-ಸುಬೋಧ ಮಿತ್ರ
ರೈತರ ಪ್ರಾಮುಖ್ಯತೆ
ನಮ್ಮ ದೇಶದಲ್ಲಿ ಶೇಕಡ 80ರಷ್ಟು ಜನ ಹಳ್ಳಿಗಳಲ್ಲಿ ವಾಸ ಮಾಡುತ್ತಿದ್ದು, ಪ್ರಧಾನವಾಗಿ ಕೃಷಿಕ ಸಮಾಜವಾಗಿದೆ. ನಮ್ಮ ರಾಷ್ಟ್ರದ ಒಟ್ಟು ಉತ್ಪಾದನೆಯ ಪ್ರಮಾಣದಲ್ಲಿ ಅತಿ ಹೆಚ್ಚಿನ ಕಾಣಿಕೆಯನ್ನು ಬೇಸಾಯ ನೀಡುತ್ತಿದೆ. ದೇಶದ ಬಹುಮುಖ್ಯ ಸಂಪತ್ತು ಹುಟ್ಟುವಳಿಗಾರರಾದ ರೈತರು ಭಾರತದಲ್ಲಿ ಸಾಂಖ್ಯಿಕವಾಗಿ ಅತಿಶಕ್ತಿಶಾಲಿ ಉತ್ಪಾದನೆಯ ಬಲವಾಗಿ ಹೊರಹೊಮ್ಮಿದ್ದಾರೆ.
ರೈತರ ಪ್ರಾಮುಖ್ಯತೆಯನ್ನು ರಾಜಕೀಯ ಬಲವಾಗಿ ಯಾವ ಬಗೆಯಲ್ಲೂ ಅತಿರೇಕಗೊಳಿಸುವಂತಿಲ್ಲ. ಅವರು ನಮ್ಮ ಸ್ವಾತಂತ್ರ್ಯ ಹೋರಾಟದ ಮುಂದಾಳುಗಳಾಗಿದ್ದರು, ಅಷ್ಟೇ ಅಲ್ಲದೆ ಬ್ರಿಟಿಶ್ ಸಾಮ್ರಾಜ್ಯಶಾಹಿ ಮತ್ತು ಊಳಿಗಮಾನ್ಯ ಮಿತ್ರಕೂಟದ ವಿರುದ್ಧ ನಡೆದ ಹಲವಾರು ರೈತ ಬಂಡಾಯಗಳು ಹತ್ತೊಂಬತ್ತು ಮತ್ತು ಇಪ್ಪತ್ತನೆ ಶತಮಾನದ ಭಾರತ ಚರಿತ್ರೆಯಲ್ಲಿ ಬಹುಮುಖ್ಯ ಲಕ್ಷಣವನ್ನು ರೂಪಿಸಿವೆ. ಈ ಭವ್ಯ ಪರಂಪರೆಯನ್ನು ಇಂದಿಗೂ ಜೀವಂತವಾಗಿ ಉಳಿಸಿಕೊಂಡು ಬಂದಿರುವ ರೈತರು ದೇಶದ ವಿವಿಧ ಮೂಲೆಗಳಲ್ಲಿ ಒಂದು ತುತ್ತು ಅನ್ನ ಮತ್ತು ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟದ ಆರಂಭವನ್ನು ಮುಂದುವರೆಸಿದ್ದಾರೆ.
ಆಧುನಿಕ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಕಟ್ಟುವ ಹಾದಿಯಲ್ಲಿ ನಮ್ಮ ದೇಶದ ಆಡಳಿತಗಾರರು ಇಂದಿಗೂ ರೈತ ಸಮುದಾಯದ ಬೃಹತ್ ಮತ್ತು ಬಹುಮುಖ ಶಕ್ತಿಯನ್ನು ಸಜ್ಜುಗೊಳಿಸಲು ಗಮನ ಹರಿಸದಿರುವುದು ತೀವ್ರ ವಿಷಾದದ ಸಂಗತಿಯಾಗಿದೆ. ಇದಕ್ಕೆ ವಿರುದ್ಧವಾಗಿ ರೈತರು ಉತ್ಪಾದಿಸಿದ ಎಲ್ಲ ಸಂಪತ್ತನ್ನು ಸಾಮ್ರಾಜ್ಯಶಾಹಿಗಳು, ಜಮೀನ್ದಾರರು ಮತ್ತು ಮಧ್ಯಮ ವರ್ಗದ ವ್ಯಾಪಾರಿ ಸಮೂಹಗಳು ದೋಚುತ್ತ, ಸತತ ದಮನಕ್ಕೆ ಒಳಪಟ್ಟು ಕಡೆಗಣಿತರಾಗಿಯೆ ಉಳಿದಿದ್ದಾರೆ.
ಕೂಲಿ ಕಾರ್ಮಿಕರ ಪಕ್ಷ ತಾನು ಹೆಚ್ಚು ಅವಲಂಬಿಸಿರುವ ಮತ್ತು ತನ್ನ ಪ್ರಬಲ ಮಿತ್ರ ಸದಸ್ಯರಾದ ರೈತರ ಈ ಸ್ಥಿತಿಯನ್ನು ನೋಡಿ ಕೇವಲ ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ. ಕೂಲಿ ಕಾರ್ಮಿಕರು ರೈತರನ್ನು ಅರೆ ಉಳಿಗಮಾನ್ಯಶಾಹಿಯ ಸಂಕೋಲೆಗಳಿಂದ ಬಿಡುಗಡೆಗೊಳಿಸದೆ ತಮ್ಮ ಬಿಡುಗಡೆ ಎಂದಿಗೂ ಪೂರ್ಣವಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ರೈತರ ಕ್ರಿಯಾಶೀಲತೆ ನಿರ್ಬಂಧಕ್ಕೆ ಒಳಪಡಬಾರದೆಂಬುದು ಆಧುನಿಕ ಭಾರತ ನಿರ್ಮಾಣ ಪ್ರಕ್ರಿಯೆಯ ಒತ್ತಾಯವಾಗಿದೆ. ನಮ್ಮ ದೇಶ ಮುಂದಡಿ ಇಡಬೇಕಾದರೆ ರೈತರ ಸಮಸ್ಯೆಗಳು ಪರಿಹಾರ ಕಾಣಬೇಕಾದ ಅಗತ್ಯವಿದೆ. ಈ ಕಾರಣದಿಂದ ನಾವು ರೈತರ ಸಮಸ್ಯೆಗಳನ್ನು ರಾಷ್ಟ್ರೀಯ ಸಮಸ್ಯೆಗಳೆಂದು ವಿವರಿಸುತ್ತೇವೆ.
ಸಮಸ್ಯೆಯ ಸ್ವರೂಪ
ಭಾರತದ ಆರ್ಥಿಕತೆ ಅಭಿವೃದ್ಧಿ ಹೊಂದುತ್ತಿರುವ ಸ್ಥಿತಿಯಲ್ಲೆ ಉಳಿದಿದೆ. ಏಕೆಂದರೆ ಅದರ ಪ್ರಧಾನ ಕ್ಷೇತ್ರವಾದ ಕೃಷಿ ಸ್ಥಗಿತಗೊಂಡು ನಲುಗುತ್ತಿದೆ. ಈ ಸಮಸ್ಯಗೆ ಎರಡು ಮುಖಗಳಿವೆ. ಒಂದು ಕಡೆ, ಬೇಸಾಯ ಉತ್ಪನ್ನದ ಮೂಲಭೂತ ಮಾಧ್ಯಮವಾದ ಭೂಮಿ ಬಹುಪಾಲು ರೈತರಿಂದ ಉಳಲಾಗುತ್ತದೆಯೆ ಹೊರತೂ ಅದು ಉಳುವವರ ಸ್ವಂತ ಆಸ್ತಿಯಾಗದೆ ಅನ್ಯರ ಪಾಲಾಗಿ ಉಳಿದಿದೆ. ಹಾಗಾಗಿ ಒಡೆತನದ ಪ್ರಶ್ನೆಯನ್ನು ಪರೋಕ್ಷ ರೈತರೊಳಗೆ ಕೇಂದ್ರೀಕರಿಸಿದರೆ ಎಲ್ಲ ಕಡೆ ಬಹುಸಂಖ್ಯೆಯಲ್ಲಿರುವ ಉಳುಮೆದಾರರು ನಿರ್ಗತಿಕ ಸ್ಥಿತಿ ಎದುರಿಸುತ್ತಾರೆ. ಇದು ಅವರ ಕೊಳ್ಳುವ ಶಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದಕ್ಕೆ ಪ್ರತಿಯಾಗಿ ಬೆಳೆವಣಿಗೆಯನ್ನು ನೆಲೆಗೊಳಿಸುವುದು ಅಥವಾ ವಸ್ತುಗಳಿಗೆ ಬೇಡಿಕೆ ಉಂಟುಮಾಡುವುದು ಅಂದರೆ ಇಡೀ ಸಮಾಜವನ್ನು ಕೈಗಾರೀಕರಣಕ್ಕೆ ಒಳಪಡಿಸುವುದಾಗಿದೆ. ಆದ್ದರಿಂದ ರೈತರಿಗೆ ಭೂಮಿ ಒದಗಿಸುವ ವರೆಗೂ ಆಧುನಿಕ ಮತ್ತು ಕೈಗಾರಿಕೆಯಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ಕಟ್ಟುವುದು ಸಾಧ್ಯವಾಗುವುದಿಲ್ಲ. ಮತ್ತೊಂದು ಬಗೆಯಲ್ಲಿ ನಿಜವಾದ ಬಳಕೆದಾರರು ಮತ್ತು ಉತ್ಪನ್ನದಾರರ ಕೈ ತಪ್ಪಿರುವ ಭೂಮಿಯೆ ಉತ್ಪನ್ನ ಶಕ್ತಿಯ ಬೆಳೆವಣಿಗೆಗೆ ಅಡ್ಡಿಯುಂಟಾಗಿದೆ. ಇಂದು ಕೂಲಿಕಾರ್ಮಿಕರ ಮೊದಲ ಕೆಲಸವೆಂದರೆ ಕೃಷಿ ಕ್ಷೇತ್ರದಲ್ಲಿನ ಈ ಅಡೆತಡೆಯನ್ನು ನಿವಾರಿಸುವುದು. ಇದು ಊಳಿಗಮಾನ್ಯ ಪದ್ಧತಿ ವಿರುದ್ಧ ಹೋರಾಟದ ಆರಂಭವನ್ನೊಳಗೊಂಡಿದೆ.
ಇನ್ನೊಂದು ಕಡೆ, ಕೃಷಿ ಬಳಕೆ ವಸ್ತುಗಳೂ ಕೃಷಿ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಯ ಪ್ರಮುಖ ಭಾಗವಾಗಿದೆ. ಇದರೊಂದಿಗೆ ಕೈಗಾರಿಕೆಗಳ ಕೊರತೆ ಮತ್ತು ಜನಸಂಖ್ಯಾ ಹೆಚ್ಚಳದಿಂದುಂಟಾದ ಒತ್ತಡವೂ ಸೇರಿಕೊಂಡಿದೆ. ಹೀಗಿದ್ದರೂ ಜನಸಂಖ್ಯಾ ಕೇಂದ್ರಿತ ಚಿಂತನೆ ಕಡಿಮೆ ಇಳುವರಿ ಭೂಮಿ ಕುರಿತು ವಿಮರ್ಶಾತ್ಮಕ ಆಯಾಮ ಒದಗಿಸಿದೆ. ಭೂಮಿಯ ಮೇಲಿನ ಒತ್ತಡ ಕಡಿಮೆ ಮಾಡಲು ಇಳುವರಿ ಹೆಚ್ಚಿಸುವ ಅಗತ್ಯವಿದೆ. ಇದರಿಂದ ಆಹಾರಕ್ಕಾಗಿ ಕೃಷಿಕ್ಷೇತ್ರವನ್ನೆ ಅವಲಂಬಿಸಿರುವ ಹೆಚ್ಚಿನ ಜನಸಂಖ್ಯೆಯ ಹಸಿವು ಹಿಂಗಿಸಲು ಸಾಧ್ಯ. ಇದಕ್ಕಾಗಿ ಕೃಷಿ ಉತ್ಪನ್ನ ವಿಧಾನದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡುವುದು ಅಗತ್ಯವಿದೆ. ಉತ್ಪಾದನೆ ಸಂಬಂಧಿತ ಅಂದರೆ ಕೃಷಿ ಭೂಮಿಯ ಆಧುನೀಕರಣ, ಭೂಮಿಯ ಮರುಹಂಚುವಿಕೆ ಹಾಗೂ ಕೃಷಿ ಬಳಕೆ ವಸ್ತುಗಳಾದ ಬೀಜ, ರಸಗೊಬ್ಬರ, ಕೀಟನಾಶಕ, ನೀರಾವರಿ ಮುಂತಾದವು ಸುಲಭವಾಗಿ ದೊರೆಯುವಂತೆ ಮಾಡಬೇಕಿದೆ. ಬೇರೆ ಬೇರೆ ರಾಜ್ಯಗಳ ಉಳುಮೆದಾರ ರೈತರು ಇಂದು ಭೂಮಿ ಪಡೆಯುವ ಪ್ರಾಥಮಿಕ ಹಂಬಲದೊಂದಿಗೆ ಕೃಷಿ ಬಳಕೆ ವಸ್ತುಗಳು ಸುಲಭವಾಗಿ ಹಾಗೂ ಕಡಿಮೆ ದರದಲ್ಲಿ ದೊರೆಯಬೇಕೆಂಬ ಬೇಡಿಕೆಗೆ ದನಿಗೂಡಿಸಿದ್ದಾರೆ. ಸಾಮ್ರಾಜ್ಯವಾದಿ ಬೃಹತ್ ಬಂಡವಾಳದಾರರು ನಮ್ಮ ದೇಶದಲ್ಲಿ ಕೃಷಿ ಬಳಕೆ ಸಾಮಗ್ರಿಗಳ ಮೂಲ ನೆಲೆಯ ಮೇಲೆ ಹಿಡಿತ ಹೊಂದಿದ್ದು, ತಮ್ಮ ಈ ಹಿಡಿತವನ್ನು ಭಾರತೀಯರನ್ನು ದೋಚಲು ಬಳಸುತ್ತಿದ್ದಾರೆ. ಇದರಿಂದಾಗಿ ಕೂಲಿಕಾರ್ಮಿಕರು ಭೂಮಿಯ ಮೂಲಭೂತ ಪ್ರಶ್ನೆ ಕುರಿತು ಊಳಿಗಮಾನ್ಯ ವ್ಯವಸ್ಥೆಯ ವಿರುದ್ಧ ತಾತ್ವಿಕವಾಗಿ ಹೋರಾಡುವುದರೊಂದಿಗೆ ಸಾಮ್ರಾಜ್ಯಾಶಾಹಿ ವಿರುದ್ಧ ಹೋರಾಟ ಮಾಡುವುದು ಕೂಡ ಅವರ ಕರ್ತವ್ಯವಾಗಿದೆ. ಹೀಗೆ ಭೂಮಿ ಮತ್ತು ಬೇಸಾಯ ಬಳಕೆ ವಸ್ತುಗಳ ಕುರಿತ ಪ್ರಶ್ನೆಗಳು ಒಟ್ಟುಗೂಡಿ ನಮ್ಮ ದೇಶದ ಕೃಷಿ ಸಮಸ್ಯೆಯ ಸಮಗ್ರತೆಯನ್ನು ಕಟ್ಟಿಕೊಡುತ್ತದೆ.
ಈ ಕಾರಣದಿಂದ ಭಾರತದ ಆರ್ಥಿಕ ಕ್ಷೇತ್ರದ ಗುಣ ಲಕ್ಷಣ ಅರೆ ಊಳಿಗಮಾನ್ಯ ವ್ಯವಸ್ಥೆಯಾಗಿ ರೂಪುಗೊಂಡಿದೆ. ಅದರ ಮೂಲಭೂತ ವೈರುದ್ಧ್ಯಗಳು ಹೀಗಿವೆ: 1. ಸಾಮ್ರಾಜ್ಯಶಾಹಿ ಮತ್ತು ಭಾರತದ ವಿಭಿನ್ನ ರಾಷ್ಟ್ರೀಯತೆಗಳ ನಡುವಿನ ವೈರುಧ್ಯ ಹಾಗೂ 2. ಊಳಿಗಮಾನ್ಯ ವ್ಯವಸ್ಥೆ ಮತ್ತು ಭಾರತದ ವಿಶಾಲ ಜನ ಸಮೂಹಗಳ ನೆಡುವಿನ ವೈರುದ್ಧ್ಯ. ನಮ್ಮ ದೇಶದಲ್ಲಿ ರೈತರಂಗವೆ ಕೃಷಿಕ್ರಾಂತಿಯನ್ನು ಮುನ್ನಡೆಸಬೇಕೆಂಬುದು ನಮ್ಮ ಮುಖ್ಯ ಕಾರ್ಯಯೋಜನೆಯಾಗಿರುವುದರಿಂದ ಕೃಷಿಕ್ರಾಂತಿ ನಮ್ಮ ಪ್ರಸ್ತುತ ಹಂತದಲ್ಲಿ ನವ ಪ್ರಜಾಪ್ರಭುತ್ವ ಕ್ರಾಂತಿಯ ಕಕ್ಷೆಯಾಗಿದೆ. ನಮ್ಮ ಯೋಜಿತ ಕಾರ್ಯಕ್ರಮಗಳು ಅದನ್ನು ಸ್ಪಷ್ಟವಾಗಿ ಅನುಸರಿಸುತ್ತವೆ.
ಸದ್ಯದ ಸ್ಥಿತಿಯ ಒಲವುಗಳು
ನಮ್ಮ ಸಂಘಟನೆ ಮಾತ್ರವಲ್ಲದೆ ನಮ್ಮ ದೇಶದ ಬಹುಪಾಲು ಎಡಪಂಥೀಯ ಕ್ರಾಂತಿಕಾರಿ ಗುಂಪುಗಳೆಲ್ಲ ಭಾರತದ ಆರ್ಥಿಕ ವ್ಯವಸ್ಥೆಯನ್ನು ಸಾಮ್ರಾಜ್ಯಶಾಹಿ ಅಧಿಪತ್ಯದೊಂದಿಗಿನ ಅರೆ-ಊಳಿಗಮಾನ್ಯ ವ್ಯವಸ್ಥೆಯೆಂದೂ ಕೃಷಿಕ್ರಾಂತಿಯನ್ನು ಪರಿಪೂರ್ಣಗೊಳಿಸುವುದು ತಮ್ಮ ತಾತ್ವಿಕ ಒಪ್ಪಿತ ಕಾರ್ಯವೆಂದೂ ಲಕ್ಷಣೀಕರಿಸಿರುವುದನ್ನು ಎತ್ತಿ ಹೇಳಬೇಕು. ಸುಧಾರಣಾವಾದಿ ಮಾರ್ಕ್ಸಿಸ್ಟರ (ಸಿಪಿಎಂ) ಯೋಜಿತ ಕಾರ್ಯಕ್ರಮಗಳನ್ವಯ ಗುರುತಿಸಿರುವ ಗುಣ ಲಕ್ಷಣಗಳು. ನಮ್ಮ ದೇಶ ಅರೆ-ಬಂಡವಾಳಶಾಹಿ ಆಗಲಿರುವುದಾಗಿ ಪರಿಗಣಿಸಿದೆ ಹಾಗೂ 'ಕೃಷಿಕ್ರಾಂತಿ' ಕುರಿತು ಮಾತಾಡುತ್ತದೆ. ಇಲ್ಲಿಂದ ಕಮ್ಯೂನಿಸ್ಟ್ ಚಳವಳಿಯೊಳಗೆ ನಮ್ಮ ದೇಶದ ಕೃಷಿ ಸಮಸ್ಯೆ ಮತ್ತು ಪರಿಹಾರ ಕುರಿತ ಪ್ರಸ್ತಾವಗಳಲ್ಲಿ ವಿಶಾಲವಾದ ಹೋಲಿಕೆ ನೆಲೆಸಿರುವುದು ಕಾಣುತ್ತದೆ. ಹೀಗಿದ್ದರೂ ಈ ಎಲ್ಲ ಸ್ಪಷ್ಟತೆ, ಹೋಲಿಕೆಗಳಾಚೆಗೆ ನಿಜವಾದ ಮೂಲಭೂತ ವ್ಯತ್ಯಾಸಗಳ ನಡುವೆ ಅಂತರವಿದೆ. ಕೆಲವೊಂದು ವ್ಯತ್ಯಾಸಗಳು ಅತಿಶಯಗೊಳಿಸಿದ ಸ್ಥಿತಿಯಾಗಿರದೆ ನಮ್ಮ ಸಂಘಟನೆಯೊಳಗಿರುವ ಧ್ಯೇಯೋದ್ದೇಶಗಳಾಗಿವೆ. ಅರೆ-ಊಳಿಗಮಾನ್ಯ ಪದ್ಧತಿ ನೆಲೆಸಿರುವಿಕೆ ಮತ್ತು ದೇಶದ ಕೃಷಿಕ್ರಾಂತಿ ಅವಶ್ಯಕತೆ ಕುರಿತ ಬಹುಬಗೆಯ ವಿರುದ್ಧ ಅಭಿಪ್ರಾಯಗಳು ನಿಜವಾಗಿ ನಮ್ಮ ಕಾರ್ಯಕ್ರಮದ ಮೂಲಭೂತ ನಿಲುವಿಗೆ ಸವಾಲು ಎಸೆದಿವೆ, ನಮ್ಮ ವೈರುದ್ಧ್ಯಗಳಾಗಿವೆ. ಮೊದಲನೆಯದು, ಭಾರತೀಯ ಕೃಷಿಕ್ಷೇತ್ರದಲ್ಲಿ ಈಗಾಗಲೇ 'ವೈಚಾರಿಕ ಬದಲಾವಣೆ' ಎಂದು ಹೇಳುವ ಆಲೋಚನೆಯೊಂದು ನಡೆದಿದೆ. ಹಾಗೂ ಇದರಿಂದ ಭೂ ಸುದಾರಣೆಯ ವ್ಯಾಪ್ತಿ ಕುಗ್ಗಿದೆ ಎಂಬುದು. ಉಳಿದವರ ಅಭಿಪ್ರಾಯ ಹೆಚ್ಚು ನಿರ್ದಿಷ್ಟವಾಗಿದ್ದು, ಕೃಷಿಕ್ಷೇತ್ರದಲ್ಲಿ ಬಂಡವಾಳವಾದಿ ಬೆಳೆವಣಿಗೆ ತುಂಬ ಪ್ರಬಲವಾಗಿ ಅರೆ-ಊಳಿಗಮಾನ್ಯ ಪದ್ಧತಿಯೇ ಹಳೆಯದಾಗಿ ಬಿಟ್ಟಿದೆ ಎಂದು ಅವರು ನಿಸ್ಸಂದಿಗ್ಧವಾಗಿ ಹೇಳುತ್ತಾರೆ. ಹಿಂದಿನಿಂದಲೂ ಭಾರತದಲ್ಲಿ ಸಾಮ್ರಾಜ್ಯಶಾಹಿ, ಬಂಡವಾಳ ಮಧ್ಯವರ್ತಿಗಳು ಮತ್ತು ಅರೆ ಊಳಿಗಮಾನ್ಯ ಶಕ್ತಿಗಳು ಸಂಯುಕ್ತವಾಗಿ ಆಳ್ವಿಕೆ ನಡೆಸಿಕೊಂಡು ಬಂದಿವೆ. ಈ ಸಂಯುಕ್ತ ಕೂಟದಲ್ಲಿ ರೈತನೇ ಪ್ರಮುಖ ಪಾಲುದಾರನಾಗಿರುವುದರಿಂದ ಕೃಷಿಕ್ರಾಂತಿಗಾಗಿ ನಡೆಯುವ ಹೋರಾಟವೆಲ್ಲ ಎರಡನೆಯ ಸ್ಥಾನದಲ್ಲಿ ಉಳಿಯುತ್ತವೆ ಮತ್ತು ನಮ್ಮ ಸಾಮ್ರಾಜ್ಯಶಾಹಿ ವಿರೋಧಿ ಕ್ರಾಂತಿಗೆ ಅಧೀನವಾಗಿರುತ್ತವೆ ಎಂದು ಹೇಳುವುದು ಮೂರನೆಯ ಅಭಿಪ್ರಾಯವಾಗಿದೆ. ಕೊನೆಯದಾಗಿ, ಎಲ್ಲ ಮುಖ್ಯ ಪ್ರಶ್ನೆಗಳ ಹಾದಿಯೊಂದಿದೆ. ಅಂದರೆ ಈಗಿರುವ ವ್ಯವಸ್ಥೆಯಲ್ಲಿಯೆ ಭೂ ಸುಧಾರಣೆಯನ್ನು ನಾವು ಕಾರ್ಯರೂಪಕ್ಕೆ ತರಬೇಕು ಅಥವಾ ಸ್ಥಳೀಯ ಮಿತಿಗಳನ್ನು ಮೀರಬೇಕು. ಇನ್ನೊಂದು ಬಗೆಯಲ್ಲಿ ಇದು ಸಂಸದೀಯ ಹಾದಿ ಮತ್ತು ಕೃಷಿಕ್ರಾಂತಿ ಕುರಿತು ಸುಧಾರಣಾವಾದಿಗಳು ಮತ್ತು ಅರಾಜಕತಾವಾದಿಗಳಿಬ್ಬರೂ ವಿರುದ್ಧ ನಿಲುವು ತಳೆದ ಹಳೆಯ ಚರ್ಚೆಯಾಗಿದೆ. ಅಂಥ ಪ್ರಮುಖ ಚರ್ಚೆಯನ್ನು ಬದಿಗಿಟ್ಟರೂ ಭೂ ಹಂಚಿಕೆ ಕುರಿತ ಕೆಲವು ಸಣ್ಣಪುಟ್ಟ ವಿಷಯಗಳೂ ತಲೆ ಎತ್ತಿವೆ. ಅಂದರೆ, ಭೂ ಸುಧಾರಣೆಯ ಅವಧಿಯಲ್ಲಿ ನಾವು ಹೊಲಗದ್ದೆಗಳನ್ನೂ ಹಂಚಲೇಬೇಕಿತ್ತು. ಇದರಿಂದ ರೈತ ಬಂಡವಾಳಶಾಹಿ ಬೆಳೆಯಲು ಅವಕಾಶ ಮಾಡಿಕೊಟ್ಟಂತಾಗಿತ್ತು. ಹಾಗಾಗಿಯೆ ಇದು ಸ್ವರೂಪದಲ್ಲಿ ಪ್ರಗತಿ ವಿರೋಧಿಯಾಗುವುದಿತ್ತು. ಈ ಕುರಿತು ಮಧ್ಯಮ ವರ್ಗದ ಬಂಡವಾಳದಾರರ ದೂರುಗಳನ್ನು ನಾವು ಕಡೆಗಣಿಸುವಂತೆಯೂ ಇರಲಿಲ್ಲ. ಎಲ್ಲರನ್ನು ಮೆಚ್ಚಿಸುವ ಕಾರ್ಯದಲ್ಲಿ ಕಮ್ಯೂನಿಸ್ಟರು ವೈಚಾರಿಕ ಭೂ ಸುಧಾರಣೆಯ ವಿವಾದವನ್ನು ಎತ್ತಿ ಹಿಡಿದು ರೈತ ದಂಗೆಗಳನ್ನು ಹುಟ್ಟು ಹಾಕಿದರು. ಇಂಥ ಸುಧಾರಣೆಗಳು ಆರ್ಥಿಕ ಪ್ರಗತಿಯ ಮೇಲೆ ಯಾವುದೇ ಮಹತ್ವದ ಪರಿಣಾಮ ಉಂಟುಮಾಡಲಿಲ್ಲ.
ಈ ವಿವಾದಗಳನ್ನು ಸ್ಪಷ್ಟೀಕರಿಸುವುದು ನಮ್ಮ ಹೊಣೆಯಾಗಿದೆ. ವೈಚಾರಿಕ ಬದಲಾವಣೆಗಳು ನಿಜವಾಗಿ ನಡೆದದ್ದೆ ಆದರೆ ಭಾರತದ ಕೃಷಿಕ್ಷೇತ್ರದಲ್ಲಿ ಬಂಡವಾಳವಾದಿ ಬೆಳೆವಣಿಗೆಯ ಪ್ರಮಾಣ, ಸಾಮ್ರಾಜ್ಯಶಾಹಿಯ ಪಾತ್ರ, ಕೃಷಿಕ್ರಾಂತಿಯ ಹಾದಿ ಮತ್ತು ಅಗತ್ಯದ ಪ್ರಶ್ನೆ ಕುರಿತ ಕೆಲವು ವಿವಾದ ಪರಸ್ಪರ ಹೆಣೆದುಕೊಂಡಿರುವುದು ಖಚಿತವಾಗುತ್ತದೆ. ಈ ಕುರಿತು ನಮ್ಮ ನಿಲುವುಗಳನ್ನು ಸ್ಪಷ್ಟಪಡಿಸದಿದ್ದರೆ ಮತ್ತು ನಮ್ಮ ರಂಗದ ರೈತ ನಾಯಕರಿಗೆ ಅರಿವು ಮೂಡಿಸದಿದ್ದರೆ ನಮ್ಮ ಯೋಜಿತ ಕಾರ್ಯಕ್ರಮಗಳ ನಿಲುವಿನಿಂದ ನಾವು ದೂರ ಸಾಗುವ ಮತ್ತು ದೊಡ್ಡ ತಪ್ಪು ಮಾಡುವ ಅವಕಾಶಗಳು ಹೆಚ್ಚಾಗಿ, ಭಾರತದ ಕ್ರಾಂತಿಗೆ ಅಪಾರ ಹಾನಿ ತಟ್ಟಲಿದೆ. ಇವನ್ನು ಸ್ಪಷ್ಟೀಕರಿಸುವ ಹಂತದಲ್ಲಿ ಮೊದಲಿಗೆ ನಾವು ಪ್ರಸ್ತುತ ಬೆಳೆವಣಿಗೆಯ ಹಂತದ ವರೆಗೆ ಬಂದು ನಿಂತಿರುವ ನಮ್ಮ ದೇಶದ ಭೂ ಸಂಬಂಧಿತ ಚರಿತ್ರೆಯನ್ನು ವಸ್ತುನಿಷ್ಟವಾಗಿ ನೋಡಬಹುದು.
ನಮ್ಮ ದೇಶದಲ್ಲಿ ಭೂ ಸಂಬಂಧಗಳು: ಒಂದು ಸಂಕ್ಷಿಪ್ತ ಚರಿತ್ರೆ
ಭಾರತೀಯ ಕೃಷಿಕ್ಷೇತ್ರದ ತುಂಬ ವಿಚಿತ್ರವಾದ ಗುಣವೆಂದರೆ ಪ್ರಾಚೀನ ಕಾಲದಿಂದ ಮಧ್ಯಕಾಲೀನ ಯುಗದವರೆಗೂ ಭೂಮಿ ಖಾಸಗಿ ಆಸ್ತಿಯಾಗಿರದೆ ಇದ್ದದ್ದು. ರಷ್ಯಾದ ಕೆಲವು ಚರಿತ್ರಕಾರರು ಪ್ರಾಚೀನ ಭಾರತದಲ್ಲಿ ಭೂಮಿಯ ಮೇಲೆ ಖಾಸಗಿ ಒಡೆತನವಿತ್ತೆಂಬ ಸಿದ್ಧಾಂತವನ್ನು ಮುಂಚೂಣಿಗೆ ತರಲು ಶ್ರಮಿಸಿದ್ದರೂ ವಾಸ್ತವದಲ್ಲಿ ಸ್ವಯಂಪೂರ್ಣವಾದ ಹಳ್ಳಿಯ ಸಮುದಾಯಗಳ ಜಂಟಿ ಒಡೆತನಕ್ಕೆ ಎಲ್ಲ ಭೂಮಿ ಸೇರಿರುತ್ತಿತ್ತು ಮತ್ತು ಉತ್ಪನ್ನ ಮತ್ತು ಹಂಚಿಕೆ ಸಮುದಾಯದ ವ್ಯವಹಾರವಾಗಿ ಬಳಕೆಯಾಗುತ್ತಿತ್ತು. ಬಹುದೊಡ್ಡ ದೇಶವಾದ ಭಾರತ ಅಪಾರ ನೈಸರ್ಗಿಕ ಸಂಪತ್ತನ್ನು ಹೊಂದಿತ್ತು, ಜನಸಂಖ್ಯೆಯ ಒತ್ತಡವೂ ಕಡಿಮೆಯಿತ್ತು, ಇದರಿಂದಾಗಿ ಹಳ್ಳಿಯ ಸಮುದಾಯಗಳು ಕೃಷಿ ಉತ್ಪಾದನೆಯಲ್ಲಿ ಸ್ವಯಂಪೂರ್ಣತೆಯನ್ನು ಸಾಧಿಸಿದ್ದವು. ಕೋಮುವಾರು ಮೆರವಣಿಗೆ ತೆಗೆಯುವ ಆಚರಣೆ ಮುಸ್ಲಿಮರ ಕಾಲದಲ್ಲಿ ಮುಂದುವರೆದಿತ್ತು. ನಾಮ ಮಾತ್ರದ ಒಡೆಯರಾದ ಸಾಮ್ರಾಟರು ಕರವನ್ನು ವ್ಯಕ್ತಿಗಳ ಮೇಲೆ ಹಾಕದೆ ನೇರವಾಗಿ ಇಡೀ ಹಳ್ಳಿಯ ಸಮುದಾಯಗಳ ಮೇಲೆ ಹಾಕುತ್ತಿದ್ದರು. ಮೊಘಲರ ಆಳ್ವಿಕೆ ಕಾಲದಲ್ಲಿ ನೀರಾವರಿ, ಹಳ್ಳಿಯ ಸಮುದಾಯಗಳಿಂದ ಗೇಣಿ ಸಂಗ್ರಹ, ರಾಜ ಸೈನ್ಯದ ನಿರ್ವಹಣೆ ಮತ್ತು ಸಿಬ್ಬಂದಿ ವ್ಯವಸ್ಥೆಯ ಮೇಲ್ವಿಚಾರಣೆ ನೋಡಿಕೊಳ್ಳುವ ಸುಬೇದಾರರು, ಮನಸಬ್ದಾರರು, ಜಾಗೀರ್ ದಾರರು ಮುಂತಾದವರಿದ್ದ ಶ್ರೇಣೀಕೃತ ಆಡಳಿತ ವ್ಯವಸ್ಥೆ ಬೆಳೆದಿತ್ತು. ಅಂದಿನ ವ್ಯವಸ್ಥೆ ಪಾಶ್ಚಿಮಾತ್ಯರ ಅತ್ಯುತ್ತಮ ಊಳಿಗಮಾನ್ಯ ವ್ಯವಸ್ಥೆಯ ಹಾಗಿರಲಿಲ್ಲ. ರಾಜ ಮತ್ತು ಉಳುಮೆದಾರರ ನಡುವೆ ಮಧ್ಯವರ್ತಿಗಳಾಗಲೀ ಖಾಸಗೀ ಆಸ್ತಿಯಾಗಲೀ ಇರಲಿಲ್ಲ. ಭೂ ಸಂಬಂಧದಲ್ಲಿ ಬ್ರಿಟಿಶ್ ಆಡಳಿತಗಾರರು ಗುಣಾತ್ಮಕ ಬದಲಾವಣೆಯನ್ನು ತಂದರಾದರೂ ನಂತರದಲ್ಲಿ ನಮ್ಮ ಕರಕುಶಲ ಮತ್ತು ಬುಡಭದ್ರವಿಲ್ಲದ ಕೈಗಾರಿಕೆಗಳ ಬೆಳವಣಿಗೆಯನ್ನು ನಾಶ ಪಡಿಸಿ. ಆ ಮೂಲಕ ತಮ್ಮ ಉತ್ಪನ್ನಗಳಿಗೆ ಪರಿಣಾಮಕಾರಿ ಸ್ಪರ್ಧೆ ಇರದಂತೆ ಮಾಡಿದರು. ಬ್ರಿಟಿಶರು ಹಳ್ಳಿಯ ಸಮುದಾಯಗಳಿಂದ ಆರಂಭದಲ್ಲಿ ಅತ್ಯಧಿಕ ಎಂದರೆ ವಾರ್ಷಿಕ, ನಂತರದಲ್ಲಿ ದ್ವೈ ವಾರ್ಷಿಕ ಹಾಗೂ ತ್ರೈ ವಾರ್ಷಿಕ ಗೇಣಿ ಸಂಗ್ರಹಿಸುವ ಮೂಲಕ ಭಾರತದ ಕೃಷಿಕ್ಷೇತ್ರವನ್ನು ಹಿಂಡಿ ಹಿಪ್ಪೆ ಮಾಡಲು ತೊಡಗಿದರು. ಇದರ ಪರಿಣಾಮವಾಗಿ ಹಳ್ಳಿಗಾಡಿನಲ್ಲಿ ಬರ ಉಂಟಾಯಿತು. ಗೇಣಿ ಸಂಗ್ರಹ ವ್ಯವಸ್ಥೆ ಗಟ್ಟಿಗೊಳಿಸುವ ಭಾಗವಾಗಿ ರೈತರನ್ನು ಹಿಂಡಿಹಿಪ್ಪೆ ಮಾಡುವ ಪ್ರಕ್ರಿಯೆ ಮುಂದುವರೆಯಿತು. ರೈತರ ಜೀವನೋಪಾಯಕ್ಕೂ ಗತಿಯಿಲ್ಲದಂತೆ ದೋಚುವುದನ್ನು ತಡೆಗಟ್ಟಲು 1793ರಲ್ಲಿ ಖಾಯಂ ಭೂಗಂದಾಯ ಕಾಯಿದೆಯನ್ನು (ಪರಮನೆಂಟ್ ಸೆಟ್ಲಮೆಂಟ್ ಆಕ್ಟ್,) ಜಾರಿಗೆ ತರಲಾಯಿತು. ಭಾರತದ ಸಂದರ್ಭದಲ್ಲಿ ಬ್ರಿಟಿಶರು ತಮ್ಮ ಊಳಿಗಮಾನ್ಯ ಪದ್ಧತಿಯನ್ನು ಹೇರಿದರು. ಈ ಕಾಯಿದೆ ವಿಶಾಲವಾದ ಎರಡು ಬಗೆಯ ಕರ ವಸೂಲಿ ವ್ಯವಸ್ಥೆಯನ್ನು ಜಾರಿಗೊಳಿಸಿತು. ಮೊದಲನೆಯದು, ಜಮೀನ್ದಾರಿ, ಜೆಮಿ, ಇನಾಂದಾರಿ, ಮಹಲ್ವಾರಿ ಮುಂತಾದ ಬಹುಬಗೆಯ ಹೆಸರಿನಿಂದ ಕರೆಯುತ್ತಿದ್ದ, ವಿವಿಧ ಹಂತದಲ್ಲಿ ಮಧ್ಯವರ್ತಿಗಳು ಉಳುಮೆದಾರರಿಂದ ಕರವನ್ನು ಸಂಗ್ರಹಿಸಿ ಸರಕಾರಕ್ಕೆ ಜಮೆ ಮಾಡುವುದಾಗಿತ್ತು. ಈ ಮಧ್ಯವರ್ತಿಗಳಿಗೆ ಆಸ್ತಿಯ ಒಡೆತನದ ಹಕ್ಕು, ಆಸ್ತಿ ಮಾರಾಟ ಮತ್ತು ಖರೀದಿ ಮಾಡುವ ಹಕ್ಕುಗಳನ್ನು ನೀಡಲಾಗಿತ್ತು. ಈ ವ್ಯವಸ್ಥೆ ಹೇಗಿತ್ತೆಂದರೆ ಕೆಲವು ಪ್ರದೇಶಗಳಲ್ಲಿ ಮಧ್ಯವರ್ತಿಗಳು 34 ಹಂತಗಳ ವರೆಗೂ ಏರ್ಪಾಟಾಗುತ್ತಿದ್ದರು. ಎರಡನೆಯದು ರೈತವಾರಿ ವ್ಯವಸ್ಥೆಯಾಗಿತ್ತು. ಈ ಮೂಲಕ ಆಸ್ತಿ ಒಡೆತನ ಹೊಂದಿದ್ದ ಪ್ರತಿಯೊಬ್ಬ ಉಳುಮೆದಾರರಿಂದ ಬ್ರಿಟಿಶ್ ಆಡಳಿತ ನೇರ ಕರ ವಸೂಲಿ ಮಾಡುತ್ತಿತ್ತು. ಹೀಗಿದ್ದರೂ ಮಧ್ಯವರ್ತಿಗಳು ಕಾಲಕ್ರಮದಲ್ಲಿ ಇಲ್ಲೂ ತಲೆಯೆತ್ತಿದರು. ರೈತವಾರಿ ಪ್ರದೇಶಗಳನ್ನು ಭೌಗೋಳಿಕವಾಗಿ ಪಂಜಾಬ್, ಅವಧ್, ಗುಜರಾತಿನ ಕೆಲವು ಭಾಗಗಳು, ಮಹಾರಾಷ್ಟ್ರ, ಮತ್ತು ಮದ್ರಾಸ್ ಪ್ರಾಂತ್ಯಕ್ಕೆ ಸೀಮಿತಗೊಳಿಸಲಾಗಿದೆ. ಈ ಪ್ರದೇಶಗಳು ನೀರಾವರಿಯ ಅನುಕೂಲತೆ ಮತ್ತು ಫಲವತ್ತಾದ ಭೂಮಿಯನ್ನು ಹೊಂದಿದ್ದುದರಿಂದ ಅವು ವಾಣಿಜ್ಯ ಬೆಳೆಯ ಸಾಧ್ಯತೆಗೆ ತೆರೆದುಕೊಂಡಿದ್ದವು. ಈ ಎಲ್ಲ ಅಂಶಗಳನ್ನು ಹೊರತು ಪಡಿಸಿಯೂ ಈ ಪ್ರದೇಶಗಳು ಬ್ರಿಟಿಶ್ ಸೈನ್ಯಪಡೆಗೆ ಜನರನ್ನು ಒದಗಿಸುತ್ತಿದ್ದವು. ಈ ಸೈನಿಕರು ನಿಯಮದ ಪ್ರಕಾರ ಸರಕಾರದ ನೇರ ರೈತವಾರಿ ವ್ಯವಸ್ಥೆಗೆ ಒಳಪಡುವ ಅವಕಾಶ ಪಡೆದಿದ್ದರು. ಉಳಿದ ಪ್ರದೇಶಗಳು, ವಿಶೇಷವಾಗಿ ಬ್ರಿಟಿಶ್ ಅಧಿಪತ್ಯದ ಬಂಗಾಳ ಪ್ರಾಂತ್ಯ ಜಮೀನ್ದಾರಿ ವ್ಯವಸ್ಥೆಯ ಕಟ್ಟಳೆಗೆ ಒಳಪಟ್ಟಿತ್ತು. ಬ್ರಿಟಿಶ್ ಭಾರತ ಹೊರತು ಪಡಿಸಿದ ಆಡಳಿತ ವ್ಯಾಪ್ತಿಯ ಪ್ರದೇಶದಲ್ಲಿ ಇದೇ ಬಗೆಯ ವ್ಯವಸ್ಥೆ ಜಾರಿಗೊಳಿಸಲು 600 ದೇಶೀಯ ರಾಜರನ್ನು ಕೇಳಿಕೊಳ್ಳಲಾಯಿತು. ಈ ರೀತಿಯಲ್ಲಿ ಬ್ರಿಟಿಶರು ಊಳಿಗಮಾನ್ಯ ಆರ್ಥಿಕ ತಳಹದಿಯನ್ನಷ್ಟೇ ಕಟ್ಟದೆ ವೈಭೋಗದ ಸಂಸ್ಕೃತಿ ಮತ್ತು ಜಮೀನ್ದಾರಿ ಆಳ್ವಿಕೆಗೆ ವಿಧೇಯರಾಗಿರುವ ಜೀವನವನ್ನು ಮರುಸ್ಥಾಪಿಸಿದರು. ಆದರೂ ಅಂದಿನ ಬಹುಸಂಖ್ಯಾತ ಮಧ್ಯವರ್ತಿಗಳು ಶ್ರೀಮಂತ ಜೀವನ ನಡೆಸುತ್ತ ಕಂದಾಯ ವಸೂಲಿ ಮಾಡುವುದನ್ನೆ ತೊರೆದುಬಿಟ್ಟಿದ್ದರು. ಏಕೆಂದರೆ ಬೇಸಾಯ ಮಾಡುವದನ್ನು ಬಿಟ್ಟುಕೊಡಲು ಹಲವಾರು ರೈತರಿಗೆ ಬಲವಂತ ಮಾಡಲಾಯಿತು. ಭೂ ಒಡೆತನ ಹೊಂದಿರುವುದೆ ಪ್ರಮಾದವಾಗಿ ಅವರನ್ನು ತಪ್ಪಿತಸ್ಥರನ್ನಾಗಿ ಮಾಡಲಾಯಿತು. ಉತ್ಪಾದನೆಯ ಮೇಲೆ ಇದರ ಪರಿಣಾಮ ಉಂಟಾಗಿ ಬರ ಅವರೊಡನೆ ಕಾದಾಡತೊಡಗಿತು.
ಈ ನಡುವೆ ಅಮೆರಿಕೆಯ ಅಂತರ್ಯುದ್ಧ 1860ರಲ್ಲಿ ಲಂಕಾಷೈರ್ ನ ಕಾರ್ಖಾನೆಗಳಿಗೆ ಹತ್ತಿಯ ಸಮಸ್ಯೆಯನ್ನುಂಟುಮಾಡಿತು. ಇದರಿಂದ ಪಶ್ಚಿಮ ಭಾರತದಲ್ಲಿ ಹತ್ತಿಯನ್ನು ಬಹುದೊಡ್ಡ ಪ್ರಮಾಣದಲ್ಲಿ ಬೆಳೆಯುವಂತೆ ಬ್ರಿಟಿಶ್ ಸರಕಾರ ಬಲವಂತ ಮಾಡಿತು. ವಾಣಿಜ್ಯ ಬೆಳೆಗಾಗಿ ಒತ್ತಾಯ ಹೇರುವ ಪ್ರವೃತ್ತಿ ಇಲ್ಲಿಂದ ಆರಂಭವಾಯಿತು. ಹತ್ತಿಯಂತೆಯೆ ಸೆಣಬು ಮತ್ತು ನೀಲಿ ಸಸ್ಯದ ನಾರು ಕಾಣುತ್ತಿತ್ತು. ಈ ರೀತಿ ಕೃಷಿಕ್ಷೇತ್ರದ ವಾಣಿಜ್ಯೀಕರಣ ಆರಂಭಗೊಂಡಿತು, ವಸಾಹತುಶಾಹಿಯಡಿ ಭಾರತ ಅರೆ-ಊಳಿಗಮಾನ್ಯ ದೇಶವಾಯಿತು. ಇದು ವಾಣೀಜ್ಯೀಕರಣವನ್ನು ಬಲವಂತವಾಗಿ ಹೇರಿತು. ಅಂದರೆ ಉತ್ಪಾದನೆಯನ್ನು ಮನೆ ಬಳಕೆಗಾಗಿ ಮಾಡುವ ಬದಲು ಮಾರುಕಟ್ಟೆಗಾಗಿ ಮಾಡಲು ಬೇಡಿಕೆ ಹೆಚ್ಚಾಗಿ ರೈತರು ತಮ್ಮ ಜೀವನೋಪಾಯಕ್ಕೆ ಸಾಕಷ್ಟು ದವಸ ಧಾನ್ಯಗಳನ್ನೂ ಬೆಳೆಯದ ಹಂತ ತಲುಪಿತು. ಧ್ವಂಸಕಾರೀ ಬರ ಮೇಲಿಂದ ಮೇಲೆ ಘಟಿಸಿ ಮರುಕೊಳಿಸತೊಡಗಿತು.
ಬ್ರಿಟಿಶ್ ಕಾಲದಲ್ಲಿ ರೈತ ದಂಗೆಗಳು
ರೈತ ಶೋಷಣೆ ಹತ್ತೊಂಬತ್ತನೆಯ ಶತಮಾನದುದ್ದಕ್ಕೂ ನಡೆದ ಪರಿಣಾಮವಾಗಿ ಬಹುಸಂಖ್ಯೆಯಲ್ಲಿ ರೈತದಂಗೆಗಳು ಘಟಿಸಿವೆ. ಅವುಗಳಲ್ಲಿ ಪ್ರಮುಖವಾದ ಫಕೀರ್ ದಂಗೆ (1763), ಚೌರ್ ದಂಗೆ (1766 ಮತ್ತು 1798), ನೀಲಿ ದಂಗೆ (1788 ಮತ್ತು 1830), ವಹಾಬಿ ಚಳವಳಿ (1831) ಮತ್ತು ಸಂತಾಲ ಹುಲ್ ಬಂಡಾಯ (1855)ಗಳು ಉತ್ತರ ಭಾರತದಲ್ಲಿ ನಡೆದರೆ, ಅಲ್ಲೂರಿ ಸೀತಾರಾಮ ರಾಜು ನೇತೃತ್ವದ ಬೃಹತ್ ರೈತ ದಂಗೆ ದಕ್ಷಿಣದ ಆಂಧ್ರದಲ್ಲಿ ನಡೆಯಿತು. 1792ರಿಂದ 1900ರ ವರೆಗೆ ಮಲಬಾರಿನಲ್ಲಿ 30 ರೈತ ದಂಗೆಗಳು ನಡೆದಿದ್ದು, ಅವುಗಳಲ್ಲಿ 1841, 1844, 1849, ಮತ್ತು 1896ರ ದಂಗೆಗಳು ನಿರ್ದಿಷ್ಟವಾಗಿ ಉಗ್ರ ಸ್ವರೂಪ ತಾಳಿದ್ದವು. ಈ ಎಲ್ಲ ದಂಗೆಗಳು ಜಮೀನ್ದಾರರು, ಬ್ರಿಟಿಶ್ ಜಿಲ್ಲಾ ಮುಖ್ಯಾಧಿಕಾರಿಗಳು ಮತ್ತು ಸೈನ್ಯಪಡೆಗಳನ್ನು ತಮ್ಮ ಗುರಿಯಾಗಿರಿಸಿಕೊಂಡಿದ್ದವು. ಅವರೊಂದಿಗೆ ಬಳಕೆದಾರರ ವಿರುದ್ಧವೂ ದಾಳಿ ನಡೆದಿದೆ. ಅಷ್ಟೊತ್ತಿಗಾಗಲೆ ರೈತರು ದೊಡ್ಡ ಪ್ರಮಾಣದ ಗಿರವಿಗಳಿಂದಲೂ ಶೋಷಣೆಗೆ ಒಳಗಾಗಿದ್ದರೆಂದು ಇದರಿಂದ ಸಾಬೀತಾಗುತ್ತದೆ. ಈ ಎಲ್ಲ ದಂಗೆಗಳ ಬಹು ಮಹತ್ವದ ಅಂಶವೆಂದರೆ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರೈತರೂ ಇತರ ಕ್ಷೇತ್ರದ ಜನರೂ ಹೆಚ್ಚು ಸಂಖ್ಯೆಯಲ್ಲಿ ಪಾಲುಗೊಂಡಿದ್ದರು. 19ನೆಯ ಶತಮಾನದ ಕೊನೆಯ ಹೊತ್ತಿಗೆ ಸ್ವಾತಂತ್ರ್ಯ ಸಂಗ್ರಾಮದ ನಾಯಕತ್ವ ಇಂಗ್ಲಿಶ್ ಕಲಿತ ಬುದ್ಧಿಜೀವಿಗಳ ಕೈ ಸೇರಿದರೂ ರೈತ ದಂಗೆಗಳು 20ನೆಯ ಶತಮಾನದ ವರೆಗೂ ಮುಂದುವರೆದಿತ್ತು. ಮಾಪಿಯಾ ದಂಗೆ, ಬಖಾಸ್ತ್ ಚಳವಳಿ, 1907ರಲ್ಲಿ ರಾಜಾಸ್ಥಾನದಲ್ಲಿ ನಡೆದ ಭಿಲ್ ಬುಡಕಟ್ಟು ಚಳವಳಿ ಮತ್ತು ಬಂಗಾಳಿ ರೈತರ ಭೂ ಗೇಣಿ ಹಕ್ಕು ಹೋರಾಟ ಮೊದಲಾಗಿ ಇಂಥ ಇನ್ನೂ ಅನೇಕ ದಂಗೆಗಳನ್ನು ನಿದರ್ಶನಗಳಾಗಿ ಹೆಸರಿಸಬಹುದು. ಸುಧಾರಣಾವಾದಿ ಕಾಂಗ್ರೆಸ್ ನಾಯಕರಿಗೂ ರೈತ ಸಮಸ್ಯೆಯನ್ನು ಕೈಗೆತ್ತಿಕೊಳ್ಳಬೇಕೆಂಬ ಒತ್ತಡವಿತ್ತು. ಹಾಗಾಗಿ ಬಾರ್ಡೋಲಿ ಸತ್ಯಾಗ್ರಹ ಮತ್ತು ಚಂಪಾರಣ್ಯ ಸತ್ಯಾಗ್ರಹಗಳಲ್ಲಿ ರೈತರು ಅತ್ಯಧಿಕ ಪ್ರಮಾಣದಲ್ಲಿ ಚಳವಳಿ ನಿರತರಾದರು. ಒಂದು ನೂರು ವರ್ಷಗಳ ಕಾಲ ನಡೆದ ರೈತ ದಂಗೆಗಳ ತೀವ್ರತೆಯ ಪರಿಣಾಮವಾಗಿ ಬ್ರಿಟಿಶ್ ಸಾಮ್ರಾಜ್ಯವಾದಿಗಳು ಅಂತಿಮವಾಗಿ ಸಂದರ್ಭಕ್ಕೆ ಅನುಗುಣವಾಗಿ ಹೊಂದಿಕೊಳ್ಳತೊಡಗಿದರು. ಆ ಹೊತ್ತಿಗಾಗಲೆ ಇದ್ದ ಗೇಣಿ ಕಾಯ್ದೆಗೆ ಸೀಮಿತ ಸುಧಾರಣೆ ತರುವ ಹಾದಿಯಲ್ಲಿ ಹೆಜ್ಜೆಯಿಟ್ಟು ನೇಮಿಸಿದ ಹಲವಾರು ರಾಯಲ್ ಕಮಿಷನ್ ಗಳು ಮತ್ತು ಫ್ಲೌಟ್ ಕಮಿಷನ್ ಗಳು ಭೂ ಸುಧಾರಣೆ ಮತ್ತಿತರ ವಿಷಯಗಳ ಕುರಿತು ನಲವತ್ತರ ದಶಕದಲ್ಲಿ ವರದಿ ನೀಡಿದವು. ಆ ಪ್ರಕಾರವಾಗಿ ಬ್ರಿಟಿಶ್ ಸರಕಾರವೆ 1947ಕ್ಕೂ ಮೊದಲು ಭೂ ಗೇಣಿ ಸುಧಾರಣೆಯನ್ನು ಜಾರಿಗೆ ತರುವ ಕಾರ್ಯ ಕೈಗೆತ್ತಿಕೊಂಡಿತು.
ರೈತರ ಸಮಸ್ಯೆಯನ್ನು ಬೇರೆಡೆಗೆ ಸೆಳೆಯಲು ಮತ್ತು ಗೊಂದಲ ಹುಟ್ಟುಹಾಕಲು ಆಡಳಿತ ನಡೆಸುವ ಪಕ್ಷ 'ಭೂ ಸುಧಾರಣೆ'ಯನ್ನು ಕೈಗೆತ್ತಿಕೊಳ್ಳುತ್ತದೆ. ಇಂಥ ಸುಧಾರಣೆಗಳ ಮೂಲ ಉದ್ದೇಶ ದೇಶವನ್ನು ಕ್ರಾಂತಿಕಾರಕ ಬದಲಾವಣೆಯಿಂದ ಉಳಿಸುವುದೆಂದು ತೋರಿಸುತ್ತದೆ. ಈ ಸಂಬಂಧದಲ್ಲಿ ಭಾರತದ ಆಡಳಿತ ಪಕ್ಷ ಕೂಡ ಕ್ರಮವಾಗಿ ತಮ್ಮ ಹಿರಿಯರನ್ನು ಅನುಸರಿಸಿ 'ಭೂ ಸುಧಾರಣಾ ಕಾರ್ಯಕ್ರಮ' ರೂಪಿಸಿದೆ. ಎರಡನೆಯ ಜಾಗತಿಕ ಮಹಾಯುದ್ಧದ ನಂತರ ಬೆಳೆಯುತ್ತಿದ್ದ ಕ್ರಾಂತಿಕಾರಿ ಚಳವಳಿಯ ಪ್ರಭಾವ ಮತ್ತು ಏಷಿಯಾ ಮತ್ತು ಲ್ಯಾಟಿನ್ ಅಮೆರಿಕಾ ದೇಶಗಳ ಕೃಷಿ ಕ್ರಾಂತಿ ಪ್ರಕ್ರಿಯೆಯ ವಿರುದ್ಧ ಹೋರಾಡಲು ಅಲ್ಲಿನ ಸರಕಾರಗಳು ಅಮೆರಿಕೆಯ ಸಾಮ್ರಾಜ್ಯಶಾಹಿ ಪರವಾಗಿ ಭೂ ಸುಧಾರಣೆಯನ್ನು ಜಾರಿಗೆ ತಂದವು. ಭಾರತದಲ್ಲೂ ಕೃಷಿ ಕ್ರಾಂತಿ ಬೆಳೆಯುವುದರ ವಿರುದ್ಧ ಹೋರಾಡಲು ನೆಹರೂ ಸರಕಾರ ನಮ್ಮ ದೇಶದ ಸಾಮ್ರಾಜ್ಯಾಶಾಹಿ ಭೂ ಸುಧಾರಣಾ ಕಾರ್ಯಕ್ರಮಗಳ ರೂವಾರಿಯಾದ ವೂಲ್ಫ್ ಲೆಡೆಜಿನ್ಸ್ಕಿ ಅವರನ್ನು ಆಹ್ವಾನಿಸಿತು. ಏಷ್ಯಾದ ಕೃಷಿಕ್ಷೇತ್ರದಲ್ಲಿ ಭೂ ಸುಧಾರಣೆ ಭೌದ್ಧಿಕ ಸಮಸ್ಯೆಯಾಗುಳಿದಿಲ್ಲ. ಜಪಾನ್ ಮತ್ತು ತೈವಾನಿನ ಅನುಭವಗಳು ಒಂದೆಡೆಯಿದ್ದರೆ ಕಮ್ಯೂನಿಸ್ಟ್ ಚೈನಾದ ಅನುಭವಗಳು ಇನ್ನೊಂದೆಡೆ ಇದ್ದು, ಏಷ್ಯಾದ ಇತರ ದೇಶಗಳು ಮತ್ತು ಏಷ್ಯಾ ಹೊರತಾದ ದೇಶಗಳು, ಕಮ್ಯೂನಿಸ್ಟೇತರ ದೇಶಗಳ ಅತ್ಯಾಸಕ್ತಿಯನ್ನು ಗುರುತಿಸಲು ಇದು ಸಹಾಯಕವಾಗಿದೆ. ಮೊದಲಿನೆರಡು ದೇಶಗಳು ಉಳುಮೆದಾರ ತಾನುಳುವ ಭೂಮಿಯನ್ನು ಯಾವುದೆ ದಂಗೆ, ರಕ್ತಪಾತವಿಲ್ಲದೆ ಪಡೆಯುತ್ತಾನೆ ಎಂದು ತೋರಿಸಿವೆ. ಇದಕ್ಕೂ ಮೇಲಾಗಿ ರೈತನೊಬ್ಬ ಮುಕ್ತ ಮತ್ತು ಸ್ವತಂತ್ರ ಉತ್ಪಾದಕ ಎನ್ನುವುದನ್ನು ಅವು ತೆರೆದು ತೋರಿಸಿವೆ. ಕಮ್ಯೂನಿಸ್ಟ್ ರಷ್ಯ ಮತ್ತು ಚೀನಾ ದೇಶಗಳು ಬಂದೂಕಿನ ತುದಿಯಲ್ಲಿ ತಮ್ಮ ರೈತರ ಮೇಲೆ ಹೇರಿರುವ ಗುಲಾಮಗಿರಿಯಿಂದ ಅವನು ಪಾರಾಗಿದ್ದಾನೆ'' ಎಂದು ವೂಲ್ಫ್ ಲೆಡೆಜಿನ್ಸ್ಕಿಯವರೆ ಹೇಳಿದ್ದಾರೆ.
