ದಂಗೆ ಏಳುವಂತೆ ಮಾಡಿತು. ಕಾಂಗ್ರೆಸ್ ಆಡಳಿತದ ಭೂ ಸುಧಾರಣೆಗಳಿಗೆ ವಿರುದ್ಧವಾಗಿ ಕಮ್ಯೂನಿಸ್ಟ್ ಚಳವಳಿ ಪರ್ಯಾಯ ಹಾದಿಯನ್ನು ಬಹಳ ಹಿಂದೆಯೆ ರೂಪಿಸಿತ್ತು. ಅದನ್ನು ಮೊದಲ ಬಾರಿಗೆ ತೆಲಂಗಣ ಬಂಡಾಯ ಕಾಲದಲ್ಲಿ ಪ್ರಯೋಗಿಸಲಾಯಿತು. ತೆಲಂಗಣ ಮತ್ತು ನಕ್ಸಲ್ ಬಾರಿ ದಂಗೆಗಳೆಡರ ಸಾರವೆಂದರೆ ಜಮೀನ್ದಾರರ ಸ್ಥಿರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಜಮೀನ್ದಾರಿ ಆಳ್ವಿಕೆಯನ್ನು ಸಂಪೂರ್ಣವಾಗಿ ಇನ್ನಿಲ್ಲದಂತೆ ಮಾಡಿದ್ದು. ಭೂಮಿ ಮುಟ್ಟುಗೋಲು ಮತ್ತು ನಂತರದಲ್ಲಿ ಭೂ ಹೀನರಿಗೆ ಭೂ ಮರುಹಂಚಿಕೆಯಿಂದಾದ ಪರಿಣಾಮ- ಅಧಿಕಾರಿಶಾಹಿಯನ್ನು ಅವಲಂಬಿಸಿದ್ದರಿಂದ ಆಗಿರದೆ-ರೈತ ಸಮೂಹ ತಾವೇ ಆರಂಭಿಸಿದ ಕ್ರಮಗಳಿಂದ ಉಂಟಾಯಿತು. ಈ ಎರಡೂ ದಂಗೆಗಳಲ್ಲಿ ಗಿರವಿ, ಬಡ್ಡಿ , ಮತ್ತು ಎಲ್ಲ ಬಗೆಯ ಸಾಮಾಜಿಕ ತುಳಿತದ ರೂಪಗಳನ್ನೊಳಗೊಂಡ ಸಮಸ್ತ ಅರೆ ಊಳಿಗಮಾನ್ಯ ಸಂಬಂಧಿತ ಮೇಳದ ಮೇಲೆ ದಾಳಿ ಮಾಡಲಾಯಿತು, ಮತ್ತು ರಾಜ್ಯ ಸರಕಾರದ ದಮನ ಪಡೆಯ ಕೈಯಿಂದ ಶ್ರಮಿಕ ಸಮೂಹ ತಮ್ಮ ಗಳಿಕೆಯನ್ನು ರಕ್ಷಿಸಿಕೊಳ್ಳುವಂತೆ ತಿಳಿಸಲಾಯಿತು ಎಂಬುದನ್ನು ಎತ್ತಿ ಹೇಳಬೇಕು. ಹಳೆಯ ಭೂ ಸಂಬಂಧಗಳನ್ನು ನಾಶ ಮಾಡುವ ಮೂಲಕ ಅವರು ಹೊಂದಿದ್ದ ಎಲ್ಲ ಬಗೆಯ ಮೂಢನಂಬಿಕೆಗಳು ಮತ್ತು ಪೂರ್ವಗ್ರಹಗಳನ್ನೂ ನಾಶ ಮಾಡಿದರು, ಹಳೆಯ ಸಮಾಜದ ಗುಲಾಮಗಿರಿಯಿಂದ ರೈತರನ್ನು ಬಿಡುಗಡೆಗೊಳಿಸಿದರು. ಈ ಎರಡು ಚಳವಳಿಗಳಲ್ಲಿ ತೆಲಂಗಣ ಮಾರ್ಗದರ್ಶಕವಾಗಿದ್ದು, ತುಂಬ ವ್ಯಾಪಕ ಪ್ರದೇಶವನ್ನು ಒಳಗೊಂಡಿತ್ತು ಮತ್ತು ಹೆಚ್ಚು ಅವಧಿಯ ವರೆಗೆ ನಡೆಯಿತು. ಹೀಗಿದ್ದರೂ ಸುಧಾರಣಾವಾದಿ ನಾಯಕರ ವಂಚನೆಯಿಂದಾಗಿ ಇನ್ನೂ ಹೆಚ್ಚಿನ ಪ್ರದೇಶಗಳಲ್ಲಿ ಚಳವಳಿ ಹಬ್ಬಿ ಬೆಳೆಯಲು ಸಾಧ್ಯವಾಗಲಿಲ್ಲ. ತೆಲಂಗಣ ಬಂಡಾಯ ನಡೆದ ದೀರ್ಘ ಹದಿನಾರು ವರುಷಗಳ ಕಾಲದ ನಂತರ ನಕ್ಸಲ್ ಬಾರಿ ಚಳವಳಿ ನಡೆಯಿತು. ವೈಭವದ ತೆಲಂಗಣ ಚಳವಳಿ ಸ್ಥಾಪಿಸಿದ ಹಾದಿಯಲ್ಲೆ ಮತ್ತೆ ರೈತರ ದಂಗೆ ನಕ್ಸಲ್ ಬಾರಿಯಲ್ಲಿ ತನ್ನ ಬಾವುಟವನ್ನು ಮೇಲಕ್ಕೇರಿಸಿತು. ನಕ್ಸಲ್ ಬಾರಿ ಚಳವಳಿಯನ್ನೂ ಅಲ್ಪ ಕಾಲಾವಧಿಯಲ್ಲೆ ದಮನಿಸಲಾಯಿತಾದರೂ ಅದು ಹೊರಹಾಕಿದ ಸುಧಾರಣಾವಾದಿ ಸಿದ್ಧಾಂತ ಮತ್ತು ಪರ್ಯಾಯವಾಗಿ ಸ್ಥಾಪಿಸಿದ ಕ್ರಾಂತಿಕಾರಿ ಹಾದಿ ಅದರ ಪ್ರಾಮುಖ್ಯತೆಯ ಚಿಹ್ನೆಯಾಗಿದೆ. ಇದು ನಕ್ಸಲ್ ಬಾರಿಯ ಹಾದಿಯೆಂದೇ ಹೆಸರು ಪಡೆದಿದೆ. ಸಿಪಿಎಂಎಲ್ ನಂತರದಲ್ಲಿ ಅರಾಜಕತಾವಾದಿಗಳಾಗಿ ತಿರುವು ಪಡೆದು ದೇಶದಾದ್ಯಂತ ಶಕ್ತಿಶಾಲಿಯಾಗಿ ಬೆಳೆಯುತ್ತಿದ್ದ ಕೃಷಿ ಹೋರಾಟದ ಚಿಗುರನ್ನು ಎಳೆಯದರಲ್ಲೆ ಚಿವುಟಿ ಹಾಕಿತು. ಆದರೆ ನಕ್ಸಲ್ ಬಾರಿ ಮತ್ತು ನಂತರದಲ್ಲಿ ಶ್ರೀಕಾಕುಲಂ, ಮುಶಹರಿ, ಖಾರಿ ಮುಂತಾದ ದಂಗೆಗಳು 1969ರ ವರೆಗೂ ನಡೆಯುತ್ತಿದ್ದುದನ್ನು ತಳ್ಳಿಹಾಕುವಂತಿಲ್ಲ. ಇದರಿಂದ ಆಡಳಿತ ವರ್ಗ ಮತ್ತದರ ಪಕ್ಷ ನವೀನ ಮಾರ್ಗೋಪಾಯಗಳನ್ನು ಹುಡುಕಿ ರೈತರ ಕಣ್ಣು ಕಟ್ಟಿಹಾಕಿತು. ಅಲ್ಲಿಂದ ಎಲ್ಲ ರಾಜ್ಯಗಳಲ್ಲಿ ಭೂ ಮಿತಿ ಕಡಿತಗೊಳಿಸಿದ ಭೂ ಸುಧಾರಣಾ ತಿದ್ದುಪಡಿ ಕಾನೂನು, ಗುಪ್ತನಿಧಿ ನಿಷೇಧ, ಹಸಿರು ಕ್ರಾಂತಿ ಘೋಷಣೆ ಮತ್ತು ಇಪ್ಪತ್ತು ಅಂಶದ ಕಾರ್ಯಕ್ರಮ 1967ರ ವರೆಗೆ ಕೈಗೆತ್ತಿಕೊಳ್ಳಲಾಯಿತು. ಹೀಗಿದ್ದರೂ ಹಿಂದಿನ ಭೂಮಿತಿ ಅಡೆತಡೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಜಮೀನ್ದಾರರರು ಈ ಬಾರಿಯೂ ಸರಿಹೊಂದಿಸಿಕೊಳ್ಳಬಲ್ಲವರಾಗಿದ್ದರು. ಶಾಸನ ಸಭೆಯ ತಮ್ಮ ಪ್ರತಿನಿಧಿಗಳು ಕಾನೂನು ಕ್ರಮಗಳಲ್ಲಿ ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಒಂದಕ್ಕೊಂದು ಸರಿಹೊಂದುವಂತೆ ನ್ಯೂನತೆಗಳನ್ನು ಉಂಟುಮಾಡಿದ್ದರು. ಹಾಗಾಗಿ ಅವರಿಗೆ ಮುಖ್ಯವಾಗಿ ವಂದನೆ ಸಲ್ಲಿಸಿದರು.
ನಕ್ಸಲ್ ಬಾರಿ ನಂತರ ಮೂರು ಬೇರೆ ಬೇರೆ ದಿಕ್ಕುಗಳಲ್ಲಿ ರೈತ ಚಳವಳಿ ಮುಂದುವರೆಯಿತು. ಸಿಪಿಎಂಎಲ್ ಅರಾಜಕವಾದಿ ತಿರುವು ಪಡೆದಾಗ, ಭಯೋತ್ಪಾದನೆ ಮತ್ತು ಉದ್ದೇಶಪೂರ್ವಕವಾಗಿ ತಡೆಹಿಡಿಯಲ್ಪಟ್ಟಿದ್ದ ಭೂಮಿ ಪ್ರಶ್ನೆಯೊಂದಿಗೆ ಸುಧಾರಣಾವಾದಿಗಳು ನಕ್ಸಲ್ ಬಾರಿಯ ಸರಿಯಾದ ಹಾದಿಯನ್ನು ವಿರೋಧಿಸಲು ಒಂದು ಬಗೆಯ ಸಶಸ್ತ್ರ ಆರ್ಥಿಕವಾದಿ ರೂಪದಲ್ಲಿರಲು ಪ್ರಯತ್ನಿಸಿದರು. ಅವರು ಅಧಿಕೃತ ಮತ್ತು ಬೇನಾಮಿ ಭೂಮಿಯನ್ನು ದೋಚಲು ಸಶಸ್ತ್ರ ಚಳವಳಿಯನ್ನು ಆರಂಭಿಸಿದರೂ ಪ್ರಚಲಿತ ಕಾನೂನು ರಚನೆಯ ಮಿತಿಗಳನ್ನು ದಾಟಲು ಸಾಧ್ಯವಾಗಿಲ್ಲ. 1972ರ ನಂತರದಲ್ಲಿ ಆಡಳಿತ ವರ್ಗದ ದಬ್ಬಾಳಿಕೆಯಿಂದ ಉಂಟಾದ ಒತ್ತಡದಿಂದ ಸುಧಾರಣಾವಾದಿಗಳು ಈ ಹಾದಿಯನ್ನೂ ಕೈ ಬಿಟ್ಟರು. ಜುಗುಪ್ಸೆಗೊಂಡ ರೈತರನ್ನು, ಕಮ್ಯೂನಿಸ್ಟ್ ನಾಯಕತ್ವದಿಂದ ಬೇಸತ್ತವರನ್ನು ಈಗ ಸಾಮಾನ್ಯವಾಗಿ ಸಶಸ್ತ್ರ ಸುಧಾರಣಾವಾದಿಗಳು ಮತ್ತು ವ್ಯಕ್ತಿಗತ ಉದ್ಧಾರಕರಾದ ಜೋಶಿ ಅಥವಾ ಟೈಕತ್ ರಂಥವರು ಸಂಘಟಿಸುತ್ತಿದ್ದಾರೆ. ಇವರಾರೂ ವರ್ಗ ಹೋರಾಟದ ಮೇಲೆ ಒತ್ತು ಹಾಕಿಲ್ಲವಾದರೂ ಅಸ್ಪಷ್ಟವಾಗಿ ನಗರ-ಗ್ರಾಮೀಣ ವೈರುಧ್ಯ ಕುರಿತು ಮಾತಾಡುತ್ತಾರೆ.
ಭಾರತದಲ್ಲಿ ಭೂ ಸುಧಾರಣೆಗಳು ನಡೆದಿರುವುದು ಅತಿ ಕಡಿಮೆ ಹಾಗೂ ಅವನ್ನು ಬೇರು ಮಟ್ಟದಲ್ಲೆ ಉಳಿಸಲಾಗಿದೆ ಎಂಬುದನ್ನು ಅಂಕಿಅಂಶಗಳು ಕಾಣಿಸುತ್ತವೆ. ಅಂಕಿ ಅಂಶಗಳನ್ನು ನೋಡದವರು ಭೂ ಸುಧಾರಣೆಯ ವ್ಯಾಪ್ತಿ ಕುಗ್ಗುತ್ತಿದೆ ಎಂದು ವಾದಿಸುತ್ತಾರೆ. ಪ್ರಭುತ್ವ ಅಂದರೆ ಕೇಂದ್ರ ಪ್ರಾಧಿಕಾರ ನಾಶವಾಗಬೇಕು ಇಲ್ಲದಿದ್ದರೆ ಬೇರು ಮಟ್ಟದ ಸುಧಾರಣೆಗಳು ಎಂದಿಗೂ ಜಾರಿಗೊಳ್ಳುವುದಿಲ್ಲ, ಅಷ್ಟೇಅಲ್ಲ ಅಲ್ಲಿಯವರೆಗೂ ಆಗಿರುವ ಶಾಸನಗಳು ಮುಖ್ಯವಾಗುವುದಿಲ್ಲ, ನಿಜವಾಗಿ ಯಾವ ಬದಲಾವಣೆಗಳನ್ನು ಶಾಸನಗಳ ಮೂಲಕ ತರಲಾಗುತ್ತದೆಯೋ ಅಂಥ ಬದಲಾವಣೆಗೆ ಅರೆ-ಊಳಿಗಮಾನ್ಯ ಅಂಶಗಳು ಎಲ್ಲ ಕಾಲಕ್ಕೂ ಸರಿ ಹೊಂದಿಸಿಕೊಳ್ಳುತ್ತವೆ. ಕೇಂದ್ರೀಯ ಪ್ರಾಧಿಕಾರದಿಂದ ಊಳಿಗಮಾನ್ಯ ಅಂಶಗಳನ್ನು ಕಿತ್ತೊಗೆದು ಒಮ್ಮೆ ಮಧ್ಯಮವರ್ಗ ಅಧಿಕಾರ ವಹಿಸಿಕೊಂಡು ಬಿಟ್ಟರೆ 10ರಿಂದ 15 ವರ್ಷಗಳಲ್ಲಿ ಹಿಂಸಾಕೃತ್ಯಗಳಿಲ್ಲದೆಯೂ ಕೃಷಿಕ್ಷೇತ್ರದಲ್ಲಿ ಬದಲಾವಣೆಗಳಾಗಿ ಬಿಡುತ್ತವೆ ಎಂದು ಲೆನಿನ್ ಹಿಂದೆಯೇ ಸಾರಿ ಹೇಳಿದ್ದರು. ಹೀಗಿದ್ದರೂ ಭಾರತದಲ್ಲಿ ಭೂ ಸುಧಾರಣೆ ಕಾನೂನು ಜಾರಿಗೆ ಬಂದು 40 ವರುಷಗಳಾಗಿ ನಾವು ಹಳೆಯ ಒಡೆತನದ ವಿನ್ಯಾಸದಲ್ಲಿ ಯಾವ ಮೂಲ ಬದಲಾವಣೆಗಳನ್ನೂ ಕಾಣುತ್ತಿಲ್ಲ. ಇಡೀ ದೇಶವನ್ನು ವ್ಯಾಪಿಸಬೇಕಿದ್ದ ಕ್ರಾಂತಿಕಾರಕ ಭೂ ಸುಧಾರಣೆಯ ಕಾರ್ಯಗಳು ಹೀಗೆ ಬಹುಪಾಲು ಕಾರ್ಯಸೂಚಿಯಲ್ಲೆ ಉಳಿದುಬಿಟ್ಟಿದೆ.
ನಮ್ಮ ಕೃಷಿಕ್ಷೇತ್ರದಲ್ಲಿ ಬದಲಾವಣೆಗಳು ಇಲ್ಲವೆಂದೆ ಇದರರ್ಥ? ಈ ಪ್ರಶ್ನೆಗೆ ಉತ್ತರ ನೀಡಲು ಪ್ರಸ್ತುತ ಕೃಷಿಕ್ಷೇತ್ರದ ಸ್ಥಿತಿಗತಿಗಳನ್ನು ವಿವರವಾಗಿ ಪರಿಶೀಲಿಸುವ ಅಗತ್ಯವಿದೆ.
-ಸುಬೋಧ ಮಿತ್ರ

ಭಾನುವಾರ, ಮೇ 29, 2011

ಜಾಗತೀಕರಣ ಮತ್ತು ಸಂಸ್ಕೃತಿ



-ಏಜಾಜ್ ಅಹಮದ್


ಜಾಗತೀಕರಣದ ವಿರುದ್ಧ 2001ನೇ ಮಾರ್ಚ್ 21ರಿಂದ 23ರ ವರೆಗೆ ಜರುಗಿದ ಜನವಾದಿ ಸಮಾವೇಶದಲ್ಲಿ ಮಾಡಿದ ಭಾಷಣದ ಲೇಖನ ರೂಪ


ಗೆಳೆಯರೆ,
ನನಗಿಲ್ಲಿ ಮಾತಾಡಲು ಅವಕಾಶ ಕೊಟ್ಟಿರುವ ಈ ಸಮಾವೇಶದ ಸಂಘಟಕರಿಗೆ ಆಭಾರಿಯಾಗಿದ್ದೇನೆ. ನನಗಿಂತ ಮೊದಲು ಪ್ರಭಾತ್ ಪಟ್ನಾಯಕ್ ಅವರು ತುಂಬಾ ಯಶಸ್ವಿಯಾಗಿ ಮತ್ತು ಕ್ರಮಬದ್ಧವಾಗಿ ಮಂಡಿಸಿದ ವಿಚಾರ ಸಂತೋಷವನ್ನುಂಟು ಮಾಡಿದೆ. ನಮ್ಮ ಕಾಲದ ಸಾಮ್ರಾಜ್ಯಶಾಹಿ ಆರ್ಥಿಕ ರಾಜಕಾರಣ ಕುರಿತು ನನಗೆ ತಿಳಿದ ಮಟ್ಟಿಗೆ ಮಾತಾಡಬೇಕೆಂದಿದ್ದ ನನ್ನ ಕೆಲಸವನ್ನು ಇವರು ಹಗುರಗೊಳಿಸಿದ್ದಾರೆ. ಶ್ರೀ ಅಶೋಕ ಮಿತ್ರ ಅವರು ಈ ಸಭೆಯ ಅಧ್ಯಕ್ಷರಾಗಿರುವ ವಿಚಾರ ನನಗೆ ಅನುಕೂಲಕರವೂ ಗಾಬರಿ ತರಿಸುವ ವಿಚಾರವೂ ಆಗಿದೆ. ಅನುಕೂಲಕರ ಯಾಕೆಂದರೆ ಅವರು ಎಡಪಂಥೀಯ ಚಿಂತನೆಗಳಲ್ಲಿ ಪ್ರಾಜ್ಞರು. ಅದೇ ವಿಚಾರವಾಗಿ ನನಗೆ ಗಾಬರಿ ಕೂಡ. ಅವರು ಆರ್ಥಿಕ ರಾಜಕಾರಣವಷ್ಟೇ ಅಲ್ಲ 'ಸಂಸ್ಕೃತಿ' ಎಂದು ನಾವು ಕರೆಯುವ -ಅದಕ್ಕಿಂತ ಉತ್ತಮ ಪದದ ಕೊರತೆ ಇರುವ-ನಿಗೂಢ ವಿಚಾರದಲ್ಲೂ ನನಗಿಂತ ಹೆಚ್ಚು ತಿಳಿದವರು.
ಪ್ರಸ್ತುತ ಸಂದರ್ಭದಲ್ಲಿ 'ಸಂಸ್ಕೃತಿ' ಕುರಿತು ಮಾತಾಡಲು ನನಗೆ ಎದುರಾಗಿರುವ ತೊಡಕು ಮುಂದಿನ ಸತ್ಯಾಂಶದೊಂದಿಗೆ ತಳುಕು ಹಾಕಿಕೊಂಡಿದೆ. ಸಾಮ್ರಾಜ್ಯಶಾಹಿ ಜಾಗತೀಕರಣದ ಈ ಯುಗದಲ್ಲಿ ಸಾಂಸ್ಕೃತಿಕ ಕೈಗಾರಿಕೆಗಳು ಮತ್ತು ಬೃಹತ್ ಶೈಕ್ಷಣಿಕ ಸಮುಚ್ಚಯಗಳು ತಲೆ ಎತ್ತಿರುವುದನ್ನು ನಾವು ಕಂಡಿದ್ದೇವೆ. ಅವು ವಿಶ್ವಮಟ್ಟದಲ್ಲಿ ಒಂದೇ ಒಂದು ವಿಚಾರವನ್ನು, ಕರಾರುವಕ್ಕಾಗಿ ಹೇಳಬೇಕೆಂದರೆ ಸಾಂಸ್ಕೃತಿಕ ವಾದ (ಕಲ್ಚುರಲಿಸಂ)ವೆಂಬ ಒಂದು ವಿಚಾರವನ್ನು ಪ್ರಚಾರ ಮಾಡುವ ಕಾರ್ಯ ಕೈಗೆತ್ತಿಕೊಂಡಿವೆ. ಅಂದರೆ ಅವು ಸಂಸ್ಕೃತಿಯನ್ನು ಸಾಮಾಜಿಕ ಆಚರಣೆಗಳ ಸಮಗ್ರ ಅಂಶವನ್ನಾಗಿ ಮಾತ್ರವಲ್ಲದೆ ನಿರ್ಣಾಯಕ ಉದಾಹರಣೆಯನ್ನಾಗಿಯೂ ನಡೆಸಿಕೊಳ್ಳುತ್ತವೆ. ಇದು ನಮ್ಮ ಕಾಲದ ತಾತ್ವಿಕ ಉತ್ಪನ್ನದ ಮಹಾವ್ಯಂಗ್ಯಗಳಲ್ಲೊಂದು. ನಿರ್ದಿಷ್ಟ ಚಾರಿತ್ರಿಕ ಸಂದರ್ಭದಲ್ಲಿ ಬಂಡವಾಳಶಾಹಿ ಜಗತ್ತಿನಾದ್ಯಂತ ಆರ್ಥಿಕವಾಗಿ ಮಾತ್ರವಲ್ಲದೆ ಸಾಂಸ್ಕೃತಿಕ ಉತ್ಪನ್ನವಾಗಿಯೂ ಅತಿ ದೂರದಲ್ಲಿರುವವರನ್ನು ತಲುಪಲು ಅಂತಿಮವಾಗಿ ಸಾಗುತ್ತಿದ್ದಾಗ ಪಾಶ್ಚಿಮಾತ್ಯ ಶೈಕ್ಷಣಿಕ ಸಂಸ್ಥೆಯ ಎಲ್ಲ ಜನಪ್ರಿಯ ವೇದಿಕೆಗಳು ಪ್ರಚುರ ಪಡಿಸಿದ ವಿಚಾರವೊಂದು ತಲೆ ಎತ್ತಿದುದನ್ನು ನಾವು ಕಂಡಿದ್ದೇವೆ. ಅದು ನಿರ್ಣಯದ ನೆಲೆಯನ್ನು ಭೌತಿಕ ಉತ್ಪನ್ನದ ಕ್ಷೇತ್ರದಿಂದ ಸಂಸ್ಕೃತಿಗೆ ಬದಲಿಸಿದೆ.
