ನನ್ನ ನಾಟಕಗಳನ್ನು ಕುರಿತು
- ಡಬ್ಲ್ಯು.ಬಿ.ಯೇಟ್ಸ್
ರಂಗಭೂಮಿಗಾಗಿ ಬರೆದ ಈ ನಾಟಕಗಳನ್ನು ನಾವು ಏಳು ಜನ ಸೃಷ್ಟಿಸಿದ್ದೇವೆ. ಅವರಲ್ಲಿ ದೇಶ ಭಕ್ತ ಸಮಾಜ ಸೇರಿದ್ದ ಸಾರಾ ಆಲ್ಗುಡ್, ಅವಳ ಸೋದರಿ ಅಂಧರ ಸಂಸ್ಥೆಯೊಂದರಲ್ಲಿ ದುಡಿಯುವ ಹುಡುಗಿ ಮೇಯರ್ ಓ ನೀಲ್ ಮತ್ತು ಎಲೆಕ್ರಿಕ್ಟ್ ಲೈಟ್ ಫಿಟ್ಟರ್ ವಿಲಿಯಂ ಫೇ, ಉಪಹಾರ ಮಂದಿರದಲ್ಲಿ ಕ್ರಿಯಾಶೀಲತೆಯನ್ನು ಪಡೆದುಕೊಂಡಿದ್ದ ಹಣಕಾಸು ಗುಮಾಸ್ತ ಫ್ರಾಂಕ್ ಫೇ- ಈ ನಾಲ್ವರೂ ನಟರು; ಲೇಡಿ ಗ್ರಿಗೋರಿ, ಜಾನ್ ಸಿಂಗೆ ಮತ್ತು ನಾನು - ಮೂವರೂ ಬರಹಗಾರರು ಇದ್ದೇವೆ. ನಾವು ಕತೆಯನ್ನು ಹೇಳಿದರೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುತ್ತಿದ್ದೆವು. ನನ್ನ ಇಬ್ಬರು ಸೋದರಿಯರು ಮತ್ತು ಅವರ ಸೇವಕಿಯರು ರಾತ್ರಿಯ ಕನಸನ್ನು ವಿಲಕ್ಷಣವಾಗಿ ಮೂರು ವಿಭಿನ್ನ ಬಗೆಗಳಲ್ಲಿ ಹೇಗೆ ಕಾಣುತ್ತಿದ್ದರು ಎಂಬುದನ್ನು ವಿವರಿಸುವ ಟಿಪ್ಪಣಿಯೊಂದು ನನ್ನ ಪುಸ್ತಕ ರೂಪದ ದಿನಚರಿಯಲ್ಲೆಲ್ಲೋ ಒಂದು ಕಡೆ ಇದೆ. ನಾನೊಂದು ಸಲ ಸೂಪರ್ ನಾರ್ಮಲ್ ನಿಕಾಯದ ಮೂವರು ವಿದ್ಯಾರ್ಥಿಗಳೊಂದಿಗೆ ಧ್ಯಾನ ನಿರತನಾಗಿದ್ದೆ. ಆಗ ಶಿಕ್ಷಕರು ನಮಗೆಲ್ಲರಿಗೂ ಒಂದೇ ಬಗೆಯ ವಸ್ತುಗಳನ್ನು ನೀಡಿದ್ದರು. ಆದರೆ ನಾನದನ್ನು ಮರೆತುಬಿಟ್ಟಿದ್ದೆ. ಅದನ್ನು ಒಬ್ಬರು ಮಾಗಿದ ಹಣ್ಣಾಗಿ, ಇನ್ನೊಬ್ಬರು ಮಾಗದ ಹಣ್ಣಾಗಿ, ಮತ್ತೊಬ್ಬರು ಹೊತ್ತಿಕೊಂಡಿರುವ ಟಾರ್ಚಾಗಿ, ಮಗದೊಬ್ಬರು ಹೊತ್ತಿಕೊಂಡಿರದ ಟಾರ್ಚಾಗಿ ಕಂಡಿದ್ದರು. ವಿಜ್ಞಾನ ವಸ್ತುನಿಷ್ಟ ಆಲೋಚನೆಯನ್ನು ಎಂದಿಗೂ ನಡೆಸುವುದಿಲ್ಲ. ಆದ್ದರಿಂದ ಅದು ಚರಿತ್ರೆಯ ಬಹುಮುಖ್ಯ ಭಾಗವನ್ನು