ಹೀಗಿದ್ದರೂ ಭೂ ಹೀನರು ಭೂ ಒಡೆಯರಾಗುವ ಹಂಬಲ ಈಡೇರಿಸುವ ಸಾಧನೆ ಅಧಿಕಾರದಲ್ಲಿರುವ ಸರಕಾರದ ಇಚ್ಚೆ ಮತ್ತು ನಿರ್ಣಯ ಶಕ್ತಿಯನ್ನು ಅವಲಂಬಿಸಿದ್ದು, ಜಮೀನಾದಾರರನ್ನು ಬಲವಂತ ಪಡಿಸಿ ಒಪ್ಪಿಸುವ ಸಾಮರ್ಥ್ಯವನ್ನನುಸರಿಸಿ ಸಾಧ್ಯವಾಗುವ ಸುಧಾರಣೆ ಬಡತನ ಮತ್ತು ಸಾಮಾಜಿಕ ಅವನತಿಯ ಮುಖ್ಯ ಗುಣಲಕ್ಷಣವಾಗಿರುವ ಭೂ ಹಿಡುವಳಿ ವ್ಯವಸ್ಥೆಯ ರಾಜಕೀಯ ಪರಿಣಾಮ ಕುರಿತು ಹೇಳುವ ಮಾತು ಅರ್ಥವಾಗುವಂಥದ್ದು.''
ಕೊನೆಯ ಅಂಶ ಅತ್ಯವಶ್ಯವಾಗಿದ್ದು, ನಾನು ಬಂದ ಜಗತ್ತಿನ ಭಾಗದಲ್ಲಿನ ಸಣ್ಣ ಅಥವಾ ದೊಡ್ಡ ಜಮೀನ್ದಾರರು ಸಮಾಜ ಸುಧಾರಕರಲ್ಲ. 'ಸುಧಾರಣೆ' 'ಬದಲಾವಣೆ' 'ರಿಯಾಯ್ತಿ' ಎಂಬ ಪದವೆ ಅವರಿಗೆ ಮೈ ಮೇಲೆ ದೆವ್ವ ಬಂದಂತೆ ಆಗುತ್ತದೆ. ತಮ್ಮ ಸ್ಥಾನಮಾನಕ್ಕಾಗಿ ಒತ್ತಾಯ ಮಾಡುವ ಕುರುಡತನದಲ್ಲಿ ಅವರು ಬುದ್ಧಿಪೂರ್ವಕವಲ್ಲದ, ಮನಸ್ಸಿಲ್ಲದ ಕಮ್ಯೂನಿಸಮ್ ನ ಸದಸ್ಯ ಮಿತ್ರರಾಗಿ ರಷ್ಯಾ ಮತ್ತು ಚೀನಾದಲ್ಲಿ ಕ್ರಾಂತಿಕಾರಕ ಸ್ಥಿತಿಯನ್ನು ಹುಟ್ಟುಹಾಕಿದ್ದಾರೆ.''
ಕೊನೆಯಲ್ಲಿ, ಅವರು ತಮ್ಮ ಮತ್ತು ತಮ್ಮ ಸರಕಾರದ ಸಮಾಧಿಯನ್ನು ತಾವೇ ತೋಡಿಕೊಳ್ಳುತ್ತಾರೆ. ಈ ಕಾರಣಗಳಿಗಾಗಿ ಮತ್ತು ಇತ್ತೀಚಿನ ಹಲವು ವರ್ಷಗಳಲ್ಲಿ ಜಗತ್ತಿನಲ್ಲಿ ಬಲವಾದ ಕ್ರಾಂತಿಯ ಗಾಳಿ ಬೀಸುತ್ತಿರುವ ಸಂದರ್ಭದಲ್ಲಿ, ರಿಯಾಯ್ತಿ ನೀಡಲು ಸರಕಾರ ವಿಧಿಸಿರುವ ಜಮೀನ್ದಾರರು ಮುಕ್ತ ಜನತೆಯ ಸಕಾರಾತ್ಮಕ ಗುರಿಗೆ ಅವಶ್ಯಕವಾದ ಸ್ಥಿರೀಕರಣವಾಗಿದ್ದಾರೆ. ಈ ಸ್ಥಿರೀಕರಣ ವಿಫಲವಾದರೆ ಕಮ್ಯೂನಿಸ್ಟ್ ರಷ್ಯಾ ಮತ್ತು ಕಮ್ಯೂನಿಸ್ಟ್ ಚೈನಾದ ಕೃಷಿ ಕ್ರಾಂತಿ ಪರ್ಯಾಯಗಳಾಗಿವೆ.''
ತಮಗೆ ಸಮಾಧಾನವಾಗಿ ಮಂಜೂರು ಮಾಡಲು ವಿಫಲವಾದ ವರ್ಗಗಳು ಮತ್ತು ಸರಕಾರಗಳ ಸಂಪೂರ್ಣ ನಾಶಕ್ಕಾಗಿ, ತಾವು ಹೊಂದಿರದ ಆಸ್ತಿಯ ದಾಖಲೆ ಮೊದಲಲ್ಲೊ ನಂತರದಲ್ಲೊ ಅವರಿಂದಲೇ ಕಾನೂನು ಕ್ರಮ ಪಡೆದು ಜೀವತಳೆಯುತ್ತ್ತದೆ, ಇಲ್ಲದಿದ್ದರೆ ಅವರು ಹಿಂಸೆಯ ಮೂಲಕ ಆವರಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಕೃಷಿ ಪ್ರಧಾನ ದೇಶಗಳಲ್ಲಿ ಸರಕಾರ ರೈತ ಪರವಾಗಿರಬೇಕು, ಹಾಗಿರಲು ವಿಫಲವಾದಲ್ಲಿ ಅದು ಬಲವಿಲ್ಲದ ಸರಕಾರವಾಗುತ್ತದೆ ಎಂಬುದನ್ನು ಕಮ್ಯೂನಿಸ್ಟ್ ರಷ್ಯಾ ಮತ್ತು ಚೀನಾಗಳ ಉದಯ ತೋರಿಸಿಕೊಟ್ಟಿದೆ. ಹಳ್ಳಿಗಾಡಿನ ಸಾಮಾಜಿಕ ರಚನಾ ತಳಹದಿಯ ನಿಲ್ಲುವಿಕೆ ಅಥವಾ ಬೀಳುವಿಕೆ ರೈತ 'ಕೇಂದ್ರ ಸ್ಥಾನ' ಮತ್ತವನ ಆಸಕ್ತಿ, ಆಕಾಂಕ್ಷೆಗಳನ್ನು ಆಧರಿಸಿದೆ ಎಂಬುದನ್ನು ಎತ್ತಿ ತೋರಿಸಬೇಕು. ಕೇಂದ್ರ ಸ್ಥಾನವನ್ನು ರೈತ ಏಕೆ ಮತ್ತು ಹೇಗೆ ಅಲಂಕರಿಸಿದ್ದಾನೆ, ಈ ಕಾಯ್ದೆಯಿಂದ ಹೇಗೆ ರೈತನಿಗೆ ಮತ್ತು ದೇಶಕ್ಕೆ ಅನುಕೂಲ ಎಂಬುದಕ್ಕೆ ಜಪಾನ್ ಮತ್ತು ತೈವಾನ್ ಉತ್ತಮ ಉದಾಹರಣೆಗಳಾಗಿವೆ. ರೈತನ ಆರ್ಥಿಕ ಮತ್ತು ಸಾಮಾಜಿಕ ಆಶಯಗಳು ಇಂದಿನದಲ್ಲದ ಸ್ಥಾನಮಾನಗಳಿಗಾಗಿ ಬಲಿಯಾದಾಗ ಕಮ್ಯೂನಿಸ್ಟ್ ಚೈನಾ ಒಂದು ಪಾಠವಾಗಿ, ಎಚ್ಚರಿಕೆಯಾಗಿ ಒದಗಿಬರುತ್ತದೆ.''
ಸಾಮ್ರಾಜ್ಯಶಾಹಿ ದೃಷ್ಟಿಕೋನದ ಈ 'ಭೂ ಸುಧಾರಣಾ ಹಾದಿ'ಯ ರೂಪಿಕೆಯನ್ನು ಕೃಷಿ ಕ್ರಾಂತಿಯ ಚಳವಳಿಗಳು ಬೆಳೆಯುತ್ತಿರುವ ಅಥವಾ ರೈತರು ಅಸಮಾಧಾನದಿಂದ ಕುದಿಯುತ್ತಿರುವ ದೇಶಗಳಲ್ಲಿ ಅಳವಡಿಸಲಾಗಿದೆ. ಈ ನಿರ್ದಿಷ್ಟ ಹಾದಿ ಸಮಾಜೋ-ಆರ್ಥಿಕ ರಾಜಕೀಯ ರಚನೆಯನ್ನು ಕಾಪಾಡಿ ಆಡಳಿತ ನಡೆಸುತ್ತಿರುವ ಸರಕಾರದಿಂದ ಮೇಲುಮಟ್ಟದ ಸುಧಾರಣೆ ತರುತ್ತದೆ, ಅಲ್ಲದೆ ಭೂ ಒಡೆತನ ಪಡೆಯುವ ಹಂಬಲವಿರುವ ಭೂಹೀನರು ಕೃಷಿಕ್ರಾಂತಿಗೆ ಪರ್ಯಾಯವಾಗಿ ಮುಂದೆ ಹೋಗದಂತೆ ನೋಡಿಕೊಳ್ಳುತ್ತದೆ.
ಭಾರತದ ಆಡಳಿತಗಾರರು ಸಾಮ್ರಾಜ್ಯಶಾಹಿ ಅಮೆರಿಕೆಯ ನೇರ ಮೇಲ್ವಿಚಾರಣೆಯಲ್ಲಿ, ಮೇಲುಮಟ್ಟದ ರೂಪದಲ್ಲಿ ಈ ಮೇಲಿನ ನಿರ್ದಿಷ್ಟ ಹಾದಿಯ ಕೃಷಿ ಭೂ ಸುಧಾರಣೆಯನ್ನು ಕೈಗೆತ್ತಿಕೊಂಡು ಅನುಸರಿಸಿದ್ದಾರೆ.
1945ರ ಕೊನೆಯಿಂದ ಅಂದರೆ ಡಗ್ಲಾಸ್ ಮ್ಯಾಕ್ ಆರ್ಥರ್ ನನ್ನು ಅಸಿಸ್ಟೆಂಟ್ ಜನರಲ್ ಆಗಿ ಜಪಾನಿನ ಯುದ್ಧೋತ್ತರ ಭೂ ಸುಧಾರಣೆ ಯೋಜನೆಯಡಿ ನೇಮಿಸಿದಾಗಿನಿಂದ ವೂಲ್ಫ್ ಲೆಡೆಜಿನ್ಸ್ಕಿ ತನ್ನ ಜೀವನದ ಮೂವತ್ತು ವರುಷಗಳನ್ನು ಬಹುಪಾಲು ಏಷ್ಯಾದಲ್ಲೆ ಕಳೆದಿದ್ದಾರೆ. ಈ ಮೂರು ದಶಕಗಳನ್ನು ಕೃಷಿ ಸುಧಾರಣೆಯ ಕಾರಣಕ್ಕಾಗಿಯೆ ಅರ್ಪಿಸಿಕೊಂಡಿದ್ದಾರೆ.''
ವೂಲ್ಫ್ ಲೆಡೆಜಿನ್ಸ್ಕಿ ಹೀಗೆ ಹೊಸದಾಗಿ ಸ್ವತಂತ್ರಗೊಂಡ ಏಷ್ಯಾದ ದೇಶಗಳಲ್ಲಿ ಪ್ರಜಾಪ್ರಭುತ್ವದ ಏಳಿಗೆ ಮತ್ತು ಉಳಿವಿಗಾಗಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಏಷ್ಯಾದ ಗ್ರಾಮೀಣರ ಗಳಿಕೆ ಉತ್ತಮ ಪಡಿಸಲು ಮತ್ತು ಮೂಲ ಅಗತ್ಯಗಳನ್ನು ಪೂರೈಸಲು ಕೊನೆಪಕ್ಷ ಭೂ ಹಿಡುವಳಿ ಒಡೆಯರಿಗೆ ರಕ್ಷಣೆ ಅಥವಾ ತಮ್ಮದೆಂದು ಕರೆದುಕೊಳ್ಳುವ ಒಂದು ತುಂಡು ಭೂಮಿಗಾಗಿ ಅವಲಂಬಿಸಿದ ಪರಿಣಾಮವನ್ನು ಅವರು ಮನವರಿಕೆ ಮಾಡಿಕೊಟ್ಟರು. ಈ ರೀತಿಯಲ್ಲಿ ಮಾತ್ರ ರೈತರು ಕಡು ಬಡತನದಿಂದ ಮತ್ತು ವೈಯಕ್ತಿಕ ಅಪಮಾನಕರ ನೋವಿನಿಂದ ಪಾರಾಗಲು ಸಾಧ್ಯವಿದ್ದರೂ ಬೇರೆಯವರ ಒತ್ತಾಯಕ್ಕೆ ಮಣಿದು ಒಪ್ಪಿಕೊಳ್ಳುವುದು ಅವರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಲೆನಿನ್ ರ ಶಕ್ತಿಶಾಲಿ ಭರವಸೆ 'ಉಳುವವನಿಗೆ ಭೂಮಿ' ಹೇಗೆ ರಷ್ಯನ್ ರೈತರನ್ನು ಪ್ರಭಾವಿಸಿತು, ಹೇಗೆ ಅವರು ಕ್ರಾಂತಿಗೆ ಒಪ್ಪಿಗೆ ನೀಡಿ ಬೆಂಬಲ ವ್ಯಕ್ತಪಡಿಸುವಂತೆ ಮಾಡಿತು, ಜಮೀನಿಲ್ಲದವರೆಲ್ಲ ಕೂಡಲೇ ಮತ್ತೆ ಸಾಮುದಾಯಿಕ ಮತ್ತು ಪ್ರಭುತ್ವ ಒಡೆತನದ ಬೇಸಾಯಕ್ಕೆ ಒಲವು ವ್ಯಕ್ತಪಡಿಸಿದರು ಎಂದು ಬಲ್ಲ ವೂಲ್ಫ್ ಲೆಡೆಜಿನ್ಸ್ಕಿ ಭೂ ವಿಷಯ ವಹಿಸುವ ರಾಜಕೀಯ ಪಾತ್ರ ಕುರಿತು ಆಳವಾದ ಅರಿವನ್ನು ಬೆಳೆಸಿದ್ದಾರೆ. ಏಷ್ಯಾದಲ್ಲಿ ಪ್ರಜಾಪ್ರಭುತ್ವ ನಿಜವಾಗಿಯೂ ಉಳಿಯುವುದೇ ಅಥವಾ ಕಮ್ಯೂನಿಸ್ಟ್ರ ಭರವಸೆಗಳಿಗೆ ಗ್ರಾಮೀಣ ಜನತೆ ಮಣಿಯುವುದೇ ಎಂದು ನಿರ್ಣಯಿಸುವಲ್ಲಿ ಭೂ ಒಡೆತನದ ಪ್ರಾಮುಖ್ಯತೆ, ಹಿಡುವಳಿಯ ಹಕ್ಕು ಮತ್ತು ಇನಾಮತಿ ಭೂ ಹಂಚಿಕೆ ಕುರಿತು ಅವರು ಮರುಚಿಂತನೆ ನಡೆಸಿದ್ದಾರೆ.''