ಸಂಸ್ಕೃತಿ ವಿಷಯ ಕುರಿತು ನಾನೀಗ ದೀರ್ಘವಾಗಿ ಮಾತನಾಡುತ್ತೇನೆ. ಮೊದಲು 'ಜಾಗತೀಕರಣ'ವನ್ನು ನಾನು ಹೇಗೆ ಅರ್ಥ ಮಾಡಿಕೊಂಡಿದ್ದೇನೆ ಎಂದು ಎರಡು ಮಾತುಗಳಲ್ಲಿ ಸಂಕ್ಷಿಪ್ತವಾಗಿ ಹೇಳುತ್ತೇನೆ. ಅದರ ಆಧಾರದ ಮೇಲೆ ನಮ್ಮ ಕಾಲದ ಸಂಸ್ಕೃತಿಯ ಅರ್ಥವೇನು ಎಂಬುದನ್ನು ನನಗೆ ಅಂತಿಮವಾಗಿ ಕಂಡ ರೀತಿಯಲ್ಲಿ ಹೇಳುತ್ತೇನೆ. ಸಾಮ್ರಾಜ್ಯಶಾಹಿಯ ಇತಿಹಾಸದಲ್ಲಿ 'ಜಾಗತೀಕರಣ' ವೆನ್ನುವುದು ಇತ್ತೀಚಿಗಿನ ಹಂತ ಎಂಬ ಅಂಶವನ್ನು ನಾನು ತಳ್ಳಿ ಹಾಕುವುದಿಲ್ಲ. ಇದರ ಕೇಂದ್ರ ಬಿಂದು ಬಂಡವಾಳ ಸ್ವರೂಪದಲ್ಲಿ ನಡೆದ ಐತಿಹಾಸಿಕ ಬದಲಾವಣೆಗಳ ಒಟ್ಟು ಮೊತ್ತವಾಗಿದೆ. ಈ ವಿಚಾರವಾಗಿ ಬೆಳಗ್ಗೆ ಮಾತನಾಡಿದ ಪ್ರಭಾತ್ ಪಟ್ನಾಯಕ್ ಅವರು ಎಲ್ಲವನ್ನೂ ಸ್ಪಷ್ಟಪಡಿಸಿದ್ದಾರೆ. ಇದು ಸಾಮ್ರಜ್ಯಶಾಹಿಯ ಹೊಸಹಂತ ಮಾತ್ರವಲ್ಲ, ಆಮೂಲಾಗ್ರ ಹೊಸಹಂತ. ಹಲವಾರು ಪೂರ್ವ ಶರತ್ತುಗಳನ್ನು ಒಪ್ಪಿಕೊಂಡ ಪರಿಣಾಮವಾಗಿ ಈ ಹಂತ ಮೈ ತಳೆದಿದೆ. ಆ ಪೂರ್ವ ಶರತ್ತುಗಳಲ್ಲಿ ಬಹುಮುಖ್ಯವಾದುವು ಯಾವುವು? ಈ ಪ್ರಶ್ನೆಗೆ ಪರಸ್ಪರ ಸಂಬಂಧಪಟ್ಟ ಹದಿಮೂರು ಬಗೆಯ ಪ್ರಮೇಯಗಳ ಮೂಲಕ ಉತ್ತರಿಸುತ್ತೇನೆ. ಈ ಎಲ್ಲ ಅಂಶಗಳ ಒಟ್ಟು ಮೊತ್ತ ಈ ಹಂತದ ಆಮೂಲಾಗ್ರತೆಯ ನಾವಿನ್ಯತೆಯನ್ನು ವ್ಯಾಖ್ಯಾನಿಸಬೇಕು ಎಂದು ನಾನು ವಾದ ಮಾಡಲು ಬಯಸುತ್ತೇನೆ.
ನನ್ನ ನಂಬಿಕೆಯಂತೆ ಆ ಪೂರ್ವ ಶರತ್ತುಗಳಲ್ಲಿ ಮೊದಲನೆಯದು, ವಸಾಹತು ಸಾಮಾಜ್ಯ ತನ್ನಿಂದ ತಾನೆ ಮುಕ್ತಾಯಗೊಳ್ಳಬೇಕು ಮತ್ತು ಜಾಗತೀಕರಣದ ಆರಂಭದ ಕಾಲಘಟ್ಟವನ್ನು ವಿಶ್ವದ ಎರಡನೆಯ ಮಹಾಯುದ್ಧದ ನಂತರದ ಕಾಲದಲ್ಲಿ ನಿಗದಿಪಡಿಸಬೇಕು. ಆಗ ಬಂಡವಾಳಶಾಹಿ ವಾದದ ಆರಂಭದಿಂದಲೂ ಅಂರ್ತಗತಗೊಂಡಿದ್ದ  ಜಾಗತಿಕ ಸಮಗ್ರ ಮಾರುಕಟ್ಟೆಗೆ ಚಾಲನೆ ದೊರೆತ ಬಗ್ಗೆ ಮೊದಲ ಬಾರಿಗೆ  ಮಾರ್ಕ್ಸ್ ಎತ್ತಿ ಹೇಳಿದರು. ವಸಾಹತುಶಾಹಿ ಇಂಥ ಮಾರುಕಟ್ಟೆಯೊಂದನ್ನು ಹುಟ್ಟು ಹಾಕಲು ಪ್ರಮುಖ ಪಾತ್ರ ವಹಿಸಿತು. ಹಾಗಿದ್ದರೂ ಈ ಎಲ್ಲವೂ ಆರಂಭಗೊಂಡಿದ್ದು 15ನೆಯ ಶತಮಾನದ ಕೊನೆಯಲ್ಲಿ. 18ನೆಯ ಶತಮಾನದ ಕೊನೆಯ ತನಕ ನಿಜವಾದ ವಸಾಹತೀಕರಣ ಪ್ರಕ್ರಿಯೆ ಬಹುಪಾಲು ಅಮೆರಿಕಾದಲ್ಲೆ ಕೇಂದ್ರಿಕೃತಗೊಂಡಿತ್ತು. 19ನೆಯ ಶತಮಾನದಲ್ಲಿ ಏಷ್ಯಾ ಮತ್ತು ಆಫ್ರಿಕಾಗಳನ್ನು ವಸಾಹತುಗಳನ್ನಾಗಿಸುವ ಕಾರ್ಯ ತೀವ್ರಗೊಳಿಸಲಾಯಿತು. ಇದರಿಂದ ಪಾಶ್ಚಿಮಾತ್ಯ ಅಭಿವೃದ್ಧಿಶೀಲ ಕೈಗಾರಿಕಾ ಕೇಂದ್ರ ದೇಶಗಳ ಗುಂಪು ಮತ್ತು ಹಿಂದುಳಿದ ಬೃಹತ್ ಕೈಗಾರಿಕೆ ರಹಿತ ವಸಾಹತು ಮತ್ತು ಪರಾವಲಂಬಿ ದೇಶಗಳ ಗುಂಪಾಗಿ ವಿಶ್ವ ಒಡೆದುಹೋಯಿತು. ವಸಾಹತುಶಾಹಿ ತನ್ನ ಕೊನೆಯ ವೈಭವದ ದಿನಗಳಲ್ಲಿ ವಿಶ್ವ ಆರ್ಥಿಕತೆಗೆ ಸಮಾನವಾದಂಥದೊಂದನ್ನು ಹುಟ್ಟು ಹಾಕಿತು. ಆದರೆ ಅದು ನಿಜವಾದ ಅರ್ಥದಲ್ಲಿ ಪರಸ್ಪರ ತೊಡರುಗಾಲಾಗಿರುವ ಆರ್ಥಿಕ ವ್ಯವಸ್ಥೆಯಾಗಿತ್ತು. ಬೇರೆಬೇರೆ ವಸಾಹತುಶಾಹಿ ಶಕ್ತಿಗಳು ಬೇರೆ ಬೇರೆ ಭಾಗಗಳನ್ನು ನಿಯಂತ್ರಿಸಿದ್ದವು. ಹೊಸಹಂತದ ಸಮಗ್ರ ವಿಶ್ವ ಆರ್ಥಿಕತೆಗಾಗಿ ಆಗ ನಿರ್ವಸಾಹತೀಕರಣ ಮುಂದಿನ ಬಂಡವಾಳ ಬೆಳವಣಿಗೆಗೆ ಅಗತ್ಯವಾಗಿತ್ತು.  ತನ್ನ ಶತ್ರು ರಾಷ್ಟ್ರಗಳು ತಮ್ಮ ಸಾಮ್ರಾಜ್ಯವನ್ನು ಮತ್ತು ಸಾಮ್ರಾಜ್ಯಶಾಹಿ ಯೋಜನೆಗಳನ್ನು ಕಳೆದುಕೊಳ್ಳುವ ವರೆಗೂ ಅಮೆರಿಕಾ ಯಾಜಮಾನ್ಯ ಶಕ್ತಿಯಾಗಿ ಹೊರಹೊಮ್ಮಿತು.
ಇದು ಎರಡನೆಯ ಪೂರ್ವ ಶರತ್ತಿಗೆ ಕಾರಣವಾಯಿತು. ಅದೆಂದರೆ ವಿಶ್ವದ ಸಂಯುಕ್ತ ಸಾಮ್ರಾಜ್ಯವಾಗಿ ಪರಿವರ್ತನೆ ಹೊಂದಿದ ಹಲವಾರು ಸಣ್ಣ ಮತ್ತು ದೊಡ್ಡ ಸಾಮ್ರಾಜ್ಯಗಳನ್ನು  ಮೇಲ್ವಿಚಾರಣೆ ನಡೆಸಲು ಸರ್ವೋತ್ಕೃಷ್ಟವಾದ ಶಕ್ತಿಯೊಂದು ಇರಬೇಕಾಗಿದ್ದಿತು,  ವಿಶ್ವದ ಎರಡನೆಯ ಮಹಾಯುದ್ಧ ನಡೆದ ಇಪ್ಪತ್ತೊಂದು ವರುಷಗಳ ನಂತರ ಅಂಥ ಪರಿವರ್ತಿತ ಸಂಸ್ಥೆಗಾಗಿ ಅಮೆರಿಕ ತನ್ನ ಯಾಜಮಾನ್ಯದ ಸುವರ್ಣಯುಗದಂತೆ ವ್ಯವಹರಿಸಿದುದು ಇತಿಹಾಸದಲ್ಲಿ ಜರುಗಿಹೋಯಿತು. ಆ ಯಾಜಮಾನ್ಯದ ಅವನತಿಯ ಬಗ್ಗೆ ಇತ್ತೀಚೆಗೆ ಮಾತ್ರ ಹೆಚ್ಚು ಕೇಳಿಬರುತ್ತದೆ. ಅಂಥ ಅಸಾಧಾರಣ ಶಕ್ತಿಯ ಕೆಲವು ಅಂಶಗಳನ್ನು ಆಕ್ಷೇಪಿಸಲು ಪಶ್ಚಿಮ ಯುರೋಪು ಮತ್ತು ಜಪಾನು ಒಂದುಗೂಡಿದುದು ಖಂಡಿತವಾಗಿಯೂ ನಿಜ. ಬಂಡವಾಳಗಾರರ ಶಕ್ತಿಶಾಲಿ ಆರ್ಥಿಕ ದೇಶವಾಗಿ ಅಮೆರಿಕ ಮುಂದುವರೆಯಲಿದೆ ಎಂದು ಹೇಳುವುದೂ ಹೆಚ್ಚು ಸೂಕ್ತ.  ಹಣಕಾಸು ಮಾರುಕಟ್ಟೆಗಳಲ್ಲಿ ಪಶ್ಚಿಮ ಯುರೋಪು ಮತ್ತು ಜಪಾನಿನ ಬ್ಯಾಂಕುಗಳು ಅಮೆರಿಕಾದ ಫೆಡರಲ್ ರಿಸರ್ವ್ ಕೇಂದ್ರಪಾತ್ರವನ್ನು ನಿರ್ವಹಿಸುತ್ತಿರುವ ರೀತಿಯಲ್ಲಿ ನಿರ್ವಹಿಸಲಾರವು. ಅಲ್ಲದೆ ಅಮೆರಿಕಾದ ಸೈನ್ಯ ಶಕ್ತಿ ಪಶ್ಚಿಮ ಯುರೋಪು ಮತ್ತು ಜಪಾನಿನ ಸಂಯುಕ್ತಗೊಂಡ ಸೈನ್ಯ ಬಲಕ್ಕಿಂತ ಹೆಚ್ಚಿನದು. ನ್ಯಾಟೊ ಮೂಗು ತೂರಿಸುವುದೆಂದರೆ ಅಮೆರಿಕ ಮೂಗು ತೂರಿಸಿದಂತೆಯೆ. ಜಗತ್ತಿನಲ್ಲಿ ಸಾಂಸ್ಕೃತಿಕ ವಸ್ತುಗಳು ಮತ್ತು ಸಮಾಚಾರಗಳನ್ನು ಒದಗಿಸುವ ಹತ್ತು ಅತ್ಯುತ್ತಮ ಕಾಪೊರೇಷನ್ನುಗಳಲ್ಲಿ  ಆರು ಅಮೆರಿಕದವು. ಮೂರನೆಯ ಜಗತ್ತಿನ ತಾಂತ್ರಿಕ ವಿಜ್ಞಾನ ವ್ಯವಸ್ಥಾಪಕ ಗಣ್ಯರ ತರಬೇತಿಯಲ್ಲಿ ಅಮೆರಿಕ ಸರ್ವೋತ್ಕೃಷ್ಟವಾದ ಮತ್ತು ವಿಧ್ವಂಸಕ ಪಾತ್ರ ಹೊಂದಿದೆ ಎಂಬುದು ನನ್ನ ನಂಬಿಕೆ.
ಮೂರನೆಯದು, ನಾನೀಗ ತಾನೇ ಹೇಳಿದಂತೆ ವಸಾಹತುಶಾಹಿಯ ಅತ್ಯುತ್ಕೃಷ್ಟ ಯುಗ ಕೈಗಾರಿಕೆ ಕೇಂದ್ರೀತ ದೇಶಗಳು ಮತ್ತು ತುಂಬ ಹಿಂದುಳಿದ ಕೈಗಾರಿಕೆ ರಹಿತ ವಲಯಗಳೆಂದು ವಿಭಜನೆ ಹೊಂದಿತು. ಬಂಡವಾಳಶಾಹಿ ವಿಶ್ವ ವ್ಯವಸ್ಥೆಯ ಮೇಲ್ಮಟ್ಟವನ್ನು ಮುಟ್ಟಲು, ಅಭಿವೃದ್ಧಿಶೀಲ ಮತ್ತು ಹಿಂದುಳಿದ ಬಂಡವಾಳ ವಲಯಗಳ ನಡುವೆ ಜಗತ್ತು ಹೊಸ ಬಗೆಯಲ್ಲಿ ವಿಭಜನೆಗೊಳ್ಳುವುದು ಅವಶ್ಯಕವಿತ್ತು. ವಸಾಹತುಶಾಹಿ ಸಾಮ್ರಾಜ್ಯದ ಕೊನೆಗೊಳ್ಳುವಿಕೆ ತೃತೀಯ ಜಗತ್ತಿನಲ್ಲಿ ಸ್ವಲ್ಪ ಪ್ರಮಾಣದ ಕೈಗಾರಿಕಾ ಕ್ರಾಂತಿಯ ರಾಷ್ಟ್ರೀಯ ಬೂರ್ಜ್ವಾ ಯೋಜನೆ ಸಾಧ್ಯವಾಗುವಂತೆ ಮಾಡಿತು ಮತ್ತು ಬಂಡವಾಳಶಾಹಿ ವ್ಯಾಪ್ತಿ ಹೀಗೆ ಬಹುವಿಸ್ತಾರಕ್ಕೆ ಮಾರ್ಪಾಟು ಹೊಂದುವಂತೆ ಮಾಡಿತು.ಅಮೆರಿಕ ಯಾವ ವಸಾಹತುಶಕ್ತಿಯೂ ಇದುವರೆಗೆ ಹೊಂದಿರದಿದ್ದ ಜಗತ್ತಿನ ಸರ್ವೋತ್ಕೃಷ್ಟ ಆರ್ಥಿಕ, ತಾಂತ್ರಿಕ ಮತ್ತು ಸೈನಿಕ ಶಕ್ತಿಯ ಹಾಗೆ ಸಮಗ್ರವಾದ ಹೊಸಬಗೆಯ ವ್ಯವಸ್ಥೆಯಾಗಿ ರೂಪುಗೊಳ್ಳಲು ಅಸಾಧಾರಣವಾಗಿ ಶಕ್ತವಾಗಿತ್ತು.
ನಾಲ್ಕನೆಯದು, ಸೊವಿಯತ್ ಒಕ್ಕೂಟ ಮತ್ತು ಪೂರ್ವ ಏಷ್ಯಾದ ಸಮಾಜವಾದಿ ದೇಶಗಳ ಇರುವಿಕೆ 'ಜಾಗತೀಕರಣ'ಕ್ಕೆ ಮೂರು ವಿಧಗಳಲ್ಲಿ ಅಡ್ಡಿಯನ್ನುಂಟು ಮಾಡುತ್ತಿತ್ತು. ಅವು ಹೆಚ್ಚು ಕಡಿಮೆ ತೃತೀಯ ಜಗತ್ತನ್ನು ರೂಪಿಸಿಕೊಂಡಿದ್ದವು. ಈ ಮೂರನೆಯದೊಂದು ಭಾಗ ಅಷ್ಟು ಸುಲಭವಾಗಿ ಬಂಡವಾಳಶಾಹಿ ಜಾಗತೀಕರಣಕ್ಕೆ ಒಳಗಾಗುತ್ತಿರಲಿಲ್ಲ. ಅವು ವಿಶ್ವಮಟ್ಟದಲ್ಲಿ ಬಂಡವಾಳಶಾಹಿ ವ್ಯವಸ್ಥಗೆ ಸವಾಲಾಗುವ ಸಾಧ್ಯತೆಗಳನ್ನು ಎತ್ತಿ ಹಿಡಿಯುತ್ತಿದ್ದವು. ತೃತೀಯ ಜಗತ್ತಿನ ದೇಶಗಳಿಗೆ ತಾಂತ್ರಿಕತೆ, ತರಬೇತಿ, ಹಣಕಾಸು ಮತ್ತು ಶಸ್ತ್ರಾಸ್ತ್ರ ಪೂರೈಕೆಗೆ ಪರ್ಯಾಯ ಮೂಲವಾಗಿ ಸೇವೆ ಸಲ್ಲಿಸುತ್ತಿದ್ದವು. ಸೊವಿಯತ್ ಒಕ್ಕೂಟದ ವಿಘಟನೆ ಮತ್ತು ವಿಶ್ವ ಮಾರುಕಟ್ಟೆಯಲ್ಲಿ ಚೀನಾ ದೇಶ ಸಮ್ಮಿಳನಗೊಂಡ ಮಾತ್ರದಿಂದಲೆ ಬಂಡವಾಳಶಾಹಿ ವಿಶ್ವದ ವ್ಯವಸ್ಥೆಯಾಗಬಹುದಿತ್ತು. ಅದು ಇಪ್ಪತ್ತನೆಯ ಶತಮಾನದ ಕೊನೆಯ ದಶಕಗಳಲ್ಲಿ ನೆರವೇರಿತು.
ಐದನೆಯದು, ಆರ್ಥಿಕವಾಗಿ ಸದೃಢವಾಗುಳ್ಳ ತೃತೀಯ ಜಗತ್ತಿನ ಕೆಲವೊಂದು ದೇಶಗಳು ಯಾವ ಪ್ರತಿಬಂಧಕಗಳನ್ನು ಹೊಂದಿರದಿದ್ದರೂ ಸಣ್ಣ ಪ್ರಮಾಣದ ತಡೆಯನ್ನು ಒಡ್ಡಿದವು. ಈ ಮೂಲಕ ರಕ್ಷಣಾತ್ಮಕ ನಿಲುವು, ದೇಶೀಯ ಕೈಗಾರಿಕೆಯ ಬೆಳವಣಿಗೆಗೆ ಪ್ರಭುತ್ವದ ಬಳಕೆ, ತಾಂತ್ರಿಕ ಮತ್ತು ಆರ್ಥಿಕ ಸಹಾಯದ ಪರ್ಯಾಯ ಮೂಲ ದೇಶಗಳೊಂದಿಗೆ ಸಂಬಂಧ ಮುಂತಾದ ಹಲವಾರು ಉಪಾಯಗಳನ್ನು ತಮ್ಮ ಸಮಾಜಗಳ ಮೇಲೆ ಸಾಮ್ರಾಜ್ಯಶಾಹಿ ಪ್ರಭಾವ ತಡೆಯಲು ಬಳಸಿಕೊಂಡವು. ಈ ಹಂತ  ತೃತೀಯ ಜಗತ್ತಿಗೆ ಬಹುಪಾಲು 1970ರ ವೇಳೆಗೆ ಕೊನೆಗೊಳ್ಳತೊಡಗಿತು. ವಾಸ್ತವವಾಗಿ ಆ ದೇಶಗಳೆಲ್ಲ -ಅಂದರೆ ಈಜಿಪ್ಟ್, ಇಂಡೋನೇಷ್ಯಾ, ಘಾನ, ಬ್ರೆಜಿಲ್, ಗ್ವಾಟೆಮಾಲಾ -ಪರಾವಲಂಬಿ ವ್ಯವಸ್ಥೆಗೆ ಮರಳತೊಡಗಿದವು.  ಹೀಗಾಗಿ ಬೆರಣಿಕೆಯಷ್ಟು ಉಳಿದ ದೇಶಗಳು ಹಟವಾದಿಗಳಾದವು ಮತ್ತು ಅರೆಮನಸ್ಸಿನಿಂದ ಪ್ರತಿಭಟನೆ ತೋರುತ್ತ ಕೇವಲ ಸ್ಥಳೀಯ ದ್ವೀಪಗಳಾಗಿ ಉಳಿದುಬಿಟ್ಟವು.

ಆರನೆಯದು, ವಿಶ್ವದ ಹಣಕಾಸು ಮಾರುಕಟ್ಟೆಗಳನ್ನು ಸಮಗ್ರತೆಗೆ ಒಳಪಡಿಸಲು ಹೊಸ ತಂತ್ರಜ್ಞಾನದ ಅವಶ್ಯಕತೆಯಿತ್ತು. ಅದಕ್ಕೆ ಉತ್ಪಾದನಾ ಬಂಡವಾಳವನ್ನೇ ಹೆಚ್ಚು ಹೆಚ್ಚು ಸಂಚಲಿತ ಬಂಡವಾಳವನ್ನಾಗಿ ಮಾಡಬೇಕಿತ್ತು. ಇದು ಆರ್ಥಿಕ, ಮಾಹಿತಿ, ವಾಣಿಜ್ಯ ಸಮಾಚಾರಗಳು, ಮನರಂಜನಾ ವಸ್ತುಗಳು ಮತ್ತು ವೈಯಕ್ತಿಕ ವ್ಯವಹಾರವೆಲ್ಲ ಒಂದಾದ ಅವ್ಯಕ್ತ ಹರಿವು, ರಾಷ್ಟ್ರಗಳ ಭೂ ಪ್ರದೇಶ ಗಡಿಗಳನ್ನು ಮೀರಿದ ಮತ್ತು ಲಕ್ಷಾಂತರ ಹಾದಿಗಳನ್ನೊಳಗೊಂಡ ಒಂದು ಅತ್ಯುತ್ಕೃಷ್ಟ ಮಾಹಿತಿ ಹೆದ್ದಾರಿ ನಿರ್ಮಾಣದಂಥ ಹಲವು ವಿಷಯಗಳನ್ನು ಒಳಗೊಂಡಿತ್ತು. ಜಾಗತಿಕ ಮಟ್ಟದ ಯಾವುದೇ ಅರ್ಥ ವ್ಯವಸ್ಥೆಯಾಗಲೀ ಇಲ್ಲವೆ ಸಂಸ್ಕೃತಿಯಾಗಲೀ ವಿಶ್ವ ಮಟ್ಟದ ಯಾವುದೇ ಕ್ರೀಡೆಯಾಗಲೀ ಇಲ್ಲವೆ ಮನರಂಜನೆಯಾಗಲೀ ಯಾವುದೆ ದೇಶಗಳ ನಡುವಿನ ವ್ಯಾಪಾರ ವ್ಯವಹಾರದಷ್ಟು ಜಾಗತೀಕರಣಗೊಳ್ಳುವುದು ಅಗತ್ಯವಾಗಿತ್ತು. ಜಗತ್ತಿನ ಪ್ರತಿಯೊಂದು ಮನೆಯಲ್ಲೂ ಈ ಸಂಕೇತಗಳು ಬೆಳಗಬೇಕಾಗಿತ್ತು ಮತ್ತು ಹಣಕಾಸಿನ ಪರಿಣಾಮಕಾರಿ ನಿರ್ಣಯಗಳನ್ನು ಕೈಗೊಳ್ಳಲು ಬೇಕಾದ ಪ್ರಯಾಣದ ಕಾಲವನ್ನು ಪೂರ್ತಾ ಉಳಿಸಬೇಕಾಗಿತ್ತು. ವಸಾಹತುಶಾಹಿಯ ಆಕ್ರಮಣ ಪೂರ್ಣಗೊಳ್ಳಲು ಎರಡನೆಯ ಕೈಗಾರಿಕಾ ಕ್ರಾಂತಿಯ ತಂತ್ರಜ್ಞಾನಗಳು ಅವಶ್ಯಕವಾಗಿದ್ದ ಹಾಗೆಯೆ ಈ ಹೊಸ ಬಗೆಯ ವಿಶ್ವಾತ್ಮಕವಾದ ಸಾಮ್ರಾಜ್ಯಶಾಹಿಯ ಆರಂಭಕ್ಕೆ ಜಾಗತಿಕ ಯುದ್ಧಾನಂತರದ ಕಾಲದ ಬೃಹತ್ ತಂತ್ರಜ್ಞಾನ ಅನ್ವೇಷಣೆಯೂ ಅತ್ಯವಶ್ಯಕವಾಗಿತ್ತು ಎಂದು ಯಾರೂ ಸಲಹೆ ನೀಡಬಹುದಿತ್ತು.
ಏಳನೆಯದು, ಈ ಸಮಗ್ರವಾದ ಸರಣಿಯನ್ನು ಎರಡು ದೃಷ್ಟಿಕೋನಗಳಿಂದ ಅಸ್ಪಷ್ಟವಾಗಿರುವ ಕಾನೂನು ನಿಯಮಗಳ ಸಂಕೀರ್ಣ ವ್ಯವಸ್ಥೆಯಿಂದ ಎತ್ತಿ ಹಿಡಿಯಲಾಗಿದೆ. ಅವು ಐಎಂಎಫ್, ವಿಶ್ವಬ್ಯಾಂಕ್, ಐಎಫ್ಐ, ಗ್ಯಾಟ್, ವಿಶ್ವ ವ್ಯಾಪರ ಸಂಸ್ಥೆ ಮೊದಲಾದ ನಿಯಮಿತ ಆಡಳಿತ ಪದ್ಧತಿಗಳಲ್ಲೆಲ್ಲ ಮೊದಲನೆಯವು. ಇವು ಒಟ್ಟಿಗೆ ಸೇರಿ ಜಗತ್ತಿನ ಮೇಲೆ- ಏಕರೂಪದ ನೀತಿ ನಿರ್ಧಾರಗಳನ್ನು , ಕರಾರುಗಳನ್ನು ಮತ್ತು ಶರತ್ತುಗಳನ್ನು ಹೇರುವ ಹೊಸ ಜಾಗತಿಕ ಸರಕಾರವಾಗಿ ತ್ವರಿತಗತಿಯಲ್ಲಿ ರೂಪ ತಳೆಯುತ್ತಿತ್ತು. ಈ ವ್ಯವಸ್ಥೆಯನ್ನು ಪರಿಪೂರ್ಣಗೊಳಿಸುವಲ್ಲಿ ಈ ಸಂಸ್ಥೆಗಳೇ ಕೇಂದ್ರವಾಗಿದ್ದವು. ಪ್ರತಿಯೊಂದು ರಾಷ್ಟ್ರದ ಪ್ರಭುತ್ವ ಒಪ್ಪಿ ಅನುಸರಿಸುವಂಥ ತಮ್ಮದೆಯಾದ ಅತಿ ಸಂಕೀರ್ಣವಾದ ಕಾನೂನು ಚೌಕಟ್ಟುಗಳು ಮತ್ತು ನಿಯಮಿತ ಆಡಳಿತ ಪದ್ಧತಿಗಳನ್ನು ಅವು ಹೊಂದಿದ್ದವು. ಆದರೆ ಈ ಜಾಗತೀಕರಣದ ಕಾಯಿದೆ ಮತ್ತು ಪರಮಾಧಿಕಾರದಷ್ಟೇ ಸಮಾನವಾದ ಮತ್ತು ತುಂಬಾ ಮುಖ್ಯವಾದ ದೃಷ್ಟಿಕೋನವೆಂದರೆ ಅಮೆರಿಕಾದ ಕಾಯಿದೆಗಳಿಗೆ ಹೆಚ್ಚು ಹೊಂದಿಕೆಯಾಗುವಂಥ-ಪಡಿಯಚ್ಚಿನಂಥ- ಕಾಯಿದೆಗಳನ್ನಾಗಿ ತಮ್ಮ ದೇಶದ ಕಾಯಿದೆಗಳನ್ನು ಬದಲಿಸಲು ರಾಷ್ಟ್ರೀಯ ಸರಕಾರಗಳನ್ನು ನಿರಂತರವಾಗಿ ಒತ್ತಾಯ ಪಡಿಸುತ್ತಲೇ ಇರುವುದು. ವಾಷಿಂಗ್ಟನ್ಅನ್ನು ತನ್ನ ರಾಜಧಾನಿಯನ್ನಾಗಿ ಪಡೆದ ಭೌಗೋಳಿಕ ಗಡಿರೇಖೆ ರಹಿತ ಸಾಮ್ರಾಜ್ಯ ದೂರದೂರದಲ್ಲ್ಲಿರುವ ರಾಷ್ಟ್ರ ಪ್ರಭುತ್ವಗಳ ಒಳಡಾಳಿತಗಳಲ್ಲಿ ಈ ಕೆಳಗಿನ ಮೂರು ಸಂದರ್ಭಗಳಲ್ಲಿ ಸಕ್ರಿಯವಾಗಿ ಪಾಲುಗೊಳ್ಳುತ್ತದೆ.  1. ರಾಷ್ಟ್ರದ ಆಚೀಚಿನ ಖಾಸಗಿ ಬಂಡವಾಳದ ಶಕ್ತಿ ಮತ್ತು ಸೆಳೆತದ ಮೂಲಕ, 2. ರಾಷ್ಟ್ರಾತೀತ ಸಂಸ್ಥೆ (ವಿಶ್ವ ವ್ಯಾಪರ ಸಂಸ್ಥೆ ಮೊದಲಾದವು)ಗಳ ನಿಯಮಿತ ಆಡಳಿತ ಪದ್ಧತಿಗಳ ಮೂಲಕ, 3. ಬೇರೆ ಬೇರೆ ದೇಶಗಳ ಕಾಯಿದೆಗಳನ್ನು ಅಮೆರಿಕ ಕಾಯಿದೆಯ ನಕಲನ್ನಾಗಿ ಮಾಡುವುದರ ಮೂಲಕ.
ಎಂಟನೆಯದು, ಈ ಹೊಸಬಗೆಯ ಜಾಗತಿಕ ಸಾಮ್ರಾಜ್ಯಶಾಹಿಗೆ ನವೀನ ಮಾದರಿಯ ಸೈನಿಕ ತಂತ್ರಜ್ಞಾನದ ಅಗತ್ಯತೆ ಉಂಟಾಯಿತು. ಪ್ರಖ್ಯಾತ 'ಸ್ವಯಂಚಾಲಿತ ರಣರಂಗ ' ಇದಕ್ಕೊಂದು ಉದಾಹರಣೆಯಾಗಿದೆ.  ಈ ಮೂಲಕ ಪ್ರಪಂಚದಾದ್ಯಂತ ಬೆಳೆಯುತ್ತಿರುವಂತೆ ಗ್ರಹಿಸಲಾಗಿರುವ ಸಣ್ಣ ಪುಟ್ಟ ಬೇರೆ ಬೇರೆ ಶತ್ರುಗಳ ವಿರುದ್ಧ ಸಾಮ್ರಾಜ್ಯಶಾಹಿಯ ಶಕ್ತಿ ಪರಿಣಾಮಕಾರಿಯಾಗಿ ಮತ್ತು ತೀವ್ರಗತಿಯಲ್ಲಿ ದಾಳಿ ಮಾಡಲು ಸಾಧ್ಯವಾಗಿದೆ. ಹಿಂದಿನ ಯುಗೋಸ್ಲಾವಿಯಾ ಮತ್ತು ಇತ್ತೀಚೆಗೆ ಇರಾಕ್ ಮೇಲೆ ದಾಳಿ ಮಾಡಿರುವುದನ್ನು ನಾವು ಕಂಡಿದ್ದೇವೆ. ಈ ಎರಡೂ ಸಂದರ್ಭಗಳು ಸಾಮ್ರಾಜ್ಯಶಾಹಿಯ ನೈತಿಕ ಹಕ್ಕು ಸ್ಥಾಪನೆ ಮತ್ತು ಸೈನಿಕ ತಂತ್ರಜ್ಞಾನಗಳ ಪರಿಕ್ಷಾರ್ಥ ಸಾಧನಗಳಾಗಿ ಬಳಕೆಯಾಗಿವೆ.
ಒಂಬತ್ತನೆಯದು, ರಾಷ್ಟ್ರೀಯ ಸಂಸ್ಥೆಗಳು ಹೊಸ ಸಾಮ್ರಾಜ್ಯಶಾಹಿ ಆಡಳಿತ ಕಾಯಿದೆಗಳನ್ನು ಹೇರಲು ಬಳಸುವ ಹಾಗೆಯೆ ಸಾಮ್ರಾಜ್ಯಶಾಹಿ ಆಕ್ರಮಣದ ನೈತಿಕ ಸಮರ್ಥನೆಗಾಗಿ ಕುಂದಿದ ಪರಮಾಧಿಕಾರ ಮತ್ತು  ನಿಯಮಾವಳಿಗಳನ್ನು, ವಿಶ್ವಸಂಸ್ಥೆಯೊಂದಿಗೆ ವಿಶೇಷವಾಗಿ ಭದ್ರತಾ ಮಂಡಳಿಯೊಂದಿಗಿನ ಸಂಬಂಧಗಳನ್ನು ಸತತವಾಗಿ ಮರುಕರಾರಿಗೆ ಒಳಪಡಿಸುತ್ತಿರುತ್ತವೆ. ಅಮೆರಿಕಾದ ಸೈನಿಕ ಕಾರ್ಯಾಚರಣೆಗಳನ್ನು ಅಧಿಕೃತಗೊಳಿಸಲು ವಿಶ್ವಸಂಸ್ಥೆಯನ್ನು ಬಳಕೆ ಮಾಡಿಕೊಂಡಿರುವುದು 1950ರ ಕೊರಿಯಾ ವಿರುದ್ಧದ ಯುದ್ಧದಷ್ಟು ಹಳೆಯದು. ನಂತರದ ಆ ಮುಂದಿನ ಇಪ್ಪತ್ತು ವರುಷಗಳ ಕ್ರಾಂತಿಕಾರಿ ಉತ್ಥಾನ ಕಾಲದಲ್ಲಿ ಈ ಅಪವಿತ್ರ ಮೈತ್ರಿ ಕುಸಿದು ಬಿತ್ತು. 1970ರ ಮಧ್ಯಕಾಲದ ಸ್ಥಿತ್ಯಂತರ ಸಂದರ್ಭದಲ್ಲಿ, ವಿಯೆಟ್ನಾಂ ಸ್ವಾತಂತ್ರ್ಯಗೊಳ್ಳುವ ಸಮಯದಲ್ಲಿ ವಿಶ್ವಸಂಸ್ಥೆಯೂ ಆ ಕಾಲದ ಕ್ರಾಂತಿಕಾರಿ ಮನಸ್ಥಿತಿಯನ್ನು ಕಟ್ಟಿ ಹಾಕಲು ಪ್ರಯತ್ನಿಸಿತ್ತು. ಹಾಗಾಗಿ 1974ರಲ್ಲಿ ಪ್ರಭುತ್ವದ ಆರ್ಥಿಕ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತ ಶಾಸನವನ್ನು ಜಾರಿಗೆ ತಂದಿತು. ಈ ಮೂಲಕ ಸದಸ್ಯ ರಾಷ್ಟ್ರಗಳು 'ವಿದೇಶಿ ಬಂಡವಾಳದ ಮೇಲೆ ಕಾನೂನು ಮತ್ತು ಅಧಿಕಾರ ಚಲಾಯಿಸುವ '  ಮತ್ತು 'ಬಹುರಾಷ್ಟ್ರೀಯ ಸಂಸ್ಥೆಗಳ ಚಟುವಟಿಗಳ ಆಡಳಿತ ಮತ್ತು ಮೇಲ್ವಿಚಾರಣೆ ನಡೆಸುವ ' ಅಲ್ಲದೆ 'ವಿದೇಶಿ ಆಸ್ತಿಗಳ ಮಾಲಿಕತ್ವ ಬದಲಿಸುವ ಅಥವಾ ಸ್ವಾಧೀನ ತಪ್ಪಿಸುವ, ರಾಷ್ಟ್ರೀಯಗೊಳಿಸುವ ' ಹಕ್ಕು ಹೊಂದಿರುವುದನ್ನು ಘೋಷಿಸಿತು. ನಾನಿಲ್ಲಿ ನಿಮಗೆ ಏನು ನೆನಪಿಸುತ್ತಿದ್ದೇನೆಂದರೆ 1966ರ ಮೂಲಸ್ವರೂಪದ ರಾಷ್ಟ್ರೀಯವಾದಗಳು ಮತ್ತು ಕ್ರಾಂತಿಕಾರತನದ ಉತ್ಕರ್ಷಗಳಿಂದಾಗಿ ಸಾಧಿಸಿದ ವಿಶ್ವದ ಬಲಾಬಲಗಳ ವಿಭಿನ್ನ ಹೊಂದಾಣಿಕೆ ಸಂದರ್ಭದಲ್ಲಿ ವಿಶ್ವಸಂಸ್ಥೆಯ ತೃತೀಯ ಜಗತ್ತಿನ ಹಣಕಾಸು ರಾಷ್ಟ್ರೀಯವಾದದ ಮೂಲಭೂತ ಆಶೋತ್ತರಗಳನ್ನು ತಾನೆ ಮುಂದಾಗಿ ಒಪ್ಪಿಕೊಂಡುಬಿಟ್ಟಿತು. ನಂತರ ಇದು ಭದ್ರತಾ ಮಂಡಳಿಯ ಮರು ಅಮೆರಿಕೀಕರಣದ ಉಸ್ತುವಾರಿ ವಹಿಸಿಕೊಂಡಿದ್ದ ಕೋಫಿ ಅನ್ನಾನ್ ಅವರಿಗೆ ಘೋರತರವಾಗಿ ಪರಿಣಮಿಸಿತು. ಕೊಲ್ಲಿ ಯುದ್ಧದ ಆಕ್ರಮಣ ಕಾಲದಲ್ಲಿ ಭದ್ರತಾ ಮಂಡಳಿ ಮತ್ತು ವಿಶ್ವಸಂಸ್ಥೆಯ ಕಾರ್ಯದರ್ಶಿ ಮತ್ತೆ ಸಾಮ್ರಾಜ್ಯಶಾಹಿ ನೀತಿಯನ್ನು ಅನುಸರಿಸುವ ಪರಿಕರವಾಗಿ ಬದಲಾದವು. ಅಲ್ಲದೆ ಅನ್ನಾನ್ ಅವರ ಕೆಲಸವನ್ನು ತುಂಬ ಸುಲಭ ಮಾಡಿದವು.
ಹತ್ತನೆಯದು, ಅಮೆರಿಕ ಆಕ್ರಮಣದ ನೈತಿಕ ಸಮರ್ಥನೆಯನ್ನು ಭದ್ರತಾ ಮಂಡಳಿಯಿಂದ ಪಡೆದುದೇ ಅಲ್ಲದೆ ಜಗತ್ತಿನ ಬುದ್ಧಿ ಜೀವಿಗಳಲ್ಲಿ ನೈತಿಕ ಒತ್ತಡ ಉಂಟುಮಾಡಲು, ತನ್ನ ಆಲೋಚನೆ ಅಧಿಕೃತಗೊಳಿಸಲು ಮತ್ತು ಸಾಂಸ್ಕೃತಿಕ ಒಪ್ಪಿಗೆ ಪಡೆಯಲು ಅದಕ್ಕೆ ಸಂಕೀರ್ಣ ಬಲವೊಂದರ ಅಗತ್ಯವಿತ್ತು. ಅದನ್ನು ಎಲ್ಲ ಬಗೆಯ ಎನ್ ಜಿಒಗಳಿಂದ, ನವ್ಯೋತ್ತರವಾದ ಅತ್ಯುತ್ತಮ ಚಿಂತಕರಿಂದ, 'ಇತಿಹಾಸ ಮುಗಿತಾಯ' ಚಿಂತನೆಗಳವರೆಗೂ ಪಸರಿಸಿದ ಹಲವು ಬಗೆಯ ದೊಡ್ಡ ದೊಡ್ಡ ಮಾದರಿಗಳನ್ನು ಪಡೆದುಕೊಂಡಿತು. ಅಮೆರಿಕೆಯ ವಿಶ್ವವಿದ್ಯಾನಿಲಯಗಳ ನಯವಂತಿಕೆಯ ನೈತಿಕ ತತ್ವಶಾಸ್ತ್ರಜ್ಞರು 'ನ್ಯಾಯಯುತ ಯುದ್ಧ ' ಪರಿಕಲ್ಪನೆಯ ಅನುಕೂಲವನ್ನು ಹೊಸದಾಗಿ ರೂಪುಗೊಳ್ಳುತ್ತಿರುವ ಸಾಮ್ರಾಜ್ಯಶಾಹಿಯ ನೈತಿಕ ಆರ್ಥಕತೆಯಲ್ಲಿ ಪ್ರತಿಪಾದಿಸುತ್ತಿರುವುದು ನಮಗೆ ಕೇಳಿ ಬರುತ್ತದೆ. ಆಸಕ್ತಿಯ ವಿಷಯವೆಂದರೆ ಮಾನವ ಹಕ್ಕುಗಳು ಮುಂತಾದ ಸಂಸ್ಥೆಗಳ ಪರವಾಗಿ 'ಮೂಗು ತೂರಿಸುವ ಹಕ್ಕು' ರೋಮ್ ಸಾಮ್ರಾಜ್ಯದಲ್ಲಿ ಮೊದಲಿಗೆ ಬೆಳವಣಿಗೆಯಾದುದು. ಅದು ಜಾಗತಿಕ ಪರಿಣಾಮ ಹೊಂದಿರುವುದು ಗಣನೀಯ. ಸಾಮ್ರಾಜ್ಯಶಾಹಿಯ ಕೇಂದ್ರಗಳಲ್ಲಿ ಆರಂಭವಾದರೂ ಸಾಮ್ರಾಜ್ಯಶಾಹಿಯ ಗಿರಾಕಿಗಳಾದ ಮೂರನೆಯ ಜಗತ್ತಿನ ದೇಶಗಳಲ್ಲಿ ಹರಡಿಕೊಂಡಿದೆ. ಸದ್ದಾಂ ಹುಸೇನ್ ಮಾನವ ಹಕ್ಕುಗಳ ವಿಷಯದಲ್ಲಿ ಒಬ್ಬ ರಾಕ್ಷಸನೇ ಇದ್ದಿರಬಹುದು. ಆದರೆ 'ದುಷ್ಟ ಸಾಮ್ರಾಜ್ಯ' ಎಂಬ ಮಾತನ್ನು ಶೀತಲ ಸಮರದ ಕಾಲದಿಂದ ಹಿಡಿದು ಇಂದಿನವರೆಗೂ ಮರುಚಾಲನೆ ನೀಡಲು ಸಾಧ್ಯ. ಅಲ್ಲದೆ ಅಸಹಾಯಕ ಮಕ್ಕಳು, ಹಿಮ್ಮೆಟ್ಟಿದ ಸೈನಿಕರು ಸೇರಿದಂತೆ ಹತ್ತು ಸಾವಿರ ಇರಾಕಿಗಳ ಸಾವು ನ್ಯಾಯಯುತ ಯುದ್ಧದ ವಿಷಾದನೀಯ ದೃಷ್ಟಿಕೋನವೆಂಬುದನ್ನು ಪ್ರತಿನಿಧಿಸಬೇಕಿದೆ. ಈ ನೈತಿಕ ಆರ್ಥಿಕತೆ ಕೂಡ ತನ್ನದೇ ಆದ ಸಂಕೇತಗಳು ಮತ್ತು ಸ್ಥಿತಿಸ್ಥಾಪಕ ಗುಣಗಳನ್ನು ಹೊಂದಿರುತ್ತದೆ ಎಂಬುದನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶವಾಗಿದೆ. ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳು ಶ್ರೇಷ್ಠ ಮೌಲ್ಯಗಳು. ಆದರೆ ಇವು ಸೌದಿ ಅರೇಬಿಯಾದಂಥ ಪ್ರದೇಶಗಳಲ್ಲಿ ಹೆಚ್ಚು ಶ್ರೇಷ್ಠವಾಗಿ ಉಳಿದಿಲ್ಲ. ಆಫಘಾನಿಸ್ತಾನದ ಕೊಲೆಪಾತಕಿ ಧರ್ಮಾಂಧರು ಮತ್ತು ಮಾದಕ ವ್ಯವಹಾರಿಗಳು ನೀತಿವಂತ ಏಜೆಂಟರ ಹಾಗೆ ಚಿತ್ರಿಸಲ್ಪಡುತ್ತಾರೆ. ಅಮೆರಿಕ ಪ್ರಪಂಚದಾದ್ಯಂತ ನಡೆಸಿದ ಕಮ್ಯೂನಿಸ್ಟ್  ವಿರೋಧಿ ಯುದ್ಧದಲ್ಲಿ ಬಹುಕಾಲದವರೆಗೆ ಕಾಲಾಳಾಗಿ ಸೇವೆ ಸಲ್ಲಿಸಿದ 'ಮುಜಾಹಿದ್ದೀನ್'ನಂಥವರೂ ಕೂಡ ಬೃಹತ್ ಇಸ್ಲಾಮಿಕ್ ನ ಕಾರಣ ಮುಂದೊಡ್ಡುತ್ತಾರೆ. ಆದರೆ 'ಇಸ್ಲಾಂ ಮೂಲಭೂತವಾದ'ದ ಹೆಸರಿನಲ್ಲಿ ಬರಲಿರುವ ಮಹಾ ಕೆಡಕನ್ನು ಅವರು ವೈಯಕ್ತಿಕಗೊಳಿಸುತ್ತಾರೆ ಹಾಗೂ ಕಮ್ಯೂನಿಷ್ಯರನ್ನು ಆದಷ್ಟು ಬೇಗ ಸೋಲಿಸಿದ ನಂತರ ತುಂಬಾ ಉಲ್ಲಾಸದಿಂದಿರುತ್ತಾರೆ. ಇಂಥ ಸಿನಿಕ ಏರುಪೇರುಗಳು ಜಾಗತಿಕ ಮಾಧ್ಯಮದ ಪಿತೂರಿ ಮತ್ತು ಮಾನವ ಹಕ್ಕುಗಳ ಯಾಂತ್ರಿಕ ಸಂಸ್ಥೆಗಳು ಸೃಷ್ಟಿಸಿದ ನೈತಿಕ ವ್ಯವಸ್ಥೆಯ ಪೂರ್ವಸ್ಥಿತಿಗೆ ವಂದಿಸಿ ಯಾರೊಬ್ಬರ ಗಮನಕ್ಕೂ ಬಾರದೆ ಹಾಗೆ ಕಣ್ಮರೆಯಾಗುತ್ತವೆ.
ಹನ್ನೊಂದನೆಯದು, ನಾಗರಿಕ ಹಕ್ಕು ಮತ್ತು ಪರಮಾಧಿಕಾರದ ಹೊಸ ವ್ಯವಸ್ಥೆಯೊಂದು ಮೈಪಡೆಯುತ್ತಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಈಗಾಗಲೇ ನಾನು ಹೊಸಕಾನೂನಿನ ಆಡಳಿತ ವ್ಯವಸ್ಥೆ ರೂಪತಳೆದುದನ್ನು ತಿಳಿಸಿದ್ದೇನೆ. ಅವಳಿ ನಗರಗಳಾದ ವಾಷಿಂಗ್ಟನ್ ಮತ್ತು ನ್ಯೂಯಾರ್ಕ್ ಈ ಸಾಮ್ರಾಜ್ಯದ ಸಂಯುಕ್ತ ರಾಜಧಾನಿಯ ಹಾಗೆ ಕಾರ್ಯ ನಿರ್ವಹಿಸುತ್ತವೆ ಎಂದು ಯಾರೂ ಹೇಳಬಹುದು. ಏಕೆಂದರೆ ಇವು ಅಮೆರಿಕಾ ಸಂಯುಕ್ತ ಸಂಸ್ಥಾನ ಸರಕಾರದ ಕೇಂದ್ರ ಕಾರ್ಯಸ್ಥಾನ ಮಾತ್ರವಾಗಿರದೆ ಈ ಹೊಸ ಸಾಮ್ರಾಜ್ಯದ ಪರಮಾಧಿಕಾರ ಹೊಂದಿದ ಪ್ರಮುಖ ಕೇಂದ್ರೀಯ ಸಂಸ್ಥೆಗಳ ಕೇಂದ್ರ ಕಾರ್ಯಸ್ಥಾನವೂ ಆಗಿದೆ. ಅವುಗಳೆಂದರೆ: ವಾಲ್ ಸ್ಟ್ರೀಟ್, ಐಎಂಎಫ್, ವಿಶ್ವಬ್ಯಾಂಕ್, ವಿಶ್ವ ವ್ಯಾಪಾರ ಸಂಸ್ಥೆ, ವಿಶ್ವಸಂಸ್ಥೆ ಮುಂತಾದವು, ಈ ನಡುವೆ ನಾಗರಿಕ ಹಕ್ಕುಗಳು ಮೂರು ಬಗೆಗಳಲ್ಲಿ ಪುನರ್ಸಂಘಟನೆಯಾಗಬಹುದು. ಅತಿ ಮುಖ್ಯ ದೇಶಗಳಲ್ಲಿ ಕೀನ್ಸಿಯನ್ ವಾದದ ಕುಸಿತ ಮತ್ತು ತೃತೀಯ ಜಗತ್ತಿನಲ್ಲಿ ಸುಧಾರಣಾವಾದಿ ರಾಷ್ಟ್ರೀಯವಾದ ಎಂದರೆ ಸಾಮಾಜಿಕ ಮತ್ತು ಆರ್ಥಿಕ ಅರ್ಹತೆಗಳು ನಾಗರಿಕ ಹಕ್ಕನ್ನು ಕಟ್ಟಿಹಾಕಿರುವುದು ಈಗ ಸೈದ್ಧಾಂತಿಕವಾಗಿಯೂ ಕಡಿಮೆಯಾಗಿದೆ ಹಾಗೂ ಸಮಾಜ ಹಿತದ ಅಂತಿಮ ನ್ಯಾಯಕಾರನ ಹಾಗೆ ಮಾರುಕಟ್ಟೆಗೆ ಹೆಚ್ಚು ದೂರವಾಗಿದೆ. ಬಂಡವಾಳಶಾಹಿ ಬಯಸುವ ಹಾಗೆ ಮಾರುಕಟ್ಟೆ ಆದಾಯವನ್ನು ಕೆಳಹಂತಗಳ ಬದಲು ಮೇಲು ಹಂತಗಳಿಗೆ ಮರು ಹಂಚಿಕೆ ಮಾಡಿದರೆ - ಜಾಗತೀಕರಣದ ವಿರುದ್ಧ ಈ ಜನವಾದಿ ಸಮಾವೇಶ ಅಪೇಕ್ಷೆ ಪಡುವ ಹಾಗೆ - ಕೆಳವರ್ಗದಲ್ಲಿರುವವರು ತಲೆ ಎತ್ತಲಾಗದಂತೆ ಸೊರಗುತ್ತಾರೆ. ಕುವೈತ್ ತನ್ನ ಬಂದಿಗಳನ್ನು, ಹೊರದೇಶದ ಜನರನ್ನು, ಪೌರರಲ್ಲದ ಕಾರ್ಮಿಕರನ್ನು ನಡೆಸಿಕೊಂಡ ರೀತಿಯಲ್ಲೆ ಅವರನ್ನೂ ಜಗತ್ತಿನಾದ್ಯಂತ ನಡೆಸಿಕೊಳ್ಳಲಾಗುತ್ತದೆ. ಇಲ್ಲವೆ ಮ್ಯಾಡ್ ಲೈನ್ ಆಲ್ ಬ್ರೈಟ್ ಅಂಥವರು ಮತ್ತು ಆಧುನಿಕೋತ್ತರದ ಅತ್ಯುತ್ತಮ ಚಿಂತನಕಾರರು- ರಾಷ್ಟ್ರೀಯ ಪ್ರಭುತ್ವ ಪ್ರತಿನಿತ್ಯ ನಾಶವಾಗುವುದನ್ನು ನಾಗರಿಕ ಹಕ್ಕು ಉಳಿಸಬಲ್ಲುದೆ? ಅಂದರೆ ರಾಷ್ಟ್ರೀಯ ಪ್ರಭುತ್ವವನ್ನು ವಿಭಿನ್ನವಾದ ಜನಾಂಗೀಯ ಅನನ್ಯತೆಯ ಯೋಜನೆಯಿಂದ ಮರುಸಂಘಟಿಸಬೇಕಿದೆಯೆ ಹೊರತು ನಾಗರಿಕ ಹಕ್ಕುಗಳ ಸಂಯುಕ್ತ ಯೋಜನೆಯಿಂದ ಅಲ್ಲ-ವೆಂದು ಆತುರಾತುರದಲ್ಲಿ ಸಂಯುಕ್ತ ಹೇಳಿಕೆ ನೀಡುತ್ತಾರೆ.  ಒಂದು ಕಾಲದಲ್ಲಿ ಸಮಾನತೆಯಾಗಿದ್ದುದು ಇಂದು ಅನನ್ಯತೆಯಾಗಿದೆ. ಸಾಮ್ರಾಜ್ಯಶಾಹಿವಾದ ಅಂತಿಮವಾಗಿ ಕಟ್ಟಕಡೆಯ ವರ್ಗದ ಧ್ರುವೀಕರಣವನ್ನು ಜಾಗತಿಕ ಮಟ್ಟದಲ್ಲಿ ತರುವುದೆಂದರೆ ಎಲ್ಲ ಕಡೆ ಸಾಮ್ರಾಜ್ಯದ ಪ್ರಜೆಗಳನ್ನು ಕಾಣುವುದು ಎಂದರ್ಥ. ಬಾಂಬೆ, ದೆಹಲಿ, ಸಾವೊಪೌಲೆ, ಟೋಕಿಯೋ, ಫ್ರಾಂಕ್ ಫರ್ಟ್, ನ್ಯೂಯಾರ್ಕ್, ಬೀಜಿಂಗ್ ನಂಥ ನಗರಗಳಲ್ಲೂ ಕೂಡ ಅಲ್ಲಿಯ ಪೌರರಲ್ಲದವರೆ ತುಂಬಿಕೊಳ್ಳುತ್ತಾರೆ. ಈ ನಗರಗಳಲ್ಲಿ ವಾಸಿಸುವವರು ನಗರದ ಹೊರವಲಯಗಳಲ್ಲಿ , ನಿಷೇಧಿತ ಸ್ಥಳಗಳಲ್ಲಿ, ಇಕ್ಕಟ್ಟಿನ ವಠಾರಗಳಲ್ಲಿ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಉಳಿಯುತ್ತಾರೆ. ಶಾಂಘೈನಂಥ ನಗರಗಳಲ್ಲಿ ರೈತರ ಸಂಖ್ಯೆ ಅಪಾರವಾಗಿ ಬೆಳೆಯುತ್ತಿದೆ. ಈಗಾಗಲೇ ಆ ನಗರದಲ್ಲಿ ಕೋಟಿಗಟ್ಟಲೆ ಜನ ಹಿಂದುಳಿದ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಆದರೂ ಅವರು ತಮ್ಮ ಸರಕಾರದಿಂದ ತಾವು ಎಲ್ಲಿಬೇಕಾದರೂ ನೆಲೆಸಬಹುದೆಂಬ ಅನುಮತಿಯನ್ನೇನೂ ಪಡೆದುಕೊಂಡಿಲ್ಲ. ಅವರು ಅತತವಾಗಿ ತಲೆಮರೆಸಿಕೊಂಡಿರಬೇಕಿದೆ ಮತ್ತು ಸರಕಾರದ ಅಂಕಿಅಂಶಗಳಲ್ಲಿ ವ್ಯಕ್ತಿಗಳಾಗದೆ ಉಳಿಯಬೇಕಾದ ಸಂದರ್ಭವೊದಗಿದೆ.
ಹನ್ನೆರಡನೆಯದು, ಜಾಗತೀಕರಣದ ವಿಚಾರಧಾರೆ ರಾಷ್ಟ್ರೀಯ ಪ್ರಭುತ್ವದ ಆಕ್ಷೇಪಣೆಗೆ ಎದುರಾಗಿ ಅಸಂಬದ್ಧವಾದುದನ್ನೇ ಹೆಚ್ಚು ಹುಟ್ಟು ಹಾಕಿದೆ ಹಾಗೂ ಬಂಡವಾಳದ ವಿರಾಟ್ ರೂಪದೆದುರು ತನ್ನ ಅವಸಾನವನ್ನೂ ಕಲ್ಪಿಸಿಕೊಂಡಿದೆ. ವಾಸ್ತವವಾಗಿ, ರಾಷ್ಟ್ರೀಯ ಪ್ರಭುತ್ವದ ಸ್ವರೂಪ ಜೀವಂತವಾಗಿರಬೇಕಿದ್ದು, ಚಿಗುರೊಡೆಯುತ್ತಿರಬೇಕಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನ ಹೆಮ್ಮೆಯಿಂದ  ಬೀಗುವಂಥ ರಾಷ್ಟ್ರೀಯವಾದಿ ಮನೋಭಾವ ಕೇಂದ್ರಿತವಾದ ರಾಷ್ಟ್ರೀಯ ಮಟ್ಟದ ಸೈನ್ಯ ವ್ಯವಸ್ಥೆಯನ್ನು ಹೊಂದಿದೆ. ಯುರೋಪ್ ಒಕ್ಕೂಟದ ಅತಿ ಶಕ್ತಿಶಾಲಿ ಸದಸ್ಯ ರಾಷ್ಟ್ರವಾದ ಜರ್ಮನಿ ಪೂರ್ವವಲಯವನ್ನು ಪರಿಣಾಮಕಾರಿ ವಸಾಹತುವನ್ನಾಗಿಸಿಕೊಂಡು ವಿಶಾಲ ರಾಷ್ಟ್ರ ಸಂಘಟನೆಯನ್ನು  ಇತ್ತೀಚೆಗಷ್ಟೆ ಸಾಧಿಸಿದೆ. 'ಪೂರ್ವ ಏಷಿಯಾದ ಹುಲಿಗಳು' ಎಂದೇ ಕರೆಯಲಾಗುವ ದೇಶಗಳ ಅಸಾಧಾರಣ ಬೆಳವಣಿಗೆಯನ್ನು ಪ್ರಬಲ ಮಧ್ಯಸ್ಥಗಾರ ರಾಷ್ಟ್ರದ ನೆರವಿಲ್ಲದೆ ಯೋಚಿಸುವುದು ಕಷ್ಟ.  ನವ ಉದಾರ ಖಾಸಗೀಕರಣ ನೀತಿಯನ್ನು ಪ್ರತಿಯೊಂದು ರಾಷ್ಟ್ರ ಪ್ರಭುತ್ವವೂ ಪ್ರಪಂಚದಾದ್ಯಂತ ಕಾರ್ಯರೂಪಕ್ಕೆ ತಂದವು. ಬಂಡವಾಳ ಯಾವುದೇ ನಿರ್ಬಂಧಗಳನ್ನು ಬಯಸುವುದಿಲ್ಲ. ಆದರೂ ಕಾರ್ಮಿಕ ಆಡಳಿತ ವ್ಯವಸ್ಥೆ ಯಾವಾಗಲೂ ರಾಷ್ಟ್ರೀಯವಾಗಿರುತ್ತದೆ. ವಲಸಿಗರು ಒಂದು ರಾಷ್ಟ್ರೀಯ ಆಡಳಿತ ವ್ಯವಸ್ಥೆಯಿಂದ ಮತ್ತೊಂದು ವ್ಯವಸ್ಥೆಗೆ ಚಲಿಸಿದರೂ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ನೀವು ಮೆಕ್ಸಿಕೋ ನಗರದಲ್ಲಿ ಮೆಕ್ಸಿಕನ್ನರನ್ನು ಮಾತ್ರ ಕೇಳಬೇಕು ಇಲ್ಲವೆ ಕ್ಯಾಲಿಫೋರ್ನಿಯಾದಲ್ಲಿ ಅದಲು ಬದಲು ಮಾಡಿ ಕೇಳಬೇಕು. ಕೊಲ್ಲಿ ರಾಷ್ಟ್ರಗಳಲ್ಲಿ ಭಾರತೀಯ ಕಾರ್ಮಿಕರ ಬಗ್ಗೆ ಏನೂ ಮಾತನಾಡುವ ಹಾಗಿಲ್ಲ. ಜಾಗತೀಕರಣ ಏನನ್ನು ಬಯಸುತ್ತದೆ ಎಂದರೆ ರಾಷ್ಟ್ರೀಯ ಪ್ರಭುತ್ವ ಕಾರ್ಮಿಕರ ಸಂಬಂಧದಲ್ಲಿ ದುರ್ಬಲವಾಗಿರಬೇಕು, ಬಂಡವಾಳದ ಪರವಾಗಿ ಹೆಚ್ಚು ಬದ್ಧವಾಗಿರಬೇಕು ಎಂದು.
ಅಂತಿಮವಾಗಿ ಸಂಸ್ಕೃತಿಯ ಪುನರ್ ಸಂಘಟನೆ ವ್ಯಾಪಕವಾಗಬೇಕಿದೆ. ಇಲ್ಲಿನ ಕೇಂದ್ರೀಕೃತ ಸತ್ಯವೆಂದರೆ ನನ್ನ ದೃಷ್ಟಿಯಲ್ಲಿ ನಾವು ಜಗತ್ತಿನಾದ್ಯಂತ ಬಂಡವಾಳಶಾಹಿ ನಾಗರಿಕತೆಯೊಂದು ಮೈ ಪಡೆದುಕೊಳ್ಳುತ್ತಿರುವುದಕ್ಕೆ ಸಾಕ್ಷೀದಾರರಾಗಿದ್ದೇವೆ. ಅದರಲ್ಲಿ ಏಕರೂಪ ನಾಗರಿಕತೆಯಲ್ಲಿ ಹಲವು ವೈವಿಧ್ಯತೆಗಳ ಹಾಗೆ ರಾಷ್ಟ್ರೀಯ, ಪ್ರಾಂತೀಯ, ಮತ್ತು ಸ್ಥಳೀಯ ಸಂಸ್ಕೃತಿಗಳನ್ನು ಪುನರ್ಸಂಘಟಿಸಬೇಕಿದೆ.  ನಾಗರಿಕತೆಯ ಏಕರೂಪತೆಯಲ್ಲಿ ವಸ್ತು ಉಪಯುಕ್ತತೆಯ ಮಟ್ಟ ತೀರಾ ತಳಮಟ್ಟದಲ್ಲಿರುತ್ತದೆ. ಆದರೆ ಎರಡನೆಯ ಹಂತದಲ್ಲಿ ಅಂದರೆ ಆದೇಶಿತ ವಾಸ್ತವದಲ್ಲಿ ವಸ್ತುವಿನ ಮೂಲರೂಪ ಎಲ್ಲ ಬಗೆಯ ವ್ಯತ್ಯಾಸಗಳನ್ನು ಉಳಿಸಿಕೊಂಡು ಬರುತ್ತದೆ, ಉತ್ತೇಜಿಸುತ್ತದೆ, ಉತ್ಪಾದನೆಯನ್ನು ಮಾಡುತ್ತದೆ. ಏಕೆಂದರೆ ಆ ವೈವಿಧ್ಯತೆ ಇಲ್ಲದೆ ಸ್ವಾತಂತ್ರ್ಯದ ಭ್ರಮೆ ಮತ್ತು ಆಯ್ಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಮಾರುಕಟ್ಟೆಯ ಅತ್ಯಂತ ಮೂಲಭೂತ ಅಂಶ. ಆದ್ದರಿಂದ ಜನಾಂಗೀಯತೆ ಎಂಬುದು ಆಧುನಿಕ ಮಾದರಿಯ ವಿನ್ಯಾಸದಲ್ಲಿ ಅಷ್ಟೊಂದು ಪ್ರಮುಖ ಭಾಗವಾಗಿದೆ. ಉದಾಹರಣೆಗೆ, ಜಗತ್ತಿನ ಮಾರುಕಟ್ಟೆಗಳನ್ನು ಮತ್ತು ರಾಷ್ಟ್ರಮಟ್ಟದ ಮಾರುಕಟ್ಟೆಗಳನ್ನು ಮೆಟ್ರೋಪಾಲಿಟನ್ ಮಾರುಕಟ್ಟೆಗಳ ಮಾದರಿಯಲ್ಲಿ ಮರುಏರ್ಪಾಟು ಮಾಡಿರಬೇಕಿತ್ತು. ಫ್ರೆಡರಿಕ್ ಎಂಜೆಲ್ಸ್ ಒಮ್ಮೆ ಆಶಾವಾದದಿಂದ ಹೀಗೆ ಬರೆದ - 'ಸಂಸ್ಕೃತಿಯ ಕ್ಷೇತ್ರದಲ್ಲಿಡುವ ಪ್ರತಿಯೊಂದು ಹೆಜ್ಜೆ ಸ್ವಾತಂತ್ರ್ಯದ ಕಡೆಗಿಡುವ ಹೆಜ್ಜೆ'. ಬಂಡವಾಳಶಾಹಿಯ ಮೂಲಭೂತ ಸಾಂಸ್ಕೃತಿಕ ಯೋಜನೆ ಉಳ್ಳವರ ಮಾರುಕಟ್ಟೆಯಲ್ಲಿ ಸ್ವಾತಂತ್ರ್ಯದ ರೂಪದಲ್ಲಿ ಚಲಾಯಿಸುವ ಪ್ರತಿಯೊಂದು ಉತ್ಪಾದನಾ ವಸ್ತುವಿನ ಸ್ವತಂತ್ರಹೀನ ಕಂತೆಯಾಗಿ ಇರುತ್ತದೆ ಎಂದು ಬಡವನಾದವನು ಊಹಿಸಿಕೊಳ್ಳಲು ಸಾಧ್ಯವಿಲ್ಲ.
ವಾಲ್ಟರ್ ಬೆಂಜಮಿನ್ ನಾಗರಿಕತೆಯ ಪ್ರತಿಯೊಂದೂ ದಾಖಲೆ ಅದೇ ಕಾಲದಲ್ಲಿ ಅನಾಗರಿಕತೆಯ ದಾಖಲೆಯೂ ಆಗಿರುತ್ತದೆ ಎಂದು ಹೇಳಿದಾಗ ಬಹುಶಹ ಆತ ಸತ್ಯಕ್ಕೆ ಹತ್ತಿರವಿದ್ದ. ನಾಗರಿಕತೆ ಎಂದರೆ ಆತನ ಅರ್ಥದಲ್ಲಿ ಬಂಡವಾಳಶಾಹಿ ನಾಗರಿಕತೆಯಲ್ಲಿ  ಸೌಂದರ್ಯೀಕರಣ ಕ್ರಿಯೆ ಮತ್ತು ಸಂಪತ್ತೀಕರಣ ಕ್ರಿಯೆ ಜೊತೆಯಲ್ಲಿ ಕೈ ಹಿಡಿದು ಸಾಗುತ್ತವೆ. ಹಾಗಾಗಿ ಅದರ ವಿನಿಮಯ ಮೌಲ್ಯದ ಹೆಸರಿನಿಂದ ಕರೆಯಲಾಗುವ ಪೈಶಾಚಕತ್ವದೊಂದಿಗೆ ಹೆಣೆದುಕೊಳ್ಳಲಾರದೆ ಹೋದರೆ ನಮಗೆ ಉಪಯುಕ್ತತೆಯ ಮೌಲ್ಯ ದೊರಕುವುದು ಸಾಧ್ಯವಿಲ್ಲ.
ಈ ಅಭಿಪ್ರಾಯದೊಂದಿಗೆ 'ಜಾಗತೀಕರಣ'ದ ವಿಷಯವನ್ನು ಇಲ್ಲಿಗೆ ಕೈ ಬಿಡೋಣ. ಈ ವಿಷಯದಲ್ಲಿ ನಾನು ವಾಸ್ತವಿಕವಾಗಿ ಇಷ್ಟು ವಿಸ್ತಾರವಾಗಿ ಮಾತಾಡಬೇಕೆಂದುಕೊಂಡಿರಲಿಲ್ಲ. ಇನ್ನು ಸಂಸ್ಕೃತಿಯ ವಿಷಯಕ್ಕೆ ಬರೋಣ. ಈ ವಿಚಾರದಲ್ಲಿ ನಾನು ತಜ್ಞನಲ್ಲದಿದ್ದರೂ ಅಲ್ಪಸ್ವಲ್ಪ ತಿಳುವಳಿಕೆಯಿದೆ ಎಂಬುದು ನಿಮ್ಮಲ್ಲಿ ಕೆಲವರ ನಂಬಿಕೆ. ಬಂಡವಾಳಶಾಹಿ ಜಾಗತೀಕರಣದ ಈ ಯುಗದಲ್ಲಿ 'ಸಂಸ್ಕೃತಿ' ಪದದ ಅರ್ಥ ಸಾಧ್ಯತೆಗಳು ಏನಾಗಿರಬಹುದೆಂದು ನಾನು ಮತ್ತೆ ಮತ್ತೆ ಅಚ್ಚರಿ ಪಟ್ಟಿರುವುದು ನಿಜ. ಆದರೂ ಈಗ ಕೃಷಿ ಮೂಲದ ಎಲ್ಲ ಆಯಾಮಗಳನ್ನು ಮತ್ತು ಜೀವನಾವಶ್ಯಕವಾದ ಆರ್ಥಿಕತೆಯನ್ನು ಏಕರೂಪದ ಜಾಗತಿಕ ನಿಯಮದಡಿ ತರಲಾಗುತ್ತಿದೆ. ಸಮೀರ್ ಅಮೀನ್ ಮಂಡಿಸಿರುವ ಹಾಗೆ ತೀರಾ ಕೆಳಹಂತದಲ್ಲಿರುವ ಜನರಿಗೆ ಸಂಸ್ಕೃತಿ ಗೋಳಾಕಾರವಾಗಿ ಕಾಣಿಸಿಕೊಳ್ಳುತ್ತದೆ.  ಅಲ್ಲಿ ಬಳಕೆ ಮೌಲ್ಯಗಳನ್ನು ಬಲಪ್ರಯೋಗ ಮಾಡದ ಮತ್ತು ಸಹಕಾರಿಯುತ ಬಳಕೆ ಮೌಲ್ಯಗಳ ಹಾಗೆ ಉತ್ಪಾದಿಸಲಾಗುತ್ತದೆ ಮತ್ತು ಹಂಚಿಕೊಳ್ಳಲಾಗುತ್ತದೆ. ಅಲ್ಲದೆ ಜೀವನಾವಶ್ಯಗಳನ್ನು ತೃಪ್ತಿ ಪಡಿಸುವುದಕ್ಕಾಗಿ , ವಿನಿಮಯ ಮೌಲ್ಯದ ಮಧ್ಯಸ್ಥಿಕೆ ಇಲ್ಲದ, ಸೌಂದರ್ಯದ ಅಗತ್ಯತೆ ಸ್ಪಷ್ಟವಾಗಿ ಒಳಗೊಂಡಿರುತ್ತದೆ. ಮೂಲಭೂತ ವಿಚಾರದಲ್ಲಿ ಸಾಂಸ್ಕೃತಿಕವಾಗಿ ಉತ್ಪಾದನೆ ಹೀಗೆ ಸಂಸ್ಕೃತಿಯ ನಿರಾಕರಣೆಯಂಥದ್ದಕ್ಕೆ ಸಮಾನವಾಗಿರುತ್ತದೆ. ಇದನ್ನು ನಾನು ಜಗತ್ತಿನಾದ್ಯಂತ ಸ್ಥಳೀಯ ಜನರು ಅಥವಾ ಆದಿವಾಸಿಗಳು ಮತ್ತು ಭಾರತದ ಅತಿ ಬಡ ರೈತ ಸಮುದಾಯಗಳ ಸಾಂಸ್ಕೃತಿಕ ಹಕ್ಕುಗಳು ಒಳಗೊಂಡಿರುವ ಹಕ್ಕುಗಳನ್ನು ನಾವು ಸಮರ್ಥನೆ ಮಾಡುವಾಗ ಏನು ಆಗಿರುತ್ತೇವೆಯೋ ಅದೇ ಎಂದು ನಂಬುತ್ತೇನೆ. ತಮ್ಮ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ವರೂಪಗಳ ಕಾರಣಗಳಿಂದ ಅವರು ಬಂಡವಾಳಶಾಹಿಯನ್ನು ಅತ್ಯಲ್ಪ ಪ್ರಮಾಣದಲ್ಲಿ ಅರಗಿಸಿಕೊಂಡರು ಮತ್ತು ಅದರಿಂದ ಹೆಚ್ಚು ಶೋಷಣೆಗೆ ಒಳಗಾದರು. ಅವರ ವಸ್ತು ಉತ್ಪಾದನೆಗಳಿಗೂ ಬಂಡವಾಳಶಾಹಿಯ ಅವಶ್ಯಕತೆಯಾಗಿದ್ದ ವ್ಯಕ್ತಿಗತ ಮಾದರಿಗಳು ಮತ್ತು ಸಂಗ್ರಹಿತ ರಾಶಿಯ ಆಜ್ಞಾರೂಪಗಳಿಗೂ  ಯಾವುದೇ ರೀತಿಯ ಹೊಂದಾಣಿಕೆಯಾಗಲಿಲ್ಲ -ವಿಶೇಷವಾಗಿ ರಾಷ್ಟ್ರ ಮತ್ತು ರಾಷ್ಟ್ರದಾಚೆಗಿನ ಬೂರ್ಜ್ವಾಗಳಲ್ಲದೆ ರಾಷ್ಟ್ರ ಮತ್ತು ರಾಷ್ಟ್ರದಾಚೆಗಿನ ಅಧಿಕಾರಿಶಾಹಿಗಳ ವಿಚಿತ್ರಕೂಟ ನಮ್ಮ ಗಿಡ ಮರ ಮತ್ತು ನೀರಿನ ಬಗ್ಗೆ ವಿಮರ್ಶಾತ್ಮಕ ನಿರ್ಣಯ ತೆಗೆದುಕೊಳ್ಳುವ ಹಕ್ಕನ್ನು ತಮಗೆ ತಾವೇ ಕಾಯ್ದಿರಿಸಿಕೊಂಡ ಬಂಡವಾಳಶಾಹಿ ಜಾಗತೀಕರಣ ಹಂತದ ಸಂದರ್ಭದಲ್ಲಿ. ಬಂಡವಾಳಶಾಹಿ ಸಾರ್ವತ್ರೀಕರಣಗೊಳ್ಳುತ್ತಿರುವ ಈ ಹೊಸಯುಗದಲ್ಲಿ  'ಸಂಸ್ಕೃತಿ' ಎಂಬ ಪದವನ್ನು ಬೇರೆ ರೀತಿಯಾಗಿಯೆ ಅರ್ಥ ಮಾಡಿಕೊಳ್ಳಬೇಕಿದೆ.
