ಇತರರನ್ನು ಒಳ್ಳೆಯತನದಿಂದ, ಸೌಜನ್ಯದಿಂದ ನಡೆಸಿಕೊಳ್ಳಬೇಕು ಎಂಬ ಮೌಲ್ಯದ ಮೇಲೆ
ಸಿಂಗರ್ ನ ಈ ಕತೆ ಒತ್ತು ಹಾಕಿದೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ
ಪ್ರತಿಯೊಬ್ಬರೊಂದಿಗೂ ವಿನಯದಿಂದ ಉತ್ತಮವಾಗಿ ವರ್ತಿಸಬೇಕು. ಕೆಟ್ಟ ನಡತೆ ನಮ್ಮ
ಸಂಬಂಧಗಳನ್ನು ನಾಶಪಡಿಸುವುದಲ್ಲದೆ ನೋವು ಮತ್ತು ಕಹಿ ಅನುಭವಗಳಿಗೆ ಕಾರಣವಾಗುತ್ತದೆ. ಈ
ಸತ್ಯವನ್ನು ಈ ಕತೆಯಲ್ಲಿ ಬಿಸಿರಕ್ತದ ಇಟ್ಟೆ ಎಂಬ ಯುವತಿ ದೊಡ್ಡ ಬೆಲೆ ತೆತ್ತು
ಅರಿಯುತ್ತಾಳೆ. ಶ್ರೀಮಂತ ಮಹಿಳೆಯೊಬ್ಬಳು ತನ್ನ ಒಬ್ಬನೇ ಮಗನಿಗಾಗಿ ಒಳ್ಳೆಯ ನಡತೆಯ
ಹೆಣ್ಣನ್ನು ಅರಸುವುದರ ಸುತ್ತ ಈ ಕತೆ ಇದೆ. ಸಣ್ಣಪುಟ್ಟ ಸಂಗತಿಗಳಾದ ನಮ್ಮ ಅಂಗಸನ್ನೆಗಳು
ಮತ್ತು ಶುಭಕಾಮನೆಗಳು ಹೇಗೆ ನಮ್ಮ ವ್ಯಕ್ತಿತ್ವವನ್ನು ಹೇಳುತ್ತವೆ ಎಂಬ ಕತೆಗಾರರ
ಅಭಿಪ್ರಾಯವನ್ನು ನಾವು ಒಪ್ಪಬೇಕಾಗುತ್ತದೆ ಎಂದು ಹೇಳಲಾಗಿದೆ. ಹೀಗಿದ್ದರೂ ಮದುವೆಯ ಮೂಲಕ
ಮನೆಯಹೊಸ ಸದಸ್ಯಳಾಗಲಿರುವ ಮದುಮಗಳನ್ನು ಆರಿಸುವ ಪ್ರಕ್ರಿಯೆ ಹೊಸವಿಧಾನದೊಂದಿಗೆ
ಆಕರ್ಷಕವಾಗಿದೆ.
* *
ಸೂಜಿ
-ಐಸಾಕ್ ಬಾಶೆವಿಸ್ ಸಿಂಗರ್
'ನನ್ನ ಪ್ರೀತಿಯ ಜನರೇ, ಇತ್ತೀಚಿನ ದಿನಗಳಲ್ಲಿ ಎಲ್ಲ ಮದುವೆಗಳು ಕಾಮನಿಂದಲೆ ಜರುಗುತ್ತವೆ. ಹರೆಯದ ಹುಡುಗರು ಪ್ರೀತಿಗೆ ಬೀಳುತ್ತಾರೆ, ಜೊತೆಯಲ್ಲಿ ಓಡಾಡಲು ತೊಡಗುತ್ತಾರೆ. ಅವರು ಜಗಳ ಆರಂಭಿಸುವ ವರೆಗೂ ಒಟ್ಟಿಗೆ ಹೊರಗೆ ಹೋಗುತ್ತಾರೆ, ನಂತರ ಒಬ್ಬರಿಗೊಬ್ಬರು ಕತ್ತಿ ಮಸೆಯುತ್ತಾರೆ. ನಮ್ಮ ಕಾಲದಲ್ಲಿ ಅಪ್ಪ ಅಮ್ಮಂದಿರನ್ನು, ಸಂಬಂಧ ಕುದುರಿಸುವ ಮಧ್ಯಸ್ಥಿಕೆದಾರರನ್ನು ನಂಬಿಕೊಂಡು ಇದ್ದಿವಿ. ನನ್ನ ಮುಖದ ಮೇಲಿನ ಪರದೆಯನ್ನು ಆತ ಎತ್ತುವ ಮದುವೆ ಸಮಾರಂಭ ನಡೆಯುವ ವರೆಗೂ ಸ್ವತಹ ನಾನೇ ನನ್ನ ಟಾಡ್ಡಿಯ ಮುಖವನ್ನು ನೋಡಿರಲಿಲ್ಲ. ಕೆಂಪುಗಡ್ಡ ಮತ್ತು ಕೆದರಿದ ಸೈಡ್ ಲಾಕ್ ನೊಂದಿಗೆ ಆತ ಅಲ್ಲಿದ್ದರು. ಅದು ಸುಗ್ಗಿ ಹಬ್ಬದ ನಂತರ ಚಳಿಗಾಲ ಆಗಿದ್ದರಿಂದ ಆತ ಉಣ್ಣೆಯ ಕೋಟು ಹಾಕಿಕೊಂಡಿದ್ದರು. ಸ್ವರ್ಗಲೋಕದ ಪವಾಡ ನಡೆದಿದ್ದರಿಂದ ನಾನು ಅಶಕ್ತತೆಯಿಂದ ತಲೆತಿರುಗಿ ಸತ್ತು ಹೋಗಲಿಲ್ಲ. ಬೇಸಿಗೆ ಕಾಲದುದ್ದಕ್ಕೂ ನಾನು ಉಪವಾಸ ಮಾಡಿದ್ದೆ. ನನಗೆ ತುಂಬಾ ಬೇಕಾದ ಸ್ನೇಹಿತರ ಜೀವನ, ನಾನು ನನ್ನ ಗಂಡನ ಜೊತೆ ಅನುಭವಿಸಿದ ಜೀವನಕ್ಕಿಂತ ಚೆನ್ನಾಗಿರಲಿ ಅಂತ ಅವರಿಗೆ ಹಾರೈಸುತ್ತಿದ್ದೆ. ಬಹುಶಹ ನಾನಿದನ್ನು ಹೇಳಲ್ಲ, ಆದರೆ ನಮ್ಮ ಆತ್ಮಗಳು ಮತ್ತೆ ಒಂದಾಗುವ ವರೆಗೂ ನಾನು ಕಾಯಲಿಲ್ಲ.
'ಹೌದು, ಪ್ರೀತಿಪಾತ್ರರೇ, ತಮಗೆ ಯಾವುದು ಒಳ್ಳೆಯದು ಎಂದು ಯುವಕ ಯುವತಿಯರಿಗೇನು ಗೊತ್ತು? ಅದರ ಗುರುತುಗಳನ್ನು ತಾಯಂದಿರು ಮಾತ್ರ ತಿಳಿಯಲು ಬಯಸುತ್ತಾರೆ. ಕ್ರಾಸ್ನೋಸ್ಟಾದಲ್ಲಿ ಒಬ್ಬ ಹೆಂಗಸು ವಾಸವಾಗಿದ್ದಳು, ಅವಳ ಹೆಸರು ರಿಜೆ ಲೀ ಅಂತಾ. ಅವಳು ತನ್ನ ಗಂಡು ಮಕ್ಕಳಿಗೆ ಹೆಣ್ಣು ನೋಡುತ್ತಿದ್ದಳು. ಆಗ ಅಕೆ ತನ್ನ ಭಾವಿ ಸೊಸೆಯಂದಿರನ್ನು ಬೆಳ್ಳಂಬೆಳಗ್ಗೆಯೆ ಹಿಡಿದು ಇಕ್ಕಟ್ಟಿಗೆ ಸಿಕ್ಕಿಸುತ್ತಿದ್ದಳು. ಹಾಸಿಗೆ ಮೇಲಿನ ಹೊದಿಕೆ ಕೊಳೆಯಾಗಿದ್ದರೆ, ತಲೆ ಬಾಚಿಕೊಳ್ಳದೆ ಪ್ರಶ್ನೆ ಮಾಡಿ ಬಾಗಿಲು ತೆಗೆದರೆ, ಅಸ್ತವ್ಯಸ್ತವಾಗಿ ಗೌನು ಹಾಕಿಕೊಂಡಿದ್ದನ್ನು ಕಂಡರೆ ಅವಳು ಬಿಡುತ್ತಿರಲಿಲ್ಲ. ಅದಕೂ ಮೊದಲು ಅಕ್ಕಪಕ್ಕದ ಹಳ್ಳಿಯಲ್ಲಿ ಎಲ್ಲರೂ ಅವಳ ಮೇಲೆ ಕಣ್ಣಿಟ್ಟಿದ್ದರು. ಅವಳೇನಾದರೂ ಬೆಳಬೆಳಗ್ಗೇನೆ ಮಾರುಕಟ್ಟೆಯಲ್ಲಿ ಕಣ್ಣಿಗೆ ಬಿದ್ದರೆ ವಯಸ್ಸಿಗೆ ಬಂದ ಎಲ್ಲ ಹುಡುಗಿಯರು ತಮ್ಮ ಮನೆ ಬಾಗಿಲು ಚಿಲಕ ಭದ್ರವಾಗಿ ಹಾಕಿದೆಯೆ ಅಂತ ಖಚಿತ ಮಾಡಿಕೊಳ್ಳುತ್ತಿದ್ದರು. ಅವಳಿಗೆ ದೃಢಕಾಯರಾದ ಆರು ಜನ ಗಂಡುಮಕ್ಕಳಿದ್ದರು. ಅವಳು ಹುಡುಕಿ ತಂದು ಮದುವೆ ಮಾಡಿದ ಯಾವ ಹೆಣ್ಣೂ ಅವರಿಗೆ ಸರಿಜೋಡಿ ಆಗಲಿಲ್ಲ. ಅದು ಇನ್ನೊಂದು ಕತೆ. ಮದುವೆಗೆ ಮುಂಚೆ ಹುಡುಗಿ ಚೊಕ್ಕಟವಾಗಿರಬೇಕು, ಅಚ್ಚುಕಟ್ಟಾಗಿರಬೇಕು; ಆದರೆ ಮದುವೆ ಆದಮೇಲೆ ಅವಳು ಕಚಡಾ ಹೆಂಗಸಾಗಬಹುದು. ಪ್ರತಿಯೊಂದೂ ಅವರವರ ಅದೃಷ್ಟದ ಮೇಲೆ ನಿಂತಿದೆ.