ಲೆಡೆಜಿನ್ಸ್ಕಿಯ ಪ್ರಮುಖ ಕೊಡುಗೆಯಾದ ಜಪಾನಿನ ಅತ್ಯಂತ ಯಶಸ್ವಿ ಭೂ ಸುಧಾರಣೆ (1946-48) ಅವರಿಗೆ ಕ್ಷಣ ಮಾತ್ರದಲ್ಲಿ ಹೆಸರನ್ನು ತಂದು ಕೊಟ್ಟಿತು, ಮತ್ತು ಅನೇಕ ಇತರ ಭೂಮಿಗಳಲ್ಲಿ ಸಲಹೆ ಮತ್ತು ನೆರವು ನೀಡಲು ಅವರನ್ನು ಕೋರುವಂತೆ ಮಾಡಿತು. ಅವರು ಆರಂಭಿಕ ಯುದ್ಧಪೂರ್ವ ಕಾಲದ ತೈವಾನಿನಲ್ಲೂ ಅಷ್ಟೇ ಯಶಸ್ವಿಯಾದ ಭೂ ಸುಧಾರಣೆಯನ್ನು ಮಾಡಿ ಮಹತ್ವಪೂರ್ಣ ಕೊಡುಗೆ ನೀಡಿದ್ದಾರೆ''
1950ರಿಂದ 1956 ವರೆಗೆ ಟೋಕಿಯೊಗೆ ಸಂಬಂಧಿಸಿದ ತಮ್ಮ ಸಾಮಾನ್ಯ ಕರ್ತವ್ಯದೊಂದಿಗೆ ಹೆಚ್ಚುವರಿಯಾಗಿ ಅವರು ಜಪಾನಿನ ಭೂ ಸುಧಾರಣೆಯ ಪರಿಣಾಮಗಳನ್ನು ಪರಿಶೀಲನೆ ಮಾಡಿದರು, ಮತ್ತು ತೈವಾನಿನ ಫಾರ್ಮೋಸಾದಲ್ಲಿ ನೆರವು ನೀಡಿದರು, ಭಾರತದ ರಾಯಭಾರಿ ಚೆಸ್ಟರ್ ಬೌಲ್ಸ್ ಅವರ ತುರ್ತು ಕೋರಿಕೆಯ ಮೇರೆಗೆ ಮೊದಲಿಗೆ ಕಾಶ್ಮೀರ, ಪಂಜಾಬ್ ಮತ್ತು ಮದ್ರಾಸ್ (1952ರಲ್ಲಿ) ಗಳಲ್ಲಿ ಹಿಡುವಳಿ ಸಂಬಂಧಿತ ಸಮಸ್ಯೆಗಳು ಮತ್ತು ಸ್ಥಿತಿಗತಿಗಳು, ಅಲ್ಲದೆ ಭಾರತದಲ್ಲಿನ (1954) ಭೂ ಸುಧಾರಣಾ ಕಾರ್ಯಕ್ರಮಗಳ ಸಾಮಾನ್ಯ ವಿದ್ಯಮಾನಗಳನ್ನು ಪರೀಕ್ಷಿಸಿದರು. ತಮ್ಮ ಕೊನೆಯ ವರ್ಷದಲ್ಲಿ ಅವರು ಸೈಗಾನಿನಲ್ಲಿ ಧರ್ಮ ಪ್ರಚಾರ ಸಹಾಯಕರಾಗಿರುವುದರೊಂದಿಗೆ ಅಮೆರಿಕೆಯ ಸರಕಾರದಲ್ಲಿ ಭೂ ಸುಧಾರಣಾ ಸಲಹೆಗಾರರಾಗಿ ಸೇವೆ ಸಲ್ಲಿದರು. 1956ರಿಂದ 1961ರ ವರೆಗೆ ಅವರು ವಿಯೆತ್ನಾಮಿನ ಅಧ್ಯಕ್ಷ ಡೈಮ್ ಅವರಿಗೆ ಆಪ್ತ ಸಲಹೆಗಾರರಾಗಿ ತಮ್ಮ ಕೆಲಸ ಮುಂದುವರೆಸಿದರು. ಮುಂದಿನ ಮೂರು ವರುಷಗಳ ಕಾಲ ಅವರು ಫೋರ್ಡ್ ಫೌಡೇಶನ್ ನಲ್ಲಿ ಒಂದು ಬಗೆಯ ಜಂಗಮಶೀಲ ಪ್ರಾದೇಶಿಕ ಸಲಹೆಗಾರರಾಗಿ ನೇಪಾಳ, ಭಾರತ, ಇಂಡೋನೇಶಿಯಾ ಮತ್ತು ಫಿಲಿಫೈನ್ಸ್ ಗಳಲ್ಲಿ ಫೌಂಡೇಶನ್ ಕೆಲಸಕಾರ್ಯಗಳಿಗೆ ಸಲಹೆ ನೀಡುತ್ತಿದ್ದರು.''
1964ರ ನಂತರದ ಅವಧಿಯಲ್ಲಿ ಅವರು ವಿಶ್ವ ಬ್ಯಾಂಕಿನ ಸಲಹೆಗಾರರಾಗಿ ಕೆಲಸ ಆರಂಭಿಸಿದರು. ಆರ್ಥಿಕ ಅಭಿವೃದ್ಧಿಗಾಗಿ ಭಾರತದ ನೋಟ ಎಂಬ ವಿಶ್ವ ಬ್ಯಾಂಕಿನ ಪ್ರಮುಖ ಅಧ್ಯಯನದಲ್ಲಿ ಭಾಗವಹಿಸಿದ ಮೇಲೆ ಇರಾನ್ ಮತ್ತು ಮೆಕ್ಸಿಕೊಗೆ ಹೋದ ಇತರ ಆಯೋಗಗಳಲ್ಲಿದ್ದ ಲೆಡೆಜಿನ್ಸ್ಕಿಯವರು 1967ಕ್ಕೂ ಮೊದಲು ನವದೆಹಲಿಯಲ್ಲಿ ವಿಶ್ವ ಬ್ಯಾಂಕ್ ರೆಸಿಡೆಂಟ್ ಆಯೋಗದ ಸದಸ್ಯರಾಗಿ ನೇಮಕರಾದರು.''
ಈ ಕೊನೆಯ ಕಾಲಾವಧಿಯಲ್ಲಿ ಭಾರತ ಅವರ ಪ್ರಾಥಮಿಕ ಹೊಣೆಗಾರಿಕೆ ಮತ್ತು ಕಾಳಜಿಯಾಗಿದ್ದಾಗ ಅವರನ್ನು ಇರಾನ್, ಫಿಲಿಫೈನ್ಸ್ ಮತ್ತು ಶ್ರೀಲಂಕಾಗಳಲ್ಲಿ ವಿಶ್ವ ಬ್ಯಾಂಕಿನ ಅಡಹಾಕ್ ಸಹಾಯಕರೆಂದೂ ಕರೆಯಲಾಯಿತು. ವಿಶೇಷವಾಗಿ ಅವರ ಜೀವನದ ಕೊನೆಯ ದಶಕದಲ್ಲಿ ಭಾರತ ಕುರಿತ ಅನೇಕ ಲೇಖನಗಳಲ್ಲಿ ಲೆಡೆಜಿನ್ಸ್ಕಿಯವರು ಮೇಲಿಂದ ಮೇಲೆ ಸಣ್ಣ, ಅತಿಸಣ್ಣ ರೈತರು, ಭೂ ಸುಧಾರಣೆ, ಹಸಿರು ಕ್ರಾಂತಿ, ಸಾಂಸ್ಥಿಕ ಹಿಡಿತವಿರುವಂಥ ಸಹಕಾರಿ ಸಾಲ, ವಿಸ್ತರಣೆ, ಆಡಳಿತ ಮೊದಲಾಗಿ ರೂಪಿತವಾದ ಸಮಸ್ಯೆಗಳು (ಮತ್ತು ಕಾರ್ಯಕ್ರಮ)ಗಳನ್ನು ಪರಿಶೀಲಿಸಿದರು.''
ಲೆಡೆಜಿನ್ಸ್ಕಿ ಭಾರತದಲ್ಲಿ ಕೃಷಿ ಸುಧಾರಣೆಯ ಸಲಹೆಗಾರರಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಈ ಉದ್ದೇಶದೊಂದಿಗೆ ಭಾರತಕ್ಕೆ ಬಂದ ಲೆಡೆಜಿನ್ಸ್ಕಿ ಅಮೆರಿಕೆಯ ಸಾಮ್ರಾಜ್ಯಶಾಹಿ ಪರವಾಗಿ ಭೂ ಸುಧಾರಣಾ ಕಾರ್ಯಕ್ರಮ ಜಾರಿಗೆ ತರಲು ಭಾರತ ಸರಕಾರದ ನಿಂದಕರಾದರು. ನಂತರದಲ್ಲಿ ವಿಶ್ವ ಬ್ಯಾಂಕ್ ಮತ್ತು ಪೋರ್ಡ್ ಫೌಂಡೇಶನ್ ನ ತಜ್ಙರಾಗಿದ್ದ ಲೆಡೆಜಿನ್ಸ್ಕಿ 1968-1985ರ ನಡುವೆ ಭಾರತಕ್ಕೆ ಭೇಟಿ ನೀಡಿದರು, ತಂಗಿದರು.
ಕೊನೆಗೆ ಅವರು ವಿಶ್ವ ಬ್ಯಾಂಕಿನ 'ಭಾರತೀಯ ಕಾರ್ಯಾಚರಣೆ'ಯ ಮುಖ್ಯ ಸಲಹೆಗಾರರಾದರು.
ಅಮೆರಿಕೆಯ ರಾಯಭಾರಿ ತಮ್ಮ ಸ್ವಂತ ವರದಿಯಲ್ಲಿ 1954ರಲ್ಲಿ ಹೀಗೆ ಬರೆದಿದ್ದಾರೆ: 1952ರಲ್ಲಿ ನಾನು ಭೂ ನೀತಿಯಲ್ಲಿ ಅತ್ಯುನ್ನುತ ತಜ್ಙರಾದ ಇಬ್ಬರು ಅಮೆರಿಕನ್ನರನ್ನು ಗೊತ್ತು ಮಾಡಿದೆ. ವೂಲ್ಫ್ ಲೆಡೆಜಿನ್ಸ್ಕಿ ಜಪಾನ್ ಸುಧಾರಣೆಗಳ ಶಿಲ್ಪಿಯಾಗಿದ್ದರು, ಕೆನೆತ್ ಪಾರ್ಸನ್ಸ್ ವಿಸ್ಕಿನ್ಸಿನ್ ವಿಶ್ವವಿದ್ಯಾನಿಲಯದ ಕೃಷಿ ಆರ್ಥಿಕ ವಿಭಾಗದ ಪ್ರಾಧ್ಯಾಪಕರಾಗಿದ್ದರು. ಇವರಿಬ್ಬರು ಭೂ ಒಡೆತನ-ನಾಯಕತ್ವದ ಸ್ಥಿತಿಗತಿಯ ಪರಿಶೀಲನೆ ಮಾಡಲು ಮತ್ತು ಈ ಸಂಬಂಧ ಸರಕಾರಕ್ಕೆ ಶಿಫಾರಸುಗಳನ್ನು ಸಿದ್ಧಪಡಿಸಿ ಸಲ್ಲಿಸಲು ಭಾರತಕ್ಕೆ ಬಂದರು. ಮದ್ರಾಸ್ ಮತ್ತು ತಂಜಾವೂರು ಜಿಲ್ಲೆಗಳನ್ನು ಒಳಗೊಂಡು ಹಲವಾರು ರಾಜ್ಯಗಳಲ್ಲಿ ತೀವ್ರ ಅಧ್ಯಯನ ಮಾಡಿದ ನಂತರ ಲೆಡೆಜಿನ್ಸ್ಕಿ ರೈತರ ಕಟುವಾದ ದೂರುಗಳು 1946ರಲ್ಲಿ ಕಮ್ಯೂನಿಸ್ಟ್ ಪೂರ್ವ ಚೀನಾದಲ್ಲಿ ಕೇಳಿದ್ದ ದೂರುಗಳಿಗೆ ಸಮಾನವಾಗಿದ್ದು ಅವನ್ನು ನೆನಪಿಸುತ್ತವೆಯೆಂದು ವರದಿ ಮಾಡಿದರು. 'ಭಾರತದ ಕೆಲವು ಭಾಗಗಳಲ್ಲಿರುವ ಭೂಮಿಯ ತಾರತಮ್ಯತೆ ಭಾರತದ ಬೇರೆ ಯಾವುದೆ ಭಾಗದಲ್ಲಿ ತಾನು ಕಂಡ ಸ್ಥಿತಿಗಿಂತ ಕೆಟ್ಟದ್ದಾಗಿದೆ ಅಥವಾ ಅತಿ ಹೆಚ್ಚು ಕೆಟ್ಟಾದ್ದಾಗಿದೆ' ಎಂದು ಅವರು ಹೇಳಿದರು.''
ಹಳ್ಳಿಗರ ಹೆಚ್ಚುತ್ತಿರುವ ಅತೃಪ್ತಿಯನ್ನು ಸಂಧಿಸುವಲ್ಲಿ ಸುಧಾರಣೆಗಳ ಪ್ರಗತಿ ಅತ್ಯಂತ ನಿಧಾನ ಗತಿಯಲ್ಲಿದೆಯೆಂದು ಲೆಡೆಜಿನ್ಸ್ಕಿ ಮತ್ತು ಪಾರ್ಸನ್ಸ್ ಇಬ್ಬರೂ ತೀರ್ಮಾನಕ್ಕೆ ಬಂದಿದ್ದರು. ಈ ವರದಿಗಳು ಪಂಚವಾರ್ಷಿಕ ಯೋಜನೆಯಲ್ಲಿ ಶಿಫಾರಸ್ಸುಗಳ ಮಾರ್ಗದರ್ಶನ ಮಾಡುವಲ್ಲಿ ಪ್ರಭಾವಶಾಲಿಯಾಗಿವೆ ಎಂದು ಭಾರತದ ಯೋಜನಾ ಆಯೋಗದ ಸದಸ್ಯರು ನನಗೆ ಹೇಳಿದರು.'' ( ಮೂಲ: 'ರಾಯಭಾರಿಯ ವರದಿ'ಯಿಂದ, ಚೆಸ್ಟರ್ ಬೌಲ್ಸ್, 1954).
ಲೆಡೆಜಿನ್ಸ್ಕಿ ಲೇಖನಗಳ ಸಂಪಾದಕರಾದ ವಾಲಿನ್ಸ್ಕಿ ಅವರು ಹೀಗೆ ಬರೆದಿದ್ದಾರೆ: ಲೆಡೆಜಿನ್ಸ್ಕಿ ಭಾರತಕ್ಕೆ ಬಂದರು, ಮೂರು ತಿಂಗಳು ಉಳಿದಿದ್ದ ಕಾಲದಲ್ಲಿ ಅವರು ಪಂಜಾಬ್, ಮದ್ರಾಸ್ ಮತ್ತು ಕಾಶ್ಮೀರಗಳಿಗೆ ಕ್ಷೇತ್ರ ಪ್ರವಾಸ ಕೈಗೊಂಡರು, ಅಲ್ಲದೆ ಯೋಜನಾ ಆಯೋಗಕ್ಕೆಂದು ಪ್ರತಿಯೊಂದು ವಿಷಯ ಕುರಿತು ವರದಿ ಸಿದ್ಧಪಡಿಸಿದರು. ಈ ಅಧ್ಯಯನಗಳ ಉದ್ದೇಶಕ್ಕಾಗಿ ಲೆಡೆಜಿನ್ಸ್ಕಿ ಭಾರತದ ಯೋಜನಾ ಆಯೋಗದಡಿ ಕಾರ್ಯ ನಿರ್ವಹಿಸಿದರು. ಹಾಗಾಗಿ ವರದಿಗಳನ್ನು ನೇರವಾಗಿ ಯೋಜನಾ ಆಯೋಗಕ್ಕೆ ತಲುಪಿಸಲಾಯಿತು ಮತ್ತು ಪ್ರತಿಯೊಂದೂ ವಿಷಯ ಕುರಿತು ಆಯೋಗದ ಸದಸ್ಯರು ಮತ್ತು ಸಿಬ್ಬಂದಿಗಳೊಂದಿಗೆ ಚರ್ಚಿಸಲಾಯಿತು.'' ಲೆಡೆಜಿನ್ಸ್ಕಿ ಭಾರತ ಸರಕಾರದೊಂದಿಗೆ ಗಂಭೀರವಾಗಿ ತೊಡಗಿಸಿಕೊಂಡಿದ್ದರು, ಅಲ್ಲದೆ ಅವರು ಹಲವು ಸಂದರ್ಭಗಳಲ್ಲಿ ಭಾರತದಲ್ಲಿ ಭೂ ಸುಧಾರಣೆ ಕುರಿತು 'ಏನು ಮಾಡಬೇಕು' 'ಏನು ಮಾಡಬಾರದು'ದೆಂದು ಇಲಾಖೆಗಳಿಗೆ ಮತ್ತು ಯೋಜನಾ ಆಯೋಗಕ್ಕೆ ತಿಳುವಳಿಕೆ ನೀಡುತ್ತಿದ್ದರು. ಅವರು ಮತ್ತೆ ಫೋರ್ಡ್ ಫೌಂಡೇಶನ್ ಕೆಲಸಗಳ ಮಾರ್ಗದರ್ಶಕರಾಗಿ 1961-1964ರ ಸಾಲಿನಲ್ಲಿ ಭಾರತಕ್ಕೆ ಮರಳಿ ಬಂದರು. ಈ ಐದು ವರ್ಷಗಳ ಅವಧಿಯಲ್ಲಿ ಅವರು ಭಾರತ ಸರಕಾರದ ಕೆಲಸ ಕಾರ್ಯಗಳ ಬಗ್ಗೆ ಬೋಧನೆ ಮಾತ್ರ ಮಾಡಲಿಲ್ಲ, ಅದರ ಜೊತೆಗೆ ಸಾಮ್ರಾಜ್ಯಶಾಹಿ ಅಮೆರಿಕಾ ಮಾದರಿಯ ಭೂ ಸುಧಾರಣೆಯನ್ನು ಪ್ರಚಾರ ಮಾಡಲು ನೇಪಾಳ, ಫಿಲಿಫೈನ್ಸ್ ಮತ್ತು ಎರಡು ಬಾರಿ ಇಂಡೋನೇಷಿಯಾಕ್ಕೆ ಪ್ರವಾಸ ಕೈಗೊಂಡರು. ನಂತರ ಅವರು ವಿಶ್ವ ಬ್ಯಾಂಕಿನ ವ್ಯಕ್ತಿಯಾಗಿ ಭೂ ಸುಧಾರಣೆಯನ್ನು ಹೊರತು ಪಡಿಸಿ 'ತಾಂತ್ರಿಕ ಅಭಿವೃದ್ಧಿ', 'ಹಸಿರು ಕ್ರಾಂತಿ' ಒಳಗೊಂಡು ಕೃಷಿಯ ಬೇರೆ ಬೇರೆ ಸಮಸ್ಯೆಗಳಿಗೆ ತಮ್ಮ ಗಮನ ಕೇಂದ್ರೀಕರಿಸಿ ಭಾರತದಲ್ಲಿ (1964-1975) ನೆಲೆಯೂರಿದರು. ಈ ವರ್ಷಗಳಲ್ಲಿ ಅವರು 'ಸುಧಾರಕ'ರ ಹಾಗೆ ನಟಿಸಿದರು, ಅಲ್ಲದೆ ತೃತೀಯ ಜಗತ್ತಿನ ಕೃಷಿಕ್ಷೇತ್ರವನ್ನು ಸಾಮ್ರಾಜ್ಯವಾದಿ ಬಂಡವಾಳಕ್ಕೆ ಗುರಿಯಾಗಿರಿಸಿ ಬದಲಾವಣೆಯ ಏಜೆಂಟರಾಗಿ ಕಾರ್ಯ ನಿರ್ವಹಿಸಿದರು. ಅವರನ್ನು 1966ರಲ್ಲಿ ಇರಾನ್ ಮತ್ತು ಮೆಕ್ಸಿಕೊಗಳಲ್ಲಿ ಸಾಂಪ್ರದಾಯಿಕ ಬ್ಯಾಂಕ್ ಪ್ರಚಾರಕರಿಗೆ ಹೆಚ್ಚು ಸಹಾಯ ಮಾಡಲು ಕೇಳಿಕೊಳ್ಳಲಾಗಿತ್ತು.''. ಅವರು ಈ ಅವಧಿಯಲ್ಲಿ 'ನಲವತ್ತೇಳು ಲೇಖನಗಳು' ಮತ್ತು 'ಭಾರತ ಕುರಿತು-ನಲವತ್ತೊಂದು ಲೇಖನಗಳು' ಬರೆಯುತ್ತಾರೆ, ಅಲ್ಲದೆ ಪಂಜಾಬ್, ಬಿಹಾರ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಬಂಗಾಳ, ಪೂರ್ವ ಉತ್ತರ ಪ್ರದೇಶಗಳಲ್ಲಿ ವಿಸ್ತೃತ 'ಕ್ಷೇತ್ರ ವೀಕ್ಷಣೆ' ಮಾಡುತ್ತಾರೆ.''