ಸಮೀರ್ ಅಮೀನ್ ಅವರಿಂದ ಪಡೆದ ಸಂಸ್ಕೃತಿ ಕುರಿತ ಈ ವ್ಯಾಖ್ಯೆಯನ್ನು ಈಗ ನನ್ನದೆ ಉದ್ದೇಶಗಳಿಗಾಗಿ ಮಾರ್ಪಾಟು ಮಾಡಿಕೊಂಡಿದ್ದೇನೆ.  ಅದು ಒಂದು ವಿಶಿಷ್ಟ ವಿಚಾರವನ್ನು ಹೊಂದಿದೆ. ಸಂಸ್ಕೃತಿ ವಿನಿಮಯ, ಮಾರುಕಟ್ಟೆ, ಬೆಲೆ ನಿಗದಿಕರಣ, ಜಾಹಿರಾತು ಮುಂತಾದುವುಗಳ ಬೇಲಿಯೊಳಗೆ ಸಿಕ್ಕಿ ಹಾಕಿಹೊಂಡಾಗ ಸೌಂದರ್ಯಾತ್ಮಕ  ಆನಂದ ಮತ್ತು ಕಲಾಕೃತಿ ಬಳಕೆಯ ಮೌಲ್ಯಗಳ ಪಾವಿತ್ರ್ಯತೆ ಜರೂರಾಗಿ ಕುಗ್ಗುತ್ತದೆ ಅಥವಾ ಕೊನೆಯ ಪಕ್ಷ ರೂಪಾಂತರ ಹೊಂದುತ್ತದೆ. ಅಲ್ಲದೆ ಸಂಸ್ಕೃತಿ ಸಾಮಾಜಿಕ ಘನತೆ ಮತ್ತು ಅವಕಾಶ ಗಳಿಸುವ ಉದ್ದೇಶಗಳಿಗಾಗಿ ಶೇಖರವಾದಾಗ ಅದು ಒಂದು ಬಗೆಯಲ್ಲಿ ಬಂಡವಾಳದ ಹಾಗೆ ಕೆಲಸ ಮಾಡಲುತೊಡಗುತ್ತದೆ. ಹೀಗಿದ್ದರೂ ಸಂಸ್ಕೃತಿ ಸಂಬಂಧದಲ್ಲಿ ಬಂಡವಾಳಶಾಹಿ ಪಾತ್ರ- ಅದರ ಎಲ್ಲ ಹಂತಗಳಲ್ಲಿ ಇತ್ತೀಚಿನ ಹಂತವೂ ಸೇರಿರುವ- ಇತರ ಹಲವಾರು ಉನ್ನತ ವಿಚಾರಗಳ ಜೊತೆಗಿನ ಸಂಬಂಧ ಒಂದೇ ರೀತಿಯದಾಗಿರುವುದರಿಂದ ಅದಕ್ಕೆ ಕೆಲವನ್ನು ಸೇರಿಸಬೇಕಾದ ಅಗತ್ಯವಿದೆ. ಉತ್ಪಾದನೆಯ ಮಾರ್ಗಗಳನ್ನು ಉತ್ತಮಪಡಿಸುವುದರಿಂದ ಸಾಧ್ಯತೆಯ ಹಲವು ಅವಕಾಶಗಳು ಹೆಚ್ಚುತ್ತವೆಯಾದರೂ ತನ್ನದೇ ಆದ ಉತ್ಪಾದನೆಯ ಸಾಮಾಜಿಕ ಸಂಬಂಧಗಳು ಮತ್ತು ವಿನಿಮಯ ಅವಕಾಶ ಮಾಡಿಕೊಟ್ಟ ಸಾಧ್ಯತೆಯ ಮೂಲವನ್ನೇ ಹಾಳು ಮಾಡುತ್ತದೆ. ಉದಾಹರಣೆಗೆ, ಅಭಿವೃದ್ಧಿಯ ಆರಂಭಿಕ ಹಂತದಲ್ಲಿ ಬಂಡವಾಳಶಾಹಿಯ ಸಾಂಸ್ಕೃತಿಕ ಸಾಮಗ್ರಿಗಳಿಗಾಗಿ ಮಾರುಕಟ್ಟೆಯೊಂದನ್ನು ಹುಟ್ಟುಹಾಕಿತು. ಈ ಮೂಲಕ ಗಣನೀಯ ಪ್ರಮಾಣದಲ್ಲಿ ಕಲಾವಿದರನ್ನು ಶ್ರೀಮಂತರ ಆಶ್ರಯದಿಂದ ಬಿಡುಗಡೆಗೊಳಿಸಿತು. ಕರಕುಶಲ ಉತ್ಪನ್ನಗಳಿಗೆ ಮೀರಿದ ಮತ್ತು ಕಲೆಯ ಸ್ವತಂತ್ರ ಪರಿಧಿಯಾಚೆಗಿನ ಸಾಮರ್ಥ್ಯವನ್ನು ಹೆಚ್ಚಿಸಿತು. ಆದರೆ ನಂತರ ಕಲಾ ಉತ್ಪನ್ನವನ್ನು ಒಂದು ಮಾರಾಟದ ವಸ್ತುವನ್ನಾಗಿ ಬದಲಾಯಿಸುತ್ತ ಅದೇ ಕಲಾವಿದರನ್ನು ಅದೇ ಮಾರುಕಟ್ಟೆಯಿಂದ ನಿರ್ಬಂಧಕ್ಕೆ ಒಳಪಡುವಂತೆ ಮಾಡಿತು. ಈ ಕಾರ್ಯಗತಿಯಲ್ಲಿ ಮಾರುಕಟ್ಟೆಯಿಂದ ನ್ಯೂನತೆಗಳು ಕಲೆ ಮತ್ತು ಸಂಸ್ಕೃತಿಯ ಆವರಣವನ್ನು ಸ್ಥಳೀಯ ಮತ್ತು ರಾಷ್ಟ್ರೀಯವೆಂದು ವಿಭಜನೆ ಮಾಡುವುದರಲ್ಲಿ ಕೊನೆಗೊಂಡಿತು. ರಾಷ್ಟ್ರೀಯ ಪರಿಧಿ ಮಾರುಕಟ್ಟೆಯ ಪ್ರಾಬಲ್ಯಕ್ಕೆ ಹವಣಿಸುತ್ತಿದ್ದರೆ ಸ್ಥಳೀಯ ಪರಿಧಿ ಮಾರುಕಟ್ಟೆಯ ಅಸ್ತಿತ್ವವನ್ನು ಇಲ್ಲವಾಗಿಸಿಬಿಡುತ್ತಿತ್ತು ಅಥವಾ ಬಿಗಿಯಾದ ನಿರ್ಬಂಧಕ್ಕೆ ಒಳಪಡಿಸುತ್ತಿತ್ತು. ಜಾಗತೀಕರಣದ ಇಂದಿನ ಹಂತಗಳಲ್ಲಿ ನಡೆಯುತ್ತಿರುವುದೇನೆಂದರೆ  ಸ್ಥಳೀಯವಾದುದು ಕೂಡ ಮಾರುಕಟ್ಟೆಯ ಪ್ರಾಬಲ್ಯಕ್ಕೆ ಹೆಚ್ಚು ಹೆಚ್ಚು ಹಂಬಲಿಸುತ್ತಿರುವುದು ಮತ್ತು ಸ್ವಂತಂತ್ರ ಪರಿಧಿಯ ಒಪ್ಪಂದವನ್ನು ಉಳಿಸಿಕೊಂಡಿರುವುದೇ ಆಗಿದೆ.
ಉದಾಹರಣೆಗೆ, ತೃತೀಯ ಜಗತ್ತಿನ ಪ್ರತಿಯೊಂದೂ ದೇಶವೂ ಸ್ವಾತಂತ್ರ್ಯ್ರ ಪಡೆದ ಮರು ದಿನದ ಸಂದರ್ಭದಲ್ಲಿ ಸರಕಾರ ಪ್ರ್ರಾಯೋಜಿತ ವಲಯದ ಕರಕುಶಲಗಳ ಸಂಸ್ಥೆಯ ಹಾಗೆ ಇರುವುದಕ್ಕೆ ಸಾಕ್ಷಿ. ಇದು ಸರಕಾರದ ಪ್ರ್ರಾಯೋಜನೆ ಮತ್ತು ಸಣ್ಣ ಪುಟ್ಟ ಸಾಮಗ್ರಿ ಉತ್ಪಾದನೆಗಳ ವಿಷಮ ಮಿಶ್ರಣವಾಗಿದೆ. ಈ ಮೂಲಕ ಹಳ್ಳಿಯ ವಿಶ್ವಾಸಾರ್ಹತೆಯನ್ನು ನಗರದ ಮನೆಯಂಗಳಕ್ಕೆ ಕರೆದು ತರಲಾಗುತ್ತಿದೆ. ನಂತರ ಇದು ಏಕವ್ಯಕ್ತಿ ಪ್ರವಾಸಿಗರ ಪ್ರವಾಸೋದ್ಯಮದಲ್ಲಿ ಹೆಚ್ಚು ಸಂಬಂಧ ಸಾಧಿಸುತ್ತದೆ, ಕೊನೆಗೆ ಜಾಗತಿಕ ಮಟ್ಟದ ರಫ್ತು ಮಾರುಕಟ್ಟೆಗಳನ್ನು ತನ್ನದನ್ನಾಗಿಸಿಕೊಳ್ಳುತ್ತದೆ. ಕೆಲವು ಎನ್ ಜಿಒ ವಲಯದ ಚಟುವಟಿಕೆಗಳಲ್ಲಿ ಉದ್ದೇಶಪೂರ್ವಕವಾಗಿಯೋ ಉದ್ದೇಶಪೂರ್ವಕವಲ್ಲದೆಯೋ ವಿಷಮ ಸಹಭಾಗಿತ್ವ ಬೆಳೆದಿದೆ. ಕೆಲವು ಎನ್ ಜಿಒಗಳು ಸಾಮ್ರಾಜ್ಯದ ನೈತಿಕ ಆರ್ಥಿಕ ಸ್ಥಿತಿಯನ್ನು ಸಂಘಟಿಸುವಲ್ಲಿ ನೆರವಾಗುತ್ತಿವೆ. ಈ ಮೂಲಕ ಮಾನವ ಹಕ್ಕುಗಳಂಥ ವಿಷಯಗಳನ್ನು ರಾಷ್ಟ್ರೀಯ ಪ್ರಭುತ್ವದ ಸಮರ್ಥನೆಗಾಗಿ ಬಳಸುತ್ತಿದ್ದು, ಇವು ಕ್ರೂರವೂ ಕಾನೂನು ಬಾಹಿರವೂ ಆಗಿವೆ. ಅಲ್ಲದೆ ಅವು ಸಾಮ್ರಾಜ್ಯಶಾಹಿ ದೇಶಗಳನ್ನು ಮತ್ತು ಬಹುರಾಷ್ಟ್ರೀಯ ಏಜೆನ್ಸಿಗಳನ್ನು ಆ ಮಾನವ ಹಕ್ಕುಗಳ ಸಂರಕ್ಷಕರ ಹಾಗೆ ನೇಮಕ ಮಾಡುತ್ತವೆ. ಇದಕ್ಕೆ ಸಮಾನಾಂತರವಾಗಿ ಸಣ್ಣ ಪುಟ್ಟ ವಸ್ತು ಉತ್ಪಾದನೆ ಮಾಡುವಂಥ ಅರೆಸಾಂಸ್ಕೃತಿಕ ಹಾಗೂ ಅರೆಸೌಂದರ್ಯಾತ್ಮಕ ವಲಯವನ್ನು ಸಂಘಟಿಸಲಾಗಿದೆ. ಈ ಸಂಘಟನೆಯಲ್ಲಿ ಸಮಾಜದ ಕೆಳ ದಲಿತ ವರ್ಗದಿಂದ ಬಂದ ರೈತರು, ಬುಡಕಟ್ಟು ಮಹಿಳೆಯರಂಥ ಕೆಲವರಿಗೆ ರಾಷ್ಟ್ರೀಯ ಮಟ್ಟದ ಮತ್ತು ಅಂತಾರಾಷ್ಟ್ರೀಯ ಮಟ್ಟದ ಗಣ್ಯರು ಬಳಸಲಾಗುವಂಥ ವಸ್ತುಗಳನ್ನು ಉತ್ಪಾದಿಸಲು ಉತ್ತೇಜಿಸಲಾಗಿದೆ.  ನಾನಿಲ್ಲಿ ಯಾವುದೇ ಉದ್ದೇಶವನ್ನಿಟ್ಟುಕೊಂಡು ವಿಷಯ ಪ್ರಸ್ತಾಪ ಮಾಡುತ್ತಿಲ್ಲ. ಏಕೆಂದರೆ ಈ ಉದ್ದೇಶಗಳು, ಆಶಯಗಳು, ಮೇಲಿಂದ ಮೇಲೆ ಮೆಚ್ಚುಗೆಗೆ ಒಳಗಾಗುತ್ತವೆ, 'ಅಧಿಕಾರತ್ವ' ಎಂದು ಕರೆಯಲಾಗಿರುವುದನ್ನು ಅನುಸರಿಸಲು ಇದನ್ನೆಲ್ಲ ಮಾಡಲಾಗಿದೆ. ನನಗಿಲ್ಲಿ ಹೆಚ್ಚು ಆಸಕ್ತಿ ಇರುವುದು- ಈ ಬಗೆಯ ಅಂತರ್ಗತ ಯೋಜನೆಗಳಿಂದಾಗಿ ತಂತಾನೆ ವಿಸ್ತಾರಗೊಳ್ಳುವ ಮಾರುಕಟ್ಟೆಯ ಸಾಮರ್ಥ್ಯದಲ್ಲಿ ಮತ್ತು ತನ್ನ ನೈತಿಕ ಏಜಂಟರು ಹಾಗೂ ಸಾಂಸ್ಕೃತಿಕ ಪ್ರತಿನಿಧಿಗಳ ಹಾಗೆ ಉತ್ತಮವಾಗಿ ಆಲೋಚಿಸುವ ಜನರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದರಲ್ಲಿ. ನನಗೆ ವಿವಾದಾತ್ಮಕ ಸತ್ಯದಲ್ಲೆ ಆಸಕ್ತಿ. ಅಲ್ಲಿ ಅಧಿಕಾರತ್ವದ  ಆ ಯೋಜನೆಗಳು ಮಾರುಕಟ್ಟೆಯ ಆರ್ಥಿಕತೆಯೊಳಗೆ ಕಾರ್ಯಗತವಾಗುತ್ತ ಜಾಗತೀಕರಣದ ಮತ್ತೊಂದು ಮುಖದಂತೆ ಮತ್ತೆ ಮತ್ತೆ ಕಾಣುತ್ತಿರುತ್ತದೆ.
ಮಾರ್ಕ್ಸ್ ವಾದಿಯಾದವನಿಗೆ ಸಂಸ್ಕೃತಿಯ ದರ್ಶನವೆಂಬುದು ಯಾವುದೇ ಸಂದರ್ಭದಲ್ಲಿ ಆಲೋಚನೆಯ ಕಷ್ಟದಿಂದ ಓಡಿ ಹೋಗುವುದಲ್ಲ. ಅದು ಸೌಂದರ್ಯಾತ್ಮಕ ಅಗತ್ಯಗಳನ್ನು ಒಳಗೊಂಡ, ಸಾಮಾನ್ಯರ ಅಗತ್ಯಗಳನ್ನು ಪರಿಹರಿಸುವ ಸಲುವಾಗಿ ವಿನಿಮಯ ಮೌಲ್ಯದ ಮಧ್ಯವರ್ತಿ ಇಲ್ಲದೆ ಹಂಚಿಕೊಳ್ಳುವ ಮತ್ತು ಯಾವ ಬಲಾತ್ಕಾರವಿಲ್ಲದೆ ಉತ್ಪಾದನೆಯಾದ ಬಳಕೆಯ ಮೌಲ್ಯಗಳನ್ನು ಒಂದು ವಲಯದ ಹಾಗೆ ಭಾವಿಸುತ್ತದೆ. ತಾತ್ವಿಕ ಅಮೂರ್ತತೆಯ ಕೆಳಹಂತದಲ್ಲಿ ಸಂಸ್ಕೃತಿಯ ವಿಷಯವನ್ನು ಯಾರೊಬ್ಬರೂ ಬೇರೆ ಬೇರೆ ವ್ಯಾಖ್ಯೆಗಳ ಮೂಲಕ ಮಾತನಾಡಲು ಸಾಧ್ಯವಾದರೂ ಅದು ಮೂಲತಹ ಸಮಾಜಶಾಸ್ತ್ರೀಯ ಮತ್ತು ಮಾನವೀಯ ನೆಲೆಯುಳ್ಳದ್ದಾಗಿರುತ್ತದೆ. ಅಂಥ ಮೂರು ವ್ಯಾಖ್ಯೆಗಳ ಬಗ್ಗೆ ನನಗೆ ಆಸಕ್ತಿ. ಮೊದಲನೆಯದು, ಸಂಸ್ಕೃತಿ ಸೌಂದರ್ಯ ಮತ್ತು ಬೌದ್ಧಿಕತೆಯ ವಲಯ ಎಂಬುದು; ಎರಡನೆಯದು, ಸಂಸ್ಕೃತಿ 'ಸಮಗ್ರ ಜೀವನ ವಿಧಾನ' ಎಂಬುದು; ಮೂರನೆಯದು, ಪ್ರಾಪಂಚಿಕ ಜೀವನದ ಮೇಲೆ ಹೆಚ್ಚು ಒತ್ತು ನೀಡಿರುವ ಸಂಸ್ಕೃತಿ ಸಂವಹನದ ಆಚರಣೆಗಳ ಮತ್ತು ಹಾದಿಗಳ ಒಟ್ಟು ಮೊತ್ತವಾಗಿದ್ದು, ಅರ್ಥವಂತಿಕೆಗಳು ಮತ್ತು ಮೌಲ್ಯಗಳನ್ನು ಹುಟ್ಟುಹಾಕುತ್ತದೆ ಮತ್ತು ಪ್ರಸಾರ ಮಾಡುತ್ತದೆ.
ಸಂಸ್ಕೃತಿಯ ಈ ಮೂರು ವ್ಯಾಖ್ಯೆಗಳಲ್ಲಿ 'ಸಮಗ್ರ ಜೀವನ ವಿಧಾನ'ದ ಹಾಗೆ ಎಂಬುದು ಬಹುಶಹ ಹೆಚ್ಚು ಸಾರ್ವಜನಿಕವಾದ. ಸರ್ವ ಸಮ್ಮತವಾದ ವ್ಯಾಖ್ಯೆ. ಈ ಚಿಂತನಾಕ್ರಮದಿಂದಲೇ 'ರಾಷ್ಟ್ರೀಯ ಸಂಸ್ಕೃತಿ', 'ಭಾರತೀಯ ಸಂಸ್ಕೃತಿ', 'ಹಿಂದೂ ಸಂಸ್ಕೃತಿ', 'ಪಾಶ್ಚಾತ್ಯ ಸಂಸ್ಕೃತಿ' ಇನ್ನೂ ಮುಂತಾದ ವಿಚಾರಗಳನ್ನು ಪಡೆದಿದ್ದೇವೆ. ಅಧಿಕಾರ ಮತ್ತು ಅಧಿಕಾರರಹಿತವೆಂಬ ಗೆರೆಯನ್ನು ಅನುಸರಿಸಿ ಬುಡಮಟ್ಟದಿಂದ ವಿಭಜನೆಗೊಂಡ ಸಮಾಜ ವರ್ಗ ಅಧಿಕಾರಗಳು ಅಥವಾ ಹೆಣ್ಣಿನ ಮೇಲೆ ಪುರುಷನ ಅಧಿಕಾರ ಅಥವಾ ಧಾರ್ಮಿಕ ನಂಬುಗೆಯ ಒಂದು ಸಮುದಾಯದಲ್ಲಿನ ಅಧಿಕಾರ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಮೂಲಭೂತ ವೈರುಧ್ಯಗಳಿಂದ ತುಂಬಿ ತುಳುಕುವ ಸಮಾಜ ಏಕ ಸಂಸ್ಕೃತಿಯನ್ನು ಕಷ್ಟದಿಂದ ಹೊಂದಿರಲು ಸಾಧ್ಯ. ಇಂಥ ಸಂದರ್ಭಗಳಲ್ಲಿ ಸಂಸ್ಕೃತಿ ರಾಷ್ಟ್ರೀಯ ಚೈತನ್ಯವನ್ನು ಹೊರಹೊಮ್ಮಿಸುವ ಹಾಗೆ ಕಾರ್ಯನಿರ್ವಹಿಸದೆ ಹೋರಾಟ ಮತ್ತು ಕಿತ್ತಾಟದ ಕಣದ ಹಾಗೆ ಕಾರ್ಯ ನಿರ್ವಹಿಸುತ್ತದೆ. ಏಕೀಕೃತ ಅಸ್ತಿತ್ವದ ಹಾಗೆ ಪ್ರಧಾನ ವಾಗ್ವಾದಗಳಲ್ಲಿ ಸಾಮಾನ್ಯವಾಗಿ ಪ್ರತಿನಿಧಿಸುವ ಭಿನ್ನ ನಂಬುಗೆಯ ಸಮುದಾಯಗಳಿಗೂ ಇದೇ ಮಾತು ಅನ್ವಯವಾಗುತ್ತದೆ. ಏಕೀಕೃತ ಸಂಸ್ಕೃತಿಯನ್ನು ಹೊಂದಿರುವ ಜಾತಿ ಸಮಾಜಕ್ಕೆ ಮಾತ್ರ ಇದು ಅಸಾಧ್ಯವಾದುದಲ್ಲ. ಶುದ್ಧ ಬ್ರಾಹ್ಮಣವಾದದ ಚರಿತ್ರೆ ಮತ್ತು ಅದರ ವಿರುದ್ಧ ಎದ್ದ ಆಸ್ತಿಕವಾದಿ ಭಿನ್ನ ಮತಗಳೂ ಒಳಗೊಂಡಂತೆ ಹಲವು ಭಿನ್ನ ಮತಗಳು ನಮಗೆ ಏಕೀಕೃತವಾದ ಅತ್ಯತ್ತಮ ಧಾರ್ಮಿಕ ಸಂಸ್ಕೃತಿಯ ವಿಚಾರವನ್ನು ಕಳೆದುಕೊಳ್ಳಲು ಓಲೈಸುತ್ತದೆ. ಧರ್ಮ ಅಥವಾ ರಾಷ್ಟ್ರವನ್ನು ಸಂಸ್ಕೃತಿಯೊಂದಿಗೆ ಸಮೀಕರಿಸುವುದು ಸುಲಭದ ಹಾದಿ ಮತ್ತು ದೋಷಯುಕ್ತವೆಂದು ನನಗೆ ತೋರುತ್ತದೆ. ಈ ಎಲ್ಲ ಸಂದರ್ಭಗಳಲ್ಲಿ ನಮಗೆ ಕಂಡುಬರುವುದು ಏಕೀಕೃತ ಸಂಸ್ಕೃತಿಯಲ್ಲ, ಹಿತಕರವಾದ ನುಡಿಗಟ್ಟಿನಲ್ಲಿ ಹೇಳುತ್ತಿರುವ ಏಕತೆಯಲ್ಲಿ ವೈವಿಧ್ಯತೆಯಲ್ಲ, ಆದರೆ ವಿವಿಧ ಸಂಸ್ಕೃತಿಗಳ ಪರಸ್ಪರ ಸೆಣಸಾಟ. ಅತಿ ಸುಂದರಗೊಳಿಸಿದ ಸಂಸ್ಕೃತಿಗಳ ತಿಳುವಳಿಕೆಗಳು ಅದನ್ನು ರಮ್ಯಗೊಳಿಸಲು ಪ್ರಯತ್ನಿಸಿರುವ ಹಾಗೆ ಸಂಸ್ಕೃತಿ ಎಂದೆಂದಿಗೂ ಸ್ಥಾವರವಲ್ಲ, ಚರಿತ್ರಾತೀತ ಬಗೆಯದಲ್ಲವೆ ಅಲ್ಲ. ಆಧುನಿಕ ಜಗತ್ತಿನಲ್ಲಿ ಕೊನೆಯ ಪಕ್ಷ ಸಾಂಸ್ಕೃತಿಕ ಆಚರಣೆಗಳಲ್ಲಿ ಬದಲಾಗದಿರುವುದೇನು ಅಂದರೆ ಸ್ವತಹ ಬದಲಾಗುವ ಪ್ರಕ್ರಿಯೆ ಮತ್ತು ಅದರ ಮೂಲತತ್ವ.. ಅಂತಿಮವಾಗಿ ಸಂಸ್ಕೃತಿ ಎಂಬುದು ಯಾವಾಗಲೂ ಇರುವ ಸ್ವಾತಂತ್ರ್ಯದ ವಲಯವಲ್ಲ, ಸ್ವಂತ ಅಭಿವ್ಯಕ್ತಿಯಲ್ಲ, ಆತ್ಮಾವಲೋಕನವಲ್ಲ, ಸಾಮೂಹಿಕ ಸಹಭಾಗಿತ್ವವಲ್ಲ, ಏನೇನೂ ಅಲ್ಲ. ಪರಂಪರಾಗತ ಸಂಸ್ಕೃತಿಯನ್ನು ಒಳಗೊಂಡಿರುವ ಸಂಸ್ಕೃತಿ ನಿರ್ದಿಷ್ಟ ಸಮುದಾಯಗಳ ತುಳಿತಕ್ಕೆ ಒಳಪಟ್ಟ ಯಾವುದೇ ಪ್ರಮಾಣದ ಜನರು ನಿಮಗೆ ಹೇಳುವ ಹಾಗೆ, ಅದು ಮತ್ತೆ ಮತ್ತೆ ಕುತಂತ್ರ ಮತ್ತು ಮುಕ್ತವಲ್ಲದ ವಲಯದ ಹಾಗೆ, ಅಷ್ಟೆ.