'ನಿಮಗೊಂದು ಕತೆ ಹೇಳಬೇಕು. ಹ್ರೂಬೈಶೋನಲ್ಲಿ ರೆಬ್ ಲೆಮೆಲ್ ವ್ಯಾಗ್ಮಿಸ್ಟರ್ ಅಂತೊಬ್ಬ ಸಾಹುಕಾರ ಇದ್ದ. ಅ ದಿನಗಳಲ್ಲಿ ನಾವು ಮನೆತನದ ಹೆಸರುಗಳನ್ನು ಬಳಸುತ್ತಿರಲಿಲ್ಲ. ರೆಬ್ ಲೆಮೆಲ್ ತುಂಬಾ ಶ್ರೀಮಂತನಾಗಿದ್ದರೂ ವ್ಯಾಗ್ಮಿಸ್ಟರ್ ಎಂದೇ ಅವನನ್ನು ಯಾವಾಗಲೂ ಕರೆಯಲಾಗುತ್ತಿತ್ತು. ಅವನ ಹೆಂಡತಿಯ ಹೆಸರು ಎಸ್ತರ್ ರೋಸಾ. ಆಕೆ ವಿಸ್ತುಲಾದ ಇನ್ನೊಂದು ಪ್ರದೇಶದವಳು. ನಾನವಳನ್ನು ನನ್ನ ಕಣ್ಣಾರೆ ಕಂಡಿದ್ದೇನೆ. ದೊಡ್ಡ ನಗರದ ಗಾಳಿ ಬಡಿದ ಅವಳು ಸುಂದರವಾದ ಹೆಂಗಸು. ಯಾವಾಗಲೂ ತನ್ನ ವಿಗ್ ಮೇಲೆ ಕಪ್ಪು ದಾರದ ಮುಸುಕು ಹಾಕಿಕೊಳ್ಳುತ್ತಿದ್ದಳು. ಅವಳ ಮುಖ ಬಾಲೆಯೊಬ್ಬಳ ಮುಖದ ಹಾಗೆ ಬೆಳ್ಳಗೂ ಮೆತ್ತಗೂ ಇತ್ತು. ಅವಳ ಕಣ್ಣು ಕಪ್ಪಗಿದ್ದವು. ಅವಳು ರಷ್ಯನ್, ಪೊಲಿಷ್, ಜರ್ಮನ್, ಬಹುಶಹ ಫ್ರೆಂಚ್ ಕೂಡ ಮಾತಾಡುತ್ತಿದ್ದಳು. ಪಿಯಾನೊ ನುಡಿಸುತ್ತಿದ್ದಳು. ರಸ್ತೆಗಳು ಕೆಸರಿನಿಂದ ಕೂಡಿದ್ದಾಗಲೂ ಅವಳು ಹೈಹೀಲ್ಡ್ನ ಪೇಟೆಂಟ್ ಲೆದರ್ ಶೂಗಳನ್ನೆ ಹಾಕಿಕೊಳ್ಳುತ್ತಿದ್ದಳು. ಮಾಗಿ ಕಾಲದಲ್ಲೊಂದು ದಿನ ತನ್ನ ಲಂಗವನ್ನು ಮೇಲೆತ್ತಿ ಕಲ್ಲಿನಿಂದ ಕಲ್ಲಿಗೆ ಹಕ್ಕಿಯಂತೆ ಜಿಗಿಯುತ್ತಿದ್ದ ಆ ನೈಜ ಮಹಿಳೆಯನ್ನು ನಾನು ನೋಡಿದೆ. ಅವರಿಗೆ ಒಬ್ಬನೇ ಒಬ್ಬ ಮಗ ಇದ್ದ. ಬೆನ್ ಜಿಯಾನ್. ಅವನು ತನ್ನ ತಾಯಿಯಂತೆ, ನೀರಿನ ಎರಡು ಹನಿಗಳಂತಿದ್ದ. ಅವಳ ಕಡೆಯಿಂದಲ್ಲ, ಅವಳ ಗಂಡನ ಕಡೆಯಿಂದ ನಾವು ದೂರದ ಸಂಬಂಧಿಕರಾಗಿದ್ದೆವು. ಬೆಂಜ್ ಎಂದು ಕರೆಯಲಾಗುತ್ತಿದ್ದ ಬೆನ್ ಜಿಯಾನ್ ಪ್ರತಿಯೊಂದೂ ಸದ್ಗುಣವನ್ನು ಹೊಂದಿದ್ದ. ಅವನು ಸುಂದರನೂ ಬುದ್ಧಿವಂತನೂ ತಿಳುವಳಿಕಸ್ಥನೂ ಆಗಿದ್ದ. ಹಗಲಿನ ಹೊತ್ತಿನಲ್ಲಿ ರಾಬ್ಬಿ ಜೊತೆಗೂಡಿ ಅವನು ಯಹೂದಿ ಧರ್ಮಶಾಸ್ತ್ರವನ್ನು ಕಲಿಯುತ್ತಿದ್ದನು, ಸಂಜೆಯ ವೇಳೆ ಅಧ್ಯಾಪಕರಲ್ಲೊಬ್ಬರು ಧರ್ಮಾತೀತ ವಿಷಯಗಳನ್ನು ಕುರಿತು ಹೇಳಿಕೊಡುತ್ತಿದ್ದರು. ಬೆಂಜ್ ತನ್ನ ತಾಯಿಯಂತೆ ಕಪ್ಪನೆಯ ಕೂದಲು ಮತ್ತು ಬಿಳಿಯ ಮೈಬಣ್ಣವನ್ನು ಹೊಂದಿದ್ದನು. ಬೇಸಿಗೆಯ ದಿನಗಳಲ್ಲಿ ಬಾಲಕರ ಸುಂದರ ಬೂಟುಗಳನ್ನು ತೊಟ್ಟು ಆಧುನಿಕ ಶೈಲಿಯಲ್ಲಿ ಹಿಂದುಗಡೆ ಹರಿದಂತಿರುವ ತನ್ನ ಸೊಗಸಾದ ಹತ್ತಿ ಬಟ್ಟೆಯ ಉಡುಪನ್ನು ಉಟ್ಟು ಹೊರನಡಿಗೆ ಕೈಗೊಂಡನೆಂದರೆ, ಎಲ್ಲ ಹುಡುಗಿಯರು ಕಿಟಕಿಯ ಮೂಲಕ ಅವನ ಮೇಲೆ ಚಂದ್ರಹಾಸ ಬೀರುತ್ತಿದ್ದರು. ಹೀಗಿದ್ದರೂ ಕೂಡ ಹೆಣ್ಣುಮಕ್ಕಳಿಗೆ ಮಾತ್ರ ವರದಕ್ಷಿಣೆ ಕೊಡುವ ಪದ್ಧತಿ ಇದೆ. ಬೆಂಜ್ ನ ತಂದೆ ತನ್ನ ಮಗನಿಗಾಗಿ ಹತ್ತು ಸಾವಿರ ರೂಬೆಲ್ ಗಳ ಮೊತ್ತವನ್ನು ತೆಗೆದಿರಿಸಿದ್ದ. ಅವನಿಗದು ಯಾವ ವ್ಯತ್ಯಾಸ ಉಂಟುಮಾಡಬಲ್ಲದು? ಬೆಂಜ್ ಆತನ ಏಕಮಾತ್ರ ವಾರಸುದಾರನಾಗಿದ್ದ. ಆ ಸೀಮೆಯ ಅತಿ ಶ್ರೀಮಂತ ಹುಡುಗಿಯರನ್ನು ಅವನಿಗೆ ಜೋಡು ಮಾಡಲು ಅವರು ಪ್ರಯತ್ನಿಸಿದರು. ಆದರೆ ಎಸ್ತರ್ ರೋಸಾ ತುಂಬ ನಿರ್ದಿಷ್ಟವಾಗಿದ್ದಳು. ಮೂರು ಜನ ಹೆಣ್ಣಾಳುಗಳು, ಒಬ್ಬ ಗಂಡಾಳು ಅಲ್ಲದೆ ಗಾಡಿ ಓಡಿಸುವವನೊಬ್ಬ ಹೆಚ್ಚುವರಿಯಾಗಿದ್ದು ಅವಳಿಗೆ ಮಾಡಲು ಯಾವ ಕೆಲಸವೂ ಇರಲಿಲ್ಲ. ಹಾಗಾಗಿ ಅವಳು ಬೆಂಜ್ ನಿಗೆ ಒಂದು ಹೆಣ್ಣನ್ನು ಹುಡುಕುವುದರಲ್ಲೆ ಕಾಲಕಳೆದಳು. ಈಗಾಗಲೇ ಅವಳು ಪೋಲೆಂಡಿನ ಅರ್ಧ ಭಾಗದಲ್ಲಿ ಚೆಂದ ಕಾಣುವ ಹುಡುಗಿಯರನ್ನು ತನಿಖೆ ಮಾಡಿದ್ದಳು. ಆದರೆ ಕೊರತೆ ಇಲ್ಲದೆ ಇರುವ ಒಬ್ಬಳನ್ನೂ ಅವಳು ಪತ್ತೆ ಮಾಡಲು ಆಗಿರಲಿಲ್ಲ. ಒಬ್ಬಳು ಸಾಕಷ್ಟು ಸುಂದರವಾಗಿ ಇಲ್ಲದಿದ್ದರೆ, ಇನ್ನೊಬ್ಬಳು ಅಗತ್ಯ ಬುದ್ಧಿವಂತೆಯಾಗಿರಲಿಲ್ಲ. ಆದರೆ ಅವಳು ಬಹುಪಾಲು ಉದಾತ್ತ ನಡತೆಯುಳ್ಳವಳನ್ನು ಹುಡುಕುತ್ತಿದ್ದಳು. ಯಾಕಂದರೆ, ಹೆಣ್ಣು ಒರಟು ಸ್ವಭಾವದವಳಾದರೆ, ಅವಳ ಗಂಡ ಕಷ್ಟ ಅನುಭವಿಸಬೇಕಾಗುತ್ತೆ. ''ಯಾವುದೇ ಹೆಣ್ಣು ನನ್ನ ಬೆಂಜ್ ನ ಮೇಲೆ ತನ್ನ ಸಿಟ್ಟು ಸೆಡವು ತೋರಿಸಿಕೊಡಲು ನಾನು ಅವಕಾಶ ಮಾಡಿಕೊಡಲ್ಲ.'' ಆ ಹೊತ್ತಿಗಾಗಲೇ ನನ್ನ ಮದುವೆ ಆಗಿಹೋಗಿತ್ತು. ನನ್ನ ಹದಿನೈದನೆಯ ವರುಷದಲ್ಲೆ ನನ್ನ ಮದುವೆಯಾಗಿತ್ತು. ಎಸ್ತರ್ ರೋಸಾಳಿಗೆ ಹ್ರೂಬೈಶೋನಲ್ಲಿ ನಿಜವಾದ ಸ್ನೇಹಿತರೇ ಇರಲಿಲ್ಲ. ಅಷ್ಟೇಅಲ್ಲದೆ ಅವಳ ಮನೆಗೆ ಮೇಲಿಂದ ಮೇಲೆ ಭೇಟಿ ನೀಡುವವಳು ನಾನೇ ಆಗಿದ್ದೆ. ಅವಳು ನನಗೆ ಹೆಣಿಗೆ ಹಾಕುವುದು, ಬುಟ್ಟಾ ಹಾಕುವುದು, ಸೂಜಿ ಮೊನೆ ಆಡಿಸುವುದು ಹೇಗಂತ ಕಲಿಸಿಕೊಟ್ಟಳು. ಕಲ್ಪನೆ ಅವಳ ಮನಸ್ಸನ್ನು ತುಂಬಿಕೊಂಡಾಗ ಒಂದು ಡ್ರೆಸ್ಸೊ ಜುಬ್ಬಾನೊ ಸಿದ್ಧ ಮಾಡುತ್ತಿದ್ದಳು. ಒಂದು ಸಲ ಅವಳು ಸುಮ್ಮನೆ ತಮಾಷೆಗೋಸ್ಕರ ನನಗೊಂದು ಡ್ರೆಸ್ ರೆಡಿ ಮಾಡಿದಳು. ಅವಳಿಗೆ ಬಿಜಿನೆಸ್ ನಲ್ಲೂ ಒಳ್ಳೆ ತಲೆಯಿತ್ತು. ಅವಳ ಗಂಡ ಅವಳ ಜೊತೆ ಚರ್ಚೆ ಮಾಡದೆ ಒಂದು ಹೆಜ್ಜೆ ಕೂಡ ಇಡುತ್ತಿರಲಿಲ್ಲ. ಒಂದು ಆಸ್ತಿ ಕೊಂಡುಕೊಳ್ಳಬೇಕು ಇಲ್ಲ ಮಾರಬೇಕು ಅಂತ ಅವಳು ಅವನಿಗೆ ಯಾವಾಗ ಹೇಳಿದರೂ ತಕ್ಷಣವೆ ರೆಬ್ ಲೆಮೆಲ್ ವ್ಯಾಗ್ಮಿಸ್ಟರ್ ಏಜೆಂಟ್ ಲಿಪ್ಪೆಗೆ ಹೇಳಿಕಳಿಸಿ: ''ನನ್ನ ಹೆಂಡತಿ ಇಂತಿಂಥ ಆಸ್ತಿ ಕೊಂಡಕೊಳ್ಳಬೇಕು ಇಲ್ಲ ಮಾರಬೇಕು ಅಂತ ಬಯಸಿದ್ದಾಳೆ'' ಅಂತಾ ಆ ಕೆಲಸ ಮಾಡಿಸುತ್ತಿದ್ದ. ಅವಳು ಯಾವತ್ತಿಗೂ ಒಂದು ತಪ್ಪು ಮಾಡಿಲ್ಲ.
'ಬೆಂಜ್ ಆ ಹೊತ್ತಿಗಾಗಲೇ ಹತ್ತೊಂಬತ್ತು ವರುಷ ದಾಟಿದ್ದ. ಆದರೂ ನಿಶ್ಚಿತಾರ್ಥವೂ ನಡೆದಿರಲಿಲ್ಲ. ಆ ಕಾಲದಲ್ಲಿ ಹತ್ತೊಂಬತ್ತು ವಯಸ್ಸು ಅಂದರೆ ಮುದಿ ಹುಡುಗ ಅಂತ ಪರಿಗಣಿಸುತ್ತಿದ್ದರು. ಅವನ ತಾಯಿ ಹೆಣ್ಣಿನ ಹುಡುಕಾಟದಲ್ಲಿ ಮುಳುಗಿ ಹೋಗಿ ಹುಡುಗನಿಗೆ ಕೆಟ್ಟ ಹೆಸರು ಬಂದಿದೆ ಅಂತ ರೆಬ್ ಲೆಮೆಲ್ ವ್ಯಾಗ್ಮಿಸ್ಟರ್ ಗೆ ದೂರು ಬಂತು. ಬೆಂಜ್ ಹಣೆಯ ಮೇಲೆ ಮೊಡವೆ ಬಂದಿದೆ ಯಾಕಂದರೆ ಅವನಿಗೆ ಒಂದು ಹೆಣ್ಣಿನ ಅಗತ್ಯ ಇದೆ ಅಂತಲೂ ಹೇಳಲಾಯಿತು. ನಾವು ಅದನ್ನು ಅನುರಾಗದ ಮೊಡವೆಗಳು ಅತ ಕರಿತೀವಿ.