ರೂಪಿಸುವ ಸಮಾನಾಂತರ ಪ್ರಜ್ಞಾಪ್ರವಾಹದ ಬಗ್ಗೆ ವಿವರಣೆ ನೀಡುವುದಿಲ್ಲ. ನಾನು ನನ್ನ ಪ್ರಜ್ಞಾಪ್ರವಾಹದ ಮೂಲವನ್ನು ಅನುಸರಿಸಿಕೊಂಡು ಹೋದಾಗ ನನ್ನಲ್ಲಿ ಎರಡು ಪ್ರಧಾನ ಇಚ್ಛೆಗಳು ಇರುವುದು ಕಂಡುಬಂತು. ರಂಗಸ್ಥಳ ತನ್ನೆಲ್ಲ ಸುಸ್ಪಷ್ಟತೆಯನ್ನು ಶಬ್ದಗಳಲ್ಲೆ ಮೂಡಿಸಿ ಸ್ತಬ್ಧವಾಗಿರಬೇಕು. ಅದರಿಂದಾಗಿಯೆ ನಾನು ಅಸಂಬದ್ಧ ಬೆಳವಣಿಗೆಯಿಂದ ಬಿಡಿಸಿಕೊಳ್ಳುವುದು ಮತ್ತು ಸುಸ್ಪಷ್ಟ ಶಬ್ದಗಳನ್ನು ಮೂಡಿಸುವುದು -ಇವನ್ನೇ ಬಯಸಿದ್ದೆ. ನಾನೊಂದು ಲಂಡನ್ನಿನ ನಾಟಕ ನೋಡಿದೆ. ಆ ನಾಟಕ ನಟರ ಮೇಲೆ ಯಾವುದೇ ನಿರ್ಬಂಧ ಹೇರಿರಲಿಲ್ಲ. ಹೀಗಿದ್ದರೂ ನಟರು ರಂಗಸ್ಥಳವನ್ನು ದಾಟುತ್ತಿದ್ದುದು ನನ್ನ ಗಮನಕ್ಕೆ ಬಂತು. ಪ್ರೇಕ್ಷಕರ ಗಮನವನ್ನು ಹಿಡಿದಿಟ್ಟುಕೊಳ್ಳಲು ಹಾಗೆ ಮಾಡಬೇಕೆಂದು ಅವರಿಗೆ ನಿರ್ಮಾಪಕರು ಹೇಳಿದ್ದರು. ಆಯಾ ಸಂದರ್ಭಗಳಿಗೆ ತಕ್ಕಂತೆ ಹೊಂದಿಕೊಳ್ಳುವ, ಆದರೆ ಸುಸ್ಪಷ್ಟವಲ್ಲದ ಶಬ್ದಗಳೆ ನನ್ನ ಕಿವಿಯ ಮೇಲೆ ಬೀಳುತ್ತಿದ್ದವು. ಬಹುಶಹ ಈ ವಿಚಾರದಲ್ಲಿ ನನ್ನ ಅಭಿಪ್ರಾಯ ಗಟ್ಟಿಗೊಂಡಿರಬೇಕು ಅಥವಾ ಪೆದ್ರೆಯಲ್ಲಿ ಸರಹ್ ಬರ್ನ್ ಹರ್ಡ್ಸ್ ರ ನಾಟಕವನ್ನು ಮೊದಲ ಬಾರಿಗೆ ನೋಡಿದಾಗ ಕಂಡುಕೊಂಡಿದ್ದಿರಬೇಕು. ಅಷ್ಟೇ ಅಲ್ಲ ಈ ವಿಚಾರದಲ್ಲಿ ನಟರ ಅಭಿಪ್ರಾಯವನ್ನು ಬದಲಿಸಿದವನೂ ನಾನೇ. ಆದರೆ ನಾನೀಗ ಮುದುಕನಾಗಿದ್ದೇನೆ, ನನ್ನ ನೆನಪುಗಳು ದಾರಿ ತಪ್ಪಿರಬೇಕು. ನಾನು ಬಹುಶಹ ಸಿಂಗೆಯಿಂದ ಬದಲಾದವನಿದ್ದಿರಬಹುದು. ದಿ ವೆಲ್ ಆಫ್ ದಿ ಸೇಂಟ್ಸ್ ನಾಟಕದ ಮೊದಲ ಅಂಕ ಪ್ರಯೋಗಗೊಂಡ ದಿನ ನಮಗೆ ನಿಜವಾಗಿಯೂ ಗೆಲುವಿನ ದಿನವಾಗಿತ್ತು. ಇಬ್ಬರು ಮುಖ್ಯ ವ್ಯಕ್ತಿಗಳು ಮಂತ್ರಮುಗ್ಧರಾಗಿ ಕೊನೆಯವರೆಗೂ ಅಕ್ಕಪಕ್ಕದಲ್ಲೆ ಕುಳಿತಿದ್ದರು. ಇಂಥ ಅನಗತ್ಯ ಬೆಳವಣಿಗೆಯ ನಿರಾಕರಣೆ ಮೊದಲು ವಿಮರ್ಶಕರ ಗಮನ ಸೆಳೆದಿತ್ತು. ಪ್ರೇಕ್ಷಕರು ಸತತ ಬದಲಾವಣೆಯನ್ನು ಎದುರು ನೋಡುತ್ತ ಸಿನಿಮಾ ರಂಗಕ್ಕೆ ಒಗ್ಗಿಹೋಗಿದ್ದರು. ನಟರು ಮಾತ್ರ ಇನ್ನೂ ರಂಗಭೂಮಿಯನ್ನು ಸಂರಕ್ಷಿಸಲು ಹೆಣಗುತ್ತಿದ್ದರು. ಲೇಡಿ ಗ್ರಿಗೋರಿಯ ಪ್ರಹಸನಗಳು, ಸಿಂಗೆಯ ದುರಂತ ಪ್ರಹಸನಗಳು ಮತ್ತು ನನ್ನ ಮುಕ್ತ ಛಂದೋ ನಾಟಕಗಳು ನಮ್ಮ ರೆಪರ್ಟರಿಯನ್ನು ರೂಪಿಸುತ್ತಿದ್ದ ಆ ಮೊದಲ ಕಾಲಘಟ್ಟದಲ್ಲಿ ಇದು ಸಹಜವೂ ಆಗಿತ್ತು. ಕಾವ್ಯ ನಾಟಕವಾಗಲೀ ಗದ್ಯ ನಾಟಕವಾಗಲೀ ಲಯಬದ್ಧವಾಗಿ ಕಿವಿಗೆ ಇಂಪಾಗಿ ಕೇಳುವ ಎಲ್ಲ ಬಗೆಯ ಲಯವೂ ಅಂದಿನ ಅಗತ್ಯವಾಗಿತ್ತು.
ರಂಗಭೂಮಿಯಲ್ಲಿ ನೆಲೆಸಿರುವ ರೂಢಿ ಸಂಪ್ರದಾಯಗಳ ಬಗ್ಗೆ ನನಗೆ ತುಂಬಾ ಅಸಮಾಧಾನವಿತ್ತು. ಇಂಥ ರೂಢಿ ಸಂಪ್ರದಾಯಗಳು ತಪ್ಪು ಎಂಬ ಕಾರಣದಿಂದಲ್ಲ. ನಟರು ಪ್ರೇಕ್ಷಕರನ್ನು ಎದುರುಗೊಳ್ಳುವಾಗ ಮತ್ತು ಸ್ವಗತಗಳು ಮಾತಾಡುವಾಗ ಯಾವಾಗಲೂ ದೂರ ನಿಲ್ಲುವ ಸಂಪ್ರದಾಯವನ್ನು 'ರಂಗಸ್ಥಳದ ಅಲಂಕರಣ'ವೆಂದು ಕರೆಯಲಾಗುತ್ತದೆ. ಈ ಸಂಪ್ರದಾಯ ಹಲವು ಕೆಟ್ಟ ನಾಟಕಗಳೊಂದಿಗೆ ಬೆರೆತುಹೋಗಿ ಉಳಿದು ಬರುವಂತಾಗಿದೆ. ಫ್ರಾಂಕ್ ಫ್ರೇ ಇದನ್ನೇನೊ ಒಪ್ಪಿಕೊಂಡ. ಆದರೂ ಅವನು ಎಲ್ಲ ರೂಢಿ ಸಂಪ್ರದಾಯಗಳ ಚರಿತ್ರೆಯನ್ನು ತಿಳಿದವನಾಗಿದ್ದ. ಎಷ್ಟೋ ಬಾರಿ ಅವನ್ನು ಇಷ್ಟಪಡುತ್ತಿದ್ದ ಕೂಡ. ಹದಿನೆಂಟನೆಯ ಶತಮಾನದಲ್ಲಿ ಕೆತ್ತಿರುವ ನಟನೊಬ್ಬನ ಅನುಕರಣೆಯಲ್ಲಿ ಆತ ಹೆಮ್ಮೆಯಿಂದ ಕತ್ತಿ ಝಳಪಿಸುತ್ತಾನೆಂದು ನನಗೆ ಚೆನ್ನಾಗಿ ಗೊತ್ತಿತ್ತು. ಆದ್ದರಿಂದ ಅವನ ಕೈಯಲ್ಲಿ ಕತ್ತಿಯ ಬದಲಿಗೆ ಈಟಿಯನ್ನು ನೀಡುತ್ತಿದ್ದೆ. ಆದರೂ ಶೇಕ್ಸ್ ಪಿಯರ್ ರಂಗಭೂಮಿಯ ಉಚ್ಛಾರಣಾ ಲಯವನ್ನು ಇಂಗ್ಲೆಂಡಿಗಿಂತ ಐರ್ಲೆಂಡು ಬಹಳ ದಿನಗಳಿಂದ ಕಾಯ್ದುಕೊಂಡು ಬಂದದ್ದು ಮತ್ತು ರೇಸಿನ್ ತನ್ನ ಪ್ರಮುಖ ಸ್ತ್ರೀ ಪಾತ್ರಧಾರಿಯನ್ನು ರಿಹರ್ಸಲ್ ನಲ್ಲಿ ಸಂಗೀತ ಟಿಪ್ಪಣಿ ಬಗ್ಗೆ ಮಾತಾಡುವಂತೆ ಮಾಡಿದುದು- ಇಂಥ ಪ್ರತಿಯೊಂದೂ ವಿಚಾರ ಅವನಿಗೆ ತಿಳಿದಿತ್ತು. ಅವನು ತಾತ್ವಿಕವಾಗಿ ತಾಲ್ಮ ಪಂಥಕ್ಕೆ ಸೇರಿದವನು ಎಂಬುದರಲ್ಲಿ ಎರಡು ಮಾತಿಲ್ಲ. ಗೊಡಾರ್ನ್ ಕ್ರೆಗ್ ಹೇಳಿದ ಪ್ರಕಾರ ಈ ಪಂಥ ನಟನಿಗೆ ನೆಲದ ಮೇಲಿನ ಗುಂಡುಸೂಜಿಯನ್ನು ಎತ್ತಿಕೊಳ್ಳುವಂತೆ ಮಾಡುವ ಬದಲು ಕೈಗಳನ್ನು ಮೇಲೆತ್ತಿ ಸ್ವರ್ಗಲೋಕದ ಸಿಡಿಲನ್ನು ಈ ಧರೆಗೆ ಕರೆಯುವಂತೆ ಮಾಡುತ್ತದೆ. ಬರವಣಿಗೆ ಮತ್ತು ಪ್ರಾತಿನಿಧಿಕವಾದ ಸನ್ನಿವೇಶಗಳಲ್ಲಿ ಹೊಸಬಗೆಯ ಸಂಪ್ರದಾಯಗಳನ್ನು ರೂಪಿಸಲು ಅವನ ನೆರವು ಬಯಸುತ್ತಿದ್ದೆ. ಈ ವಿಷಯದಲ್ಲಿ ಅವನಿಗಿಂತ ಕಿರಿಯರಾದ ನಮ್ಮಿಬ್ಬರಿಗೂ ಆತ ಸುಳ್ಳು ಹೇಳಿರಬಹುದೆ? ಸಿಂಗೆ, ಲೇಡಿ ಗ್ರಿಗೋರಿ ಮತ್ತು ನಾನು ಪ್ರವೃತ್ತಿಯಲ್ಲಿ ತಾಲ್ಮ ಪಂಥಕ್ಕೆ ಸೇರಿದವರು. 'ಎಪ್ಪತ್ತು ಚಳಿಗಾಲಗಳಿಂದಲೂ ಉದುರುತ್ತಿದೆ' 'ಹಸಿದ ಕತ್ತೆಯೊಂದು ಹಿತ್ತಲಿನಲ್ಲಿ ಕಿರುಚುತ್ತಿದೆ'- ಇಂಥ ದುರಂತ ವಾಕ್ಯಗಳಿಗೆ ಸ್ವಚ್ಛಂಧ ಕಾವ್ಯದ ಸಾಲಿಗಿರುವಷ್ಟು ರೂಢಿಗತ ನಿಯಮಗಳು ಅಗತ್ಯವೆ? 'ದಿ ವೆಲ್ ಆಫ್ ದಿ ಸೇಂಟ್ಸ್' ನಾಟಕದಲ್ಲಿ ಶಬ್ದ ಸಂಪ್ತತಿನಿಂದ ಕೂಡಿದ ದೃಶ್ಯಗಳಿವೆ. ಏಕೆಂದರೆ ಇದು ವಾಸ್ತವವಾದಿ ನಟನೆಯ ಕಲ್ಪನೆಯನ್ನು ತಂತಾನೆ ಬದಲಿಸುವ ನಿಶ್ಚಲತೆ ಮತ್ತು ನಿಧಾನ ನಡೆಗೆ ಅವಕಾಶ ನೀಡುವುದಿಲ್ಲ.