ಸಂಸ್ಕೃತಿ ಎಂದರೇನೆಂದು ಹೇಳಲು ಇಂಥ ಕೆಲವು ನಕಾರಾತ್ಮಕ ವ್ಯಾಖ್ಯೆಗಳನ್ನು ಪರಿಶೀಲಿಸಲು ಬಯಸುತ್ತೇನೆ. ಸಂಸ್ಕೃತಿ ಯಾರದು ಎಂಬುದು ಯಾವಾಗಲೂ ಇರುವ ನಿಜವಾದ ಪ್ರಶ್ನೆ. ಅಲ್ಲದೆ ಜಾಗತೀಕರಣಕ್ಕೆ ಸಂಬಂಧಿಸಿದ ಪ್ರಶ್ನೆ ಎಂದರೆ ರಾಷ್ಟ್ರದೊಳಗಿನ ಸಂಸ್ಕೃತಿ ಯಾರದು, ಅದು ಸಂಪೂರ್ಣವಾಗಿ ನಾಶ ಮಾಡಲಾಗುತ್ತದೆಯೇ, ಯಾರ ಸಂಸ್ಕೃತಿಯ ವಿಚಾರಧಾರೆಯನ್ನು ಅದು ಬೆಂಬಲಿಸುತ್ತದೆ ಮತ್ತು ಭೌತಿಕವಾಗಿ ಬಲಗೊಳಿಸುತ್ತದೆ, ವಿದ್ಯುನ್ಮಾನ ಮಾರ್ಗಗಳು, ದೂರ ಸಂಪರ್ಕ ಮಾರ್ಗಗಳು, ಮತ್ತು ಸಂಖ್ಯೀಕರಣ(ಡಿಜಿಟಲೈಜೇಷನ್), ಠೇವಣಿ ಇಡಬಲ್ಲ ಬಂಡವಾಳದ ಕೇಂದ್ರೀಕರಣ ಮುಂತಾದ ಎಲ್ಲ ಬಗೆಯ ಮಾರ್ಗಗಳ ಮೂಲಕ ಅದು ಕೆಲವು ಸಾಂಸ್ಕೃತಿಕ ಆಚರಣೆಗಳು ದೊರಕುವಂತೆಯೂ ಮತ್ತೆ ಕೆಲವನ್ನು ನಿರಾಕರಿಸುವಂತೆಯೂ ಮಾಡುತ್ತದೆ. ಭಾರತದಲ್ಲಿ ಜಾಗತಿಕ ಬಂಡವಾಳದ ಸಾಂಸ್ಕೃತಿಕ ಒಳನುಸುಳುವಿಕೆಯನ್ನು ನಾನು ವಿರೋಧಿಸುವಾಗ ಸಾಂಪ್ರದಾಯಿಕ ರಾಷ್ಟ್ರೀಯವಾದಿ ಒರಟು ದೇಶಾಭಿಮಾನಿಯ ಬಲೆಯಲ್ಲಿ ಬೀಳಲು ಬಯಸುವುದಿಲ್ಲ. ಜಾಗತೀಕರಣದ ಸಂಸ್ಕೃತಿಯನ್ನು ಭಾರತೀಯ ಸಂಸ್ಕೃತಿ, ಹಿಂದೂ ಸಂಸ್ಕೃತಿ, ಮುಸ್ಲಿಂ ಸಂಸ್ಕೃತಿ, ತೃತೀಯ ಜಗತ್ತಿನ ಸಂಸ್ಕೃತಿ ಮುಂತಾದ ಹೆಸರಿನಲ್ಲಿ ವಿರೋಧಿಸುವುದಲ್ಲ. ನನ್ನ ವಿರೋಧ ಹೆಚ್ಚು ಮೂಲಭೂತವಾದುದು. ಜಾಗತೀಕರಣ ಸಂಸ್ಕೃತಿ ಭಾರತದೊಳಗಿನ ಹಲವು ಬಗೆಯ ಜೀವನ ವಿಧಾನಗಳನ್ನು ಹಾಳು ಮಾಡುತ್ತದೆ ಹಾಗೂ ಇತರ ಕೆಲವನ್ನು ಪುಷ್ಟಿಗೊಳಿಸುತ್ತದೆ. ಅದು ಕೆಲವರ ಕೈಯಲ್ಲಿ ಹೆಚ್ಚು ಅಭಿವೃದ್ಧಿಗೊಂಡ ಸಾಂಸ್ಕೃತಿಕ ಸೆಣಸಾಟದ ಮಾರ್ಗಗಳನ್ನು ನೀಡುತ್ತದೆ ಹಾಗೂ ಉಳಿದವರಿಗೆ ನಿರಾಕರಿಸುತ್ತದೆ. ಅದು ನಮ್ಮ ವಿಶಿಷ್ಟ ಬಗೆಯ ಸಾಂಸ್ಕೃತಿಕ ಒಳಜಗಳಗಳಲ್ಲಿ ಅನಾಗರಿಕವಾಗಿ ಮೂಗು ತೂರಿಸುತ್ತದೆ. ರಾಷ್ಟ್ರದೊಳಗೆ ಸೆಣಸಾಡುವವರ ನಡುವಿನ ಈ ವಿಷಯಗಳನ್ನು ನಾವು ನಮ್ಮದೆ ರೀತಿಯಲ್ಲಿ ಬಗೆಹರಿಸಿಕೊಳ್ಳುತ್ತೇವೆಯಾದರೂ ಈ ಸಾಧ್ಯತೆಯನ್ನು ಅದು ಬರಿದುಗೊಳಿಸಲು ಪ್ರಯತ್ನಿಸುತ್ತದೆ. ಇಂಥ ಸಂದರ್ಭದಲ್ಲಿ ನಾನು ರಾಷ್ಟ್ರೀಯವಾದಿ ರೀತಿಯನ್ನು ಪೂರ್ತಾ ತೊರೆದು ಪ್ರಗತಿ ವಿರೋಧಿ ನಿಲುವನ್ನು ತಳೆದುಬಿಡುತ್ತೇನೆ. ರಾಷ್ಟ್ರೀಯ ಸಂಸ್ಕೃತಿ ರಕ್ಷಣೆ ಬಗೆಗೆ ಅರಗಿಸಿಕೊಳ್ಳದ ತಿಳುವಳಿಕೆಯಿಂದಾಗಿ ಏನನ್ನು ರಕ್ಷಿಸಿಕೊಳ್ಳಲಾಗುತ್ತದೆಯೋ ಅದನ್ನು ಈಗಾಗಲೇ ನೆಲೆಸಿರುವ ರಾಷ್ಟ್ರೀಯ ಸಂಸ್ಕೃತಿ ಎಂಬ ರಕ್ಷಣಾತ್ಮಕ ನಿಲುವಿಗೆ ದುಡುಕಿ ತಲುಪಿಬಿಡುತ್ತೇನೆ. ಯಾವುದೇ ಒಬ್ಬ ವ್ಯಕ್ತಿ ನಿಜವಾಗಿಯೂ ರಕ್ಷಿಸಲು ಬಯಸುವುದು ಏನನ್ನು? ಜಾಗತಿಕರಣಕ್ಕೆ ಬಲಿಯಾದವರ ಸಂಸ್ಕೃತಿಗಳನ್ನೆ? ಅದರ ಫಲಾನುಭವಿಗಳ ಸಂಸ್ಕೃತಿಗಳನ್ನು ಅಲ್ಲವೆ? ನಮ್ಮದೆ ಜನರ ಅವಶ್ಯಕತೆಗಳು ಮತ್ತು ತುರ್ತು ಅಗತ್ಯಗಳನ್ನು ಅನುಸರಿಸಿ ದೇಶಕ್ಕೆ ನ್ಯಾಯ ಒದಗಿಸುವಂಥ ನಮ್ಮದೆ ರಾಷ್ಟ್ರೀಯ ಸಂಸ್ಕೃತಿಯನ್ನು ಜಾಗತೀಕರಣದ ದವಡೆಯಲ್ಲಿ ಯಾರೇ ಆಗಲೀ ರಕ್ಷಿಸಲು ಬಯಸಬೇಕು. ಈ ವ್ಯಾಖ್ಯೆಯ ಪ್ರಕಾರ ರಾಷ್ಟ್ರೀಯ ಸಂಸ್ಕೃತಿಯೆಂಬುದು ಪರಂಪರಾಗತವಾಗಿ ಹರಿದು ಬಂದದ್ದು ಅಥವಾ ಈಗಾಗಲೇ ಸಾಧಿತವಾಗಿರುವಂಥದ್ದು ಅಲ್ಲ. ಅದಿನ್ನೂ ಮುಟ್ಟಬೇಕಿರುವ ಬಾನಿನ ಅಂಚು. ಸಾಮಾಜಿಕ ಬದಲಾವಣೆಗಾಗಿ ಅತಿ ಮೂಲಭೂತವಾದ ಪ್ರಜಾಸತ್ತಾತ್ಮಕ ಬೇಡಿಕೆಗಳನ್ನು - 'ಪ್ರಜಾಸತ್ತಾತ್ಮಕ ಬೇಡಿಕೆ' ಎಂಬುದನ್ನು ಪ್ರತಿಭಟನಾತ್ಮಕ ಮನೋಧರ್ಮವುಳ್ಳದೆಂದು ಅರಿಯಬೇಕು- ಸಾಮೂಹಿಕವಾಗಿ ಪಡೆದುಕೊಳ್ಳಲು ಹೊರಡದಿದ್ದರೆ ಆ ಬಾನಿನ ಅಂಚು ಕೈಗೆಟುಕದೆ ದೂರದಲ್ಲಿಯೇ ಉಳಿದುಬಿಡುತ್ತದೆ. ಇಂಥ ತುಂಬ ಮೂಲಭೂತವಾದ ಅರ್ಥದಲ್ಲಿ ಜಾಗತೀಕರಣವೆನ್ನುವುದು ತನ್ನನ್ನು ತಾನು ಖಾಯಂ ಆಗಿ ಉಳಿದುಕೊಳ್ಳಲು ಪ್ರಯತ್ನಿಸುವಂಥ ಬರಿದುಗೊಳಿಸುವ  ಮುನ್ನಿನ ಒಂದು ಪ್ರತಿ ಕ್ರಾಂತಿ (ಕೌಂಟರ್ ರೆವಲ್ಯೂಷನ್) ಯಾಗಿದೆ.
ಆಚರಣೆಗಳು ಮತ್ತು ರೂಢಿಗಳ ಮೂಲಕ ಮೌಲ್ಯಗಳು ಮತ್ತು ಅರ್ಥವಂತಿಕೆಗಳನ್ನು ಹುಟ್ಟುಹಾಕಿದ ಹಾಗೆ ಹೆಚ್ಚು ಪರಿಶುದ್ಧವಾದ , ಹೆಚ್ಚು ಭೌತಿಕವಾದ ಸಂಸ್ಕೃತಿಯ ವ್ಯಾಖ್ಯೆಯ ಕಡೆಗೆ ಹಿಂದಿರುಗುತ್ತೇನೆ. ಈ ವ್ಯಾಖ್ಯೆಯನ್ನು ನಾನು ಇಷ್ಟ ಪಡುತ್ತೇನೆ. ಏಕೆಂದರೆ 'ಹುಟ್ಟುವಳಿ' ವಿಚಾರದ ಅರ್ಥ 'ಸಂಸ್ಕೃತಿ' ವಿಚಾರಕ್ಕೆ ಗತಕಾಲದ ಬದಲಾಗಿ ಭವಿಷ್ಯತ್ತಿನ ನೆಲೆಯನ್ನು ನೀಡುತ್ತದೆ. ತಲತಲಾಂತರದಿಂದ ಹರಿದು ಬರುತ್ತಿರುವ ಮತ್ತು ಕಟ್ಟುವಿಕೆಯ ಆಯಾಮ ಕೂಡ ಪಡೆದುಕೊಂಡ ಸಮಾಜದೊಳಗಿನ ಹಲವಾರು ಶಕ್ತಿಗಳ ಸೆಣಸಾಟ ಮೀರಿದ ಸಾಮಾನ್ಯ ಸ್ವತ್ತಿನ ವಿಚಾರವಾಗಿ ನಿಲ್ಲುತ್ತದೆ. ಆಚರಣೆಗಳ ಮತ್ತು ಅರ್ಥವಂತಿಕೆಗಳ ಮೊತ್ತದ ವ್ಯಾಖ್ಯೆ ಸಂಸ್ಕೃತಿಗೆ 'ಭಾವನೆಯ್ಗೆ' ಎಂಬಂಥ ನುಡಿಗಟ್ಟುಗಳಲ್ಲಿ ಒಳಗೊಂಡಿರುವ ಎಲ್ಲ ಅನುಭವದಾಚೆಗಿನ ಸ್ವಂತ ಭೌತಿಕತೆಯನ್ನು ತಂದುಕೊಡುತ್ತದೆ. ಒಬ್ಬ ಏನು ಮಾಡುತ್ತಾನೆಯೋ ಅದೇ ಸಂಸ್ಕೃತಿ. ಸಂಸ್ಕೃತಿಯೆಂಬುದು ಸೆಣಸಾಡುತ್ತಿರುವ ಗುಂಪುಗಳ ಒಟ್ಟು ಆಚರಣೆಗಳ ವೈರುದ್ಧ್ಯಾತ್ಮಕ ಒಟ್ಟು ಮೊತ್ತ ಎಂದಾದರೆ ಸಾಂಸ್ಕೃತಿಕ ಆಚರಣೆಗಳು ಹಿಂಸೆ ಮತ್ತು ಪ್ರಾಬಲ್ಯಗಳ ಜೊತೆ ನಿಸ್ಸಂಶಯವಾಗಿ ಗಾಢವಾಗಿ ರಾಜಿ ಮಾಡಿಕೊಂಡಿರುತ್ತವೆ. ಆದರೆ ಇತರ ಸಂದರ್ಭಗಳಲ್ಲಿ ಎಂದರೆ ಪ್ರತಿಭಟನಾತ್ಮಕ ಸಾಂಸ್ಕೃತಿಕ ಆಚರಣೆಯ ಸಂದರ್ಭಗಳಲ್ಲಿ ಯಾವಾಗಲೂ ಅಸಾಧ್ಯವಾದುದನ್ನೆ ಕಲ್ಪಿಸಿಕೊಳ್ಳುವುದನ್ನು ಮುಂದುವರೆಸುತ್ತದೆ. ಈ ಮೂಲಕ ಭವಿಷ್ಯತ್ತಿನಲ್ಲಿ ಭರವಸೆಯನ್ನು ಇರಿಸುತ್ತದೆ.
ಭವಿಷ್ಯತ್ತನ್ನು ಕುರಿತ ಈ ಪೂರ್ವನೆಲೆ ಮತ್ತು ಅಸಾಧ್ಯವಾದುದನ್ನು ಕಲ್ಪನೆ ಮಾಡಿಕೊಳ್ಳುತ್ತ ಸಾಗುವ ಶಕ್ತಿ- ಇವನ್ನು ಜಾಗತೀಕರಣದ  ಸಂಸ್ಕೃತಿ ಭಯಂಕರವಾಗಿ ಹಾಳುಮಾಡಲು ಪ್ರಯತ್ನಿಸುತ್ತದೆ. ಹೇಗೆ? ಇನ್ನೊಂದು ಬಗೆ ಸಂಸ್ಕೃತಿಯ ಕೆಲವು ಪ್ರಮುಖ ಗಮನೀಯ ದೃಷ್ಟಿಕೋನಗಳು ಯಾವುವು? ಅದು ತನ್ನದೆ ಮೌಲ್ಯಗಳನ್ನು ಮತ್ತು ಅರ್ಥಗಳನ್ನು ಹುಟ್ಟಿ ಹಾಕುವುದಿಲ್ಲವೆ? ಈಗಾಗಲೆ ಅದರ ಮೂಲ ಲಕ್ಷಣಗಳನ್ನು ಕುರಿತು ಮಾತಾಡಿದ್ದೇನೆ. ಆದಷ್ಟು ಬೇಗ ಇನ್ನುಳಿದ ಕೆಲವು ಲಕ್ಷಣಗಳಿಗೆ ಪ್ರಾಧಾನ್ಯತೆ ನೀಡುತ್ತೇನೆ. ವಿಶೇಷ ಆಹ್ವಾನಿತರ ಮುಂದೆ ನಿಂತು ಮಾತನಾಡುತ್ತಿರುವುದರಿಂದ ಏಕಸ್ವಾಮ್ಯತೆ ಮುಂತಾದವುಗಳ ಬಗ್ಗೆ ವಿವರ ನೀಡುವುದನ್ನು ನಾನಿಲ್ಲಿ ಕೈ ಬಿಡುತ್ತೇನೆ.
ಮೊದಲು ಅದರ ಆಕ್ರಮಣಶೀಲತೆಯ ವ್ಯಾಪ್ತಿ : ನಾವು ಈ ವ್ಯಾಪ್ತಿಯನ್ನು ಗ್ರಹಿಸಿಕೊಳ್ಳಲು ದೇಶದ ಮಕ್ಕಳನ್ನು ಅತಿಸಣ್ಣ ಪ್ರಮಾಣದಲ್ಲಿ ಪರಿಚಯ ಮಾಡಿಕೊಡುವ ಹಂತ ತಲುಪಿರುವಂಥ ವಸಾಹತುಶಾಹಿ ಶಾಲಾ ತರಗತಿಯನ್ನು ನೆನಪಿಸಿಕೊಳ್ಳಲೆಬೇಕು. ವಸಾಹತುಶಾಹಿ ವಿಚಾರಧಾರೆಯನ್ನು ಪಠ್ಯಪುಸ್ತಕಗಳ ಬೆನ್ನಲ್ಲೆ ಅವು ಇದ್ದ ಹಾಗೆ ಅಸಮಾನವಾಗಿಯೇ ಹಂಚಿಕೊಳ್ಳಲಾಗುತ್ತಿತ್ತು. ಆ ತರಗತಿಗಳಲ್ಲಿ ಮಕ್ಕಳು ಈ ಸಂಬಂಧವಾಗಿ ಕೆಲವು ಗಂಟೆಗಳನ್ನೋ ದಿನಗಳನ್ನೋ ಕಳೆಯುತ್ತಿದ್ದರು. ನಂತರ ಅವರು ತರಗತಿಯ ವಿಚಾರಗಳಿಂದ ಕಳಚಿಕೊಂಡಂಥ ಮನೆಗಳಿಗೆ ಹಿಂದಿರುಗುತ್ತಿದ್ದರು. ಬಹುಶಹ ಶೇಕಡ ಹತ್ತಕ್ಕಿಂತ ಕಡಿಮೆ ಪ್ರಮಾಣದಲ್ಲಿರದ ಜನಸಾಮಾನ್ಯರೂ ಈ ಅಭ್ಯಾಸದಲ್ಲಿ ತೊಡಗಿರುತ್ತಾರೆ. ಜಾಗತೀಕರಣದ ಸಂಸ್ಕೃತಿ ನೇರ ಶಾಲಾ ತರಗತಿಯಿಂದಲೇ ವೈರುಧ್ಯಮಯವಾಗಿ ತಲೆದೋರುತ್ತದೆ ಎಂದೇನಲ್ಲ. ಈಗ ಅದು ಜನಸಂಖ್ಯೆಯಲ್ಲಿ ಹೆಚ್ಚಿನ ಪ್ರಮಾಣವನ್ನೂ ಒಳಗೊಂಡಿದೆ. ಈ ಜಾಗತೀಕರಣ ಸಂಸ್ಕೃತಿ ದಿನವಹಿ ಆಧಾರದ ಮೇಲೆ ಟೆಲಿವಿಷನ್ ಮತ್ತು ವ್ಯಾಪರೀಕರಣಗೊಂಡ ಸಂಗೀತದ ಉಪಕರಣಗಳ ಮೂಲಕ ಮನೆಯ ವ್ಯವಹಾರಗಳೊಳಗೆ, ಮಧ್ಯಮ ವರ್ಗದವರಲ್ಲೆ ಖಚಿತವಾಗಿ ಹೆಚ್ಚು ಕೇಂದ್ರೀಕೃತಗೊಳ್ಳುತ್ತದೆ.  ಮನೆ ಯಜಮಾನಿಕೆಯ ಮೇಲೆ ನಡೆದ ಈ ಆಕ್ರಮಣದ ತೀವ್ರತೆ ಆಲೋಚನೆಯ ವಿಧಾನವನ್ನಷ್ಟೆ ಅಲ್ಲ , ಜೀವಿತದ ಮೌಲ್ಯ ವ್ಯವಸ್ಥೆ , ಉಪಭೋಗದ ಮಾದರಿಗಳು ಮತ್ತು ಮಾನವನ ಪ್ರಾಕೃತಿಕ ಬಯಕೆಗಳಾದ ಪ್ರೀತಿ ಮತ್ತು ಕಾಮನೆಗಳನ್ನೂ ಬದಲಿಸಿಬಿಡುತ್ತದೆ. ಸಾಂಪ್ರದಾಯಿಕ ಅರ್ಥದಲ್ಲಿನ ಸಾಕ್ಷರತೆ ವಸಾಹತು ಕಾಲಕ್ಕಿಂತ ಹೆಚ್ಚುಹಬ್ಬಿದೆ.  ಇಂದಿನ ಭಾರತದಲ್ಲಿ ವಿದ್ಯುನ್ಮಾನ ಸಾಕ್ಷರತೆ (ಇಲೆಕ್ಟ್ರಾನಿಕ್ ಲಿಟರಸಿ) ವಸಾಹತು ಕಾಲಕ್ಕಿಂತ ಹೆಚ್ಚು ಹರಡಿದೆ. ಅಲ್ಲದೆ ಸಾಮಾನ್ಯ ಸಾಕ್ಷರತೆಯಾದ ಓದು, ಬರೆಹಗಳಿಗಿಂತ ಜೀವಂತ ಸಂಸ್ಕೃತಿಯನ್ನು ಪರಿವರ್ತನಶೀಲವನ್ನಾಗಿಸಿ ಇರಿಸುವುದರಲ್ಲೆ ಹೆಚ್ಚು ಕ್ರಿಯಾಶೀಲವಾಗಿದೆ.  ಈ ಪ್ರಕ್ರಿಯೆಗಳ ನೇರಪ್ರಭಾವ ಶ್ರೀಮಂತ ವರ್ಗಗಳ ಮೇಲೆಂಬುದು ಮಹತ್ತರವಾದುದು. ಆದರೆ ವರ್ಗ ಸಂಸ್ಕೃತಿಗಳನ್ನು ರೂಪಿಸುವಲ್ಲಿ ಪ್ರಧಾನವಾಗಿರುವ  ಆ ವರ್ಗಗಳು ಕೂಡ ನಿರ್ಣಾಯಕ ವರ್ಗಗಳಾಗಿವೆ. ಶ್ರೀಮಂತರ ಮಧ್ಯವರ್ತಿ ಜೀವನದಿಂದ ಬಂದ ದುಡಿಮೆಗಾರರನ್ನು ಅಪಮಾನಿಸಲು ಚೀನಾದ ಮಹಾಗೋಡೆಗಳಂಥವು ಇಲ್ಲವೆ ಇಲ್ಲ. ವಸಾಹತು ಶಾಲಾ ತರಗತಿ ಆಲೋಚನೆಯ ಗತಿಯನ್ನು ಸಂದರ್ಭಕ್ಕೆ ತಕ್ಕಂತೆ ಬದಲಿಸುವ ಉದ್ದೇಶ ಹೊಂದಿದ್ದರೆ, ಜಾಗತೀಕರಣದ ಮಧ್ಯವರ್ತಿ ಸಂಸ್ಕೃತಿ ಈ ಎಲ್ಲವನ್ನೂ ಮಾಡುತ್ತದೆ. ಮಾತ್ರವಲ್ಲದೆ, ಸುಪ್ತಪ್ರಜ್ಞೆಯನ್ನು ತನ್ನ ವಸಾಹತುವನ್ನಾಗಿಸಿಕೊಳ್ಳಲು ಪ್ರಯತ್ನಿಸುತ್ತದೆ, ಈ ಕಾರ್ಯದಲ್ಲಿ ಯಶಸ್ವಿಯೂ ಆಗುತ್ತದೆ.