'ನಾನೊಂದು ದಿನ ಉಣ್ಣೆ ದಾರದ ಚೆಂಡನ್ನು ಎರವಲು ಪಡೆಯಲು ಎಸ್ತರ್ ರೋಸಾಳನ್ನು ನೋಡಲು ಹೋದೆ: ''ಜೆಡ್ಲೆ ನನ್ನ ಜೊತೆ ಜಾಮಾಸ್ಕ್ ಗೆ ಬರುತ್ತಿಯಾ?''
ನಾನು ಕೇಳಿದೆ. ''ಜಾಮಸ್ಕ್ ದಲ್ಲಿ ನನಗೇನು ಕೆಲಸ?''
''ನೀನು ನನ್ನ ಅತಿಥಿ. ಅದಂಕ್ಕಿತ ಇನ್ನೇನು ಬೇಕು?''
'ಎಸ್ತರ್ ರೋಸಾ ಸ್ವಂತ ಗಾಡಿಯಲ್ಲಿ ಒಬ್ಬಳೇ ಹೋಗಿ ಬರುತ್ತಿದ್ದಳು. ಆದರೆ ಈ ಸಲ ಜಾಮಾಸ್ಕ್ ಗೆ ನನ್ನಂಥ ಬೇರೊಬ್ಬರ ಜೊತೆ ಹೊರಟಿದ್ದಳು. ಈ ಪಯಣ ಮದುಮಗಳನ್ನು ನೋಡುವ ಸಂಬಂಧದಲ್ಲಿರಬಹುದು ಅಂತ ನಾನು ಊಹೆ ಮಾಡಿದೆ. ಆದರೆ ಎಸ್ತರ್ ರೋಸಾ ಸ್ವಭಾವ ಎಂಥದ್ದು ಅಂದರೆ, ಅವಳಿಗೆ ಯಾರೂ ಏನೂ ಪ್ರಶ್ನೆ ಮಾಡಬಾರದು. ಅವಳಿಗೆ ಮಾತಾಡಲು ಇಷ್ಟ ಇದ್ದರೆ ಎಲ್ಲವೂ ಸರಿ ಇರುತ್ತದೆ. ಇಲ್ಲದಿದ್ದರೆ ನೀವು ಕಾಯಬೇಕಾಗುತ್ತದೆ. ನಾನು ಸಂಚಾರದ ಬಗ್ಗೆ ನನ್ನ ಅಮ್ಮನಿಗೆ ಒಂದೇ ಮಾತಿನಲ್ಲಿ ಹೇಳಲು ಹೋದೆ. ನನ್ನ ಗಂಡನಿಗೆ ಅನುಮತಿ ಕೇಳಬೇಕಾದ ಅಗತ್ಯ ಇರಲಿಲ್ಲ. ಆತ ಓದುವ ಕೋಣೆಯಲ್ಲಿ ಇಡೀ ದಿವಸ ಕುಳಿತುಕೊಂಡು ಇರುತ್ತಿದ್ದರು. ಸಂಜೆ ಎದ್ದು ಆತ ಮನೆವೊಳಗೆ ಬಂದಾಗಲೆ ನನ್ನಮ್ಮ ಆತನಿಗೆ ರಾತ್ರಿ ಊಟಕ್ಕೆ ಬಡಿಸುವುದು. ಆ ದಿನಗಳಲ್ಲಿ ಒಬ್ಬ ಯಹೂದಿ ಧರ್ಮಶಾಸ್ತ್ರದ ಯುವವಿದ್ವಾಂಸನಿಗೆ ತನಗೊಬ್ಬ ಹೆಂಡತಿ ಇದ್ದಾಳೆ ಅಂತಲೂ ಗೊತ್ತ್ತಾಗುತ್ತಿರಲಿಲ್ಲ. ಆತ ರಸ್ತೆಯಲ್ಲಿ ನನ್ನನ್ನು ಕಂಡರೆ ಗುರುತಿಸುತ್ತಾರೆ ಅನ್ನೋ ನಂಬಿಕೆ ನನಗಿಲ್ಲ. ನಾನೊಂದು ಜೊತೆ ಬಟ್ಟೆ ಮತ್ತು ಒಳ ಉಡುಪು ತುಂಬಿಕೊಂಡು-ನಿಮ್ಮ ಕ್ಷಮೆ ಕೇಳುತ್ತೀನಿ-ನಾನು ಸಂಚಾರಕ್ಕೆ ಸಿದ್ಧಳಾದೆ. ನಾವು ಶ್ರೀಮಂತರ ಗಾಡಿಯಲ್ಲಿ ಪಯಣಿಸುತ್ತಿದ್ದು ಅವರೇ ಗಾಡಿ ನಡೆಸುತ್ತಿದ್ದರು. ಎರಡೂ ಕುದುರೆಗಳು ಸಿಂಹಗಳಂತಿದ್ದವು. ಮೇಜಿನ ಹಾಗೆ ಒಣ ಮತ್ತು ಮೆದುವಾಗಿ ರಸ್ತೆ ಇತ್ತು. ನಾವು ಜಾಮಾಸ್ಕ್ ಗೆ ಬಂದಾಗ, ಆತ ಗಾಡಿಯನ್ನು ಮಾರುಕಟ್ಟೆ ಪ್ರದೇಶದಲ್ಲಿ ನಿಲ್ಲಿಸದೆ, ಯಹೂದಿಯರಲ್ಲದ ವಿಧರ್ಮಿಯರು ವಾಸಿಸುತ್ತಿದ್ದ ರಸ್ತೆಯ ಬದಿಯಲ್ಲಿ ಇಳಿಸಿದ. ಎಸ್ತರ್ ರೋಸಾ ಅವನಿಗೆ ಧನ್ಯವಾದ ಹೇಳಿದಾಗ ಆತ ತನ್ನ ಹ್ಯಾಟಿನ ತುದಿ ಹಿಡಿದು ಚಾವಟಿಯನ್ನು ಗಾಳಿಯಲ್ಲಿ ಬೀಸಿ ನಮಗೆ ಗೌರವ ತೋರಿಸಿದ. ಇದೆಲ್ಲ ಪೂರ್ವ ಏರ್ಪಾಟಿನಂತೆ ತೋರಿತು.
ಎಸ್ತರ್ ರೋಸಾ ಯಾವುದೇ ಸ್ಥಳಕ್ಕೆ ಪಯಣ ಬೆಳೆಸಲಿ, ಆಗ ಅವಳು ಒಂದು ನಿಯಮದಂತೆ, ಒಬ್ಬ ಕೌಂಟೆಸ್ ನಷ್ಟೇ ಅಂದವಾದ ಬಟ್ಟೆ ಉಟ್ಟುಕೊಳ್ಳುತ್ತಿದ್ದಳು. ಈ ಸಲ ಅವಳು ತನ್ನ ವಿಗ್ ಮೇಲೆ ಕರ್ಚೀಪು ಕಟ್ಟಿ, ಸರಳವಾದ ಅರಳೆಯ ಬಟ್ಟೆ ಉಟ್ಟುಕೊಂಡಿದ್ದಳು. ಅದು ಬೇಸಗೆಯ ದಿನಗಳಾಗಿದ್ದು ಹಗಲು ಹೆಚ್ಚಿಗೆ ಇರುತ್ತಿತ್ತು. ನಾವು ಮಾರುಕಟ್ಟೆ ಪ್ರದೇಶಕ್ಕೆ ನಡೆದುಕೊಂಡು ಹೋದೆವು. ಅವಳು ಬೇರಿಶ್ ಲುಬ್ಲಿನರ್ ಅವರ ಒಣ-ಸಾಮಾನು ಅಂಗಡಿ ಬಗ್ಗೆ ವಿಚಾರಿಸಿಕೊಂಡಳು. ಒಂದು ದೊಡ್ಡ ಅಂಗಡಿಯೊಂದನ್ನು ನಮಗೆ ತೋರಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಒಣ-ಸಾಮಾನು ಅಂಗಡಿಯಲ್ಲಿ ನೀವು ದೊಡ್ಡ ಗಾತ್ರದ ಸರಕುಗಳನ್ನು ಮಾತ್ರ ಕೊಳ್ಳುತ್ತೀರಿ. ಆದರೆ ಅಂದಿನ ದಿನಗಳಲ್ಲಿ ಅವರು ದಾರ, ಹೆಣಿಗೆ ಹಾಕುವ ಉಣ್ಣೆಯ ದಾರ, ಮತ್ತು ಸಣ್ಣ ಪುಟ್ಟ ಎಲ್ಲ ವಿಧವಾದ ಸಾಮಾನುಗಳನ್ನು ಮಾರುತ್ತಿದ್ದರು. ಅವರು ಏನನ್ನು ಮಾರುತ್ತಿರಲಿಲ್ಲ? ಅದು ಕಾಡಿನಷ್ಟು ದೊಡ್ಡದಾದ ಅಂಗಡಿಯಾಗಿದ್ದು, ಮಾರಾಟದ ಸರಕುಗಳನ್ನು ತಾರಸಿಯ ವರೆಗೂ ಭರ್ತಿ ಮಾಡಿರುತ್ತಿತ್ತು. ದೊಡ್ಡ ನಗರಗಳಲ್ಲಿ ಅವರು ಮಾಡಿದಂತೆ ಎತ್ತರವಾದ ಡೆಸ್ಕಿನ ಮೇಲೆ ನಿಂತ ವ್ಯಕ್ತಿ ದಾಖಲೆ ಪುಸ್ತಕದಲ್ಲಿ ಬರೆಯುತ್ತ್ತಿದ್ದ. ಅವನು ಕ್ಯಾಷಿಯರ್ರೊ ಲೆಕ್ಕ ಬರೆಯುವವನೊ ಯಾರೆಂದು ನನಗೆ ಗೊತ್ತಿಲ್ಲ. ಬೆಂಕಿಯಂತೆ ಉರಿವ ಕಪ್ಪು ಕಣ್ಣಿನ ಹುಡುಗಿಯೊಬ್ಬಳು ಕೌಂಟರ್ ನ ಹಿಂದೆ ನಿಂತಿದ್ದಳು. ಅಂಗಡಿಯಲ್ಲಿ ಗಿರಾಕಿಗಳಾಗಿ ನಾವು ಮಾತ್ರ ಇದ್ದು ಆಕೆಯನ್ನು ಸಂಪರ್ಕಿಸಿದೆವು. ''ನಿಮಗೇನು ಬೇಕು? ಹೊಸಬರ ತರಹ ಕಾಣುಸ್ತೀರಿ'' ಎಂದು ಅವಳು ಕೇಳಿದಳು.
''ಹೌದು, ನಾವು ಹೊಸಬರು'', ಎಸ್ತರ್ ರ್ರೋಸಾ ಉತ್ತರಿಸಿದಳು.
''ನಿಮಗೇನು ಬೇಕಿತ್ತು?'' ಹುಡುಗಿ ಕೇಳಿದಳು.
''ಒಂದು ಸೂಜಿ'' ಎಸ್ತರ್ ರೋಸಾ ಹೇಳಿದಳು.
ಅವಳು ಹೇಳಿದ 'ಸೂಜಿ' ಎಂಬ ಪದ ಕೇಳಿದ ಕೂಡಲೇ ಹುಡುಗಿಯ ಮುಖ ಬದಲಾಯಿತು. ಅವಳ ಕಣ್ಣುಗಳಲ್ಲಿ ಕೋಪ ತುಂಬಿಕೊಂಡಿತು. ಅವಳು ಹೇಳಿದಳು: ಒಂದು ಸೂಜಿಗೆ ಇಬ್ಬರು ಹೆಂಗಸರು.
'ಒಂದು ಸೂಜಿ ದುರಾದೃಷ್ಟವೆಂದು ವರ್ತಕರು ನಂಬುತ್ತಾರೆ. ವಾರದ ಆರಂಭದಲ್ಲಿ ಒಂದು ಸೂಜಿ ಕೊಳ್ಳುವ ಧೈರ್ಯ ಯಾರೂ ಮಾಡಿಲ್ಲ, ಯಾಕಂದ್ರೆ, ಹಾಗಂದರೇನೆ ಇಡೀ ವಾರ ದುರಾದೃಷ್ಟ ಆವರಿಸುತ್ತದೆಂದು ಅವರಿಗೆ ಗೊತ್ತು. ವಾರದ ಮಧ್ಯದಲ್ಲೂ ಕೂಡ ವ್ಯಾಪಾರಿಗಳು ಸೂಜಿಯನ್ನು ಮಾರಲು ಇಷ್ಟಪಡುವುದಿಲ್ಲ. ಯಾವುದೇ ವ್ಯಕ್ತಿ ಒಂದು ದಾರದುಂಡೆ ಮತ್ತು ಕೆಲವು ಗುಂಡಿಗಳನ್ನು ಕೊಂಡುಕೊಂಡರೆ, ಅವುಗಳೊಂದಿಗೆ ಸೂಜಿಯೊಂದನ್ನು ಕೌಂಟರ್ ಮೇಲೆ ಎಸೆಯಲಾಗುತ್ತದೆ. ಸೂಜಿಯೊಂದರ ಬೆಲೆ ಜರ್ಮನಿಯ ಅರ್ಧ ಬೆಳ್ಳಿ ನಾಣ್ಯ ಮಾತ್ರ. ಅಂಥ ಸಣ್ಣ ವಸ್ತುವಿನ ವ್ಯಾಪಾರ ಮಾಡುವುದೆ ಅನಿಷ್ಟವಾಗಿತ್ತು.
''ಹೌದು. ನನಗೆ ಬೇಕಿರುವುದೆಲ್ಲ ಸೂಜಿಯಷ್ಟೆ'' ಎಸ್ತರ್ ರೋಸಾ ಹೇಳಿದಳು.
'ಹುಡುಗಿಗೆ ಕೋಪ ಬಂತು, ಆದರೂ ಸೂಜಿಗಳ ಡಬ್ಬಿಯೊಂದನ್ನು ಹೊರತೆಗೆದಳು. ಎಸ್ತರ್ ರೋಸಾ ಡಬ್ಬಿಯ ಮೂಲಕವೆ ಹುಡುಕಿದಳು. ನಂತರ ಹೇಳಿದಳು- ''ಬಹುಶಹ ನಿಮಲ್ಲಿ ಬೇರೆ ತರಹದ ಸೂಜಿ ಇದೆ, ಅಲ್ಲವೆ?
''ಇವುಗಳಲ್ಲಿ ಏನು ಸರಿಯಿಲ್ಲ?'' ಹುಡುಗಿ ಅಸಹನೆಯಿಂದ ಕೇಳಿದಳು.
''ಅವರ ಕಣ್ಣುಗಳು ತುಂಬಾ ಚಿಕ್ಕದಾಗಿವೆ. ಅವುಗಳಿಗೆ ದಾರ ಪೋಣಿಸಲು ಕಷ್ಟವಾಗುತ್ತದೆ.''
''ನನ್ನಲ್ಲಿರುವುದೆಲ್ಲ ಇಷ್ಟೆ. ನಿಮಗೆ ಸರಿಯಾಗಿ ಕಾಣಿಸದಿದ್ದರೆ ನೀವೇಕೆ ಕಣ್ಣಿಗೆ ಕನ್ನಡಕ ಕೊಂಡುಕೋ ಬಾರದು?'' ಹುಡುಗಿ ಕೋಪದಿಂದ ಹೇಳಿದಳು.
'ಎಸ್ತರ್ ರೋಸಾ ಒತ್ತಿ ಹೇಳಿದಳು, ''ನಿಮ್ಮಲ್ಲಿ ಬೇರೆ ಇಲ್ಲ ಅಂತ ನಿಮಗೆ ಖಚಿತವಾಗಿ ಗೊತ್ತ? ನನಗೆ ದೊಡ್ಡ ಕಣ್ಣಿನ ಸೂಜಿಯೆ ಬೇಕು.''
'ಮನಸ್ಸಿಲ್ಲದ ಮನಸ್ಸಿನಿಂದ ಮತ್ತೊಂದು ಡಬ್ಬಿಯನ್ನು ಹೊರತೆಗೆದ ಹುಡುಗಿ ಅದನ್ನು ಕೌಂಟರ್ ನ ಮೇಲೆ ಕುಕ್ಕಿದಳು. ಎಸ್ತರ್ ರೋಸಾ ಹಲವಾರು ಸೂಜಿಗಳನ್ನು ಪರೀಕ್ಷಿಸಿ ಹೇಳಿದಳು: ''ಇವುಗಳಿಗೂ ಸಣ್ಣ ಕಣ್ಣುಗಳೇ ಇವೆ.''
'ಸೂಜಿಡಬ್ಬಿಯನ್ನು ಹಠಾತ್ತನೆ ಹಿಂಪಡೆದ ಹುಡುಗಿ ಕಿರುಚಿದಳು:''ನೀವು ಲುಬ್ಲಿನ್ ಗೆ ಯಾಕ್ರೀ ಹೋಗಲ್ಲಾ? ನಿಮಗೋಸ್ಕರ ಅಲ್ಲಿ ದೊಡ್ಡ ಕಣ್ಣಿನ ವಿಶೇಷ ಸೂಜಿಗೆ ಆರ್ಡರ್ ಮಾಡಿ.''