2
ರಂಗಭೂಮಿಯ ಮೇಲೆ ನನ್ನೆಲ್ಲ ಕಾವ್ಯವನ್ನು ತರಬೇಕು ಅಥವಾ ಹಾಡಬೇಕೆಂದು ಬಯಸಿದ್ದೆ. ನನ್ನ ಈ ಪ್ರವೃತ್ತಿಯನ್ನೆ ನಾನು ಅರ್ಥ ಮಾಡಿಕೊಂಡಿರಲಿಲ್ಲ. ಆದ್ದರಿಂದ ತಪ್ಪು ಉತ್ತರವನ್ನೋ ಯಾವುದಾದರೂ ಕಾರಣವನ್ನೋ ನೀಡುತ್ತಿದ್ದೆ. ಆದರೂ ಕಳೆದ ತಿಂಗಳಷ್ಟೇ ನನ್ನ ಕಾರಣ ಯಾವುದೆಂದು ಅರ್ಥವಾಯಿತು. ಚಿತ್ರಮಯವಾಗಿ ಬರೆದ ಪ್ರತಿಯೊಂದೂ ನುಡಿಗಟ್ಟನ್ನು ಕಾವ್ಯಮಯವಾಗಿ ಹಾಗೂ ಎಲ್ಲ ವಾಕ್ಯ ರಚನೆಗಳನ್ನು ಕಿವಿಗೆ ಇಂಪಾಗಿ ಕೇಳುವಂತೆ ಮಾಡಲು ನನ್ನ ಜೀವನವನ್ನೆ ಕಳೆದಿದ್ದೇನೆ. ಕಣ್ಣುಗಳು ಸಂಗೀತಗಾರನ ರೂಪದಲ್ಲಿ, ಸಮಸ್ತ ರಂಗಭೂಮಿಯ ದೃಷ್ಟಿಯಲ್ಲಿ ಆನಂದ ಪಡುವಂತಾಗಬೇಕು ಮತ್ತು ಇಷ್ಟರಿಂದಲೆ ತೃಪ್ತವಾಗಬೇಕು. ಚಾರ್ಲ್ಸ್ ರಿಕೆಟ್ ಒಮ್ಮೆ ಸಂಗೀತಗಾರನಿಗೆ ಹಾಸ್ಯಗಾರನ ಕಪ್ಪು ಉಡುಪನ್ನು ನನಗಾಗಿ ವಿನ್ಯಾಸಗೊಳಿಸಿದ್ದರು. ಅಲ್ಲದೆ ಕ್ರೆಗ್ ಜೊತೆ ಕೂಡಿ ಸಮಗ್ರ ದೃಷ್ಟಿಯಿಂದ ಪ್ರಹಸನದ ರಂಗ ಪ್ರಯೋಗಕ್ಕೆ ನೆರವು ನೀಡಿದ್ದರು. ಆದರೆ ನನ್ನ ಪ್ರೇಕ್ಷಕರು ಸಿಂಗೆ, ಲೇಡಿ ಗ್ರಿಗೋರಿ, ಓಕ್ಯಾಸೆ ಇವರ ಪ್ರಹಸನಗಳನ್ನು ಅನುಭವಿಸಲು ಯೋಗ್ಯರಾಗಿದ್ದರೆ ಹೊರತು ನನ್ನ ಪ್ರಹಸನವನ್ನಲ್ಲ. ಪ್ರಹಸನ ಆಧುನಿಕ ಕಲೆ ಎಂದು ತಿಳಿದಿರುವ ನನಗೆ ನನ್ನ ಪ್ರಹಸನದ ರಂಗ ಪ್ರಯೋಗ ಕುರಿತು ಅತೃಪ್ತಿ ಇರಲಿಲ್ಲ.