ಈ ಅವಧಿಯಲ್ಲಿ ಲೆಡೆಜಿನ್ಸ್ಕಿ ಭೂ ಸುಧಾರಣೆಯ ತಂತ್ರೋಪಾಯಗಳನ್ನು ಅಭಿವೃದ್ಧಿ ಪಡಿಸುತ್ತಾರೆ. ಅವರು 'ಭೂ ಹಂಚಿಕೆ' ಬದಲು 'ಭೂ ಮಿತಿ'ಯನ್ನು ಭಾರತದ ಮುಂದಿಡುತ್ತಾರೆ. ಕಳೆದ ಶತಮಾನದ ಅರವತ್ತು ಮತ್ತು ಎಪ್ಪತ್ತರ ದಶಕದ ಬೆಳವಣಿಗೆಯಾದ ರೈತ ಚಳವಳಿಗಳನ್ನು ಪರಿಗಣಿಸಿ, ಅಪಾಯದ ವಿರುದ್ಧ ಹೋರಾಡಲು 'ಭೂ ಸುಧಾರಣೆ' ಕಾರ್ಯಕ್ರಮವನ್ನು ಚುರುಕುಗೊಳಿಸಬೇಕೆಂದು ಅವರು ಸರಕಾರಕ್ಕೆ ಬೋಧನೆ ಮಾಡಿದ್ದಾರೆ.
ಈ ಸಂಬಂಧದಲ್ಲಿ ಲೆನಿನ್ ಎರಡು ಹಾದಿಗಳ ಸಾಧ್ಯತೆ ಬಗ್ಗೆ ಬಿಚ್ಚುನೋಟ ಹರಿಸಿದ್ದಾರೆ: ವಸ್ತುನಿಷ್ಟವಾಗಿ ಸಾಧ್ಯವಾಗುವ ಮಧ್ಯಮ ವರ್ಗದ ಬಂಡವಾಳದಾರ ಬೆಳವಣಿಗೆಯ ಆ ಎರಡು ಹಾದಿಗಳನ್ನು ನಾವು ಪ್ರಷ್ಯಾದ ಹಾದಿ ಮತ್ತು ಅಮೆರಿಕೆಯ ಹಾದಿ ಎಂದು ಕ್ರಮವಾಗಿ ಕರೆಯುತ್ತೇವೆ. ಮೊದಲ ಹಂತದಲ್ಲಿ ಊಳಿಗಮಾನ್ಯ ಜಮೀನ್ದಾರಿ ಆರ್ಥಿಕತೆ ನಿಧಾನವಾಗಿ ಮಧ್ಯಮ ವರ್ಗದ ಬಂಡವಾಳದಾರರ ಜಂಗು ಹಿಡಿದ ಜಮೀನ್ದಾರಿ ಆರ್ಥಿಕತೆಯಾಗಿ ವಿಕಾಸ ಹೊಂದುತ್ತದೆ. ಇದು ರೈತರನ್ನು ದಶಕಗಳ ಕಾಲ ಖಂಡಿಸಿ ಅವರ ಸ್ವಾಧೀನದಲ್ಲಿದ್ದ ಆಸ್ತಿಯನ್ನು ಬಹುಪಾಲು ಕಸಿದುಕೊಂಡು ಜೀತಕ್ಕೆ ತಳ್ಳುವ ಕಾಲದಲ್ಲೆ ಅಲ್ಪಸಂಖ್ಯಾತ ದೊಡ್ಡ ರೈತರು ತಲೆ ಎತ್ತಲು ಅವಕಾಶ ಮಾಡಿಕೊಡುತ್ತದೆ. ಎರಡನೆಯ ಹಂತದಲ್ಲಿ ಜಮೀನ್ದಾರಿ ಆರ್ಥಿಕತೆ ಇರುವುದಿಲ್ಲ ಇಲ್ಲವೆ ಜಹಗೀರು ತೊಡೆದು ಹಾಕಿ, ಮುಟ್ಟುಗೋಲು ಹಾಕಿಕೊಂಡ ಕ್ರಾಂತಿಯಿಂದ ನಾಶವಾಗಿರುತ್ತದೆ. ರೈತ ಪ್ರಮುಖವಾಗಿದ್ದ ಸಂದರ್ಭದಲ್ಲಿ ಆತ ಕೃಷಿಯ ಏಕೈಕ ವಕ್ತಾರನಾಗಿ ಬದಲಾಗಿರುತ್ತಾನೆ, ಬಂಡವಾಳವಾದಿ ರೈತನಾಗಿ ವಿಕಾಸ ಹೊಂದಿರುತ್ತಾನೆ. ಊಳಿಗಮಾನ್ಯ ಗುಲಾಮಗಿರಿ ದಾಸ್ಯತನವಾಗಿ ಮತ್ತು ಜಂಗು ಹಿಡಿದ ಊಳಿಗಮಾನ್ಯ ಜಮೀನ್ದಾರ ಭೂಮಿ ಕುರಿತು ಬಂಡವಾಳವಾದಿಗಳ ಶೋಷಣೆಯಾಗಿ ಬದಲಾವಣೆಯಾಗುವುದು- ಮೊದಲ ಹಂತದಲ್ಲಿನ ವಿಕಾಸದ ಮುಖ್ಯಾಂಶವಾಗಿದೆ. ಪಿತೃ ಪ್ರಧಾನ ರೈತನು ಮಧ್ಯಮ ವರ್ಗದ ಬಂಡವಾಳದಾರ ರೈತನಾಗಿ ಬದಲಾವಣೆ ಹೊಂದುವುದು - ಎರಡನೆಯ ಹಂತದ ಪ್ರಧಾನ ಹಿನ್ನೆಲೆಯಾಗಿದೆ.''
ರಷ್ಯಾದ ಆರ್ಥಿಕ ಚರಿತ್ರೆಯಲ್ಲಿ ಈ ಎರಡು ಬಗೆಯ ವಿಕಾಸಗಳು ಸ್ಪಷ್ಟವಾದ ಸಾಕ್ಷ್ಯಾಧಾರಗಳಿಂದ ಕೂಡಿದ್ದು ಈ ಕುರಿತು ವಿವರಿಸಬೇಕಾದ ಅಗತ್ಯವಿಲ್ಲ. ಉತ್ಪಾದನಾ ಶಕ್ತಿಯ ಬೆಳೆವಣಿಗೆ ಮತ್ತು ಬಂಡವಾಳಶಾಹಿ ಅಭಿವೃದ್ಧಿಯ ಎರಡನೆಯ ಹಂತದಲ್ಲಿ ಜಮೀನ್ದಾರಿ ರೈತರ ಪರವಾದ ಸುಧಾರಣೆಗಿಂತ ಹೆಚ್ಚು ವೇಗವಾಗಿರುತ್ತದೆ, ವಿಶಾಲವಾಗಿರುತ್ತದೆ.
ಲೆನಿನ್ ರ ಅನ್ವಯ ಮೊದಲನೆಯ ಹಾದಿ ಬಂಡವಾಳವಾದಿ ಮತ್ತು ಬಂಡವಾಳವಾದಿ ಜಮೀನ್ದಾರರಿಗೆ ಅನುಕೂಲಕರವಾಗಿದೆ. ಏಕೆಂದರೆ ಇದು ಅವರ ಆಳ್ವಿಕೆಗೆ ಕಡಿಮೆ ಅಪಾಯಕರವಾಗಿದೆ. ಈ ಹಾದಿಯಲ್ಲಿ ಪ್ರಭುತ್ವ ಅವಲಂಬಿತ ರೈತನು ಕೃಷಿಕ್ರಾಂತಿಗೆ ಸಹಾಯಕನಾಗಿರುತ್ತಾನೆ, ಕ್ರಾಂತಿಕಾರಕ ಭೂ ಸುಧಾರಣೆ ಮಾಡಬೇಕೆನ್ನುವ ಹಂಬಲ ಕೈ ಬಿಟ್ಟಿರುತ್ತಾನೆ. ಮತ್ತೊಂದೆಡೆ ಕಮ್ಯೂನಿಸ್ಟ್ ರ ಕ್ರಾಂತಿಕಾರಿ ಭೂ ಸುಧಾರಣಾ ಕಾರ್ಯಕ್ರಮದ ಚಳವಳಿ ದೊಡ್ಡ ಬಂಡವಾಳದಾರರನ್ನು ಮತ್ತು ಜಮೀನ್ದಾರರ ಆಳ್ವಿಕೆಯನ್ನು ಕಿತ್ತು ಬಿಸುಡುತ್ತದೆ. ಅದು ಬಂಡವಾಳಶಾಹಿ ದೋಚುವಿಕೆಯನ್ನೂ ಕೊನೆಗೊಳಿಸುತ್ತದೆ.
ಮಧ್ಯಮ ವರ್ಗದ ಬಂಡವಾಳದಾರ, ಜಮೀನ್ದಾರ ಪರವಾದ ಅರೆ-ಊಳಿಗಮಾನ್ಯ ಕೃಷಿ ಆರ್ಥಿಕತೆ, ಹಳೆಯ ಊಳಿಗಮಾನ್ಯ ಪದ್ಧತಿಗಳ ನಿಧಾನ ಬದಲಾವಣೆಯ ಹಿಂದಿರುವ ಸಾಮ್ರಾಜ್ಯವಾದಿ ತಂತ್ರೋಪಾಯಗಳನ್ನು ಲೆನಿನ್ ನೂರು ವರುಷಗಳ ಹಿಂದೆಯೆ ವಿಶ್ಲೇಷಿಸಿ ಬಯಲಿಗೆಳೆದಿದ್ದಾರೆ. ಲೆನಿನ್ ಬಯಲಿಗೆಳೆಯುತ್ತ ಮಾಡಿರುವ ಸ್ಪಷ್ಟನೆಯೆಂದರೆ ಶ್ರಮಿಕ ವರ್ಗದ ನಾಯಕತ್ವದಡಿಯಲ್ಲಿ ನಡೆಯುವ ಕ್ರಾಂತಿಕಾರಿ ಕೃಷಿ ಕಾರ್ಯಕ್ರಮ ಮಾತ್ರ ವಿಶಾಲ ರೈತ ಸಮೂಹದ ಹಿತದೃಷ್ಟಿಯಿಂದ ಊಳಿಗಮಾನ್ಯ ಪದ್ಧತಿಯನ್ನು ನಾಶ ಪಡಿಸುತ್ತದೆ. ಲೆನಿನ್ ರ ಪ್ರಕಾರ ಕೃಷಿ ಕಾರ್ಯಕ್ರಮದ ಮುಖ್ಯ ಘೋಷಣೆಗಳೆಂದರೆ- ಉಳುವವನಿಗೆ ಭೂಮಿ'', ಜಮೀನ್ದಾರ ಭೂಮಿಯ ಮುಟ್ಟುಗೋಲು''.
ಪಶ್ಚಿಮ ಬಂಗಾಳದ ಎಡ ಸರಕಾರದ ಭೂಸುಧಾರಣೆ ಕಾರ್ಯಕ್ರಮದ ಸಂಕ್ಷಿಪ್ತ ಸಾರಾಂಶ
ಈಗ ಪಶ್ಚಿಮ ಬಂಗಾಳದ ಭೂ ಸುಧಾರಣೆಯನ್ನು ಪರಿಶೀಲನೆ ಮಾಡೋಣ. ವೂಲ್ಫ್ ಲೆಡೆಜಿನ್ಸ್ಕಿಯವರ ನಿರ್ದೇಶನಗಳನ್ನು ಪಶ್ಚಿಮ ಬಂಗಾಳದಲ್ಲಿ ಎಡರಂಗ ಸರಕಾರ ಜಾರಿಗೆ ತಂದಿತೆಂಬುದು ಕುತೂಹಲ ಹುಟ್ಟಿಸುತ್ತದೆ. ಪಶ್ಚಿಮ ಬಂಗಾಳದ ಭೂ ಸುಧಾರಣೆಗಳು ಲೆಡೆಜಿನ್ಸ್ಕಿಯವರ ನಿಯಮನಗಳನ್ನು ಆಧರಿಸಿದ್ದೆಂದು ಪಶ್ಚಿಮ ಬಂಗಾಳ ಸರಕಾರದ ಆರ್ಥಿಕ ಸರ್ವೇಕ್ಷಣೆ 2004ರಲ್ಲಿ ಎಡರಂಗ ಸರಕಾರ ಒಪ್ಪಿಕೊಂಡಿತ್ತು..
ಪಶ್ಚಿಮ ಬಂಗಾಳದ ಭೂ ಸುಧಾರಣೆ ಎರಡು ಹಂತಗಳಲ್ಲಿ ನಡೆದಿದೆ. ಮೊದಲನೆಯದು ಸಂಯುಕ್ತ ರಂಗ ಸರಕಾರದಡಿ 1967-70ರಲ್ಲಿ ನಡೆಯಿತು. ಎರಡನೆಯದು 1977ರ ನಂತರದಲ್ಲಿ ಎಡರಂಗದ ಸರಕಾರದಿಂದಲೆ ನಡೆಯಿತು.
1967ರಲ್ಲಿ ಕಾಂಗ್ರೆಸ್ ಸರಕಾರವನ್ನು ಸೋಲಿಸಿದ ಸಂಯುಕ್ತ ರಂಗ ಅಧಿಕಾರಕ್ಕೆ ಬಂದಿತು. ಫೆಬ್ರವರಿ 1967ರಲ್ಲಿ ಸಂಯುಕ್ತ ರಂಗದ ಮೊಟ್ಟಮೊದಲ ಮುಖ್ಯಮಂತ್ರಿ ಅಜಯ್ ಮುಖರ್ಜಿ ಅವರ ನೇತೃತ್ವದಲ್ಲಿ ಜ್ಯೋತಿಬಸು ಅವರು ಉಪಮುಖ್ಯಮಂತ್ರಿಯಾಗಿದ್ದು ಗೃಹ ಖಾತೆಯ ಮೇಲ್ವಿಚಾರಣೆಯನ್ನೂ ನಡೆಸುತ್ತಿದ್ದರು. ಸಂಯುಕ್ತ ರಂಗ ಸರಕಾರ ಅಧಿಕಾರ ವಹಿಸಿಕೊಂಡ ಕೂಡಲೇ ನಕ್ಸಲ್ ಬಾರಿ ಕಾರ್ಯಕರ್ತರು ಕೃಷಿಕ್ರಾಂತಿಯ ಕಾರ್ಯಕ್ರಮವಾದ ರೈತ ದಂಗೆಗಳನ್ನು ಮುಂದೂಡಿದರು. ಅಲ್ಲದೆ ಭೂಮಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಆರಂಭಿಸಿದರು ಮತ್ತು ಭೂ ಹೀನರಿಗೆ ಮತ್ತು ಬಡ ರೈತರಿಗೆ ಆ ಭೂಮಿಯನ್ನು ಹಂಚತೊಡಗಿದರು. ಸಂಯುಕ್ತ ರಂಗ ಸರಕಾರ ಮತ್ತು ಅದರ ಮುಖ್ಯ ಪಾಲುದಾರ ಪಕ್ಷವಾದ ಸಿಪಿಎಂ ಮತ್ತದರ ಮಂತ್ರಿಗಳಾದ ಜ್ಯೋತಿ ಬಸು ಮತ್ತು ಹರೇಕೃಷ್ಣ ಕೊನಾರ್ ರಂಥವರು ನಕ್ಸಲ್ ಬಾರಿ ರೈತ ಚಳವಳಿಯನ್ನು ವಿರೋಧಿಸಿದರು. ಭೂಮಿ ಮುಟ್ಟುಗೋಲು ಹಾಕಿಕೊಂಡ ಕ್ರಮವನ್ನು ಒಟ್ಟಾರೆಯಾಗಿ ಕಾನೂನು ಬಾಹಿರ ಕ್ರಮವೆಂದು ಘೋಷಿಸಿದರು. ಹೋರಾಟವನ್ನು ವಾಪಸು ಪಡೆಯಲು ಅವರು ಸೂಚಿಸಿದರಲ್ಲದೆ ಕಾನೂನು ಪ್ರಾಧಿಕಾರದ ಮೂಲಕ ಹೆಚ್ಚುವರಿ ಭೂ ಮಿತಿಯ ಭೂ ಪ್ರಕ್ರಿಯೆ ನಡೆಯಬೇಕೆಂದು ಒತ್ತು ಹಾಕಿದರು.
ಪಶ್ಚಿಮ ಬಂಗಾಳದ ಸಂಯುಕ್ತ ರಂಗ ಸರಕಾರ ನಕ್ಸಲ್ ಬಾರಿ ಚಳವಳಿಗೆ ಹೆದರಿ 1967ರಲ್ಲಿ 1955ರ ಭೂಮಿತಿ ಕಾಯ್ದೆಯನ್ನು ಜಾರಿಗೆ ತಂದಿತು. 1967ರಿಂದ 300,000 ಎಕರೆ (ಸುಮಾರು) ಭೂಮಿ ವಶದಲ್ಲಿರುವುದಾಗಿ ಘೋಷಿಸಿತು. ಇದು ದೊಡ್ಡ ಜಮೀನ್ದಾರರು ಒಪ್ಪಿಸಿದ ಭೂಮಿಯಾಗಿತ್ತು. 1970ರಿಂದ ಮಿಲಿಯನ್ ಎಕರೆ ಭೂಮಿ ಪಶ್ಚಿಮ ಬಂಗಾಳದ ವಶದಲ್ಲಿ ಉಳಿಯಿತು. ಈ ಭೂಮಿಯನ್ನು ಬಡ ಮತ್ತು ಭೂ ಹೀನ ರೈತರ ನಡುವೆ ಹಂಚಲಾಯಿತು. ಇದರ ಫಲವಾಗಿ ಸಾಮ್ರಾಜ್ಯವಾದಿ ಯೋಜನೆಗಳ ಪರವಾಗಿದ್ದು ಸುಧಾರಣಾವಾದಿ ಸಿಪಿಎಂ ಕೃಷಿಕ್ರಾಂತಿಯ ನಂಬಿಕೆಗೆ ತಕ್ಕಂತೆ ಸ್ಪಂದಿಸಿತು.
ಹೀಗೆ ಸಾಮ್ರಾಜ್ಯಶಾಹಿ ತೋರಿದ ಹಾದಿಯಲ್ಲಿ ಹೆಜ್ಜೆ ಹಾಕಿದ ಎಡವಾದಿ ಪಕ್ಷಗಳಾದ ಸಿಪಿಎಂನಿಂದ ಲೆಡೆಜಿನ್ಸ್ಕಿಯವರ ಕನಸು ಪಶ್ಚಿಮ ಬಂಗಾಳದಲ್ಲಿ ಈಡೇರಿತು. ಸಿಪಿಎಂ ಹಳೆಯ ಕ್ರಾಂತಿಕಾರಿ ಮಾರ್ಗವನ್ನು ನಿಷೇಧಿಸಿ 'ಮೇಲು ಹಂತ'ದ ಸುಧಾರಣೆಗಳ ಹಾದಿಗೆ ಹೊಂದಿಕೊಂಡಿತು.