'ಎತ್ತರದ ಸ್ಟೂಲ್ ಬಳಿ ಇದ್ದ ವ್ಯಕ್ತಿ ನಗತೊಡಗಿದ. ''ನಿಮಗೆ ಬಹುಶಹ ಗೋಣಿತಾಟು ಹೊಲಿಯೊ ಸೂಜಿ ಬೇಕಿದೆ''ಎಂದಾತ ಸೂಚಿಸಿದ. ''ಕೆಲವು ಉದ್ಧಟರು ಅರ್ಧ ನಾಣ್ಯದ ವಸ್ತು ಮಾರಾಟ ಮಾಡೋಕೂ ಜನರ ತಲೆ ತಿಂತಾರೆ.'' ಹುಡುಗಿ ಒಳಗೊಳಗೆ ಗೊಣಗಿಕೊಂಡಳು.
'ಎಸ್ತರ್ ರೋಸಾ ಮಾರುತ್ತರ ನೀಡಿದಳು: ''ನನಗೆ ಗೋಣಿತಾಟು ಉಪಯೋಗಕ್ಕೆ ಬರಲ್ಲ ಅಥವಾ ಗೋಣಿತಾಟಿನ ಹಾಗೆ ಒರಟಾಗಿರುವಂಥ ಹುಡುಗಿಯರೂ ಉಪಯೋಗಕ್ಕೆ ಬರಲ್ಲ.'' ನಂತರ ಅವಳು ನನ್ನ ಕಡೆ ತಿರುಗಿ ಹೇಳಿದಳು: ''ಬಾ, ಜೆಡ್ಲೆ, ಅವರು ನಮ್ಮ ತರಹದ ಜನ ಅಲ್ಲ.''
'ಹುಡುಗಿಯ ಮುಖ ಕೆಂಪೇರಿ ಗಟ್ಟಿಯಾಗಿ ಹೇಳಿದಳು: ''ಎಂಥ ಗುಗ್ಗು ಜನ! ಹೋಗಿದ್ದು ಒಳ್ಳೇದೆ ಆಯಿತು!''
'ನಾವು ಹೊರ ಬಂದೆವು. ನನ್ನ ಕಣ್ಣಲ್ಲಿ ಇಡೀ ವ್ಯವಹಾರ ಕೆಟ್ಟದಾಗಿ ಕಂಡಿತು. ಹೆಂಗಸೊಬ್ಬಳು ಅಲ್ಲಿ ಹೋಗುತ್ತಿದ್ದಳು. ಎಸ್ತರ್ ರೋಸಾ ಅವಳಿಗೆ ರೆಬ್ ಜೆಲಿಗ್ ಇಜಬಿಟ್ಜರ್ ಅವರ ಒಣ-ಸಾಮಾನು ಅಂಗಡಿ ಬಗ್ಗೆ ಕೇಳಿದಳು. ''ಈ ರಸ್ತೆ ಬಲಗಡೆಗಿದೆ'' ಆಕೆ ಕೈ ಮಾಡಿ ತೋರಿಸಿ ಹೇಳಿದಳು. ನಾವು ಮಾರುಕಟ್ಟೆ ಪ್ರದೇಶ ದಾಟಿ ಒಂದು ಅಂಗಡಿಗೆ ಹೋದೆವು. ಅದು ಮೊದಲ ಅಂಗಡಿಗಿಂತ ಮೂರನೆಯ ಒಂದು ಭಾಗ ಮಾತ್ರ ಇತ್ತು. ಇಲ್ಲೂ ಕೂಡ ಸಾಮಾನು ಮಾರಾಟ ಮಾಡಲು ಯುವತಿಯೊಬ್ಬಳಿದ್ದಳು. ಈ ಹುಡುಗಿ ಕಪ್ಪಗಿರಲಿಲ್ಲ; ಕೂದಲು ಕೆಂಪಗೆ ಇತ್ತು. ಅವಳು ಅಸಹ್ಯವಾಗಿರಲಿಲ್ಲವಾದರೂ ಮಚ್ಚೆಗಳ ಗುರುತು ಇದ್ದವು. ಅವಳ ಕಣ್ಣುಗಳು ನೆಲ್ಲಿಕಾಯಿ ತರಹ ಹಸುರು ಇದ್ದವು. ಅವಳು ಸೂಜಿ ಮಾರಾಟ ಮಾಡುತ್ತಾಳಾ ಎಂದು ಎಸ್ತರ್ ರೋಸಾ ಕೇಳಿದಳು, ''ಯಾಕಿಲ್ಲ? ನಾವು ಪ್ರತಿಯೊಂದನ್ನೂ ಮಾರಾಟ ಮಾಡುತ್ತೀವಿ.''
ಎಸ್ತರ್ ರೋಸಾ ಹೇಳಿದಳು: ''ನಾನು ದೊಡ್ಡ ಕಣ್ಣಿನ ಸೂಜಿಗಾಗಿ ಹುಡುಕಿಕೊಂಡು ಬಂದೆ. ಯಾಕಂದರೆ ಸೂಜಿಗೆ ದಾರ ಪೋಣಿಸೋಕಾಗಲ್ಲ, ನನಗೆ ತೊಂದರೆ ಇದೆ.''
''ನಮ್ಮಲ್ಲಿರೋ ಎಲ್ಲ ಸೂಜಿಗಳನ್ನು ನಿಮಗೆ ತೋರುಸ್ತೀನಿ. ನಿಮಗೆ ಯಾವುದು ಚೆನ್ನಾಗಿ ಒಪ್ಪುತ್ತೋ ಅದನ್ನೆ ಆರಿಸಿಕೊಳ್ಳಿ''. ಹುಡುಗಿಉತ್ತರಿಸಿದಳು.
'ಇಲ್ಲೇನು ನಡೆಯುತ್ತಿದೆ ಎಂದು ನಾನಾಗಲೇ ಊಹಿಸಿದ್ದೆ. ನನ್ನೆದೆ ಕಳ್ಳನ ಎದೆಯ ಹಾಗೆ ಜೋರಾಗಿ ಬಡಿದುಕೊಳ್ಳುತ್ತಿತ್ತು. ಹುಡುಗಿ ಸೂಜಿಯ ಹತ್ತು ಡಬ್ಬಿಗಳನ್ನು ತೆಗೆದುತೋರಿಸಿದಳು. ''ನೀವ್ಯಾಕೆ ನಿಂತುಕೊಳ್ಳಬೇಕು? ಇಲ್ಲಿ ಸ್ಟೂಲಿದೆ. ದಯವಿಟ್ಟು ಕುಳಿತುಕೊಳ್ಳಿ'' ಎಂದು ಅವಳು ಹೇಳಿದಳು: ಅವಳು ನನಗೂ ಕೂಡ ಒಂದು ಸ್ಟೂಲು ತಂದಳು. ಎಸ್ತರ್ ರೋಸಾ ಇವಳನ್ನು ಕೂಡ ಪರೀಕ್ಷೆಗೆ ಒಡ್ಡುತ್ತಾಳೆ ಎಂದು ನನಗೆ ಪೂರ್ತಿ ಗೊತ್ತಿತ್ತು.
''ಸೂಜಿಗಳೆಲ್ಲ ಮಿಶ್ರ ಆಗಿಬಿಟ್ಟಿವೆ, ಯಾಕೆ?'' ಎಸ್ತರ್ ರೋಸಾ ದೂರಿದಳು. ''ಪ್ರತಿಯೊಂದು ಗಾತ್ರದ ಸೂಜಿ ಬೇರೆ ಬೇರೆ ಡಬ್ಬಿಯಲ್ಲೆ ಇರಬೇಕು.''
'ಹುಡುಗಿ ಕ್ಷಮೆ ಯಾಚಿಸುವಳಂತೆ ಹೇಳಿದಳು: ''ಅವು ಫ್ಯಾಕ್ಟರಿಯಿಂದ ಬಂದಾಗ ಅವನ್ನೆಲ್ಲ ಬೇರೆ ಬೇರೆ ಮಾಡಿಯೆ ಇಟ್ಟಿದ್ದಿವಿ. ಆದರೂ ಅವು ಮಿಶ್ರ ಆಗಿಬಿಟ್ಟಿವೆ.'' ಹುಡುಗಿ ತನ್ನ ಸಹನೆ ಕಳೆದುಕೊಳ್ಳುವಂತೆ ಮಾಡಲು ಏನೆಲ್ಲ ಮಾಡಬೇಕೊ ಅವನ್ನೆಲ್ಲ ಎಸ್ತರ್ ರೋಸಾ ಅತ್ಯುತ್ತಮವಾಗಿಯೆ ಮಾಡುತ್ತಿದ್ದುದನ್ನು ನಾನು ಕಂಡೆ. ಎಸ್ತರ್ ರೋಸಾ ಹೇಳಿದಳು: ''ನನಗೆ ಸರಿಯಾಗಿ ಕಾಣುಸ್ತಿಲ್ಲ. ಇಲ್ಲಿ ಕತ್ತಲೆ ಇದೆ.''