ನಾನು ನನ್ನ ವಾಕ್ತ ರಚನೆಯ ಪ್ರಕ್ರಿಯೆಯನ್ನು ಬದಲಿಸಿದ ಹಾಗೆ ನನ್ನ ಬುದ್ಧಿಮತ್ತೆಯನ್ನು ಬದಲಿಸಿದೆ. ಬ್ರೌನಿಂಗ್ ತಾನು ಯಶಸ್ವೀ ನಾಟಕ ಬರೆಯಲಾರೆನೆಂದು ಹೇಳುತ್ತಿದ್ದರು. ಯಾಕೆಂದರೆ ಅವರು ಪಾತ್ರದ ಕ್ರಿಯೆಯಲ್ಲಿ ಆಸಕ್ತರಾಗಿರದೆ ಕ್ರಿಯೆಯೊಳಗಿನ ಪಾತ್ರದಲ್ಲಿ ಆಸಕ್ತರಾಗಿದ್ದರು. ನಾನು ಭಾವಗೀತೆ ಅಥವಾ ನಾಟಕೀಯ ಕಾವ್ಯದಿಂದಷ್ಟೇ ಅಲ್ಲ, ಒಂದು ಬಗೆಯ ಕ್ರಿಯಾನಿರತ ಪಾತ್ರಗಳಿಂದಲೂ, ಬಹುಶಹ ಕ್ರಿಯೆಯ ನಡುವಿನ ಮೌನವನ್ನು ಹೊರತುಪಡಿಸಿದ, ಆದರೆ ನಾಟಕದ ಕೊನೆಯ ಹಂತ ಹಾಗೂ ವಸ್ತುವಾಗಿರುವ ಎಲ್ಲದರಿಂದಲೂ ಬಿಡುಗಡೆ ಹೊಂದತೊಡಗಿದ್ದೆ. ಒಬ್ಬ ನಟ ಅಥವಾ ಒಬ್ಬ ಜನಪದ ಹಾಡುಗಾರ ಪ್ರೇಕ್ಷಕರ ಎದುರು ನಿಂತಕೂಡಲೆ 'ಕೇಳುಗರಿಗಾಗಿ ಬರೆಯಿರಿ' ಎಂಬ ನನ್ನ ಮಾತು ನಿಮಗೆ ಅರ್ಥವಾಗುವುದೆಂದು ತಿಳಿಯುತ್ತೇನೆ. ನನಗೆ ಕ್ರಿಯೆಯಲ್ಲಿ ತೊಡಗಿಸಿಕೊಂಡ ಜನರನ್ನು ಕಂಡರೆ ಆನಂದವಾಗುತ್ತದೆ. ಅದೇ ಬಗೆಯ ಆನಂದ ಸಿಪಾಯಿ ಮತ್ತು ಕುಶಲಕರ್ಮಿಯನ್ನು ಕಂಡಾಗಲೂ ಆಗುತ್ತದೆ. ಕಾವ್ಯ ವಸ್ತು ಯಾವಾಗಲೂ ಮಂಡಿಸಿರುವ ಮಾನವನ ಅಂತರಂಗದ ನವಿರಾದ ಕುತೂಹಲಗಳಿಗೆ ಬೆನ್ನು ಹಾಕಿದ ಕಾವ್ಯವೇ ನನ್ನ ಕಾವ್ಯವಾಗಿರುತ್ತದೆ, ನನಗೆ ಭಾರತದ ಕತೆಯೊಂದು ನೆನಪಿಗೆ ಬರುತ್ತಿದೆ. ಮುನಿಶ್ರೇಷ್ಟರಿಗೆ ಕೆಲವರು ಕೇಳಿದರು - 'ನಿಮ್ಮ ಗುರುಗಳು ಯಾರು ?' ಅವರು ಹೇಳಿದರು - 'ಬಿರುಗಾಳಿ ಮತ್ತು ಬೆಲೆವೆಣ್ಣು, ಕನ್ನೆ ಮತ್ತು ಮಗು, ಸಿಂಹ ಮತ್ತು ಹದ್ದು'.
ಡಬ್ಲ್ಯು.ಬಿ.ಯೇಟ್ಸ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