ಅನಂತರ ಜಾಗತೀಕರಣದ ಸಾಂಸ್ಕೃತಿಕ ರೂಪ. ಸಮೂಹ ಸಂಸ್ಕೃತಿಯ ಸಂಸ್ಥೆಗಳು ಮತ್ತು ಜನಪ್ರಿಯ ಮನರಂಜನೆಗಳು ಶ್ರಮಿಕ ವರ್ಗದ ಪ್ರಾಂತಗಳಲ್ಲಿ ಮತ್ತು ಹಳ್ಳಿಗಾಡಿನಲ್ಲಿ ಈ ಹಿಂದಿಗಿಂತ ಹೆಚ್ಚು ಗಾಢತರವಾದ ವ್ಯಾಪ್ತಿಯನ್ನು ಹೊಂದಿವೆ.  ಇವು ಅಮೆರಿಕಾದ ಪ್ರಧಾನ ಮಾಧ್ಯಮದ ವಿಚಾರಧಾರೆಯಾಗಿ, ರಾಜಕೀಯವಾಗಿ, ಸೌಂದರ್ಯಶಾಸ್ತ್ರವಾಗಿ ಮತ್ತು ಅಭಿವ್ಯಕ್ತಿ ಮಾಧ್ಯಮವಾಗಿ ಇನ್ನೂ ಹೆಚ್ಚು ನಿಕಟವಾಗಿ ಸಂಯೋಜನೆಗೊಂಡಿವೆ. ನವ-ಉದಾರೀಕರಣದ ಬಿರುಸು ದಾಳಿಯನ್ನಾಗಲೀ ಟಿವಿ ಚಾನೆಲ್ ಗಳಲ್ಲಿ ವಿದೇಶಿ ಮಾಧ್ಮಮಗಳೇ ಪ್ರಧಾನವಾಗಿರುವುದನ್ನಾಗಲೀ ಕೇವಲ ಒಂದು ದಶಕದ ಮೊದಲು ಭಾರತದಲ್ಲಿ ಇದನ್ನು ಊಹಿಸಲು ಕೂಡ ಅಸಾಧ್ಯವಾಗಿದ್ದುದಾಗಲೀ ಹೇಳಬಾರದ ಸತ್ಯವಾಗಿದೆ. ಭಾರತದ ಸಮಗ್ರ ಮಧ್ಯಮ ವರ್ಗ ದೂರದರ್ಶನ ವೀಕ್ಷಿಸುವ ಪ್ರತಿಯೊಂದು ಕಾಲಾವಧಿಯನ್ನು ಕೆಲವೊಂದು ಬಗೆಯ ವಿಚಾರಧಾರೆ ಮತ್ತು ಸಾಂಸ್ಕೃತಿಕ ಅಭಿರುಚಿ ಅರಿಯುವ ಅಧ್ಯಯನ ವೇದಿಕೆಯನ್ನಾಗಿ ಹೊರಹೊಮ್ಮಿಸಬಹುದಾಗಿದೆ. ಜಾಗತೀಕರಣದ ಈ ಸಾಂಸ್ಕೃತಿಕ ರೂಪ ಮತ್ತು ಗಾಢ ಬಯಕೆಯ ಮಾದರಿಗಳನ್ನು ಜಾಹಿರಾತು, ಲಾಂಛನದ ಉತ್ತೇಜನ ಮತ್ತು ಸ್ವತಹ ಮನರಂಜನೆಯೆ ಆದ ಈ ಎಲ್ಲ ಅಂತರ ಸಂಬಂಧಗಳ ಮೂಲಕ ಗಣನೀಯವಾಗಿ ಸಾಧಿಸಲಾಗುತ್ತದೆ. ಅಂಥ ಸಂಸ್ಕೃತಿ ಕೈಗಾರಿಕೆಯ ಮೂರ್ತಿ ಚಿತ್ರಗಳನ್ನು ನಿರ್ದಿಷ್ಟವಾದ ಉತ್ಪನ್ನಗಳು ಮತ್ತು ಉತ್ಪದನಾ ಚಿಹ್ನೆಗಳೊಂದಿಗೆ ನಿಕಟವಾಗಿ ಪತ್ತೆ ಹಚ್ಚಲಾಗುತ್ತದೆ. ಪೆಪ್ಸಿಯ ಮಾರಾಟದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಶಾರೂಕ್ ಖಾನ್ ಪರಸ್ಪರ ಅದಲು ಬದಲಾಗುವ ಸಮೂಹ ಸಂಸ್ಕೃತಿಯ ಮೂರ್ತಿಗಳು. ಸಾಮಗ್ರಿ ಹಾಗೂ ಮನರಂಜನೆಯ ಹಾಗೆ ಕ್ರೀಡೆಗಳನ್ನೂ ಮಾರಾಟ ಮಾಡುತ್ತಿರುವ ಕೇಂದ್ರ ವ್ಯಕ್ತಿ ಅಮೆರಿಕಾದ ಬೇಸ್ ಬಾಲ್ ಹೀರೋ ಮೈಕೆಲ್ ಜೋರ್ಡಾನ್ ನ ಮಾದರಿಯಲ್ಲಿ ಮಾಂತ್ರಿಕ ಬ್ಯಾಟ್ಸ್ ಮನ್ ಸಚಿನ್ ಸ್ವತಹ ಒಬ್ಬ ಮನರಂಜಿಸುವವನು ಮತ್ತು ಮಾರಾಟಗಾರನಾಗಿದ್ದಾನೆ. ನಂತರ ಇದನ್ನು ಜಾಗತೀಕರಣದ ಕೆಲವು  ಜಾಹಿರಾತು ಪ್ರತೀಕಗಳೊಂದಿಗೆ ಸಂಬಂಧ ಕಲ್ಪಿಸಲಾಗುತ್ತದೆ. ಚಾನಲ್ಅನ್ನು ಬದಲಿಸುತ್ತಿರುವಾಗಲೇ ಈಡನ್ ಗಾರ್ಡನ್ನಿನ ಕ್ರಿಕೆಟನ್ನು ನನಗದು ತೋರಿಸುತ್ತದೆ. ನಾನು ಕಪ್ಪು ಕೂದಲಿನ ಜಲಪಾತದ ನದಿಯಲ್ಲಿ ಭಿನ್ನ ಬಗೆಯ ಈಡನ್ನಿನಲ್ಲಿ ಇದ್ದ ಹಾಗೆ ಇರುತ್ತೇನೆ. ಅದು 'ಹೆಡ್ ಅಂಡ್ ಶೋಲ್ಡರ್' ಶಾಂಪೂನ ಜನಪ್ರಿಯ ಜಾಹಿರಾತು ಆಗಿತ್ತೆಂದು ಭಾವಿಸುತ್ತೇನೆ. ಅದನ್ನು ಸಾಕಷ್ಟು ಸಾರಿ ಭಾರತದ ದೂದದರ್ಶನದಲ್ಲಿ ನೋಡುತ್ತಿರುವುದನ್ನು  ಮಾತ್ರ ಕಂಡುಕೊಳ್ಳುತ್ತೇನೆ. ಈಗ ಕಪ್ಪನೆ ಹೊಳೆಯುವ  ದೃಶ್ಯ ಚಿತ್ರ ಅದೇ ಆಗಿದ್ದು, ಕೊಂಚ ಭಿನ್ನದನಿಯ್ಲಲಿ ಮತ್ತು ಭಿನ್ನ ಮಾತನಾಡುವ ಪಠ್ಯದೊಂದಿಗೆ ಬಂದಿದೆಯಷ್ಟೆ. ಈ ಹೋರಾಟಮಯ ಸಾಂಸ್ಕೃತಿಕ ಜಾಗತೀಕರಣದ  ಗುರಿಯ ಒಂದು ಭಾಗವೆಂದರೆ ಅಮೆರಿಕಾದ ಜೀವನ ಮಾದರಿಗಳೊಂದಿಗೆ ಕಲೆತ ಹೊಸ ಅಭಿರುಚಿಗಳನ್ನು ಹುಟ್ಟು ಹಾಕುವುದು ಮತ್ತು ಹೀಗೆ ಭಾರತದ ಮಧ್ಯಮ ವರ್ಗಗಳಿಗೆ ಜಾಗತಿಕ ಸಾಂಸ್ಕೃತಿಕ ದೃಶ್ಯವಿದ್ದಲ್ಲಿಗೆ ತಲುಪಿರುವ ಭಾವನೆ ತಂದುಕೊಡುವುದು. ಉದಾಹರಣೆಗೆ, ಕ್ರೀಡಾ ಚಾನಲ್ ಗಳು ಗಾಲ್ಫ್ ಮತ್ತು ಬೇಸ್ ಬಾಲ್ ಗಳಂಥ ಆಟಗಳನ್ನು ನಿರಂತರವಾಗಿ ತೋರಿಸುವುದನ್ನು ಗಮನಿಸಿ. ಅವು ಭಾರತದಲ್ಲಿ ಕೇಬಲ್ ಟಿವಿ ಬರುವ ಮೊದಲು ಕೇವಲ ಕೆಲವು ವರ್ಷಗಳ ಹಿಂದೆ ಅಸ್ತಿತ್ವದಲ್ಲೆ ಇರಲಿಲ್ಲ. ವಾಣಿಜ್ಯ ಮತ್ತು ಮನರಂಜನೆಯ ಈ ಅಂತರ ವಿಭಾಗದಲ್ಲಿ ಸಂಸ್ಕೃತಿಗೆ ಒಪ್ಪಿಗೆಯಾಗುವುದಾಗಿದ್ದರೂ ಜಾಗತಿಕ ಮಟ್ಟದ ವಿದ್ಯುನ್ಮಾನ ಸಾಂಸ್ಕೃತಿಕ ವೇದಿಕೆಯ ಮುಖ್ಯ ತಂತ್ರೋಪಾಯವೆಂದರೆ  ಸಮೂಹ ಸಂಸ್ಕೃತಿ ಮತ್ತು ಅತ್ಯುತ್ಕೃಷ್ಟ ಸಂಸ್ಕೃತಿಯನ್ನು ಒಂದೇ ಬೀಸಿನಲ್ಲಿ ಬದಲಾವಣೆಗೆ ಒಳಪಡಿಸಲು ಪ್ರಯತ್ನ ಮಾಡುವುದು. ವಸಾಹತುಶಾಹಿ ಸಾಂಸ್ಕೃತಿಕ ಯೋಜನೆ ಭಾರತದ ಉನ್ನತ ಶ್ರೇಣಿಯ ಪುರೋಹಿತಶಾಹಿ ವರ್ಗಗಳ ಆಶೋತ್ತರಗಳಿಗೆ ಗಾಢವಾಗಿ ಬೆಸೆದುಕೊಂಡಿದೆ.  ಈ ಪುರೋಹಿತಶಾಹಿ ಜನ ತಮ್ಮ ಕನಸಿನ ಆಕ್ಸ್ ಬ್ರಿಡ್ಜ್ ಇಂಗ್ಲಿಶಿನವನ ಮಾದರಿಗೆ ಹತ್ತಿರ ಚಲಿಸಲು ಬಯಸಿದ ಹಾಗೆಯೆ ಉಳಿದ ಭಾರತೀಯ ಸಮಾಜದಿಂದ ಬಲು ದೂರ ನಡೆದಿರುತ್ತಾರೆ. ವಸಾಹತು ಸಂಸ್ಕೃತಿಯ ಆಂಗ್ಲೀಕರಣದ ಹಾಗೆ ಭಾರತೀಯ ಸಮಾಜದ ಶ್ರೀಮಂತರು ಮತ್ತು ಬಡವರ ನಡುವೆ ಸಾಂಸ್ಕೃತಿಕ ಅಂತರವನ್ನು 'ಹೆಚ್ಚಿಸಲು' ಹೆಚ್ಚಿನ ಬದ್ಧತೆಯನ್ನುಂಟು ಮಾಡುತ್ತದೆ. ಮತ್ತೊಂದೆಡೆ ಬಂಡವಾಳಶಾಹಿ ಜಾಗತೀಕರಣದ ಸಾಂಸ್ಕೃತಿಕ ಯೋಜನೆ ಸಮಮಟ್ಟದ ಪರಿಣಾಮ ಹೊಂದಿರುವುದು ಕುತೂಹಲಕರವಾಗಿದೆ. ಅಲ್ಲದೆ ಸ್ವತಹ ಅಮೆರಿಕವೇ ಹೆಚ್ಚುತ್ತಿರುವ  ಡಿಸ್ನೀಕರಣ ಪ್ರಕ್ರಿಯೆಗೆ ಒಳಗಾಗುತ್ತಿದೆ. ನಂತರ ಅದನ್ನು ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದದ ಬಂಡವಾಳ ವಲಯಗಳ ಎಲ್ಲ ವರ್ಗಗಳಿಗೂ ರಫ್ತು ಮಾಡುತ್ತದೆ. ಏಕೆಂದರೆ ಎಲ್ಲ ವರ್ಗಗಳ ಆತ್ಮೋನ್ನತೀಕರಣ ದೂರದರ್ಶನಕ್ಕೆ ಹಾದಿ ಒದಗಿಸಿದೆ ಅಥವಾ ಯಾರು ಹಾದಿಯಾಗಿರುತ್ತಾರೋ ಅವರು ಅದರ ಪ್ರಭಾವಕ್ಕೆ ಒಳಗಾಗಿದ್ದಾರೆ.
ಈ ವ್ಯಾಪ್ತಿಗೆ ವಿರುದ್ಧವಾಗಿ ಸಮತೋಲನದಲ್ಲಿಡುವುದು ಎಂದರೆ ಇಂಟರ್ ನೆಟ್ ಮತ್ತು ವಿಶ್ವವ್ಯಾಪಿ ಜಾಲವೆಂದು ಕರೆಯುವ - ವಿಶೇಷವಾಗಿ ಹರಿತ ಹತಾರ ತಂತ್ರಜ್ಞಾನಗಳಾದ-ಪ್ರಪಂಚದಾದ್ಯಂತ ವ್ಯಾಪಿಸುತ್ತಿರುವ ತಂತ್ರಜ್ಞಾನಗಳ ಇತರೆ ಕ್ಷೇತ್ರದಲ್ಲಿನ ಸವಲತ್ತಿನ ಕೇಂದ್ರೀಕರಣ ಇಂದಿನ ದಿನಗಳಲ್ಲಿ ಬಹಳಷ್ಟು ಕೇಳಿಬರುತ್ತಿರುವ ಮಾಹಿತಿ ತಂತ್ರಜ್ಞಾನದ ಪ್ರಜಾಪ್ರಭುತ್ವವಾದಿ ಪರಿಣಾಮವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುವುದು ಯೋಗ್ಯ. ಇದು ಜಗತ್ತಿನಾದ್ಯಂತ ಲಭ್ಯವೆಂದು ಹೇಳಲಾಗುವ ಮಾಹಿತಿ. ಬಿಲ್ ಗೇಟ್ಸ್ ಸುಂದರವಾಗಿ ಹೇಳಿರುವ ಹಾಗೆ- 'ವಾಸ್ತವ ಸತ್ಯದಲ್ಲಿ ಎಲ್ಲವೂ ಸಮಾನ '. ಸತ್ಯಸ್ಯ ಸತ್ಯವಾದ ಸಂಗತಿಯೆಂದರೆ ಜೀವಿತ ಮಾನವ ಕುಲದಲ್ಲಿ ಅರ್ಧದಷ್ಟು ಜನ ದೂರವಾಣಿ ಕರೆಯೊಂದನ್ನು ಮಾಡದಿರುವುದು ಹಾಗೂ ಆಫ್ರಿಕಾದಲ್ಲೆಲ್ಲ ಇರುವುದಕ್ಕಿಂತ ಹೆಚ್ಚು ದೂರವಾಣಿ ಸಂಪರ್ಕಗಳು ನ್ಯೂಯಾರ್ಕ್ ನ ಮ್ಯಾನ್ ಹಟನ್ ದ್ವೀಪವೊಂದರಲ್ಲೆ ಇರುವುದು. ಹಾಗಾದರೆ ಸತ್ಯಸ್ಯ ಸತ್ಯದಿಂದ ವಾಸ್ತವ ಸತ್ಯದೆಡೆಗೆ ಸಾಗುವುದು ಹೇಗೆ? ಜಗತ್ತಿನ ಜನಸಂಖ್ಯೆಯಲ್ಲಿ ಕೆಲವರು ಜಗತ್ತಿನ ಆದಾಯದ ಶೇಕಡ 70ರಷ್ಟು ಸಂಪಾದಿಸುತ್ತಾರೆ ಹಾಗೂ ಶೇಕಡ 15ರಷ್ಟು ವ್ಯಯ ಮಾಡುತ್ತಾರೆ. ಮಾಹಿತಿ ಸಾಮಗ್ರಿಗಳಿಗಿದು ಪ್ರವೇಶವಾಗಿರುವುದನ್ನು ತುಂಬಾ ಚೆನ್ನಾಗಿ ಪ್ರತಿನಿಧಿಸುತ್ತದೆ. ಉತ್ತರ ಅಮೆರಿಕಾ ಮತ್ತು ನೈರುತ್ಯ ಯುರೋಪ್ ಗಳು ಒಟ್ಟುಗೂಡಿ ವಿಶ್ವದ ಜನಸಂಖ್ಯೆಯಲ್ಲಿ ಶೇಕಡ 30ರಷ್ಟಿದ್ದರೂ ಜಗತ್ತಿ ಶೇಕಡ 70ರಷ್ಟು ಆದಾಯವನ್ನು ಹೊಂದಿರುವುದು ಅಚ್ಚರಿಯ ವಿಷಯವೇನಲ್ಲ. ಹಾಗಾಗಿ ಅವರು ಜಗತ್ತಿನ ಮೂರನೆಯ ಎರಡರಷ್ಟು ಟಿವಿ, ರೇಡಿಯೋ ಸೆಟ್ಟುಗಳನ್ನು ಹೊಂದಿದ್ದಾರೆ.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕೂಡ ಯಾವುದೇ ಪರಿಶೀಲನಾರ್ಹ ಒಳ ದಾರಿಗಳ ಯಜಮಾನಿಕೆ ವರ್ಗ ಸವಲತ್ತುಗಳಿಗೆ ಸಂಬಂಧ ಹೊಂದಿರುತ್ತದೆ. ಅತ್ಯಾಧುನಿಕವಾದ ಮತ್ತು ಶಕ್ತಿಯುತವಾದ ಉಪಕರಣಗಳನ್ನು ಹೊಂದಲು ಆರಂಭಿಕ ವೆಚ್ಚ ಕನಿಷ್ಟ 2000 ಡಾಲರ್ ಗಳಾಗಿರುತ್ತದೆ. ನಂತರ ಅವನ್ನು ಕ್ರಮವಾಗಿ ಬದಲಿಸುತ್ತಿರಬೇಕು ಇಲ್ಲವೆ ಪ್ರತಿ ಕೆಲವು ವರುಷಗಳಿಗೊಮ್ಮೆ ಕೊನೆಯ ಪಕ್ಷ ಮುಖ್ಯಭಾಗಗಳನ್ನಾದರೂ ಮೇಲ್ದರ್ಜೆಗೇರಿಸುತ್ತಿರಬೇಕಾಗುತ್ತದೆ. ಇಂಟರ್ ನೆಟ್ ನ ಸತತ ಬಳಕೆ ಮತ್ತು ಅತಿಹೆಚ್ಚು ಆದಾಯಗಳ ನಡುವೆ ಯಾವುದೇ ಅಚ್ಚರಿಯಿಲ್ಲ.  ಉಪಭೋಗಿಗಳಲ್ಲಿ ಮೂರನೇ ಒಬ್ಬನಿಗೆ ಬಿಟನ್ನಿನಲ್ಲಿ 25,000 ಪೌಂಡ್ ಗಳ ವಾರ್ಷಿಕ ಆದಾಯವಿದ್ದರೆ, ಅಮೆರಿಕಾ ಮತ್ತು ಕೆನಡಾಗಳಲ್ಲಿ 80,000 ಡಾಲರ್ಗಳಿಗಿಂತಲೂ ಹೆಚ್ಚು ಗಳಿಕೆ ಇದೆ.
ಇಂಟರ್ ನೆಟ್ ಒಂದು ದಶಕದಷ್ಟು ಹಳೆಯದಲ್ಲ. ಅದು ಈಗಾಗಲೇ ಎಲ್ಲ ಕಡೆ ಪಸರಿಸಿಕೊಂಡಿದೆ ಎಂದೇ ಹೇಳಬಹುದು. ಇನ್ನೆರಡು ದಶಕಗಳಲ್ಲಿ ಅದು ಬಹುಶಹ ಭೂಮಿಯ ಮೂಲೆ ಮೂಲೆಗೂ ತಲುಪಲಿದೆ. ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಇಂಟರ್ ನೆಟ್ ಬೃಹತ್ತಾಗಿ ಪಸರಿಸುವುದೆಂದು ನನಗೆ ತೋರುತ್ತದೆ. ಆದರೆ ಪ್ರತಿಯೊಬ್ಬರೂ ಅಥವಾ ಅರ್ಧಕ್ಕಿಂತ ಹೆಚ್ಚು ಪಾಲು ಜನರಿಗೆ ಮುಂಬರುವ ಯಾವುದೇ ಭವಿಷ್ಯದಲ್ಲೂ ಇಂಟರ್ನೆಟ್ ಸಂಪರ್ಕ ಹೊಂದಿತ್ತಾರೆಂದು ನನಗೆ ಸ್ಪಷ್ಟವಾಗಿ ತೋರುವುದಿಲ್ಲ. ಮೊದಲ ಟೆಲಿಗ್ರಾಫ್ ಸಂಪರ್ಕವನ್ನು 1830ರಲ್ಲಿ ಹಾಕಲಾಯಿತು. ನಂತರ 1865ರಲ್ಲಿ ಲಂಡನ್ ಮತ್ತು ಬಾಂಬೆ ನಡುವಿನ ಟೆಲಿಗ್ರಾಫ್ ಸಂಪರ್ಕದ ಕೆಲಸ ಪೂರ್ಣವಾಯಿತು.  ಪಶ್ಚಿಮ ದೇಶಗಳಲ್ಲಿ ವ್ಯಾಪಕವಾಗಿ ಹಾಗೂ ತೃತೀಯ ಜಗತ್ತಿನ ಕೈಗಾರಿಕಾ ವಲಯದ ನಗರ ಮಧ್ಯಮ ವರ್ಗದಲ್ಲಿ ಟೆಲಿಫೋನ್ ಸಂಪರ್ಕವನ್ನು ಹೊಂದುವುದು ತುಂಬಾ ಸುಲಭವಾಗಿಬಿಟ್ಟಿದೆ. ಆದರೆ ಅರ್ಧಕ್ಕಿಂತ ಹೆಚ್ಚು ಮಾನವ ಕುಲ ಒಂದು ಟೆಲಿಗ್ರಾಮನ್ನೂ ಕೂಡಾ ಸ್ವೀಕರಿಸಿಲ್ಲ. ನಾನೀಗ ತಾನೆ ಹೇಳಿದಂತೆ ಮಾನವ ಕುಲದ ಅರ್ಧದಷ್ಟು ಜನ ಫೋನ್ ಕರೆಯನ್ನು ಮಾಡಲು ಇನ್ನೂ ಕಾಯುತ್ತಿದ್ದಾರೆ.
ಅಹಿತಕರವಾದ ಸಂಗತಿಯೆಂದರೆ, ದೇಶೀಯ ಜನರು ಯಾರೇ ಆಗಿರಲಿ ಅವರು ಮುಂಬರುವ ದಿನಗಳಲ್ಲಿ ಅಲ್ಪಸಂಖ್ಯಾತರೂ ಸವಲತ್ತು ಪಡೆದ ಸಾಂಸ್ಕೃತಿಕ ಪರಿಕರವೂ ಆಗಿರುತ್ತಾರೆ. ವೈಯಕ್ತಿಕ ಅಥವಾ ಸಾಂಸ್ಥಿಕವಾಗಿ ಬಳಸಿಕೊಳ್ಳುವ ಹಾದಿ ಹೊಂದಿದ ಪರಿಣತ ಸಂಸ್ಕೃತಿ ಅತ್ಯಧಿಕ ಪ್ರಮಾಣದಲ್ಲಿ ಲಾಭ ಮಾಡುತ್ತದೆ. ಸಂಶೋಧನೆ ಮತ್ತು ಸಂಶೋಧನೆಯ ಫಲಿತಗಳನ್ನು ತಲುಪಿಸುವ ಕೆಲಸ ತ್ವರಿತವಾಗಿ ಮತ್ತು ಹೆಚ್ಚು ವ್ಯಾಪಕವಾಗಿರುತ್ತದೆ. ಯಾವುದೇ ನಿರ್ದಿಷ್ಟ ಸಂದರ್ಭದಲ್ಲೂ ಸುಲಭ ಸಂಪರ್ಕ ಸಾಧನ ಪರಿಣತರ ವಿಶಾಲ ಸಮುದಾಯದೊಂದಿಗೆ ನೇರ ಸಂಪರ್ಕವನ್ನು ತಂದುಕೊಡುತ್ತದೆ. ಈ ಪರಿಣತರ ಸಮುದಾಯ ಮಾಹಿತಿ ಬೃಹತ್ ಪ್ರಜಾಪ್ರಭುತ್ವೀಕರಣ ಮತ್ತು ಅದರ ಪ್ರವೇಶದಂಥ ಸಮಗ್ರ ಪ್ರಕ್ರಿಯೆಯ ಅನುಭವ ಪಡೆಯಲು ತಾನೇ ಬಯಸುತ್ತದೆ. ವಾಸ್ತವದಲ್ಲಿ ಇದುವರೆಗಿನ ಯಾವುದೇ ಮುದ್ರಣ ತಂತ್ರಜ್ಞಾನ ಸಾಧಿಸಿರುವುದರ ಆಚೆಗೆ ಪರಿಣತ ಸಂಸ್ಕೃತಿ ವಿಸ್ತರಿಸಿಕೊಂಡಿದೆ ಹಾಗೂ ಕ್ರೋಢೀಕರಿಸಿಕೊಂಡಿದೆ. ಆದರೂ ಪರಿಣತ ಮತ್ತು ಪರಿಣತವಲ್ಲದ ಸಂಸ್ಕೃತಿಗಳ ನಡುವಿನ ಅಂತರ ಮುಂಬರುವ ಕಾಲದಲ್ಲಿ ಬೃಹತ್ತಾಗಿ ಬೆಳೆದಿರುತ್ತದೆ. ನಿರಂತರವಾಗಿ ಈ ಮೇಲ್ ಗಳನ್ನು ರವಾನಿಸುವವರು ಮತ್ತು ಪಡೆಯುವವರು ಹಾಗೂ ಈ ಮೇಲ್ ಇಲ್ಲದವರ ನಡುವೆ ಜಗತ್ತು ಶೀಘ್ರವೇ ವಿಭಜನೆಯಾಗಲಿದೆ. ಇಂಟರ್ ನೆಟ್ ನ ಹೆಚ್ಚು ವಿಸ್ತೃತವಾದ ಬಳಕೆ ಸವಲತ್ತು ಪಡೆದಿರುವವರ ಸಂಖ್ಯೆಯನ್ನು ಕಡಿಮೆ ಮಾಡಲಿದೆ. ನೀವು ಇಂಟರ್ ನೆಟ್ಅನ್ನು ಹೊಂದಿದ್ದರೆ ದೆಹಲಿಯ ಮತ್ತೊಂದು ಮೂಲೆಯಲ್ಲಿ ಪೋನ್ ಸಂಪರ್ಕವಿಲ್ಲದೆ ವಾಸಿಸುತ್ತಿರುವವರಿಗಿಂತ ಚಿಕಾಗೋದಲ್ಲಿ ವಾಸಿಸುತ್ತಿರುವವರೊಂದಿಗೆ ಸತತ ಸಂಪರ್ಕಕ್ಕೆ ಬರುತ್ತೀರಿ, ಹೆಚ್ಚು ಆತ್ಮೀಯರಾಗುತ್ತೀರಿ.