''ಒಂದು ನಿಮಿಷ, ನಾನು ಸ್ಟೂಲನ್ನು ಬಾಗಿಲ ಹತ್ತಿರ ಜರಗಿಸುತ್ತೀನಿ, ಅಲ್ಲಿ ಹೆಚ್ಚು ಬೆಳಕಿದೆ.'' ಹುಡುಗಿ ಉತ್ತರ ನೀಡಿದಳು.
ಎಸ್ತರ್ ರೋಸಾ ಕೇಳಿದಳು: ''ಬರಿಯ ಅರ್ಧ ಪೆನ್ನಿ ಸೂಜಿ ಮಾರಾಟ ಮಾಡೋಕೆ ಇಷ್ಟೆಲ್ಲ ಪ್ರಯತ್ನ ಪಟ್ಟರೆ ಅದರಿಂದ ನಿಮಗೇನು ಸಿಗುತ್ತೆ?'' ಹುಡುಗಿ ಅದಕ್ಕೆ ಉತ್ತರ ನೀಡಿದಳು: ''ಮೊದಲಿಗೆ ಹೇಳಬೇಕಂದರೆ, ಈ ಸೂಜಿ ಬೆಲೆ ಕಾಲು ಪೆನ್ನಿ ಮಾತ್ರ. ನಂತರ, ನೂರು ಜನ ಕುಶಲಗಾರರು ತಯಾರಿಸುವಂಥ ಒಂದು ಪೆನ್ನಿಗೂ ಅದೇ ತತ್ವ ಅನ್ವಯಿಸುತ್ತದೆ ಅಂತ ಧರ್ಮಶಾಸ್ತ್ರ ಹೇಳುತ್ತೆ. ಅಲ್ಲದೆ ಇವತ್ತು ನೀವು ಒಂದು ಸೂಜಿ ಕೊಂಡುಕೋತಿದ್ದಿರಿ. ನಾಳೆ ನೀವು ಮದುಮಗಳ ಉಡುಪಿಗಾಗಿ ಸಾಟಿನ್ ಬಟ್ಟೇನೂ ಕೊಂಡುಕೊಳ್ಳಬಹುದು.''
''ಹಾಗೋ? ಹಾಗಿದ್ದರೆ ಅಂಗಡಿ ಖಾಲಿಯಾಗುತ್ತ ಬಂದದ್ದು ಹೇಗೆ?'' ಎಸ್ತರ್ ರೋಸಾ ತಿಳಿಯಬಯಸಿದಳು. ''ರಸ್ತೆಯಾಚೆ ಇರೋ ಬೆರಿಸ್ ಲುಬ್ಲಿನರ್ ಅವರ ಅಂಗಡಿ ಗಿರಾಕಿಗಳಿಂದ ತುಂಬಿಹೋಗಿದೆ. ಅವರ ಮಧ್ಯೆ ನುಗ್ಗಿ ಸೂಜಿ ಕೊಳ್ಳೋಕೆ ನಿಮಗೂ ಸಾಧ್ಯವಿಲ್ಲ. ನಾನು ನನ್ನ ಸಾಮಾನೆಲ್ಲ ಅಲ್ಲಿಂದಲೆ ಕೊಂಡುಕೊಂಡೆ. ಇಲ್ಲಿ ಸೂಜಿ ತಗೋಳೋಣ ಅಂತ ನಿರ್ಧರಿಸಿ ಬಂದೆ.''
ಹುಡುಗಿ ಗಂಭೀರಳಾದಳು. ಎಸ್ತರ್ ರೋಸಾ ಮಾಡಿದ್ದು ಅತಿಯಾಯಿತು ಅಂತ ನನಗೆ ಭಯ ಆಯಿತು. ದೇವದೂತ ಕೂಡ ಸಹನೆ ಕಳೆದುಕೊಳ್ಳಬಲ್ಲ. ಆದರೆ ಹುಡುಗಿ ಹೇಳಿದಳು: ''ಪ್ರತಿಯೊಂದೂ ದೇವರ ಮನಸ್ಸಿನಂತೆ ನಡೆಯುತ್ತದೆ.'' ಎಸ್ತರ್ ರೋಸಾ ತನ್ನ ಸ್ಟೂಲನ್ನು ಬಾಗಿಲ ಬಳಿಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದಳು. ಆದರೆ ಆ ಹುಡುಗಿ ಅವಳನ್ನು ಅಷ್ಟಕ್ಕೆ ನಿಲ್ಲಿಸಿದಳು. ''ದಯವಿಟ್ಟು ನಿಮಗೆ ನೀವೇ ತೊಂದರೆ ತಗೋಬೇಡಿ. ನಾನು ಇಡುತ್ತೀನಿ.'' ಎಸ್ತರ್ ರೋಸಾ ಮಧ್ಯೆ ಬಾಯಿ ತೂರಿಸಿ, ''ಒಂದು ನಿಮಿಷ, ನಾನು ನಿನಗೇನೋ ಹೇಳಬೇಕು.''
'ಸ್ಟೂಲನ್ನು ಸರಿಯಾಗಿಟ್ಟು ಹುಡುಗಿ ಕೇಳಿದಳು: ''ನನಗೆ ನೀವು ಏನು ಹೇಳಬೇಕು ಅಂತ ಬಯಸಿದ್ದೀರಿ?''
''ನನ್ನ ಮಗಳೇ, ಮ್ಯಾಜೆಲ್ ಟೋವ್!'' ಎಸ್ತರ್ ರೋಸಾ ಜೋರಾಗಿ ಕರೆದಳು.
'ಸೀಮೆಸುಣ್ಣದಂತೆ ಬಿಳಚಿಕೊಂಡುಬಿಟ್ಟ ಆ ಹುಡುಗಿ ಹೇಳಿದಳು: ''ನನಗೆ ಅರ್ಥ ಆಗಲಿಲ್ಲ.''
'ಎಸ್ತರ್ ರೋಸಾ ಸಾರಿ ಸಾರಿ ಹೇಳಿದಳು: ''ನನ್ನ ಮುದ್ದಿನ ಸೊಸೆ ನೀನೇ ಆಗುವೆ. ನಾನು ಹ್ರೂಬೈಶೋನ ರೆಬ್ ಲೆಮೆಲ್ ವ್ಯಾಗ್ಮಿಸ್ಟರ್ ನ ಹೆಂಡತಿ. ನನ್ನ ಮಗನಿಗೆ ಹೆಣ್ಣು ನೋಡೋಕೆ ನಾನಿಲ್ಲಿಗೆ ಬಂದಿದ್ದೀನಿ. ಸೂಜಿ ತಗೋಳಕ್ಕಲ್ಲ. ರೆಬ್ ಬೆರಿಶ್ ನ ಮಗಳು ಹುಲ್ಲಿನ ಚಾಪೆಯ ಹಾಗೆ. ನೀನು ರೇಶಿಮೆಯ ಹಾಗೆ. ದೇವರ ಇಚ್ಛೆಯಂತೆ ನೀನು ನನ್ನ ಮಗ ಬೆಂಜ್ ನ ಹೆಂಡತಿ ಆಗುವೆ.