ಲೆಡೆಜಿನ್ಸ್ಕಿಯವರ ಸಲಹೆಗಳನ್ನು ಪಡೆದ ಪಶ್ಚಿಮ ಬಂಗಾಳದ ಎಡರಂಗ ಸರಕಾರ 80ರಲ್ಲಿ 'ಬಾರ್ಗಾ ಕಾರ್ಯಾಚರಣೆ'ಯನ್ನು ನಡೆಸಿತು. ಇದು ಆಡಳಿತಗಾರರಿಂದಷ್ಟೇ ಅಲ್ಲದೆ ವಿಶ್ವ ಬ್ಯಾಂಕ್, ಎಫ್ಎಒ, ವಿಶ್ವ ಸಂಸ್ಥೆ, ಮತ್ತು ಸಾಮ್ರಾಜ್ಯವಾದಿ ಅಮೆರಿಕೆಗಳಿಂದಲೂ ವ್ಯಾಪಕ ಬೆಂಬಲ ಪಡೆಯಿತು. ಎಡರಂಗ ಸರಕಾರ ಮುಕ್ತವಾಗಿ ಮುಂದೆ ಬಂದು ತಾನು ಸಾಮ್ರಾಜ್ಯಶಾಹಿ ಅಮೆರಿಕೆಯ ಅತ್ಯುತ್ತಮ ಅಧೀನ ಸೇವಕ ಎಂಬುದನ್ನು ಸಾಧಿಸಿ ತೋರಿಸಿತು.
ಬಾರ್ಗಾ ಕಾರ್ಯಾಚರಣೆ- ಸಾಮ್ರಾಜ್ಯವಾದಿ ನೀಲಿನಕ್ಷೆ
ಪಶ್ಚಿಮ ಬಂಗಾಳ ಸರಕಾರ ತನ್ನ 2004ರ ಸರ್ವೇಕ್ಷಣೆ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ: (.) ಯಾವುದೇ ಬಗೆಯ ಸಂಘಟನೆಯನ್ನು ಹೊಂದಿಲ್ಲದ ಮತ್ತು ಸಂಖ್ಯಾಪ್ರಮಾಣ ಎಷ್ಟೇ ಇದ್ದರೂ ಅವರು (ಭೂ ಹೀನ ಮತ್ತು ಅರೆ-ಭೂ ಹೀನ) ಬಡವರು ಮಾತ್ರವಲ್ಲ ರಾಜಕೀಯ ಶಕ್ತಿ ಇಲ್ಲದವರು. ಪ್ರಚಲಿತ ಕಾಲದಲ್ಲಿ ತೀವ್ರ ಎಡಪಕ್ಷಗಳು ಒಳಗೊಂಡಂತೆ ಯಾವುದೇ ಪಕ್ಷಗಳೂ ಅಂಥ ಕಾರ್ಯವನ್ನು ಕೈಗೆತ್ತಿಕೊಳ್ಳಲು ಅರ್ಹವಾಗಿಲ್ಲ ಅಥವಾ ಇಷ್ಟವಿಲ್ಲ. ನಾಲ್ಕೈದು ವರ್ಷಗಳ ಹಿಂದಿನ ಸಂಯುಕ್ತ ರಂಗ ಸರಕಾರದ ದಿನಗಳಲ್ಲಿ ಕಮ್ಯೂನಿಸ್ಟರೆ ಪ್ರಬಲವಾಗಿದ್ದಂಥ ಕಾಲ ಹೊರಟು ಹೋಯಿತು. ಕಮ್ಯೂನಿಸ್ಟ್ ಕಾರ್ಯಕರ್ತರು 'ವಶ ಪಡಿಸಿಕೊಂಡಿದ್ದ' ಭೂಮಿ ಅಥವಾ 300,000 ಎಕರೆಯನ್ನು ಆಯಾ ಮಾಲೀಕರಿಗೆ ಹಿಂದಿರುಗಿಸಲಾಗಿದ್ದು, ಬಹುಪಾಲು ವಶಪಡಿಸಿಕೊಂಡವರು ತಮ್ಮ ಕಾಲವನ್ನು ಜೈಲಿನಲ್ಲಿ ಕಳೆಯುತ್ತಿದ್ದಾರೆ. ಈ ಬಗೆಯ ರಾಜಕೀಯ ಏರು-ಪೇರುಗಳಲ್ಲಿ ಭೂ ಹೀನರು ಮತ್ತು ಪಾಲಿಗಾಗಿ ಕೃಷಿ ಮಾಡುತ್ತಿದ್ದವರು ಮೇಲೇರಿದ್ದರೂ ಆದಾಯವಿಲ್ಲದೆ ಉಳಿದಿರುವುದು ಅಚ್ಚರಿಯಾಗುಳಿದಿಲ್ಲ. ಅವರ ಬಹುಕಾಲದ ಯಾತನೆಯ ಮುಖದಲ್ಲಿ ಮತ್ತು ವರ್ಷದಲ್ಲಿ ಕೊನೇ ಪಕ್ಷ ಕೆಲವು ತಿಂಗಳಾದರೂ ಕೆಲಸ ನೀಡಿದವರನ್ನು ಬಿಟ್ಟು ದೂರ ಹೋದರೆ ನಷ್ಟವಾದೀತೆಂದು ಹೆದರಿರುವುದು ಅಚ್ಚರಿಯ ಸಂಗತಿಯೇನಲ್ಲ.''
'ಬಡವರು ಚೆನ್ನಾಗಿ ಊಟ ಮಾಡುವುದೆ ಕಡಿಮೆಯಾದರೂ ಅವರ ಕೈಯಳತೆಯಲ್ಲಿರುವ ಕೊಳ್ಳುವ ಶಕ್ತಿಗಿಂತ ಉತ್ಪಾದಿಸುವ ಕೆಲಸ ಹೆಚ್ಚು, ಹೀಗಿರುವಾಗ ಕೃಷಿಕ್ಷೇತ್ರ ಬೆರಳಣಿಕೆಯ ಶ್ರೀಮಂತ ರೈತರ ಕೈಯಲ್ಲೆ ಮುಂದುವರೆದರೆ ಅವರ ಉತ್ಪಾದಿಸುವ ಕೆಲಸ 'ಆದಾಯದ' ಭಾಗವಾಗುವುದು ಕಷ್ಟವಾದರೂ ಕೆಳಮಟ್ಟದಲ್ಲೆ ಉಳಿಯುತ್ತದೆ. ಹಾಗಾಗಿಯೆ ಭೂ ಸುಧಾರಣೆ- ಭೂ ಮರುಹಂಚಿಕೆಯೆ ಸ್ವತಃ ಭೂ ಅಸಮಾನತೆ ಮತ್ತು ಇತರ ಆದಾಯ ಗಳಿಕೆ ಆಸ್ತಿ ವಿರುದ್ಧ ತಾನೇ ಸ್ಪಷ್ಟವಾಗಿ ನಿವಾರಣೆ ಮಾಡುವ ರಕ್ಷಣಾ ಸೂಚಕವಾಗಿಬಿಟ್ಟಿದೆ. ಇದು ಎಣಿಕೆ ಮಾಡಿದಂತೆ ಅಸಮಾನತೆಯ ಮೂಲಕಾರಣವನ್ನು ಮತ್ತು ಅದರ ನಿರಂತರತೆಯನ್ನು ಹೊಡೆದುಹಾಕುತ್ತದೆ. ಇದನ್ನು ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಮಾಡುವುದಕ್ಕಿಂತ ಸುಲಭವಾಗಿ
ಹೇಳುತ್ತಾರೆ. ಜೇಬು ಭರ್ತಿ ಮಾಡುವುದರ ಮೇಲೆಯೆ ಒಡೆತನದ ಕಣ್ಣಿದ್ದು, ಶೇಕಡ ಐವತ್ತು ಭೂ ಒಡೆತನವಿರುವ ಶೇಕಡ ಐದರಷ್ಟು ಜನ ತೆಳ್ಳಗಾಗುತ್ತಾ ಸಾಗುವ ಪ್ರಕ್ರಿಯೆಯಲ್ಲಿ ನಿಲ್ಲುತ್ತಾರೆ, ಆದರೂ ಬಡವರಲ್ಲಿ ಬಡವರು, ಭೂಮಿಯ ಮೇಲೆ ಯಾವ ಹಕ್ಕಗಳೂ ಇಲ್ಲದ ಭೂ ಹೀನರು ಯಾವುದೇ ಬಗೆಯ ಪಾಲಿಗೆ ಮುಂದೆ ಬರುವುದು ತುಂಬಾ ಕಷ್ಟಕರವಾಗಿದೆ.''
ಹೀಗಿದ್ದರೂ ಈ ಪ್ರಸ್ತಾವ ಹೆಚ್ಚು ಕಡಿಮೆ ಬೌದ್ಧಿಕವಾದುದೆ. ಯಾವುದೇ ಮರುಹಂಚಿಕೆ ಕಾರ್ಯಕ್ರಮದ ರಾಜಕೀಯ ಹವಾಮಾನ ಸರಿ''ಯಾಗಿಲ್ಲ, ಭೂ ಮರುಹಂಚಿಕೆಯಾದ ಅಗತ್ಯ ಜನರಿಗೆ ನ್ಯಾಯ ಸಮ್ಮತ ಭೂಮಿತಿ, ಮತ್ತದರ ಅಂತಿಮ ಪರಿಣಾಮ-ನಂತರದ ಬೆಳವಣಿಗೆಗಳು ವಿವರಿಸಿರುವ ಹಾಗೆ -ತೀರಾ ಕಡಿಮೆ ಪ್ರಮಾಣವೆಂದು ತಳ್ಳಿ ಹಾಕಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಭೂಮಿತಿ ಕಾಯ್ದೆಯಡಿ ಮರುಹಂಚಿಕೆಗಾಗಿ ಉದ್ದೇಶಿತವಾದ ಪ್ರದೇಶವೆಂದರೆ 452,000 ಎಕರೆ. ಕಳೆದ ಎರಡು ವರ್ಷಗಳಲ್ಲಿ 58,000 ಎಕರೆ ವಶ ಪಡಿಸಿಕೊಂಡಿದ್ದು, 5000 ಎಕರೆ ಹಂಚಿಕೆಯಾಗಿದೆ. ವಿವಾದಕ್ಕೆ ಒಳಪಟ್ಟ ಉಳಿದ ಭೂ ಹಂಚಿಕೆ ವಿಚಾರ ನ್ಯಾಯಾಲಯಗಳಲ್ಲಿದೆ.''
ಒಂದು ವರ್ಗದ ಬಡವರಿಗೆ ಸಹಾಯ ಮಾಡಬಹುದಾದ ಪರಿಹಾರದ ಹಾದಿಯೆಂದರೆ-ಅವರ ಸಮಸ್ಯೆಯನ್ನು ಪರಿಹರಿಸು ವುದಲ್ಲ- ಭೂ ಹಂಚಿಕೆ ಸುಧಾರಣೆಯಿಂದ ಪ್ರಸಿದ್ಧ ಪಡಿಸಿದ ಹಾಗೆ ಪಾಲು ಅಥವಾ ಗೇಣಿ ರೈತರಿಗೆ ಹಿಡುವಳಿ ಹಕ್ಕಿನ ಸಂಪೂರ್ಣ ರಕ್ಷಣೆ ನೀಡುವುದು. ಅಂದರೆ ಈಗಾಗಲೆ ನೆಲೆಸಿರುವ ನ್ಯಾಯಯುತ ಗೇಣಿ, ಗೊಬ್ಬರ ಬೀಜ ಮೊದಲಾದ ಕೃಷಿ ಬಳಕೆ ಸಾಮಗ್ರಿಗಳಲ್ಲಿ ಪಾಲು ವ್ಯವಸ್ಥೆ, ಭೂಮಿಯ ದಾಖಲಿತ ಹಕ್ಕುಗಳು, ಅಸಮತೆಗೆ ಕೊನೆ, ಮತ್ತು ಅವರ ಕೃಷಿ ಚಟುವಟಿಕೆಗಳಿಗೆ ಸಾಂಸ್ಥಿಕ ಹಣಕಾಸು ನೆರವನ್ನು ಭರವಸೆಯಂತೆ ತಲುಪಿಸುವುದು (.)'' (ಮೂಲ: 'ಪಶ್ಚಿಮ ಬಂಗಾಳದಲ್ಲಿ ಆಹಾರದ ಕೊರತೆ- ಸಮಸ್ಯೆ ಅಥವಾ ಕಾಯಿಲೆ?', ಲೆಡೆಜಿನ್ಸ್ಕಿ ಲೇಖನಗಳು ; ಉಧೃತ: 'ಆರ್ಥಿಕ ಸರ್ವೇಕ್ಷಣೆ 2004', ಪಶ್ಚಿಮ ಬಂಗಾಳ ಸರಕಾರ, ಪುಟ.37).
ಹೀಗೆ ಲೆಡೆಜಿನ್ಸ್ಕಿಯವರ ಕನಸು ಸಾಮ್ರಾಜ್ಯವಾದಿಗಳಿಂದ ನಿಯಮಿತಗೊಂಡ ಹಾದಿಯಲ್ಲಿ 'ಎಡ' ಪಕ್ಷಗಳಿಂದ ಕಂಡ ಭಾರತವಾಗಿತ್ತು. 'ಹಳೆಯ' ಕ್ರಾಂತಿಕಾರಕ (ಕೂಲಿ ಕಾರ್ಮಿಕರ-ರೈತರ) ಹಾದಿಯನ್ನು 'ಎಡವಾದಿ'ಗಳಿಂದ ಕಳೆದ ಶತಮಾನದ ಅರವತ್ತರ ಕೊನೆಯಲ್ಲಿ ನಿಷೇಧಿತವಾಯಿತು.
ಡಿ.ಬಂಡೋಪಾಧ್ಯಾಯ ಅವರು 2003, ಜುಲೈ 5ರ ಈಪಿಡಬ್ಲ್ಯು ಸಂಚಿಕೆಯಲ್ಲಿ ಹೀಗೆ ಬರೆಯುತ್ತಾರೆ: ಸಂಯುಕ್ರ ರಂಗದ ಎರಡೂ ಸರಕಾರಗಳಲ್ಲಿ ಭೂ ಕಂದಾಯ ಮಂತ್ರಿಯಾಗಿದ್ದ ಹರೆಕೃಷ್ಣ ಕೊನಾರ್ ಅವರು ಬೇನಾಮಿ ಆಗಿರಲಿ ಇಲ್ಲವೆ ಅನ್ಯ ಮಾರ್ಗದ ಮೂಲಕ ಗುಟ್ಟಾಗಿ ಪಡೆದಿರಲಿ ಒಟ್ಟಾರೆಯಾಗಿ ಖಾಸಗಿ ಭೂಮಿಯ ಕಾನೂನು ಬಾಹಿರ ಮುಟ್ಟಗೋಲನ್ನು ಇಡಿಯಾಗಿ ವಿರೋಧಿಸಿದರು. ಖಾಸಗಿ ಆಸ್ತಿ ಸಂಬಂಧದಲ್ಲಿ ವಿಶ್ವದ ಇತರೆಡೆಯಂತೆ ಪಶ್ಚಿಮ ಬಂಗಾಳದ ರೈತರೂ ಅತಿ ಸಂಪ್ರದಾಯಶೀಲರು ಎಂಬುದು ಅವರ ಸಿದ್ಧಾಂತವಾಗಿತ್ತು. ಯಾವುದೇ ರಾಜಕೀಯ ಪಕ್ಷದಿಂದ ಪ್ರಚೋದನೆ ಪಡೆದು ಅವರು ಕಾನೂನು ವಿರುದ್ಧವಾಗಿ ಅಂಥ ಭೂಮಿಯನ್ನು ವಶಪಡಿಸಿಕೊಂಡಿದ್ದಿರಬಹುದು, ಆದರೆ ಇದನ್ನು ಅವರು ಡಕಾಯಿತ ಕೃತ್ಯವೆಂದೂ ನೋಡಬಹುದು. ರಾಜಕೀಯ ಶಕ್ತಿ ಕೇಂದ್ರ ಎಡಪಂಥೀಯರಿಂದ ಮಧ್ಯ ಪಂಥೀಯರಿಗೆ ಅಥವಾ ಬಲಪಂಥೀಯರಿಗೆ ಪಲ್ಲಟಗೊಂಡ ಪರಿಣಾಮವಾಗಿ ಅವರು ಈ ಭೂಮಿಯನ್ನು ಪಡೆಯಲಿಲ್ಲ. ಹಾಗಾಗಿ ಅವರು ಆ ರೀತಿಯಲ್ಲಿ ಸ್ವಾಧೀನ ಪಡಿಸಿಕೊಳ್ಳುವ ಕ್ರಮವನ್ನು ಖಂಡಿಸಿದರು ಮತ್ತು ಕಾನೂನು ಪ್ರಕ್ರಿಯೆಯ ಮೂಲಕ ಹೆಚ್ಚುವರಿ ಭೂಮಿತಿಯ ಪ್ರಾಧಿಕಾರದಡಿ ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳಲು ಒತ್ತಾಯಿಸಿದರು. ಅವರ ನಾಯಕತ್ವದಲ್ಲಿ ರೈತ ಸಭೆಗಳು ಕಂದಾಯ ಅಧಿಕಾರಿಗಳಿಗೆ ಅಧಿಕೃತ ಸಾಕ್ಷಿಗಳನ್ನು ಒದಗಿಸುವ ಮೂಲಕ ಗುಟ್ಟಾಗಿ ಪಡೆದಿದ್ದ ಒಂದು ಮಿಲಿಯನ್ ಎಕರೆ ಫಲವತ್ತಾದ ಭೂಮಿಯನ್ನು ರಾಜ್ಯ ಪ್ರಾಧಿಕಾರದ ವಶಕ್ಕೆ ತರುವ ಕಾರ್ಯವನ್ನು ಇಡಿಯಾಗಿ ಮಾಡಿದವು. ನಿಷ್ಟೂರ ತನಿಖೆಗಳಿಂದ ಮತ್ತು ಭೂ ಮಾಲಿಕರು ತಮ್ಮ ಮೊಕದ್ದಮೆಯ ಅಧಿಕೃತತೆಯನ್ನು ಸಮರ್ಥಿಸಿಕೊಳ್ಳಲು ಅವಕಾಶ ಕೊಡುವ ಸೂಕ್ತ ಪ್ರಕ್ರಿಯೆಯ ಮೂಲಕ ಅಧಿಕಾರಿಶಾಹಿ ವರ್ಗ 'ಹಿಡಿದಿಟ್ಟ' ಭೂಮಿಯನ್ನು ಪತ್ತೆ ಹಚ್ಚುವಲ್ಲಿ ಮಹತ್ವದ ಪಾತ್ರ ವಹಿಸಿತು.''