ನಾನೇನು ಒತ್ತಿ ಹೇಳಲು ಬಯಸುತ್ತೇನೆ ಅಂದರೆ, ಪ್ರತಿಯೊಂದು ಹೊಸ ತಂತ್ರಜ್ಞಾನ ವೈರುದ್ಧಾತ್ಮಕ ಪರಿಣಾಮವನ್ನು ಹೊಂದಿರುತ್ತದೆ. ಸಂಸ್ಕೃತಿ ಮತ್ತು ಸಂಪರ್ಕ ಕ್ಷೇತ್ರದಲ್ಲಿನ ಪ್ರತಿಯೊಂದು ಹೊಸ ತಂತ್ರಜ್ಞಾನ ಬಿಡುಗಡೆಗೊಳಿಸುವ ಶಕ್ತಿಯನ್ನು ಪಡೆದಿದೆ. ಅದು ಶ್ರಮದ ಅವಧಿಯನ್ನು ಕಡಿಮೆಗೊಳಿಸಬಲ್ಲದು, ಶ್ರಮದ ಪ್ರಕ್ರಿಯೆಯನ್ನು ವಿಚಾರವಾಗಿಸಬಲ್ಲದು; ಸಾಂಸ್ಕೃತಿಕ ಸಂಪರ್ಕದ ಸಮುದಾಯವನ್ನು ಹೆಚ್ಚಿಸಬಲ್ಲದು ಹಾಗೂ ಆಧುನಿಕ ಸಾಂಸ್ಕೃತಿಕ ಉತ್ಪನ್ನಗಳ ವ್ಯಾಪ್ತಿಯೊಳಗೆ ಹೆಚ್ಚು ಜನರನ್ನು ಒಳತರಬಲ್ಲದು; ಪ್ರಯೋಗ ಮತ್ತು ಅನ್ವೇಷಣೆಯ ಹೊಸಕ್ಷೇತ್ರಗಳನ್ನೆ ತೆರೆದಿಡಬಲ್ಲದು. ಹಾಗಾಗಿಯೆ ಆಧುನಿಕತೆ ವಿರೋಧಿ ಬಲೆಯೊಳಗೆ ಬೀಳುವುದಾಗಲೀ ತಂತ್ರಜ್ಞಾನವನ್ನೇ ವಿರೋಧಿಸಲು ತೊಡಗುವುದಾಗಲೀ ಯಾರೂ ಎಂದಿಗೂ ಮಾಡುವುದಿಲ್ಲ. ಸ್ವಾತಂತ್ರ್ಯದ ಪ್ರತಿಯೊಂದೂ ಶಕ್ತಿಯನ್ನು ಪ್ರಾಬಲ್ಯದ ಸಾಧನವನ್ನಾಗಿ ಬದಲಿಸುವಂಥ ಉತ್ಪಾದನೆ ಮತ್ತು ಉಪಭೋಗದ ಸಾಮಾಜಿಕ ಸಂಬಂಧಗಳನ್ನು ಯಾರೇ ಆಗಲಿ ನಿಜವಾಗಿಯೂ ನಿರಂತರವಾಗಿ ವಿರೋಧಿಸುತ್ತಾರೆ.
ಜಾಗತೀಕರಣದ ಯುಗದಲ್ಲಿ ಭಾರತಕ್ಕೆ  ಬಂದ ಸಂಪರ್ಕದ ಪ್ರಮುಖ ಹೆದ್ದಾರಿಗಳನ್ನು ಕುರಿತು ಇದುವರೆಗೆ ನನ್ನ ಮಾತನ್ನು ಕೇಂದ್ರೀಕರಿಸಿದ್ದೇನೆ. ಆದರೆ ಸಂಸ್ಕೃತಿ ಬಗೆಗಿನ ಮುಖ್ಯ ವಿಚಾರವೆಂದರೆ ಅದು ಬದುಕಿನ ಎಲ್ಲ ಮುಖಗಳಲ್ಲೂ ನೆಲೆಸಿರುತ್ತದೆ. ಆರ್ಥಿಕ, ರಾಜಕೀಯ, ಮಿಲಿಟರಿ ಮತ್ತು ಇತರ ವಲಯಗಳಿಂದ ಸರಳವಾಗಿ ಬೇರೆ ಮಾಡಲು ಸಾಧ್ಯವಾಗದಿರುವುದು. ಭಾರತಕ್ಕೆ ನವ-ಉದಾರವಾದ ಬಂದ ಪರಿಣಾಮವಾಗಿ ಸಮಗ್ರ ರಾಜಕೀಯ ಸಂಸ್ಕೃತಿ ತೀವ್ರ ಅವನತಿಗೆ ಒಳಗಾಗಿರುವುದನ್ನು ಕಂಡಿದ್ದೇವೆ. ಕೊನೆಯ ಪಕ್ಷ ದೇಶಾದ್ಯಂತ ಪ್ರಸಾರವುಳ್ಳ ಇಂಗ್ಲಿಶ್ ದಿನ ಪತ್ರಿಕೆಗಳೂ ಸೇರಿದಂತೆ ಇಂದು ಯಾವ ಪತ್ರಿಕೆಗಳೂ ಜಾಹಿರಾತಿಗಿಂತ ಸುದ್ದಿಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡುವ ಪತ್ರಿಕೆಗಳಾಗಿ ಉಳಿದಿಲ್ಲ.  ಟೈಮ್ಸ್ ಆಫ್ ಇಂಡಿಯಾ 1980ರಷ್ಟು ಹಿಂದೆ ಗಂಭೀರ ಪತ್ರಿಕೆಯಾಗಿ ಉಳಿದಿತ್ತು.  ಆದರೆ ನಂತರ ಅದು ಹೆಚ್ಚಾಗಿ ಅರೆಲಂಪಟ ಸಾಹಿತ್ಯದ ದೊಡ್ಡ ಕಾಗದದ ಹಾಳೆಯಾಗಿಬಿಟ್ಟಿದೆ. ಅದು ಸಣ್ಣ ಪುಟ್ಟ ಸುದ್ದಿಗಳನ್ನು ಜಾಹಿರಾತುಗಳ ನಡುವೆ ಉಳಿದ ಜಾಗ ಭರ್ತಿ ಮಾಡಲು ಬಳಸುತ್ತದೆ. ಲಂಪಟ ಸಾಹಿತ್ಯದ ಶಕ್ತಿ ಎಂಬ ಮತ್ತೊಂದು ಬಗೆಯ ಲಂಪಟ ಸಾಹಿತ್ಯಕ್ಕೆ ಇದು ಸಂಬಂಧ ಹೊಂದಿದೆ. ಇರಾಕ್ ಸಮುದಾಯಗಳ ಜನತೆ ಸಾಮ್ರಾಜ್ಯಶಾಹಿ ಆಕ್ರಮಣದ ಅತ್ಯಂತ ಬರ್ಬರ ಮಾರ್ಗಗಳ ಮೂಲಕ ನಿರ್ದಯವಾಗಿ ನಾಶವಾದ ಹಾಗೆಲ್ಲ ಭಾರತದ ದಿನಪತ್ರಿಕೆಗಳು 'ಸ್ವಯಂಚಾಲಿತ ರಂಣರಂಗ 'ದಲ್ಲಿ ಅಳವಡಿಸಿಕೊಂಡಿದ್ದ ಅಮೆರಿಕದ ಇತ್ತೀಚಿನ ಅಸ್ತ್ರಗಳ ಅದ್ಭುತ ತಾಂತ್ರಿಕ ಹಿರಿಮೆಯನ್ನು ಮೆಚ್ಚುಗೆಯಿಂದ ವರದಿ ಮಾಡುತ್ತಿದ್ದವು. ಅದೇ ಕಾಲಕ್ಕೆ ಈ ಪತ್ರಿಕೆಗಳು ಅಲ್ಪತನದಲ್ಲಿ ಪರಿಣತಿ ಪಡೆದಿದ್ದ ವ್ಯಾಪಕ ಪ್ರಸಾರದ ಅಮೆರಿಕದ ದಿನಪತ್ರಿಕೆಗಳ ಮಾದರಿಗೆ ತಮ್ಮನ್ನು ತಾವು ಮರುರೂಪಿಸಿಕೊಳ್ಳುತ್ತಿದ್ದವು. ಅಮೆರಿಕದ ಈ ದಿನಪತ್ರಿಕೆಗಳಲ್ಲಿ ಒಂದು ದಿನ ಭಾರತ ಸುಂದರಿಯ ಸುದ್ದಿ ಮುಖಪುಟವನ್ನು ಅಲಂಕರಿಸಿಕೊಂಡಿದ್ದರೆ ಮತ್ತೊಂದು ದಿನ ಅಮೆರಿಕ ಚಲನಚಿತ್ರ ತಾರೆಯರ ವಿವಾಹ ವಿಚ್ಛೇದನದ ಸುದ್ದಿ ತುಂಬಿಕೊಂಡಿರುತ್ತಿತ್ತು.
ಅಂಥ ಹಲವಾರು ವಿಷಯಗಳು ಇವೆ. ಆದರೆ ಅವನ್ನೆಲ್ಲ ಕುರಿತು ಮಾತನಾಡಲು ಸಮಯ ಉಳಿದಿಲ್ಲ. ಈ ಮಾತನ್ನು ಮುಗಿಸುತ್ತ ಹೀಗೆ ಹೇಳಬಹುದು. ಜಾಗತೀಕರಣ ಸಂಸ್ಕೃತಿಯನ್ನು ಸರಳವಾಗಿ ಹೊರಗಿನಿಂದ  ಹೇರಿದುದಲ್ಲ.  ಭಾರತದೊಳಗಿನ ಶ್ರೀಮಂತ ವರ್ಗಗಳು ಈ ಹಿಂದಿನಿಂದ ಅಪ್ರಯತ್ನಪೂರ್ವಕವಾಗಿ ನಡೆಸಿಕೊಂಡು ಬಂದ ಜೀವನ ವಿಧಾನಗಳಿಂದಲೂ ಹುಟ್ಟಕೊಂಡಿದೆ. ಆದ್ದರಿಂದ ಇದನ್ನು ಆಕ್ರಮಣ ಮತ್ತು ರಕ್ಷಣೆ ಎಂಬ ಪಾರಿಭಾಷಿಕ ಪದಗಳಲ್ಲಿ ನಡೆಸಿಕೊಳ್ಳಕೂಡದು. ಆಧುನಿಕ ಭಾರತೀಯ ಸಮಾಜ ಮತ್ತು ಸಂಸ್ಕೃತಿಯಲ್ಲಿ ಅತ್ಯಂತ ಪ್ರಗತಿ ಪರ ಹಾಗೂ ಮಹತ್ವಪೂರ್ಣವಾದ ಮಾರ್ಕ್ಸ್ ವಾದ, ಕಮ್ಯೂನಿಸಂ, ಉದಾರವಾದಿ ಪ್ರಜಾಪ್ರಭುತ್ವ, ಜಾತ್ಯತೀತವಾದ, ಟ್ರೇಡ್ ಯೂನಿಯನ್, ಮುದ್ರಣ ತಂತ್ರಜ್ಞಾನ, ಮುಕ್ತ ಪತ್ರಿಕೋದ್ಯಮ, ಆಧುನಿಕ ಸಿವಿಲ್ ಹಾಗೂ ಕ್ರಿಮಿನಲ್ ಕೋಡುಗಳು, ಸ್ವತಂತ್ರ ನ್ಯಾಯಾಂಗ- ಇವು ಆರಂಭದಿಂದಲೇ ಯುರೋಪಿನಿಂದ ಬಂದಿತೆಂಬುದನ್ನು ನೆನಪು ಮಾಡಿಕೊಳ್ಳುವುದು ಉಪಯುಕ್ತ. ಅವೆಲ್ಲ ಅಮೆರಿಕದಲ್ಲಿ ಹುಟ್ಟಿದವು, ಅವನ್ನು ಕೂಡ ರೈಲು, ಫ್ಯಾಕ್ಟರಿ ತಯಾರಿಸಿದ ಸಾಮಗ್ರಿಗಳನ್ನು ಬಳಸಿದ ಹಾಗೆ ನಮ್ಮ ಉದ್ದೇಶಗಳಿಗೆ ಬಳಸುತ್ತಿದ್ದೇವೆ. ಸರ್ವವ್ಯಾಪಿ ಬಂಡವಾಳಶಾಹಿಯಾಗಿ ಸಮಗ್ರ ಭಾರತ ತಳೆದ ಅತ್ಯಂತ ಹೀನ ದೃಷ್ಟಿಕೋನವೆಂದರೆ ಅದು ಪಾಶ್ಚಿಮಾತ್ಯ ನಾಗರಿಕತೆ ಮತ್ತು ಸಾಂಸ್ಕೃತಿಕ ಮೌಲ್ಯಗಳ ಅತಿ ಕೆಡುಕಿನ ಅಂಶಗಳನ್ನು ತಂದುಕೊಂಡಿತೆ ವಿನಾ ಅತ್ಯುತ್ತಮ ಅಂಶಗಳನ್ನು ತಂದುಕೊಳ್ಳಲಿಲ್ಲ. ಅಭಿವೃದ್ಧಿ ಹೊಂದಿದ ಪಾಶ್ಚಿಮಾತ್ಯ ಬಂಡವಾಳ ಸಂಸ್ಕೃತಿಗಳ ಅತ್ಯುತ್ತಮ ಭಾಗಗಳಲ್ಲಿ ನಮಗೆ ಅಗತ್ಯವಾದುದು ಹೆಚ್ಚಿನದಿದ್ದು, ನಮ್ಮ ಉದ್ದೇಶಗಳಿಗಾಗಿ ಅದನ್ನು ಮೆಚ್ಚಬೇಕಿದೆ.  ಈ ನಡುವೆ 'ಪಾಶ್ಚಾತ್ಯ ಆಕ್ರಮಣ'ವೆಂದು ಕರೆಯಲಾಗುವುದರ ವಿರುದ್ಧ ಕಾಲಕಾಲಕ್ಕೆ ಗಲಭೆ ಪ್ರದರ್ಶನ ನಡೆಸುವವರು-ಅಂದರೆ ಶಿವಸೇನೆ, ಸ್ವದೇಶಿ ಚಾಗರಣ ಮಂಚ ಮತ್ತಿತರರು- ಸರಕಾರ ಮತ್ತು ರಾಜಕೀಯ ಪಕ್ಷಗಳ ಏಜಂಟರುಗಳೇ ಆಗಿದ್ದು ಭಾರತದ ಮಾರುಕಟ್ಟೆಗಳು ಪಾಶ್ಚಾತ್ಯ ಬಂಡವಾಳಕ್ಕೆ ತೆರೆದಿಕೊಳ್ಳಲು ಹಾಗೂ ಹಣ ಹೂಡುವ ಅಮೆರಿಕನ್ನರಿಗೆ ಸರಿ ಹೊಂದುವಂತೆ ಭಾರತದ ಕಾನೂನುಗಳಿಗೆ ತಿದ್ದುಪಡಿ ತರಲು ಅತ್ಯಂತ ತೀವ್ರವಾಗಿ ಒಪ್ಪಿಸಿಕೊಂಡವರು. ಅವರು ಕೇವಲ ಸಾಂಕೇತಿಕ ನಡಾವಳಿಗಳನ್ನು ಮೀರಿ ಹೋಗಲು ಸಾಧ್ಯವೆ ಇಲ್ಲ. ಏಕೆಂದರೆ ಅವರ ಸರಕಾರವಷ್ಟೆ ಅಲ್ಲ ಅವರ ಮುಖ್ಯ ಸಾಮಾಜಿಕ ನೆಲೆಯಾದ ಮೇಲುವರ್ಗ, ಮೇಲುಜಾತಿ, ದೊಡ್ಡ ನಗರಗಳ ವ್ಯಾಪಾರಿ ಬೂರ್ಜ್ವಾಗಳು ಮತ್ತು ಕೇಸರಿ ಬಟ್ಟೆ ಧರಿಸಿದ ಹೌದಪ್ಪಗಳು ಕೂಡ ಉದಾರೀಕರಣದ ಅತ್ಯಂತ ಅತ್ಯುತ್ಸಾಹಿಗಳನ್ನು ಒಳಗೊಂಡಿದೆ.
ನಮ್ಮ ಇತಿಹಾಸದ ಐವತ್ತು ವರುಷಗಳನ್ನು ಹಿಂದಿರುಗಿ ನೋಡಿದಾಗ ನಾವು ಪ್ರತ್ಯಕ್ಷವಾಗಿ ತುಂಬಾ ಮಹತ್ವದ ವೈರುಧ್ಯವನ್ನು ಕಾಣುತ್ತೇವೆ. ಸ್ವಾತಂತ್ರ್ಯದ ಆರಂಭಿಕ ದಶಕಗಳಲ್ಲಿ ಜಾತ್ಯತೀತತೆ, ಆಧುನಿಕತೆ ಮತ್ತು ದೇಶದ ಆರ್ಥಿಕತೆ 'ಸಮಾಜವಾದಿ ಹಾಗೂ ಯೋಜನಾ ಬದ್ಧ ಅಭಿವೃದ್ಧಿ' ನೆಲೆಯ ವಿಚಾರಧಾರೆಗಳನ್ನು ಅನುಸರಿಸಿದ ರಾಷ್ಟ್ರೀಯ ಬೂರ್ಜ್ವಾ ವರ್ಗಗಳು ಅಲಿಪ್ತ ಹಾಗೂ ಸ್ವತಂತ್ರ ವಿದೇಶಾಂಗ ನೀತಿಯನ್ನು ಮತ್ತು ದೇಶದೊಳಗಿನ ವಿಚಾರದಲ್ಲಿ ಒಂದು ಬಗೆಯ ಸಾಂಸ್ಕೃತಿಕ ಸಾಮ್ರಾಜ್ಯಶಾಹಿ ವಿರೋಧಿ ನಿಲುವನ್ನು ಕೂಡ ತಳೆದಿದ್ದರು. ಇದಕ್ಕೆ ವಿರುದ್ಧವಾಗಿ ಇಂದು ಸಾಂಸ್ಕೃತಿಕ ರಾಷ್ಟ್ರೀಯವಾದವನ್ನು ಮಂಡಿಸುವ ಅತ್ಯಂತ ಬಲಪಂಥೀಯ ಪ್ರಚಾರಕರು ಭಾರತದ ನಿಜವಾದ ಧರ್ಮ ಮತ್ತು ಪರಂಪರೆ ಮುಂತಾದುವನ್ನು ಅತ್ಯಂತ ವ್ಯಾಪಕವನ್ನಾಗಿಯೂ ಸಾಮ್ರಾಜ್ಯಶಾಹಿ ಬಂಡವಾಳಕ್ಕೆ ಶೀಘ್ರ ಶರಣಾಗುವಂಥದ್ದನ್ನಾಗಿಯೂ ಮಾಡಿದ್ದಾರೆ. ಇದು ಕಮ್ಯೂನಿಸಂಗೆ ತುಂಬಾ ವಿಚಿತ್ರ ಬಗೆಯ ಆಕ್ರಮಣಶೀಲತೆಯನ್ನು ತಂದುಕೊಡುತ್ತದೆ. ನಾನು ಬೇರೊಂದು ಕಡೆ ಪ್ರತಿಪಾದಿಸಿದಂತೆ ಭಾರತದಂಥ ದೇಶದಲ್ಲಿ ವಸಾಹತು ವಿರೋಧಿ ರಾಷ್ಟ್ರೀಯವಾದ ಸಂಪ್ರದಾಯಗಳು ಹಿಂದಿನ ಕಾಲದಲ್ಲಿ ಅಧಿಕ ಪ್ರಮಾಣದಲ್ಲಿದ್ದು, ವರ್ತಮಾನದಲ್ಲಿ ಸಾಮ್ರಜ್ಯಶಾಹಿ ಪ್ರಾಬಲ್ಯದ ಗುರಿಯೆ ರಾಷ್ಟ್ರೀಯವಾದಿ ವಿಚಾರಧಾರೆಯ ಉದ್ದೇಶಿತ ಅಗತ್ಯವಾಗಿದೆ. ಅಲ್ಲದೆ ಪ್ರಗತಿಪರ ಶಕ್ತಿಗಳು ಈ ರಾಷ್ಟ್ರೀಯವಾದದ ಸೆಳೆತವನ್ನು ಮುನ್ನಡೆಸಿ ಸಾಮ್ರಾಜ್ಯಶಾಹಿ ವಿರುದ್ಧ ಸಾಗಲು ಸಾಧ್ಯವಾಗದಿದ್ದರೆ ಆ ಸ್ಥಾನವನ್ನು ಭ್ರಷ್ಟ ಹಾಗೂ ಪ್ರಗತಿ ವಿರೋಧಿ ಶಕ್ತಿಗಳು ಖಂಡಿತವಾಗಿ ಅಲಂಕರಿಸಲು ಯತ್ನಿಸುತ್ತವೆ. ಪ್ರಸ್ತುತ ಆರೆಸ್ಸೆಸ್ ಮತ್ತು ಅದರ ಪರಿವಾರ ಸಂಘ ಸಂಸ್ಥೆಗಳಿಗೆ ಸಾಮ್ರಾಜ್ಯಶಾಹಿ ವಿರೋಧಿ ರಾಷ್ಟ್ರೀಯವಾದ ಕಾರ್ಯಗತಗೊಳಿಸಲು ಧೈರ್ಯವಿಲ್ಲದುದರಿಂದ ಅವು ಕೋಮುವಾದಿ ಸಾಂಸ್ಕೃತಿಕ ರಾಷ್ಟ್ರೀಯವಾದವನ್ನು ಪಸರಿಸಲು ಬಯಸಿವೆ. ಅವರು ನಿಜವಾದ ಯುದ್ಧ ಮರೆಯಲು ಅವರನ್ನು ಹೀಗೆ ಉದ್ದೀಪಿಸಲಾಗಿದೆ ಎಂಬ ನಂಬಿಕೆಯಿಂದ ಸಾಂಕೇತಿಕ ಯುದ್ಧ ಹೂಡಲಾಗಿದೆ. ನಿಜವಾದ ದಮನಕಾರರು ವಿಶ್ವ ವ್ಯಾಪಾರ ಸಂಸ್ಥೆ ಅಥವಾ ಅಮೆರಿಕ ಎಂಬುದನ್ನು ತಳ್ಳಿ ಹಾಕಲಾಗದ ಮತ್ತು ತಳ್ಳಿ ಹಾಕಲು ಸಾಧ್ಯವಿಲ್ಲದ ಮಾತಾಗಿರುವುದರಿಂದ ಅವರು ಕೆಂಟುಕಿ ಫ್ರೈಡ್ ಚಿಕನ್ ಶಾಖೆಗಳ ವಿರುದ್ಧ ಸಾಂಕೇತಿಕ ಚಳವಳಿ ನಡೆಸುತ್ತಾರೆ. ಅಮೆರಿಕದ ಯಾವುದೇ ಅಸ್ತ್ರದ ಮೇಲೆ ನಡೆಸುವ ಯಾವುದೇ ಬಗೆಯ ನಿಜವಾದ ದಾಳಿ ಸಾಂಸ್ಥಿಕ ಬಂಡವಾಳದ ಉಳಿದ ಸಾಂಸ್ಥಿಕ ಹಣ ಹೂಡಿಕೆದಾರರನ್ನು ಉಳಿಯಗೊಡದಂತೆ ಮಾಡುತ್ತದೆ. ಆದ್ದರಿಂದ ಸಾಮ್ರಾಜ್ಯಶಾಹಿಗೆ ಶರಣಾಗತರಾಗಿದ್ದರೂ ಅವರಿಗೆ ಸಾಂಕೇತಿಕ ಯದ್ಧದಲ್ಲೂ ತಡೆಯೊಡ್ಡುವ ಧೈರ್ಯವಿಲ್ಲ. ಹಾಗಾಗಿ 'ವಿದೇಶಿ ಆಕ್ರಮಣ' ಅವೈಚಾರಿಕ ಮತ್ತು ಸಾಂಸ್ಕೃತಿಕ ಪರಿಭಾಷೆಯ ನೆಲೆಯಲ್ಲಿ ನಿರಂತರ ಪುನರ್ವ್ಯಾಖ್ಯಾನಕ್ಕೆ ಒಳಗಾಗಿದೆ. ಭಾರತವನ್ನು ಬೆದರಿಸಿರುವುದು ಇಂದಿನ ಸಾಮ್ರಾಜ್ಯಶಾಹಿ ಆಕ್ರಮಣವಲ್ಲ, ಮಧ್ಯಯುಗದ 'ಮುಸ್ಲಿಂ' ಆಕ್ರಮಣ, ವಿದೇಶಿ ಸಾಂಸ್ಥಿಕ ಬಂಡವಾಳವಲ್ಲ ಆದರೆ 'ವಿದೇಶಿ ಧರ್ಮ'ಗಳಲ್ಲಿ ಮುಖ್ಯವಾಗಿ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳೆಂಬ ದೃಷ್ಟಿಕೋನದ ಮೇಲೆ ಒತ್ತು ಹಾಕಿದೆ. ಆದುದರಿಂದ ಒಂದು ಹಾಡಿಗಾಗಿ ದೇಶದ ಸಾರ್ವಜನಿಕ ಆಸ್ತಿಗಳು ವಿದೇಶಿ ಹೂಡಿಕೆದಾರರಿಗೆ ಮತ್ತು ಬಂಡವಾಳದಾರರಿಗೆ ಮಾರಾಟವಾಗುತ್ತಿದ್ದ ಹಾಗೆ ಈ ವಿದೇಶಿ ಧರ್ಮಗಳ ಜೀವಂತ ಸಂಕೇತಗಳಾದ ಮಸೀದಿ ಮತ್ತು ಚರ್ಚುಗಳ ನಾಶ ನಿರ್ದಿಷ್ಟ ಸಮಯದಲ್ಲಿ ರಾಷ್ಟ್ರೀಯ ಗೌರವದ ವಿಮೋಚನೆಯ ಕೃತ್ಯವಾಗಿ ಮಂಡಿತವಾಗಿದೆ. ಸಂಕ್ಷಿಪ್ತವೆಂದರೆ- ಹಿಂದೂ ಜಾಗರಣ ಮಂಚ ರಾಷ್ಟ್ರದ ನಿಜವಾದ ಯಾವುದೇ ಆಸ್ತಿಯನ್ನು ಸಂರಕ್ಷಿಸುವುದರಲ್ಲಿ ಅಸಮರ್ಥವಾಗಿತ್ತು ಮತ್ತು ಸಂಪೂರ್ಣ ನಗೆಪಾಟಿಲಿಗೆ ಈಡಾಗಿತ್ತು. ಆದುದರಿಂದ ಅದು ಸಾಮ್ರಾಜ್ಯಶಾಹಿ ವಿರೋಧಿ ರಾಷ್ಟ್ರೀಯವಾದದ ನಿಜವಾದ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ತುಂಬಾ ಆಕ್ರಮಣಕಾರಿಯಾಗಿತ್ತು.
 -ಏಜಾಜ್ ಅಹಮದ್