'ಆ ಹುಡುಗಿ ಅಶಕ್ತತೆಯಲ್ಲಿ ತಲೆ ತಿರುಗಿ ಸಾಯದೇ ಇದ್ದುದು, ಆ ಸ್ವರ್ಗದ ಪವಾಡದಿಂದಾಗಿಯೆ. ಜಾಮಾಸ್ಕ್ ನಲ್ಲಿ ಎಲ್ಲರೂ ರೆಬ್ ಲೆಮೆಲ್ ವ್ಯಾಗ್ಮಿಸ್ಟರ್ ಬಗ್ಗೆ ಕೇಳಿ ತಿಳಿದಿದ್ದರು. ಜಾಮಾಸ್ಕ್ ಲುಬ್ಲಿನ್ ಅಲ್ಲ. ಗಿರಾಕಿಗಳು ಒಳಗೆ ಬಂದು ಏನು ನಡೆಯುತ್ತಿದೆ ಎಂದು ನೋಡಿದರು. ಎಸ್ತರ್ ರೋಸಾ ತನ್ನ ಬುಟ್ಟಿಯಿಂದ ಬಿಳಿಚಿನ್ನದ ಮಣಿಗಳ ಸರವೊಂದನ್ನು ಹೊರತೆಗೆದಳು. ''ಇದು ನಿನ್ನ ನಿಶ್ಚಿತಾರ್ಥದ ಕೊಡುಗೆ. ನಿನ್ನ ತಲೆಯನ್ನು ಬಾಗಿಸು.'' ಆ ಹುಡುಗಿ ವಿನಮ್ರಳಾಗಿ ತನ್ನ ತಲೆಯನ್ನು ತಗ್ಗಿಸಿದಳು. ಎಸ್ತರ್ ರೋಸಾ ಮಣಿಸರವನ್ನು ಅವಳ ಕುತ್ತಿಗೆಗೆ ಹಾಕಿದಳು. ಅವಳ ತಂದೆತಾಯಿ ಅಂಗಡಿಗೆ ಓಡಿ ಬಂದರು. ಆಗ ಮುತ್ತಿಕ್ಕುವ, ತಬ್ಬಿಕೊಳ್ಳುವ ಮತ್ತು ಅಳುವ ಕೆಲಸ ನಡೆಯುತ್ತಿತ್ತು. ರೆಬ್ ಬೆರಿಶ್ ನ ಮಗಳ ಕಥೆ ಹೇಳಲು ಅಲ್ಲಿಗೆ ಕೂಡಲೇ ಯಾರೋ ಒಬ್ಬರು ಧಾವಿಸಿ ಬಂದರು. ರೆಬ್ ಬೆರಿಶ್ ನ ಮಗಳು ಏನೇನು ನಡೆಯಿತೆಂದು ಕೇಳಿ ತಿಳಿದಾಗ ಅವಳ ಕಂಗಳಲ್ಲಿ ನೀರು ಉಕ್ಕಿತು. ಅವಳ ಹೆಸರು ಇಟ್ಟೆ ಎಂಬುದಿತ್ತು. ಅವಳು ವರದಕ್ಷಿಣೆಯನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿದ್ದಳು ಮತ್ತು ಮಾರಾಟ ಮಾಡುವ ಮುಂಗೋಪಿ ಹೆಣ್ಣುಮಗಳೆಂದು ಹೆಸರು ಪಡೆದಿದ್ದಳು. ಜೆಲಿಗ್ ಇಜಬಿಟ್ಜರ್ ಸರಳ ಜೀವನ ನಡೆಸುತ್ತಿದ್ದರು.
'ನನ್ನ ಪ್ರೀತಿಯ ಜನರೇ, ಇದೊಂದು ಪಂದ್ಯವಾಯಿತು. ಎಸ್ತರ್ ರೋಸಾ ಕುಟುಂಬದ ವೇಷಭೂಷಣ ಹಾಕಿಕೊಂಡಳು. ನಾನು ಹೇಳಿದ ಹಾಗೆ ಅವಳು ಏನೇ ಹೇಳಿಕೊಂಡು ಹೋಗಲಿ, ಆ ದಿನಗಳಲ್ಲಿ ಯುವ ಜನತೆ ಅವಳಿಗೆ ಯಾವತ್ತೂ ಏನೂ ತಿರುಗಿ ಕೇಳಲಿಲ್ಲ. ನಿಶ್ಚಿತಾರ್ಥ ಸಮಾರಂಭವೊಂದು ನಡೆದ ಕೂಡಲೇ ಮದುವೆಯೂ ಆಯಿತು. ಜೆಲಿಗ್ ಇಜಬಿಟ್ಜರ್ ದೊಡ್ಡ ಮದುವೆ ಮಾಡಿಕೊಡಲು ಶಕ್ತರಾಗಿರಲಿಲ್ಲ. ಆತ ತನ್ನ ಮಗಳಿಗೆ ಕೇವಲ ವರದಕ್ಷಿಣೆಯನ್ನು ನೀಡಬಲ್ಲವನಾಗಿದ್ದ. ಅವರಿಗೆ ಇನ್ನಿಬ್ಬರು ಹೆಣ್ಣುಮಕ್ಕಳೂ ಇದ್ದರು, ಅಲ್ಲದೆ ಇಬ್ಬರು ಗಂಡು ಮಕ್ಕಳು ಯೆಶಿವಾದಲ್ಲಿ ಓದುತ್ತಿದ್ದರು. ಆದರೆ ನಿಮಗೆ ತಿಳಿದಂತೆ, ರೆಬ್ ಲೆಮೆಲ್ ವ್ಯಾಗ್ಮಿಸ್ಟರ್ ಗೆ ಸ್ವಲ್ಪ ವರದಕ್ಷಿಣೆ ಅಗತ್ಯವಿತ್ತು. ನಾನು ನಿಶ್ಚಿತಾರ್ಥ ಸಮಾರಂಭಕ್ಕೆ ಹೋಗಿದ್ದೆ ಮತ್ತು ಮದುವೆಯಲ್ಲಿ ನೃತ್ಯ ಮಾಡಿದೆ. ಎಸ್ತರ್ ರೋಸಾ ಹುಡುಗಿಯನ್ನು ರಾಜಕುಮಾರಿಯ ಹಾಗೆ ಸಿಂಗರಿಸಿದ್ದಳು. ಅವಳು ನಿಜವಾಗಿಯೂ ಚೆಲುವಾದಳು. ಅದೃಷ್ಟ ಹೊಳೆದಾಗ ಅದು ಮುಖದ ಕಳೆಯನ್ನು ಹೆಚ್ಚಿಸುತ್ತದೆ. ಮದುವೆ ಮಂಟಪದಡಿ ನಿಂತ ಮದುಮಕ್ಕಳನ್ನು ಮತ್ತು ಆ ನಂತರದಲ್ಲಿ ಅವರು ಮಾಡಿದ ಸದ್ಗುಣ ನೃತ್ಯವನ್ನು ನೋಡದೆ ಇರುವವರು ಯಾರೇ ಆಗಿರಲಿ ಅವರಿಗೆ ನಲಿವು ಹೊಂದಿದ ಮಕ್ಕಳು ಅಂದರೇನು ಎಂದು ತಿಳಿದುಕೊಳ್ಳಲು ಸಾಧ್ಯವೇ ಇಲ್ಲ. ಅದಾದ ನಂತರ ಅವರು ಪಾರಿವಾಳದಂತೆ ಜೀವನ ನಡೆಸಿದರು. ಒಂದು ವರ್ಷಕ್ಕೆ ಸರಿಯಾಗಿ ಆಕೆ ಗಂಡು ಮಗುವನ್ನು ಹೆತ್ತಳು.
00
2001ರ ನಂತರ ನಡೆಯುವ ಐಸಿಎಸ್ಇ(10ನೆಯ) ತರಗತಿ ಪರೀಕ್ಷೆಗಳಿಗೆ ಪಠ್ಯಪುಸ್ತಕವಾಗಿ ಅನಿಲ್ ವಿಲ್ ಸನ್ ಅವರು ಸಂಕಲಿಸಿದ ಫಿಗ್ ಮೆಂಟ್ಸ್ ಆಫ್ ಇಮ್ಯಾಜಿನೇಶನ್ ಸಂಕಲನದಿಂದ ಪ್ರಸ್ತುತ ಅನುವಾದಿತ ಕತೆ ಆಧರಿಸಿದೆ. ಈ ಸಂಕಲನ 1998ರಲ್ಲಿ ಮೊದಲು ಪ್ರಕಟವಾಗಿ 1999 ಮತ್ತು 2000ರಲ್ಲಿ ಮರುಮುದ್ರಣವಾಗಿದೆ.ಯಿದ್ದೀಶ್ ಭಾಷೆಯಲ್ಲಿರುವ ಪ್ರಸ್ತುತ ಕತೆಯ ಇಂಗ್ಲಿಶ್ ಅವತರಣಿಕೆ ಸಿದ್ಧಪಡಿಸಿದವರ ವಿವರಗಳಿಲ್ಲದಿದ್ದರೂ ಈ ಕತೆಯನ್ನು ಬಳಸಿಕೊಳ್ಳಲು ಅನುಮತಿಸಿದ ಮೆ.ಲಾರೆನ್ಸ್
ಪಾಲಿಂಜರ್ ಲಿಮಿಟೆಡ್, ಲಂಡನ್ ಇವರಿಗೆ ಕೃತಜ್ಞವಾಗಿದೆ.
ಈ ಕತೆಯನ್ನು ಕಳೆದೆರಡು ವರುಷಗಳ ಹಿಂದೆ ಓದಿದಾಗಲೇ ಕನ್ನಡಿಸಬೇಕೆಂಬ ಹಂಬಲ ಇಂದಿಗೆ ಈಡೇರಿದೆ. ಇಂಥ ನನ್ನ ಹಲವು ಕಾರ್ಯಯೋಜನೆಗಳು ಕೈಗೂಡಿ ನಿಮ್ಮಮುಂದೆ ಬೇಗನೆ ಬರಲಿ ಎಂದು ಆಶಿಸುತ್ತೇನೆ.

kataaya haauvika tumb uatamygida
ಪ್ರತ್ಯುತ್ತರಅಳಿಸಿ