ಮುಕ್ತಾಯ
ಅತಿಯಾಗಿ ವೈಭವೀಕರಿಸಿದ ಭೂ ಸುಧಾರಣೆಯ ಶಾಸನ ಈಗಿರುವ ಭೂ ಒಡೆತನದ ವಿನ್ಯಾಸದಲ್ಲಿ ಯಾವುದೇ ಮಹತ್ವದ ಗುರುತು ಮಾಡುವಲ್ಲಿ ವಿಫಲವಾಯಿತು ಎಂದು ಈ ಮೇಲಿನ ಚಿತ್ರದಿಂದ ಸ್ಪಷ್ಟವಾಗುತ್ತದೆ. ಇದರ ಪರಿಣಾಮವಾಗಿ ಅರವತ್ತರ ವರೆಗೂ ಉತ್ಪನ್ನದಲ್ಲಿ ಹೆಚ್ಚಳ ಉಂಟಾಗದೆ ಹೋಯಿತು. ಸರಕಾರ ಸಾಮ್ರಾಜ್ಯವಾದಿ ದೇಶಗಳಿಂದ ಆಹಾರ ಧಾನ್ಯಗಳನ್ನು ಆಮದು ಮಾಡಿ ದೇಶದ ಜನಸಂಖ್ಯೆಯ ಹಸಿವು ಹಿಂಗಿಸಿತು. ಬಹುಪಾಲು ಬಡ ರೈತರಿಗೆ ಕೊಳ್ಳುವ ಶಕ್ತಿಯ ಕೊರತೆ ಮತ್ತು ಮಿತಿ ಮೀರಿದ ಆಹಾರ ಪದಾರ್ಥಗಳ ಬೆಲೆಗಳ ಫಲವಾಗಿ ವ್ಯಾಪಕ ಅಶಾಂತಿ ಹೆಚ್ಚಿತು. ಈ ಅವಧಿಯಲ್ಲಿ ಆಹಾರ ಸಾಗಣೆ ವಾರ್ಷಿಕ ವ್ಯವಹಾರವಾಯಿತು. ಈ ಕಾಲಾವಧಿ ಪೂರ್ತಿ ಭೂ ಮಿತಿ, ಭೂ ಹಂಚಿಕೆ, ಕ್ರೋಡೀಕರಣ, ಗೇಣಿ ದರ ಏರಿಕೆ, ಭೂ ಸ್ವಾಧೀನ ಮುಂತಾದ ಪ್ರಶ್ನೆಗಳನ್ನ ಕುರಿತು ರೈತ ಚಳವಳಿಗಳ ಮಾಲೆಯೆ ನಡೆಯಿತು. ಈ ಎಲ್ಲ ಚಳವಳಿಗಳು ಕ್ರಮೇಣ ತಮ್ಮ ವೇಗವನ್ನು ಹೆಚ್ಚಿಸಿ 1967ರಲ್ಲಿ ನಕ್ಸಲ್ ಬಾರಿಯಲ್ಲಿ ಕೂಲಿ-ಕಾರ್ಮಿಕರು ಮತ್ತು ರೈತರು ದಂಗೆ ಏಳುವಂತೆ ಮಾಡಿತು. ಕಾಂಗ್ರೆಸ್ ಆಡಳಿತದ ಭೂ ಸುಧಾರಣೆಗಳಿಗೆ ವಿರುದ್ಧವಾಗಿ ಕಮ್ಯೂನಿಸ್ಟ್ ಚಳವಳಿ ಪರ್ಯಾಯ ಹಾದಿಯನ್ನು ಬಹಳ ಹಿಂದೆಯೆ ರೂಪಿಸಿತ್ತು. ಅದನ್ನು ಮೊದಲ ಬಾರಿಗೆ ತೆಲಂಗಣ ಬಂಡಾಯ ಕಾಲದಲ್ಲಿ ಪ್ರಯೋಗಿಸಲಾಯಿತು. ತೆಲಂಗಣ ಮತ್ತು ನಕ್ಸಲ್ ಬಾರಿ ದಂಗೆಗಳೆಡರ ಸಾರವೆಂದರೆ ಜಮೀನ್ದಾರರ ಸ್ಥಿರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಜಮೀನ್ದಾರಿ ಆಳ್ವಿಕೆಯನ್ನು ಸಂಪೂರ್ಣವಾಗಿ ಇನ್ನಿಲ್ಲದಂತೆ ಮಾಡಿದ್ದು. ಭೂಮಿ ಮುಟ್ಟುಗೋಲು ಮತ್ತು ನಂತರದಲ್ಲಿ ಭೂ ಹೀನರಿಗೆ ಭೂ ಮರುಹಂಚಿಕೆಯಿಂದಾದ ಪರಿಣಾಮ- ಅಧಿಕಾರಿಶಾಹಿಯನ್ನು ಅವಲಂಬಿಸಿದ್ದರಿಂದ ಆಗಿರದೆ-ರೈತ ಸಮೂಹ ತಾವೇ ಆರಂಭಿಸಿದ ಕ್ರಮಗಳಿಂದ ಉಂಟಾಯಿತು. ಈ ಎರಡೂ ದಂಗೆಗಳಲ್ಲಿ ಗಿರವಿ, ಬಡ್ಡಿ , ಮತ್ತು ಎಲ್ಲ ಬಗೆಯ ಸಾಮಾಜಿಕ ತುಳಿತದ ರೂಪಗಳನ್ನೊಳಗೊಂಡ ಸಮಸ್ತ ಅರೆ ಊಳಿಗಮಾನ್ಯ ಸಂಬಂಧಿತ ಮೇಳದ ಮೇಲೆ ದಾಳಿ ಮಾಡಲಾಯಿತು, ಮತ್ತು ರಾಜ್ಯ ಸರಕಾರದ ದಮನ ಪಡೆಯ ಕೈಯಿಂದ ಶ್ರಮಿಕ ಸಮೂಹ ತಮ್ಮ ಗಳಿಕೆಯನ್ನು ರಕ್ಷಿಸಿಕೊಳ್ಳುವಂತೆ ತಿಳಿಸಲಾಯಿತು ಎಂಬುದನ್ನು ಎತ್ತಿ ಹೇಳಬೇಕು. ಹಳೆಯ ಭೂ ಸಂಬಂಧಗಳನ್ನು ನಾಶ ಮಾಡುವ ಮೂಲಕ ಅವರು ಹೊಂದಿದ್ದ ಎಲ್ಲ ಬಗೆಯ ಮೂಢನಂಬಿಕೆಗಳು ಮತ್ತು ಪೂರ್ವಗ್ರಹಗಳನ್ನೂ ನಾಶ ಮಾಡಿದರು, ಹಳೆಯ ಸಮಾಜದ ಗುಲಾಮಗಿರಿಯಿಂದ ರೈತರನ್ನು ಬಿಡುಗಡೆಗೊಳಿಸಿದರು. ಈ ಎರಡು ಚಳವಳಿಗಳಲ್ಲಿ ತೆಲಂಗಣ ಮಾರ್ಗದರ್ಶಕವಾಗಿದ್ದು, ತುಂಬ ವ್ಯಾಪಕ ಪ್ರದೇಶವನ್ನು ಒಳಗೊಂಡಿತ್ತು ಮತ್ತು ಹೆಚ್ಚು ಅವಧಿಯ ವರೆಗೆ ನಡೆಯಿತು. ಹೀಗಿದ್ದರೂ ಸುಧಾರಣಾವಾದಿ ನಾಯಕರ ವಂಚನೆಯಿಂದಾಗಿ ಇನ್ನೂ ಹೆಚ್ಚಿನ ಪ್ರದೇಶಗಳಲ್ಲಿ ಚಳವಳಿ ಹಬ್ಬಿ ಬೆಳೆಯಲು ಸಾಧ್ಯವಾಗಲಿಲ್ಲ. ತೆಲಂಗಣ ಬಂಡಾಯ ನಡೆದ ದೀರ್ಘ ಹದಿನಾರು ವರುಷಗಳ ಕಾಲದ ನಂತರ ನಕ್ಸಲ್ ಬಾರಿ ಚಳವಳಿ ನಡೆಯಿತು. ವೈಭವದ ತೆಲಂಗಣ ಚಳವಳಿ ಸ್ಥಾಪಿಸಿದ ಹಾದಿಯಲ್ಲೆ ಮತ್ತೆ ರೈತರ ದಂಗೆ ನಕ್ಸಲ್ ಬಾರಿಯಲ್ಲಿ ತನ್ನ ಬಾವುಟವನ್ನು ಮೇಲಕ್ಕೇರಿಸಿತು. ನಕ್ಸಲ್ ಬಾರಿ ಚಳವಳಿಯನ್ನೂ ಅಲ್ಪ ಕಾಲಾವಧಿಯಲ್ಲೆ ದಮನಿಸಲಾಯಿತಾದರೂ ಅದು ಹೊರಹಾಕಿದ ಸುಧಾರಣಾವಾದಿ ಸಿದ್ಧಾಂತ ಮತ್ತು ಪರ್ಯಾಯವಾಗಿ ಸ್ಥಾಪಿಸಿದ ಕ್ರಾಂತಿಕಾರಿ ಹಾದಿ ಅದರ ಪ್ರಾಮುಖ್ಯತೆಯ ಚಿಹ್ನೆಯಾಗಿದೆ. ಇದು ನಕ್ಸಲ್ ಬಾರಿಯ ಹಾದಿಯೆಂದೇ ಹೆಸರು ಪಡೆದಿದೆ. ಸಿಪಿಎಂಎಲ್ ನಂತರದಲ್ಲಿ ಅರಾಜಕತಾವಾದಿಗಳಾಗಿ ತಿರುವು ಪಡೆದು ದೇಶದಾದ್ಯಂತ ಶಕ್ತಿಶಾಲಿಯಾಗಿ ಬೆಳೆಯುತ್ತಿದ್ದ ಕೃಷಿ ಹೋರಾಟದ ಚಿಗುರನ್ನು ಎಳೆಯದರಲ್ಲೆ ಚಿವುಟಿ ಹಾಕಿತು. ಆದರೆ ನಕ್ಸಲ್ ಬಾರಿ ಮತ್ತು ನಂತರದಲ್ಲಿ ಶ್ರೀಕಾಕುಲಂ, ಮುಶಹರಿ, ಖಾರಿ ಮುಂತಾದ ದಂಗೆಗಳು 1969ರ ವರೆಗೂ ನಡೆಯುತ್ತಿದ್ದುದನ್ನು ತಳ್ಳಿಹಾಕುವಂತಿಲ್ಲ. ಇದರಿಂದ ಆಡಳಿತ ವರ್ಗ ಮತ್ತದರ ಪಕ್ಷ ನವೀನ ಮಾರ್ಗೋಪಾಯಗಳನ್ನು ಹುಡುಕಿ ರೈತರ ಕಣ್ಣು ಕಟ್ಟಿಹಾಕಿತು. ಅಲ್ಲಿಂದ ಎಲ್ಲ ರಾಜ್ಯಗಳಲ್ಲಿ ಭೂ ಮಿತಿ ಕಡಿತಗೊಳಿಸಿದ ಭೂ ಸುಧಾರಣಾ ತಿದ್ದುಪಡಿ ಕಾನೂನು, ಗುಪ್ತನಿಧಿ ನಿಷೇಧ, ಹಸಿರು ಕ್ರಾಂತಿ ಘೋಷಣೆ ಮತ್ತು ಇಪ್ಪತ್ತು ಅಂಶದ ಕಾರ್ಯಕ್ರಮ 1967ರ ವರೆಗೆ ಕೈಗೆತ್ತಿಕೊಳ್ಳಲಾಯಿತು. ಹೀಗಿದ್ದರೂ ಹಿಂದಿನ ಭೂಮಿತಿ ಅಡೆತಡೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದ ಜಮೀನ್ದಾರರರು ಈ ಬಾರಿಯೂ ಸರಿಹೊಂದಿಸಿಕೊಳ್ಳಬಲ್ಲವರಾಗಿದ್ದರು. ಶಾಸನ ಸಭೆಯ ತಮ್ಮ ಪ್ರತಿನಿಧಿಗಳು ಕಾನೂನು ಕ್ರಮಗಳಲ್ಲಿ ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಒಂದಕ್ಕೊಂದು ಸರಿಹೊಂದುವಂತೆ ನ್ಯೂನತೆಗಳನ್ನು ಉಂಟುಮಾಡಿದ್ದರು. ಹಾಗಾಗಿ ಅವರಿಗೆ ಮುಖ್ಯವಾಗಿ ವಂದನೆ ಸಲ್ಲಿಸಿದರು.
ನಕ್ಸಲ್ ಬಾರಿ ನಂತರ ಮೂರು ಬೇರೆ ಬೇರೆ ದಿಕ್ಕುಗಳಲ್ಲಿ ರೈತ ಚಳವಳಿ ಮುಂದುವರೆಯಿತು. ಸಿಪಿಎಂಎಲ್ ಅರಾಜಕವಾದಿ ತಿರುವು ಪಡೆದಾಗ, ಭಯೋತ್ಪಾದನೆ ಮತ್ತು ಉದ್ದೇಶಪೂರ್ವಕವಾಗಿ ತಡೆಹಿಡಿಯಲ್ಪಟ್ಟಿದ್ದ ಭೂಮಿ ಪ್ರಶ್ನೆಯೊಂದಿಗೆ ಸುಧಾರಣಾವಾದಿಗಳು ನಕ್ಸಲ್ ಬಾರಿಯ ಸರಿಯಾದ ಹಾದಿಯನ್ನು ವಿರೋಧಿಸಲು ಒಂದು ಬಗೆಯ ಸಶಸ್ತ್ರ ಆರ್ಥಿಕವಾದಿ ರೂಪದಲ್ಲಿರಲು ಪ್ರಯತ್ನಿಸಿದರು. ಅವರು ಅಧಿಕೃತ ಮತ್ತು ಬೇನಾಮಿ ಭೂಮಿಯನ್ನು ದೋಚಲು ಸಶಸ್ತ್ರ ಚಳವಳಿಯನ್ನು ಆರಂಭಿಸಿದರೂ ಪ್ರಚಲಿತ ಕಾನೂನು ರಚನೆಯ ಮಿತಿಗಳನ್ನು ದಾಟಲು ಸಾಧ್ಯವಾಗಿಲ್ಲ. 1972ರ ನಂತರದಲ್ಲಿ ಆಡಳಿತ ವರ್ಗದ ದಬ್ಬಾಳಿಕೆಯಿಂದ ಉಂಟಾದ ಒತ್ತಡದಿಂದ ಸುಧಾರಣಾವಾದಿಗಳು ಈ ಹಾದಿಯನ್ನೂ ಕೈ ಬಿಟ್ಟರು. ಜುಗುಪ್ಸೆಗೊಂಡ ರೈತರನ್ನು, ಕಮ್ಯೂನಿಸ್ಟ್ ನಾಯಕತ್ವದಿಂದ ಬೇಸತ್ತವರನ್ನು ಈಗ ಸಾಮಾನ್ಯವಾಗಿ ಸಶಸ್ತ್ರ ಸುಧಾರಣಾವಾದಿಗಳು ಮತ್ತು ವ್ಯಕ್ತಿಗತ ಉದ್ಧಾರಕರಾದ ಜೋಶಿ ಅಥವಾ ಟೈಕತ್ ರಂಥವರು ಸಂಘಟಿಸುತ್ತಿದ್ದಾರೆ. ಇವರಾರೂ ವರ್ಗ ಹೋರಾಟದ ಮೇಲೆ ಒತ್ತು ಹಾಕಿಲ್ಲವಾದರೂ ಅಸ್ಪಷ್ಟವಾಗಿ ನಗರ-ಗ್ರಾಮೀಣ ವೈರುಧ್ಯ ಕುರಿತು ಮಾತಾಡುತ್ತಾರೆ.
ಭಾರತದಲ್ಲಿ ಭೂ ಸುಧಾರಣೆಗಳು ನಡೆದಿರುವುದು ಅತಿ ಕಡಿಮೆ ಹಾಗೂ ಅವನ್ನು ಬೇರು ಮಟ್ಟದಲ್ಲೆ ಉಳಿಸಲಾಗಿದೆ ಎಂಬುದನ್ನು ಅಂಕಿಅಂಶಗಳು ಕಾಣಿಸುತ್ತವೆ. ಅಂಕಿ ಅಂಶಗಳನ್ನು ನೋಡದವರು ಭೂ ಸುಧಾರಣೆಯ ವ್ಯಾಪ್ತಿ ಕುಗ್ಗುತ್ತಿದೆ ಎಂದು ವಾದಿಸುತ್ತಾರೆ. ಪ್ರಭುತ್ವ ಅಂದರೆ ಕೇಂದ್ರ ಪ್ರಾಧಿಕಾರ ನಾಶವಾಗಬೇಕು ಇಲ್ಲದಿದ್ದರೆ ಬೇರು ಮಟ್ಟದ ಸುಧಾರಣೆಗಳು ಎಂದಿಗೂ ಜಾರಿಗೊಳ್ಳುವುದಿಲ್ಲ, ಅಷ್ಟೇಅಲ್ಲ ಅಲ್ಲಿಯವರೆಗೂ ಆಗಿರುವ ಶಾಸನಗಳು ಮುಖ್ಯವಾಗುವುದಿಲ್ಲ, ನಿಜವಾಗಿ ಯಾವ ಬದಲಾವಣೆಗಳನ್ನು ಶಾಸನಗಳ ಮೂಲಕ ತರಲಾಗುತ್ತದೆಯೋ ಅಂಥ ಬದಲಾವಣೆಗೆ ಅರೆ-ಊಳಿಗಮಾನ್ಯ ಅಂಶಗಳು ಎಲ್ಲ ಕಾಲಕ್ಕೂ ಸರಿ ಹೊಂದಿಸಿಕೊಳ್ಳುತ್ತವೆ. ಕೇಂದ್ರೀಯ ಪ್ರಾಧಿಕಾರದಿಂದ ಊಳಿಗಮಾನ್ಯ ಅಂಶಗಳನ್ನು ಕಿತ್ತೊಗೆದು ಒಮ್ಮೆ ಮಧ್ಯಮವರ್ಗ ಅಧಿಕಾರ ವಹಿಸಿಕೊಂಡು ಬಿಟ್ಟರೆ 10ರಿಂದ 15 ವರ್ಷಗಳಲ್ಲಿ ಹಿಂಸಾಕೃತ್ಯಗಳಿಲ್ಲದೆಯೂ ಕೃಷಿಕ್ಷೇತ್ರದಲ್ಲಿ ಬದಲಾವಣೆಗಳಾಗಿ ಬಿಡುತ್ತವೆ ಎಂದು ಲೆನಿನ್ ಹಿಂದೆಯೇ ಸಾರಿ ಹೇಳಿದ್ದರು. ಹೀಗಿದ್ದರೂ ಭಾರತದಲ್ಲಿ ಭೂ ಸುಧಾರಣೆ ಕಾನೂನು ಜಾರಿಗೆ ಬಂದು 40 ವರುಷಗಳಾಗಿ ನಾವು ಹಳೆಯ ಒಡೆತನದ ವಿನ್ಯಾಸದಲ್ಲಿ ಯಾವ ಮೂಲ ಬದಲಾವಣೆಗಳನ್ನೂ ಕಾಣುತ್ತಿಲ್ಲ. ಇಡೀ ದೇಶವನ್ನು ವ್ಯಾಪಿಸಬೇಕಿದ್ದ ಕ್ರಾಂತಿಕಾರಕ ಭೂ ಸುಧಾರಣೆಯ ಕಾರ್ಯಗಳು ಹೀಗೆ ಬಹುಪಾಲು ಕಾರ್ಯಸೂಚಿಯಲ್ಲೆ ಉಳಿದುಬಿಟ್ಟಿದೆ.
ನಮ್ಮ ಕೃಷಿಕ್ಷೇತ್ರದಲ್ಲಿ ಬದಲಾವಣೆಗಳು ಇಲ್ಲವೆಂದೆ ಇದರರ್ಥ? ಈ ಪ್ರಶ್ನೆಗೆ ಉತ್ತರ ನೀಡಲು ಪ್ರಸ್ತುತ ಕೃಷಿಕ್ಷೇತ್ರದ ಸ್ಥಿತಿಗತಿಗಳನ್ನು ವಿವರವಾಗಿ ಪರಿಶೀಲಿಸುವ ಅಗತ್ಯವಿದೆ.
-ಸುಬೋಧ ಮಿತ್ರ